For Quick Alerts
ALLOW NOTIFICATIONS  
For Daily Alerts

ವಿಭಿನ್ನ ವಿಭೂತಿ ನಿಮ್ಮ ಆರೋಗ್ಯದ ಸಂಗಾತಿ..

By Su.Ra
|

ವಿಭೂತಿ.. ಹಿಂದೂ ಸಂಪ್ರದಾಯದಲ್ಲಿ ವಿಭೂತಿಗೆ ವಿಶೇಷ ಸ್ಥಾನಮಾನ..ಹಣೆಗೆ ಮತ್ತು ದೇಹದ ವಿವಿದೆಡೆಗೆ ವಿಭೂತಿ ಹಚ್ಚಿಕೊಳ್ಳುವ ಸಂಪ್ರದಾಯ ಇನ್ನೂ ಅನೇಕ ಜನಾಂಗದಲ್ಲಿ ಜನಜನಿತವಾಗಿದೆ. ವಿಭೂತಿಯಿಲ್ಲದೆ ಮನೆಯಿಂದ ಹೊರಗೆ ಕಾಲಿಡಬಾರದು ಅನ್ನುವ ನಂಬಿಕೆ ಜನಮಾನಸದಲ್ಲಿದೆ. ಅಷ್ಟೇ ಅಲ್ಲ ಶಿವನ ಆರಾಧಕರು ವಿಭೂತಿಯನ್ನು ದೈವೀಸ್ವರೂಪದಂತೆ ನೋಡ್ತಾರೆ. ವಿಭೂತಿಯನ್ನು ಭಸ್ಮ ಅಂತ ಕೂಡ ಕರೆಯಲಾಗುತ್ತೆ. ಶಿವ ಭಸ್ಮವನ್ನು ತನ್ನೆಲ್ಲ ದೇಹಕ್ಕೂ ಹಚ್ಚಿಕೊಂಡಿದ್ದ ಅನ್ನೋದು ಪ್ರತೀತಿ. ಅದೇ ಕಾರಣಕ್ಕೆ ಶಿವನನ್ನು ವಿಭೂತಿ ಭೂಷಣ ಅಂತಲೂ ಸಂಬೋಧಿಸೋದು. ಆದ್ರೆ ಕೇವಲ ಸಾಂಪ್ರದಾಯಿಕ ದೃಷ್ಟಿಕೋನದಲ್ಲಿ ಮಾತ್ರವಲ್ಲ ಆರೋಗ್ಯಕ್ಕಾಗಿಯೂ ವಿಭೂತಿ ಬಳಕೆ ಇದೆ. ಆಯುರ್ವೇದದಲ್ಲಿ ವಿಭೂತಿ ಅಥ್ವಾ ಭಸ್ಮಕ್ಕೆ ವಿಶೇಷ ಮಹತ್ವವಿದೆ..... ಮತ್ತು ವಿಭೂತಿ ತಯಾರಿಕೆಗೂ ಒಂದು ಕ್ರಮವಿದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿಭೂತಿ ಹೆಸರಿನಲ್ಲಿ ಕಲಬೆರಿಕೆಯ ವಸ್ತುಗಳು ಮಾರಾಟವಾಗುತ್ತಾ ಇರೋದು ದುರಂತವೇ ಸರಿ. ಆದ್ರೆ ಹಿಂದೆಲ್ಲ ವಿಭೂತಿಯನ್ನು ಕಾಡಲ್ಲಿ ಸೊಪ್ಪು,ಹುಲ್ಲು ತಿಂದು ಬಂದ ನಾಟಿ ಹಸು ಹಾಕುವ ಸಗಣಿಯನ್ನು ಬಿಸಿಲಿನಲ್ಲಿ ಒಣಗಿಸಿ ಬೆರಣಿ ತಟ್ಟಿ ಅದನ್ನು ಹೋಮಕುಂಡಲ್ಲಿ ಹಾಕಿ, ವಿವಿಧ ಜಾತಿಯ ಮರದ ಕೊಂಬೆಗಳು ಮತ್ತು ಹಸುವಿನ ಶುದ್ಧ ತುಪ್ಪವನ್ನು ಹೋಮದಲ್ಲಿ ಬಳಸಿ ನಿರ್ಧಿಷ್ಟ ಕ್ರಮದಲ್ಲಿ ವಿಭೂತಿಯನ್ನು ತಯಾರಿಸಲಾಗ್ತಾ ಇತ್ತು. ಆದ್ರೀಗ ಕಾಲ ಬದಲಾಗಿದೆ ಹಾಗಾಗಿ ಎಲ್ಲವೂ ಪರಿಶುದ್ಧತೆಯ ವಿರುದ್ಧವೇ ಇದೆ ಅಂದ್ರೆ ಅದ್ರಲ್ಲಿ ಅತಿಶಯೋಕ್ತಿ ಇರಲಾರದು.

The Mystery Of Vibhuti

ವಿಭೂತಿ ಹಚ್ಚಿಕೊಳ್ಳೋದು ಎಲ್ಲಿಗೆ?
ವಿಭೂತಿಯನ್ನು ಪ್ರಮುಖವಾಗಿ ಎರಡು ಹುಬ್ಬುಗಳ ನಡುವೆ, ಗಂಟಲಿನ ಭಾಗ, ಎರಡೂ ಎದೆಯ ಬದಿಯಲ್ಲಿ ಮತ್ತು ಹೊಟ್ಟೆಯ ಭಾಗಕ್ಕೆ ಹಚ್ಚಿಕೊಳ್ಳೋದು ವಾಡಿಕೆ. ಇನ್ನು ಕೆಲವರು ತೋಳು, ಬೋಳುತಲೆ, ತೊಡೆಯ ಭಾಗಕ್ಕೂ ಕೂಡ ಹಚ್ಚಿಕೊಳ್ತಾರೆ. ಹೀಗೆ ಹಚ್ಚಿಕೊಳ್ಳೋದ್ರಿಂದ ಹಲವು ಲಾಭಗಳಿವೆ.

ವಿಭೂತಿಯ ಆರೋಗ್ಯಕಾರಿ ಅಂಶಗಳು
ನಾಟಿ ಹಸುವಿನ ಬೆರಣಿ ತಟ್ಟಿ ಸರಿಯಾದ ಕ್ರಮಬದ್ಧವಾದ ಹೋಮ ಮಾಡಿ ತಯಾರಿಸುವ ವಿಭೂತಿಯೂ ಕೇವಲ ಸ್ಪಿರುಚ್ಯುವಲ್ ಕಾರಣಕ್ಕೆ ಮಾತ್ರವಲ್ಲ. ಬದಲಾಗಿ ಇದ್ರಲ್ಲಿ ಹಲವು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಅನ್ನೋದು ಬಹಿರಂಗಗೊಂಡಿರುವ ಸತ್ಯ. ಪ್ರಮುಖವಾಗಿ ಋಣಾತ್ಮಕ ಶಕ್ತಿಯನ್ನು ಕುಗ್ಗಿಸಿ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ವಿಭೂತಿಗಿದೆ. ವಿಭೂತಿಯನ್ನು ಹಚ್ಚಿಕೊಂಡು ಶಿವ ಕಾಮವನ್ನು ತ್ಯಜಿಸಿ ನಶ್ವರತೆಯ ಕಡೆಗೆ ವಾಲಿದ ಅನ್ನೋದು ಕಥೆಪುರಾಣಗಳಿಂದ ತಿಳಿದಿರುವ ಸತ್ಯ. ಅಂತೆಯೇ ಯಾರು ವಿಭೂತಿ ಹಚ್ಚಿಕೊಳ್ತಾರೋ ಅವ್ರ ಕಾಮೋತ್ತೇಜಕ ಪ್ರವೃತ್ತಿ ನಿಯಂತ್ರಣದಲ್ಲಿ ಇರಲು ಸಾಧ್ಯ ಅನ್ನೋದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ಬೆವರು ಗ್ರಂಥಿಗಳಿಗೆ ಒಳ್ಳೇದು ವಿಭೂತಿ
ಕೆಲವರಿಗೆ ಕೈಗಳು ಮತ್ತು ದೇಹ ವಿಪರೀತ ಬೆವರುತ್ತೆ. ಅಂತವರು ಶುದ್ಧ ವಿಭೂತಿಯನ್ನು ಹಚ್ಚಿಕೊಳ್ಳೋದ್ರಿಂದ ಬೆವರುವಿಕೆಯನ್ನು ಕಡಿಮೆ ಮಾಡುತ್ತೆ. ಬೆವರು ಗ್ರಂಥಿಗಳು ಅತಿಯಾಗಿ ವರ್ತಿಸುವುದನ್ನು ನಿಯಂತ್ರಣದಲ್ಲಿಟ್ಟು ವಾಸನೆಯುಕ್ತ ಬೆವರುವಿಕೆಯನ್ನು ತಡೆಯಲು ವಿಭೂತಿ ಬಳಕೆ ಒಂದು ಉತ್ತಮ ಮೆಡಿಸಿನ್ ಆಗಿದೆ. ಇನ್ನು ಆಯುರ್ವೇದದ ಪ್ರಕಾರ ನಮ್ಮ ದೇಹದಲ್ಲಿ ಹಲವು ಚಕ್ರಗಳಿವೆ. ಅಂತಹ ಚಕ್ರಗಳ ಕಾರ್ಯಚಟುವಟಿಕೆಗೆ ಇದು ಉತ್ತಮವಾದ ಔಷಧಿ ಎಂದು ಹೇಳಲಾಗುತ್ತೆ. ನಮ್ಮ ದೇಹದ ಚಕ್ರಗಳಿಗೆ ಉತ್ತೇಜನ ನೀಡಿ, ಮನುಷ್ಯ ಆಕ್ಟೀವ್ ಆಗಿರುವಂತೆ ಮಾಡುತ್ತೆ ವಿಭೂತಿ.. ಆದ್ರೆ ವಿಭೂತಿ ಅಥ್ವಾ ಭಸ್ಮ ಎಂದು ಕರೆಯಲ್ಪಡುವ ಇದನ್ನು ಇನ್ನೂ ಅನೇಕ ರೀತಿಯಲ್ಲಿ, ಬೇರೆಬೇರೆ ಟೆಂಪರೇಚರ್ ನಲ್ಲಿ ತಯಾರಿಸುವ ಪ್ರಕ್ರಿಯೆ ಆಯುರ್ವೇದದಲ್ಲಿದೆ. ಅಂತ ವಿಭಿನ್ನ ವಿಭೂತಿ ಮತ್ತು ಅವುಗಳು ನಿಮ್ಮ ಯಾವೆಲ್ಲ ಕಾಯಿಲೆಗಳಿಗೆ ಔಷಧಿಗಳಾಗಿ ಕಾರ್ಯ ನಿರ್ವಹಿಸುತ್ತೆ ಅನ್ನೋದ್ರ ಸಂಪೂರ್ಣ ವಿವರ ಕೆಳಗೆ ಇದೆ ಗಮನಿಸಿ.

ಶಂಖಗಳಿಂದ ಭಸ್ಮ
ಶಂಖವನ್ನು ಕ್ರಮಬದ್ಧವಾದ ರೀತಿಯಲ್ಲಿ ಸುಟ್ಟು ಭಸ್ಮ ತಯಾರಿಸಲಾಗುತ್ತಂತೆ. ಆಯುರ್ವೇದ ಮೆಡಿಸಿನ್ ಗಳಲ್ಲಿ ಇದರ ಬಳಕೆ ಇದೆ. ಈ ಶಂಖದಿಂದ ತಯಾರಿಸುವ ವಿಭೂತಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತೆ. ಉದರ ವಾತ ನಿವಾರಣೆಗೆ ನೀಡುವ ಆಯುರ್ವೇದ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತೆ. ಅಷ್ಟೇ ಅಲ್ಲ ಯಾರಿಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ಯೋ ಅಂತವರಿಗೂ ಕೂಡ ಇದನ್ನು ನೀಡಲಾಗುತ್ತೆ.

ಮಂಡೂರ ಭಸ್ಮ, ಐರನ್ ಆಕ್ಸೈಡ್ ಸುಟ್ಟು ಮಾಡುವ ಭಸ್ಮ
ಯಾರ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುತ್ತೋ, ಅಂತವರು ಅತಿಯಾದ ಸುಸ್ತು ಮತ್ತು ಬಳಲುವಿಕೆಯಿಂದ ನರಳ್ತಾ ಇರ್ತಾರೆ. ಐರನ್ ಅಂಶ ಕಡಿಮೆ ಇರುವವರಿಗಾಗಿ ಐರನ್ ಆಕ್ಸೈಡ್ ನಿಂದ ತಯಾರಿಸುವ ಮಂಡೂರ ಭಸ್ಮವೆಂದು ಕರೆಯಲ್ಪಡುವ ವಿಭೂತಿಯನ್ನು ಔಷಧಿಯ ರೂಪದಲ್ಲಿ ನೀಡಲಾಗುತ್ತಂತೆ..

ಅಭ್ರಕ ಭಸ್ಮ
ಅಭ್ರಕ ಒಂದು ಅದಿರು. ಇದರಿಂದಲೂ ಕೂಡ ಭಸ್ಮವನ್ನು ತಯಾರಿಸಲಾಗುತ್ತಂತೆ. ಅದರ ತಯಾರಿಕೆಗೆ ಅದ್ರದ್ದೇ ಆದ ವಿಭಿನ್ನ ಪ್ರಕ್ರಿಯೆಗಳನ್ನು ಜರುಗಿಸಲಾಗುತ್ತೆ. ಈ ಅಭ್ರಕದಿಂದ ತಯಾರಿಸಿರುವ ಭಸ್ಮ ಅಥ್ವಾ ವಿಭೂತಿಯನ್ನು ಕೆಮ್ಮು, ಧಮ್ಮು ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತೆ. ಇದು ದೇಹಕ್ಕೆ ಶಕ್ತಿ ನೀಡುತ್ತೆ. ಹಾಗಂತ ಈ ವಿಭೂತಿಯನ್ನು ನೇರವಾಗಿ ಬಳಸೋದಿಲ್ವಂತೆ. ಬೇರೆ ಬೇರೆ ವಿಧದ ಔಷಧಿಗಳ ಪ್ರಕ್ರಿಯೆಯಲ್ಲಿ ಬಳಸಿ, ವೈದ್ಯರು ಸೂಚಿಸುವ ರೀತಿ ಸೇವಿಸಬೇಕಾಗತ್ತೆ.

ಗೋದಂತಿ ಭಸ್ಮ
ಇನ್ನೂ ಒಂದು ಭಸ್ಮವೆಂದರೆ ಅದು ಗೋದಂತೆ ಭಸ್ಮ. ಆಯುರ್ವೇದದಲ್ಲಿ ಈ ಭಸ್ಮಕ್ಕೂ ಕೂಡ ವಿಶೇಷ ಮಹತ್ವವಿದೆ. ಆಯುರ್ವೇದದಲ್ಲಿ ಕಾಯಿಲೆಯನ್ನು ವಾತ, ಪಿತ್ತ, ಕಫ ಎಂದು ವಿಂಗಡಿಸಲಾಗುತ್ತೆ. ಅದ್ರಲ್ಲಿ ಪಿತ್ತಕ್ಕೆ ಸಂಬಂಧಿಸಿದ ಕಾಯಿಲೆಗಳ ಔಷಧಿಗಳಲ್ಲಿ ಗೋದಂತಿ ಭಸ್ಮವನ್ನು ಬಳಕೆ ಮಾಡಲಾಗುತ್ತೆ.

English summary

Top health Benefits and Uses Of Vibhuti

Bhasma or Vibhuthi, refers to the holy ash or sacred ash used by Hindus. Holy ash is applied on the forehead to remind us always of the impermanence of our life. The act of applying holy ash always remind us that this world is maya and since we always are reminded of our impermanence, we don't get too attached to worldly things.
X
Desktop Bottom Promotion