For Quick Alerts
ALLOW NOTIFICATIONS  
For Daily Alerts

ಊಟದ ಬಳಿಕ ಪಾನ್ ಮಸಾಲಾ ಬಿಡಿ-ಇವುಗಳನ್ನು ಸೇವಿಸಿ

By Manu
|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯೇ ಇದೆ. ಅಂತೆಯೇ ಕಾಲಕಾಲಕ್ಕೆ ಸರಿಯಾದ ಆಹಾರಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡಬಹುದು ಅಲ್ಲದೇ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ಯಾವುದೋ ಕಾರಣದಿಂದ ಜೀರ್ಣಕ್ರಿಯೆಯಲ್ಲಿ ಬಾಧೆ ಕಾಣಿಸಿಕೊಳ್ಳಬಹುದು. ಇದರ ಪರಿಣಾಮವಾಗಿ ಹೊಟ್ಟೆಯುಬ್ಬರ, ಹೊಟ್ಟೆಯುರಿ, ಹೊಟ್ಟೆ ತೊಳೆಸುವಿಕೆ, ಆಮಶಂಕೆ, ವಾಂತಿ, ಹುಳಿತೇಗು ಮೊದಲಾದ ತೊಂದರೆಗಳು ಎದುರಾಗಬಹುದು.

ಇದನ್ನು ತಡೆಯಲು ಬಲು ಹಿಂದಿನಿಂದಲೂ ಭಾರತೀಯರು ಕೆಲವು ಆಹಾರವಸ್ತುಗಳನ್ನು ಸೇವಿಸುತ್ತಾ ಬಂದಿದ್ದಾರೆ. ಎಲೆಯಡಿಕೆ, ದೊಡ್ಡಜೀರಿಗೆ, ಏಲಕ್ಕಿ ಮೊದಲಾದವುಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಬಾಯಿಯಲ್ಲಿ ದುರ್ವಾಸನೆ ಬರದಂತೆಯೂ ತಡೆಯುತ್ತವೆ. ಇಂತಹ ಕೆಲವು ಆಹಾರಸಾಮಾಗ್ರಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ..

ಏಲಕ್ಕಿ

ಏಲಕ್ಕಿ

ನೂರಾರು ವರ್ಷಗಳಿಂದ ಭಾರತದಲ್ಲಿ ಏಲಕ್ಕಿಯನ್ನು ಭಾರತದಲ್ಲಿ ಸಾಂಬಾರ ಪದಾರ್ಥವಾಗಿ ಬಳಸಲಾಗುತ್ತಿದೆ. ಇದರ ಸುವಾಸನೆ ಮತ್ತು ಆರೋಗ್ಯಕರ ಕಾರಣಗಳಿಂದಾಗಿಯೇ ಇದನ್ನು ಸಾಂಬಾರ ಪದಾರ್ಥಗಳ ರಾಣಿ (queen of spices) ಎಂದು ಕರೆಯಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿಕುಟುಂಬದ ಆರೋಗ್ಯಕ್ಕಾಗಿ ಮನೆಯಲ್ಲಿರಲಿ ಏಲಕ್ಕಿ ಮಾಲೆ

ಏಲಕ್ಕಿ

ಏಲಕ್ಕಿ

ಜೀರ್ಣಕ್ರಿಯೆ ಹೆಚ್ಚಿಸಲು ಏಲಕ್ಕಿಯ ಪಾತ್ರ ಮಹತ್ತರವಾಗಿದೆ. ಇದರಲ್ಲಿರುವ ಕೆಲವು ಎಣ್ಣೆಗಳು ಕಡಿಮೆ ತಾಪಮಾನದಲ್ಲಿಯೇ ಆವಿಯಾಗುವುದರಿಂದ ಹೊಟ್ಟೆಯಲ್ಲಿ ಸೇರುತ್ತಿದ್ದಂತೆಯೇ ಸುಲಭವಾಗಿ ಆವಿಯಾಗಿ ಹೊಟ್ಟೆಯುರಿಗೆ ಕಾರಣವಾಗುವ ವಾಯುಗಳನ್ನು ತಣಿಸುತ್ತದೆ. ಇದು ಹೊಟ್ಟೆಯುಬ್ಬರವಾಗದಂತೆ ತಡೆಯುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿ ಎಣ್ಣೆಯಲ್ಲಿ ಪ್ರಮುಖವಾದ ಅಂಶವಾದ Cineole ಎಂಬ ಪೋಷಕಾಂಶ ಒಂದು ಉತ್ತಮವಾದ ನಂಜುನಿರೋಧಕವಾಗಿದ್ದು ಜೀರ್ಣಕ್ರಿಯೆಯಲ್ಲಿ ಬಾಧೆ ತರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣ ಹೊಂದಿದೆ. ಇದು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ನೆರವಾಗುತ್ತದೆ ಜೊತೆಗೇ ಇತರ ಸೋಂಕುಗಳಿಂದಲೂ ರಕ್ಷಿಸುತ್ತದೆ. ಆದ್ದರಿಂದ ಊಟದ ಬಳಿಕ ಒಂದು ಅಥವಾ ಎರಡು ಏಲಕ್ಕಿಗಳನ್ನು ಜಗಿದು ನುಂಗುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಬಾಯಿಯ ದುರ್ವಾಸನೆಯಿಂದಲೂ ದೂರವಿರಬಹುದು.

ಓಮ (Carom seeds or ajwain, Bishop’s weed)

ಓಮ (Carom seeds or ajwain, Bishop’s weed)

ಜೀರಿಗೆಯ ಹೃಸ್ವರೂಪದಂತೆ ಕಾಣುವ ಓಮದ ಕಾಳುಗಳು ಇದರ ಗಿಡದ ಬೀಜಗಳಾಗಿದ್ದು ಕಡಿಮೆ ತಾಪಮಾನದಲ್ಲಿ ಆವಿಯಾಗುವ ಎಣ್ಣೆಗಳನ್ನು ಹೊಂದಿದೆ. ಇದರಲ್ಲಿ ವಿಶಿಷ್ಟವಾಗಿರುವ ಥೈಮಾಲ್ (thymol) ಎಂಬ ಪೋಷಕಾಂಶವು ಹೊಟ್ಟೆಯಲ್ಲಿ ಅನಿಲಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ. ತನ್ಮೂಲಕ ಅಪಾನವಾಯು, ಹೊಟ್ಟೆಯುರಿ ಮೊದಲಾದ ತೊಂದರೆಗಳಾಗಂತೆ ತಡೆಯುತ್ತದೆ. ಊಟದ ಬಳಿಕ ಓಮವನ್ನು ಕುದಿಸಿದ ನೀರನ್ನು ಕುಡಿಯುವ ಮೂಲಕವೂ ಉತ್ತಮ ಪರಿಣಾಮಗಳನ್ನು ಪಡೆಯಬಹುದು. ಓಮವು ಒಂದು ಉತ್ತಮ ಶಿಲೀಂಧ್ರನಿವಾರಕ ಹಾಗೂ ಸೂಕ್ಷ್ಮಾಣುನಿರೋಧಕವೂ ಆಗಿದೆ. ಜೊತೆಗೇ ಇದು ರಕ್ತದಲ್ಲಿ ಹೆಚ್ಚಿನ ಸಕ್ಕರೆಯ ಪ್ರಮಾಣವನ್ನು ತಗ್ಗಿಸಲೂ ನೆರವಾಗುತ್ತದೆ.

ಎಲೆಯಡಿಕೆ (ಪಾನ್, ತಾಂಬೂಲ)

ಎಲೆಯಡಿಕೆ (ಪಾನ್, ತಾಂಬೂಲ)

ಊಟದ ಬಳಿಕ ಎಲೆ, ಅಡಿಕೆ ಮತ್ತು ಸುಣ್ಣವನ್ನು ಜಗಿದು ಕೆಂಪಗಾದ ಬಳಿಕ ಉಗಿಯುವುದು ಭಾರತೀಯ ಆಹಾರದ ಒಂದು ಭಾಗವಾಗಿದೆ. ವೃದ್ಧರು ಇಂದಿಗೂ ಅಡಿಕೆಯನ್ನು ಅಡಿಕೆಕತ್ತರಿ ಉಪಯೋಗಿಸಿ ಚಿಕ್ಕದಾಗಿ ತುಂಡರಿಸಿ ಎಲೆ ಮತ್ತು ಸುಣ್ಣದೊಡನೆ ಸೇರಿಸಿ ಊಟದ ಬಳಿಕ ತಿನ್ನುವುದನ್ನು ಕಾಣಬಹುದು. ಇದರ ಸುಧಾರಿತ ರೂಪವಾದ ಪಾನ್ ಬೀಡಾಗಳಲ್ಲಿ ರುಚಿ ಹೆಚ್ಚಿಸಲು ಗುಲ್ಕಂದ್, ಏಲಕ್ಕಿ, ಜೀರಿಗೆ ಮತ್ತಿತರ ಜೀರ್ಣಕ್ರಿಯೆ ಹೆಚ್ಚಿಸುವ ಸಾಮಾಗ್ರಿಗಳನ್ನು ಸೇರಿಸುತ್ತಾರೆ. ಈ ಸಾಂಪ್ರಾದಾಯಿಕ ವಿಧಾನದಲ್ಲಿ ಹಲವು ಉಪಯೋಗಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಬಹುಪಯೋಗಿ ವೀಳ್ಯದೆಲೆಯ ಸ್ಪೆಷಾಲಿಟಿ ಒಂದೇ, ಎರಡೇ?

ಎಲೆಯಡಿಕೆ (ಪಾನ್, ತಾಂಬೂಲ)

ಎಲೆಯಡಿಕೆ (ಪಾನ್, ತಾಂಬೂಲ)

ಆಯುರ್ವೇದದಲ್ಲಿ 'ತಂಪಾಗಿಸುವ ಎಲೆ' ಎಂಬ ಶ್ಲಾಘನೆಯನ್ನು ಪಡೆದುಕೊಂಡ ವೀಳ್ಯದೆಲೆ ಮತ್ತು 'ಬಿಸಿಯಾಗಿಸುವ ಫಲ' ಎಂಬ ಶ್ಲಾಘನೆಯನ್ನು ಪಡೆದುಕೊಂಡ ಅಡಿಕೆಯ ಜೋಡಿ ಆಹಾರವನ್ನು ಸೂಕ್ತವಾಗಿ ಜೀರ್ಣಗೊಳಿಸಲು ಮತ್ತು ಇತರ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಆದರೆ ಕೆಲವರು ಇದರೊಂದಿಗೆ ಕೊಂಚ ಹೊಗೆಸೊಪ್ಪನ್ನು ಸೇರಿಸಿ ಇದರ ಉತ್ತಮ ಪರಿಣಾಮಗಳನ್ನೆಲ್ಲಾ ತಲೆಕೆಳಗು ಮಾಡುತ್ತಾರೆ.

ನೆಲ್ಲಿಕಾಯಿ (Indian gooseberry)

ನೆಲ್ಲಿಕಾಯಿ (Indian gooseberry)

ಇಂದು ಮಾತ್ರೆಗಳ ರೂಪದಲ್ಲಿ ಅಥವಾ ಚ್ಯವನಪ್ರಾಶದ ಲಭ್ಯವಿರುವ ನೆಲ್ಲಿಕಾಯಿಯ ತಿರುಳು ಜೀರ್ಣಕ್ರಿಯೆ ಹೆಚ್ಚಿಸಲು ಒಂದು ಉತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಜೀರ್ಣಕ್ರಿಯೆಯ ಸಮಯದಲ್ಲಿ ಪ್ರಬಲ ಆಮ್ಲದ ಪ್ರಭಾವಕ್ಕೂ ಒಳಗಾಗದೇ ಮುಂದಿನ ಕ್ರಿಯೆಗಳಲ್ಲಿ ಲಭ್ಯವಾಗುವ ಕಾರಣ ಹೆಚ್ಚಿನ ಲಾಭವನ್ನು ಜೀರ್ಣಾಂಗಗಳು ಪಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೆಲ್ಲಿಕಾಯಿ (Indian gooseberry)

ನೆಲ್ಲಿಕಾಯಿ (Indian gooseberry)

ಇದರಿಂದ ದೇಹದ ರೋಗ ನಿರೋಧಕ ವ್ಯವಸ್ಥೆ ಇನ್ನಷ್ಟು ಉತ್ತಮಗೊಳ್ಳುತ್ತದೆ ಹಾಗೂ ದೇಹಕ್ಕೆ ಹೆಚ್ಚಿನ ಚೈತನ್ಯ ಮತ್ತು ಕಸುವನ್ನು ನೀಡುತ್ತದೆ. ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮೂಲಕ ಅಜೀರ್ಣಕ್ಕೆ ಕಾರಣವಾಗಬಹುದಾಗಿದ್ದ ಕಣಗಳನ್ನೂ ನಿವಾರಿಸಿ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ.

ಹಸಿಶುಂಠಿ (Ginger (Zingiberofficinale) (Adrak)

ಹಸಿಶುಂಠಿ (Ginger (Zingiberofficinale) (Adrak)

ಕೊಂಚ ಖಾರವಾದ ರುಚಿಯನ್ನು ಹೊಂದಿರುವ ಹಸಿಶುಂಠಿಯೂ ಉತ್ತಮವಾದ ಪಚನಕಾರಕವಾಗಿದ್ದು ಹಲವು ರೀತಿಯಲ್ಲಿ ಜೀರ್ಣಕ್ರಿಯೆಗೆ ನೆರವಾಗುತ್ತದೆ. ವಿಶೇಷವಾಗಿ ಅಪಾನವಾಯು, ಹೊಟ್ಟೆಯುರಿ, ವಾಕರಿಕೆ ಮತ್ತು ಹೊಟ್ಟೆಯಲ್ಲಿ ನೋವನ್ನು ಕಡಿಮೆಗೊಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಸಿಶುಂಠಿ (Ginger (Zingiberofficinale) (Adrak)

ಹಸಿಶುಂಠಿ (Ginger (Zingiberofficinale) (Adrak)

ಸಾಮಾನ್ಯವಾಗಿ ಆಹಾರ ಬಲುಹೆಚ್ಚಿನ ಹೊತ್ತು ಜೀರ್ಣಾಂಗಗಳಲ್ಲಿ ಉಳಿಯುವ ಕಾರಣ ಎದುರಾಗುವ ತೊಂದರೆಗಳನ್ನೂ ಹಸಿಶುಂಠಿ ನಿವಾರಿಸುತ್ತದೆ. ಊಟದ ಬಳಿಕ ಹಸಿಶುಂಠಿ ಕುದಿಸಿದ ನೀರನ್ನು ಕುಡಿಯುವ ಮೂಲಕ ಆಹಾರ ಸೂಕ್ತ ಸಮಯದಲ್ಲಿ ಜೀರ್ಣಗೊಂಡು ವಿಸರ್ಜನೆಗೊಳ್ಳಲು ನೆರವಾಗುತ್ತದೆ.

English summary

Why do we eat cardamom, paan or elaichi, after meal..?

Digestion is a process of breaking down food particles into individual nutrients so that they can be absorbed into our blood plasma. However, things can go wrong at any stage of the digestive process. The following spices and herb can act as digestive aids. Use these after your meals as they serve the dual purpose of digestive aids as well as mouth fresheners.
X
Desktop Bottom Promotion