For Quick Alerts
ALLOW NOTIFICATIONS  
For Daily Alerts

ಇವು ಸಾಮಾನ್ಯ ತರಕಾರಿಗಳಲ್ಲ, ಕೊಬ್ಬು ಕರಗಿಸುವಲ್ಲಿ ಎತ್ತಿದಕೈ

|

ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳನ್ನು ಕೊಂಚ ಗಮನವಿಟ್ಟು ನೋಡಿದರೆ ಹತ್ತರಲ್ಲಿ ಒಂದಾದರೂ ತೂಕ ಇಳಿಸುವ ಸಂಸ್ಥೆಯ ಜಾಹೀರಾತೊಂದು ರಾರಾಜಿಸುತ್ತಿರುತ್ತದೆ. ತುಂಬಾ ಹಿಂದೇನೋ ಹೋಗುವುದು ಬೇಡ, ಐದು, ಆರು ವರ್ಷಗಳ ಹಿಂದೆ ಕೇವಲ ವ್ಯಾಯಾಮ ಶಾಲೆಗಳ ಜಾಹೀರಾತು ಬರುತ್ತಿದ್ದವೇ ವಿನಃ ತೂಕ ಇಳಿಸುವ ಸಂಸ್ಥೆಗಳ ಇಂತಹ ಭಾರೀ ಜಾಹೀರಾತುಗಳು ಬರುತ್ತಿರಲಿಲ್ಲ. ಇದೇಕೆ ಹೀಗೆ ಎಂದು ಕೊಂಚ ಯೋಚಿಸಿದರೆ ಇಂದಿನ ಜನರಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿ ಸ್ಥೂಲಕಾಯ ಆವರಿಸಿಕೊಳ್ಳುತ್ತಿರುವ ಸತ್ಯ ಹೊರ ಬೀಳುತ್ತಿದೆ. ನಾಲ್ಕೇ ದಿನದಲ್ಲಿ ಕೊಬ್ಬು ಕರಗಿಸುವ ಪವರ್ ಈ ಜ್ಯೂಸ್‌ನಲ್ಲಿದೆ!

ಹಾಗಾಗಿ ಕೊಬ್ಬು ಇಳಿಸಲು ದೈಹಿಕ ವ್ಯಾಯಾಮಗಳ ಜೊತೆಗೇ ನಾವು ಸೇವಿಸುವ ಆಹಾರಗಳೂ ಮುಖ್ಯ ಪಾತ್ರ ವಹಿಸುತ್ತವೆ. ಮಾರುಕಟ್ಟೆಯಲ್ಲಿ ಕೊಬ್ಬು ಇಳಿಕೆಗಾಗಿ ದೊರಕುತ್ತಿರುವ ದುಬಾರಿ ಜೌಷಧಿ ಮತ್ತು ಆಹಾರಗಳಿಗೆ ಗುಲಾಮರಾಗುವ ಬದಲು ಮನೆಯ ಊಟದಲ್ಲಿಯೇ ಕೆಲವು ತರಕಾರಿಗಳನ್ನು ಸೇವಿಸುವ ಮೂಲಕ ದೇಹದ ಕೊಬ್ಬನ್ನು ಶೀಘ್ರವಾಗಿ ಕರಗಿಸಿ ಉತ್ತಮ ಆರೋಗ್ಯ ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ತರಕಾರಿಗಳನ್ನು ಇಲ್ಲಿ ವಿವರಿಸಲಾಗಿದೆ. ಸಂಶಯವೇ ಬೇಡ, ಕೊಬ್ಬು ಕರಗಿಸುವಲ್ಲಿ ಇವು ಎತ್ತಿದ ಕೈ!

ಬೀಟ್‌ರೂಟ್

ಬೀಟ್‌ರೂಟ್

ತರಕಾರಿಗಳಲ್ಲಿಯೇ ಅತ್ಯಧಿಕ ಸಕ್ಕರೆಯನ್ನು ಹೊಂದಿರುವ ಬೀಟ್‌ರೂಟ್ ರಕ್ತ ಪರಿಚಲನೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ, ಬಿ1, ಬಿ2, ಬಿ3, ಸಿ ಮತ್ತು ಫೋಲೇಟ್ ಇರುವ ಕಾರಣ ಜೀವರಸಾಯನಿಕ ಕ್ರಿಯೆ ಹೆಚ್ಚುತ್ತದೆ. ಅಸ್ಥಿಮಜ್ಜೆಯಲ್ಲಿ ಕೆಂಪುರಕ್ತಕಣಗಳ ಉತ್ಪತ್ತಿ ಹೆಚ್ಚುತ್ತದೆ.ಮುಖ್ಯವಾಗಿ ಬೀಟ್ರೂಟಿನಲ್ಲಿರುವ ನೈಟ್ರೇಟುಗಳು ಬಾಯಿಯಲ್ಲಿರುವ ಜೊಲ್ಲಿನೊಂದಿಗೆ ಮಿಳಿತವಾಗುತ್ತಲೇ ನೈಟ್ರೈಟುಗಳಾಗಿ ಪರಿವರ್ತಿತವಾಗುತ್ತವೆ. ಈ ನೈಟ್ರೈಟುಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಕೊಬ್ಬನ್ನು ಕರಗಿಸುತ್ತವೆ.

ಸಿಹಿಗೆಣಸು (Sweet Potatoes)

ಸಿಹಿಗೆಣಸು (Sweet Potatoes)

ಸಾಧಾರಣವಾಗಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಲಭ್ಯವಾಗುವ ಸಿಹಿಗೆಣಸಿನಲ್ಲಿ ಉತ್ತಮ ಪ್ರಮಾಣದಲ್ಲಿ ಪೊಟಾಶಿಯಂ ಹಾಗೂ ಕರಗುವ ನಾರು ಇದೆ.ಗೆಣಸಿಗೆ ನಸುಗೆಂಪು ಬಣ್ಣ ನೀಡುವ carotenoid ಎಂಬ ಪೋಷಕಾಂಶ ದೇಹದಲ್ಲಿ ವಿಟಮಿನ್ ಎ ಪಡೆಯಲು ಸಹಕರಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಅರಗಿಸಿಕೊಳ್ಳಲು ಕರುಳುಗಳಿಗೆ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯ ಅವಶ್ಯಕತೆ ಇರುವುದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಶೀಘ್ರ ಕರಗುತ್ತದೆ.

ಕ್ಯಾರೇಟ್

ಕ್ಯಾರೇಟ್

ಕ್ಯಾರೇಟ್ (ಗಜ್ಜರಿ) ತಿಂದರೆ ಕಣ್ಣಿಗೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ. ಅನುಭವದಿಂದ ಬಂದ ಮಾತುಗಳು ಕ್ಯಾರೇಟ್ ಪೋಷಕಾಂಶಗಳ ವಿವರಗಳನ್ನು ತಿಳಿದಾಗ ನಿಜವೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಕ್ಯಾರೇಟ್‪‌ನಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿರುವ ಸಕ್ಕರೆಯ ಕಾರಣ ಹೆಚ್ಚು ಗಜ್ಜರಿಯನ್ನು ತಿನ್ನುವುದು ತರವಲ್ಲ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ, ವಿಟಮಿನ್ ಬಿ6, ತಾಮ್ರ, ಫೋಲಿಕ್ ಆಮ್ಲ, ಥಿಯಾಮಿನ್ ಮತ್ತು ಮೆಗ್ನೀಶಿಯಂಗಳು ಜೀವರಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತವೆ. ಆಶ್ಚರ್ಯಕರ ವಿಷಯವೆಂದರೆ ಗಜ್ಜರಿಯನ್ನು ಬೇಯಿಸಿ ತಿಂದಾಗ ಕ್ಯಾನ್ಸರ್ ತಡೆಯುವ ಪೋಷಕಾಂಶಗಳಲ್ಲಿ ಹೆಚ್ಚಳವಾಗಿರುವುದು ಕಂಡು ಬಂದಿದೆ.

ಬ್ರೋಕೋಲಿ (ಹಸಿರು ಹೂಕೋಸು)

ಬ್ರೋಕೋಲಿ (ಹಸಿರು ಹೂಕೋಸು)

ಅಪ್ಪಟ ಹಸಿರು ಬಣ್ಣದಲ್ಲಿರುವ ಬ್ರೋಕೋಲಿ ನೋಡಲು ಯಥಾವತ್ತು ಹೂಕೋಸಿನಂತಿದ್ದರೂ ಪೋಷಕಾಂಶಗಳಲ್ಲಿ ತುಂಬಾ ವಿಭಿನ್ನವಾಗಿದೆ. ಇದರಲ್ಲಿರುವ glucoraphanin ಎಂಬ ಪೋಷಕಾಂಶ ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇದರ ಹೊರತಾಗಿ ಬ್ರೋಕೋಲಿಯಲ್ಲಿ ಕಿತ್ತಳೆಗಿಂತ ಎರಡು ಪಟ್ಟು ಹೆಚ್ಚು ವಿಟಮಿನ್ ಸಿ, ಹಾಲಿನಲ್ಲಿರುವಷ್ಟೇ ಪ್ರಮಾಣದ ಕ್ಯಾಲ್ಸಿಯಂ ಹಾಗೂ ಹೇರಳ ಪ್ರಮಾಣದಲ್ಲಿ ಸೆಲಿನಿಯಂ ಖನಿಜಗಳಿವೆ. ಹೇರಳವಾದ ವಿವಿಧ ವಿಟಮಿನ್ ಮತ್ತು ಪೋಷಕಾಂಶಗಳು ಮತ್ತು ನಾರು ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಸಹಕರಿಸುತ್ತವೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ದಪ್ಪನಾದ ಎಲೆ ಹೊಂದಿರುವ ಪಾಲಕ್ ಹಾಗೂ ಬಸಲೆ ಸೊಪ್ಪುಗಳಲ್ಲಿ ಹೆಚ್ಚಿನ ಪ್ರಮಾಣದ ಸತು, ಕಬ್ಬಿಣ ಮತ್ತು ಮೆಗ್ನೀಶಿಯಂ ಲೋಹಗಳಿವೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಮತ್ತು ಕೆ ಗಳಿವೆ. ರಕ್ತ ಪರಿಚಲನೆ ಹಾಗೂ ರಕ್ತ ಹೆಪ್ಪುಗಟ್ಟುವಲ್ಲಿ ವಿಟಮಿನ್ ಕೆ ಅಗತ್ಯವಾಗಿದೆ. ರಕ್ತಸಂಚಾರ ಹೆಚ್ಚುವುದರಿಂದ ಜೀವರಸಾಯನ ಕ್ರಿಯೆಗೆ ಹೆಚ್ಚಿನ ಚಾಲನೆ ದೊರೆತು ಅಡಕಗೊಂಡಿರುವ ಕೊಬ್ಬು ಶೀಘ್ರವಾಗಿ ಕರಗಲು ಸಾಧ್ಯವಾಗುತ್ತದೆ.

ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ಸೊಂಟದ ಸುತ್ತಳತೆ ಕಡಿಮೆಗೊಳಿಸಲು ವಿವಿಧ ತರಕಾರಿ ಮತ್ತು ಸೊಪ್ಪುಗಳು ತಮ್ಮದೇ ರೀತಿಯ ನೆರವು ನೀಡುತ್ತವೆ. ಇವೆಲ್ಲವನ್ನೂ ಕ್ರೋಢೀಕರಿಸಿದ ವಿಧಾನ ಶೀಘ್ರವೇ ಪರಿಣಾಮ ಬೀರಲು ತೊಡಗುತ್ತದೆ. ಶುಂಠಿ, ಪುದಿನಾ ಎಲೆಗಳು ಮತ್ತು ಸೌತೆಕಾಯಿಗಳಂತಹ ನಿತ್ಯಬಳಕೆಯ ಸಾಮಾಗ್ರಿಗಳು ಸಹಾ ಕೊಬ್ಬು ಕರಗಿಸಬಲ್ಲವು. ಇವುಗಳ ಜೊತೆಗೆ ಲಿಂಬೆರಸ ಸೇರಿದರೆ ಕೊಬ್ಬು ಕರಗಿಸಲು ಒಂದು ಅದ್ಬುತವಾದ ಮತ್ತು ಸುಲಭವಾದ ವಿಧಾನ ದೊರಕುತ್ತದೆ.

 ಬಳಕೆಯ ವಿಧಾನ

ಬಳಕೆಯ ವಿಧಾನ

*ಎರಡು ಲೀಟರ್ ನೀರಿಗೆ ಕೆಳಗಿನ ತರಕಾರಿಗಳನ್ನು ಸೇರಿಸಿ, ಒಂದು ಮಧ್ಯಮ ಗಾತ್ರದ ಸೌತೆ ಸಿಪ್ಪೆ ಸಹಿತವಾಗಿ ಚಿಕ್ಕದಾಗಿ ಕತ್ತರಿಸಿದ್ದು

*ಸುಮಾರು ಎರಡು ಇಂಚಿನಷ್ಟು ಗಾತ್ರದ ಹಸಿಶುಂಠಿ, ಜಜ್ಜಿದ್ದು (ತುರಿದದ್ದಾದರೆ ಸುಮಾರು ಒಂದು ಚಿಕ್ಕಚಮಚ)

*ಲಿಂಬೆಹಣ್ಣು- 1 (ಚಿಕ್ಕದಾದರೆ 2) ಹಿಂಡಿ ತೆಗೆದ ರಸ ಪುದಿನಾ ಎಲೆಗಳು-ಸುಮಾರು ಹನ್ನೆರಡು (ಬೆರಳುಗಳಲ್ಲಿ ಹಿಚುಕಿದ್ದು) ಎಲ್ಲವನ್ನೂ ನೀರಿನಲ್ಲಿ ಮುಳುಗಿಸಿ ಮುಚ್ಚಳ ಮುಚ್ಚಿ ಇಡಿಯ ರಾತ್ರಿ ನೆನೆಸಿಡಿ.

*ಮರುದಿನ ಈ ತರಕಾರಿಗಳು ಹಾಗೇ ಇರುವಂತೆ ಈ ನೀರನ್ನು ಇಡಿಯ ದಿನ ಸ್ವಲ್ಪ ಸ್ವಲ್ಪವಾಗಿ ಕುಡಿಯುತ್ತಾ ಇರಿ.

*ಕೆಲವೇ ದಿನಗಳಲ್ಲಿ ಪರಿಣಾಮ ಗೋಚರಿಸಲು ತೊಡಗುತ್ತದೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಬ್ರೊಕೋಲಿ, ಬೀನ್ಸ್ ಹೀಗೆ ವಿಟಮಿನ್ ಎ, ಸಿ, ಕೆ ಇರುವ ಆಹಾರಗಳನ್ನು ಹೆಚ್ಚಾಗಿ ತಿಂದರೆ ತಿನ್ನಿ. ಈ ಆಹಾರಗಳು ತಿಂದರೆ ಸುಲಭದಲ್ಲಿ ಜೀರ್ಣವಾಗುವುದರಿಂದ ಹೊಟ್ಟೆ ಬೊಜ್ಜು ಬರುವುದಿಲ್ಲ. ಅಲ್ಲದೆ ಸಾಧ್ಯವಾದಷ್ಟು ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿಯಾಗಿದೆ.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ಹತ್ತು ಹನ್ನೆರಡು ದೊಡ್ಡ ಕರಿ ಬೇವಿನ ಎಲೆಗಳನ್ನು ಮುಂಜಾನೆ ಬರಿಹೊಟ್ಟೆಯಲ್ಲಿ ಚೆನ್ನಾಗಿ ಅಗೆದು ಅದರ ರಸವನ್ನು ಕುಡಿಯಬೇಕು. ಹೀಗೆ ಎರಡು ಮೂರು ತಿಂಗಳು ಮಾಡಿದಲ್ಲಿ ಹೊಟ್ಟೆಯ ಕೊಬ್ಬು ಕಡಿಮೆಯಾಗಿರುವುದು ನೀವು ಕಾಣಬಹುದು.

ಕೇಲ್ ಎಲೆಗಳು

ಕೇಲ್ ಎಲೆಗಳು

(Kale) ಕೇಲ್ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಕೆ, ಸಿ ಹಾಗೂ ಕ್ಯಾಲ್ಸಿಯಂ ಇದೆ. ಇದರಲ್ಲಿರುವ lutein ಮತ್ತು zeaxanthin ಎಂಬ ಪೋಷಕಾಂಶಗಳು ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತವೆ. ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಕೇಲ್ ಎಲೆಗಳು ಕೊಬ್ಬನ್ನು ಕರಗಿಸುವಲ್ಲಿ ಸಹಕಾರಿಯಾಗಿವೆ.

English summary

Vegetarian day Special: Top Vegetables That Burn Belly Fat

Vegetables can help to shrink belly fat and promote weight loss in so many great ways! One of the greatest benefits of vegetables when you’re trying to lose belly fat is that they provide you with a great amount of volume and satiety with few calories. Many vegetables can undoubtedly be termed as fat burning foods or foods that burn fat, mostly owing to their composition. Let us go ahead and look at these "best fat burning vegetables". 
X
Desktop Bottom Promotion