For Quick Alerts
ALLOW NOTIFICATIONS  
For Daily Alerts

ಅಚ್ಚರಿ ಆದರೂ ಸತ್ಯ- ಉಸಿರಾಟದ ಮೂಲಕ ಆರೋಗ್ಯವೃದ್ಧಿಸಿ!

By Super
|

ಜೀವವಿರುವ ಲಕ್ಷಣ ಎಂದರೆ ಉಸಿರಾಟ. ಇದೊಂದು ಅನೈಚ್ಛಿಕ ಕಾರ್ಯವಾಗಿದ್ದು ಅಗತ್ಯಕ್ಕೆ ತಕ್ಕಂತೆ ಏರಿಳಿಯುತ್ತಾ ಇರುತ್ತದೆ. ನಾವು ಸಾಮಾನ್ಯವಾಗಿ ಉಸಿರಾಟಕ್ಕೆ ಹೆಚ್ಚಿನ ಗಮನವನ್ನೇ ನೀಡುವುದಿಲ್ಲ. ಆದರೆ ಉಸಿರಾಟವನ್ನು ಕೊಂಚ ಐಚ್ಛಿಕಗೊಳಿಸಿ ಸ್ವಲ್ಪ ಬದಲಾವಣೆಗೊಳಿಸುವ ಮೂಲಕ ಅದ್ಭುತಗಳನ್ನೇ ಸಾಧಿಸಬಹುದು ಎಂದು ನಿಮಗೆ ಗೊತ್ತಿತ್ತೇ? ಉಸಿರಾಟದ ಕ್ರಮವನ್ನು ಕೊಂಚವೇ ಬದಲಿಸುವ ಮೂಲಕ ಉದ್ವೇಗ, ಸುಖವಾದ ನಿದ್ದೆ ಮತ್ತು ನಿತ್ಯದ ಚಟುವಟಿಕೆಗಳನ್ನು ಇನ್ನಷ್ಟು ಸಕ್ಷಮವಾಗಿ ಪೂರೈಸಲು ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ. ಉಸಿರಾಟದ ಪ್ರಕ್ರಿಯೆಯ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಿ

ಇತ್ತೀಚಿನ ಸಂಶೋಧನೆಗಳ ಪ್ರಕಾರ ಉಸಿರಾಟದ ಮೇಲೆ ಗಮನ ನೀಡುವ ಮೂಲಕ ಮಾನಸಿಕ ಒತ್ತಡ ಕಡಿಮೆಯಾಗುವುದು, ತೂಕ ಕಡಿಮೆಯಾಗುವುದು ಮತ್ತು ಲೈಂಗಿಕ ಶಕ್ತಿಯೂ ಹೆಚ್ಚುವುದು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಇದರಿಂದ ಇನ್ನೂ ಹಲವು ವಿಧವಾದ ಆರೋಗ್ಯಕರ ಲಾಭಗಳಿವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಮಾನಸಿಕ ಒತ್ತಡ ಹೆಚ್ಚಾದಾಗ

ಮಾನಸಿಕ ಒತ್ತಡ ಹೆಚ್ಚಾದಾಗ

ನಿತ್ಯದ ಕಾರ್ಯದಲ್ಲಿ ಒತ್ತಡ ಬರುತ್ತಲೇ ಇರುತ್ತದೆ. ಇದನ್ನು ಎದುರಿಸಲು ಕೋಪಗೊಳ್ಳುವುದು, ಎಲ್ಲರ ಮೇಲೆ ರೇಗಾಡುವುದು ಮೊದಲಾದ ಪ್ರತಿಕ್ರಿಯೆಗಳನ್ನು ನೋಡುತ್ತೇವೆ. 'ಸಾಹೇಬರು ಗರಂ ಆಗಿದ್ದಾರೆ' ಎಂಬ ಸಂದೇಶವೂ ಇದನ್ನೇ ತಿಳಿಸುತ್ತದೆ. ಈ ಪರಿಸ್ಥಿತಿಯನ್ನು ಎದುರಿಸಲು ಚಿಕ್ಕದಾದ, ಆದರೆ ಆಳವಾದ ಉಸಿರುಗಳನ್ನು ಎಳೆದುಕೊಳ್ಳಿ. ಇದರಿಂದ ನಿಮ್ಮ ದೇಹ ಮತ್ತು ಮೆದುಳು ಒತ್ತಡವನ್ನು ಎದುರಿಸಲು ಹೆಚ್ಚಿನ ಆಮ್ಲಜನಕ ಪಡೆಯಲು ಸಾಧ್ಯವಾಗುತ್ತದೆ. ಒತ್ತಡದೊಂದಿಗೆ ಉದ್ವೇಗವೂ ಉಂಟಾಗಿದ್ದರೆ ಉಸಿರಾಟದ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸುತ್ತಾ ಅಂದರೆ ಇನ್ನೂ ದೀರ್ಘವಾಗಿಸುತ್ತಾ ಬನ್ನಿ. ಈ ಪ್ರಕ್ರಿಯೆ ಸುಮಾರು ಐದು ನಿಮಿಷಗಳ ಅವಧಿಯಲ್ಲಿರಲಿ. ಇದರಿಂದ ಒತ್ತಡ ನಿವಾರಣೆಯಾಗಿ ಕೆಲಸದ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ.

ನೋವಿನಲ್ಲಿದ್ದಾಗ

ನೋವಿನಲ್ಲಿದ್ದಾಗ

ಯಾವುದಾದರೂ ಅನಾರೋಗ್ಯ ಅಥವಾ ಗಾಯದ ಕಾರಣ ಅತಿಯಾದ ನೋವಿದ್ದರೆ ಇದನ್ನು ಸಹಿಸಿಕೊಳ್ಳದೇ ವಿಧಿಯಿಲ್ಲ. ನೋವು ಕಡಿಮೆ ಮಾಡಲು ವೈದ್ಯರು ಸೂಕ್ತ ಔಷಧಿಯನ್ನು ನೀಡುತ್ತಾರಾದರೂ ಅಲ್ಲಿಯವರೆಗೆ ನೋವನ್ನು ಅನುಭವಿಸಲೇಬೇಕು. ಇದೇ ಕಾರಣಕ್ಕೆ ರೋಗಿಯನ್ನು ಆಂಗ್ಲಭಾಷೆಯಲ್ಲಿ patient ಎಂದು ಕರೆಯುತ್ತಾರೆ. ಏಕೆಂದರೆ ಅವರು ನೋವು ತಾಳಲು ತಾಳ್ಮೆ ಅಥವಾ patience ವಹಿಸಲೇಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಗಮನವನ್ನು ಉಸಿರಾಟಕ್ಕೆ ಕೇಂದ್ರೀಕರಿಸಿ ನಿಧಾನವಾದ ಆದರೆ ಅತ್ಯಂತ ಆಳವಾದ ಉಸಿರುಗಳನ್ನು ನಿಧಾನವಾಗಿ ಎಳೆದುಕೊಳ್ಳಿ ಮತ್ತು ಅಷ್ಟೇ ನಿಧಾನವಾಗಿ ಹೊರಬಿಡಿ. ಇದು ನಿಮ್ಮ ಮನಸ್ಸನ್ನು ಉಸಿರಾಟದತ್ತ ಸೆಳೆದು ನೋವನ್ನು ಆ ಕ್ಷಣ ಮರೆಯುವಂತೆ ಮಾಡುತ್ತದೆ. ದೀರ್ಘ ಉಸಿರಾಟದ ಮೂಲಕ ಹೆಚ್ಚಿನ ಆಮ್ಲಜನಕ ರಕ್ತಕ್ಕೆ ಲಭ್ಯವಾಗಿ ನೋವು ಕಡಿಮೆಯಾಗಲು ಸಾಧ್ಯವಾಗುತ್ತದೆ.

ಏಕಾಗ್ರತೆಗಾಗಿ

ಏಕಾಗ್ರತೆಗಾಗಿ

ನಿಮ್ಮ ಕಾರ್ಯದಲ್ಲಿ ಅಥವಾ ಓದಿನಲ್ಲಿ ಏಕಾಗ್ರತೆ ಮೂಡಲು ಓದುವ ಮುನ್ನ ಚಿಕ್ಕದಾದ ಆದರೆ ಅತಿ ವೇಗವಾಗಿ ಹೊರಬಿಡುವ ಕೆಲವು ಉಸಿರುಗಳನ್ನು ಎಳೆದುಕೊಳ್ಳಿ. ಆದರೆ ಈ ವಿಧಾನ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ಸೂಕ್ತವಲ್ಲ. ಆದ್ದರಿಂದ ನೀವು ದೈಹಿಕವಾಗಿ ಸಕ್ಷಮರಿದ್ದಾಗ ಮಾತ್ರ ಅನುಸರಿಸಿ.

 ಗರ್ಭಾವಸ್ಥೆಯಲ್ಲಿ

ಗರ್ಭಾವಸ್ಥೆಯಲ್ಲಿ

ತಲೆಯನ್ನು ಕೊಂಚ ಮೇಲ್ಮುಖವಾಗಿಸಿ ಅತ್ಯಂತ ಆಳವಾದ, ಆದರೆ ನಿಧಾನವಾದ ಉಸಿರಾಟಗಳು ಗರ್ಭಾವಸ್ಥೆಯಲ್ಲಿ ಉತ್ತಮವಾಗಿವೆ. ಇದು ಮಗುವಿನ ರಕ್ತದೊತ್ತಡವನ್ನೂ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಧ್ಯಾನದ ಸಮಯದಲ್ಲಿ

ಧ್ಯಾನದ ಸಮಯದಲ್ಲಿ

ನಮ್ಮ ಮನ ಸದಾ ಒಂದಲ್ಲಾ ಒಂದು ವಿಷಯದ ಕುರಿತು ಯೋಚಿಸುತ್ತಲೇ ಇರುತ್ತದೆ. ಈ ಯೋಚನೆಗಳನ್ನು ಒಂದು ಕಡೆ ಕೇಂದ್ರೀಕರಿಸಲು ಧ್ಯಾನ ಉಪಯುಕ್ತವಾಗಿದೆ. ಇದರಿಂದ ಸ್ನಾಯುಗಳ ಸೆಳೆತ ಕಡಿಮೆಯಾಗಿ ಏಕಾಗ್ರತೆ ಗಳಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಸಾಮಾನ್ಯವಾದ ಉಸಿರಾಟವನ್ನೇ ಕೊಂಚ ನಿಧಾನವಾಗಿಸಬೇಕು. ಮನವನ್ನು ಒಂದು ವಿಷಯದ ಮೇಲೆ ಕೇಂದ್ರೀಕರಿಸಬೇಕು.

ಧ್ಯಾನದ ಸಮಯದಲ್ಲಿ

ಧ್ಯಾನದ ಸಮಯದಲ್ಲಿ

ಈ ಸಮಯದಲ್ಲಿ ಕಣ್ಣು ಮುಚ್ಚಿರಬೇಕು. ಪದ್ಮಾಸನದಲ್ಲಿ ಬೆನ್ನು ನೆಟ್ಟಗಿರುವಂತೆ ಕುಳಿತುಕೊಳ್ಳಬೇಕು ಹಾಗೂ ಸೂಕ್ತ ಮುದ್ರೆಗಳನ್ನು ಅನುಸರಿಸಬೇಕು. ಒಂದು ವೇಳೆ ಇಂತಹ ಉತ್ತಮ ಮಾಹಿತಿ ತಮ್ಮಲ್ಲಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕೆಳಗಿರುವ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

English summary

ways breathing right can improve your life

Breathing is the most important thing we do for our living, but have you realised that we pay the least amount of attention to it. Did you know that with different ways of breathing in a right way can improve your life? You can have a better breath to fight anxiety, sleep in a better way and exercise harder.
Story first published: Tuesday, October 27, 2015, 16:47 [IST]
X
Desktop Bottom Promotion