For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಬೇಕೇ? ಮೂಸಂಬಿ ಜ್ಯೂಸ್ ಸೇವಿಸಿ!

By Arshad
|

ಇಂದು ತೂಕ ಇಳಿಸಿಕೊಳ್ಳುವುದು ಹೆಚ್ಚಿನವರಿಗೆ ಕಾಳಜಿಯ ವಿಷಯವಾಗಿದ್ದು, ಇನ್ನು ಕೆಲವರಿಗೆ ಹಣ ದೋಚುವ ಒಂದು ಅವಕಾಶವೂ ಆಗಿದೆ! ಆದರೆ ದುಬಾರಿ ಬೆಲೆಯ ತೂಕವಿಳಿಸುವ ಮಳಿಗೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸುಲಭ ಆಹಾರಗಳ ಮೂಲಕವೂ ಸಾಧಿಸಬಹುದು. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ಗಟ್ಟಿ ಮನಸ್ಸು ಮಾತ್ರ. ಇನ್ನುಳಿದದ್ದು ಕಿತ್ತಳೆ, ಲಿಂಬೆ ಅಥವಾ ಮೂಸಂಬಿಯ ಜ್ಯೂಸ್ ಮಾತ್ರ.

ಶೀಘ್ರವಾಗಿ ತೂಕವಿಳಿಸಲು ಲಿಂಬೆ ಅತ್ಯುತ್ತಮವಾದರೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಇತರೆಡೆ ಹಾನಿ ಎಸಗುವ ಕಾರಣ ಇದರ ಬಳಿಕದ ಮೂಸಂಬಿ ಜ್ಯೂಸ್ ಉತ್ತಮ ಆಯ್ಕೆಯಾಗಿದೆ. ಮೂಸಂಬಿ ಜ್ಯೂಸ್ ಸುಲಭವಾಗಿ ಜೀರ್ಣಗೊಳ್ಳುವ ಕಾರಣ ರೋಗಿಗಳಿಗೆ ಕುಡಿಯಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಅದ್ಭುತ ಜ್ಯೂಸ್!

ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ದ್ರವ, ವಿಟಮಿನ್ ಸಿ ದೊರಕುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಕಾಮಾಲೆ ರೋಗವನ್ನು ನಿವಾರಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಕೆಲಸಗಳಿಗೆ ಮೂಸಂಬಿ ಜ್ಯೂಸ್ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಬಳಸುವುದೇ ತೂಕ ಇಳಿಸುವ ರಹಸ್ಯವಾಗಿದೆ. ತಲೆಕೂದಲಿನ ಆರೈಕೆಗೆ ಮೂಸ೦ಬಿ ಹಣ್ಣಿನ ರಸವು ಪರಿಣಾಮಕಾರಿಯೇ?

ದೇಹದ ತೂಕವನ್ನು ಸುಲಭವಾಗಿ ಮತ್ತು ಆರೋಗ್ಯಕರವಾಗಿ ಇಳಿಸಲು ನಿತ್ಯವೂ ಕೆಲವು ಹನಿ ಸೇರಿಸಿದ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಉತ್ತಮ ಪರಿಣಾಮ ಪಡೆಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ಇದು ಹಸಿವನ್ನು ಕಡಿಮೆಗೊಳಿಸುತ್ತದೆ

ಇದು ಹಸಿವನ್ನು ಕಡಿಮೆಗೊಳಿಸುತ್ತದೆ

ದಿನಕ್ಕೆರಡು ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಪದೇ ಪದೇ ಹಸಿವಾಗುವುದು ತಪ್ಪುತ್ತದೆ. ಮೂಸಂಬಿಯಲ್ಲಿರುವ ಸಿಟ್ರಿಕ್ ಆಮ್ಲ ಇದಕ್ಕೆ ಕಾರಣ. ಇದರಿಂದ ನಡುನಡುವೆ ಕಂಡದನ್ನೆಲ್ಲಾ ತಿನ್ನುವ ಬಯಕೆ ಕಡಿಮೆಯಾಗಿ ತನ್ಮೂಲಕ ತೂಕ ಹೆಚ್ಚುವುದು ತಪ್ಪಿದಂತಾಗುತ್ತದೆ.

ಕಡಿಮೆ ಕ್ಯಾಲೋರಿಗಳು

ಕಡಿಮೆ ಕ್ಯಾಲೋರಿಗಳು

ಲಿಂಬೆಯಂತೆಯೇ ಮೂಸಂಬಿಯಲ್ಲಿಯೂ ಕ್ಯಾಲೋರಿಗಳು ಅತಿ ಕಡಿಮೆ ಪ್ರಮಾಣದಲ್ಲಿವೆ. ಇಂದು ಲೋಟದಲ್ಲಿ ಕೇವಲ ಐವತ್ತು ಕ್ಯಾಲೋರಿಗಳಿವೆ. ಆದರೆ ಈ ದ್ರವವನ್ನು ಕರಗಿಸಲು ಹೆಚ್ಚು ಕೊಬ್ಬು ಬೇಕಾಗುತ್ತದೆ. ಪರಿಣಾಮವಾಗಿ ಕುಡಿದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳು ಖರ್ಚಾಗುವ ಕಾರಣ ತೂಕ ಇಳಿಯಲು ಸಾದ್ಯವಾಗುತ್ತದೆ.

ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ

ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ

ನಮ್ಮ ಊಟದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಇರಬೇಕು. ಆಗಲೇ ನಮ್ಮ ಆಹಾರ ಸುಲಭವಾಗಿ ಜೀರ್ಣಗೊಂದು ವಿಸರ್ಜನೆ ಸುಲಲಿತವಾಗುತ್ತದೆ. ಆದ್ದರಿಂದ ಪ್ರತಿಬಾರಿ ನಿಮ್ಮ ನಿತ್ಯದ ವ್ಯಾಯಾಮದ ಮುನ್ನ ಕೇವಲ ಇಪ್ಪತ್ತು ಮಿಲೀ ಮೂಸಂಬಿ ಜ್ಯೂಸ್ ಕುಡಿದರೂ ನಿಮ್ಮ ನಿತ್ಯದ ಚಟುವಟಿಕೆಗಳು ಆಯಾಸರಹಿತವಾಗಿ ನೆರವೇರುತ್ತವೆ.

ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ

ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ

ಮೂಸಂಬಿಯಲ್ಲಿ ಹೆಚ್ಚಿನ ತಿರುಳು ಇರುವುದರಿಂದ ಹೆಚ್ಚಿನ ಪೋಷಕಾಂಶಗಳು ಸಿದ್ಧರೂಪದಲ್ಲಿ ದೇಹಕ್ಕೆ ಲಭ್ಯವಾಗುತ್ತವೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ ತೂಕವಿಳಿಸಲು ನೆರವಾಗುತ್ತದೆ.

ದೇಹದಿಂದ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತದೆ

ದೇಹದಿಂದ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತದೆ

ಮೂಸಂಬಿರಸದಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಇತರ ಆಮ್ಲಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಉತ್ತಮವಾಗಿವೆ. ಜೊತೆಗೇ ಕೊಬ್ಬನ್ನು ಹೆಚ್ಚಾಗಿ ಬಳಸುವುದರಿಂದ ತೂಕ ಇಳಿಸಲು ಸಾಧ್ಯವಾಗುತ್ತದೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ನಿಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟಗಳನ್ನು ಆರೋಗ್ಯಕರ ಮಿತಿಗಳಲ್ಲಿಡುವ ಮೂಲಕ (ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದು) ದೇಹ ತೂಕವಿಳಿಸುವ ನಿಟ್ಟಿನಲ್ಲಿ ಉತ್ತಮವಾಗಿ ಸ್ಪಂದಿಸುತ್ತದೆ. ಪರಿಣಾಮವಾಗಿ ತೂಕವಿಳಿಸುವ ನಿಮ್ಮ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ.

ಮೂಸಂಬಿ ರಸದ ಸಮರ್ಪಕ ಸೇವನೆ ಹೇಗೆ?

ಮೂಸಂಬಿ ರಸದ ಸಮರ್ಪಕ ಸೇವನೆ ಹೇಗೆ?

ಇದರ ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ಮೂಸಂಬಿ ರಸವನ್ನು ಕೊಂಚ ಜೇನುತುಪ್ಪ ಸೇರಿಸಿ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿಯುವುದರಿಂದ ತೂಕವಿಳಿಸುವ ಪ್ರಯತ್ನಗಳು ಅತಿ ಹೆಚ್ಚಿನ ಪ್ರತಿಫಲ ನೀಡುತ್ತವೆ.

English summary

Weight Loss Benefits With Mosambi Juice

The citrus fruit family is one of the best options you can make use of if you want to lose tons of weight in no time. Experts state that apart from lemon, sweet lime is the next best fruit which aids in rapid weight loss. Mosambi as it is widely known, is a healthy fruit which you can drink and enjoy twice in the day to cut calories. Here are some of the ways in which mosambi juice aids in weight loss, take a look:
X
Desktop Bottom Promotion