For Quick Alerts
ALLOW NOTIFICATIONS  
For Daily Alerts

ಶೀತ, ಕೆಮ್ಮು, ಜ್ವರಕ್ಕೆಲ್ಲಾ ರಾಮಬಾಣ- ಬಿಸಿ ಬಿಸಿಯಾದ ಸೂಪ್!

By Super
|

ಯಾವುದೋ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರು ಔಷಧಗಳನ್ನು ನೀಡುವ ಜೊತೆಗೇ ಆಹಾರದಲ್ಲಿ ಕೊಂಚ ಬದಲಾವಣೆಗಳನ್ನೂ ಸೂಚಿಸುತ್ತಾರೆ. ಏಕೆಂದರೆ ಈ ಆಹಾರಗಳು ನಿತ್ರಾಣವಾಗಿರುವ ದೇಹಕ್ಕೆ ಮರುಚೈತನ್ಯವನ್ನೂ ಶಕ್ತಿಯನ್ನೂ ನೀಡುತ್ತದೆ. ಇದು ಸುಲಭವಾಗಿ ಜೀರ್ಣವಾಗುವಂತಹದ್ದೂ, ನಿಧಾನವಾಗಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಮತ್ತು ನೀರನ್ನು ನೀಡುತ್ತಾ ರೋಗದ ವಿರುದ್ದ ಹೋರಾಡುತ್ತಿರುವ ರೋಗ ನಿರೋಧಕ ಶಕ್ತಿಗೆ ಬೆಂಬಲವನ್ನು ನೀಡುವಂತಹದ್ದೂ ಆಗಿರಬೇಕು. ಇದು ವಿಶೇಷ ಟೊಮೆಟೊ ಸೂಪ್ ರೆಸಿಪಿ

ಅದರಲ್ಲೂ ಶೀತ, ಜ್ವರ, ಕೆಮ್ಮು ನೆಗಡಿಗಳಂತಹ ವೈರಸ್ಸಿನ ಧಾಳಿಯ ಕಾಯಿಲೆಗಳಾದರೆ ದೇಹಕ್ಕೆ ಇತರ ದಿನಗಳಿಗಿಂತಲೂ ಹೆಚ್ಚಿನ ಕ್ಯಾಲೋರಿಗಳು ಮತ್ತು ಪೋಷಕಾಂಶಗಳ ಅಗತ್ಯವಿದೆ. ಈ ಪರಿಸ್ಥಿತಿಯಲ್ಲಿ ವೈದ್ಯರು ಸೂಚಿಸುವ ಆಹಾರಗಳಲ್ಲಿ ಸೂಪ್ ಪ್ರಮುಖವಾಗಿದೆ. ನಮ್ಮ ಹಿರಿಯರು ನೀಡುತ್ತಿದ್ದ ಬೇಳೆಯ ನೀರು, ಅನ್ನದ ಗಂಜಿ ಮೊದಲಾದವು ಸಹಾ ಸೂಪ್‌ನ ಒಂದು ರೂಪವೇ ಆಗಿದೆ. ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

ಅನಾರೋಗ್ಯದಲ್ಲಿ ಮನೆಯಲ್ಲಿಯೇ ಸುಲಭಸಾಮಾಗ್ರಿಗಳಿಂದ ಸಿದ್ಧಪಡಿಸಲಾಗುವ ಈ ಸೂಪ್‌ಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು ಅನಾರೋಗ್ಯದಿಂದ ಶೀಘ್ರವೇ ಹೊರಬರಲು ನೆರವಾಗುತ್ತದೆ. ಆರೋಗ್ಯಕರವಾದ ಈ ಸೂಪ್‌ಗಳನ್ನು ತರಕಾರಿಗಳು, ಸಾಗರೋತ್ಪನ್ನಗಳು ಅಥವಾ ಮಾಂಸವನ್ನು ಉಪಯೋಗಿಸಿಯೂ ತಯಾರಿಸಬಹುದು. ಅದರಲ್ಲೂ ಶೀತ ನೆಗಡಿ, ಕೆಮ್ಮು, ಜ್ವರ, ಗಂಟಲಬೇನೆ ಮೊದಲಾದ ತೊಂದರೆಗಳಿಗೆ ಸಮರ್ಥವಾದ ವಿವಿಧ ಸೂಪ್‌ಗಳನ್ನು ಸೇವಿಸುವ ಮಹತ್ವವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ: ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ

ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಅನಾರೋಗ್ಯಕ್ಕೆ ಕಾರಣವಾಗುವ ವೈರಸ್ಸುಗಳನ್ನು ಕೊಲ್ಲಬಲ್ಲ ಔಷಧವನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ. ಇದಕ್ಕೆ ದೇಹದ ರಕ್ಷಣಾ ವ್ಯವಸ್ಥೆಯೇ ತಕ್ಕ ಪ್ರತಿರೋಧ ವ್ಯವಸ್ಥೆಯನ್ನು ಏರ್ಪಡಿಸಿಕೊಳ್ಳಬೇಕು. ದೇಹದ ರೋಗ ನಿರೋಧಯ ವ್ಯವಸ್ಥೆ ಕಂಡುಕೊಳ್ಳುವ ರಕ್ಷಣಾ ತಂತ್ರಗಳೇ ಜ್ವರ ಶೀತ ಕೆಮ್ಮುಗಳಿಗೆ ಕಾರಣ.

ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಆದ್ದರಿಂದ ವೈರಸ್ಸುಗಳಿಗೆ ಬುದ್ಧಿ ಕಲಿಸಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸಿದರೆ ಸಾಕು. ಸೂಪ್ ಇದೇ ಕೆಲಸವನ್ನು ಮಾಡುತ್ತದೆ. ಇದರಲ್ಲಿ ಪೋಷಕಾಂಶಗಳು, ವಿವಿಧ ಲವಣಗಳು ಮತ್ತು ವಿಟಮಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ರೋಗ ನಿರೋಧಕ ಶಕ್ತಿಗೆ ಆನೆಬಲ ಬಂದಂತಾಗಿ ವೈರಸ್ಸುಗಳನ್ನು ಶೀಘ್ರವೇ ಮಟ್ಟ ಹಾಕುತ್ತದೆ.

ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ

ಇದೇ ಕಾರಣಕ್ಕೆ ಶೀತ ನೆಗಡಿ, ಜ್ವರವಿರುವವರು ರಾತ್ರಿ ಮಲಗುವ ಮುನ್ನ ಬಿಸಿ ಬಿಸಿ ಸೂಪ್ ಕುಡಿದು ಮಲಗುವುದು ಅತ್ಯುತ್ತಮವಾದ ಪರಿಣಾಮವನ್ನು ನೀಡುತ್ತದೆ.

ಸುಲಭವಾಗಿ ಜೀರ್ಣವಾಗುತ್ತದೆ

ಸುಲಭವಾಗಿ ಜೀರ್ಣವಾಗುತ್ತದೆ

ಸೂಪ್ ತಯಾರಿಸುವಾಗ ಇದರ ಸಮಾಗ್ರಿಗಳು ಪೂರ್ಣವಾಗಿ ಬೇಯುವಂತೆ ಮಾಡಿರುವುದರಿಂದ ನಮ್ಮ ಜೀರ್ಣಾಂಗಗಳಿಗೆ ಇವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಶ್ರಮ ಬೇಕಾಗಿಲ್ಲ. ಆದ್ದರಿಂದ ಮನೆಯಲ್ಲಿಯೇ ತಯಾರಿಸಿದ ಸರಳವಾದ ಸೂಪ್ ಸಹಾ ಸುಲಭವಾಗಿ ಜೀರ್ಣಗೊಳ್ಳುವ ಮೂಲಕ ದೇಹದ ರೋಗ ನಿರೋಧಕ ವ್ಯವಸ್ಥೆಗೆ ಹೆಚ್ಚಿನ ಶಕ್ತಿ ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ.

ಉರಿಯೂತ ನಿವಾರಕವಾಗಿದೆ

ಉರಿಯೂತ ನಿವಾರಕವಾಗಿದೆ

ಶೀತದಿಂದ ಬಳಲುತ್ತಿರುವವರಿಗೆ ಕೊಂಚ ಖಾರವಾದ ಸೂಪ್ ಉತ್ತಮವಾಗಿದೆ. ಅದರಲ್ಲೂ ಕಾಳುಮೆಣಸಿನಪುಡಿ ಬೆರೆಸಿದ ಚಿಕನ್ ಸೂಪ್ ಅತ್ಯುತ್ತಮವಾದ ಪರಿಣಾಮವನ್ನು ಬೀರುತ್ತದೆ. ಇದರ ಉರಿಯೂತ ನಿವಾರಕ ಗುಣ ವೈರಸ್ಸುಗಳ ಪ್ರಭಾವವನ್ನು ನಿವಾರಿಸಲು ನೆರವಾಗುತ್ತದೆ.

ಉರಿಯೂತ ನಿವಾರಕವಾಗಿದೆ

ಉರಿಯೂತ ನಿವಾರಕವಾಗಿದೆ

ಹನ್ನೆರಡನೆಯ ಶತಮಾನದಲ್ಲಿ ಚಿಕನ್ ಸೂಪ್ ಅನ್ನು ಜ್ಯೂಗಳ ಪೆನಿಸಿಲಿನ್ (Jewish Penicillin) ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಶೀತ, ಜ್ವರದಿಂದ ಬಳಲುತ್ತಿರುವವರಿಗೆ ಇದು ಔಷಧಿಯಂತೆ ಕೆಲಸ ಮಾಡುತ್ತಿದ್ದುದನ್ನು ಕಂಡು ಆ ಅನ್ವರ್ಥನಾಮವನ್ನು ಬಳಸಲಾಯಿತು.

ಪೌಷ್ಠಿಕ ಆಹಾರವಾಗಿದೆ

ಪೌಷ್ಠಿಕ ಆಹಾರವಾಗಿದೆ

ವೈರಸ್ಸುಗಳ ಧಾಳಿಗೆ ದೇಹ ಒಳಗಾದಾಗ ದೇಹದ ರೋಗ ನಿರೋಧಕ ವ್ಯವಸ್ಥೆ ಹಲವು ರೀತಿಯಲ್ಲಿ ದೇಹದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಮೈ ಬಿಸಿ ಮಾಡಲು, ಶೀತಕ್ಕೆ ಹೆಚ್ಚಿನ ನೀರನ್ನು ಸ್ರವಿಸಲು, ಕೆಮ್ಮಿಗೆ ಹೆಚ್ಚಿನ ಶಕ್ತಿ ಮತ್ತು ಒಳಗಿನಿಂದ ಹೆಚ್ಚು ತೇವವಾಗಿಸಲು, ಹೃದಯ ಬಡಿತ ಹೆಚ್ಚಿಸಲು ಮೊದಲಾದ ರೀತಿಯಲ್ಲಿ ದೇಹದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ಒಂದೆರಡು ದಿನದಲ್ಲಿಯೇ ದೇಹ ನಿತ್ರಾಣವಾಗುತ್ತದೆ. ಕಳೆದುಕೊಂಡ ಶಕ್ತಿಯನ್ನು ಮರು ಪಡೆಯಲು ದೇಹಕ್ಕೆ ವಿಶ್ರಾಂತಿ ಮತ್ತು ಹೆಚ್ಚಿನ ಪೌಷ್ಠಿಕ ಆಹಾರದ ಅಗತ್ಯವಿದೆ.

ಪೌಷ್ಠಿಕ ಆಹಾರವಾಗಿದೆ

ಪೌಷ್ಠಿಕ ಆಹಾರವಾಗಿದೆ

ವೈದ್ಯರು ವಿಶ್ರಾಂತಿಗೆ ಸಲಹೆ ನೀಡುವುದು ಇದೇ ಕಾರಣಕ್ಕೆ. ಕಳೆದುಕೊಂಡ ತ್ರಾಣವನ್ನು ಮತ್ತೆ ಪಡೆಯಲು ಸೂಪ್ ಗಿಂತ ಪೌಷ್ಟಿಕ ಆಹಾರ ಇನ್ನೊಂದಿಲ್ಲ. ಇದರಲ್ಲಿ ಬಳಸಲಾಗುವ ವಿವಿಧ ತರಕಾರಿ, ಮಸಾಲೆ ವಸ್ತುಗಳು ಮತ್ತು ನೀರು ದೇಹಕ್ಕೆ ಮರುಚೈತನ್ಯ ನೀಡಲು ಉಳಿದ ಆಹಾರಗಳಿಗಿಂತ ಹೆಚ್ಚು ಸಮರ್ಥವಾಗಿವೆ.

ಕಫವನ್ನು ತಿಳಿಗೊಳಿಸುತ್ತದೆ

ಕಫವನ್ನು ತಿಳಿಗೊಳಿಸುತ್ತದೆ

ರೋಗ ನಿರೋಧಕ ವ್ಯವಸ್ಥೆ ನಮ್ಮ ದೇಹದ ಒಳಬಾಗದಿಂದ ವೈರಸ್ಸುಗಳನ್ನು ಆಕರ್ಷಿಸಿ ಹೊರಹಾಕಲು ಮಾಡಿರುವ ಉಪಾಯವೆಂದರೆ ಕಫ. ಇದು ಗಂಟಲ ಒಳಭಾಗ, ಬಾಯಿಯ ಮೇಲ್ಭಾಗ ಮತ್ತು ಧ್ವನಿಪೆಟ್ಟಿಗೆಯ ಅಕ್ಕಪಕ್ಕದ ತೇವವಾದ ಸ್ಥಳದಲ್ಲಿ ಅಂಟು ಅಂಟಾದ ದ್ರವವನ್ನು ಸೃಷ್ಟಿಸುತ್ತದೆ. ಗಾಳಿಯಲ್ಲಿರುವ ವೈರಸ್ಸುಗಳು ಮತ್ತು ಬ್ಯಾಕ್ಟೀರಿಯಾಗಳು ಈ ಕಫಕ್ಕೆ ಅಂಟಿಕೊಳ್ಳುತ್ತದೆ. ಹೀಗೇ ಸಂಗ್ರಹವಾದ ವೈರಸ್ಸುಗಳಿಂದ ಪಾರದರ್ಶಕವಾಗಿದ್ದ ಕಫ ತಿಳಿಹಸಿರು ಬಣ್ಣ ತಳೆಯುತ್ತದೆ.

ಕಫವನ್ನು ತಿಳಿಗೊಳಿಸುತ್ತದೆ

ಕಫವನ್ನು ತಿಳಿಗೊಳಿಸುತ್ತದೆ

ಕೆಮ್ಮಿನ ಮೂಲಕ ಈ ಕಫವನ್ನು ಮರುದಿನ ನಿವಾರಿಸಲಾಗುತ್ತದೆ. ಕೆಲವೊಮ್ಮೆ ಇದು ವಿಪರೀತ ಗಟ್ಟಿಯಾಗಿ ಎಷ್ಟು ಕೆಮ್ಮಿದರೂ ಹೊರಹೋಗದೇ ಅಲ್ಲಿಯೇ ಅಂಟಿಕೊಂಡಿರುತ್ತದೆ. ವಿಶೇಷವಾಗಿ ಧ್ವನಿಪೆಟ್ಟಿಗೆಯ ಪಕ್ಕದ ಸ್ಥಳ ಕಫದ ಗೂಡಾಗಿರುತ್ತದೆ. ಸೂಪ್ ಕುಡಿಯುವ ಮೂಲಕ ಈ ಕಫವನ್ನು ತಿಳಿಗೊಳಿಸಿ ನಿವಾರಿಸಲು ಸುಲಭವಾಗಿ ಸಾಧ್ಯವಾಗುತ್ತದೆ.

ದೇಹಕ್ಕೆ ನೀರಿನ ಅಂಶವನ್ನು ನೀಡುತ್ತದೆ

ದೇಹಕ್ಕೆ ನೀರಿನ ಅಂಶವನ್ನು ನೀಡುತ್ತದೆ

ದೇಹದ ರೋಗ ನಿರೋಧಕ ವ್ಯವಸ್ಥೆ ಬಳಸುವ ಶಕ್ತಿಯ ಜೊತೆಗೇ ಬಹಳಷ್ಟು ನೀರನ್ನೂ ಉಪಯೋಗಿಸಿಕೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ನೀರಿನ ಕೊರತೆಯುಂಟಾಗುತ್ತದೆ. ತಣ್ಣಗಿನ ನೀರನ್ನು ಕುಡಿಯುವುದು ಜ್ವರ ಬಂದ ಸಮಯದಲ್ಲಿ ಕೊಂಚ ಅಪಾಯಕಾರಿ. ಏಕೆಂದರೆ ಈ ನೀರಿನಲ್ಲಿರುವ ಕೆಲವು ಲವಣ ಅಥವಾ ವೈರಸ್ಸುಗಳು ಶಿಥಿಲವಾಗಿರುವ ದೇಹಕ್ಕೆ ಬೇರೆ ಇನ್ನೊಂದು ತೊಂದರೆಯನ್ನು ತಂದೊಡ್ಡಬಹುದು. ಅದಕ್ಕಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ.

ದೇಹಕ್ಕೆ ನೀರಿನ ಅಂಶವನ್ನು ನೀಡುತ್ತದೆ

ದೇಹಕ್ಕೆ ನೀರಿನ ಅಂಶವನ್ನು ನೀಡುತ್ತದೆ

ಇದಕ್ಕೂ ಬದಲಾಗಿ ಬಿಸಿಬಿಸಿ ಸೂಪ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿಯ ಜೊತೆಗೇ ಬಿಸಿನೀರಿನ ಪೂರೈಕೆಯೂ ಆಗುತ್ತದೆ. ವಿಶೇಷವಾಗಿ ಜ್ವರವಿದ್ದಾಗ ಸೂಪ್ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಜ್ವರ ಬೇಗನೇ ಇಳಿಯಲು ಸಾಧ್ಯವಾಗುತ್ತದೆ.

ಅನಾರೋಗ್ಯದ ಸಮಯದಲ್ಲಿ ರುಚಿಕರವೂ ಆಗಿರುತ್ತದೆ

ಅನಾರೋಗ್ಯದ ಸಮಯದಲ್ಲಿ ರುಚಿಕರವೂ ಆಗಿರುತ್ತದೆ

ವೈರಸ್ಸುಗಳು ದೇಹವನ್ನು ಧಾಳಿ ಮಾಡಿದ ಬಳಿಕ ರೋಗ ನಿರೋಧಕ ವ್ಯವಸ್ಥೆ ದೇಹದ ಕೆಲವು ವಿಭಾಗಗಳಿಗೆ ರಜೆ ಘೋಷಿಸುತ್ತದೆ. ಒಂದು ವೇಳೆ ಅಲ್ಲಿ ಹೆಚ್ಚಿನ ಕೆಲಸ ನೀಡಲು ಹೋದರೆ ಹೆಚ್ಚಿನ ನೋವು ಅಥವಾ ಕಹಿಯಾದ ರುಚಿಯನ್ನು ನೀಡುತ್ತದೆ.

ಅನಾರೋಗ್ಯದ ಸಮಯದಲ್ಲಿ ರುಚಿಕರವೂ ಆಗಿರುತ್ತದೆ

ಅನಾರೋಗ್ಯದ ಸಮಯದಲ್ಲಿ ರುಚಿಕರವೂ ಆಗಿರುತ್ತದೆ

ಉದಾಹರಣೆಗೆ ಜ್ವರ ಬಂದ ಬಳಿಕ ಓಡಲು ಪ್ರಯತ್ನಿಸಿದರೆ ದೇಹದ ಪ್ರತಿ ಸ್ನಾಯುವೂ ನೋವಿನಿಂದ ಚೀರುತ್ತದೆ. ಯಾವುದೇ ಆಹಾರ ರುಚಿಯಿಲ್ಲದಂತಾಗುತ್ತದೆ. ನೀರು ಸಹಾ ಕಹಿಯಾಗುತ್ತದೆ. ವಾಸನೆ ಗ್ರಹಿಸುವ ಶಕ್ತಿ ಕಡಿಮೆಯಾಗುತ್ತದೆ.

ಅನಾರೋಗ್ಯದ ಸಮಯದಲ್ಲಿ ರುಚಿಕರವೂ ಆಗಿರುತ್ತದೆ

ಅನಾರೋಗ್ಯದ ಸಮಯದಲ್ಲಿ ರುಚಿಕರವೂ ಆಗಿರುತ್ತದೆ

ಈ ಸಮಯದಲ್ಲಿ ಪಂಚಭಕ್ಷ ಪರಮಾನ್ನವೂ ಕಹಿಯಾದ ಹಾಗಲಗೊಜ್ಜಿನಂತಿರುತ್ತದೆ. ಆದರೆ ಸೂಪ್ ನಲ್ಲಿ ಕೆಲವು ಮಸಾಲೆಗಳನ್ನು, ವಿಶೇಷವಾಗಿ ಹಸಿಶುಂಠಿ ಮತ್ತು ಕಾಳುಮೆಣಸನ್ನು ಬಳಸಿರುವ ಕಾರಣ ನಾಲಿಗೆಗೆ ಸ್ವಲ್ಪ ಚುರುಕುಮುಟ್ಟಿಸಿ ಸೂಪ್ ಅನ್ನು ಸ್ವಾದಿಷ್ಟ ಆಹಾರವನ್ನಾಗಿಸುತ್ತದೆ. ಯಾವುದೇ ಆಹಾರಕ್ಕೆ ಒಲ್ಲೆ ಎನ್ನುವ ರೋಗಿ ಸೂಪ್ ಬಂದಾಗ ತಕರಾರಿಲ್ಲದೇ ಸೇವಿಸುವುದಕ್ಕೆ ಇದೇ ಕಾರಣ.

English summary

Why Should You Drink Soup When Sick

When you are sick, a change in the food routine can make a good impact on the improvement of your health. Provide our body with something that is easy to digest and rich in nutrients. When you are sick with mild cold, fever or cough, your body needs more calories to function in a normal way. For this, you have to eat the best food to make the work easier.
Story first published: Tuesday, September 22, 2015, 12:34 [IST]
X
Desktop Bottom Promotion