For Quick Alerts
ALLOW NOTIFICATIONS  
For Daily Alerts

ತಮ್ಮ ಮೊತ್ತಮೊದಲ ಸಮಾಗಮಕ್ಕಾಗಿ ಯುವತಿಯರಿಗೆ ಆಪ್ತ ಸಲಹೆಗಳು

By Super
|

ತಮ್ಮ ಜೀವನಸಂಗಾತಿಯ ಕುರಿತಂತೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳಿರುತ್ತವೆ. ಅದರಲ್ಲೂ ಯುವತಿಯರಿಗೆ ತಮ್ಮ ಕನಸಿನ ರಾಜಕುಮಾರನೊಂದಿಗೆ ಕಾಲ ಕಳೆಯುವ ಮತ್ತು ತಮ್ಮನ್ನು ಆತನಿಗೆ ಅರ್ಪಿಸಿಕೊಳ್ಳುವ ಘಳಿಗೆಯನ್ನು ಯೋಚಿಸಿಯೇ ಪುಳಕಿತರಾಗುತ್ತಾರೆ. ಅಂತೆಯೇ ಕಡೆಗೊಂದು ದಿನ ಗುರುಹಿರಿಯರ ಆಶೀರ್ವಾದದೊಂದಿಗೆ ವಿವಾಹಬಂಧನಕ್ಕೊಳಪಟ್ಟು ಈ ಕನಸುಗಳನ್ನು ನನಸಾಗಿಸುವ ಘಳಿಗೆ ಕೂಡಿಬರುತ್ತದೆ. ಆದರೆ ಇದುವರೆಗೆ ಕೇವಲ ಕೇಳಿದ್ದ ಸಮಾಗಮದ ಬಗ್ಗೆ ಹತ್ತು ಹಲವಾರು ಆತಂಕಗಳು ಮನೆಮಾಡಿ ದುಗುಡವನ್ನು ಹೆಚ್ಚಿಸುತ್ತವೆ.

ಒಂದು ವೇಳೆ ಇಬ್ಬರಿಗೂ ಇದು ಪರಸ್ಪರ ಮೊದಲ ಅನುಭವವೇ ಆಗಿದ್ದರಂತೂ ದುಗುಡ ತಾರಕಕ್ಕೇರುತ್ತದೆ. ಆದರೆ ಅತ್ಯಂತ ನೈಸರ್ಗಿಕವಾದ ಈ ಕ್ರಿಯೆಯಲ್ಲಿ ಯಾವುದೇ ಆತಂಕ ತರವಲ್ಲ. ಭಗವಂತನು ಸಕಲ ಜೀವಿಗಳಲ್ಲಿ ಗಂಡು ಹೆಣ್ಣನ್ನು ಸೃಷ್ಟಿಸಿರುವುದೇ ಸಂತಾನ ಮುಂದುವರೆಸಲಿಕ್ಕಾಗಿ. ಇದಕ್ಕಾಗಿ ಅಗತ್ಯವಿರುವ ವಿದ್ಯೆಯನ್ನು ತನ್ನಿಂತಾನೇ ಕಲಿಯುವಂತೆ ಸಕಲ ಜೀವಿಗಳಲ್ಲಿ ಅರಿವು ಮೂಡಿಸಿರುವುದು ಸೃಷ್ಟಿಯ ನಿಯಮವಾಗಿದೆ. ವಾಸ್ತವವಾಗಿ ಈ ಸಮಾಗಮ ಅತ್ಯಂತ ಸಂತೋಷದ ಮತ್ತು ಪತಿ ಪತ್ನಿಯರು ತಮ್ಮನ್ನು ಪರಸ್ಪರರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅರ್ಪಿಸಿಕೊಳ್ಳುವ ಕ್ರಿಯೆಯಾಗಿದೆ. ಆದರೂ ಈ ಹೊಸ ಅನುಭವದ ಬಗ್ಗೆ ಅರಿವಿಲ್ಲದ ಕಾರಣ ದುಗುಡ ಹೆಚ್ಚುತ್ತಾ ಹೋಗುತ್ತದೆ. ಮಹಿಳೆಯರು ಮಿಲನವನ್ನು ಬಯಸಲು 16 ಕಾರಣಗಳು

ಈ ನಿಟ್ಟಿನಲ್ಲಿ ಆಪ್ತವಾಗಿ ನೀಡುವ ಕೆಳಗಿನ ಸಲಹೆಗಳು ನಿಮ್ಮ ದುಗುಡವನ್ನು ಕಡಿಮೆಗೊಳಿಸಿ ನಿಮ್ಮ ಸಂತೋಷವನ್ನು ನೂರ್ಮಡಿಗೊಳಿಸಲು ನೆರವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ತಾಯಿ ಈ ಸಮಯದಲ್ಲಿ ನೀಡುವ ಸಾಂತ್ವಾನ ಮತ್ತು ಸಲಹೆಗಳು ಅತ್ಯಂತ ಮನತಟ್ಟುತ್ತವೆ. ತಾಯಿಯ ಹಿತವಚನಗಳೊಂದಿಗೇ ಈ ಕೆಳಗಿನ ಸಲಹೆಗಳನ್ನೂ ಪಾಲಿಸಿದರೆ ಜೀವನಪರ್ಯಂತ ಸುಖ, ನೆಮ್ಮದಿ ಮತ್ತು ಆರೋಗ್ಯಕರ ದಾಂಪತ್ಯ ನಡೆಸಲು ಸಾಧ್ಯವಾಗುತ್ತದೆ.

ನೀವು ಮಾನಸಿಕವಾಗಿ ಸಿದ್ಧರಿದ್ದಾಗ ಮಾತ್ರ ಪ್ರಸ್ತಕ್ಕೆ ಸಿದ್ಧರಾಗಿ

ನೀವು ಮಾನಸಿಕವಾಗಿ ಸಿದ್ಧರಿದ್ದಾಗ ಮಾತ್ರ ಪ್ರಸ್ತಕ್ಕೆ ಸಿದ್ಧರಾಗಿ

ವಿವಾಹದ ಬಳಿಕ ಅತ್ಯಂತ ಪವಿತ್ರವಾದ ಮತ್ತು ಖಾಸಗಿಯಾದ ಘಟ್ಟವೆಂದರೆ ಪ್ರಸ್ತ. ಇದರಲ್ಲಿ ಜನರ ನೂಕು ನುಗ್ಗಲಿರಬಾರದೆಂದೇ ಹಿರಿಯರು ಪ್ರಸ್ತದ ದಿನವನ್ನು ವಿವಾಹದ ಕೆಲದಿನಗಳ ಬಳಿಕ ಇಟ್ಟುಕೊಳ್ಳುತ್ತಿದ್ದರು. ಪ್ರಸ್ತಕ್ಕೂ ಮುನ್ನ ನಿಮ್ಮಿಬ್ಬರಿಗೂ ಅತ್ಯಂತ ಸೂಕ್ತವಾದ ಸಮಯವನ್ನು ಪರಿಗಣಿಸಿ ಪ್ರಸ್ತದ ದಿನವನ್ನು ನಿಗದಿಪಡಿಸಿರಿ. ಇದಕ್ಕೆ ಮಾನಸಿಕವಾಗಿ, ದೈಹಿಕವಾಗಿ ಮತ್ತು ಮುಖ್ಯವಾಗಿ ಭಾವಪರವಶರಾಗಿ ಸಿದ್ಧರಿರಬೇಕು. ಅಗತ್ಯವಿದ್ದರೆ ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನೂ ಪಡೆದುಕೊಳ್ಳಬಹುದು. ಹೂವಿನ ಮಂಚ, ಮಲ್ಲಿಗೆಯ ಸುವಾಸನೆ, ಮಂದವಾದ ಬೆಳಕು ನಿಮ್ಮಿಬ್ಬರಲ್ಲಿ ಪರಸ್ಪರ ಅನುರಾಗ ಮತ್ತು ಆಕರ್ಷಣೆಯನ್ನು ಹೆಚ್ಚಿಸಲಿ. ಮುಂದಿನ ಕೆಲಸವನ್ನು ನಿಸರ್ಗವೇ ನಿಮಗೆ ಮುಂದುವರೆಯಲು ಪ್ರೇರೇಪಿಸುತ್ತದೆ.

ನೀವು ಮಾನಸಿಕವಾಗಿ ಸಿದ್ಧರಿದ್ದಾಗ ಮಾತ್ರ ಪ್ರಸ್ತಕ್ಕೆ ಸಿದ್ಧರಾಗಿ

ನೀವು ಮಾನಸಿಕವಾಗಿ ಸಿದ್ಧರಿದ್ದಾಗ ಮಾತ್ರ ಪ್ರಸ್ತಕ್ಕೆ ಸಿದ್ಧರಾಗಿ

ನೆನಪಿಡಿ, ಈ ಕಾರ್ಯದಲ್ಲಿ ಇಬ್ಬರಿಂದಲೂ ಯಾವುದೇ ರೀತಿಯ ಒತ್ತಡ ಸಲ್ಲದು. ಒಂದು ವೇಳೆ ಮುಂದುವರೆಯಲು ಸಾಧ್ಯವಾಗದೇ ಇದ್ದರೆ ಖಿನ್ನರಾಗಬೇಡಿ. ಮುಂದಿನ ದಿನಗಳಲ್ಲಿ ಆತ್ಮೀಯತೆ ಹೆಚ್ಚುತ್ತಿದ್ದಂತೆ ದುಗುಡ ಕಡಿಮೆಯಾಗಿ ದಾಂಪತ್ಯದ ಸೊಗಸನ್ನು ಸಮರ್ಪಕವಾಗಿ ಸವಿಯಲು ಸಾಧ್ಯವಾಗುತ್ತದೆ. ಇದಕ್ಕೆ ಇಷ್ಟೇ ದಿನ ಬೇಕು ಎಂಬ ನಿಯಮ ಖಂಡಿತಾ ಇಲ್ಲ. ಆದರೆ ಕೆಲವೇ ದಿನಗಳಲ್ಲಿ ಎಲ್ಲಾ ಸರಿಯಾಗುವುದಂತೂ ಖಂಡಿತಾ ಸಾಧ್ಯ.

ಅನೈಚ್ಛಿಕ ಗರ್ಭದಿಂದ ರಕ್ಷಿಸಿಕೊಳ್ಳಲು ಕ್ರಮ ಅನುಸರಿಸಿ

ಅನೈಚ್ಛಿಕ ಗರ್ಭದಿಂದ ರಕ್ಷಿಸಿಕೊಳ್ಳಲು ಕ್ರಮ ಅನುಸರಿಸಿ

ಸಾಮಾನ್ಯವಾಗಿ ಪ್ರಥಮ ಸಮಾಗಮದಲ್ಲಿಯೇ ಗರ್ಭವತಿಯಾಗಲು ಹೆಚ್ಚಿನವರು ಇಚ್ಛಿಸುವುದಿಲ್ಲ. ಅದೂ ಅಲ್ಲದೇ ನಿಮ್ಮ ಸಂಗಾತಿ ಎಲ್ಲಾ ರೀತಿಯಿಂದ ಸೋಂಕುರಹಿತರೆಂಬುದನ್ನು ನಿಮಗಿನ್ನೂ ಖಾತರಿಯಾಗಿಲ್ಲ. ಇದಕ್ಕಾಗಿ ಪ್ರಥಮವಾಗಿ ನಿಮಗೆ ಸೂಕ್ತವೆನಿಸಿದ ರಕ್ಷಣಾ ಕ್ರಮವನ್ನು ಕೈಗೊಳ್ಳಿ. ಇದರಿಂದ ಅನೈಚ್ಛಿಕ ಗರ್ಭಧಾರಣೆಯಾಗುವುದರಿಂದ ತಡೆದಂತೆಯೂ ಆಯಿತು ಹಾಗೂ ಲೈಂಗಿಕ ರೋಗಗಳಿಂದ ರಕ್ಷಣೆ ಪಡೆದಂತೆಯೂ ಆಯಿತು. ಈ ಕ್ರಮ ನಿಮ್ಮ ಸಂಗಾತಿ ಕೈಗೊಳ್ಳುವವರೆಂದು ಖಂಡಿತಾ ನಿರೀಕ್ಷಿಸಬೇಡಿ. ಒಂದು ವೇಳೆ ಈ ನಿರೀಕ್ಷೆ ಹುಸಿಯಾದರೆ ದೊಡ್ಡ ದಂಡ ತೆರಬೇಕಾಗಿ ಬಂದೀತು. ಇಂದು ಈ ರಕ್ಷಣೆ ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮ ಕುಟುಂಬ ವೈದ್ಯರ ಸಲಹೆ ಮೇರೆಗೆ ಸೇವಿಸುವ ಗರ್ಭನಿರೋಧಕ ಗುಳಿಗೆ ಅಥವಾ ಸಾಧನವನ್ನು ಅಳವಡಿಸಿಕೊಳ್ಳಿ. ಎಲ್ಲಕ್ಕಿಂತ ಉತ್ತಮ ಎಂದರೆ ಕಾಂಡೋಮುಗಳು.

ಅನೈಚ್ಛಿಕ ಗರ್ಭದಿಂದ ರಕ್ಷಿಸಿಕೊಳ್ಳಲು ಕ್ರಮ ಅನುಸರಿಸಿ

ಅನೈಚ್ಛಿಕ ಗರ್ಭದಿಂದ ರಕ್ಷಿಸಿಕೊಳ್ಳಲು ಕ್ರಮ ಅನುಸರಿಸಿ

ಇವು ಅತ್ಯಂತ ಚಿಕ್ಕ ಪ್ಯಾಕೆಟ್ಟುಗಳಲ್ಲಿ ಲಭ್ಯವಿದ್ದು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ನಿಮ್ಮೊಂದಿಗೇ ಇರಿಸಿಕೊಳ್ಳಬಹುದು. ಇವುಗಳನ್ನು ಥಟ್ಟನೇ ಕೈಗೆ ಸಿಗುವ ಸ್ಥಳದಲ್ಲಿಡುವುದು ಅತ್ಯಂತ ಅಗತ್ಯ. ಏಕೆಂದರೆ ಇದನ್ನು ಧರಿಸಲು ನಿಮ್ಮ ಸಂಗಾತಿ ಲೈಂಗಿಕವಾಗಿ ಉದ್ರೇಕಿತನಾಗಿದ್ದಾಗ ಮಾತ್ರ ಸಾಧ್ಯವಾದುದರಿಂದ ಆ ಸಮಯದಲ್ಲಿ ಎಡತಾಕುವುದು ಇಬ್ಬರಿಗೂ ಸಮಂಜಸವಲ್ಲ. ಈ ವಿಧಾನ ನಿಮಗೆ ಪರಿಸ್ಥಿತಿಯ ಮೇಲೆ ಹೆಚ್ಚಿನ ಹತೋಟಿಯನ್ನು ನೀಡುತ್ತದೆ ಮಾತ್ರವಲ್ಲದೇ ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಯಾವುದೇ ದುಗುಡವಿದ್ದುದು ಕ್ರಮೇಣ ಕಡಿಮೆಯಾಗಿ ದಾಂಪತ್ಯದ ಅನುಭವವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.

ಪ್ರಥಮ ಸಮಾಗಮದಲ್ಲಿ ರಕ್ತಸ್ರಾವವಾಗುವುದೇ ಕನ್ಯತ್ವದ ಲಕ್ಷಣವಲ್ಲ

ಪ್ರಥಮ ಸಮಾಗಮದಲ್ಲಿ ರಕ್ತಸ್ರಾವವಾಗುವುದೇ ಕನ್ಯತ್ವದ ಲಕ್ಷಣವಲ್ಲ

ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಂತಹ ನಂಬಿಕೆಯೆಂದರೆ ಪ್ರಥಮ ಸಮಾಗಮದ ಬಳಿಕ ರಕ್ತಸ್ರಾವವಾದರೆ ಮಾತ್ರ ಆಕೆ ಕನ್ಯೆ ಎಂಬ ವಿಷಯ. ಇದು ವೈಜ್ಞಾನಿಕವಾಗಿ ತಪ್ಪಾದ ನಂಬಿಕೆ. ವಾಸ್ತವವೆಂದರೆ ಇದು ಕೆಲವರಲ್ಲಿ ಮಾತ್ರ ಕಂಡುಬರುತ್ತದೆ. ಏಕೆಂದರೆ ಕನ್ಯಾಪೊರೆ ಎಂಬ ತೆಳುವಾದ ಚರ್ಮದ ಪೊರೆ ಯೋನಿದ್ವಾರದಲ್ಲಿ ಅಡ್ಡಲಾಗಿದ್ದು ಬೇರೆ ಯಾವುದೇ ಕಾರಣದಿಂದಲೂ ಹರಿದಿರಬಹುದು. ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಪಾಲಿಸುವ ಚಟುವಟಿಕೆಗಳಾದ ಓಟ, ನೆಗೆತ, ಸೈಕಲ್ ತುಳಿಯುವುದು, ಈಜು ಮೊದಲಾದವುಗಳ ಮೂಲಕ ಈ ಅಂಗಾಂಶ ಘಾಸಿಗೊಂಡಿರಬಹುದು. ಇದರರ್ಥ ಯುವತಿ ಬೇರೆ ಯಾರನ್ನೋ ಈ ಮೊದಲು ಕೂಡಿದ್ದಾಳೆ ಎಂಬುದು ಸರ್ವಥಾ ಅಲ್ಲ!

ಪ್ರಥಮ ಸಮಾಗಮದಲ್ಲಿ ರಕ್ತಸ್ರಾವವಾಗುವುದೇ ಕನ್ಯತ್ವದ ಲಕ್ಷಣವಲ್ಲ

ಪ್ರಥಮ ಸಮಾಗಮದಲ್ಲಿ ರಕ್ತಸ್ರಾವವಾಗುವುದೇ ಕನ್ಯತ್ವದ ಲಕ್ಷಣವಲ್ಲ

ಇನ್ನೂ ಕೆಲವರಲ್ಲಿ ಈ ಅಂಗಾಂಶ ಹುಟ್ಟಿನಿಂದಲೇ ಇರುವುದಿಲ್ಲ. ಒಂದರ್ಥದಲ್ಲಿ ರಕ್ತಸ್ರಾವವಾದರೆ ಆ ಸಮಾಗಮ ಅತ್ಯಂತ ನೋವಿನಿಂದ ಕೂಡಿದ್ದು ಎಂದು ತಿಳಿಯಬೇಕು. ರಕ್ತಸ್ರಾವವಿಲ್ಲದಿದ್ದರೆ ಇಬ್ಬರಿಗೂ ಮೊದಲ ಅನುಭವವೇ ಅತ್ಯಂತ ಸಂತೋಷಕರ ಅನುಭವವಾಗಿದ್ದು ಜೀವನಪರ್ಯಂತ ಸುಖಜೀವನ ನಡೆಸಲು ಮುನ್ನುಡಿಯಾಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯ ಬಗ್ಗೆ ಅನುಮಾನವಿದ್ದರೆ ಸಮಾಗಮಕ್ಕೂ ಮೊದಲೇ ಸ್ಪಷ್ಟಮಾತುಗಳಲ್ಲಿ ಕೇಳಿ ಖಚಿತಪಡಿಸಿಕೊಂಡೇ ಮುಂದುವರೆಯುವುದು ಸೂಕ್ತ.

ಇಬ್ಬರಿಗೂ ಇದೇ ಪ್ರಥಮ ಅನುಭವವಾಗಿದ್ದರೆ

ಇಬ್ಬರಿಗೂ ಇದೇ ಪ್ರಥಮ ಅನುಭವವಾಗಿದ್ದರೆ

ಒಂದು ವೇಳೆ ನಿಮ್ಮಿಬ್ಬರಿಗೂ ಇದೇ ಪ್ರಥಮ ಅನುಭವವಾಗಿದ್ದರೆ ಹೇಗೆ ಮುಂದುವರೆಯುವುದೆಂಬ ದುಗುಡದಲ್ಲಿ ಇಬ್ಬರೂ ಪರಸ್ಪರ ಹತ್ತಿರಾಗದ ಸಂಭವವೇ ಹೆಚ್ಚು. ಇದಕ್ಕೆ ಮೊದಲು ನೀವಿಬ್ಬರೂ ಮಾನಸಿಕವಾಗಿ ಹತ್ತಿರಾಗಲು ಪ್ರಯತ್ನಿಸಿ. ಪರಸ್ಪರರು ಮೆಚ್ಚುವ ಮತ್ತು ಮೆಚ್ಚದೇ ಇರುವ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ. ಆತ್ಮೀಯ ಸ್ಪರ್ಶದ ಮೂಲಕ ಒಬ್ಬರನ್ನೊಬ್ಬರು ಅರ್ಪಿಸಿಕೊಳ್ಳಲು ಪ್ರಯತ್ನಿಸಿ. ಇಬ್ಬರೂ ಪೂರ್ಣವಾಗಿ ಸಿದ್ಧರಾಗುವವರೆಗೂ ಕೂಡುವ ಕ್ರಿಯೆಗೆ ಜಾರಬೇಡಿ. ಸಾಕಷ್ಟು ಸಮಯಾವಕಾಶ ನೀಡಿ. ನಿಸರ್ಗಕ್ಕೇ ತನ್ನ ಕೆಲಸ ಮಾಡಲು ಬಿಡಿ. ನಿಮ್ಮ ಸಂಗಾತಿಗೆ ಇಷ್ಟವಾಗುವ ಯಾವುದೇ ಸ್ಪರ್ಶವನ್ನು (ಉದಾಹರಣೆಗೆ ಚುಂಬನ) ಯಾವುದೇ ನಿಯಂತ್ರಣವಿಲ್ಲದೇ ನೀಡಿ. ನಿಸರ್ಗ ನಿಮ್ಮನ್ನು ಮುಂದುವರೆಸುತ್ತಾ ತನ್ನಿಂತಾನೇ ಪರಾಕಾಷ್ಠೆಗೆ ತಲುಪಿಸುತ್ತದೆ.

ಒಂದು ವೇಳೆ ನಿಮಗೆ ಮಾತ್ರ ಇದು ಪ್ರಥಮ ಅನುಭವವಾಗಿದ್ದರೆ

ಒಂದು ವೇಳೆ ನಿಮಗೆ ಮಾತ್ರ ಇದು ಪ್ರಥಮ ಅನುಭವವಾಗಿದ್ದರೆ

ನಿಮ್ಮ ಸಂಗಾತಿಯಲ್ಲಿ ಯಾವುದೇ ವಿಷಯವನ್ನು ಮುಚ್ಚಿಡಬೇಡಿ ಮತ್ತು ನಿಮ್ಮ ಸಂಗಾತಿಯಿಂದಲೂ ಅದನ್ನೇ ಅಪೇಕ್ಷಿಸಿ. ಒಂದು ವೇಳೆ ನಿಮ್ಮ ಸಂಗಾತಿಗೆ ಇದು ಪ್ರಥಮ ಸಮಾಗಮವಲ್ಲದಿದ್ದರೆ ಅವರಿಂದ ನಿಮಗಿದು ಪ್ರಥಮ ಸಮಾಗಮ, ಇದಕ್ಕಾಗಿ ಸಂಪೂರ್ಣವಾಗಿ ಸಹಕರಿಸಲು ಕೋರಿಕೊಳ್ಳಿ. ಈ ಸಮಯದಲ್ಲಿ ದುಗುಡ ನಿಮ್ಮಿಂದಲೇ ಪ್ರಾರಂಭವಾಗುವ ಸಂಭವ ಹೆಚ್ಚು. ಇದಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಸಹಕರಿಸುವುದು ಹಾಗೂ ನಿಮ್ಮ ಸಂಗಾತಿ ನಿಮ್ಮೊಂದಿಗಿ ಅತ್ಯಂತ ನಾಜೂಕಿನಿಂದ ವ್ಯವಹರಿಸುವುದು ಅತ್ಯಂತ ಅಗತ್ಯವಾಗಿದೆ. ನೆನಪಿಡಿ, ಇಬ್ಬರಿಂದಲೂ ಕೊಂಚವಾದರೂ ಧಾವಂತ ಎದುರಾದರೆ ಕೆಲಸ ಕೈಕೊಡುವುದೇ ಹೆಚ್ಚು. ಹೆಚ್ಚಿನ ಸಂದರ್ಭದಲ್ಲಿ ಕಡೆಘಳಿಗೆಯಲ್ಲಿ ಯುವತಿಯೇ ದುಗುಡ ತಾಳಲಾರದೇ ಧೈರ್ಯಗೆಟ್ಟು ಕೋಣೆಯಿಂದ ಹೊರಬಂದ ನಿದರ್ಶನಗಳಿವೆ.

ಒಂದು ವೇಳೆ ನಿಮಗೆ ಮಾತ್ರ ಇದು ಪ್ರಥಮ ಅನುಭವವಾಗಿದ್ದರೆ

ಒಂದು ವೇಳೆ ನಿಮಗೆ ಮಾತ್ರ ಇದು ಪ್ರಥಮ ಅನುಭವವಾಗಿದ್ದರೆ

ಒಂದು ವೇಳೆ ಈ ಸಂದರ್ಭ ಎದುರಾದರೆ ಧೈರ್ಯಗೆಡಬೇಡಿ. ಅಂತಿಮ ಘಟ್ಟವನ್ನು ಬಿಟ್ಟು ಕೇವಲ ಆತ್ಮೀಯ ಸ್ಪರ್ಶ ಮಾತ್ರ ಸಾಕು ಎಂದು ನಯವಾಗಿ ಹೇಳಿ. ನೀವು ಸಂಗಾತಿಯಿಂದ ವಿಮುಖರಾಗುತ್ತಿಲ್ಲ, ಈ ಸಂದರ್ಭಕ್ಕೆ ಇನ್ನೂ ಮಾನಸಿಕರಾಗಿ ಸಿದ್ಧರಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿ. ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮನ್ನು ಮನಸಾರೆ ಪ್ರೀತಿಸುವವರೇ ಆಗಿದ್ದರೆ ಖಂಡಿತಾ ನಿಮ್ಮ ವ್ಯಕ್ತಿತ್ವವನ್ನು ಗೌರವಿಸಿ ನಿಮ್ಮೊಂದಿಗೆ ಸಹಕರಿಸುವರು.

ಕೊಂಚ ನೋವು ತಾಳಿಕೊಳ್ಳುವುದು ಅನಿವಾರ್ಯವಾಗಿದೆ

ಕೊಂಚ ನೋವು ತಾಳಿಕೊಳ್ಳುವುದು ಅನಿವಾರ್ಯವಾಗಿದೆ

ಪ್ರಥಮ ಸಮಾಗಮದಲ್ಲಿ ಕೊಂಚ ನೋವು ಅನುಭವಿಸಬೇಕಾಗುವುದು ಅನಿವಾರ್ಯವಾಗಿದೆ. ಏಕೆಂದರೆ ನಿಮ್ಮ ಶರೀರ ರಚನೆಯೇ ಹಾಗಿದೆ. ಯೋನಿಮಾರ್ಗವು ಒಂದು ಮಗುವಿನ ತಲೆಹೊರಬರುವಷ್ಟು ಹಿಗ್ಗುವ ಸಾಮರ್ಥ್ಯ ಹೊಂದಿದೆ. (ಇಲ್ಲದಿದ್ದರೆ ಹೆರಿಗೆಯ ಸಮಯದಲ್ಲಿ ಮಗು ಹೊರಬರುವುದಾದರೂ ಹೇಗೆ?) ಆದರೆ ಈ ಸಾಮರ್ಥ್ಯದ ಬಗ್ಗೆ ನಿಮಗೆ ಅರಿವಿರದ ಕಾರಣ ದುಗುಡ ಹೆಚ್ಚುತ್ತದೆ. ಪ್ರಥಮ ಸಮಾಗಮದಲ್ಲಿ ಈ ದ್ವಾರ ಮೊತ್ತ ಮೊದಲ ಬಾರಿಗೆ ಹಿಗ್ಗುವ ಅನುಭವವನ್ನು ಪಡೆಯುವುದರಿಂದ ಕೊಂಚ ನೋವಾಗುವುದು ಸಹಜ. ಆದರೆ ಸಮಾಗಮದ ಸುಖದಿಂದ ನಿಮ್ಮ ನರನರಗಳಲ್ಲಿ ಸೆಳೆಯುವ ಸಂವೇದನೆಯಿಂದ ಮುದಗೊಂಡ ಮನಸ್ಸು ಈ ನೋವನ್ನು ನುಂಗಿಕೊಳ್ಳಲು ಸಹಕಾರಿಯಾಗಿದೆ.

ಕೊಂಚ ನೋವು ತಾಳಿಕೊಳ್ಳುವುದು ಅನಿವಾರ್ಯವಾಗಿದೆ

ಕೊಂಚ ನೋವು ತಾಳಿಕೊಳ್ಳುವುದು ಅನಿವಾರ್ಯವಾಗಿದೆ

ವಾಸ್ತವದಲ್ಲಿ ಈ ನೋವು ಕ್ಷಣಿಕವಾಗಿದೆ. ಸುಮಾರು ಒಂದು ಅಥವಾ ಎರಡು ನಿಮಿಷದ ಬಳಿಕ ಈ ನೋವು ಮಾಯವಾಗಿ ಈ ಸುಖವನ್ನು ನೀವು ಇನ್ನಷ್ಟು ಬಯಸಲು ಸಾಧ್ಯವಾಗುತ್ತದೆ. ಆದ್ದರಿಂದ ಈ ನೋವನ್ನು ಬಳಿಕ ಬರುವ ಸುಖದ ಅಲೆಯ ಮುನ್ನುಡಿ ಎಂದೇ ಅರ್ಥೈಸಿಕೊಳ್ಳಿ. ಯಾವುದಕ್ಕೂ ಸಮಾಗಮದ ಮೊದಲಿನ ಆತ್ಮೀಯ ಸ್ಪರ್ಶವನ್ನು ಸಂಪೂರ್ಣವಾಗಿ ಅನುಭವಿಸಿದ ಬಳಿಕವೇ ಸಮಾಗಮಕ್ಕೆ ತಯಾರಾಗಿ. ಇದರಿಂದ ನಿಮ್ಮೊಳಗೆ ದ್ರವಿಸಲು ಸಾಧ್ಯವಾಗಿ ಸಮಾಗಮ ಅತ್ಯಂತ ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ನೆನಪಿಡಿ ಒಣ ಯೋನಿಯಿಂದ ನೋವು ಇನ್ನಷ್ಟು ಹೆಚ್ಚಾಗುತ್ತದೆ.

ಆತ್ಮೀಯ ಸ್ಪರ್ಶ ಸಮಾಗಮದಷ್ಟೇ ಮುಖ್ಯವಾಗಿದೆ

ಆತ್ಮೀಯ ಸ್ಪರ್ಶ ಸಮಾಗಮದಷ್ಟೇ ಮುಖ್ಯವಾಗಿದೆ

ದಂಪತಿಗಳ ಆತ್ಮೀಯತೆಗೆ ಸಮಾಗಮಕ್ಕಿಂತಲೂ ಆತ್ಮೀಯ ಸ್ಪರ್ಶವೇ ಹೆಚ್ಚಿನ ಪಾತ್ರ ವಹಿಸುತ್ತದೆ. ಇದರಲ್ಲಿ ನಿಮ್ಮಿಬ್ಬರ ನಡುವಣ ಮುಕ್ತ ಸಂಭಾಷಣೆ, ನಗು, ಕಚಗುಳಿ, ಚುಂಬನ, ಮರ್ದನ ಸೇರಿದಂತೆ ನಿಮ್ಮಿಬ್ಬರಿಗೂ ಸಂತೋಷ ನೀಡುವ ಯಾವುದೇ ಕ್ರಿಯೆ ಆತ್ಮೀಯ ಸ್ಪರ್ಶ (foreplay) ಎಂದೇ ಪರಿಗಣಿಸಲ್ಪಡುತ್ತದೆ. ನಿಮ್ಮ ಸಂಗಾತಿಗೆ ಏನು ಇಷ್ಟ ಎಂಬುದನ್ನು ನೇರವಾಗಿ ಚರ್ಚಿಸಿ ಮುಕ್ತವಾಗಿ ಹಂಚಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮಿಬ್ಬರ ನಡುವೆ ಮೂರನೆಯ ವ್ಯಕ್ತಿಯ ಬಗ್ಗೆ ಅವಹೇಳನ ಅಥವಾ ಪ್ರಶಂಸೆ ಬೇಡ. ಕೇವಲ ನಿಮ್ಮಿಬ್ಬರ ಬಗ್ಗೆ ಮಾತ್ರ ಮಾತನಾಡಿ, ಬೇರೆಯವರ ಬಗ್ಗೆ ಚರ್ಚಿಸದಿರುವುದೇ ಕ್ಷೇಮ. ನಿಸರ್ಗ ನಿಯಮದಂತೆ ನಿಧಾನವಾಗಿ ಒಬ್ಬರನ್ನೊಬ್ಬರು ನಿಧಾನವಾಗಿ ಆವರಿಸಿಕೊಳ್ಳುತ್ತಾ ಪರಸ್ಪರರೊಳಗೆ ಲೀನರಾಗಿ. ಪರಸ್ಪರರ ಅಂಗಾಂಗಗಳ ಅಳತೆಗಳ ವ್ಯಾಖ್ಯಾನ ಮಾಡದೇ ಮುಕ್ತಮನಸ್ಸಿನಿಂದ ಮೆಚ್ಚಿ ಮೃದುವಾಗಿ ನೇವರಿಸಿಕೊಳ್ಳಿ. ಯಾವ ಕಾರಣಕ್ಕೂ ಅಂತಿಮ ಘಟ್ಟಕ್ಕೆ ಆತುರ ಪಡಬೇಡಿ. ಹೆಚ್ಚಿನ ಸಂದರ್ಭಗಳಲ್ಲಿ ಈ ನೇವರಿಕೆಯ ಸಮಯದಲ್ಲಿಯೇ ಗಂಡು ಸ್ಖಲನಗೊಂಡಿರುವುದು ಕಂಡುಬಂದಿದೆ. ಇದು ಅತ್ಯಂತ ಸ್ವಾಭಾವಿಕವಾಗಿದ್ದು ಈ ಬಗ್ಗೆ ಯಾವುದೇ ಟೀಕೆ ಮಾಡದಿರಿ. ಆತ್ಮೀಯ ಕ್ರಿಯೆಯನ್ನು ಮುಂದುವರೆಸಿ. ಖಂಡಿತಾ ಕೊಂಚ ಸಮಯದಲ್ಲಿಯೇ ಎಲ್ಲಾ ಸರಿಯಾಗಿ ನಿಮ್ಮ ಪ್ರಥಮ ಸಮಾಗಮ ನಿಮ್ಮ ಜೀವನದ ಅತ್ಯಂತ ಸುಂದರ ಘಳಿಗೆಯಾಗಿ ಪರಿಣಮಿಸುತ್ತದೆ.

ಹಾಸಿಗೆ ಹೊದಿಕೆಗಳನ್ನು ಈಗಲೇ ಬದಲಿಸಬೇಕೇ?

ಹಾಸಿಗೆ ಹೊದಿಕೆಗಳನ್ನು ಈಗಲೇ ಬದಲಿಸಬೇಕೇ?

ಸರ್ವೇ ಸಾಧಾರಣವಾಗಿ ಪ್ರತಿಯೊಬ್ಬ ಯುವತಿಗೂ ಈ ದುಗುಡಗಳು ಎದುರಾಗುತ್ತವೆ. ಏಕೆಂದರೆ ಸಮಾಗಮದ ಬಳಿಕ ಈ ಹೊದಿಕೆಯಲ್ಲಿ ರಕ್ತಸ್ರಾವ ಅಥವಾ ವೀರ್ಯ ಚೆಲ್ಲಿರುವುದು ಬೇರೆ ಯಾರದಾದರೂ ಕಣ್ಣಿಗೆ ಬಿದ್ದರೆ ಎಂಬ ಆತಂಕ ಮನೆಮಾಡುತ್ತದೆ. ಇದಕ್ಕಾಗಿ ಪೂರ್ವಸಿದ್ಧತೆ ನಡೆಸಿಕೊಳ್ಳುವುದು ಅತ್ಯಂತ ಸೂಕ್ತ. ಈ ಸಮಯದಲ್ಲಿ ಎರಡು ಅಥವಾ ಮೂರು ಹೊದಿಕೆಗಳನ್ನು ಮೊದಲೇ ಹೊಂದಿಸಿರುವುದು ಒಳ್ಳೆಯದು. ಒಂದು ವೇಳೆ ಹೊದಿಗೆ ಮಲಿನವಾದರೆ ಕೂಡಲೇ ಇದನ್ನು ಬದಲಿಸಿ ಹೊಸತನ್ನು ಹಾಕುವ ಮೂಲಕ ದುಗುಡವನ್ನು ನಿವಾರಿಸಬಹುದು. ಇನ್ನೊಂದೆಡೆ ಸಮಾಗಮಕ್ಕೂ ಮುನ್ನ ಮತ್ತು ಬಳಿಕ ಸ್ನಾನ ಮಾಡಬೇಕೇ ಬೇಡವೇ ಎಂಬ ದುಗುಡ ಹೆಚ್ಚಿನ ಎಲ್ಲಾ ಯುವತಿಯರು ಎದುರಿಸುತ್ತಾರೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಿದರೆ ಪ್ರತಿ ಧರ್ಮವೂ ಸ್ನಾನ ಅಗತ್ಯ ಎಂದು ಹೇಳುತ್ತದೆ. ಸ್ನಾನ ಮಾಡುವುದು ಒಳ್ಳೆಯದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಹಾಸಿಗೆ ಹೊದಿಕೆಗಳನ್ನು ಈಗಲೇ ಬದಲಿಸಬೇಕೇ?

ಹಾಸಿಗೆ ಹೊದಿಕೆಗಳನ್ನು ಈಗಲೇ ಬದಲಿಸಬೇಕೇ?

ಬಿಸಿನೀರಿನ ಸ್ನಾನದಿಂದ ನಿಮ್ಮ ಶರೀರ ಕೀಟಾಣುರಹಿತವಾಗುವುದು ಮಾತ್ರವಲ್ಲದೇ ನಿಮ್ಮ ಎಲ್ಲಾ ಸ್ನಾಯುಗಳು ಸಡಿಲವಾಗಿ ಸಮಾಗಮದ ಪ್ರತಿಕ್ಷಣವನ್ನೂ ಆಸ್ವಾದಿಸಲು ಸಾಧ್ಯವಾಗುತ್ತದೆ. ನಿಮ್ಮಿಬ್ಬರ ಗುಪ್ತಾಂಗಳು ಸ್ವಚ್ಛವಾಗಿದ್ದು ಸಮಾಗಮದ ಸಮಯದಲ್ಲಿ ಯಾವುದೇ ರೀತಿಯ ಸೋಂಕು ಹರಡುವುದರಿಂದ ರಕ್ಷಣೆ ಪಡೆದಂತಾಗುತ್ತದೆ. ಸಮಾಗಮದ ಬಳಿಕವೂ ಸ್ನಾನ ಮಾಡುವುದು ಒಳ್ಳೆಯದು. ಒಂದು ವೇಳೆ ಸಾಧ್ಯವಾಗದೇ ಇದ್ದರೆ ಗುಪ್ತಾಂಗಗಳನ್ನು ಮಾತ್ರ ಸ್ವಚ್ಛವಾಗಿ ಬಿಸಿನೀರಿನಿಂದ ತೊಳೆದುಕೊಳ್ಳುವುದು ಅತಿ ಅಗತ್ಯವಾಗಿದೆ.

ನಿಮ್ಮ ಪರಿಸರವನ್ನೂ ಅಹ್ಲಾದಕರವನ್ನಾಗಿಸಿ

ನಿಮ್ಮ ಪರಿಸರವನ್ನೂ ಅಹ್ಲಾದಕರವನ್ನಾಗಿಸಿ

ನಿಮ್ಮ ಸಮಾಗಮಕ್ಕೆ ನೀವಿರುವ ಪರಿಸರವೂ ಆಹ್ಲಾದಕರವಾಗಿರಬೇಕು. ಕೆಲವೊಮ್ಮೆ ಈ ಸಮಯದಲ್ಲಿ ಅತಿ ಚಳಿ ಅಥವಾ ಅತೀವ ಸೆಖೆ ನಿಮ್ಮ ಸಂತೋಷಕ್ಕೆ ಅಡ್ಡಿಯಾಗಬಹುದು. ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಕೋಣೆಯನ್ನು ಇನ್ನಷ್ಟು ಆಹ್ಲಾದಕರವಾಗಿಸಲು ಪ್ರಯತ್ನಿಸಿ. ಸುಗಂಧಬೀರುವ ಮೇಣದ ಬತ್ತಿ, ಮಂದ್ರವಾಗಿರುವ ಬೆಳಕು, ಸುವಾಸನೆಯುಕ್ತ ಹೂವುಗಳು, ಮಂದ್ರಸ್ತರದ ಸಂಗೀತ, ನಯವಾಗಿ ಹೊಡೆದುಕೊಳ್ಳುವ ಚಿಕ್ಕ ಚಿಕ್ಕ ಘಂಟೆಗಳು, ಬೀಸುವ ತಂಗಾಳಿ, ಒಟ್ಟಾರೆ ನಿಮ್ಮ ಮನೋಭಾವನ್ನು ಉಲ್ಲಸಿತಗೊಳಿಸುವ ಯಾವುದೇ ವಿಧಾನವನ್ನು ನೀವು ಅನುಸರಿಸಬಹುದು. ನಿಮ್ಮ ಊಟವನ್ನೂ ಈ ಕೋಣೆಯಲ್ಲಿಯೇ ತರಿಸಿ ಮೇಣದಬತ್ತಿಯ ಬೆಳಕಿನಲ್ಲಿ ಸೇವಿಸುವುದು ಇನ್ನೂ ಉತ್ತಮ. ಆತ್ಮೀಯ ಸ್ಪರ್ಶಕ್ಕೂ ಮುನ್ನ ಪರಸ್ಪರ ಮಾತುಗಳಲ್ಲಿ ಒಬ್ಬರಿಗೊಬ್ಬರು ಹತ್ತಿರಾಗಿ.

ನಿಮ್ಮ ಪರಿಸರವನ್ನೂ ಅಹ್ಲಾದಕರವನ್ನಾಗಿಸಿ

ನಿಮ್ಮ ಪರಿಸರವನ್ನೂ ಅಹ್ಲಾದಕರವನ್ನಾಗಿಸಿ

ನೆನಪಿಡಿ, ನಿಮ್ಮ ಸ್ನೇಹಿತರು ಈ ಅನುಭವದ ಬಗ್ಗೆ ಹೇಳಿರುವುದು ಅಥವಾ ನೀಲಿಚಿತ್ರಗಳಲ್ಲಿ ಕಂಡಿರುವ ಘಟನೆಗಳು ವಾಸ್ತವಕ್ಕೆ ತುಂಬಾ ದೂರವಾಗಿವೆ. ಇವು ಅತಿ ಹೆಚ್ಚಾಗಿ ಉತ್ಪ್ರೇಕ್ಷಿತವಾದವು ಎಂಬ ವಿಷಯವನ್ನು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ. ಈ ಸಮಯದಲ್ಲಿ ಯಾವುದೇ ರೀತಿಯ ಹೋಲಿಕೆಯನ್ನು ಮಾಡದೇ ಸ್ವಾಭಾವಿಕವಾಗಿ ಮುಂದುವರೆಯಿರಿ. ನೆನಪಿಡಿ, ಲೈಂಗಿಕವಾಗಿ ಪ್ರತಿ ವ್ಯಕ್ತಿಯ ಪ್ರತಿಕ್ರಿಯೆಗಳು ಬೇರೆ ಬೇರೆ ತೆರನಾಗಿರುತ್ತವೆ.

ಪ್ರಥಮ ಸಮಾಗಮವೆಂದು ಯಾವುದೇ ರೀತಿಯ ದುಗುಡವಿದ್ದಲ್ಲಿ ಅದರಿಂದ ಹೊರಬರಲು ಯತ್ನಿಸಿ. ಇದು ನಿಮ್ಮ ಜೀವನದುದ್ದಕ್ಕೂ ನೆನಪಿರುವ ಅತ್ಯಂತ ಸುಂದರವಾದ ಘಳಿಗೆಯಾಗಿದೆ. ಯಾವುದಕ್ಕೂ ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿರಲಿ ಹಾಗೂ ಅತ್ಯಂತ ಸಮಂಜಸವಾದ ಸ್ಥಳದಲ್ಲಿಯೇ ಮುಂದುವರೆಯಿರಿ. ನಿಮಗೆ ಶುಭವಾಗಲಿ.

English summary

Women’s guide to first-time Love Making

Whether you are both making love for the first time, or only one of you is a virgin, following some simple tips can relieve some worry and make the experience as enjoyable as possible.So lets have a look on few of the major points that women need to know before they actually say that they are ready.
X
Desktop Bottom Promotion