For Quick Alerts
ALLOW NOTIFICATIONS  
For Daily Alerts

ಅನಾನಸ್-ಮುಳ್ಳಿನಿಂದ ಕೂಡಿದ್ದರೂ ಆರೋಗ್ಯಕ್ಕೆ ಹಿತಕಾರಿ

By Deepak
|

ಗಿಡದ ಮೇಲೆ ಫಲ, ಫಲದ ಮೇಲೆ ಗಿಡ ಎಂಬ ಒಗಟಿಗೆ ತಕ್ಕಂತಿರುವ ಅನಾನಸ್ ಹಣ್ಣು ವಿಶ್ವದಲ್ಲೇ ಅತ್ಯಂತ ಆರೋಗ್ಯಕರವಾದ ಫಲವಾಗಿದೆ. ತನ್ನ ಅನನ್ಯ ಬಣ್ಣ, ಆಕಾರ ಮತ್ತು ಮಧುರವಾದ ಪರಿಮಳದಿಂದಾಗಿ ಅನೇಕ ವಿಧದ ಫಲಗಳ ನಡುವೆಯೂ ಗುರುತಿಸಿ ಕೊಳ್ಳುವಂತಹ ಹಣ್ಣು ಅನಾನಸ್.

ಇದರಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಮೆಗ್ನೀಶಿಯಂ ಆರೋಗ್ಯವನ್ನು ಕಾಪಾಡುವ ಜೊತೆಗೇ ವಿವಿಧ ಖಾದ್ಯಗಳ ಜೊತೆಗೆ ಮಿಶ್ರಣ ಮಾಡಿದಾಗ ಹುಳಿ ಸಿಹಿ ಮಿಶ್ರಿತ ರುಚಿಯನ್ನೂ ನೀಡಿ ಆರೋಗ್ಯವನ್ನು ವರ್ಧಿಸುವುದು ಇದರ ಹೆಗ್ಗಳಿಕೆ. ಹೌದು ನಮ್ಮ ಶರೀರಕ್ಕೆ ಅತ್ಯವಶ್ಯಕವಾಗಿ ಬೇಕಾಗಿರುವ ಯಾವುದೇ ಸೂಕ್ಷ್ಮರೂಪದ ಪೋಷಕಾ೦ಶವಾದರೂ ಸರಿಯೇ, ಅ೦ತಹ ಎಲ್ಲಾ ಪೋಷಕಾ೦ಶಗಳಿ೦ದಲೂ ಅನಾನಸ್ ಸಮೃದ್ಧವಾಗಿದೆ. bromelain ಎ೦ಬ ಹೆಸರಿನ ಕಿಣ್ವವನ್ನು ಹಾಗೂ ವಿಟಮಿನ್ ಸಿ ಯನ್ನು ಅನಾನಸ್ ಒಳಗೊ೦ಡಿದ್ದು ಇವು ದೇಹದ ದುರಸ್ತಿಕಾರ್ಯಗಳಲ್ಲಿ ಬಹು ಮಹತ್ತರ ಪಾತ್ರವಹಿಸುತ್ತವೆ, ಬನ್ನಿ ಅನಾನಸ್‌ನ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ..

ನಿಯಮಿತವಾಗಿ ಅನಾನಸು ಹಣ್ಣುಗಳ ಸೇವನೆ

ನಿಯಮಿತವಾಗಿ ಅನಾನಸು ಹಣ್ಣುಗಳ ಸೇವನೆ

bromelain ಕಿಣ್ವಕ್ಕೆ ಉರಿ-ಪ್ರತಿಬ೦ಧಕ ಗುಣಲಕ್ಷಣಗಳಿವೆ. ದೇಹದ ತ್ಯಾಜ್ಯ ವಿಷಪದಾರ್ಥಗಳನ್ನು ನಿವಾರಿಸುವುದರೊ೦ದಿಗೆ, bromelain ಕಿಣ್ವವು ಜೀವಿಯೊ೦ದರ ಪ್ರತೀ ಅ೦ಗಾ೦ಶ ಹಾಗೂ ಅ೦ಗಗಳ ಮೇಲೆ ಪ್ರತಿಕೂಲ ಪರಿಣಾಮವನ್ನು೦ಟುಮಾಡುವ ಉರಿ ಬಾಧೆಯ ವಿರುದ್ಧ ಸೆಣೆಸಾಡಲು ನೆರವಾಗುತ್ತದೆ. ಅನಾನಸ್ ಹಣ್ಣಿನ ಅನ್ನು ನಿಯಮಿತ ಸೇವನೆಯ ಮೂಲಕ ನೀವು ಕೀಲುಗಳ ಉರಿಯೂತವನ್ನು ಹಾಗೂ ಹೊಟ್ಟೆಯ ಸೋಂಕಿನ ಕಾರಣವಾಗಿರುವ ಬ್ಯಾಕ್ಟೀರಿಯವನ್ನು ವಿರುದ್ಧ ಹೋರಾಡುತ್ತದೆ. ಹಾಗಾಗಿ ದಿನನಿತ್ಯ ಊಟದ ನಡುವೆ ತಾಜಾ ಅನಾನಸು ಹಣ್ಣುಗಳ ಸೇವನೆಯನ್ನು ಮಾಡುವುದು ಉತ್ತಮವಾಗಿದೆ.

ಜೀರ್ಣಶಕ್ತಿಯನ್ನು ಸಕ್ರಿಯಗೊಳಿಸಲು

ಜೀರ್ಣಶಕ್ತಿಯನ್ನು ಸಕ್ರಿಯಗೊಳಿಸಲು

ಅನಾನಸ್ ಹಣ್ಣಿನಲ್ಲಿರುವ bromelain ಎಂಬ ಕಿಣ್ವದ ಕಾರಣದಿ೦ದಾಗಿ ಶರೀರಕ್ಕೆ ಪ್ರೋಟೀನ್‪ಗಳನ್ನು ಪರಿಣಾಮಕಾರಿಯಾಗಿ ಜೀರ್ಣಗೊಳಿಸಲು ಸಾಧ್ಯವಾಗುತ್ತದೆ. ಹಾಗಾಗಿ ದಿನನಿತ್ಯ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಹಚ್ಚಿ ಸೇವಿಸುವುದರಿಂದ ಜೀರ್ಣ ಶಕ್ತಿಗೆ ಸಹಕಾರಿಯಾಗುತ್ತದೆ

ಹೊಟ್ಟೆಯ ಆರೋಗ್ಯಕ್ಕೆ

ಹೊಟ್ಟೆಯ ಆರೋಗ್ಯಕ್ಕೆ

ಅನಾನಸ್ ಹಣ್ಣಿನಲ್ಲಿರುವ ಐಯೋಡಿನ್ ಹಾಗೂ bromelain ಕಿಣ್ವವು ನಾನಾತೆರನಾದ ಜೀವಾಣುಗಳಿ೦ದ ಉ೦ಟಾಗಬಹುದಾದ ರೋಗನಿರೋಧಕ ಶಕ್ತಿಯ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಬಹು ಪರಿಣಾಮಕಾರಿಯಾಗಿವೆ. ಹಾಗಾಗಿ ಈ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದುರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಲಕ್ಷಣಗಳು ಉಪಶಮನಗೊಳ್ಳುತ್ತವೆ.

ಅನಾನಸ್ ಹಾಗೂ ಮೊಸರಿನ ಸ್ಮೂತಿ

ಅನಾನಸ್ ಹಾಗೂ ಮೊಸರಿನ ಸ್ಮೂತಿ

150 ಎಮ್‎ಎಲ್ ಅನಾನಸ್ ರಸಕ್ಕೆ ಎರಡು ಚಮಚದಷ್ಟು ಮೊಸರನ್ನು ಹಾಕಿ. ಇವೆರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ಸ್ಮೂತಿಯಂತೆ ಖಾಲಿ ಹೊಟ್ಟೆಗೆ ಸೇವಿಸಿದಲ್ಲಿ ಹೊಟ್ಟೆಯ ಯಾವುದೇ ವ್ಯಾಧಿ ಕೂಡ ಮಂಗಮಾಯವಾಗುತ್ತದೆ. ನಿಮ್ಮ ಹೊಟ್ಟೆಯನ್ನು ತುಂಬಿಸುವ ಈ ಸ್ಮೂತಿ ಬೇರೆಯದನ್ನು ತಿನ್ನಲು ನಿಮ್ಮನ್ನು ಬಿಡುವುದಿಲ್ಲ.

ಸ್ನ್ಯಾಕ್ಸ್‌‎ನಂತೆ ಸೇವಿಸಿ

ಸ್ನ್ಯಾಕ್ಸ್‌‎ನಂತೆ ಸೇವಿಸಿ

ಹೊಟ್ಟೆಯ ಬೇನೆಯಿಂದ ನೀವು ಬಳಲುತ್ತಿದ್ದೀರಿ ಎಂದಾದಲ್ಲಿ, ಹಸಿವು ನಿಮ್ಮನ್ನು ಕಾಡುವುದು ಖಂಡಿತ. ಆದ್ದರಿಂದ ಹೊಟ್ಟೆಯನ್ನು ತುಂಬುವಂತೆ ಮಾಡಲು ತಾಜಾ ಅನಾನಸ್ ಸೇವನೆಯನ್ನು ಮಾಡಿ ಎಂಬುದಾಗಿ ತಜ್ಞರು ಅಭಿಪ್ರಾಯಿಸುತ್ತಾರೆ. ಹೊಟ್ಟೆಗೆ ಸಂಬಂಧಿಸಿದ ರೋಗಲಕ್ಷಣಗಳು ಉಪಶಮನಗೊಳ್ಳಲು ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ

ಹಲ್ಲುಗಳ ಆರೋಗ್ಯಕ್ಕೆ ಸಹಕಾರಿ

ಅನಾನಸ್ ಹಣ್ಣಿನಲ್ಲಿರುವ bromelain ಕಿಣ್ವವು ಒ೦ದು ನೈಸರ್ಗಿಕವಾದ ಕೊಳೆ/ಕಲೆ ನಿವಾರಕವಾಗಿದೆ. ಜೊತೆಗೆ, bromelain ಕಿಣ್ವವು ಹಲ್ಲುಗಳಲ್ಲಿ ನಿಕ್ಷೇಪಗೊ೦ಡಿರುವ ಅ೦ಟುಅ೦ಟಾದ, ಸೂಕ್ಷ್ಮಾಣುಜೀವಿಗಳಿಗೆ ಪೋಷಕವಾದ ಆಹಾರದ ಕಣಗಳನ್ನು ಒಡೆದು ನಿವಾರಿಸುವುದಕ್ಕೂ ಸಹ ನೆರವಾಗುತ್ತದೆ.

English summary

Why is Pineapple Good For Your health?

Natural remedies are the best to treat any infection in the health. According to experts, fresh pineapple is an effective ingredient which aids in killing bacteria and infection; it simultaneously boosts your immunity. Here are some ways to add pineapple to a temporary diet to benefit the tummy, take a look:
Story first published: Wednesday, November 25, 2015, 15:01 [IST]
X
Desktop Bottom Promotion