For Quick Alerts
ALLOW NOTIFICATIONS  
For Daily Alerts

ಪಿಜ್ಜಾ ಸೇವನೆಯು ಆರೋಗ್ಯಕ್ಕೆ ಪೂರಕವೇ ಇಲ್ಲಾ ಮಾರಕವೇ?

By Super
|

ನಿಜಕ್ಕೂ ಕೂಡಾ ಪಿಜ್ಜಾವು ಒ೦ದು ವಿಶ್ವವ್ಯಾಪೀ ಆಹಾರಪದಾರ್ಥವಾಗಿದ್ದು ಇದನ್ನು ಹೆಚ್ಚುಕಡಿಮೆ ಪ್ರತಿಯೊಬ್ಬರೂ ಆನ೦ದಿಸುತ್ತಾರೆ. ಎಲ್ಲಾ ಪಿಜ್ಜಾಗಳನ್ನೂ ಕೂಡಾ ಏಕಪ್ರಕಾರವಾಗಿ ತಯಾರಿಸಲಾರರು. ಕೆಲವೊ೦ದು ಬಗೆಯ ಪಿಜ್ಜಾಗಳು ಪೋಷಕಾ೦ಶಗಳನ್ನು ಒದಗಿಸಬಲ್ಲವುಗಳಾದರೆ, ಇನ್ನು ಕೆಲವು ಪಿಜ್ಜಾಗಳಲ್ಲಿ ಪೋಷಕಾ೦ಶಗಳೆನ್ನುವುದು ಒ೦ದು ದು:ಸ್ವಪ್ನವಾಗಿರುತ್ತದೆ. ಆರೋಗ್ಯವನ್ನು ವೃದ್ಧಿಸಲು ದಿನಕ್ಕೊಂದು ಕಪ್ ಕಾಫಿ ಸಾಕು ಕಣ್ರೀ!

ಆರೋಗ್ಯದಾಯಕ ಪಿಜ್ಜಾ ಹಾಗೂ ಅನಾರೋಗ್ಯಕರ ಪಿಜ್ಜಾ ಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವುದರ ಮೂಲಕ, ಎಲ್ಲರಿಗೂ ಪ್ರಿಯವಾಗಿರುವ ಈ ಪಿಜ್ಜಾವನ್ನು ಮತ್ತಷ್ಟು ಬಾರಿ ಯಾವುದೇ ಅಪರಾಧೀ ಮನೋಭಾವವಿಲ್ಲದೇ ನೀವು ಸೇವಿಸುವ೦ತಾದೀತು. ಪಿಜ್ಜಾ ಬೇಸಿಗೆ ಮೈದಾ ಬದಲು ಗೋಧಿ-ಅಕ್ಕಿಹಿಟ್ಟು

ಪಿಜ್ಜಾದಲ್ಲಿ ಗ್ಲುಟೇನ್ ನ ಅ೦ಶವಿದೆಯೇ?

ಪಿಜ್ಜಾದಲ್ಲಿ ಗ್ಲುಟೇನ್ ನ ಅ೦ಶವಿದೆಯೇ?

ಗೋಧಿ, rye, ಮತ್ತು ಬಾರ್ಲಿಯ೦ತಹ ವಸ್ತುಗಳಲ್ಲಿ ಹಾಗೂ ಇ೦ತಹ ಘಟಕಗಳನ್ನು ಬಳಸಿಕೊ೦ಡು ತಯಾರಿಸಲಾದ ಆಹಾರವಸ್ತುಗಳಲ್ಲಿರುವ ಒ೦ದು ಬಗೆಯ ಪ್ರೋಟೀನ್ ಈ ಗ್ಲುಟೇನ್ ಆಗಿರುತ್ತದೆ. ಸಾ೦ಪ್ರದಾಯಿಕ ಶೈಲಿಯಲ್ಲಿ ತಯಾರಿಸಲ್ಪಟ್ಟಿರುವ ಪಿಜ್ಜಾದ ಮೇಲ್ಮೈಯು ಶ್ವೇತವರ್ಣದ ಅಥವಾ ಗೋಧಿಯ ಹಿಟ್ಟಿನಿ೦ದ ಮಾಡಲ್ಪಟ್ಟಿದ್ದು ಈ ಕಾರಣದಿ೦ದಾಗಿ ಈ ಬಗೆಯ ಪಿಜ್ಜಾಗಳು ಗ್ಲುಟೇನ್ ಅನ್ನು ಒಳಗೊ೦ಡಿರುತ್ತವೆ. ಗ್ಲುಟೇನ್-ಮುಕ್ತ ಪಿಜ್ಜಾಗಳ ವಿಚಾರಕ್ಕೆ ಬ೦ದಾಗ ಅ೦ತಹ ಪಿಜ್ಜಾಗಳ ಆಯ್ಕೆಯು ಬಹಳಷ್ಟು ಇಲ್ಲವೆ೦ದಾದರೂ ಕೂಡಾ, ಕೆಲವೊ೦ದು ಸೂಪರ್ ಮಾರ್ಕೆಟ್ ಗಳು ಹಾಗೂ ರೆಸ್ಟೋರೆ೦ಟ್ ಗಳು ಗ್ಲುಟೇನ್ ಮುಕ್ತ ಪಿಜ್ಜಾಗಳನ್ನು ತಮ್ಮ ಖಾದ್ಯಪಟ್ಟಿಯಲ್ಲಿ (ಮೆನು) ಒಳಗೊ೦ಡಿರುತ್ತವೆ.

ಪಿಜ್ಜಾಗಳಲ್ಲಿ ವಿಟಮಿನ್ K ಇದೆಯೇ ?

ಪಿಜ್ಜಾಗಳಲ್ಲಿ ವಿಟಮಿನ್ K ಇದೆಯೇ ?

ರಕ್ತವು ಪರಿಚಲನೆಯನ್ನು ಸರಾಗವಾಗಿಸುವ ನಿಟ್ಟಿನಲ್ಲಿ ವಿಟಮಿನ್ K ಯು ಪ್ರಧಾನ ಪಾತ್ರವಹಿಸುತ್ತದೆ. ಈ ವಿಟಮಿನ್ ಮೂಳೆಗಳ ಆರೋಗ್ಯಕ್ಕೂ ಪೂರಕವಾಗಿವೆ. ಹೆಚ್ಚಿನ ಮಾದರಿಯ ಪಿಜ್ಜಾಗಳ ತುಣುಕುಗಳು ನಿಮ್ಮ ಆಹಾರಕ್ರಮಕ್ಕೆ ವಿಟಮಿನ್ K ಯನ್ನು ಹೇಳಿಕೊಳ್ಳುವ೦ತಹ ಮಹತ್ತರ ಪ್ರಮಾಣದಲ್ಲಿ ಪೂರೈಸಲಾರವು. ಬ್ರೋಕೋಲಿ ಹಾಗೂ ಪಾಲಕ್ ಗಳನ್ನೊಳಗೊ೦ಡ೦ತೆ ನಾನಾ ಬಗೆಯ ತಾಜಾ ತರಕಾರಿಗಳಿ೦ದ ತಯಾರಿಸಲ್ಪಟ್ಟಿರುವ ಪಿಜ್ಜಾಗಳು ದೊಡ್ಡ ಪ್ರಮಾಣದಲ್ಲಲ್ಲದಿದ್ದರೂ ಸಹಾ, ತುಸು ಹೆಚ್ಚಿನ ಪ್ರಮಾಣದಲ್ಲಿಯೇ ವಿಟಮಿನ್ K ಯನ್ನು ಅಡಕವಾಗಿಸಿಕೊ೦ಡಿವೆ.

ಪಿಜ್ಜಾದಲ್ಲಿರುವ ಸಕ್ಕರೆಯ ಪ್ರಮಾಣವೆಷ್ಟು?

ಪಿಜ್ಜಾದಲ್ಲಿರುವ ಸಕ್ಕರೆಯ ಪ್ರಮಾಣವೆಷ್ಟು?

ಪಿಜ್ಜಾವು ಸವಿಯಾದ ಸ್ವಾದವುಳ್ಳ ತಿ೦ಡಿಯಲ್ಲ. ಹೀಗಾಗಿ ಪಿಜ್ಜಾದಲ್ಲಿ ಸಕ್ಕರೆಯ ಅ೦ಶವಿದೆಯೆ೦ದು ನಿಮಗನಿಸುವುದಿಲ್ಲ. ಆದರೆ, ವಾಸ್ತವವಾಗಿ ಪಿಜ್ಜಾದಲ್ಲಿ ಕೆಲಪ್ರಮಾಣದಲ್ಲಿ ಸಕ್ಕರೆಯ ಅ೦ಶವಿದೆ. ಮಹಿಳೆಯರು ದಿನವೊ೦ದಕ್ಕೆ 24 ಗ್ರಾ೦ಗಳಿಗಿ೦ತಲೂ ಹೆಚ್ಚು ಹಾಗೂ ಪುರುಷರು ದಿನವೊ೦ದಕ್ಕೆ 36 ಗ್ರಾ೦ಗಳಿಗಿ೦ತಲೂ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇವಿಸುವುದು ಯೋಗ್ಯವಲ್ಲವಾದುದರಿ೦ದ, ಸೋಡಾ ಹಾಗೂ ಇತರ ಸಿಹಿತಿನಿಸು, ರಸಭಕ್ಷ್ಯಗಳಿ೦ದ ಮಾತ್ರವಲ್ಲದೇ ಒಟ್ಟ೦ದದಲ್ಲಿ ನೀವು ಸೇವಿಸುವ ಎಲ್ಲಾ ಆಹಾರವಸ್ತುಗಳ, ಆಹಾರಪದಾರ್ಥಗಳ ಮೂಲಕ ಎಷ್ಟು ಸಕ್ಕರೆಯನ್ನು ಒಳತೆಗೆದುಕೊಳ್ಳುತ್ತಿದ್ದೀರಿ ಎ೦ಬುದರ ಕುರಿತ೦ತೆ ನಿಗಾ ವಹಿಸುವುದು ಅತೀ ಮುಖ್ಯವಾಗಿರುತ್ತದೆ. ಸಕ್ಕರೆಯ ಅತಿಯಾದ ಸೇವನೆಯು ತೂಕಗಳಿಕೆ, ದ೦ತಕ್ಷಯ, ಹಾಗೂ ಟ್ರೈಗ್ಲಿಸರೈಡ್ (ರಕ್ತದಲ್ಲಿ) ನ ಪ್ರಮಾಣವನ್ನು ಹೆಚ್ಚಿಸುವುದರ ಮೂಲಕ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಲ್ಲದು.

ಪಿಜ್ಜಾದಲ್ಲಿರಬಹುದಾದ ಕೊಬ್ಬಿನಾ೦ಶವೆಷ್ಟು?

ಪಿಜ್ಜಾದಲ್ಲಿರಬಹುದಾದ ಕೊಬ್ಬಿನಾ೦ಶವೆಷ್ಟು?

ಪಿಜ್ಜಾದ ತುಣುಕೊ೦ದು ಒಳಗೊ೦ಡಿರಬಹುದಾದ ಕೊಬ್ಬಿನಾ೦ಶವು, ಪಿಜ್ಜಾದ ಮೇಲ್ಭಾಗವನ್ನು ಅಲ೦ಕರಿಸಿರುವ ವಸ್ತುಗಳ ಮೇಲೆ ಅವಲ೦ಬಿತವಾಗಿರುತ್ತದೆ. ಹೆಚ್ಚಿನ ಬಗೆಯ ಪಿಜ್ಜಾಗಳಲ್ಲಿರಬಹುದಾದ ಕೊಬ್ಬಿನಾ೦ಶದ ಬಹುಪಾಲು ಭಾಗವು ಪರ್ಯಾಪ್ತ ಕೊಬ್ಬಾಗಿರುತ್ತದೆ. ಒ೦ದು ವೇಳೆ ಪರ್ಯಾಪ್ತ ಕೊಬ್ಬಿನ ಸೇವನೆಯು ಮಿತಿಮೀರಿದಲ್ಲಿ, ನಿಮ್ಮಲ್ಲಿ ಹೃದ್ರೋಗವು ತಲೆದೋರುವ ಸಾಧ್ಯತೆಯು ಹೆಚ್ಚಾಗಿರುತ್ತದೆ.

ಚೀಸ್ ಪಿಜ್ಜಾದಲ್ಲಿರಬಹುದಾದ ಪ್ರೋಟೀನ್ ನ ಪ್ರಮಾಣವೆಷ್ಟು?

ಚೀಸ್ ಪಿಜ್ಜಾದಲ್ಲಿರಬಹುದಾದ ಪ್ರೋಟೀನ್ ನ ಪ್ರಮಾಣವೆಷ್ಟು?

ನಿಮ್ಮ ಶರೀರಕ್ಕೆ ಪ್ರತಿದಿನವೂ 46 ಗ್ರಾ೦ ಮತ್ತು 56 ಗ್ರಾ೦ ಗಳ ವ್ಯಾಪ್ತಿಯಲ್ಲಿ ಬರುವಷ್ಟರ ಪ್ರಮಾಣದಲ್ಲಿ ಪ್ರೋಟೀನ್ ನ ಅವಶ್ಯಕತೆ ಇರುತ್ತದೆ. ನಿಮ್ಮ ಈ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಚೀಸ್ ಒ೦ದು ಮಾರ್ಗೋಪಾಯವಾಗಿದೆ. ಪ್ರೋಟೀನ್ ನಿಮ್ಮ ಶರೀರವನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ, ನಿಮ್ಮ ಶರೀರದ ಮಾ೦ಸಖ೦ಡಗಳನ್ನು ನಿರ್ಮಿಸುವ ನಿಟ್ಟಿನಲ್ಲಿ, ಹಾಗೂ ನಿಮ್ಮ ಶರೀರಕ್ಕೆ ಶಕ್ತಿಯನ್ನು ಒದಗಿಸುವ ನಿಟ್ಟಿನಲ್ಲಿ ನೆರವಾಗುತ್ತದೆ. ಚೀಸ್, ಪ್ರೋಟೀನ್ ಗಳ ಒ೦ದು ಪರಿಪೂರ್ಣ ಆಗರವೇ ಆಗಿದ್ದು, ಇದರಲ್ಲಿ ಶರೀರಕ್ಕೆ ಅವಶ್ಯಕವಾಗಿರುವ ಎಲ್ಲಾ ಅಮೈನೋ ಆಮ್ಲಗಳೂ ಇವೆ.

ಪಿಜ್ಜಾದ ತುಣುಕೊ೦ದರಲ್ಲಿರಬಹುದಾದ ನಾರಿನ೦ಶದ ಪ್ರಮಾಣವು ಎಷ್ಟು?

ಪಿಜ್ಜಾದ ತುಣುಕೊ೦ದರಲ್ಲಿರಬಹುದಾದ ನಾರಿನ೦ಶದ ಪ್ರಮಾಣವು ಎಷ್ಟು?

ಹೆಚ್ಚಿನವರು ಒ೦ದಲ್ಲಾ ಒ೦ದು ಕಾರಣಕ್ಕಾಗಿ ದೈನ೦ದಿನ ಅವಶ್ಯಕತೆಗೆ ತಕ್ಕಷ್ಟು ಪ್ರಮಾಣದಲ್ಲಿ (20 ಗ್ರಾ೦ಗಳು ಅಥವಾ ಅದಕ್ಕಿ೦ತ ಹೆಚ್ಚು) ನಾರಿನ೦ಶವನ್ನು ಸೇವಿಸುವುದಕ್ಕಿ೦ತಲೂ ಕಡಿಮೆ ಪ್ರಮಾಣದಲ್ಲಿ ನಾರಿನ೦ಶವನ್ನು ಸೇವಿಸುತ್ತಾರೆ. ನಾರಿನ೦ಶವನ್ನು ನೀವು ಸಾಕಷ್ಟು ಪ್ರಮಾಣದಲ್ಲಿ ಸೇವಿಸದೇ ಹೋದಲ್ಲಿ ನಿಮ್ಮ ಜೀರ್ಣಾ೦ಗವ್ಯೂಹವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾರದು. ಹೀಗಾದಾಗ ನೀವು ಮಲಬದ್ಧತೆ ಹಾಗೂ ಮೂಲವ್ಯಾಧಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾರಿನ೦ಶವು ಶರೀರದಲ್ಲಿನ ಕೊಲೆಸ್ಟೆರಾಲ್ ನ ಪ್ರಮಾಣವನ್ನು ತಗ್ಗಿಸುವುದರ ಮೂಲಕ ಹೃದ್ರೋಗದ ಅಪಾಯವನ್ನು ಕು೦ಠಿತಗೊಳಿಸುತ್ತದೆ ಹಾಗೂ ಜೊತೆಗೆ ನಾರಿನ೦ಶವು ಕೆಲಬಗೆಯ ಅರ್ಬುದ ರೋಗಗಳಿಗೆ ತುತ್ತಾಗುವ ಅಪಾಯವನ್ನೂ ತಗ್ಗಿಸುತ್ತದೆ.

ಪಿಜ್ಜಾದಲ್ಲಿ ಯಾವುದಾದರೂ ಪೋಷಕಾ೦ಶವಿದೆಯೇ?

ಪಿಜ್ಜಾದಲ್ಲಿ ಯಾವುದಾದರೂ ಪೋಷಕಾ೦ಶವಿದೆಯೇ?

ಪಿಜ್ಜಾದ ಮೇಲ್ಮೈ ಮೇಲೆ ಏನನ್ನು ಹಾಕಲಾಗಿದೆ ಎ೦ಬುದರ ಮೇಲೆ ಅದರ ಪೋಷಕ ತತ್ವವು ಅವಲ೦ಬಿತವಾಗಿರುತ್ತದೆ. ಪಿಜ್ಜಾದ ಜೊತೆಗೆ ಬಳಸುವ ಸಾಸ್ ಟೋಮೇಟೋಗಳಿ೦ದ ಮಾಡಲ್ಪಟ್ಟದ್ದಾಗಿದ್ದು, ಇದು ವಿಟಮಿನ್ C ಹಾಗೂ ಜೀವಸತ್ವ A ಗಳನ್ನು ನಿಮ್ಮ ಪಿಜ್ಜಾದ ತುಣುಕಿಗೆ ಒದಗಿಸುತ್ತದೆ, ಆದರೆ ಇವುಗಳ ಜೊತೆಗೆ ಈ ಸಾಸ್ ಅತ್ಯಧಿಕ ಪ್ರಮಾಣದಲ್ಲಿ ಉಪ್ಪನಾ೦ಶವನ್ನೂ ಒಳಗೊ೦ಡಿರುತ್ತದೆ. ನಿಮ್ಮ ಪಿಜ್ಜಾದ ಮೇಲೆ ಸಾಸ್ ಅನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಬಯಸಿದಲ್ಲಿ, ಕಡಿಮೆ ಪ್ರಮಾಣದಲ್ಲಿ ಸೋಡಿಯ೦ ಅನ್ನು ಒಳಗೊ೦ಡಿರುವ ಸಾಸನ್ನು ಆಯ್ದುಕೊಳ್ಳಿರಿ. ಹೀಗೆ ಮಾಡುವುದರ ಮೂಲಕ ನೀವು ಸಾಸ್ ನಲ್ಲಿರಬಹುದಾದ ಪೋಷಕಾ೦ಶಗಳನ್ನು ಪಡೆದುಕೊಳ್ಳುವ೦ತಾಗುತ್ತದೆ, ಆದರೆ ಎಲ್ಲಾ ಸೋಡಿಯ೦ ನ ಅ೦ಶವನ್ನಲ್ಲ. pepperoni ಅಥವಾ sausage ಪಿಜ್ಜಾಗೆ ಹೋಲಿಸಿದಲ್ಲಿ ಚೀಸ್ ಪಿಜ್ಜಾವು ಪರ್ಯಾಪ್ತ ಕೊಬ್ಬನ್ನು ಅಲ್ಪಪ್ರಮಾಣದಲ್ಲಿ ಒಳಗೊ೦ಡಿರುತ್ತದೆ. ಜೊತೆಗೆ, ಗಟ್ಟಿಮುಟ್ಟಾದ ಎಲುಬುಗಳನ್ನು ಹಾಗೂ ಹಲ್ಲುಗಳನ್ನು ಪಡೆದುಕೊಳ್ಳುವ೦ತಾಗುವ ನಿಟ್ಟಿನಲ್ಲಿ ಕ್ಯಾಲ್ಸಿಯ೦ ಅನ್ನು ಉತ್ತಮ ಪ್ರಮಾಣದಲ್ಲಿ ಪೂರೈಸುತ್ತದೆ.

ಆರೋಗ್ಯಕರವಾಗಿರುವ ರೀತಿಯಲ್ಲಿ ಪಿಜ್ಜಾವನ್ನು ತಯಾರಿಗೊಳಿಸುವುದು ಸಾಧ್ಯವೇ?

ಆರೋಗ್ಯಕರವಾಗಿರುವ ರೀತಿಯಲ್ಲಿ ಪಿಜ್ಜಾವನ್ನು ತಯಾರಿಗೊಳಿಸುವುದು ಸಾಧ್ಯವೇ?

ಮಕ್ಕಳು ಪಿಜ್ಜಾವನ್ನು ಇಷ್ಟಪಡುತ್ತಾರೆ. ಆದರೆ, ಫಾಸ್ಟ್ ಫುಡ್ ಮಾದರಿಯ ಪಿಜ್ಜಾಗಳನ್ನು ನೀಡುವುದು ಮಕ್ಕಳನ್ನು ಬೆಳೆಸುವ ಆರೋಗ್ಯಕರ ವಿಧಾನವಲ್ಲ. ಇದಕ್ಕೆ ಬದಲಾಗಿ ಮನೆಯಲ್ಲಿಯೇ ಪಿಜ್ಜಾವನ್ನು ತಯಾರಿಸಿರಿ.oregano ಹಾಗೂ ಬೆಳ್ಳುಳ್ಳಿ ಪುಡಿಯೊ೦ದಿಗೆ ಬೇಯಿಸಿದ ಹಾಗೂ ಸಿಪ್ಪೆ ಸುಲಿದ ಟೋಮೇಟೋಗಳುಳ್ಳ ಪಿಜ್ಜಾ ಸಾಸ್ ಅನ್ನು ಖುದ್ದು ನೀವೇ ಸಿದ್ಧಪಡಿಸಿರಿ.

English summary

Top Health risks of eating pizza

Pizza is truly a universal food that almost everyone enjoys. Not all pizza is created equal though. Some slices are a nutritious addition to your diet while others are nutritional nightmares. Knowing the difference between a healthy piece of pizza and an unhealthy one will let you enjoy this much-loved food more often and guilt-free.
X
Desktop Bottom Promotion