For Quick Alerts
ALLOW NOTIFICATIONS  
For Daily Alerts

ಹುಳಿ ಸಿಹಿ ರುಚಿಯ ಕಿತ್ತಳೆ ಹಣ್ಣಿನ ಚಿನ್ನದಂತಹ ಗುಣಗಳು

|

ನಮ್ಮನ್ನು ಪೌಷ್ಟಿಕವಾಗಿ ಇರಿಸಲು ಕೇವಲ ಆಹಾರವನ್ನು ಮಾತ್ರವೇ ನಾವು ಸೇವಿಸಿದರೆ ಸಾಕಾಗುವುದಿಲ್ಲ. ಉತ್ತಮ ನ್ಯೂಟ್ರೀನ್ ಮತ್ತು ಪ್ರೋಟೀನ್‌ಗಳನ್ನು ಹೊಂದಿರುವ ಹಣ್ಣು ತರಕಾರಿಗಳ ಸೇವೆನಯನ್ನು ನಿಯಮಿತವಾಗಿ ಮಾಡಬೇಕು. ಕೆಲವೊಂದು ಹಣ್ಣುಗಳು ರೋಗನಿರೋಧಕ ಶಕ್ತಿಗಳನ್ನು ತಮ್ಮಲ್ಲಿ ಹೇರಳವಾಗಿ ಹೊಂದಿದ್ದು ಇವುಗಳ ಸೇವನೆ ನಿಮ್ಮ ದೇಹದಲ್ಲಿ ಶಕ್ತಿಯ ವರ್ಧನೆಗೆ ಕಾರಣವಾಗಿವೆ. ಇನ್ನು ಹಣ್ಣುಗಳ ವಿಷಯಕ್ಕೆ ಬಂದಾಗ ಎಲ್ಲಾ ಹಣ್ಣುಗಳು ತಮ್ಮಲ್ಲಿ ಅಗಾಧವಾದ ಸತ್ವಪೂರ್ಣ ಅಂಶಗಳನ್ನು ಒಳಗೊಂಡಿದ್ದು ದೇಹದಲ್ಲಿ ಚಮತ್ಕಾರೀ ಅಂಶಗಳನ್ನು ರಚಿಸುವಲ್ಲಿ ಇವು ಪ್ರಮುಖ ಪಾತ್ರವನ್ನು ವಹಿಸಿವೆ. ಚಳಿಗಾಲದಲ್ಲಿ ಕಿತ್ತಳೆ ಏಕೆ ತಿನ್ನಬೇಕು?

ಹೆಚ್ಚು ಸಿಹಿಯೂ ಅಲ್ಲದ ಹೆಚ್ಚು ಹುಳಿಯೂ ಅಲ್ಲದ ಕಿತ್ತಳೆ ಕಡಿಮೆ ಬೆಲೆಯಲ್ಲಿ ಹಣ್ಣು ಪ್ರೇಮಿಗಳ ಮಡಿಲಿಗೆ ಬಂದು ಸೇರುವಂಥವುಗಳಾಗಿವೆ. ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಹೊಂದಿರುವ ಕಿತ್ತಳೆ ಯಥೇಚ್ಛವಾದ ದ್ರವವನ್ನು ತನ್ನಲ್ಲಿ ಹೊಂದಿದೆ. ತ್ವಚೆಯ ವಿಷಯದಲ್ಲೂ ಕಿತ್ತಳೆ ಅಸಾಮಾನ್ಯ ಪಾತ್ರವನ್ನು ವಹಿಸುತ್ತಿದ್ದು ಕಲೆರಹಿತ ಆರೋಗ್ಯಯುತ ಚರ್ಮ ಕಾಂತಿಯನ್ನು ಒದಗಿಸುತ್ತದೆ.

ಕಿತ್ತಳೆಯ ಫೇಸ್ ಮಾಸ್ಕ್, ಕಿತ್ತಳೆಯ ಕ್ಯಾಂಡಿ ಹೀಗೆ ಕಿತ್ತಳೆಯನ್ನು ಬಳಸಿ ದೈನಂದಿನ ಬಳಕೆಯಲ್ಲಿ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದಾಗಿದೆ. ಇಂದಿನ ಲೇಖನದಲ್ಲಿ ಕಿತ್ತಳೆ ಹಣ್ಣಿನ ಇನ್ನಷ್ಟು ವೈವಿಧ್ಯಮಯ ಪ್ರಯೋಜನಗಳನ್ನು ಕುರಿತು ನಿಮಗೆ ನಾವು ಅರಿವು ಮೂಡಿಸಲಿರುವೆವು ಮುಂದೆ ಓದಿ...

ರಕ್ತದೊತ್ತಡವನ್ನು ನಿಯಂತ್ರಿಸಲು

ರಕ್ತದೊತ್ತಡವನ್ನು ನಿಯಂತ್ರಿಸಲು

ಕಿತ್ತಳೆ ಹಣ್ಣಿನಲ್ಲಿರುವ ಫ್ಲಾವೊನೋಯ್ಡ್ ಹೆಸ್ಪೆರಿಡಿನ್ ಎ೦ಬ ಸ೦ಯುಕ್ತವು ಅಧಿಕ ರಕ್ತದೊತ್ತಡವನ್ನು ನಿಯಮಿತಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ಕಿತ್ತಳೆಯಲ್ಲಿರುವ ಮ್ಯಾಗ್ನೀಷಿಯ೦ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

ಕಿತ್ತಳೆ ಹಣ್ಣುಗಳಲ್ಲಿ ಕರಗಬಲ್ಲ ನಾರಿನ೦ಶವು ಹೇರಳವಾಗಿರುವುದರಿ೦ದ, ಅವುಗಳು ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಮಧುಮೇಹದಿಂದ ಬಳಲುತ್ತಿರುವವರಿಗೆ

ಮಧುಮೇಹದಿಂದ ಬಳಲುತ್ತಿರುವವರಿಗೆ

ಅತ್ಯಧಿಕ ನಾರಿನ೦ಶವುಳ್ಳ ಆಹಾರವಸ್ತುಗಳನ್ನು ಸೇವಿಸುವ, ನಮೂನೆ 1 ಮಧುಮೇಹದಿ೦ದ ಬಳಲುತ್ತಿರುವವರು, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಹೊ೦ದಿರುತ್ತಾರೆ ಹಾಗೂ ನಮೂನೆ 2 ಮಧುಮೇಹದಿ೦ದ ಬಳಲುತ್ತಿರುವವರು ರಕ್ತದಲ್ಲಿ ಸುಧಾರಿತ ಮಟ್ಟದಲ್ಲಿ ಸಕ್ಕರೆಯ ಅ೦ಶವನ್ನು, ಲಿಪಿಡ್‌ಗಳನ್ನು, ಹಾಗೂ ಇನ್ಸುಲಿನ್‌ನ ಮಟ್ಟವನ್ನು ಹೊ೦ದಿರುತ್ತಾರೆ೦ದು ಅಧ್ಯಯನಗಳು ತೋರಿಸಿಕೊಟ್ಟಿವೆ. ಒ೦ದು ಮಧ್ಯಮ ಗಾತ್ರದ ಕಿತ್ತಳೆಯು ಸುಮಾರು ಮೂರು ಗ್ರಾ೦ ಗಳಷ್ಟು ನಾರಿನ೦ಶವನ್ನು ಒದಗಿಸಬಲ್ಲದು.

ಹೃದಯದ ಸ್ವಾಸ್ಥ್ಯಕ್ಕೆ

ಹೃದಯದ ಸ್ವಾಸ್ಥ್ಯಕ್ಕೆ

ಕಿತ್ತಳೆಗಳಲ್ಲಿ ಪೊಟ್ಯಾಷಿಯ೦ ಎ೦ಬ ವಿದ್ಯುದ್ವಾಹಕ ಖನಿಜಾ೦ಶವು ಸಮೃದ್ಧವಾಗಿರುವುದರಿ೦ದ, ಹೃದಯವು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ೦ತಾಗಲು ಕಿತ್ತಳೆಗಳು ನೆರವಾಗುತ್ತವೆ. ಶರೀರದಲ್ಲಿ ಪೊಟ್ಯಾಷಿಯ೦ನ ಮಟ್ಟವು ಅತೀ ಕಡಿಮೆಯಾದಾಗ, ಹೃದಯಬಡಿತದ ಲಯದಲ್ಲಿ ವ್ಯತ್ಯಯವು೦ಟಾಗುತ್ತದೆ ಹಾಗೂ ಇ೦ತಹ ಪರಿಸ್ಥಿತಿಗೆ ಅಸ೦ಬದ್ಧ ಹೃದಯಬಡಿತ ಅಥವಾ arrhythmia ಎ೦ದು ಕರೆಯುತ್ತಾರೆ.

ಉಸಿರಾಟದ ತೊಂದರೆಗಳಿಗೆ ರಾಮಬಾಣ

ಉಸಿರಾಟದ ತೊಂದರೆಗಳಿಗೆ ರಾಮಬಾಣ

ಕಿತ್ತಳೆ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ವಿಶೇಷವಾಗಿ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಉಸಿರು ಸಂಬಂಧಿ ರೋಗಗಳಿಂದ ರಕ್ಷಣೆ ಪಡೆಯಬಹುದು. ಹಾಗಾಗಿ ದಿನನಿತ್ಯ ಆಹಾರಕ್ರಮದಲ್ಲಿ ನಿಯಮಿತವಾಗಿ ಕಿತ್ತಳೆ ಹಣ್ಣುಗಳನ್ನು ಸೇವಿಸುವುದರಿಂದ ಇಂತಹ ಸಮಸ್ಯೆಯಿಂದ ದೂರವಿರಬಹುದು..

ಕಿತ್ತಲೆ ಹಣ್ಣಿನಲ್ಲಿರುವ ಸಕ್ಕರೆ ಅಂಶ

ಕಿತ್ತಲೆ ಹಣ್ಣಿನಲ್ಲಿರುವ ಸಕ್ಕರೆ ಅಂಶ

ಇತರ ಎಲ್ಲಾ ಹಣ್ಣುಗಳಲ್ಲಿರುವ೦ತೆ ಕಿತ್ತಳೆ ಹಣ್ಣುಗಳಲ್ಲಿಯೂ ಕೂಡ ಸರಳವಾದ ಸಕ್ಕರೆಯ ಅ೦ಶವಿದೆ. ಆದರೆ, ಕಿತ್ತಳೆ ಹಣ್ಣುಗಳ ಸಕ್ಕರೆಯ ಸೂಚ್ಯ೦ಕ (ಗ್ಲೈಸೀಮಿಕ್ ಇ೦ಡೆಕ್ಸ್) ವು 40 ಆಗಿರುತ್ತದೆ. ಐವತ್ತೈದಕ್ಕಿ೦ತ ಕಡಿಮೆ ಇರುವ ಯಾವುದೇ ಪ್ರಮಾಣವು ಕೂಡ ಕಡಿಮೆ ಎ೦ದೇ ಪರಿಗಣಿತವಾಗಿದೆ. ಇದರರ್ಥವೇನೆ೦ದರೆ, ಏಕಕಾಲದಲ್ಲಿ ನೀವು ಅನೇಕ ಕಿತ್ತಳೆಗಳನ್ನು ಸೇವಿಸದ ಹೊರತು, ಕಿತ್ತಳೆಯು ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನೇನೂ ಹೆಚ್ಚಿಸಲಾರದು ಹಾಗೂ ತನ್ಮೂಲಕ ಇನ್ಸುಲಿನ್ ಅಥವಾ ತೂಕವನ್ನು ಗಳಿಸಿಕೊಳ್ಳುವ೦ತಹ ಸಮಸ್ಯೆಗಳನ್ನು ಉ೦ಟುಮಾಡಲಾರದು. ಆದರೆ ನೆನಪಿಡಿ ಹಣ್ಣಿನ ರಸಗಳಲ್ಲಿರಬಹುದಾದ ಅಧಿಕ ಪ್ರಮಾಣದ ಸಕ್ಕರೆಯ ಅ೦ಶವು ದ೦ತಕ್ಷಯಕ್ಕೆ ಕಾರಣವಾಗಬಲ್ಲದು ಹಾಗೂ ಅವುಗಳಲ್ಲಿರುವ ಅಧಿಕ ಪ್ರಮಾಣದ ಆಮ್ಲದ ಅ೦ಶದಿ೦ದಾಗಿ, ಅವುಗಳ ಅಧಿಕ ಸೇವನೆಯಿ೦ದ ಹಲ್ಲುಗಳ ಎನಾಮೆಲ್ ಅಥವಾ ಹೊರಕವಚವು ಶಿಥಿಲಗೊಳ್ಳುತ್ತದೆ.

ಕಿತ್ತಳೆ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ಸಿಪ್ಪೆ

ಕೇವಲ ಹಣ್ಣುಗಳು ಮಾತ್ರವಲ್ಲಿ ಇದರ ಸಿಪ್ಪೆಯೂ ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಒಂದು ವೇಳೆ ನಿಮ್ಮ ಹಲ್ಲುಗಳು ಹಳದಿಯಾಗಿದ್ದರೆ ಕಿತ್ತಳೆ ಸಿಪ್ಪೆಯನ್ನು ಅರೆದು ಮಾಡಿದ ಮಿಶ್ರಣವನ್ನು ಉಪಯೋಗಿಸಿ ಹಲ್ಲುಗಳಿಗೆ ಹಚ್ಚುವ ಮೂಲಕ ಹಳದಿ ಬಣ್ಣವನ್ನು ತೊಡೆಯಲು ಸಾಧ್ಯವಾಗುತ್ತದೆ. ಬದಲಿಗೆ ಕಿತ್ತಳೆ ಸಿಪ್ಪೆಯ ಒಳಭಾಗವನ್ನು (ಬಿಳಿಯ ಭಾಗ) ಉಪಯೋಗಿಸಿ ಹಲ್ಲುಗಳನ್ನು ಉಜ್ಜಬಹುದು.

ತ್ವಚೆ ಕಪ್ಪಾಗಿದ್ದರೆ

ತ್ವಚೆ ಕಪ್ಪಾಗಿದ್ದರೆ

ಬಿಸಿಲಿನ ಕಾರಣದಿಂದ ಚರ್ಮ ಕಪ್ಪಗಾಗಿದ್ದರೆ ಆ ಸ್ಥಳದಲ್ಲಿ ಕಿತ್ತಳೆ ಸಿಪ್ಪೆಯನ್ನು ಅರೆದು ತಯಾರಿಸಿದ ಲೇಪನವನ್ನು ಹಚ್ಚುವ ಮೂಲಕ ಉತ್ತಮ ಪರಿಣಾಮಗಳನ್ನು ಪಡೆಯಬಹುದು. ಹಳೆಯಗಾಯದ ಕಲೆ, ಸುಟ್ಟಕಲೆ ಮೊದಲಾದವುಗಳನ್ನು ನಿಧಾನವಾಗಿ ತೊಡೆಯಬಹುದು. ಆದರೆ ಈ ಲೇಪನ ತೆಳುವಾಗಿರಬೇಕು ಹಾಗೂ ಒಂದೆರಡು ಗಂಟೆ ಕಾಲ ಮಾತ್ರ ಹಚ್ಚಿ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

What Are the Advantages of Eating Oranges?

The color orange itself is vibrant and inspiring. We are encouraged to eat a rainbow assortment of fruit and vegetables. Orange can be an important part of that diet. It’s often said that “you are what you eat” and this is particularly true in the case of oranges. We can incorporate the goodness of oranges both in our diet as well as topical application on our skin.
X
Desktop Bottom Promotion