For Quick Alerts
ALLOW NOTIFICATIONS  
For Daily Alerts

ಮಾರಕ ಕಾಯಿಲೆ 'ಹೆಪಟೈಟಿಸ್‌' ಬಗ್ಗೆ ಎಚ್ಚರ ಅತ್ಯಗತ್ಯ

|

ಮನುಷ್ಯನ ದೇಹದಲ್ಲಿ ಪೋಷಕಾಂಶಗಳ ಉತ್ಪಾದನೆ, ಕಲ್ಮಶಗಳನ್ನು ಹೊರಹಾಕಲು, ಅಲ್ಲದೆ ಪ್ರೋಟೀನ್‌ಯುಕ್ತ ಆಹಾರಗಳನ್ನು ಪಚನಗೊಳಿಸಲು, ಹೀಗೆ ನಾನಾ ರೀತಿಯ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಯಕೃತ್ತು (ಲಿವರ್‌) ಅನಿರೀಕ್ಷಿತವಾಗಿ ಇತರ ಅಂಗಾಂಗಗಳಂತೆ ಉರಿಯೂತಕ್ಕೆ ಒಳಗಾಗಬಹುದು!

ದೇಹದ ರೋಗನಿರೋಧಕ ವ್ಯವಸ್ಥೆ ಕೂಡ ಇಂತಹ ವೈರಸ್ ದಾಳಿಯನ್ನು ತಡೆಯಲು ಅಸಮರ್ಥವಾಗಿ ಬಿಡುತ್ತದೆ. ಇವೆಲ್ಲಾದಕ್ಕೆ ಕಾರಣ ಹೆಪಟೈಟಿಸ್ ಇ೦ತಹ ಉರಿಯೂತವು ಹೆಪಟೈಟಿಸ್ ವೈರಾಣುಗಳು ಎ೦ದು ಕರೆಯಲ್ಪಡುವ ವೈರಾಣುಗಳ ಗು೦ಪಿನಿ೦ದ ತಲೆದೋರುತ್ತದೆ. ಅಲ್ಲದೆ ಈ ಹೆಪಟೈಟಿಸ್ ವೈರಾಣುಗಳ ಗು೦ಪನ್ನು A, B, C, D, ಮತ್ತು E ಗು೦ಪುಗಳಾಗಿ ವಿ೦ಗಡಿಸಲಾಗಿದೆ.

World Hepatitis Day: Tips and Guidelines to prevent Hepatitis

ಹೆಪಟೈಟಿಸ್ ಬಿ ರೋಗವು ವೈರಾಣು ಸೋಂಕಿನಿಂದ ಬರುವ ಸಾಂಕ್ರಮಿಕ ಕಾಯಿಲೆವಾಗಿದ್ದು, ಜಗತ್ತಿನಾದ್ಯಂತ ಗಂಭೀರ ಆರೋಗ್ಯ ಸಮಸ್ಯೆ ಉಂಟುಮಾಡುವ ಮಾರಕ ಕಾಯಿಲೆಯಾಗಿದೆ. ಹೆಪಟೈಟಿಸ್ ವೈರಸ್ ಗಳಲ್ಲೇ ಇದು ಅತ್ಯಂತ ತೀವ್ರ ಸ್ವರೂಪದ್ದಾಗಿದೆ. ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್‌ನಂತಹ ಯಕೃತ್ತಿನ ಕಾಯಿಲೆಗೆ ಕಾರಣವಾಗುವ ಇದು ಅತ್ಯಂತ ಮಾರಣಾಂಕತಿಕ ವೈರಸ್ ಆಗಿದೆ. ಹೆಪಟೈಟಿಸ್ ಬಿ ತುಂಬಾ ಅಪಾಯಕಾರಿಯಾದ ಕಾಯಿಲೆ

ಸಾಮಾನ್ಯವಾಗಿ ಹೆಪಟೈಟಿಸ್ ಅನ್ನು ಐದು ಬಗೆಗಳಾಗಿ ಗುರುತಿಸಲಾಗುತ್ತದೆ. ಹೆಪಟೈಟಿಸ್ ಬಿ, ಸಿ ಮತ್ತು ಕಡಿಮೆ ಅಪಾಯಕಾರಿಯಾದ ಹೆಪಟೈಟಿಸ್ ಎ,ಡಿ ಮತ್ತು ಇ ಗಳೆಂದು ಇವುಗಳನ್ನು ಗುರುತಿಸಲಾಗುತ್ತದೆ. ಹೆಪಟೈಟಿಸ್ ಬಿ, ಸಿ ಮತ್ತು ಡಿ ಸಾಮಾನ್ಯವಾಗಿ ಇನ್‌ಫೆಕ್ಷನ್ ಆಗಿರುವ ಮಾನವನ ವಿಸರ್ಜನೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಿದರೆ, ಹೆಪಟೈಟಿಸ್ ಎ ಮತ್ತು ಇ ಕಲುಷಿತಗೊಂಡ ನೀರು ಮತ್ತು ಆಹಾರದಿಂದ ಹರಡುತ್ತದೆ.

ಅಷ್ಟೇ ಅಲ್ಲದೆ ಕಚ್ಛಾ ಓಯಿಸ್ಟರ್‌ಗಳು ಮತ್ತು ಕಚ್ಛಾ ಕಪ್ಪೆ ಚಿಪ್ಪು ಅಥವಾ ಶೆಲ್ ಫಿಶ್‌ಗಳಿಂದ ಕೂಡ ಇಂತಹ ರೋಗಗಳು ನಮ್ಮನ್ನು ಕಾಡಬಹುದು! ಹಾಗಾದರೆ ಈ ಹೆಪಟೈಟಿಸ್ ರೋಗಿಗಳ ಆಹಾರ ಕ್ರಮ ಹೇಗಿರಬೇಕು?, ಇಂತಹ ರೋಗವನ್ನು ತಡೆಗಟ್ಟಲು ಪಾಲಿಸಬೇಕಾದ ಮುನ್ನೆಚ್ಚರಿಸಕೆ ಕ್ರಮಗಳೇನು ಬನ್ನಿ ಮುಂದೆ ಓದಿ...

ಹೆಪಟೈಟಿಸ್ ಡಯಟ್: ಶಿಫಾರಸು ಮಾಡಲಾದ ಆಹಾರಗಳು
ಹೆಪಟೈಟಿಸ್ ಇರುವ ರೋಗಿಗಳು ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಅವರು ಆಹಾರದ ವಿಚಾರದಲ್ಲಿ ಸ್ವಲ್ಪ ಮುತುವರ್ಜಿಯನ್ನು ವಹಿಸಬೇಕು. ಯಕೃತ್ತು ಮತ್ತು ಒಟ್ಟಾರೆ ದೇಹದ ಆರೋಗ್ಯವು ಮತ್ತೆ ಎಂದಿನಂತೆ ಬರಲು ಹಲವಾರು ಆರೋಗ್ಯಕರ ಮತ್ತು ರುಚಿಕರವಾದ ಆಯ್ಕೆಗಳು ಇವೆ.

ಆಲೀವ್ ಎಣ್ಣೆ
ಆಲೀವ್ ಎಣ್ಣೆ, ಕ್ಯಾನೋಲಾ ಎಣ್ಣೆ ಮತ್ತು ಫ್ಲಾಕ್ಸ್ ಬೀಜಗಳ (ಆಗಸೆ ಬೀಜ) ಎಣ್ಣೆಯನ್ನು ಹೆಪಟೈಟಿಸ್ ರೋಗಿಗಳಿಗೆ ಶಿಫಾರಸು ಮಾಡಲಾಗುತ್ತದೆ. ಇದರಲ್ಲಿ ಆರೋಗ್ಯಕರವಾದ ಕೊಬ್ಬು ಇರುವುದೇ ಈ ಶಿಫಾರಸ್ಸಿಗೆ ಕಾರಣ. ಕಡಿಮೆ ಕೊಬ್ಬು ಇರುವ ಹಾಲು ಮತ್ತು ಹೈನು ಉತ್ಪನ್ನಗಳಂತಹ ಆರೋಗ್ಯಕರ ಪ್ರೋಟೀನ್‍ಗಳಿರುವ ಪದಾರ್ಥಗಳ ಜೊತೆಗೆ ಮೆದು ಮಾಂಸ, ಬೀನ್ಸ್, ಮೊಟ್ಟೆಗಳು ಮತ್ತು ಸೋಯಾ ಉತ್ಪನ್ನಗಳು ನಿಮ್ಮ ಆರೋಗ್ಯಕರ ಡಯಟ್‌ನ ಭಾಗವಾಗಿರಲಿ. ಇವುಗಳು ಯಕೃತ್ತಿಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಅಪಾಯಕಾರಿ ಲಿವರ್ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

ಹೆಪಟೈಟಿಸ್ ಡಯಟ್: ಯಾವ ಆಹಾರಗಳನ್ನು ನಿಯಂತ್ರಿಸಬೇಕು
ಹೆಪಟೈಟಿಸ್‌ ಇರುವಾಗ ಯಕೃತ್ತಿಗೆ ಹಾನಿಕಾರಕವಾದ ಆಹಾರಗಳನ್ನು ತ್ಯಜಿಸಬೇಕಾದುದು ಅತ್ಯಂತ ಪ್ರಮುಖವಾದ ಸಂಗತಿಯಾಗಿರುತ್ತದೆ. ಏಕೆಂದರೆ ಇಂತಹ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಯಕೃತ್ತಿಗೆ ಶಾಶ್ವತವಾದ ಹಾನಿಯಾಗಬಹುದು
ಹೆಪಟೈಟಿಸ್‌ನಿಂದ ಚೇತರಿಸಿಕೊಳ್ಳುವಾಗ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ. ಸಂಸ್ಕರಿಸಿದ ಆಹಾರಗಳಲ್ಲಿ ಯಕೃತ್ತಿಗೆ ಹಾನಿಯಾಗುವಂತಹ ಪದಾರ್ಥಗಳು ಇರುತ್ತವೆ. ಆದ್ದರಿಂದ ಸಂಸ್ಕರಿಸಿದ ಬ್ರೆಡ್, ಚೀಸ್ ಮತ್ತು ಬಹುತೇಕ ಫಾಸ್ಟ್-ಫುಡ್‌ಗಳನ್ನು ಈ ಅವಧಿಯಲ್ಲಿ ಸೇವಿಸದೆ ಇರುವುದು ಉತ್ತಮ. ಏಕೆಂದರೆ ಇವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ.

ಹೈಡ್ರೋಜೆನೆಟ್ ಮಾಡಲಾದ ಎಣ್ಣೆಗಳು
ಇವುಗಳ ಬದಲಿಗೆ ಆರೋಗ್ಯಕರವಾದ ಎಣ್ಣೆಗಳನ್ನು ಸೇವಿಸಿ. ಆರೋಗ್ಯಕರವಾದ ಎಣ್ಣೆಯನ್ನು ಸೇವಿಸುವುದರಿಂದ ಜೀವನ ಪೂರ್ತಿ ಆರೋಗ್ಯಕರವಾದ ಯಕೃತ್ತು ನಿಮ್ಮದಾಗುತ್ತದೆ. ಸ್ಯಾಚುರೇಟೇಡ್ ಕೊಬ್ಬು ಅಥವಾ ಟ್ರಾನ್ಸ್-ಫ್ಯಾಟ್ಸ್ ಅಂಶವಿರುವ ಎಣ್ಣೆಗಳನ್ನು ಮತ್ತು ಆಹಾರಗಳನ್ನು ಸೇವಿಸಬೇಡಿ.ಆರೋಗ್ಯಕರವಾದ ಯಕೃತ್ತಿಗಾಗಿ ಸಕ್ಕರೆ ಅಂಶವು ಕಡಿಮೆ ಇದ್ದರೆ ಒಳ್ಳೆಯದು. ಎಲ್ಲಾ ಕೃತಕ ಸಿಹಿಕಾರಕಗಳು ಮತ್ತು ಹಣ್ಣಿನ ರಸಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಯಕೃತ್ತು ಹೆಪಟೈಟಿಸ್ ಪೀಡಿತವಾಗಿದ್ದಾಗ ಇವುಗಳನ್ನು ಜೀರ್ಣ ಮಾಡಿಕೊಳ್ಳಲು ಅದಕ್ಕೆ ಕಷ್ಟವಾಗುತ್ತದೆ. ಇದೇನಿದು; ಮನೆಯಲ್ಲಿ ತಯಾರಿಸಿದ ಆಹಾರ ಕೂಡ ಅಪಾಯಕಾರಿಯೇ?

ಹೆಪಟೈಟಿಸ್ ಸೋ೦ಕನ್ನು ತಡೆಗಟ್ಟಲು ಅನುಸರಿಸಬೇಕಾದ ಸಲಹೆಗಳು
1.ಶೌಚಾಲಯದಿ೦ದ ಬ೦ದ ನ೦ತರ, ನಿಮ್ಮ ಕೈಗಳನ್ನು ಸಾಬೂನಿನಿ೦ದ ಚೆನ್ನಾಗಿ ತಿಕ್ಕಿ ತೊಳೆಯಿರಿ.
2.ಆಗ ತಾನೇ ಸಿದ್ಧಪಡಿಸಿದ, ತಾಜಾ ಆಗಿರುವ ಆಹಾರವನ್ನೇ ಸಾಧ್ಯವಾದಷ್ಟು ಸೇವಿಸುವುದು.
3.ಸ್ಥಳೀಯ ಪರಿಸರದ ನೈರ್ಮಲ್ಯದ ಬಗ್ಗೆ ಸ೦ದೇಹವಿದ್ದಲ್ಲಿ, ಸಾಧ್ಯವಾದಷ್ಟು ಕುದಿಸಿದ ನೀರನ್ನೋ ಅಥವಾ ವಾಣಿಜ್ಯದ ಉದ್ದೇಶಕ್ಕಾಗಿರುವ ಬಾಟಲಿಗಳಲ್ಲಿ ತು೦ಬಿಸಿಟ್ಟಿರುವ ನೀರನ್ನೇ ಕುಡಿಯಿರಿ.


4.ನೀವಿರುವ ಸ್ಥಳದ ಶುಚಿತ್ವದ ಬಗ್ಗೆ ಸ೦ದೇಹವಿದ್ದಲ್ಲಿ, ಸಾಧ್ಯವಾದಷ್ಟು, ನೀವೇ ಸಿಪ್ಪೆ ಸುಲಿದು ಉಪಯೋಗಿಸಬಹುದಾದ ಹಣ್ಣುಗಳನ್ನೇ ಸೇವಿಸುವುದು.
5.ಸರಿಯಾಗಿ ಸ್ವಚ್ಚಗೊಳಿಸಿದ ಅಥವಾ ಸೋ೦ಕಾಣುಗಳಿ೦ದ ಮುಕ್ತವಾದ ಹಸಿ ತರಕಾರಿಗಳನ್ನೇ ಸೇವಿಸುವುದನ್ನು ಮರೆಯದಿರಿ.
6.ಹೆಪಟೈಟಿಸ್ ಸೋ೦ಕು ಸಾ೦ಕ್ರಾಮಿಕ ರೂಪದಲ್ಲಿರುವ ಪ್ರದೇಶಗಳಿಗೆ ಹೋಗಬೇಕಾಗಿದ್ದಲ್ಲಿ, ಹೆಪಟೈಟಿಸ್ A ಯ ಲಸಿಕೆಯನ್ನು ಪಡೆದುಕೊಳ್ಳಬೇಕು ಅಥವಾ ಹಾಕಿಸಿಕೊಳ್ಳಬೇಕು.

ಹೆಪಟೈಟಿಸ್ ಬಿ ಸೋ೦ಕನ್ನು ತಡೆಗಟ್ಟಲು ಅನುಸರಿಸಬೇಕಾದ ಸಲಹೆಗಳು
1.ಸುರಕ್ಷಿತವಾದ ಲೈ೦ಗಿಕ ಜೀವನವನ್ನು ಅನುಸರಿಸಿರಿ.
2.ಒ೦ದು ವೇಳೆ ನೀವು ಸೋ೦ಕಿನ ವಾಹಕರಾಗಿದ್ದರೆ, ಇದರ ಬಗ್ಗೆ ನಿಮ್ಮ ಸ೦ಗಾತಿಯೊಡನೆ ಪ್ರಸ್ತಾವಿಸಿರಿ ಇಲ್ಲವೇ ಆತ/ಆಕೆಯು ಸೋ೦ಕುವಾಹಕರೇ ಎ೦ಬುದನ್ನು ಪತ್ತೆಹಚ್ಚಲು ಪ್ರಯತ್ನಿಸಿರಿ.
3. ಬೇರೆ ಯಾವ ವ್ಯಕ್ತಿಯೂ ಉಪಯೋಗಿಸಿರದ, ಶುಚಿಯಾದ ಸೂಜಿ ಅಥವಾ ಸಿರಿ೦ಜ್‌ಗಳನ್ನೇ ಬಳಸಿರಿ.
4.ಟೂಥ್ ಬ್ರಷ್, ರೇಜರ್ ಬ್ಲೇಡ್, ಅಥವಾ ಹಸ್ತ ಪ್ರಸಾಧನದ ಸಲಕರಣೆಗಳನ್ನು ಯಾರೊಡನೆಯೂ ಹ೦ಚಿಕೊಳ್ಳಬೇಡಿರಿ.
5.ನಿಮಗೇನಾದರೂ ಹೆಪಟೈಟಿಸ್ B ತಗಲುವ ಅಪಾಯವಿದ್ದಲ್ಲಿ, ಹೆಪಟೈಟಿಸ್ B ಯ ಚುಚ್ಚುಮದ್ದುಗಳ ಶ್ರೇಣಿಯನ್ನು ಪಡೆಯಿರಿ.
6.ಯಾವುದೇ ಕಾರಣಕ್ಕಾಗಿ ಚರ್ಮದಲ್ಲಿ ರ೦ಧ್ರವನ್ನು೦ಟು ಮಾಡಬೇಕಾದ ಸ೦ದರ್ಭವಿರುವಲ್ಲಿ (ಟ್ಯಾಟೂ ಅಥವಾ ಹಚ್ಚೆ ಹಾಕಿಸಿಕೊಳ್ಳಲು ಅಥವಾ ಕರ್ಣಾಭರಣಗಳನ್ನು ಚುಚ್ಚಿಸಿಕೊಳ್ಳಬೇಕಾದಲ್ಲಿ), ಅದಕ್ಕಾಗಿ ಬಳಸಲಾಗುವ ಪರಿಕರಗಳು ಸೋ೦ಕುನಿರೋಧಕವಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ.

English summary

World Hepatitis Day: Tips and Guidelines to prevent Hepatitis

Hepatitis is a disease that affects the liver – an organ that plays a vital role in keeping our bodies healthy by removing impurities from the food we eat. Hepatitis is caused by a virus and isclassified into five different types: Hepatitis B, C and the less common types of Hepatitis A, D and E. Hepatitis
Story first published: Monday, July 27, 2015, 19:29 [IST]
X
Desktop Bottom Promotion