For Quick Alerts
ALLOW NOTIFICATIONS  
For Daily Alerts

ಆಕರ್ಷಕ ಮೈಕಟ್ಟು: ಆಹಾರ ಪದ್ಧತಿ ಶಿಸ್ತು ಬದ್ಧವಾಗಿರಲಿ

|

ಹೆಣ್ಣಿಗೆ ಸೌಂದರ್ಯವೇ ಆಕರ್ಷಣೆಯಾದರೆ ಗಂಡಿಗೆ ಆಕರ್ಷಕ ಮೈಕಟ್ಟು ಭೂಷಣ. ಬಲಿಷ್ಠವಾದ ಸ್ನಾಯುಗಳನ್ನು ಹೊಂದಲು ಪ್ರತಿಯೊಬ್ಬ ಪುರುಷರ ಕನಸು. ಆದರೆ ಈ ಮೈಕಟ್ಟನ್ನು ಹೊಂದುವುದು ಅಷ್ಟು ಸುಲಭವಲ್ಲ.

ಸತತ ವ್ಯಾಯಾಮದ ಜೊತೆಗೆ ಉತ್ತಮವಾದ ಆಹಾರವೂ ಅಷ್ಟೇ ಅಗತ್ಯವಾಗಿದೆ. ಆದರೆ ಆಹಾರದ ವಿಷಯ ಬಂದಾಗ ದೇಹದ ಸ್ನಾಯುಗಳ ಬೆಳವಣಿಗೆಗಿಂತ ಕೊಬ್ಬಿನ ಶೇಖರಣೆಗೆ ಮಹತ್ವ ನೀಡುವ ಆಹಾರಗಳು ಸುಂದರ ಮೈಕಟ್ಟಿನ ಕನಸಿಗೆ ನೀರೆರೆಚುತ್ತವೆ.

ಹಾಗಾಗಿ, ಉತ್ತಮ ಆರೋಗ್ಯದಿಂದಿರುವ ಮತ್ತು ಸರಿಯಾದ ಗಾತ್ರದ ಸ್ನಾಯುಗಳನ್ನು ಹೊಂದಲು ಒಂದೇ ತೆರನಾದ ಆಹಾರ ಸಾಕಾಗದು. ವಿವಿಧ ಅಂಶಗಳುಳ್ಳ ಆಹಾರಗಳ ಸರಿಯಾದ ಸಂಯೋಜನೆ ಹಾಗೂ ಸರಿಯಾದ ಕ್ರಮದ ವ್ಯಾಯಾಮ ಸುಂದರ ಮೈಕಟ್ಟು ಹಾಗೂ ಸುದೃಢ ಸ್ನಾಯುಗಳಿಗೆ ಅಗತ್ಯವಾಗಿದೆ. ಬನ್ನಿ ಅಂತಹ ಆಹಾರಗಳು ಯಾವುದು ಎಂಬುದನ್ನು ನೋಡೋಣ.. ಸದೃಢ ಪುರುಷರ ಆರೋಗ್ಯದ ಗುಟ್ಟು, ವ್ಯಾಯಮದಿಂದ ರಟ್ಟು!

ಮೊಟ್ಟೆಗಳು

ಮೊಟ್ಟೆಗಳು

ಕೋಳಿಮೊಟ್ಟೆಯಲ್ಲಿ ಪ್ರೋಟೀನ್ ಹೇರಳವಾಗಿದೆ. ಅಲ್ಲದೇ ವಿಟಮಿನ್ ಬಿ2, ಬಿ12, ಎ, ಫೋಲೇಟ್, ಬೈಯೋಟಿನ್, ಎಂಬ ಪೋಷಕಾಂಶಗಳೂ ಫಾಸ್ಪರಸ್, ಐಯೋಡಿನ್ ಮತ್ತು ಸೆಲೆನಿಯಂ ನಂತಹ ಖನಿಜಗಳು ಹೇರಳವಾಗಿರುವುದರಿಂದ ಸ್ನಾಯುಗಳು ಶೀಘ್ರದಲ್ಲಿಯೇ ಪುಟಿಯಲು ತೊಡಗುತ್ತವೆ. ಮೊಟ್ಟೆಯ ಹಳದಿ ಭಾಗದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಲ್ಪ ಪ್ರಮಾಣದಲ್ಲಿದ್ದರೂ ವ್ಯಾಯಾಮದ ಮೂಲಕ ವರ್ಧನೆ ಪಡೆಯುವ ರಕ್ತ ಈ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನರಗಳ ಒಳಭಾಗದಲ್ಲಿ ಶೇಖರವಾಗಲು ಬಿಡದೆ ಆರೋಗ್ಯ ಕಾಪಾಡಿದಂತಾಗುತ್ತದೆ. ಮೊಟ್ಟೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಸಹಾ ಇದ್ದು ಜೀರ್ಣಕ್ರಿಯೆ ಹಾಗೂ ಸ್ನಾಯುಗಳ ಬಲಪಡಿಸುವಿಕೆಯಲ್ಲಿ ನೆರವಾಗುತ್ತದೆ.

ಮೊಸರು

ಮೊಸರು

ನಿಜ ಹೇಳಬೇಕೆಂದರೆ ಮೊಸರು ಮೊದಲೇ ಅರ್ಧ ಜೀರ್ಣವಾಗಿರುವ ಸಿದ್ಧ ಆಹಾರ. ಆದುದರಿಂದ ಉಳಿದರ್ಧವನ್ನು ಜೀರ್ಣಿಸಿಕೊಳ್ಳಲು ಜಠರಕ್ಕೆ ಹೆಚ್ಚಿನ ಶ್ರಮ ಬೇಕಾಗಿಲ್ಲ. ಆದರೆ ಮೊಸರಿನಲ್ಲಿ ಕೊಬ್ಬು ಹೆಚ್ಚಿರುವುದರಿಂದ ಕೊಬ್ಬು ಕಡಿಮೆ ಇರುವ ಮೊಸರನ್ನು ಸೇವಿಸುವುದು ಉಚಿತ. ಕಡಿಮೆ ಶ್ರಮದಲ್ಲಿ ದೇಹಕ್ಕೆ ಲಭ್ಯವಾದ ಪೋಷಕಾಂಶಗಳಿಂದ ಸ್ನಾಯುಗಳು ಶೀಘ್ರವೇ ಉತ್ತಮ ಬೆಳವಣಿಗೆ ಪಡೆಯುತ್ತವೆ.

ಅಗಸೆ ಬೀಜ

ಅಗಸೆ ಬೀಜ

ಅಗಸೆ ಬೀಜಗಳು ಸ್ನಾಯುಗಳಿಗೆ ಅಗತ್ಯವಾದ ಪ್ರೋಟೀನುಗಳ ಆಗರವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ನಾರು ಮತ್ತು ಒಮೆಗಾ-3 ಕೊಬ್ಬಿನ ತೈಲವೂ ಇರುವ ಕಾರಣ ಸ್ನಾಯುಗಳ ಬೆಳವಣಿಗೆಗೆ ಹೇಳಿ ಮಾಡಿಸಿದಂತಹ ಆಹಾರವಾಗಿದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಬಸಲೆ ಸೊಪ್ಪು ಮತ್ತು ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ (3%), ಕಬ್ಬಿಣ (5%), ಮೆಗ್ನೀಶಿಯಂ (6%) ರಷ್ಟು ಹೇರಳವಾಗಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ (13%) ಮ್ಯಾಂಗನೀಸ್ ಸಹಾ ಇದೆ. ಈ ಧಾತುಗಳು ಸ್ನಾಯುಗಳಿಗೆ ಮತ್ತು ಮೂಳೆಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ವ್ಯಾಯಾಮದಲ್ಲಿ ಕೊಬ್ಬು ಕರಗಲು ಹಾಗೂ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಓಟ್ಸ್

ಓಟ್ಸ್

ಗೋಧಿ ಬೂಸಾದಂತಿರುವ ಓಟ್ಸ್‌ನಲ್ಲಿ ಕರಗುವ ನಾರು ಹೇರಳವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮ್ಯಾಂಗನೀಸ್, ಮಾಲಿಬ್ಡಿನಂ ಮತ್ತು ಫಾಸ್ಪರಸ್ ಇದೆ. ಉತ್ತಮ ಪ್ರಮಾಣದ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟುಗಳು ಸ್ನಾಯುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತವೆ. ಪ್ರತಿದಿನ ಒಂದು ದೊಡ್ಡ ಕಪ್ ನಷ್ಟು ಓಟ್ಸ್ ಬೂಸಾವನ್ನು ಹಾಲಿನೊಂದಿಗೆ ಸೇವಿಸುವ ಮೂಲಕ ಉತ್ತಮ ಆರೋಗ್ಯ ಹಾಗೂ ಸ್ನಾಯುಗಳನ್ನು ಪಡೆಯಬಹುದು.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಸಾಲ್ಮನ್ ಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನುಗಳು ಹಾಗೂ ಒಮೆಗಾ-3 ಕೊಬ್ಬಿನ ತೈಲವಿದೆ. ಕಬ್ಬಿಣ (6%), ಮೆಗ್ನೀಶಿಯಂ(8%), ಫಾಸ್ಪರಸ್ (29%), ಪೊಟ್ಯಾಶಿಯಂ(10%) ನಷ್ಟು ಅಧಿಕ ಪ್ರಮಾಣದಲ್ಲಿರುವುದರಿಂದ ಸ್ನಾಯುಗಳು ಉತ್ತಮವಾದ ಬೆಳವಣಿಗೆ ಪಡೆಯುತ್ತವೆ.

ಧಾನ್ಯ ಮತ್ತು ಕಾಳುಗಳು

ಧಾನ್ಯ ಮತ್ತು ಕಾಳುಗಳು

ಪಾಲಿಷ್ ಮಾಡಿದ ಕಾಳುಗಳಲ್ಲಿ ಹಲವು ಪೋಷಕಾಂಶಗಳು ನಷ್ಟವಾಗುವುದರಿಂದ ಇಡಿಯ ಕಾಳುಗಳನ್ನು ಸೇವಿಸುವುದು ಲೇಸು. ಅದರಲ್ಲೂ ಮೊಳಕೆ ಬರಿಸಿದ ಕಾಳುಗಳು ಸ್ನಾಯುಗಳ ಬೆಳವಣಿಗೆಗೆ ಅತ್ಯುತ್ತಮವಾಗಿದೆ. ಹೆಸರು ಕಾಳು, ಕಡಲೆ ಕಾಳು, ಅಲಸಂಡೆ ಕಾಳು, ಅವರೆ, ಬೀನ್ಸ್, ರಾಜ್ಮಾ, ಗೋಧಿ, ಮೆಕ್ಕೆ ಜೋಳ, ರಾಗಿ, ನವಣೆ ಮೊದಲಾದವು ಉತ್ತಮ ಆಹಾರಗಳಾಗಿವೆ.

ಯಾವುದಕ್ಕೂ ನಿಧಾನವಾಗಿ ತಿನ್ನಿ

ಯಾವುದಕ್ಕೂ ನಿಧಾನವಾಗಿ ತಿನ್ನಿ

ಆಹಾರವನ್ನು ನಿಧಾನವಾಗಿ ತಿನ್ನಿ ಮತ್ತು ಚೆನ್ನಾಗಿ ಅಗಿಯಿರಿ. ಏಕೆಂದರೆ ಅಧ್ಯಯನಗಳ ಪ್ರಕಾರ ನಮ್ಮ ಮೆದುಳು ಹೊಟ್ಟೆ ತುಂಬಿರುವುದನ್ನು ಗ್ರಹಿಸಲು 15 ನಿಮಿಷಗಳ ಕಾಲವನ್ನು ತೆಗೆದುಕೊಳ್ಳುತ್ತದೆಯಂತೆ. ಆದ್ದರಿಂದ ನೀವು ಬೇಗ ತಿನ್ನಲು ಆರಂಭಿಸಿದರೆ ಹೆಚ್ಚು ತಿನ್ನುವ ಸಂಭವವಿರುತ್ತದೆಯಂತೆ.

English summary

Health Tips For A Perfect Body

Muscle building, improving muscle mass and muscle toning are perhaps the most elusive aspects of body building Muscle building, improving muscle mass and muscle toning are perhaps the most elusive aspects of body building. Here are powerful foods that build muscle strength. Read on...
Story first published: Saturday, September 19, 2015, 19:22 [IST]
X
Desktop Bottom Promotion