For Quick Alerts
ALLOW NOTIFICATIONS  
For Daily Alerts

ನಿಮ್ಮೊಳಗಿನ ಶತ್ರು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವುದು ಹೇಗೆ?

|

ದಿನನಿತ್ಯದ ಜೀವನದಲ್ಲಿ ಸೇವಿಸುವ ಆಹಾರಗಳೆಲ್ಲವೂ ಆರೋಗ್ಯಯುಕ್ತವಾಗಿದ್ದರೆ ಮಾತ್ರ ನಾವು ದಿನವೂ ನಮ್ಮ ಜೀವನಕ್ರಮದಿಂದ ಉಂಟಾಗುವ ಹಲವು ರೋಗಗಳಿಂದ ದೂರವಿರಬಹುದು. ಆದ್ದರಿಂದ ನೀವು ಸೇವಿಸುವ ದಿನನಿತ್ಯದ ಆಹಾರ ನಿಮ್ಮ ಉತ್ತಮ ಆಯ್ಕೆಯಾಗಿರಲಿ ಹಾಗೂ ಆರೋಗ್ಯಕರವಾಗಿರಲಿ.

ಇಂದಿನ ದಿನಗಳಲ್ಲಿ 30 ಹರೆಯದ ಬಳಿಕ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ಈ ಕೊಲೆಸ್ಟ್ರಾಲ್ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರಿಂದ ಹೃದಯಾಘಾತ, ಲಘು ಅಥವಾ ದೊಡ್ಡ ಪ್ರಮಾಣದ ಪಾರ್ಶ್ವವಾಯು ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಇದರಿಂದಾಗಿ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಗತ್ಯವಾಗಿದೆ.

ಮೂವತ್ತರ ಹರೆಯದ ಬಳಿಕ ವ್ಯಾಯಾಮ ಕಡಿಮೆಯಾಗಿ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಅಸಮತೋಲನದ ಜೀವನಶೈಲಿ, ಸಂಸ್ಕರಿತ ಕೊಬ್ಬಿನ ಸೇವನೆ, ಬೊಜ್ಜು ಮತ್ತು ಅನುವಂಶೀಯತೆ ಇವೆಲ್ಲವೂ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕೆಲವು ಕಾರಣಗಳಾಗಿವೆ. ಅತಿಯಾಗಿ ಧೂಮಪಾನ ಮಾಡುವುದು ಕೂಡ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಲು ಒಂದು ಕಾರಣವಾಗಿದೆ. ಬನ್ನಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಂಡು ನಿಯಂತ್ರಣದಲ್ಲಿ ಇಡಲು ಕೆಲವೊಂದು ಸಲಹೆಗಳನ್ನು ತಿಳಿಯೋಣ.....

Ways to lower cholesterol naturally

ನಾರಿನಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ
ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಅಥವಾ ನಿಯಂತ್ರಿಸಲು ಬ್ರೆಡ್ ನಂತಹ ಹೆಚ್ಚೆಚ್ಚು ನಾರಿನಂಶವರಿಉವ ಪದಾರ್ಥಗಳನ್ನೇ ಸೇವಿಸಿ. ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯ, ಬೇಳೆ ಕಾಳುಗಳನ್ನು ಸೇವಿಸಿ. ಇವುಗಳು ಕೇವಲ ಕೊಲೆಸ್ಟ್ರಾಲ್ ಮಾತ್ರ ಕಡಿಮೆ ಮಾಡುವುದಿಲ್ಲ. ಬದಲಿಗೆ, ನಿಮ್ಮ ದೇಹದ ಕ್ಯಾಲೋರಿಯನ್ನೂ ಕಡಿಮೆಗೊಳಿಸುತ್ತವೆ. ದೇಹದಲ್ಲಿರುವ ಹೆಚ್ಚಿನ ಕ್ಯಾಲೋರಿ ನೈಸರ್ಗಿಕವಾಗಿ ಕೊಬ್ಬಿನಂಶವಾಗಿ ಮಾರ್ಪಡುತ್ತದೆ. ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಷ್ಟೂ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವ ಸಾಧ್ಯತೆ ಇರುತ್ತದೆ.

ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ತಿನ್ನಿ
ಕೊಲೆಸ್ಟ್ರಾಲ್ ನಿಯಂತ್ರಸಲು ಇಚ್ಚಿಸುವವರ ಪಥ್ಯದಲ್ಲಿ ಕ್ಯಾಬೇಜ್, ಕ್ಯಾರೇಟ್, ಸೌತೆಕಾಯಿ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಸೇರಿರಲೇಬೇಕು. ತರಕಾರಿಗಳ ಜೊತೆಗೆ ತಾಜಾ ಹಣ್ಣುಗಳನ್ನೂ ಸೇವಿಸಿ. ಈ ಆಹಾರಗಳಲ್ಲಿ ಕೊಬ್ಬಿನಂಶ ತೀರಾ ತೀರಾ ಕಡಿಮೆಯಿರುತ್ತದೆ. ಇವು ನೈಸರ್ಗಿಕವಾಗಿ ದೊರೆಯುವ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳನ್ನು ಹೊಂದಿರುತ್ತವೆ.

ಸಣ್ಣ ಪ್ರಮಾಣದ ಊಟ ಮಾಡಿ
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಸಮಯದ ಅಂತರದ ಅನುಗುಣವಾಗಿ ಸಣ್ಣ ಪ್ರಮಾಣದ ಊಟ ಮಾಡಬೇಕು. ಇದರಿಂದ ದೇಹದಲ್ಲಿ ಎಲ್ ಡಿಎಲ್ ಮಟ್ಟವನ್ನು ನಿರ್ವಹಿಸಲು ಮತ್ತು ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡಲು ನೆರವಾಗುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಕಡಿಮೆ ಕೊಬ್ಬು ಇರುವ ಆಹಾರಗಳನ್ನು ಸೇರಿಸಿಕೊಳ್ಳಿ. ಸಂಸ್ಕರಿತ ಕೊಬ್ಬು ಇರುವ ಆಹಾರಗಳನ್ನು ನೀವು ಕಡೆಗಣಿಸಬೇಕು.

ತಿನ್ನುವ ಕ್ರಮ
ದಿನದಲ್ಲಿ ಸರಿಸುಮಾರು 6-7 ಸಲ ದ್ವಿದಳ ಧಾನ್ಯಗಳು, 3-5 ಬಾರಿ ತರಕಾರಿಗಳು, 2-4 ಬಾರಿ ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ.
ಕೊಲೆಸ್ಟ್ರಾಲ್ ಹೆಚ್ಚು ಇರುವ ಧಾನ್ಯಗಳನ್ನು ಕಡೆಗಣಿಸಿ. ನೀವು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು ಮತ್ತು ನಿಮ್ಮ ಆಹಾರದಲ್ಲಿ ಕಾರ್ಬ್ ಪ್ರಮಾಣ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸಬಹುದು. ಕಂದು ಬ್ರೆಡ್, ಕಂದು ಅಕ್ಕಿ ಮತ್ತು ಇತರ ಕೆಲವು ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ಆರೋಗ್ಯಕರ ಎಣ್ಣೆ
ಆಲಿವ್ ತೈಲ, ಅಕ್ಕಿ ತವುಡು ತೈಲ ಮತ್ತು ಸೋಯಾ ತೈಲದಂತಹ ಕೆಲವೊಂದು ಎಣ್ಣೆಗಳಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. 30ರ ಹರೆಯದ ಬಳಿಕ ನಿಮಗೆ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಇರುವ ಎಣ್ಣೆಗಳನ್ನು ಬಳಸಿ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸುಲಭ ವಿಧಾನ. ಕೊಲೆಸ್ಟ್ರಾಲ್ ಇರುವ ಎಣ್ಣೆಗಳನ್ನು ಆಯ್ಕೆ ಮಾಡುವಾಗ ಅದನ್ನು ಇತರ ಎಣ್ಣೆಗಳೊಂದಿಗೆ ಹೋಲಿಸಿ ನೋಡಿ.

ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಮತ್ತೊಂದು ಸುಲಭ ವಿಧಾನವೆಂದರೆ ನಿಯಮಿತವಾಗಿ ಕಪ್ಪು ಚಹಾ ಕುಡಿಯುವುದು. ಕಪ್ಪು ಚಹಾದಲ್ಲಿರುವ ಫ್ಲಾವೊನಾಯಿಡ್ ಗಳು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಗುಣ ಹೊಂದಿದೆ. ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿರುವವರು ಪ್ರತೀ ದಿನ ರಾತ್ರಿ ವೈನ್ ಸೇವಿಸಿದರೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸಲು ಕೆಲವೊಂದು ವಿಧಾನಗಳು. ಆರೋಗ್ಯಕರ ಜೀವನಶೈಲಿ, ಕೊಬ್ಬು ಕಡಿಮೆ ಇರುವ ಆಹಾರಕ್ರಮ, ಸಂಸ್ಕರಿತ ಕೊಬ್ಬು ಇಲ್ಲದ ಆಹಾರ ಮತ್ತು ನಿಯಮಿತ ವ್ಯಾಯಾಮವು ಕೊಲೆಸ್ಟ್ರಾಲ್ ಹೆಚ್ಚದಂತೆ ಮಾಡುತ್ತದೆ. 30ರ ಹರೆಯದ ಬಳಿಕ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಇದು ಕೆಲವೊಂದು ವಿಧಾನಗಳು.

English summary

Ways to lower cholesterol naturally

If you're already eating plenty of the following cholesterol-lowering foods, keep up the good work! But if your idea of eating well is to opt for the "buttered popcorn" instead of the "extra-buttered popcorn," consider adding these healthy eats to your diet today... have a look
Story first published: Tuesday, January 6, 2015, 17:10 [IST]
X
Desktop Bottom Promotion