For Quick Alerts
ALLOW NOTIFICATIONS  
For Daily Alerts

ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

|

ಏರುತ್ತಿರುವ ತೂಕ ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುತ್ತಿದೆ. ಸಾಧಾರಣವಾಗಿ ಇದಕ್ಕೆ ಉಪಾಯ ಥಟ್ಟನೇ ನೆನಪಿಗೆ ಬರುವುದು ಊಟ ಕಡಿಮೆ ಮಾಡುವುದು ಹಾಗೂ ವ್ಯಾಯಾಮವನ್ನು ಹೆಚ್ಚಿಸುವುದು. ಆದರೆ ದೃಢಸಂಕಲ್ಪ ಮಾಡಿ ಊಟ ಬಿಟ್ಟು ಕೊಂಚ ಹೆಚ್ಚಿನ ವ್ಯಾಯಾಮ ಮಾಡಿ ಒಂದೆರಡು ಕೇಜಿ ಕಳೆದುಕೊಂಡರೂ ಮುಂದಿನ ತಿಂಗಳಲ್ಲಿ ಕಳೆದ ಒಂದು ಕೇಜಿಯ ಬದಲಿಗೆ ಎರಡು ಕೇಜಿ ಹೆಚ್ಚಾಗುವುದು ಇನ್ನಷ್ಟು ಚಿಂತನೆಗೆ ದೂಡುತ್ತದೆ. ಹಾಗಾದರೆ ನಾವು ಎಲ್ಲಿ ಎಡವುತ್ತಿದ್ದೇವೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು.

ಬನ್ನಿ ಇಂದು ಬೋಲ್ಡ್ ಸ್ಕೈ ನಿಮಗಾಗಿ ತೂಕವನ್ನು ಕಡಿಮೆಗೊಳಿಸುವ ಆಹಾರಗಳನ್ನು ವಿವರಿಸಲಾಗಿದೆ. ಸಾಕಷ್ಟು ವ್ಯಾಯಾಮ ಹಾಗೂ ಸೂಕ್ತವಾದ ಆಹಾರಗಳಿಂದ ಕಲವೇ ದಿನಗಳಲ್ಲಿ ತೂಕ ಇಳಿಸುವಿಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಸೂಕ್ತವಾದ ಎಂಟು ಆಹಾರ ವಿಧಾನಗಳನ್ನು ವಿವರಿಸಲಾಗಿದೆ. ಮುಂದೆ ಓದಿ.. ದೇಹದ ಕೊಬ್ಬು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು

Top Instant weight loss tips in kannada

ಊಟದ ಕ್ರಮ ಶಿಸ್ತು ಬದ್ಧವಾಗಿರಲಿ
ಸುಭಾಷಿತವೊಂದು ಹೀಗೆ ಹೇಳುತ್ತದೆ. ಒಂದು ಹೊತ್ತು ಉಣ್ಣವನು ಯೋಗಿ, ಎರಡು ಹೊತ್ತು ಉಣ್ಣವನು ಭೋಗಿ, ಮೂರು ಹೊತ್ತು ಉಣ್ಣವನು ರೋಗಿ, ನಾಲ್ಕು ಹೊತ್ತು ಉಣ್ಣವನನ್ನು ಹೊತ್ತುಕೊಂಡು ಹೋಗಿ. ಈ ಸುಭಾಷಿತ ಪ್ರಚಲಿತವಿದ್ದ ಕಾಲದಲ್ಲಿ ದೈಹಿಕ ಶ್ರಮ ಸ್ವಲ್ಪ ಹೆಚ್ಚೇ ಇತ್ತು. ಹಣ ಕೊಟ್ಟು ದೈಹಿಕ ಶ್ರಮ ಪಡೆಯಬೇಕಾಗಿರುವ ಇಂದಿನ ದಿನಗಳಲ್ಲಿ ನಾಲ್ಕು ಹೊತ್ತು ಉಣ್ಣುವುದೇ ಶ್ರೇಷ್ಟ. ದಿನದಲ್ಲಿ ಮೂರು ಬಾರಿ ಹೆಚ್ಚು ಪ್ರಮಾಣದಲ್ಲಿ ಉಣ್ಣುವುದಕ್ಕಿಂತ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ನಾಲ್ಕರಿಂದ ಐದು ಬಾರಿ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಆಹಾರ ಸೇವಿಸುವುದು ಉತ್ತಮ. ತೂಕ ಇಳಿಸುವಲ್ಲಿ ಜೇನುತುಪ್ಪವು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಏಕೆಂದರೆ ಸುಮಾರು ಮೂರುವರೆ ಗಂಟೆಗಳ ಬಳಿಕ ಜಠರ ಖಾಲಿಯಾಗಿ ಆಹಾರ ಕರುಳುಗಳಿಗೆ ರವಾನೆಯಾಗುತ್ತದೆ. ಬಳಿಕ ಖಾಲಿಯಾಗಿರುವ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚುತ್ತದೆ. ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಚಿಕ್ಕ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ಜಠರ, ಕರುಳುಗಳು, ಪಚನ ವ್ಯವಸ್ಥೆ ಸುಲಲಿತವಾಗಿ ಕೆಲಸ ಮಾಡುತ್ತವೆ ಹಾಗೂ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ. ಇನ್ನೂ ಕೆಲವು ಆಹಾರ ತಜ್ಞರು ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ವಲ್ಪ ಸ್ವಲ್ಪವಾಗಿ ಆಹಾರ ಸೇವಿಸಲು ಸೂಚಿಸುತ್ತಾರೆ. ಆದರೆ ಕೆಲಸದ ಅವಧಿಯಲ್ಲಿ ಹೆಚ್ಚಾಗಿ ಅನುಸರಿಸಲು ಸಾಧ್ಯವಿಲ್ಲ.

ರಾತ್ರಿ ಊಟ ಲಘುವಾಗಿರಲಿ

ರಾತ್ರಿ ನಾವು ಮಲಗಿದ ಬಳಿಕ ಹಲವು ಅನೈಚ್ಛಿಕ ಚಟುವಟಿಕೆಗಳು ನಡೆಯುತ್ತವೆ. ದಿನದ ಆಹಾರವನ್ನು ಪೂರ್ಣವಾಗಿ ಜೀರ್ಣಿಸಿ ಅದರಲ್ಲಿರುವ ಹೆಚ್ಚಿನ ಪೋಷಕಾಂಶಗಳನ್ನು ಕೊಬ್ಬಾಗಿ ಪರಿವರ್ತಿಸಿ ಶೇಖರಿಸಿಡುವ ಕಾರ್ಯವೂ ಒಂದು. ಒಂದು ವೇಳೆ ರಾತ್ರಿ ಊಟ ಭಾರಿಯಾಗಿದ್ದರೆ ಭಾರೀ ಪ್ರಮಾಣದಲ್ಲಿ ಪೋಷಕಾಂಶಗಳೂ ಲಭ್ಯವಾಗಿ ಹೆಚ್ಚಿನ ಕೊಬ್ಬು ಶೇಖರವಾಗುತ್ತದೆ. ಬದಲಿಗೆ ನಾರು ಹೆಚ್ಚಿರುವ ಬೇಯಿಸಿದ ತರಕಾರಿ ಹಾಗೂ ಹಣ್ಣು ಹಂಪಲು ರಾತ್ರಿ ಊಟಕ್ಕೆ ಸೂಕ್ತವಾಗಿದೆ. ಊಟದ ಬಳಿಕ ಕೊಂಚ ನಡೆಯುವುದೂ ಆರೋಗ್ಯಕ್ಕೆ ಒಳ್ಳೆಯದು.

ಹಣ್ಣುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ
ನೀರಿನ ಅಂಶದಿಂದ ಕೂಡಿದ ಹಣ್ಣುಗಳು ನಿಮ್ಮ ತೂಕವನ್ನು ಇಳಿಸಿಕೊಳ್ಳುವ ಪ್ರಕ್ರಿಯೆಯನ್ನು ವೇಗ ಮಾಡಬೇಕೆಂದರೆ, ನೀರಿನ ಅಂಶದಿಂದ ಕೂಡಿದ ಆಹಾರಗಳನ್ನು ಸೇವಿಸಬೇಕು. ಅದರಲ್ಲಿಯೂ ಸಿಟ್ರಸ್ ಹಣ್ಣುಗಳಲ್ಲಿ ನೀರಿನಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಜೊತೆಗೆ ಈ ಹಣ್ಣುಗಳಲ್ಲಿ ಕ್ಯಾಲೋರಿಗಳು ಸಹ ಕಡಿಮೆ ಪ್ರಮಾಣದಲ್ಲಿರುತ್ತವೆ. ಇದಕ್ಕೂ ಮೇಲಾಗಿ ಸಿಟ್ರಸ್ ಹಣ್ಣುಗಳಲ್ಲಿ, ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಅದು ಕಣ್ಣು ಮತ್ತು ತ್ವಚೆಗೆ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ.

ಜ೦ಕ್ ಫುಡ್ ಆಹಾರಪದಾರ್ಥಗಳ ಸೇವನೆಯಿಂದ ದೂರವಿರಿ
ಜ೦ಕ್ ಫುಡ್‌ಗಳು ಸ೦ಸ್ಕರಿತ ಆಹಾರಪದಾರ್ಥಗಳ ವರ್ಗಕ್ಕೆ ಸೇರಿದವುಗಳಾಗಿದ್ದು, ಅವುಗಳಲ್ಲಿ ಬರೀ ಕ್ಯಾಲರಿಗಳಲ್ಲದೇ ಬೇರೇನೂ ಇರುವುದಿಲ್ಲ. ಜೇನುತುಪ್ಪವನ್ನೊಳಗೊ೦ಡ ಆಹಾರಕ್ರಮದ ಸ೦ಪೂರ್ಣ ಲಾಭವನ್ನು ಪಡೆದುಕೊಳ್ಳುವ೦ತಾಗಲು ಜ೦ಕ್ ಫುಡ್ ಗಳ ಸೇವನೆಯನ್ನು ತ್ಯಜಿಸಿರಿ.

English summary

Top Instant weight loss tips in kannada

we look at the best diet tips for weight loss. By following these diet tips, you can be assured of losing weight in just few days. This diet, however, requires some bit of exercise if not too much of it. Let us go ahead and look at these diet tips for weight loss. Here are 8 best ways to lose weight by following a diet only. Read on...
Story first published: Wednesday, August 12, 2015, 20:04 [IST]
X
Desktop Bottom Promotion