For Quick Alerts
ALLOW NOTIFICATIONS  
For Daily Alerts

ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ

By manu
|

ಹೊಟ್ಟೆ ನೋವಿಗೆ ಸಾಮಾನ್ಯವಾಗಿ ಆಹಾರದಲ್ಲಿ ಅಲರ್ಜಿ, ಹುಳಿತೇಗು, ವಾಯುಪ್ರಕೋಪ, ಅಜೀರ್ಣ, ಮೊದಲಾದ ಕಾರಣಗಳಿಂದ ಬರುತ್ತದೆ, ಆದರೆ ಕೆಲವೊಮ್ಮೆ ಹೊಟ್ಟೆ ನೋವು ಜಠರ ಮತ್ತು ಅಬ್ಡೊಮಿನ್ ಭಾಗದಲ್ಲಿ ಕಂಡು ಬರುವ ನೋವು ಆಗಿರುತ್ತದೆ.

ಈ ನೋವು ದೀರ್ಘಕಾಲದ್ದಾಗಿದ್ದು ಸೂಕ್ತ ಔಷಧಿಗಳನ್ನು, ವೈದ್ಯರ ಪರೀಕ್ಷೆ ಮತ್ತು ಸಲಹೆ ಮೇರೆಗೆ ನಿಗದಿತ ಅವಧಿಯವರೆಗೆ ಸೇವಿಸಬೇಕಾಗುತ್ತದೆ. ಅಲ್ಲದೆ ಆಹಾರದಲ್ಲಿಯೂ ಕೊಂಚ ಪಥ್ಯ ಅನುಸರಿಸಬೇಕಾಗುತ್ತದೆ. ಹೊಟ್ಟೆನೋವು ಯಾವ ಕಾರಣದಿಂದ ಬಂದಿದೆ ಎಂಬ ಮಾಹಿತಿಯನ್ನು ಪಡೆದರೆ ಸೂಕ್ತ ಚಿಕಿತ್ಸೆಗೆ ಅನುಕೂಲವಾಗುತ್ತದೆ. ಯಮಯಾತನೆ ನೀಡುವ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರವೇನು?

ಒಂದು ವೇಳೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡರೆ, ಅಥವಾ ತೀರಾ ಯಾತನಮಯವಾದ ನೋವು ನಿರ್ದಿಷ್ಟ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರೆ, ಬಹುಶಃ ಅದು ಕರುಳುನಾಳ ರೋಗ (appendicitis), ಸಮಸ್ಯೆ ಕೂಡ ಆಗಿರಲು ಬಹುದು, ಇದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಸಮಯದಲ್ಲಿ ನೀವು ಆಸ್ಪತ್ರೆಯಲ್ಲಿ ತಕ್ಷಣ ದಾಖಲಾಗಬೇಕು, ಬನ್ನಿ ವಿವಿಧ ಬಗೆಯ ಹೊಟ್ಟೆ ನೋವುಗಳು ಮತ್ತು ಅವುಗಳಿಗೆ ಇರುವ ಚಿಕಿತ್ಸೆಯ ಕುರಿತು ಇಂದು ತಿಳಿದುಕೊಳ್ಳೋಣ...

ಹೊಟ್ಟೆ ನೋವು

ಹೊಟ್ಟೆ ನೋವು

ಹೊಟ್ಟೆ ನೋವು ಅಥವಾ ಉದರ ಬೇನೆಯು, ಹೊಟ್ಟೆಯಲ್ಲಿ ಆಸಿಡ್ ಸಮಸ್ಯೆಯಿಂದಾಗಿ ಕಾಣಿಸಿಕೊಳ್ಳುವ ಒಂದು ನೋವು ಆಗಿರುತ್ತದೆ.ಇದು ಹೊಟ್ಟೆಯಲ್ಲಿ ಉರಿಯನ್ನು ನೀಡುತ್ತದೆ. ಇದಕ್ಕೆ ತಕ್ಷಣ ಉಪಶಮನವಾಗಿ ಅಂಟಾಸಿಡ್ ಜೆಲ್ (ಮೆಗ್ನಿಷಿಯಂ ಸಾಲ್ಟ್), ತಣ್ಣಗಿರುವ ಹಾಲು ಮತ್ತು ಬೇಕಿಂಗ್ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಿ.

ಹೊಟ್ಟೆ ಮತ್ತು ಕರುಳಿನ ನೋವು

ಹೊಟ್ಟೆ ಮತ್ತು ಕರುಳಿನ ನೋವು

ಈ ಬಗೆಯ ನೋವಿನಲ್ಲಿ ಭೇದಿ ಅಥವಾ ಡಯೇರಿಯಾ ಕಾಣಿಸಿಕೊಳ್ಳಬಹುದು. ಇದಕ್ಕೆ ಕರುಳಿನಲ್ಲಿ ಆಗಿರುವ ಇನ್‌ಫೆಕ್ಷನ್ ಪ್ರಧಾನ ಕಾರಣವಾಗಿರುತ್ತದೆ. ಇದಕ್ಕೆ ನೀವು ಹೆಚ್ಚಾಗಿ ನೀರನ್ನು ಮತ್ತು ದ್ರವ ಪದಾರ್ಥಗಳನ್ನು ಸೇವಿಸಬೇಕು. ಓರಲ್ ರೀಹೈಡ್ರೇಷನ್ ಸಾಲ್ಟ್‌ಗಳು (ಓಆರ್‌ಎಸ್) ಇದಕ್ಕೆ ಒಳ್ಳೆಯ ಮದ್ದು. ನಿಮ್ಮ ಕರುಳುಗಳಿಂದ ಬ್ಯಾಕ್ಟೀರಿಯಾವು ಹೊರ ಹಾಕಲ್ಪಟ್ಟಾಗ ಡಯೇರಿಯಾ ನಿಲ್ಲುತ್ತದೆ. ಇದರೆ ಜೊತೆಗೆ ನಿಮಗೆ ಜ್ವರವಿದ್ದಲ್ಲಿ, ವೈದ್ಯರನ್ನು ಭೇಟಿ ಮಾಡಿ.

ಹೊಟ್ಟೆ ಉಬ್ಬುವಿಕೆ ಮತ್ತು ಸೆಳೆತ

ಹೊಟ್ಟೆ ಉಬ್ಬುವಿಕೆ ಮತ್ತು ಸೆಳೆತ

ಇದು ಸಹ ಅಬ್ಡೊಮೆನ್ ಭಾಗದಲ್ಲಿರುವ ಗ್ಯಾಸ್‌ನಿಂದ ಕಾಣಿಸಿಕೊಳ್ಳುತ್ತದೆ. ಇದೊಂದು ಗಂಭೀರವಾದ ಮತ್ತು ಮುಜುಗರವನ್ನು ತರುವ ಸಮಸ್ಯೆಯಾಗಿರುತ್ತದೆ. ಇದಕ್ಕೆ ಏಲಕ್ಕಿ ಟೀಯನ್ನು ಸೇವಿಸಿ. ಇದು ನಿಮ್ಮ ಹೊಟ್ಟೆಯಿಂದ ಗ್ಯಾಸನ್ನು ಹೊರ ಹಾಕುತ್ತದೆ. ಜೊತೆಗೆ ಏಲಕ್ಕಿಯನ್ನು ಸಹ ನೀವು ಸೇವಿಸಬಹುದು.

ಇರ್ರಿಟೇಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್)

ಇರ್ರಿಟೇಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್)

ಈ ಪರಿಸ್ಥಿತಿಯಲ್ಲಿ, ಡಯೇರಿಯ ಮತ್ತು ಮಲಬದ್ಧತೆ ಎರಡೂ ಕಾಣಿಸಿಕೊಳ್ಳುತ್ತದೆ. ಕರುಳಿನ ಒಳಗೆ ಕಾಣಿಸಿಕೊಳ್ಳುವ ಉರಿಬಾವು, ನೋವು , ಮತ್ತು ಅಬ್ಡೋಮೆನ್ ಸೆಳೆತಗಳು ನಿಮ್ಮನ್ನು ತೀವ್ರತರವಾಗಿ ಭಾದಿಸುತ್ತದೆ. ಮೊಸರು ಸೇವಿಸುವ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ, ಮತ್ತು ನಿಮಗೆ ನೆಮ್ಮದಿಯನ್ನು ಒದಗಿಸುತ್ತದೆ.

ಎದೆ ಉರಿ

ಎದೆ ಉರಿ

ಇದು ಹೊಟ್ಟೆಯಲ್ಲಿರುವ ಅಧಿಕ ಆಸಿಡ್‌ನಿಂದ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯಲ್ಲಿರುವ ಆಸಿಡ್ ಎಸೊಫಗುಸ್ ಕಡೆಗೆ ಬರುವಾಗ ಇದರ ಅನುಭವ ನಿಮಗಾಗುತ್ತದೆ. ಅನ್ನನಾಳದಲ್ಲಿ ಸೇರಿಕೊಳ್ಳುವ ಆಸಿಡ್ ನಿಮಗೆ ಎದೆ ಉರಿಯನ್ನು ತರುತ್ತದೆ. ಇದನ್ನು ನಿವಾರಿಸಿಕೊಳ್ಳಲು, ಪ್ರೋಟಾನ್ ಪಂಪ್ ಇನ್‌ಹಿಬಿಟರ್‌ಗಳನ್ನು ಹೊಂದಿ, ಅಂದರೆ ಒಮೆಪ್ರಜೊಲ್ ಅಥವಾ ಪೆಂಟಾಪ್ರಜೋಲ್ ನಂತಹ ಗ್ಯಾಸ್ ನಿವಾರಕಗಳನ್ನು ಬೆಳಗ್ಗೆಯೇ ಸೇವಿಸಿ.

English summary

Types Of Abdominal Pain And Remedies

Abdominal pain means any pain in the stomach and lower abdominal tract. Abdominal pain is very annoying condition and you must know the exact cause to treat it. Abdominal pain can be due to excess acid in the stomach (hyper-acidity), diarrhea (abdominal cramps) or ulcers in stomach and intestines or may be even bloating.
Story first published: Thursday, June 4, 2015, 19:59 [IST]
X
Desktop Bottom Promotion