For Quick Alerts
ALLOW NOTIFICATIONS  
For Daily Alerts

ಸೊಳ್ಳೆಗಳು ಮನುಷ್ಯರನ್ನೇ ಏಕೆ ಕಡಿಯುತ್ತವೆ ಎಂದು ತಿಳಿದಿದೆಯೇ?

By Super
|

ವಿದೇಶದಲ್ಲಿರುವ ಭಾರತೀಯರ ಮಕ್ಕಳು ರಜೆಗೆಂದು ಉತ್ಸಾಹದಿಂದ ಊರಿಗೆ ಬಂದರೂ ಒಂದೆರಡು ದಿನಗಳಲ್ಲಿಯೇ ಹಿಂದಿರುಗಿ ಹೋಗೋಣ ಎಂದು ಹಠ ಹಿಡಿಯುವುದನ್ನು ಗಮನಿಸಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ ಅವರಿಗೆ ಕಚ್ಚುವ ಸೊಳ್ಳೆಗಳು. ಇವರೊಂದಿಗೇ ಇರುವ ಸ್ಥಳೀಯರಿಗೂ ಸೊಳ್ಳೆಗಳು ಕಚ್ಚಿದ್ದರೂ ಈ ಮಕ್ಕಳಿಗೆ ಕಚ್ಚಿದಷ್ಟು ಅಗಾಧ ಪ್ರಮಾಣದಲ್ಲಿ ಕಚ್ಚಿರದೇ ಇರುವುದನ್ನೂ ಗಮನಿಸಿ. ಕೊಂಚ ವಿಚಿತ್ರ ಎನಿಸಿದರೂ ಇದು ವಾಸ್ತವವಾಗಿದೆ. ಸೊಳ್ಳೆಗಳು ಕೆಲವರ ರಕ್ತವನ್ನು ತುಂಬಾ ಇಷ್ಟಪಡುವಂತೆ ಪದೇ ಪದೇ ಕಚ್ಚಿದರೆ ಇನ್ನು ಕೆಲವರ ರಕ್ತ ಕಹಿ ಇರುವಂತೆ ಎಲ್ಲೋ ರುಚಿ ನೋಡಲು ಎಂಬಂತೆ ಒಂದೆರಡು ಕಡೆ ಮಾತ್ರ ಕಚ್ಚಿರುತ್ತವೆ. ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!

ಈ ಬಗ್ಗೆ ಸಂಶೋಧನೆ ನಡಿಸಿದ ವಿಜ್ಞಾನಿಗಳಿಗೆ ಹಲವು ಮಾಹಿತಿಗಳು ದೊರಕಿವೆ. ಸೊಳ್ಳೆಗಳಿಗೆ ಮನುಷ್ಯರು ಮತ್ತು ಪ್ರಾಣಿಗಳಿರುವ ಸ್ಥಳ ಗೊತ್ತಾಗಲು ಪ್ರತಿ ಪ್ರಾಣಿಯ ಚರ್ಮದಿಂದ ಸೂಸುವ ಅತ್ಯಂತ ದುರ್ಬಲವಾದ, ಮನುಷ್ಯರ ಮೂಗು ಗ್ರಹಿಸಲಾರದ ವಾಸನೆಯನ್ನು ಸೊಳ್ಳೆಗಳು ಗ್ರಹಿಸುತ್ತವೆ. ಜೊತೆಗೇ ಬಿಸಿರಕ್ತದ ಪ್ರಾಣಿಗಳ ದೇಹದಿಂದ ಹೊರಡುವ ಬಿಸಿ ಅಲೆಗಳನ್ನೂ ಗ್ರಹಿಸುವ ಸಾಮರ್ಥ್ಯವನ್ನು ಪಡೆದಿವೆ. ಇವೆರಡೂ ಶಕ್ತಿಗಳನ್ನು ಸೊಳ್ಳೆಗಳು ಸಮಾನವಾಗಿ ಉಪಯೋಗಿಸಿದರೆ ಮಾತ್ರ ಶೀಘ್ರವಾಗಿ ಸೊಳ್ಳೆಗಳು ನಮ್ಮ ಬಳಿಗೆ ಆಗಮಿಸಬಲ್ಲವು.

ಸೊಳ್ಳೆ ಓಡಿಸುವ ಹೊಗೆಬತ್ತಿಗಳು ಈ ಅಂಶದ ಮೇಲೇ ಕಾರ್ಯನಿರ್ವಹಿಸುತ್ತವೆ. ಹೊಗೆಯ ಮೂಲಕ ಗಾಳಿಯಲ್ಲಿ ಮನುಷ್ಯರ ವಾಸನೆಯನ್ನು ಬೇರೊಂದು ವಾಸನೆಯೊಂದಿಗೆ ಮಿಶ್ರಣಗೊಳಿಸಿ ಸೊಳ್ಳೆಗಳಿಗೆ ತಪ್ಪು ಸಂದೇಶ ನೀಡುವುದೇ ಇದರ ರಹಸ್ಯ. ಆಲ್ ಔಟ್ ಮೊದಲಾದ ಸೊಳ್ಳೆಓಡಿಸುವ ಉಪಕರಣಗಳ ವಿಧಾನವೂ ಇದೇ ಸೊಳ್ಳೆಗಳಿಂದ ದೂರವಿರಲು ಕೆಲವು ವಿಚಿತ್ರವಾದ, ಆದರೆ ಪರಿಣಾಮಕಾರಿಯಾದ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಮಳೆಗಾಲದಲ್ಲಿ ಸೊಳ್ಳೆ ಕಾಟ : ಪಾರಾಗಲು ಸರಳ ಸೂತ್ರ

ಕೋಣೆಯ ಗವಾಕ್ಷಿಯನ್ನು ತೆರೆದಿಡಿ ಅಥವಾ ನಿಷ್ಕಾಸಪಂಖ (exhaust fan) ಉಪಯೋಗಿಸಿ

ಕೋಣೆಯ ಗವಾಕ್ಷಿಯನ್ನು ತೆರೆದಿಡಿ ಅಥವಾ ನಿಷ್ಕಾಸಪಂಖ (exhaust fan) ಉಪಯೋಗಿಸಿ

ಸೊಳ್ಳೆಗಳಿರುವ ಪ್ರದೇಶದಲ್ಲಿ ದೀರ್ಘವಾಗಿ ಉಸಿರಾಡುತ್ತಿರುವುದರಿಂದ ಗಾಳಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ. ಸೊಳ್ಳೆಗಳು ಈ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಿಂಬಾಲಿಸುತ್ತಾ ನಿಮ್ಮ ಬಳಿಗೆ ಬರುತ್ತದೆ. ಸೊಳ್ಳೆಗಳು ನೇರವಾಗಿ ಹಾರದೇ ಹಾವಿನ ರೀತಿಯಲ್ಲಿ ಬಳುಕುತ್ತಾ ಹಾರುವುದಕ್ಕೆ ಇದೇ ಕಾರಣ. ಇದನ್ನು ತಡೆಗಟ್ಟಲು ಕೋಣೆಯ ಮೇಲ್ಭಾಗದ ಗವಾಕ್ಷಿಯನ್ನು ತೆರೆದಿಡಿ. ಇದಕ್ಕೂ ಉತ್ತಮವೆಂದರೆ ನಿಷ್ಕಾಸಪಂಖವನ್ನು (exhaust fan) ಉಪಯೋಗಿಸಿ ಇಂಗಾಲದ ಡೈ ಆಕ್ಸೈಡ್ ಬೇಗನೇ ಕೋಣೆಯಿಂದ ಹೊರಹೋಗುವಂತೆ ಹಾಗೂ ಸಾಕಷ್ಟು ತಾಜಾಹವೆ ಕೋಣೆಯೊಳಕ್ಕೆ ಬರುವಂತೆ ನೋಡಿಕೊಳ್ಳಿ.

ದೇಹದ ಶುಚಿತ್ವವನ್ನು ಕಾಪಾಡಿಕೊಳ್ಳಿರಿ

ದೇಹದ ಶುಚಿತ್ವವನ್ನು ಕಾಪಾಡಿಕೊಳ್ಳಿರಿ

ಕೆಲವರಿಗೆ ಪ್ರತಿದಿನ ಸ್ನಾನ ಮಾಡುವುದೆಂದರೆ ಏನೋ ಅಲರ್ಜಿ. ಸ್ನಾನ ಮಾಡುವುದಿರಲಿ, ದಿನದ ಕೆಲಸದ ಬಳಿಕ ಮನೆಗೆ ಹಿಂದಿರುಗಿದ ಬಳಿಕ ಸ್ವಚ್ಛವಾಗಿ ಕೈಕಾಲು ತೊಳೆಯಲೂ ಸೋಮಾರಿತನ ತೋರುತ್ತಾರೆ. ಇದು ಸೊಳ್ಳೆಗಳಿಗೆ ನೇರವಾಗಿ ಬಾ ನನ್ನನ್ನು ಕಚ್ಚು ಎಂದು ನೀಡುವ ಆಹ್ವಾನವಾಗಿದೆ. ದಿನದ ಕೊಳೆಯಿಂದ ನಮ್ಮ ಶರೀರದ ದುರ್ವಾಸನೆ ಹೆಚ್ಚುತ್ತದೆ. ಈ ಗಂಧವನ್ನು ಸೊಳ್ಳೆಗಳು ದೂರದಿಂದಲೇ ಸುಲಭವಾಗಿ ಗುರುತಿಸಿ ರಕ್ತಕುಡಿಯಲು ಓಡೋಡಿ ಬರುತ್ತವೆ. ಇದನ್ನು ತಡೆಯಲು ಪ್ರತಿದಿನ ಸ್ನಾನ ಮತ್ತು ಪ್ರತಿಬಾರಿ ಹೊರಗಿನಿಂದ ಒಳಬಂದ ಬಳಿಕ ಸ್ವಚ್ಛವಾಗಿ ಕೈಕಾಲುಮುಖಗಳನ್ನು ತೊಳೆದುಕೊಳ್ಳುವುದು ಅಗತ್ಯವಾಗಿದೆ.

ಕತ್ತಲೆಯಾದ ಬಳಿಕ ಹೆಚ್ಚು ಓಡಾಡದಿರಿ

ಕತ್ತಲೆಯಾದ ಬಳಿಕ ಹೆಚ್ಚು ಓಡಾಡದಿರಿ

ಸೊಳ್ಳೆಗಳಿಗೆ ಚಲಿಸದ ಹಲವಾರು ಜೊತೆ ಕಣ್ಣುಗಳಿವೆ. ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಈ ಕಣ್ಣುಗಳು ಜೀನುಗೂಡಿನ ಷಟ್ಪದಿಯ ಆಕೃತಿಯಲ್ಲಿವೆ. ಪ್ರತಿಕಣ್ಣೂ ಒಂದು ನಿರ್ದಿಷ್ಟ ನೋಟವನ್ನು ಮಾತ್ರ ಗ್ರಹಿಸಬಲ್ಲುದು. ಆದ್ದರಿಂದ ಸ್ಥಿರ ವಸ್ತುಗಳಿಗಿಂತ ಚಲಿಸುತ್ತಿರುವ ವಸ್ತುಗಳನ್ನು ಸೊಳ್ಳೆಗಳು ಸುಲಭವಾಗಿ ಗ್ರಹಿಸುತ್ತವೆ. ಆದ್ದರಿಂದ ಕತ್ತಲೆಯ ಹೊತ್ತಿನಲ್ಲಿ (ಸಾಮಾನ್ಯವಾಗಿ ಸಂಜೆಯಾಗುತ್ತಿದ್ದಂತೆಯೇ ಸೊಳ್ಳೆಗಳು ತಮ್ಮ ಅಡಗುತಾಣದಿಂದ ಹೊರಬರುತ್ತವೆ) ಹೆಚ್ಚು ಚಲಿಸುವುದರಿಂದ ತಪ್ಪಿಸಿಕೊಳ್ಳುವುದು ಉತ್ತಮ.

ಕತ್ತಲೆಯ ಹೊತ್ತಿನಲ್ಲಿ ಬೆವರದಿರಿ

ಕತ್ತಲೆಯ ಹೊತ್ತಿನಲ್ಲಿ ಬೆವರದಿರಿ

ಕೆಲವರಿಗೆ ಸಂಜೆಯ ಬಳಿಕವೇ ವ್ಯಾಯಾಮ ಮಾಡುವ ಹುಚ್ಚು ಇರುತ್ತದೆ. ಇದರಿಂದ ದೇಹದಲ್ಲಿ ಹೆಚ್ಚಿನ ಬೆವರು ಸುರಿಯಲಾರಂಭಿಸುತ್ತದೆ. ಈ ಬೆವರಿನ ಮೂಲಕ ದೇಹದ ಗಂಧ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚು ದೂರದವರೆಗೆ ಪಸರಿಸುವುದರಿಂದ ಆ ಸ್ಥಳದಲ್ಲಿದ್ದ ಅಷ್ಟೂ ಸೊಳ್ಳೆಗಳು ನೀವು ಆತ್ಮೀಯ ಕರೆ ಕೊಟ್ಟೀದ್ದೀರೆಂದೇ ತಿಳಿದು ನಿಮ್ಮ ಅತಿಥಿಗಳಾಗಲು ಓಡೋಡಿ ಬರುತ್ತವೆ.

ತುಂಬಾ ಬೆಚ್ಚನೇ ಇರಬೇಡಿ

ತುಂಬಾ ಬೆಚ್ಚನೇ ಇರಬೇಡಿ

ಕೆಲವರಿಗೆ ಸ್ವಲ್ಪ ಚಳಿಯಾದರೂ ಮೈತುಂಬಾ ಹೊದ್ದುಕೊಂಡು ಇರುವ ಅಭ್ಯಾಸವಿರುತ್ತದೆ. ಬಿಸಿಯುಡುಪು ಧರಿಸುವುದರಿಂದ ದೇಹದ ಉಷ್ಣಾಂಶ ಹೊರಹೋಗದಂತೆ ತಡೆದು ದೇಹ ಬೆಚ್ಚಗಿರುತ್ತದೆ. ಆದರೆ ಈ ಬಿಸಿಯೇ ಸೊಳ್ಳೆಗಳಿಗೆ ನಾವಿಲ್ಲಿದ್ದೇವೆ ಎಂದು ನೀಡುವ ಸೂಚನೆಯಾಗಿದೆ. ಸೊಳ್ಳೆಗಳು ಈ ಬಿಸಿಯನ್ನು ತುಂಬಾ ದೂರದಿಂದ ಗ್ರಹಿಸಲಾರವು. ಆದರೆ ವಾಸನೆ ಮತ್ತು ಇಂಗಾಲದ ಡೈ ಆಕ್ಸೈಡ್ ಗ್ರಹಿಸುತ್ತಾ ಇಂಥ ಕಡೆಯೇ ಇರಬಹುದೆಂದು ಅಂದಾಜಿಸುತ್ತಾ ಹತ್ತಿರ ಬಂದ ಬಳಿಕ ದೇಹದ ಉಷ್ಣಾಂಶದಿಂದ ನಿಮ್ಮ ಇರುವಿಕೆ ಅವುಗಳಿಗೆ ಖಚಿತವಾಗುತ್ತದೆ. ಇದಕ್ಕಾಗಿ ಕೊಂಚ ಚಳಿಯಾದರೂ ದೇಹವನ್ನು ತಣ್ಣಗಿರಿಸಲು ಪ್ರಯತ್ನಿಸಿ.

ಗಾಢ ಬಣ್ಣಗಳ ಬಟ್ಟೆಗಳನ್ನು ತೊಡಿರಿ

ಗಾಢ ಬಣ್ಣಗಳ ಬಟ್ಟೆಗಳನ್ನು ತೊಡಿರಿ

ಸೊಳ್ಳೆಗಳ ಕಣ್ಣುಗಳು ಬಣ್ಣಗಳನ್ನು ನೇರವಾಗಿ ಗ್ರಹಿಸಲಾರವು. ಆದರೆ ಬಣ್ಣಗಳ ಗಾಢತೆಯನ್ನು ಗ್ರಹಿಸಬಲ್ಲವು. ಅಂತೆಯೇ ಅವುಗಳ ಕಣ್ಣಿಗೆ ಬಿಳಿಬಣ್ಣ ಪ್ರಖರವಾಗಿ ಗೋಚರಿಸಿದರೆ ಗಾಢವರ್ಣಗಳು ಗೋಚರಿಸುವುದೇ ಇಲ್ಲ! ಇದರಿಂದ ಬಿಳಿ ಮತ್ತು ತಿಳಿಬಣ್ಣದ ಬಟ್ಟೆಗಳನ್ನು ತೊಟ್ಟವರಿಗಿಂತಲೂ ಕಪ್ಪು ಮತ್ತು ಗಾಢವರ್ಣದ ಬಟ್ಟೆಗಳನ್ನು ತೊಟ್ಟವರಿಗೆ ಕಡಿಮೆ ಕಚ್ಚಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಆದ್ದರಿಂದ ಸಂಜೆಯ ಬಳಿಕ ಗಾಢವರ್ಣದ ಬಟ್ಟೆಗಳನ್ನು ತೊಡಿರಿ.

ಸುಗಂಧವನ್ನು ಪೂಸಿಕೊಳ್ಳಿಸಿ

ಸುಗಂಧವನ್ನು ಪೂಸಿಕೊಳ್ಳಿಸಿ

ಸೊಳ್ಳೆಗಳಿಗೆ ನಮ್ಮ ದೇಹದ ಗಂಧ ಹೇಗೆ ಇಷ್ಟವೋ ಇದಕ್ಕೆ ವ್ಯತಿರಿಕ್ತವಾಗಿ ಸುಗಂಧಗಳು ಅವುಗಳಿಗೆ ಅಲರ್ಜಿಯಾಗಿದೆ. ಇದಕ್ಕಾಗಿ ಮೈಗೆ ಸುಗಂಧಗಳನ್ನು ಪೂಸಿಕೊಳ್ಳಿರಿ. ವಿಶೇಷವಾಗಿ ಹೂವಿನ ಅದರಲ್ಲೂ ಮಲ್ಲಿಗೆ, ಗುಲಾಬಿ ಪರಿಮಳದಿಂದ ಸೊಳ್ಳೆಗಳು ದೂರಾಗುವುದನ್ನು ಗಮನಿಸಲಾಗಿದೆ.

ಆಲ್ಫಾ ಹೈಡ್ರಾಕ್ಸಿ ಉತ್ಪನ್ನಗಳನ್ನು ಚರ್ಮಕ್ಕೆ ಹಚ್ಚದಿರಿ

ಆಲ್ಫಾ ಹೈಡ್ರಾಕ್ಸಿ ಉತ್ಪನ್ನಗಳನ್ನು ಚರ್ಮಕ್ಕೆ ಹಚ್ಚದಿರಿ

ಸೊಳ್ಳೆಗಳು ತಮ್ಮ ಮಿಕಗಳನ್ನು ಹುಡುಕಲು ಕಂಡುಕೊಳ್ಳುವ ಇನ್ನೊಂದು ಮಾಧ್ಯಮವೆಂದರೆ ಲ್ಯಾಕ್ಟಿಕ್ ಆಸಿಡ್ ವಾಸನೆ. ನಮ್ಮ ದೇಹದಲ್ಲಿ ಬೆವರಿನ ಮೂಲಕ ಲ್ಯಾಕ್ಟಿಕ್ ಆಮ್ಲವೂ ವಿಸರ್ಜನೆಗೊಳ್ಳುತ್ತದೆ. ಕೆಲವು ಸೌಂದರ್ಯ ಪ್ರಸಾದನಗಳಲ್ಲಿ ಆಲ್ಫಾ ಹೈಡ್ರಾಕ್ಸಿ (alpha hydroxy) ಎಂಬ ರಾಸಾಯನಿಕಗಳಿವೆ. ಈ ರಾಸಾಯನಿಕಗಳು ಲ್ಯಾಕ್ಟಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತವೆ. ಈ ಮೂಲಕ ಸೊಳ್ಳೆಗಳು ನಿಮಗೆ ಹೆಚ್ಚು ಹೆಚ್ಚು ಆಕರ್ಷಿತವಾಗುತ್ತವೆ. ಆದುದರಿಂದ ನೀವು ಹಚ್ಚಿಕೊಳ್ಳುವ ಕ್ರೀಂ ಮತ್ತು ಇತರ ಸೌಂದರ್ಯ ಪ್ರಸಾದನಗಳಲ್ಲಿ ಈ ರಾಸಾಯನಿಕ ಇದೆಯೇ ಎಂದು ಗಮನಿಸಿ. ಇದ್ದರೆ ಸಂಜೆಯ ಬಳಿಕ ಹಚ್ಚುವುದನ್ನು ತಡೆಯಿರಿ. ಉತ್ತಮ ಉಪಾಯವೆಂದರೆ ಸಂಜೆಯೂ ಇನ್ನೊಮ್ಮೆ ಸ್ನಾನ ಮಾಡಿ ಮರುದಿನದವರೆಗೆ ಈ ಕ್ರೀಮುಗಳನ್ನು ಹಚ್ಚಬೇಡಿ.

ಕಾಲುಚೀಲಗಳನ್ನು ದಿನಂಪ್ರತಿ ಬದಲಿಸಿ

ಕಾಲುಚೀಲಗಳನ್ನು ದಿನಂಪ್ರತಿ ಬದಲಿಸಿ

ಪಾದಗಳ ಚರ್ಮ ಅತಿ ದಪ್ಪನಾಗಿರುವುದರಿಂದ ಇಲ್ಲಿನ ಬೆವರಿನ ಪ್ರಮಾಣವೂ ಹೆಚ್ಚಿರುತ್ತದೆ. ಈ ಆಗಾಧ ಪ್ರಮಾಣದ ಬೆವರನ್ನು ಹೀರಿಕೊಳ್ಳುವ ಕಾಲುಚೀಲಕ್ಕೆ ಒಣಗಲು ಸಮಯಾವಕಾಶವೇ ದೊರಕದಿರುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸೂಕ್ತ ವೇದಿಕೆಯಾಗಿದೆ. ಬ್ಯಾಕ್ಟೀರಿಯಾಗಳು ಬೆವರನ್ನು ಕೊಳೆಸುವುದರಿಂದ ತುಂಬಾ ಕೆಟ್ಟ ವಾಸನೆಯುಂಟಾಗುತ್ತದೆ. ಈ ವಾಸನೆ ಸೊಳ್ಳೆಗಳಿಗೆ ಅತ್ಯಂತ ಅಪ್ಯಾಯಮಾನವಾಗಿದೆ. ಖ್ಯಾತ ಕೀಟವಿಜ್ಞಾನಿ ಡೇನಿಯಲ್ ಎಲ್. ಕ್ಲೈನ್ ರವರು ನಡೆಸಿ ಪ್ರಯೋಗಗಳಲ್ಲಿ ಮೂರು ದಿನದ ಹಿಂದೆ ಬಳಸಿದ್ದ ಕಾಲುಚೀಲಕ್ಕೆ ಸೊಳ್ಳೆಗಳು ಮುಗಿಬೀಳುವುದು ಕಂಡುಬಂದಿದೆ. ಆದ್ದರಿಂದ ಮೂರು ದಿನ ಕಾಯುವ ಬದಲು ಪ್ರತಿದಿನವೂ ಹೊಸ ಮತ್ತು ಸ್ವಚ್ಛವಾಗಿ ಒಗೆದು ಇಸ್ತ್ರಿ ಮಾಡಿದ ಕಾಲುಚೀಲಗಳನ್ನೇ ಉಪಯೋಗಿಸಿ. ಬಳಸಿದ ಕಾಲುಚೀಲಗಳನ್ನು ಕಾಲಕಾಲಕ್ಕೆ ಒಗೆಯುತ್ತಿರಿ.

ಮದ್ಯಪಾನ ಮತ್ತು ಚೀಸ್ ಸೇವನೆಯಿಂದ ದೂರವಿರಿ

ಮದ್ಯಪಾನ ಮತ್ತು ಚೀಸ್ ಸೇವನೆಯಿಂದ ದೂರವಿರಿ

ಸೊಳ್ಳೆಗಳು ಯಾರನ್ನು ಹೆಚ್ಚು ಕಚ್ಚುತ್ತವೆ ಎಂಬ ಬಗ್ಗೆ ಕೂಲಂಕಶವಾಗಿ ಅಧ್ಯಯನ ಮಾಡಿದವರಿಗೆ ಸೋಜಿಗದ ವಿಷಯ ತಿಳಿದುಬಂದಿದೆ. ಮದ್ಯಪಾನ, ಬಿಯರ್ ಸೇವನೆ ಮತ್ತು ಚೀಸ್ ಸೇವನೆ (limburger cheese) ಮಾಡಿದ ವ್ಯಕ್ತಿಗಳನ್ನು ಹೆಚ್ಚು ಸೊಳ್ಳೆಗಳು ಕಚ್ಚಿರುವುದು ಕಂಡುಬಂದಿದೆ. ಏಕೆಂದರೆ ಈ ಚೀಸ್ ನಲ್ಲಿಯೂ ನಮ್ಮ ಪಾದಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳೇ ಇವೆ. ಬಿಯರ್ ಮತ್ತು ಮದ್ಯಪಾನದ ಕೊಂಚ ಹೊತ್ತಿನ ಬಳಿಕ ಬೆವರಿನಲ್ಲಿ ಹೆಚ್ಚಿನ ವಾಸನೆ ತುಂಬಿರುವುದು ಸೊಳ್ಳೆಗಳಿಗೆ ತಮ್ಮ ಬಲಿ ಎಲ್ಲಿದೆ ಎಂದು ಹುಡುಕಲು ಸುಲಭವಾಗುತ್ತವೆ.

'ಒ' ಗುಂಪಿನ ರಕ್ತ ಹೊಂದಿರುವವರಿಗೆ ಹೆಚ್ಚು ಕಚ್ಚುತ್ತವೆ

'ಒ' ಗುಂಪಿನ ರಕ್ತ ಹೊಂದಿರುವವರಿಗೆ ಹೆಚ್ಚು ಕಚ್ಚುತ್ತವೆ

ಜ್ಯೂಸ್ ಕುಡಿಯಲು ಹೋದವರಿಗೆ ಲಭ್ಯವಿರುವ ಆಯ್ಕೆಯಂತೆಯೇ ಸೊಳ್ಳೆಗಳಿಗೂ ಯಾರನ್ನು ಕಚ್ಚಬೇಕು ಎಂಬ ಆಯ್ಕೆ ಇದೆ! ಇದು ಸಂಶೋಧನೆಗಳಿಂದ ಕಂಡುಕೊಂಡ ಸತ್ಯ. ಒಂದೇ ಆಹಾರ ಸೇವಿಸಿದ, ಒಂದೇ ರೀತಿಯ ಬಟ್ಟೆ ತೊಟ್ಟ, ಒಂದೇ ಸಮಯದಲ್ಲಿ ಸ್ನಾನ ಮಾಡಿ ಒಂದೇ ಕೋಣೆಯಲ್ಲಿ ಕುಳಿತ ಆದರೆ ವಿವಿಧ ರಕ್ತದ ಗುಂಪಿಗೆ ಸೇರಿದ ವ್ಯಕ್ತಿಗಳ ಮೇಲೆ ಸೊಳ್ಳೆಗಳು ಕಚ್ಚುವುದನ್ನು ಅಭ್ಯಾಸ ಮಾಡಲಾದ ಬಳಿಕ ಅತಿ ಹೆಚ್ಚು ಸೊಳ್ಳೆಗಳು 'ಒ' ಗುಂಪಿನ ರಕ್ತದ ಜನರನ್ನು ಅತಿ ಹೆಚ್ಚು ಕಚ್ಚಿರುವುದು ಪತ್ತೆಯಾಗಿದೆ. ಅಂದರೆ ಈ ಗುಂಪಿನ ರಕ್ತವನ್ನು ಸೊಳ್ಳೆಗಳು ಹೆಚ್ಚು ಇಷ್ಟಪಡುತ್ತವೆ ಎಂದಾಯ್ತು. ಅದರಲ್ಲೂ ಎಬಿ ಗುಂಪಿನ ವ್ಯಕ್ತಿಗಳ ಬಳಿಗೆ ಅತಿ ಕಡಿಮೆ ಸುಳಿದಿವೆ. ಎ ಮತ್ತು ಬಿ ಗುಂಪಿನ ರಕ್ತದವರಿಗೆ ಒ ಗುಂಪಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಕಚ್ಚಿರುವುದು ಗಮನಿಸಲಾಗಿದೆ.

ನಿಮ್ಮ ರಕ್ತದಲ್ಲಿರುವ ಸ್ಯಾಕರಿನ್ ಎಂಬ ಸಕ್ಕರೆ ಅಂಶ ಸೊಳ್ಳೆಗಳನ್ನು ಆಕರ್ಷಿಸುತ್ತದೆ

ನಿಮ್ಮ ರಕ್ತದಲ್ಲಿರುವ ಸ್ಯಾಕರಿನ್ ಎಂಬ ಸಕ್ಕರೆ ಅಂಶ ಸೊಳ್ಳೆಗಳನ್ನು ಆಕರ್ಷಿಸುತ್ತದೆ

ಸಾಮಾನ್ಯ ಸಕ್ಕರೆಗಿಂತಲೂ ಮುನ್ನೂರು ಪಟ್ಟು ಹೆಚ್ಚು ಸಿಹಿ ಇರುವ ಸ್ಯಾಕರಿನ್ ಎಂಬ ಸಕ್ಕರೆಯನ್ನು ಸಾಮಾನ್ಯವಾಗಿ ಕಹಿ ಹೆಚ್ಚಿರುವ ಔಷಧಿ, ಕ್ಯಾಂಡಿ, ತಿಂಡಿ, ಟೂಥ್ ಪೇಸ್ಟ್ ಮೊದಲಾದ ವಸ್ತುಗಳಲ್ಲಿ ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಅಗ್ಗದ ಮದ್ಯ, ಶೇಂದಿಗಳೂ ಕಹಿಯಾಗಿದ್ದು ಇದನ್ನು ಸಿಹಿಯಾಗಿಸಲು ಸ್ಯಾಕರಿನ್ ಬೆರೆಸಲಾಗುತ್ತದೆ. ಜೊತೆಗೇ ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಲು ಸ್ಪಿರಿಟ್ ಎಂಬ ರಾಸಾಯನಿಕವನ್ನೂ ಸೇರಿಸಲಾಗುತ್ತದೆ. ಕೆಲವು ವೇಳೆ ಅಕ್ರಮವಾಗಿ ತಯಾರಿಸಿದ ಮದ್ಯದಲ್ಲಿ ಇದರ ಪ್ರಮಾಣ ಅತಿಯಾಗಿ ಸಾವು ನೋವುಗಳೂ ಸಂಭವಿಸುತ್ತವೆ. ಸ್ಯಾಕರಿನ್ ರಕ್ತದಲ್ಲಿ ಸೇರಿದ ಬಳಿಕ ಸ್ಯಾಖರೈಡ್ ಎಂಬ ರಾಸಾಯನಿಕವಾಗಿ ಬದಲಾಗಿ ಬೆವರಿನ ಮೂಲಕ ಹೊರಬರುತ್ತದೆ. ಈ ಸ್ಯಾಖರೈಡ್ ಸೊಳ್ಳೆಗಳಿಗೆ ತನ್ನ ವಾಸನೆಯ ಮೂಲಕ ಆಹ್ವಾನ ನೀಡುತ್ತದೆ. ಆದ್ದರಿಂದ ಸ್ಯಾಕರಿನ್ ಇರುವ ಆಹಾರಗಳಿಂದ ದೂರವಿರಿ. ಮಕ್ಕಳು ಇಡಿಯ ದಿನ ಚಾಕಲೇಟು, ಕ್ಯಾಂಡಿ ತಿಂದು ಸಂಜೆ ಮನೆಗೆ ಬಂದ ಬಳಿಕ ಅವರನ್ನು ಸೊಳೆಗಳು ಅತಿ ಹೆಚ್ಚಾಗಿ ಕಚ್ಚಲು ಇದೇ ಕಾರಣ.

ಸ್ಟೆರಾಯ್ಡ್ ಮತ್ತು ಕೊಲೆಸ್ಟ್ರಾಲ್

ಸ್ಟೆರಾಯ್ಡ್ ಮತ್ತು ಕೊಲೆಸ್ಟ್ರಾಲ್

ಕಲೆವು ಔಷಧಿಗಳ ಅಡ್ಡ ಪರಿಣಾಮದಿಂದ ದೇಹದಲ್ಲಿ ಸ್ಟ್ರೆರಾಯ್ಡ್ ಗಳು ಉತ್ಪತ್ತಿಯಾಗುತ್ತವೆ. ಈ ಸ್ಟೆರಾಯ್ಡ್ ಪ್ರಮಾಣ ಒಂದು ಹಂತಕ್ಕಿಂತ ಹೆಚ್ಚಾದರೆ ಚರ್ಮದ ಬೆವರಿನ ಮೂಲಕ ಹೊರಬಂದು ಸೊಳ್ಳೆಗಳಿಗೆ ಅಪ್ಯಾಯಮಾನವಾದ ವಾಸನೆ ಸೃಷ್ಟಿಸುತ್ತವೆ. ಅಂತೆಯೇ ರಕ್ತದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇದ್ದರೆ ಇದನ್ನು ನಿಭಾಯಿಸಲು ರಕ್ತದಲ್ಲಿ ಕೆಲವು ರಾಸಾಯನಿಕಗಳನ್ನು ದೇಹ ಬಿಡುಗಡೆ ಮಾಡಬೇಕಾಗುತ್ತದೆ. ಇದೂ ಚರ್ಮದಲ್ಲಿ ವಾಸನೆಯುಂಟುಮಾಡುವ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು. ಒಟ್ಟಾರೆಯಾಗಿ ಇವೆರೆಡೂ ಅಂಶಗಳಿರುವ ವ್ಯಕ್ತಿಗಳಿಗೆ ಸೊಳ್ಳೆಗಳು ಕಚ್ಚುವ ಸಂಭವ ಇತರರಿಗಿಂತ ಹೆಚ್ಚಾಗಿದೆ.

ದೇಹದಿಂದ ವಿಸರ್ಜನೆಯಾಗುವ ಆಮ್ಲಗಳೂ ಸೊಳ್ಳೆಗಳನ್ನು ಆಕರ್ಷಿಸುತ್ತದೆ.

ದೇಹದಿಂದ ವಿಸರ್ಜನೆಯಾಗುವ ಆಮ್ಲಗಳೂ ಸೊಳ್ಳೆಗಳನ್ನು ಆಕರ್ಷಿಸುತ್ತದೆ.

ಕೆಲವರ ದೇಹದಿಂದ ಯೂರಿಕ್ ಆಮ್ಲ ಮತ್ತು ಇತರ ವಾಸನೆಯುಳ್ಳ ಆಮ್ಲಗಳು ಉತ್ಪತ್ತಿಯಾಗುತ್ತವೆ. ಈ ವಾಸನೆಯನ್ನು ಸೊಳ್ಳೆಗಳು ಶೀಘ್ರವಾಗಿ ಗ್ರಹಿಸಿ ರಕ್ತಕುಡಿಯಲು ಓಡೋಡಿ ಬರುತ್ತವೆ.

ಸೊಳ್ಳೆಗಳನ್ನು ದೂರವಿರಿಸಲು ಕೆಲವು ಮನೆಮದ್ದುಗಳು

* ಕೋಣೆಯಲ್ಲಿ ಕೆಲವು ಕರ್ಪೂರದ ಬಿಲ್ಲೆಗಳನ್ನು (ಸಾಮಾನ್ಯ 12X12 ಅಡಿ ಕೋಣೆಗೆ ಐದು ಚಿಕ್ಕ ಬಿಲ್ಲೆಗಳು) ಪುಡಿಮಾಡಿ ಒಂದು ಹಾಳೆಯ ಮೇಲೆ ಹರಡಿ ಎಲ್ಲಾ ಕಿಟಕಿ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿ ಹದಿನೈದು ನಿಮಿಷದ ಬಳಿಕ ತೆರೆಯಿರಿ. ಸೊಳ್ಳೆಗಳು ಓಡಿ ಹೋಗಿರುತ್ತವೆ.

*ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಗಳನ್ನು ಸಮಪ್ರಮಾಣದಲ್ಲಿ ಮಿಶ್ರಣಮಾಡಿ ಕೈ ಕಾಲುಗಳು ಮತ್ತು ತೆರೆದಿರುವ ಚರ್ಮದ ಭಾಗಗಳಿಗೆ ಹೆಚ್ಚಿ. ಮುಂದಿನ ಹತ್ತು ಘಂಟೆಗಳವರೆಗೆ ಸೊಳ್ಳೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

* ತುಳಸಿ ಗಿಡವ ಕುಂಡವನ್ನು ಮನೆಗೆ ಗಾಳಿ ಒಳಬರುವ ಕಿಟಕಿಯ ಬಳಿ ಇಟ್ಟು ತುಳಸಿ ಎಲೆಗಳ ಮೂಲಕ ಗಾಳಿ ಹಾದು ಬರುವಂತೆ ನೋಡಿಕೊಳ್ಳಿ. ಈ ಗಾಳಿಗೆ ಸೊಳ್ಳೆಗಳು ಓಡಿ ಹೋಗುತ್ತವೆ.

* ಲ್ಯಾವೆಂಡರ್ ಹೂವಿನ ಸುಗಂಧ ಅಥವಾ ಎಣ್ಣೆಯನ್ನು ಬಿಸಿಮಾಡಿ ಸುಗಂಧ ಕೋಣೆಯಲ್ಲಿ ಪಸರಿಸುವಂತೆ ಮಾಡುವ ಮೂಲಕ ಸೊಳ್ಳೆಗಳನ್ನು ಓಡಿಸಬಹುದು.

ಮಂಜು ಗಡ್ಡೆ

ಮಂಜು ಗಡ್ಡೆ

ಮಂಜು ಗಡ್ಡೆ ತುರಿಕೆಯನ್ನು ಮತ್ತು ಬೊಬ್ಬೆಗಳನ್ನು ಕಡಿಮೆ ಮಾಡಲು ಮಂಜು ಗಡ್ಡೆಯ ಪ್ಯಾಕ್ ಉಪಯೋಗಕಾರಿ. ಅದರಲ್ಲಿಯೂ ನಿಮಗೇನಾದರು ಹೆಚ್ಚು ಸೊಳ್ಳೆಗಳು ಕಚ್ಚಿದ್ದರೆ, ತಣ್ಣೀರಿನಲ್ಲಿ ಸ್ನಾನ ಮಾಡಿ, ಇಲ್ಲವೇ ತಣ್ಣಗೆ ಕೊರೆಯುವ ಕೆರೆ ಅಥವಾ ಈಜು ಕೊಳದಲ್ಲಿ ಈಜಾಡಿ.

ಬೇಕಿಂಗ್ ಸೋಡಾ ಮತ್ತು ವಿಚ್ ಹಝೆಲ್

ಬೇಕಿಂಗ್ ಸೋಡಾ ಮತ್ತು ವಿಚ್ ಹಝೆಲ್

ಅತ್ಯಂತ ಮಿತವ್ಯಯದ ತುರಿಕೆ ನಿರೋಧಕ ಪರಿಹಾರ ಬೇಕೆಂದರೆ ಬೇಕಿಂಗ್ ಸೋಡಾ ಮತ್ತು ವಿಚ್ ಹಝೆಲ್‍ನ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡು, ಅದನ್ನು ಸೊಳ್ಳೆ ಕಚ್ಚಿದ ಭಾಗಗಳಿಗೆ ಹಚ್ಚಿ 15 ನಿಮಿಷ ಬಿಡಿ. ಬೇಕಿಂಗ್ ಸೋಡಾವು ಅಲ್ಕಾಲೈನ್ ಅಂಶಗಳನ್ನು ಹೊಂದಿದೆ. ಇವುಗಳು ನಿಮ್ಮ ತ್ವಚೆಯಲ್ಲಿನ pH ಪ್ರಮಾಣವನ್ನು ಕಡಿಮೆ ಮಾಡುತ್ತದೆಯಾದ್ದರಿಂದ ತುರಿಕೆ ಹಾಗು ಬಾವುಗಳು ಕಡಿಮೆಯಾಗುತ್ತವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಝೆಲ್ ಇಲ್ಲವಾದಲ್ಲಿ, ನೀರಿನ ಉಪಯೋಗವನ್ನು ಪಡೆಯಿರಿ.

ಆಲ್ಕೋಹಾಲ್

ಆಲ್ಕೋಹಾಲ್

ಸೊಳ್ಳೆ ಕಡಿತಗಳಿಂದ ತುರಿಕೆಯುಂಟಾದರೆ, ಕೆಲವು ಹನಿ ಬೀರ್ ಅನ್ನು ತುರಿಕೆಯಾಗುವ ಸ್ಥಳದಲ್ಲಿ ಲೇಪಿಸಿದರೆ ಉಪಯೋಗವಾಗುವುದಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿರುವ ಆಲ್ಕೋಹಾಲ್ ಅನ್ನು ಹೊರತೆಗೆದು ತುರಿಕೆಯಾಗುವ ಸ್ಥಳಕ್ಕೆ ಲೇಪಿಸಿ. ಆ ತುರಿಕೆಯ ಜಾಗವನ್ನು ಅದರಿಂದ ಸ್ವಚ್ಛಗೊಳಿಸಿ. ಇದರಿಂದ ತುರಿಕೆಯು ಹೆಚ್ಚಾಗುವುದನ್ನು ಆಲ್ಕೋಹಾಲ್ ತಪ್ಪಿಸುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಆಲ್ಕೋಹಾಲ್ ಇಲ್ಲವೇ? ಸಾಧಾರಣವಾದ ಸೋಪ್ ಮತ್ತು ನೀರಿನಿಂದ ತುರಿಕೆಯ ಭಾಗಗಳನ್ನು ಸ್ವಚ್ಛಗೊಳಿಸಿ. ಇದು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ನೀವು ಗಮನಿಸಬಹುದು.

ಹೊಡೆಯಿರಿ

ಹೊಡೆಯಿರಿ

ಇದು ವಿಚಿತ್ರವಾದರು ಸತ್ಯ! ಸೊಳ್ಳೆ ಕಡಿಯಿತು ಎಂದು ಕೆರೆದುಕೊಳ್ಳದೆ, ಆ ಭಾಗಕ್ಕೆ ಒಂದು ಏಟು ಕೊಡಿ. ಇದರಿಂದ ನಿಮ್ಮ ಮೆದುಳು ತುರಿಕೆ ಮತ್ತು ನೋವಿನ ನಡುವೆ ಯಾವುದರ ಬಗ್ಗೆ ಗಮನ ಹರಿಸಬೇಕು ಎಂಬ ಗೊಂದಲಕ್ಕೆ ಬಿದ್ದು, ನಿಮ್ಮ ಸಮಸ್ಯೆ ಮಾಯವಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆ ಹಣ್ಣಿನ ಸಿಪ್ಪೆಯ ಒಳ ತಿರುಳನ್ನು ಸೊಳ್ಳೆ ಕಚ್ಚಿದ ಭಾಗಕ್ಕೆ ಲೇಪಿಸುವುದರಿಂದ ಸೊಳ್ಳೆ ಕಡಿತದಿಂದ ಉಂಟಾದ ಸಮಸ್ಯೆಗೆ ಉಪಶಮನ ಪಡೆಯಬಹುದು.

ಅಪಲ್ ಸಿಡೆರ್ ವಿನೆಗರ್

ಅಪಲ್ ಸಿಡೆರ್ ವಿನೆಗರ್

ನಿಮ್ಮ ಮನೆಯ ಬಾತ್ ಟಬ್‍ಗೆ ಅಪಲ್ ಸಿಡೆರ್ ವಿನೆಗರ್ ಬೆರೆಸಿ ಸ್ನಾನ ಮಾಡುವುದರಿಂದ ಸನ್ ಬರ್ನ್, ತುರಿಕೆ ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಪಲ್ ಸಿಡೆರ್ ವಿನೆಗರ್ ನಲ್ಲಿರುವ ಮಲಿಕ್ ಆಮ್ಲವು ಈ ಸಮಸ್ಯೆಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ಸ್ನಾನದ ನೀರಿಗೆ ಇದನ್ನು ಬೆರೆಸಲು ನಿಮಗೆ ಹಿಡಿಸದಿದ್ದರೆ, ಹತ್ತಿಯನ್ನು ಇದರಲ್ಲಿ ಅದ್ದಿ, ತುರಿಕೆ ಮತ್ತು ಬಾವುಗಳಿರುವ ಜಾಗಕ್ಕೆ ಲೇಪಿಸಿ.

ಲೋಳೆ ಸರ

ಲೋಳೆ ಸರ

ಲೋಳೆ ಸರದಲ್ಲಿರುವ ತಂಪಾದ ಗುಣಗಳು ಚರ್ಮದಲ್ಲಿನ ತುರಿಕೆ ಮತ್ತು ಬಾವುಗಳಿಗೆ ಆರಾಮವನ್ನು ಒದಗಿಸುತ್ತದೆ.

ಉಪ್ಪು

ಉಪ್ಪು

ಸೊಳ್ಳೆ ಕಡಿತದಿಂದ ತಕ್ಷಣ ಉಪಶಮನ ಪಡೆಯಲು, ಕಡಿದ ಭಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ. ಅದರ ಮೇಲೆ ಉಪ್ಪು ಸವರಿ ಮೆತ್ತಗೆ ಉಜ್ಜಿ ಅಥವಾ ನೀವೇನಾದರು ಬೀಚ್ ಬಳಿ ಇದ್ದರೆ, ಸುಮ್ಮನೆ ಸಮುದ್ರ ಸ್ನಾನ ಮಾಡಿ.

English summary

Why do Mosquitoes Bite Some People and Not Others?

Every summer they come sneaking through the windows and graze you. Some people get ravaged by mosquitoes if they so much as take a walk at dusk. Mosquitoes use their senses to choose a favorite target in the crowd. Here are 10 ways to guarantee yourself lots of mosquito bites.
X
Desktop Bottom Promotion