For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

By Super
|

ಶ್ರೀಮಂತರು ಧರಿಸಿದ್ದೆಲ್ಲಾ ಬಂಗಾರ, ಬಡವರು ಧರಿಸಿದ್ದು ಕಾಗೆ ಬಂಗಾರ ಎಂದೇ ನಾವೆಲ್ಲಾ ನಂಬಿದ್ದೇವೆ. ಬಡವರು ಬಂಗಾರ ಧರಿಸಿದರೂ ಶ್ರೀಮಂತರು ಕಾಗೆಬಂಗಾರ ಧರಿಸಿದರೂ ಸುಲಭವಾಗಿ ನಾವು ಒಪ್ಪುವುದಿಲ್ಲ. ಅಂತೆಯೇ ಚಿನ್ನದ ಬಣ್ಣದ ಕುಂಬಳ ಕಾಯಿಗೂ ನಾವು ತೋರುವುದು ಅಸಡ್ಡೆಯೇ. ಏಕೆಂದರೆ ಇದು ಸುಲಭದರದಲ್ಲಿ ಮತ್ತು ವರ್ಷದ ಬಹುತೇಕ ದಿನಗಳಲ್ಲಿ ಎಲ್ಲಾ ಕಡೆ ಸಿಗುವುದರಿಂದ ಇದನ್ನು ಬಡವರ ತರಕಾರಿ ಎಂದೇ ತಿಳಿದುಬಿಟ್ಟಿದ್ದೇವೆ.

ಸಾಮಾನ್ಯವಾಗಿ ಸಿಹಿಗುಂಬಳ ಅಥವಾ ಕರ್ನಾಟಕದ ಹಲವೆಡೆ ಚೀನೀಕಾಯಿ ಎಂದು ಕರೆಯಲ್ಪಡುವ ಸಿಹಿಯಾದ ಈ ತರಕಾರಿ ಭಾರತದಲ್ಲಿ ಅವಗಣನೆಗೆ ಗುರಿಯಾಗಿದ್ದರೂ ವಿಶ್ವದ ಅತ್ತಕಡೆಯ ಅಮೇರಿಕಾದಲ್ಲಿ ಮಾತ್ರ ಈ ತರಕಾರಿಗೆ ಭಾರೀ ಬೇಡಿಕೆ. ಆ ದೇಶದ ಹಬ್ಬವಾದ ಹ್ಯಾಲೋವೀನ್‌ನಲ್ಲಿಯೂ ಈ ಕುಂಬಳದ ಬಳಕೆಯಾಗುವುದರಿಂದ ಇದಕ್ಕೆ ಧಾರ್ಮಿಕ ಸ್ಪರ್ಶವೂ ಇದೆ. ಕುಂಬಳಕಾಯಿ ಜ್ಯೂಸ್‌ನಲ್ಲಿ ಅಡಗಿದೆ ಸಕಲ ಸೌಂದರ್ಯದ ರಹಸ್ಯ

ಅಮೇರಿಕಾದ ತಿಂಡಿಯಾದ ಸಿಹಿವಡೆ (bagel), ಬಿಯರ್ ಮತ್ತು ಕಾಫಿಯಲ್ಲಿ ಇದರ ಅಂಶವನ್ನು ಸೇರಿಸಲಾಗುತ್ತದೆ. ಅಮೇರಿಕಾದ ಖ್ಯಾತ ಕಾಫಿ ತಯಾರಿಕಾ ಸಂಸ್ಥೆ ಸ್ಟಾರ್ ಬಕ್ಸ್ ಇದುವರೆಗೆ ಸಿಹಿಗುಂಬಳದ ಸ್ವಾದವಿರುವ ಇನ್ನೂರು ಮಿಲಿಯನ್ (ಇಪ್ಪತ್ತು ಕೋಟಿ) ನೊರೆಯುತ ಕಾಫಿ (Latte) ಯನ್ನು ಕೇವಲ ಹತ್ತೇ ವರ್ಷಗಳಲ್ಲಿ ಮಾರುಕಟ್ಟೆಗೆ ಪ್ರಸ್ತುತಪಡಿಸಿದೆ.

ಇದರ ಯಶಸ್ಸನ್ನು ಕಂಡ ಪ್ರಿಂಗಲ್ಸ್ ಸಂಸ್ಥೆಯೂ ಈಗ ಸಿಹಿಗುಂಬಳದತ್ತ ತನ್ನ ಒಲವು ತೋರುತ್ತಿದೆ. ಅಷ್ಟೇ ಏಕೆ ಇದುವರೆಗೆ ಕೇವಲ ಆಲುಗಡ್ಡೆ ಚಿಪ್ಸ್ ತಿಂದು ಜಡ್ಡು ಹಿಡಿದ ನಾಲಿಗೆಗೆ ಶೀಘ್ರದಲ್ಲಿಯೇ ಸಿಹಿಗುಂಬಳದ ಚಿಪ್ಸ್ ಗಳೂ ಸಿಗಲಿವೆಯಂತೆ..! ಇತರ ಸಿದ್ಧ ಆಹಾರಗಳಿಗೆ ಹೋಲಿಸಿದರೆ ಸಿಹಿಗುಂಬಳದ ತಿಂಡಿಗಳು ಆರೋಗ್ಯಕರವಾಗಿವೆ. ಸಿಹಿಗುಂಬಳ ರುಚಿಯಾದ ಸ್ವಾದವನ್ನು ಹೊಂದಿರುವ ಜೊತೆಗೇ ಆರೋಗ್ಯಕರವೂ ಆಗಿದೆ. ಇದರ ಮಹತ್ವದ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ ಮುಂದೆ ಓದಿ..

ಸಿಹಿಗುಂಬಳ ಕಣ್ಣಿಗೆ ಉತ್ತಮವಾಗಿದೆ

ಸಿಹಿಗುಂಬಳ ಕಣ್ಣಿಗೆ ಉತ್ತಮವಾಗಿದೆ

ಒಂದು ಕಪ್ ಬೇಯಿಸಿ ಕಿವುಚಿದ ಸಿಹಿಗುಂಬಳದ ತಿರುಳಿನಲ್ಲಿ ಒಂದು ದಿನಕ್ಕೆ ಅಗತ್ಯವಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ವಿಟಮಿನ್ ಎ ಇದೆ. ಇದು ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. National Institutes of Health ಪ್ರಕಾರ ನಿಯಮಿತವಾಗಿ ಸಿಹಿಗುಂಬಳವನ್ನು ಸೇವಿಸುತ್ತಾ ಬಂದರೆ ಕಡಿಮೆ ಬೆಳಕಿನಲ್ಲಿಯೂ ಕಣ್ಣು ಮಾಹಿತಿಯನ್ನು ಪಡೆಯುವಷ್ಟು ಉತ್ತಮವಾದ ಆರೋಗ್ಯ ಪಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಿಹಿಗುಂಬಳ ಕಣ್ಣಿಗೆ ಉತ್ತಮವಾಗಿದೆ

ಸಿಹಿಗುಂಬಳ ಕಣ್ಣಿಗೆ ಉತ್ತಮವಾಗಿದೆ

ಕುಂಬಳಕ್ಕೆ ಕಿತ್ತಳೆಯ ಬಣ್ಣವನ್ನು ನೀಡುವ ಕ್ಯಾರೋಟಿನಾಯ್ಡ್ ಉತ್ತಮ ಪ್ರಮಾಣದಲ್ಲಿವೆ. ಇದರ ಒಂದು ರೂಪವಾದ ಬೀಟಾ ಕ್ಯೋರೋಟಿನ್ ಅನ್ನು ದೇಹದ ಕಿಣ್ವಗಳು ಸುಲಭವಾಗಿ ವಿಟಮಿನ್ ಎ ಗೆ ಪರಿವರ್ತಿಸಿಬಿಡುತ್ತವೆ. ಇದು ಕಣ್ಣಿಗೆ ಉತ್ತಮ ಪೋಷಣೆ ನೀಡುವ ಜೊತೆಗೇ ಕಣ್ಣಿನ ಕ್ಷಮತೆಯನ್ನೂ ಹೆಚ್ಚಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಸಿಹಿಗುಂಬಳದಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ. ಅಂದರೆ ಒಂದು ಕಪ್ ನಲ್ಲಿ ಸುಮಾರು ಮೂರು ಗ್ರಾಂ ನಷ್ಟು. ಅಲ್ಲದೇ ಒಂದು ಕಪ್ ಕುಂಬಳದ ಖಾದ್ಯದಲ್ಲಿ ಕೇವಲ ನಲವತ್ತೊಂಬತ್ತು ಕ್ಯಾಲೋರಿಗಳಿರುವುದರಿಂದ ನಾರನ್ನು ಅರಗಿಸಿಕೊಳ್ಳಲು ಬೇಕಾದ ಶಕ್ತಿ ಇದಕ್ಕಿಂತಲೂ ಹೆಚ್ಚಾಗಿ ಅಗತ್ಯವಿರುವುದರಿಂದ ದೇಹಕ್ಕೆ ಅನಿವಾರ್ಯವಾಗಿ ಕರಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಅಲ್ಲದೇ ಸಿಹಿಗುಂಬಳದ ನಾರಿನಿಂದಾಗಿ ಕೊಂಚ ಪ್ರಮಾಣ ತಿಂದ ಕೂಡಲೇ ಹೊಟ್ಟೆ ತುಂಬಿದಂತೆ ಅನ್ನಿಸುವ ಕಾರಣ ಹೆಚ್ಚಿನ ಆಹಾರ ಹೊಟ್ಟೆ ಸೇರುವುದನ್ನು ತಡೆದಂತಾಗುತ್ತದೆ. ಇದು ಪರೋಕ್ಷವಾಗಿ ತೂಕ ಇಳಿಸಲು ನೆರವಾಗುತ್ತದೆ. 2009ರಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಊಟಕ್ಕೂ ಮೊದಲು ಒಂದು ಇಡಿಯ ಸೇಬನ್ನು ತಿಂದವರು (ಅದರ ಸಿಪ್ಪೆಯನ್ನೂ ಸೇರಿ) ಬಳಿಕ ಕಡಿಮೆ ಪ್ರಮಾಣವನ್ನು ಸೇವಿಸುತ್ತಾರೆ. ಅದೇ ಸೇಬಿನ ಸಾಸ್ ಅಥವಾ ರಸವನ್ನು ಊಟಕ್ಕೂ ಮೊದಲು ಕುಡಿದವರು ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡಿರುವುದು ಕಂಡುಬಂದಿದೆ. ಇದನ್ನು ವೆಬ್ ಎಂಡಿ ತಾಣವೂ ದೃಢೀಕರಿಸಿದೆ.

ಹೃದಯಕ್ಕೆ ಕುಂಬಳ ಬೀಜ ಉತ್ತಮ

ಹೃದಯಕ್ಕೆ ಕುಂಬಳ ಬೀಜ ಉತ್ತಮ

ಒಣಫಲಗಳಲ್ಲಿ ಸಸ್ಯಜನ್ಯ ಪೋಷಕಾಂಶಗಳಾದ ಫೈಟೋಸ್ಟೆರಾಲ್ (phytosterol) ಗಳಿದ್ದು ಇವು ಕೆಟ್ಟ ಕೊಲೆಸ್ಟಾಲ್ (Low Density Lipoproteins ಅಥವಾ LDL) ಕಣಗಳನ್ನು ಕಡಿಮೆಗೊಳಿಸುತ್ತದೆ. ಕುಂಬಳದ ಬೀಜದಲ್ಲಿಯೂ ಇದು ಉತ್ತಮ ಪ್ರಮಾಣದಲ್ಲಿದ್ದು ನಿತ್ಯವೂ ಕೊಂಚವಾಗಿ ತಿನ್ನುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಬಹುದು.

ಕ್ಯಾನ್ಸರ್ ಸಂಭವವನ್ನು ಕಡಿಮೆಗೊಳಿಸುತ್ತದೆ

ಕ್ಯಾನ್ಸರ್ ಸಂಭವವನ್ನು ಕಡಿಮೆಗೊಳಿಸುತ್ತದೆ

ಕಿತ್ತಳೆ ಬಣ್ಣವಿರುವ ಇತರ ತರಕಾರಿಗಳಾದ ಗೆಣಸು, ಸುವರ್ಣ ಗಡ್ಡೆ, ಕ್ಯಾರೆಟ್ ಮೊದಲಾದವುಗಳಲ್ಲಿರುವಂತೆಯೇ ಸಿಹಿಗುಂಬಳದಲ್ಲಿಯೂ ಬೀಟಾ ಕ್ಯಾರೋಟಿನ್ ಎಂಬ ಆಂಟಿ ಆಕ್ಸಿಡೆಂಟು ಇದೆ. ಇವು ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಿ ಹಲವು ವಿಧದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.

ತ್ವಚೆಯ ರಕ್ಷಣೆಗೂ ಉತ್ತಮವಾಗಿದೆ

ತ್ವಚೆಯ ರಕ್ಷಣೆಗೂ ಉತ್ತಮವಾಗಿದೆ

ಫ್ರೀ ರ್‍ಯಾಡಿಕಲ್ ಕಣಗಳನ್ನು ತಡೆಗಟ್ಟುವ ಮೂಲಕ ಕ್ಯಾನ್ಸರ್ ಬರದಂತೆ ತಡೆಯುವ ಕ್ಯಾರೋಟಿನಾಯ್ಡ್ ಚರ್ಮಕ್ಕೆ ಆರೋಗ್ಯವನ್ನೂ ನೀಡುತ್ತದೆ. ಚರ್ಮದ ನೆರಿಗೆಗೆ ಈ ಕಣಗಳೂ ನೇರವಾಗಿ ಕಾರಣವಾಗಿವೆ ಎಂದು ಒಂದು ಆರೋಗ್ಯ ಪ್ರಕಾಶನ ಪ್ರಕಟಿಸಿದೆ.

ನಿಮ್ಮ ಮನೋಭಾವವನ್ನು ಬದಲಿಸುತ್ತವೆ

ನಿಮ್ಮ ಮನೋಭಾವವನ್ನು ಬದಲಿಸುತ್ತವೆ

ಸಿಹಿಗುಂಬಳದಲ್ಲಿ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವಿದೆ. ಇದು ಸೆರೋಟೋನಿನ್ ಎಂಬ ಪೋಷಕಾಂಶವನ್ನು ಉತ್ಪಾದಿಸಲು ನೆರವಾಗುತ್ತದೆ. ಮೆದುಳಿಗೆ ಆರಾಮ ನೀಡುವ ಈ ಪೋಷಕಾಂಶ ಮನೋಭಾವವನ್ನು ಬದಲಿಸಲು ಸಕ್ಷಮವಾಗಿದೆ.

ನಿಮ್ಮ ಮನೋಭಾವವನ್ನು ಬದಲಿಸುತ್ತವೆ

ನಿಮ್ಮ ಮನೋಭಾವವನ್ನು ಬದಲಿಸುತ್ತವೆ

ಟರ್ಕಿ ದೇಶದಲ್ಲಿ ಥ್ಯಾಂಕ್ಸ್ ಗಿವಿಂಗ್ ಎಂಬ ಹಬ್ಬದ ಊಟದಲ್ಲಿ ಸಿಹಿಗುಂಬಳದ ಖಾದ್ಯವನ್ನು ಹೊಟ್ಟೆ ತುಂಬಾ ತಿಂದ ಬಳಿಕ ಹೆಚ್ಚಿನವರು ನಿದ್ರಾಪರವಶರಾಗುತ್ತಾರೆ. ಇದಕ್ಕೆ ಸೆರೋಟೋನಿನ್ ಕಾರಣ ಎಂದು ಈಗ ತಜ್ಞರು ಕಂಡುಕೊಂಡಿದ್ದಾರೆ. ಆದ್ದರಿಂದ ಮನ ಉದ್ವೇಗದಲ್ಲಿದ್ದರೆ ಕೊಂಚ ಹುರಿದ ಕುಂಬಳದ ಬೀಜಗಳನ್ನು ತಿನ್ನುವ ಮೂಲಕ ಉಲ್ಲಾಸಗೊಳಿಸಬಹುದು ಎಂದು ವೆಬ್ ಎಂಡಿ ತಾಣ ಅಭಿಪ್ರಾಯಪಡುತ್ತದೆ.

ಮೂತ್ರವರ್ಧಕವಾಗಿ ಕುಂಬಳ ಕಾಯಿಯ ಬಳಕೆ

ಮೂತ್ರವರ್ಧಕವಾಗಿ ಕುಂಬಳ ಕಾಯಿಯ ಬಳಕೆ

ನಿಸರ್ಗದಲ್ಲಿ ಅತ್ಯುತ್ತಮವಾದ ಮೂತ್ರವರ್ಧಕ ಎಂದರೆ ಎಳನೀರು. ಆದರೆ ಎಳನೀರು ಎಲ್ಲಾ ಸಮಯದಲ್ಲಿ ಸಿಗದೇ ಇದ್ದಲ್ಲಿ ಅದರ ಬಳಿಕ ಸ್ಥಾನ ಪಡೆದಿರುವ ಕುಂಬಳ ಕಾಯಿಯನ್ನು ಉಪಯೋಗಿಸಬಹುದು.ಇದರಿಂದ ಶರೀರದಲ್ಲಿರುವ ವಿಷಕಾರಿ ವಸ್ತುಗಳು ಮತ್ತು ಅನಗತ್ಯ ತ್ಯಾಜ್ಯಗಳು ಶೀಘ್ರವಾಗಿ ದೇಹದಿಂದ ಹೊರಹೋಗಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಕುಂಬಳಕಾಯಿ ಒಂದು ನೈಸರ್ಗಿಕವಾದ ನಿರ್ವಿಷಗೊಳಿಸುವ ಆಹಾರವಾಗಿದೆ.

English summary

Top Health Benefits Of Pumpkin

Pumpkin: It’s yummy and it’s seasonal. And we’re in the middle of a full-on flavor takeover. There’s pumpkin in your bagels, beer and coffee. Starbucks has sold more than 200 million Pumpkin Spice Lattes in the past 10 years. Even the makers of Pringles are getting in on the action.Below, we've rounded up some of our favorite health benefits of pumpkin. Let us know what else you love about pumpkins in the comments!
X
Desktop Bottom Promotion