For Quick Alerts
ALLOW NOTIFICATIONS  
For Daily Alerts

ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

|

ದೇವರು ಮತ್ತು ಪ್ರಕೃತಿ ಎರಡೂ ನಮಗೆ ನೀಡಿರುವ ಅದ್ಭುತ ವರ ಎಂದರೆ ಅದು ನಿದ್ದೆ. ನಾವು ಆರೋಗ್ಯಕರವಾಗಿ, ದೀರ್ಘಕಾಲ ಚೆನ್ನಾಗಿ ಬಾಳಲು ನಿದ್ದೆ ನಮಗೆ ತೀರಾ ಅತ್ಯಾವಶ್ಯಕ. ನಿದ್ದೆ ಯಾರು ಚೆನ್ನಾಗಿ ಮಾಡುವುದಿಲ್ಲವೋ ಅಥವಾ ನಿದ್ದೆ ಮಾಡಲು ಕಷ್ಟ ಪಡುತ್ತಾರೋ, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.

ಯಾರು ಇನ್ಸೋಮ್ಮಿಯಾದಿಂದ ಬಳಲುತ್ತಿರುತ್ತಾರೋ, ಅವರು ಉದ್ವೇಗ, ಒತ್ತಡ ಮತ್ತು ಏಕಾಗ್ರತೆಯ ಕೊರತೆಯಿಂದ ನರಳುತ್ತಿರುತ್ತಾರೆ. ಜೊತೆಗೆ ರಾತ್ರಿ ನಿದ್ದೆ ಚೆನ್ನಾಗಿ ಮಾಡದೆ ಇರುವವರು, ಮರು ದಿನ ಪೂರ್ತಿ ಸುಸ್ತಾದವರ ರೀತಿ ಕಾಣುತ್ತಾರೆ. ಅವರಿಗೆ ತೂಕ ಹೆಚ್ಚಾಗುವ ಮತ್ತು ರೋಗ ನಿರೋಧಕ ಶಕ್ತಿ ಕ್ಷೀಣಿಸುವ ಸಮಸ್ಯೆಗಳು ಉಂಟಾಗುತ್ತವೆ. ನಿದ್ದೆಯಲ್ಲಿ ಕಾಣುವ ಕನಸಿನ ಕುರಿತು ಇಂಟರೆಸ್ಟಿಂಗ್ ಕಹಾನಿ!

ನಿದ್ದೆ ಮಾಡಲು ಹಲವಾರು ವಿಧಾನಗಳು ಇರುತ್ತವೆ. ಧ್ಯಾನ, ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವುದು, ಇತ್ಯಾದಿಗಳು ನಿದ್ದೆಗೆ ನೆರವನ್ನು ನೀಡುತ್ತವೆ. ಆದರೂ ನಿದ್ದೆಯ ಜೊತೆಗೆ ಹಲವಾರು ಅದ್ಭುತ ಅಂಶಗಳು ಜೊತೆಗೂಡಿರುತ್ತವೆ. ನಿದ್ದೆಯ ಕುರಿತಾದ ಈ ಕುತೂಹಲ ಕೆರಳಿಸುವ, ಅದೇ ಕಾಲಕ್ಕೆ ವಿಚಿತ್ರವೆನಿಸುವಂತಹ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಬನ್ನಿ ಇನ್ನು ತಡ ಮಾಡದೆ ಅವುಗಳ ಕುರಿತು ತಿಳಿದುಕೊಂಡು ಬರೋಣ...

ನಿಮ್ಮ ಕಣ್ಣುಗಳು ಚಲಿಸುತ್ತಿರುತ್ತವೆ

ನಿಮ್ಮ ಕಣ್ಣುಗಳು ಚಲಿಸುತ್ತಿರುತ್ತವೆ

ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕಣ್ಣು ಗುಡ್ಡೆಗಳು ಅತ್ತಿತ್ತ ಚಲಿಸುತ್ತಿರುತ್ತವೆ. ನಿದ್ದೆಯಲ್ಲಿ ಐದು ಹಂತಗಳು ಇರುತ್ತವೆ. ಈ ಕಣ್ಣುಗಳ ಚಲನೆಯು ಆರಂಭವಾಗುವುದು ಐದನೇ ಹಂತದಲ್ಲಿ, ಇದನ್ನು ಶೀಘ್ರ ಕಣ್ಣುಗಳ ಚಲನೆ ಎಂದು ಕರೆಯುತ್ತಾರೆ.ಈ ಅವಧಿಯಲ್ಲಿ ನೀವು ದೀರ್ಘ ನಿದ್ದೆಯಲ್ಲಿರುತ್ತೀರಿ.

ನೀವು ಪಾರ್ಶ್ವವಾಯುಗೆ ಒಳಗಾಗುತ್ತೀರಿ

ನೀವು ಪಾರ್ಶ್ವವಾಯುಗೆ ಒಳಗಾಗುತ್ತೀರಿ

ನಿಮ್ಮ ಕನಸಿನಲ್ಲಿ ನೀವು ಓಡುವುದು ಅಥವಾ ಏನಾದರು ದೈಹಿಕ ಚಟುವಟಿಕೆ ಮಾಡುವುದು, ಮುಂತಾದವುಗಳನ್ನು ಕಾಣುತ್ತೀರಿ. ಆದರೆ ನಿಜವಾಗಿ ನೀವು ನಿದ್ದೆ ಮಾಡುವಾಗ ನಿಮ್ಮ ದೇಹ ಪಾರ್ಶ್ವವಾಯುಗೆ ಒಳಪಟ್ಟಿರುತ್ತದೆ!. ಹೌದು, ಇದು ನೀವು ಕನಸು ಕಾಣುವಾಗ ಯಾವುದಾದರು ದೈಹಿಕ ಚಲನೆ ಮಾಡದಂತೆ ಕಾಪಾಡುತ್ತದೆ. ಇದು ಪ್ರತಿಯೊಬ್ಬರು ನಿದ್ದೆ ಮಾಡುವಾಗ ಸಂಭವಿಸುತ್ತದೆ.

ನೀವು ಕದಲುತ್ತೀರಿ

ನೀವು ಕದಲುತ್ತೀರಿ

ಕೆಲವೊಮ್ಮೆ ನೀವು ನಿದ್ದೆ ಮಾಡುವಾಗ ಇದ್ದಕ್ಕಿದ್ದಂತೆ ಕದಲುವ ಮೂಲಕ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಿರುತ್ತೀರಿ. ಕೆಲವೊಮ್ಮೆ ಮಂಚದ ಮೇಲಿನಿಂದ ಕೆಳಗೆ ಬೀಳುವುದು ನಡೆಯುತ್ತದೆ. ಇದು ಸಹ ನಿದ್ದೆ ಮಾಡುವಾಗ ಸಾಮಾನ್ಯವಾಗಿ ಕಂಡು ಬರುತ್ತದೆ. ವಾಸ್ತವವಾಗಿ ಮೆದುಳು ನಿದ್ದೆ ಮಾಡುವುದು ಮತ್ತು ನಿದ್ದೆ ಮಾಡದಂತೆ ನಿಮ್ಮನ್ನು ತಡೆಯುವುದರ ನಡುವೆ ಗೊಂದಲಕ್ಕೆ ಒಳಗಾಗುತ್ತದೆ. ಆದರೂ ಇದಕ್ಕೆ ನಿಖರ ಕಾರಣವನ್ನು ನಮ್ಮ ವಿಜ್ಞಾನಿಗಳು ಇನ್ನೂ ಕಂಡು ಹಿಡಿದಿಲ್ಲ.

ನೀವು ಎದ್ದೇಳುವುದು

ನೀವು ಎದ್ದೇಳುವುದು

ಇದು ಸಾಮಾನ್ಯವಾಗಿ ಗಂಡು ಮತ್ತು ಹೆಣ್ಣು ಇಬ್ಬರಲ್ಲಿಯೂ ಕಂಡು ಬರುತ್ತದೆ. ಒಂದು ಅಧ್ಯಯನದ ಪ್ರಕಾರ ನಿಮ್ಮ ದೇಹವು ಕೋಮಾದಂತಹ ಸ್ಥಿತಿಯನ್ನು ತಲುಪುವುದನ್ನು ತಡೆಯಲು ಹೀಗೆ ಮಾಡುತ್ತಿರುತ್ತದೆ. ಎದ್ದೇಳುವ ಸ್ಥಿತಿಯನ್ನು ತಲುಪಿದ ಮೇಲೆ ದೇಹವು ಯಾವಾಗ ಬೇಕಾದರು ಏಳುವ ಹಂತಕ್ಕೆ ಬರುತ್ತದೆ. ಇದರಿಂದ ತಿಳಿಯುವುದೇನೆಂದರೆ, ಮೆದುಳು ಸಹ ನೈಜ ಪ್ರಪಂಚದೊಡನೆ, ನಿದ್ದೆ ಮಾಡುವಾಗ ಸಹ ಸಂಪರ್ಕದಲ್ಲಿರುತ್ತದೆ.ಇದು ನಿದ್ದೆ ಮಾಡುವಾಗ ನಡೆಯುವ ಒಂದು ಅದ್ಭುತ ಸಂಗತಿಯಾಗಿದೆ.

ನಿದ್ದೆಯಲ್ಲಿ ಮಾತನಾಡುವುದು

ನಿದ್ದೆಯಲ್ಲಿ ಮಾತನಾಡುವುದು

ಶೇಕಡಾ 6 ರಷ್ಟು ಜನರು ನಿದ್ದೆಯಲ್ಲಿ ಮಾತನಾಡುತ್ತಿರುತ್ತಾರೆ. ಮಹಿಳೆಯರು ಮತ್ತು ಮಕ್ಕಳಿಗಿಂತ ಪುರುಷರಲ್ಲಿ ಇದರ ಪ್ರಮಾಣ ಹೆಚ್ಚು. ಈ ಸ್ಥಿತಿಯನ್ನು ಸೊಮ್ನಿಲೊಕ್ವಿ ಎಂದು ಕರೆಯುತ್ತಾರೆ. ಇದೇನು ಅಪಾಯಕಾರಿಯಲ್ಲಿ, ಇದರ ಕುರಿತು ನಿಮಗೆ ನೆನಪು ಸಹ ಇರುವುದಿಲ್ಲ. ಆದರೆ ಇದು ನಿಮ್ಮ ಅಕ್ಕ-ಪಕ್ಕ ಮಲಗುವವರಿಗೆ, ವಿಶೇಷವಾಗಿ ನಿಮ್ಮ ಸಂಗಾತಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ, ಒತ್ತಡ, ಖಿನ್ನತೆ ಮತ್ತು ಇತರೆ ಕಾಯಿಲೆಗಳು.

ಸಂದೇಶಗಳು

ಸಂದೇಶಗಳು

ಇದು ಒಂದು ಹೊಸ ಸಮಸ್ಯೆ. ದಿನವಿಡೀ ಸ್ನೇಹಿತರಿಗೆ ಪ್ರೀತಿ ಪಾತ್ರರಿಗೆ ಸಂದೇಶ ಕಳುಹಿಸುವವರು. ರಾತ್ರಿ ತಮಗೆ ಗೊತ್ತಿಲ್ಲದೆ, ಫೋನ್ ಎತ್ತಿಕೊಂಡು ಸಂದೇಶ ಕಳುಹಿಸುತ್ತಾರೆ. ಆದರೆ ಸಂದೇಶ ನಿಖರಾವಾಗಿ ಇರುವುದಿಲ್ಲ. ಯಾವ್ಯಾವುದೋ ಅಕ್ಷರಗಳನ್ನು ಟೈಪ್ ಮಾಡಿ ಕಳುಹಿಸುತ್ತಾರೆ.

ಹಲ್ಲು ಕಡಿಯುವುದು

ಹಲ್ಲು ಕಡಿಯುವುದು

ಬಹುತೇಕ ಮಂದಿ ನಿದ್ದೆ ಮಾಡುವಾಗ ಹಲ್ಲು ಕಡಿಯುತ್ತಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಬ್ರೂಕ್ಸಿಸಂ ಎಂದು ಕರೆಯುತ್ತಾರೆ. ಇದು ಹಲ್ಲುಗಳನ್ನು ವಿರೂಪಗೊಳಿಸುತ್ತದೆ. ದವಡೆಗಳು ಇದರಿಂದ

ಹಾನಿಗೊಳಗಾಗುತ್ತವೆ. ಇದಕ್ಕೂ ಸಹ ಒತ್ತಡ ಮತ್ತು ಉದ್ವೇಗವೇ ಕಾರಣ ಎಂದು ತಿಳಿದುಬಂದಿದೆ. ಇದಕ್ಕಾಗಿ ನಿಮ್ಮ ದಂತ ವೈದ್ಯರನ್ನು ತಕ್ಷಣ ಕಂಡು ಮೌತ್ ಗಾರ್ಡ್ ಅಳವಡಿಸಿಕೊಳ್ಳಿ.

ನೀವು ಕಿವಿಗಡಚಿಕ್ಕುವ ಶಬ್ದವನ್ನು ಕೇಳುತ್ತೀರಿ

ನೀವು ಕಿವಿಗಡಚಿಕ್ಕುವ ಶಬ್ದವನ್ನು ಕೇಳುತ್ತೀರಿ

ನಿದ್ದೆಯಲ್ಲಿ ನೀವು ಕಿವಿಗಡಚಿಕ್ಕುವ ಶಬ್ದವನ್ನು ಕೇಳಬಹುದು. ಅದರಲ್ಲೂ 50 ವರ್ಷದ ನಂತರ ಈ ಸದ್ದುಗಳು, ಅಂದರೆ ಸ್ಫೋಟ ಅಥವಾ ಗನ್ ಸದ್ದು ಮುಂತಾದ ಶಬ್ದಗಳನ್ನು ಕೇಳಬಹುದು. ಇದನ್ನು ಎಕ್ಸ್‌ಪ್ಲೋಡಿಂಗ್ ಹೆಡ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ನೋವಿಲ್ಲದಿದ್ದರು, ನಿಮ್ಮನ್ನು ಭೀತಿಗೆ ಒಳಪಡಿಸುತ್ತದೆ.

English summary

Unknown Facts About Sleep

Sleep is a greatest gift of nature and is must to live a healthy, long and quality life. People who don't fall asleep or have difficulty in falling sleep suffer from both mental and physical health issues. People having insomnia (sleeplessness) suffer from anxiety, stress and lack of concentration. Have a look at some of the weird and interesting things that happen during sleep.
Story first published: Friday, May 22, 2015, 11:10 [IST]
X
Desktop Bottom Promotion