For Quick Alerts
ALLOW NOTIFICATIONS  
For Daily Alerts

ಹುಷಾರ್, ಹಲ್ಲುಗಳ ಜೊತೆ ಎಂದೂ ಆಟವಾಡಬೇಡಿ..!

By Super
|

ಸಾಮಾನ್ಯವಾಗಿ ಹಲ್ಲುಗಳ ಬಗ್ಗೆ ನಾವು ಕಾಳಜಿ ವಹಿಸುವುದು ಬೆಳಿಗ್ಗೆ ಮತ್ತು ರಾತ್ರಿ ಹಲ್ಲುಜ್ಜುವಾಗ ಮಾತ್ರ. ಇನ್ನುಳಿದಂತೆ ದಿನವಿಡೀ ಏನನ್ನಾದರೂ ಕುರುಕುತ್ತಾ, ಏನನ್ನಾದರೂ ತೆರೆಯಬೇಕಿದ್ದರೆ ಸರಳ ಸನ್ನೆಯಂತೆ ಬಳಸುತ್ತಾ ಆರೈಕೆಯನ್ನು ಕಡೆಗಣಿಸುವುದೇ ಹೆಚ್ಚು. ವಾಸ್ತವವಾಗಿ ಹಲ್ಲುಗಳು ಮೂಳೆಗಳಂತೆಯೇ ಗಟ್ಟಿಯಾದ ಅಂಗಗಳಾಗಿದ್ದು ಇತರ ಅಂಗಗಳಿಗೆ ಹೋಲಿಸಿದರೆ ಹೆಚ್ಚಿನ ಆರೈಕೆಯ ಅಗತ್ಯವೇ ಇಲ್ಲ. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ

ಆದರೆ ಕಾಲಕಾಲಕ್ಕೆ ಸರಿಯಾಗಿ ಸ್ವಚ್ಛಗೊಳಿಸುತ್ತಾ ಮತ್ತು ಬಳಕೆಯ ಸಮಯದಲ್ಲಿ ಕೊಂಚ ಜಾಗರೂಕತೆ ವಹಿಸಿದರೆ ಸಾಕು. ಆದರೆ ಈ ಬಗ್ಗೆ ಅರಿವಿಲ್ಲದೇ ನಾವೆಲ್ಲರೂ ನಿತ್ಯದ ಎಷ್ಟೋ ಕೆಲಸಗಳಿಗೆ ಹಲ್ಲುಗಳನ್ನೇ ತಪ್ಪಾಗಿ ಬಳಸುತ್ತೇವೆ ಅಥವಾ ಸರಿಯಾದ ರೀತಿಯಲ್ಲಿ ಕಾಳಜಿ ತೆಗೆದುಕೊಳ್ಳುವುದಿಲ್ಲ. ಹೌದು ನಗರಗಳಲ್ಲಿರುವ ಉಪಾಹಾರ ಗೃಹಗಳಲ್ಲಿ ಕೈ ತೊಳೆಯಲು ವ್ಯವಸ್ಥೆ ಇದ್ದರೂ ಯುವಜನತೆ ತಿಂಡಿ ತಿಂದ ಬಳಿಕ ಶಿಸ್ತಾಗಿ ಟಿಶ್ಯೂ ಪೇಪರ್ ಬಳಸಿ ಕೈ ಒರೆಸಿಕೊಂಡು ನಿರಾಳವಾಗಿ ಹೊರಟುಬಿಡುತ್ತಾರೆ.

ಅರೆರೆ, ಬಾಯಿ ಮುಕ್ಕಳಿಸುವುದು? ಅದೆಲ್ಲಾ ಅವರ ಪಾಲಿಗೆ ಹಳೆಯ ಓಬೀರಾಯನ ಕಾಲದ ವಿಧಾನವಾಗಿದೆ. ಇದೇ ಇವರು ಮಾಡುತ್ತಿರುವ ಬಹುದೊಡ್ಡ ತಪ್ಪು. ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರದ ತುಣುಕುಗಳು ಬ್ಯಾಕ್ಟೀರಿಯಾಗಳಿಗೆ ರಸದೌತಣವಾಗಿದ್ದು ಕೆಲವೇ ದಿನಗಳಲ್ಲಿ ಈ ಬ್ಯಾಕ್ಟೀರಿಯಾಗಳು ಭಾರೀ ವೇಗದಲ್ಲಿ ತಮ್ಮ ಪಡೆಯನ್ನು ಹೆಚ್ಚಿಸಿಕೊಂಡು ಉಂಡ ಮನೆಗೆ ದ್ರೋಹ ಬಗೆಯುವ ಹುನ್ನಾರದಲ್ಲಿರುತ್ತವೆ. ಒಂದು ಸಂಶೋಧನೆಯ ಪ್ರಕಾರ ಹಲ್ಲುಗಳ ಹೊರಕವಚ ದೃಢವಾಗಿದ್ದು ಸಾಮಾನ್ಯವಾಗಿ ಯಾವುದೇ ಕ್ರಿಮಿ ಅಷ್ಟುಸುಲಭವಾಗಿ ಆಕ್ರಮಣ ಮಾಡಲು ಸಾಧ್ಯವಿಲ್ಲ. ಹಲ್ಲುಜ್ಜುವಾಗ ಮಾಡುವ 7 ತಪ್ಪುಗಳು!

ಆದರೆ ಯಾವುದಾದರೂ ಕಾರಣದಿಂದ ತುಂಡಾಗಿದ್ದರೆ ಅಥವಾ ಹೊರಕವಚ ಸವೆದಿದ್ದರೆ ಮಾತ್ರ ಮೃದುವಾದ ಒಳಭಾಗ ಸುಲಭವಾಗಿ ಕ್ರಿಮಿಗಳ ಆಕ್ರಮಣಕ್ಕೆ ತುತ್ತಾಗುತ್ತದೆ. ಆದ್ದರಿಂದ ಹಲ್ಲುಗಳ ರಕ್ಷಣೆ ಎಂದರೆ ಹೊರಕವಚ ಸವೆಯದಿರುವಂತೆ ಮತ್ತು ಎಲ್ಲೂ ತೂತು ಬೀಳದಂತೆ ನೋಡಿಕೊಂಡರೆ ಸಾಕು, ಅಷ್ಟೇ. ಆದರೆ ನಮಗೆ ಅರಿವಿಲ್ಲದೆಯೇ ನಮ್ಮ ಹಲವು ಅಭ್ಯಾಸಗಳು ಹಲ್ಲುಗಳ ರಕ್ಷಣೆಯಲ್ಲಿ ಕೊರತೆ ತೋರುತ್ತವೆ. ಇದು ಹಲ್ಲುಗಳ ಹೊರಕವಚ ಸವೆಯಲು ಅಥವಾ ಘಾಸಿಗೊಳ್ಳಲು ಸಾಧ್ಯವಿದೆ. ಇವು ಯಾವ ಅಭ್ಯಾಸಗಳು ಎಂಬ ಕುತೂಹಲ ಮೂಡಿತೇ? ತಣಿಸಲು ಕೆಳಗಿನ ಸ್ಲೈಡ್ ಶೋ ನಿಮ್ಮ ನೆರವಿಗೆ ಬರಲಿದೆ:

ಹಲ್ಲುಗಳನ್ನು ಒತ್ತಡದಿಂದ ತಿಕ್ಕುವುದು

ಹಲ್ಲುಗಳನ್ನು ಒತ್ತಡದಿಂದ ತಿಕ್ಕುವುದು

ಸಾಮಾನ್ಯವಾಗಿ ಕಲೆಬಿದ್ದ ಮೇಜಿನ ಮೇಲ್ಮೈಯನ್ನು ಸ್ವಚ್ಛಗೊಳಿಸಲು ಮಾರ್ಜಕವನ್ನು ಹಾಕಿ ಗಟ್ಟಿಯಾದ ಬ್ರಶ್ ಉಪಯೋಗಿಸಿ ಗಸಗಸ ಉಜ್ಜುವ ರೀತಿಯಲ್ಲಿಯೇ ನಾವು ನಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳುತ್ತೇವೆ. ಆದರೆ ಗಟ್ಟಿಯಾದ ಬ್ರಶ್ ಮತ್ತು ಒತ್ತಡದಿಂದ ಉಜ್ಜಿಕೊಳ್ಳುವ ಕಾರಣ ನಿಧಾನವಾಗಿಯಾದರು ಹಲ್ಲಿನ ಹೊರಕವಚ ಸವೆಯುತ್ತಾ ಹೋಗುತ್ತದೆ. ಅಲ್ಲದೇ ಇದೇ ಒತ್ತಡ ಮೆದುವಾದ ಒಸಡುಗಳು ಇನ್ನಷ್ಟು ಹೆಚ್ಚು ಸವೆಯಲು ಕಾರಣವಾಗುತ್ತದೆ. ಹೆಚ್ಚು ಸವೆದ ಒಸಡುಗಳ ಕಾರಣ ಹಲ್ಲು ಮತ್ತು ಒಸಡುಗಳ ಸಂದುಗಳು ಇನ್ನಷ್ಟು ಆಳವಾಗುತ್ತಾ ಹೋಗಿ ಆಹಾರ ಸಿಕ್ಕಿಕೊಳ್ಳಲು ಹೆಚ್ಚಿನ ಗುಂಡಿಗಳು ತಯಾರಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಲ್ಲುಗಳನ್ನು ಒತ್ತಡದಿಂದ ತಿಕ್ಕುವುದು

ಹಲ್ಲುಗಳನ್ನು ಒತ್ತಡದಿಂದ ತಿಕ್ಕುವುದು

ಅಲ್ಲದೇ ಒಸಡುಗಳು ಹಲ್ಲುಗಳ ಮೇಲೆ ಹಿಡಿತ ಸಾಧಿಸಲು ವಿಫಲವಾಗಿ ಸಡಿಲವಾಗುತ್ತವೆ ಮತ್ತು ಮುಂದಿನ ಬ್ರಶ್‌ನ ಒತ್ತಡದಲ್ಲಿ ಸುಲಭವಾಗಿ ಹರಿದು ಗಾಯವಾಗಲು ಸಾಧ್ಯವಾಗುತ್ತದೆ. ದಂತವೈದ್ಯರ ಪ್ರಕಾರ ಅಡ್ಡಡ್ಡ ಮತ್ತು ಮೇಲೆ ಕೆಳಗೆ ಒತ್ತಡದಿಂದ ಉಜ್ಜಿಕೊಳ್ಳುವ ಬದಲು ನಯವಾದ ಬ್ರಶ್ ಉಪಯೋಗಿಸಿ ಚಿಕ್ಕದಾದ ವೃತ್ತಾಕರದಲ್ಲಿ ಹಲ್ಲುಗಳನ್ನು ಉಜ್ಜಿಕೊಳ್ಳುವುದು ಉತ್ತಮ ಹಾಗೂ ಪರಿಣಾಮಕಾರಿಯಾಗಿದೆ.

ಹಲ್ಲುಗಳನ್ನು ಬೇಗಬೇಗನೇ ತಿಕ್ಕಿ ಮುಗಿಸಿಬಿಡುವುದು

ಹಲ್ಲುಗಳನ್ನು ಬೇಗಬೇಗನೇ ತಿಕ್ಕಿ ಮುಗಿಸಿಬಿಡುವುದು

ಇಂದಿನ ಧಾವಂತದ ಯುಗದಲ್ಲಿ ಯಾರಿಗೂ ಬೆಳಗ್ಗಿನ ಹೊತ್ತು ಏನನ್ನೂ ಮಾಡಲು ಸಮಯವಿರುವುದಿಲ್ಲ. ಚಕಚಕನೇ ಹಲ್ಲುಜ್ಜಿ, ಅರ್ದಂಬರ್ಧ ಸ್ನಾನ ಮಾಡಿ, ಕೈಗೆ ಸಿಕ್ಕಿದ್ದನ್ನು ತಿನ್ನುತ್ತಲೇ ಬಟ್ಟೆ ತೊಡುತ್ತಾ ಅವಸರವಸರವಾಗಿ ಹೊರಡುವುದೇ ಎಲ್ಲಾ ಮನೆಗಳಲ್ಲಿ ಕಂಡುಬರುವ ದೃಶ್ಯವಾಗಿದೆ. ಆದರೆ ಹಲ್ಲುಗಳ ಕ್ರಿಮಿಗಳಿಗೇನೂ ಈ ಧಾವಂತವಿರುವುದಿಲ್ಲ. ಅವು ನಗುತ್ತಾ ನಿಮ್ಮ ಧಾವಂತವನ್ನೇ ನೋಡುತ್ತಾ ಮಜಾ ಅನುಭವಿಸುತ್ತಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಲ್ಲುಗಳನ್ನು ಬೇಗಬೇಗನೇ ತಿಕ್ಕಿ ಮುಗಿಸಿಬಿಡುವುದು

ಹಲ್ಲುಗಳನ್ನು ಬೇಗಬೇಗನೇ ತಿಕ್ಕಿ ಮುಗಿಸಿಬಿಡುವುದು

ನೀವು ಹೊರಟಾದ ಬಳಿಕ ಅವುಗಳಿಗೆ ಹಬ್ಬ ಮಾಡಲು ಬೇಕಾದಷ್ಟು ಆಹಾರ ಇರುವುದರಿಂದ ಆರಾಮವಾಗಿ ತಿನ್ನುತ್ತಾ ರೋಗವನ್ನೂ ನಿಮ್ಮ ಬಾಯಿಗೆ ದುರ್ವಾಸನೆಯನ್ನೂ ನೀಡಿ ತಮ್ಮ ಸ್ವರ್ಗವನ್ನು ನಿರ್ಮಿಸಿಕೊಳ್ಳುತ್ತವೆ. ಇದು ಆಗಬಾರದೇ? ಕನಿಷ್ಠ ಎರಡು ನಿಮಿಷಗಳವರೆಗಾದರೂ ನಿಧಾನವಾಗಿ ಹಲ್ಲುಜ್ಜಿ. ಬೆಳಿಗ್ಗೆ ಕೊಂಚ ಬೇಗನೇ ಏಳುವ ಅಭ್ಯಾಸದಿಂದ ಆರೋಗ್ಯ ಸುಧಾರಿಸುವ ಜೊತೆಗೇ ಧಾವಂತವಿಲ್ಲದೇ ಕಚೇರಿಗೆ ತಲುಪುವ ಕಾರಣ ಮನಸ್ಸೂ ನಿರಾಳವಾಗಿರುತ್ತದೆ.

ಹಸಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನದೇ ಇರುವುದು

ಹಸಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನದೇ ಇರುವುದು

ನಮ್ಮ ಆಹಾರದಲ್ಲಿ ಸಾಕಷ್ಟು ಹಸಿ ತರಕಾರಿ ಮತ್ತು ಹಣ್ಣುಗಳು ಇರುವುದು ಅವಶ್ಯ. ಜೀರ್ಣಕ್ರಿಯೆಗೆ ಇವು ಎಷ್ಟು ಅಗತ್ಯವೋ, ಅಷ್ಟೇ ಮುಖ್ಯವಾಗಿ ಬಾಯಿಯ ಆರೋಗ್ಯಕ್ಕೂ ಅಗತ್ಯವಾಗಿದೆ. ಹಸಿ ತರಕಾರಿಗಳಲ್ಲಿ ಮತ್ತು ಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಇವನ್ನು ಜಗಿಯುವ ವೇಳೆ ನಯವಾದ ಬ್ರಶ್ ನಂತೆ ಕೆಲಸ ಮಾಡುತ್ತವೆ.

ಹಸಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನದೇ ಇರುವುದು

ಹಸಿ ತರಕಾರಿ ಮತ್ತು ಹಣ್ಣುಗಳನ್ನು ತಿನ್ನದೇ ಇರುವುದು

ಚೆನ್ನಾಗಿ ಜಗಿದು ನುಂಗುವ ಮೊದಲು ಈ ನಾರುಗಳು ಹಲ್ಲು ಮತ್ತು ಒಸಡುಗಳ ಸಂದಿಯಲ್ಲಿ ಸಂಗ್ರಹವಾಗಿದ್ದ ಪಿಟ್ಟು (plaque) ಅಥವಾ ಬಿಳಿಯ ಪುಡಿಯಂತೆ ಅಂಟಿಕೊಂಡಿದ್ದ ಕೊಳೆಯನ್ನು ನಿವಾರಿಸಿ ಹಲ್ಲುಗಳು ಕೊಳೆಯದಂತೆ ಮಾಡುತ್ತದೆ. ಆದ್ದರಿಂದ ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿದು ಬಳಿಕ ಮುಕ್ಕಳಿಸಿ ಉಗುಳುವುದೂ ಅಷ್ಟೇ ಮುಖ್ಯ.

 ದವಡೆಹಲ್ಲುಗಳನ್ನು ಅಲಕ್ಷಿಸುವುದು

ದವಡೆಹಲ್ಲುಗಳನ್ನು ಅಲಕ್ಷಿಸುವುದು

ಸಾಮಾನ್ಯವಾಗಿ ಎಲ್ಲರೂ ಕಣ್ಣಿಗೆ ಕಾಣುವ ಮುಖದ ಮುಂಭಾಗದ ಬಾಚಿಹಲ್ಲುಗಳ ಮುಂಭಾಗಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕಣ್ಣಿಗೆ ಕಾಣದ ದವಡೆ ಮತ್ತು ಬಾಚಿಹಲ್ಲುಗಳ ಹಿಂಭಾಗಗಳಿಗೆ (ನಾಲಿಗೆಯನ್ನು ಒಳಗಿನಿಂದ ಹಲ್ಲುಗಳಿಗೆ ತಾಕಿಸಿದರೆ ತಾಗುವ ಭಾಗ) ಕಡಿಮೆ ಪ್ರಾಮುಖ್ಯತೆ ನೀಡುತ್ತಾರೆ. ಇದು ಹಲ್ಲಿನ ಸ್ವಚ್ಛತೆಯ ದೃಷ್ಟಿಯಿಂದ ದೊಡ್ಡ ತಪ್ಪಾಗಿದೆ. ಸ್ವಚ್ಛಗೊಳಿಸುವಾಗ ಹಲ್ಲಿನ ಎರಡೂ ಬದಿಗಳಿಗೆ ಮತ್ತು ಹಿಂದಿರುವ ದವಡೆಹಲ್ಲುಗಳಿಗೂ ಸರಿಯಾಗಿ ಬ್ರಶ್ ತಾಕುವಂತೆ ಸ್ವಚ್ಛಗೊಳಿಸುವುದು ಅಗತ್ಯ.

ಪ್ರತಿ ಬಾರಿಯೂ ಒಂದೇ ಕ್ರಮ ಅನುಸರಿಸುವುದು

ಪ್ರತಿ ಬಾರಿಯೂ ಒಂದೇ ಕ್ರಮ ಅನುಸರಿಸುವುದು

ಧಾವಂತದಲ್ಲಿ ಹಲ್ಲುಜ್ಜುವ ಕ್ರಿಯೆ ಎಷ್ಟು ಯಾಂತ್ರಿಕವಾಗಿರುತ್ತದೆ ಎಂದರೆ ಪ್ರತಿದಿನವೂ ಒಂದೇ ರೀತಿಯಲ್ಲಿ ಹಲ್ಲುಜ್ಜಿ ಅಭ್ಯಾಸವಾಗಿಬಿಟ್ಟಿರುವ ಕಾರಣ ಮನ ಎತ್ತಲೋ ಯೋಚಿಸುತ್ತಿರುವಾಗ ನಿತ್ಯದ ಅಭ್ಯಾಸದಂತೆ ಕೈಗಳು ಯಾಂತ್ರಿಕವಾಗಿ ಪ್ರತಿದಿನ ಉಜ್ಜಿದಲ್ಲೇ ಉಜ್ಜಿ ಕಾಟಾಚಾರಕ್ಕೆ ಹಲ್ಲುಜ್ಜುವ ಕ್ರಿಯೆಯನ್ನು ಮುಗಿಸುತ್ತಾರೆ. ವಾಸ್ತವವಾಗಿ ಈ ಕ್ರಿಯೆಯಲ್ಲಿ ಹಲ್ಲುಗಳ ಎಷ್ಟೋ ಕಡೆ ಬ್ರಶ್ ತಾಕಿರುವುದೇ ಇಲ್ಲ, ತಾಕಿದ್ದರೂ ಹಲ್ಲಿನ ಆಚಿನ ಅಂಚು ಸ್ವಚ್ಛಗೊಂಡಿರುವುದೇ ಇಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರತಿ ಬಾರಿಯೂ ಒಂದೇ ಕ್ರಮ ಅನುಸರಿಸುವುದು

ಪ್ರತಿ ಬಾರಿಯೂ ಒಂದೇ ಕ್ರಮ ಅನುಸರಿಸುವುದು

ಇದಕ್ಕಾಗಿ ಪ್ರತಿಬಾರಿಯೂ ಬೇರೆ ಬೇರೆ ಕೋನಗಳಿಂದ ಪ್ರಾರಂಭಿಸಿ ಎಲ್ಲಾ ಹಲ್ಲುಗಳ ಎಲ್ಲಾ ಕಡೆಯೂ ನಯವಾಗಿ ಬ್ರಶ್ ಆಗಿದೆ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ. ಅನುಮಾನವಿದ್ದರೆ ಇನ್ನೊಮ್ಮೆ ಬ್ರಶ್ ಮಾಡುವುದು ಇನ್ನೂ ಒಳ್ಳೆಯದು.

ಊಟವಾದ ತಕ್ಷಣ ಹಲ್ಲುಜ್ಜುವುದು

ಊಟವಾದ ತಕ್ಷಣ ಹಲ್ಲುಜ್ಜುವುದು

ದಿನದ ಪ್ರಮುಖ ಊಟವಾದ ತಕ್ಷಣ ಹಲ್ಲುಜ್ಜುವುದರಿಂದ ಹಲ್ಲುಗಳಿಗೆ ಹಾನಿಯುಂಟಾಗಬಹುದೆಂಬುದು ನಿಮಗೆ ಗೊತ್ತಿತ್ತೇ? ನಮಗೂ ಗೊತ್ತಿರಲಿಲ್ಲ, ಏಕೆಂದರೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತೀರಾ ಇತ್ತೀಚೆಗೆ. ಸಂಶೋಧನೆಗಳ ಪ್ರಕಾರ ಊಟವಾದ ಬಳಿಕ ಬಾಯಿಯಲ್ಲಿರುವ ಪಿಎಚ್ ಮಟ್ಟ (ಆಮ್ಲೀಯತೆ-ಕ್ಷಾರೀಯತೆ ಅಳೆಯುವ ಮಟ್ಟ) ಕಡಿಮೆಯಾಗಿರುತ್ತದೆ. (ಕಡಿಮೆ ಎಂದರೆ ಆಮ್ಲೀಯತೆ).

ಊಟವಾದ ತಕ್ಷಣ ಹಲ್ಲುಜ್ಜುವುದು

ಊಟವಾದ ತಕ್ಷಣ ಹಲ್ಲುಜ್ಜುವುದು

ಈ ಹೊತ್ತಿನಲ್ಲಿ ಬ್ರಶ್ ಮಾಡುವುದೆಂದರೆ ಈ ಆಮ್ಲವನ್ನು ಹಲ್ಲುಗಳಿಗೆ ಒತ್ತಿ ಉಜ್ಜಿದಂತೆ. ಈ ಆಮ್ಲ ಪ್ರಬಲವಾಗಿದ್ದು ಹಲ್ಲುಗಳನ್ನು ಕರಗಿಸುವ ಕ್ಷಮತೆ ಹೊಂದಿದೆ. ಆದ್ದರಿಂದ ಊಟದ ಬಳಿಕ ಕೇವಲ ತಣ್ಣೀರಿನಿಂದ ಮುಕ್ಕಳಿಸಿಕೊಂಡು ಉಗುಳುವುದು ಉತ್ತಮ. ಬ್ರಶ್ ಮಾಡಲು ಕನಿಷ್ಟ ಅರ್ಧ ಘಂಟೆಯಾದರೂ ಕಾಯಬೇಕು.

ಹಲ್ಲುಜ್ಜುವ ಬ್ರಶ್ ಅನ್ನು ಅತಿಹೆಚ್ಚಾಗಿ ಸ್ವಚ್ಛಗೊಳಿಸುವುದು

ಹಲ್ಲುಜ್ಜುವ ಬ್ರಶ್ ಅನ್ನು ಅತಿಹೆಚ್ಚಾಗಿ ಸ್ವಚ್ಛಗೊಳಿಸುವುದು

ಯಾವಾಗ ನಮ್ಮ ಬ್ರಶ್ ನಲ್ಲಿಯೂ ಕೀಟಾಣುಗಳು ಸಂಸಾರ ಹೂಡುತ್ತವೆ ಎಂದು ಗೊತ್ತಾಯಿತೋ ಆಗಿನಿಂದ ಹಲವರು ತಮ್ಮ ಬ್ರಶ್ ಗಳನ್ನು ವಿಪರೀತವಾಗಿ ಸ್ವಚ್ಛಗೊಳಿಸುವುದನ್ನು ಕಾಣಬಹುದು. ಕುದಿ ನೀರಿನಲ್ಲಿರಿಸುವುದು, ಮೈಕ್ರೋವೇವ್ ನಲ್ಲಿ ಕೆಲವು ಸೆಕೆಂಡುಗಳ ಕಾಲ ಇರಿಸುವುದು, ನೆಲ ಸ್ವಚ್ಛಗೊಳಿಸುವ ಮಾರ್ಜಕ ಬಳಸಿ ಸ್ವಚ್ಛಗೊಳಿಸುವುದು ಇತ್ಯಾದಿ. ಇದು ಬ್ರಶ್ ಜೊತೆಗೇ ನಿಮ್ಮ ಹಲ್ಲುಗಳನ್ನೂ ಹಾಳುಗೆಡುವುದು ಖಚಿತ.

ಹಲ್ಲುಜ್ಜುವ ಬ್ರಶ್ ಅನ್ನು ಅತಿಹೆಚ್ಚಾಗಿ ಸ್ವಚ್ಛಗೊಳಿಸುವುದು

ಹಲ್ಲುಜ್ಜುವ ಬ್ರಶ್ ಅನ್ನು ಅತಿಹೆಚ್ಚಾಗಿ ಸ್ವಚ್ಛಗೊಳಿಸುವುದು

ದಂತತಜ್ಞರ ಪ್ರಕಾರ ಈ ಕೀಟಾಣುಗಳನ್ನು ಹೊಡೆದೋಡಿಸಲು ನಲ್ಲಿಯಿಂದ ಸುರಿಯುತ್ತಿರುವ ತಣ್ಣೀರೇ ಸಾಕು. ಬ್ರಶ್ ಮಾಡಿದ ಬಳಿಕವೂ ಬ್ರಶ್ ನ ಕೂದಲುಗಳನ್ನು ಒರೆಸಿ ಮೇಲ್ಮುಖವಾಗಿರುವಂತಿಟ್ಟರೆ ಸಾಕು. ನೀರೆಲ್ಲಾ ನಿಧಾನವಾಗಿ ಇಳಿದು ಕೊಂಚಸಮಯದಲ್ಲಿಯೇ ಒಣಗುತ್ತದೆ. ಇಲ್ಲಿ ಕೀಟಾಣುಗಳು ಸಂಸಾರ ಹೂಡುವ ಸಾಧ್ಯತೆ ಕಡಿಮೆ.

ಒಂದೇ ಬ್ರಶ್ ಅನ್ನು ಬಹುಕಾಲದವರೆಗೆ ಬಳಸುವುದು

ಒಂದೇ ಬ್ರಶ್ ಅನ್ನು ಬಹುಕಾಲದವರೆಗೆ ಬಳಸುವುದು

ವಿದೇಶೀಯರು ಭಾರತೀಯರ ವಿಚಿತ್ರ ಪದ್ಧತಿಗಳ ಬಗ್ಗೆ ವ್ಯಂಗ್ಯವಾಡುವ ಸಂಗತಿಗಳಲ್ಲಿ ಇದೂ ಒಂದು. ತಿಂಗಳಿಗೊಂದಾದರೂ ಹೊಸ ಬ್ರಶ್ ಬಳಸಬೇಕೆಂದು ದಂತವೈದ್ಯರು ಬಾರಿಬಾರಿ ಹೇಳುತ್ತಿದ್ದರೂ ನಾವೆಲ್ಲಾ ಇದಕ್ಕೆ ಕಿವುಡಾಗಿ ಬ್ರಶ್ ನ ಕೂದಲುಗಳೆಲ್ಲಾ ಎಂಟೂ ದಿಕ್ಕಿನಲ್ಲಿ ಹರಡಿ ಸೂರ್ಯಕಾಂತಿ ಹೂವಿನಂತೆ ಕಾಣುವವರೆಗೂ ಬಳಸುತ್ತೇವೆ. ಈಗ ಬುದ್ಧಿ ಬಂದ ಮೇಲೆ ಹಳೆಯ ಬ್ರಶ್ ಬಿಸಾಡಿ ಹೊಸ ಬ್ರಶ್ ಉಪಯೋಸುವ ಮೂಲಕ ಜಾಣತನ ಮೆರೆಯಬಹುದು.

English summary

Weird Mistakes We Make With Our Teeth

When it is about taking care of our pearly teeth, it doesn't need an extra effort. All that one needs to do is be careful the way they handle them. Check out these common mistakes that we do everyday when it comes to ignoring the health of our teeth. Ignoring these mistakes can cause chipping of teeth or unhealthy teeth.
Story first published: Thursday, October 15, 2015, 17:10 [IST]
X
Desktop Bottom Promotion