For Quick Alerts
ALLOW NOTIFICATIONS  
For Daily Alerts

ಗಿಡಮೂಲಿಕೆಗಳ ರಾಣಿ 'ತುಳಸಿ'-ಆರೋಗ್ಯದ ಸಂಜೀವಿನಿ

|

ಪ್ರತಿ ಗಿಡಮೂಲಿಕೆಯಲ್ಲೂ ಒಂದು ವಿಶಿಷ್ಟ ಗುಣವಿದೆ. ಒಂದೊಂದು ವಿಧದಲ್ಲಿ ಒಂದೊಂದು ಮೂಲಿಕೆ ಅಥವಾ ಗಿಡದ ಯಾವುದೋ ಒಂದು ಭಾಗ ಆರೋಗ್ಯಕ್ಕೆ ಪೂರಕವಾಗಿದೆ. ಆದರೆ ತುಳಸಿ ಎಲೆಗಳಲ್ಲಿ ಒಂದಕ್ಕಿಂತ ಹೆಚ್ಚು ಗುಣಗಳಿರುವುದು ಇದಕ್ಕೆ 'ಗಿಡಮೂಲಿಕೆಗಳ ತಾಯಿ' ಅಥವಾ 'ಗಿಡಮೂಲಿಕೆಗಳ ರಾಣಿ' ಎಂಬ ಬಿರುದನ್ನು ನೀಡಲು ಕಾರಣವಾಗಿದೆ.

ನೋಡಲು ಪುಟ್ಟದಾಗಿರುವ ಈ ಎಲೆಗಳು ತಲೆನೋವನ್ನು ಗುಣಪಡಿಸುವಲ್ಲಿ, ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಮೊದಲಾದ ಚಿಕ್ಕಪುಟ್ಟ ತೊಂದರೆಗಳನ್ನು ಲೀಲಾಜಾಲವಾಗಿ ನಿವಾರಿಸುವುದು ಮಾತ್ರವಲ್ಲದೆ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಇದಕ್ಕೆ ಹೆಚ್ಚೇನೂ ಮಾಡಬೇಕಾಗಿಲ್ಲ, ಪ್ರತಿದಿನ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಅಥವಾ ಮೂರು ತುಳಸಿ ಎಲೆಯನ್ನು ಜಜ್ಜಿ ಅದರ ರಸವನ್ನು ಒಂದು ಲೋಟ ತಣ್ಣೀರಿನೊಂದಿಗೆ ಮಿಶ್ರ ಮಾಡಿ ಕುಡಿಯಬೇಕು ಅಷ್ಟೇ. ತುಳಸಿ ಎಲೆಯ ಆರೋಗ್ಯಕಾರಿ ಉಪಯೋಗಗಳು

What are the health benefits of basil?

ತುಳಸಿಯ ಉತ್ತಮ ಗುಣಗಳನ್ನು ಪಟ್ಟಿಮಾಡುತ್ತಾ ಹೋದರೆ ಹತ್ತು ಹಲವು ವಿಷಯಗಳು ಅನಾವರಣಗೊಳ್ಳುತ್ತವೆ. ತುಳಸಿಯ ಇನ್ನೊಂದು ಮುಖ್ಯ ಗುಣವೆಂದರೆ ಚರ್ಮಕ್ಕೆ ಒಳಗಿನಿಂದ ನೀಡುವ ಪೋಷಣೆ. ಇದರಿಂದ ಮೊಡವೆ, ದದ್ದು, ಕಲೆ ಮೊದಲಾದವು ನಿವಾರಣೆಯಾಗುವ ಜೊತೆಗೇ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೇ ತುಳಸಿಯ ಎಲೆಗಳ ಎಣ್ಣೆ ಸಹಾ (essential oil) ಯ ರೂಪದಲ್ಲಿ ಲಭ್ಯವಿದೆ. ನೇರವಾಗಿ ಸೇವಿಸಲು ಸಾಧ್ಯವಾಗುವಂತೆ ಮಾತ್ರೆಗಳ ರೂಪದಲ್ಲಿಯೂ ಲಭ್ಯವಿದೆ. ಆದರೆ ಅತ್ಯುತ್ತಮ ಪರಿಣಾಮಕ್ಕಾಗಿ ಈಗ ತಾನೇ ಕಿತ್ತ ತುಳಸಿ ಎಲೆಯನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಜಗಿದು ನೀರಿನೊಂದಿಗೆ ನುಂಗುವುದೇ ಸರಿ ಎಂದು ಆಯುರ್ವೇದ ತಿಳಿಸುತ್ತದೆ. ತುಳಸಿಯ ಉತ್ತಮ ಪರಿಣಾಮಗಳ ಬಗ್ಗೆ ಇನ್ನೂ ಹಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪಡೆಯಿರಿ:

ಹೃದಯಕ್ಕೆ ಒಳ್ಳೆಯದು
ದೇಹದಲ್ಲಿ ಸೇರಿಕೊಂಡಿರುವ ಕೊಲೆಸ್ಟ್ರಾಲ್‌ನ ಮಟ್ಟವನ್ನು ಸರಿಪಡಿಸುವುದಲ್ಲಿ, ತುಳಸಿ ಎಲೆಯು ಹೃದಯಕ್ಕೆ ಅಗತ್ಯವಿರುವ ಅತ್ಯಂತ ಆರೋಗ್ಯಕರ ಗಿಡಮೂಲಿಕೆಗಳ ಪಟ್ಟಿಯಲ್ಲಿ ಒಂದಾಗಿದೆ. ಅದು ಹೃದಯದ ದೌರ್ಬಲ್ಯ ಮತ್ತು ಪಾರ್ಶ್ವವಾಯುಗಳ ಅಪಾಯ ತಡೆಯುತ್ತದೆ.

ಖಿನ್ನತೆಗೆ ಸೂಕ್ತ ಮನೆಮದ್ದು
ಪ್ರತಿಯೊಬ್ಬನೂ ಉತ್ತಮ ಆರೋಗ್ಯ ಪಡೆಯಲು ಒಂದು ದಿನಕ್ಕೆ ಕನಿಷ್ಠ ಪಕ್ಷ ಹನ್ನೆರಡು ತುಳಸಿ ಎಲೆಗಳನ್ನು ಅಗಿಯಬೇಕೆಂದು ಶಿಫಾರಸುಮಾಡಲಾಗಿದೆ. ತುಳಸಿಯು ಒಂದು ಒತ್ತಡ-ವಿರೋಧಿ ಮೂಲಿಕೆಯಾದ್ದರಿಂದ ನಿಮ್ಮ ದೇಹ ಮತ್ತು ಖಿನ್ನತೆಯ ಲಕ್ಷಣಗಳ ಕಾಟದಿಂದ ರಕ್ಷಿಸುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ತುಳಸಿ ಚಹಾ ಏಕೆ ಮಹತ್ವಪೂರ್ಣ?

ಮೂತ್ರಪಿಂಡಗಳನ್ನು ಬಲಗೊಳಿಸುತ್ತದೆ
ತುಳಸಿ ಎಲೆಯು ಮೂತ್ರಪಿಂಡಗಳ ಆರೋಗ್ಯವನ್ನು ಬಲಪಡಿಸುವ ಮೂಲಕ ಆರೋಗ್ಯವನ್ನು ನಿರ್ವಹಿಸುವ ಒಂದು ಅತಿ ಅತ್ಯಂತ ಪರಿಣಾಮಕಾರಿ ಸಸ್ಯವಾಗಿದೆ. ಇದಲ್ಲದೆ ಮೂತ್ರಪಿಂಡದಲ್ಲಿ ಕಲ್ಲು ಕಂಡು ಬಂದಾಗ ತುಳಸಿ ಎಲೆಯ ರಸವನ್ನು ಜೇನುತುಪ್ಪದ ಜೊತೆ ಮಿಶ್ರಣಮಾಡಿ ಆರು ತಿಂಗಳು ಸೇವಿಸಿದರೆ ಕಲ್ಲನ್ನು ಹೊರಹಾಕಲು ಸಹಾಯಕವಾಗುತ್ತದೆಯೆಂದು ಸೂಚಿಸಲಾಗಿದೆ.

ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ

ವಸಡಿನಲ್ಲಿ ಕಾಣುವ ರಕ್ತಸ್ರಾವ, ಕೆಟ್ಟ ಉಸಿರಾಟ, ದಂತಕ್ಷಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತುಳಸಿಯು ಬಹಳ ಪರಿಣಾಮಕಾರಿಯೆಂದು ಸಾಬೀತು ಮಾಡಬಹುದು. ತುಳಸಿಯಲ್ಲಿರುವ ಆಂಟಿ-ಬ್ಯಾಕ್ಟೀರಿಯ ಮತ್ತು ಪ್ರತಿಜೀವಕ (ಆಂಟಿಬಯಾಟಿಕ್) ಗುಣಲಕ್ಷಣಗಳ ಮೂಲಕ ಮೌಖಿಕ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗಲು ಸಹಾಯಮಾಡಬಹುದು. ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿದ ತುಳಸಿ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಮಿಶ್ರಣಮಾಡಿ ಅದರಿಂದ ಪ್ರತಿದಿನವೂ ಹಲ್ಲುಗಳಿಗೆ ಆರೋಗ್ಯಕರ ಮಸಾಜ್ ನೀಡಲು ಬಳಸಬೇಕು.

ಕಣ್ಣುಗಳಿಗೆ ಅತ್ಯುತ್ತಮ
ತುಳಸಿಯಲ್ಲಿ ವಿಟಮಿನ್ ಏ ಇರುವುದರಿಂದ ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದು ಭವ್ಯವಾದ ಮೂಲಿಕೆ. ಅದು ಕಣ್ಣಿನ ರೋಗಗಳಾದ ಇರುಳುಗಣ್ಣು ಮತ್ತು ಕಣ್ಣುನೋವು ಬರುವುದನ್ನು ತಪ್ಪಿಸುತ್ತದೆ. ಕಣ್ಣುನೋವಿನ ಚಿಕಿತ್ಸೆಗೆ ಕೆಲವು ತುಳಸಿಎಲೆಯ ರಸದ ಹನಿಗಳು ಹಾಕಿದರೆ ವಾಸಿಯಾಗುವುದು ಒಂದು ಪವಾಡವೆಂದೇ ಹೇಳಬಹುದು.

English summary

What are the health benefits of basil?

Holy Basil, is worshipped as a goddess in our country, and I need not mention the faith our great grandfathers and grandmothers had in this age old herb. Basil contains flavonoids like orientin and eugenol; which account for its anti-oxidant properties. It is good for all body organs. It protects the body organs like heart, liver, kidney, lungs etc. from the effect of free radicals. today boldsky share some important health benefits of basil have a look
Story first published: Wednesday, October 14, 2015, 17:43 [IST]
X
Desktop Bottom Promotion