For Quick Alerts
ALLOW NOTIFICATIONS  
For Daily Alerts

ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

|

ಮನುಷ್ಯ ಎಷ್ಟೇ ಆರೋಗ್ಯದಿಂದಿರುವೆನು ಎಂದುಕೊಂಡರೂ ಆರೋಗ್ಯದ ಒಳಮರ್ಮವನ್ನು ಯಾರಿಗೂ ಸುಲಭವಾಗಿ ಅರಿಯಲು ಸಾಧ್ಯವಿಲ್ಲ. ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ಸುದ್ದಿಗಳನ್ನು ಒಮ್ಮೆ ಅವಲೋಕಿಸಿದರೆ ನಿಜಕ್ಕೂ ಬೆಚ್ಚಿಬೀಳುವಂತಹ ಸಂಗತಿಗಳು ಕಾಣಿಸುತ್ತಿವೆ. ಆರೋಗ್ಯವಾಗಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಎದೆ ನೋವಿನ ಕಾರಣಕ್ಕೆ ಪ್ರಾಣ ಬಿಟ್ಟ ಸುದ್ದಿ, ಸದಾ ನಗುನಗುತ್ತಲಿದ್ದ ಮಹಿಳೆ ಕ್ಷಣಮಾತ್ರದಲ್ಲಿ ಬೆನ್ನು ನೋವು ಎಂದು ಪ್ರಾಣ ಬಿಟ್ಟ ಸುದ್ದಿ, ರಾತ್ರಿ ಮಲಗುವಾಗ ಆರೋಗ್ಯದಿಂದಿದ್ದ ಯುವಕ ಬೆಳಗ್ಗೆಯಾಗುತ್ತಲೇ ನಿದ್ರೆಯಲ್ಲೇ ಪ್ರಾಣ ಹೋದ ಸುದ್ದಿ, ಹೀಗೆ ಹಲವಾರು ಜನರು ದಿನನಿತ್ಯ ಪ್ರಾಣ ಕಳೆದುಕೊಳ್ಳುವ ಸುದ್ದಿಗಳನ್ನು ನಾವು ನೋಡುತ್ತಲೇ ಇದ್ದೇವೆ.

What Does Jogging Do To Your Brain?

ಈ ಸುದ್ದಿಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದಾಗ ಹೊರಬರುವ ಸತ್ಯವೇನೆಂದರೆ ಇವರಿಗೆ ವ್ಯಾಯಾಮದ ತೀವ್ರ ಕೊರತೆ ಹಾಗೂ ಶಾರೀರವನ್ನು ಸದಾ ಚಟುವಟಿಕೆಯಲ್ಲಿಡಬೇಕಾದ ಅನಿವಾರ್ಯತೆಯ ಬಗ್ಗೆ ಎಲ್ಲರಿಗೂ ತಿಳಿಸುತ್ತದೆ. ಈಗಿನ ಜನಾಂಗವು ಹೆಚ್ಚು ಕಷ್ಟವಲ್ಲದ, ದೇಹಕ್ಕೆ ಶ್ರಮ ನೀಡದ ಮತ್ತು ಆರಾಮದಾಯಕ ಬದುಕನ್ನು ನಡೆಸಲು ಇಚ್ಛಿಸುತ್ತಿದ್ದಾರೆ. ಆದರೆ ಇದರಿಂದ ಉಂಟಾಗುವ ಪರಿಣಾಮ ಮಾತ್ರ

ಘೋರವಾಗಿದೆ. ನಮ್ಮ ಶಾರೀರವನ್ನು ಸದಾ ಚಟುವಟಿಕೆಯಲ್ಲಿಡಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳುವ ಕಾಲ ಒದಗಿಬಂದಿದೆ. ಮೊದಲಿಗೆ ಬೆಳಗಿನ ವ್ಯಾಯಮ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಬೆಳಗಿನ ವ್ಯಾಯಾಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತಕರ. ಮುಂಜಾನೆಯ ನಡಿಗೆ, ಆರೋಗ್ಯದ ಕಡೆಗೆ...!

ಜೊತೆಗೆ ಸ್ವಲ್ಪ ಮಟ್ಟಿಗೆ ನಿಧಾನವಾಗಿ ಓಡುವುದು ಅಥವಾ ಜಾಗಿಂಗ್ ಮಾಡುವುದು ಹಿತಕರ ಅನುಭವವನ್ನು ನೀಡುತ್ತದೆ. ಇದರಿಂದ ಮನಸ್ಸಿಗೆ ಶಾಂತಿ, ಬುದ್ಧಿಗೆ ಚುರುಕು ಮತ್ತು ಆಹ್ಲಾದಕರ ಅನುಭವವನ್ನು ನೀಡಿ ಆರೋಗ್ಯವನ್ನು ಸದಾ ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ. ಅಲ್ಲದೇ ಮನುಷ್ಯನ ಸೋಮಾರಿತನವನ್ನು ದೂರಮಾಡಿ ಹೆಚ್ಚು ಕ್ರಿಯಾಶೀಲಗೊಳಿಸಿ ಸದಾ ಚುರುಕಾಗಿರುವಂತೆ ನೋಡಿಕೊಳ್ಳುತ್ತದೆ. ಇದು ವೈಜ್ಞಾನಿಕವಾಗಿಯೂ ಸಹ ಸಾಬೀತಾಗಿದೆ. ಈಗಿನ ಕಾಲದಲ್ಲಿ ನೀವು ಆರೋಗ್ಯವಾಗಿರುವಿರೆಂದರೆ ನಿಜಕ್ಕೂ ಹೆಮ್ಮೆ ಪಡಲೇಬೇಕು. ಈ ಆರೋಗ್ಯ ನಿಮಗೆ ಸಿಗಬೇಕಾದರೆ ವ್ಯಾಯಮವೂ ಅದರ ಒಂದು ಭಾಗವಾಗಿ ಎಲ್ಲರೂ ಅನುಸರಿಸಬಹುದಾದ ಪ್ರಕ್ರಿಯೆಯಾಗಿದೆ.

ಮೆದುಳಿನಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯ ಪ್ರಕ್ರಿಯೆಯನ್ನು ನ್ಯೂರೋಜೆನೆಸಿಸ್ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಇಲಿಗಳ ಮೇಲೆ ಅಧ್ಯಯನವೊಂದನ್ನು ನಡೆಸಲಾಯಿತು. ಈ ಅಧ್ಯಯನದಲ್ಲಿ ಆಸಕ್ತಿಕರ ವಿಷಯವೊಂದು ಹೊರಬಿದ್ದಿತು. ಅದೇನೆಂದರೆ, ಹೆಚ್ಚು ಓಡುವ ಇಲಿಗಳಲ್ಲಿ ಮೆದುಳಿನ ಜೀವಕೋಶಗಳ ಉತ್ಪತ್ತಿಯು ಕ್ರಮವಾಗಿ ಹೆಚ್ಚಿರುವುದು ಕಂಡುಬಂದಿತು. ಹಾಗೂ ಈ ಇಲಿಗಳಲ್ಲಿ ಅಕ್ಕಪಕ್ಕದ ವಾತಾವರಣವವನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣ ಹೊಂದಿರುವುದನ್ನು ಗಮನಿಸಲಾಯಿತು.

ಈ ಸಂಶೋಧನೆಯಿಂದ ಹೊರಬಿದ್ದ ಫಲಿತಾಂಶದ ಪ್ರಕಾರ ಕ್ರಮವಾದ ವ್ಯಾಯಾಮವು ಮೆದುಳಿನ ಗುಣಮಟ್ಟವನ್ನು ಸಕಾರಾತ್ಮಕವಾಗಿ ಹೆಚ್ಚಿಸುತ್ತದೆ. ಮೆದುಳು ತನ್ನ ವಿಭಜಿತ ಮಾದರಿಯಿಂದ ಅಕ್ಕಪಕ್ಕದ ವಾತಾವರಣವನ್ನು ಆಲೋಚಿಸುವ ಗುಣವನ್ನು ಹೊಂದಿದೆ. ಉದಾಹರಣೆಗೆ ಚೆಸ್ ಆಟಗಾರನು ಗೆಲ್ಲಬೇಕಾದರೆ ಚೆಸ್ ಆಡುವಾಗ ಆಟದ ಎಲ್ಲಾ ವಸ್ತುಗಳನ್ನು, ಆಟಿಕೆ ಮತ್ತು ಆಟದ ವಿನ್ಯಾಸವನ್ನು ಅರಿಯಬೇಕಾಗುತ್ತದೆ.

ಅಧ್ಯಯನದ ಒಂದು ಭಾಗವಾಗಿ, ವಿಜ್ಞಾನಿಗಳು ಎರಡು ರೀತಿಯ ಇಲಿಗಳನ್ನು ಬಳಸಿಕೊಂಡಿದ್ದರು. ಮೊದಲ ವರ್ಗದ ಇಲಿಗಳನ್ನು ನಿಷ್ಕ್ರಿಯವಾಗಿ ಇರುವಂತೆ ಮಾಡಿ, ಇನ್ನೊಂದು ವರ್ಗದ ಇಲಿಗಳನ್ನು ಚಕ್ರಗಳ ಮೇಲೆ ಓಡುವಂತೆ ಮಾಡಿದ್ದರು. ಕಾಲಾನಂತರ ಎರಡೂ ವರ್ಗದ ಇಲಿಗಳನ್ನು ಪ್ರತ್ಯೇಕವಾದ ಮೆದುಳು ಪರೀಕ್ಷೆಗೆ ಒಳಪಡಿಸಿದರು. ಈ ಪರೀಕ್ಷೆಯಲ್ಲಿ ಎರಡನೇ ವರ್ಗದ ಇಲಿಗಳಲ್ಲಿ ಹೆಚ್ಚು ಕ್ರಿಯಾಶೀಲತೆ ಹಾಗೂ ವಾತಾವರಣವನ್ನು ಗುರುತಿಸುವಿಕೆಯು ಹೆಚ್ಚಿರುವುದನ್ನು ಗಮನಿಸಿದರು. ಇಲಿಗಳ ಗುಂಪಿನಲ್ಲಿ, ಹೆಚ್ಚು ಓಡಿದ ಇಲಿಗಳಲ್ಲಿ ಪರಿಸರವನ್ನು ಅವಲೋಕಿಸುವ ಗುಣ ಹೆಚ್ಚಿರುವುದನ್ನು ಸಂಶೋಧಕರು ಗಮನಿಸಿದರು.

ಅಂತಿಮವಾಗಿ ವ್ಯಾಯಾಮದಿಂದ ಮೆದುಳಿನ ಚಟುವಟಿಕೆಯು ಬದಲಾಗುತ್ತದೆ ಅಥವಾ ಹೆಚ್ಚಾಗುತ್ತದೆ ಎಂಬುದು ಗೊತ್ತಾಯಿತು. ಅಲ್ಲದೇ ಹೆಚ್ಚು ಓಡಿದ ಇಲಿಗಳ ಮೆದುಳನ್ನು ವಿಶೇಷ ಪರೀಕ್ಷೆಗೆ ಒಳಪಡಿಸಲಾಯಿತು. ಈ ಇಲಿಗಳ ಮೆದುಳಿನಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗಿರುವುದನ್ನು ವಿಜ್ಞಾನಿಗಳು ಗಮನಿಸಿದರು. ಇದರಿಂದ ತಿಳಿಯುವುದೇನೆಂದರೆ ಕ್ರಮವಾದ ಓಟ ಶಾರೀರಕ್ಕೆ ಮಾತ್ರವಲ್ಲದೆ ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸಿ ನ್ಯೂರೋಜೆನೆಸಿಸ್ ಪ್ರಕ್ರಿಯೆಯಿಂದ ಮೆದುಳಿಗೆ ತಾಜಾ ಅನುಭವ ನೀಡುತ್ತದೆ.

ವ್ಯಾಯಮದಿಂದ ಮೆದುಳಿನ ಜೀವಕೋಶಗಳು ಉತ್ಪತ್ತಿಯಾಗಿ ನ್ಯೂರೋಜೆನೆಸಿಸ್ ಪ್ರಕ್ರಿಯೆ ಜರುಗುವುದಕ್ಕೆ ಕಾರಣವಾಗುತ್ತದೆ ಎಂಬುದನ್ನು ಈ ಅಧ್ಯಯನದಿಂದ ತಿಳಿಯಬಹುದಾಗಿರುತ್ತದೆ.


ಈ ಗುಣಗಳು ಪ್ರಾಣಿಗಳನ್ನು ಹೆಚ್ಚು ಕ್ರಿಯಾಶೀಲಗೊಳಿಸುವುದಲ್ಲದೇ ಮಾನವರಿಗೂ ಹೆಚ್ಚು ಉಪಯುಕ್ತಕರ. ವ್ಯಾಯಾಮವು ಮನುಷ್ಯನ ಚುರುಕುತನವನ್ನು ಹೆಚ್ಚಿಸಿ ಸದಾ ಆಹ್ಲಾದಕರವಾಗಿರುವಂತೆ ಮಾಡಿ ಆರೋಗ್ಯಕರವಾದ ಬೆಳವಣಿಗೆಗೆ ನೆರವಾಗಿ ನಿಮ್ಮ ಬಾಳನ್ನು ಬಂಗಾರವಾಗಿಸುತ್ತದೆ.
English summary

What Does Jogging Do To Your Brain?

A recent study says that jogging (or any exercise) can help a great deal in making you sharp. New cells are produced in your brain and this helps you a lot in enhancing your memory.
Story first published: Tuesday, December 22, 2015, 20:01 [IST]
X
Desktop Bottom Promotion