For Quick Alerts
ALLOW NOTIFICATIONS  
For Daily Alerts

ಸಂಪದ್ಭರಿತವಾದ ಹಲಸಿನ-ಹಣ್ಣಿನಲ್ಲಿದೆ ಆರೋಗ್ಯದ ಕಮಾಲು

By Lekhaka
|

ಹಲಸಿನ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು ಅದು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಹಣ್ಣಾಗಲು ಪ್ರಾರಂಭಿಸುವ ಹಲಸು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆಯೋ ಹಾಗೆಯೇ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರವಾದ ಪ್ರಯೋಜನಗಳನ್ನು ಒಳಗೊಂಡಿದೆ. ಕೆಲವರು ಈ ಹಣ್ಣನ್ನು ತಿಂದರೆ ಹೊಟ್ಟೆ ಉಬ್ಬರ ಉಂಟಾಗುವುದು ಎನ್ನುತ್ತಾರೆ. ಆದರೆ ಯಾವುದನ್ನೇ ಆದರೂ ಮಿತಿಯಲ್ಲಿ ತಿಂದರೆ ಯಾವ ತೊಂದರೆಯೂ ಉಂಟಾಗದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
ಹಲಸಿನ ಪಾಯಸದ ರುಚಿ ಮರೆಯುವಂತಿಲ್ಲ

ಈ ಹಣ್ಣು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು ಎನ್ನುವ ಖ್ಯಾತಿಯನ್ನು ಪಡೆದಿದೆ. ಈ ಹಣ್ಣು ಹೆಚ್ಚಾಗಿ ಉಷ್ಣವಲಯಗಳಲ್ಲಿ ಬೆಳೆಯುತ್ತದೆ. ಹಲಸಿನ ಕಾಯಿ, ಹಣ್ಣು, ಹಲಸಿನ ಬೀಜ ಎಲ್ಲವೂ ಆಹಾರ ಪದಾರ್ಥಗಳ ತಯಾರಿಗೆ ಬರುತ್ತವೆ. ಈ ಹಣ್ಣಿನಲ್ಲಿ ಸಮೃದ್ಧವಾದ ಸಪೋನಿನ್, ಲಿಗ್ನನ್ಸ್, ಫೈಟೋನ್ಯೂಟ್ರಿಯೆಂಟ್ ಮತ್ತು ಐಸೋಫ್ಲೋವೊನ್ ಗಳನ್ನು ಹೊಂದಿದೆ. ಇವೆಲ್ಲವೂ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್, ಜೀವಕೋಶಗಳಿಗೆ ಸಂಬಂಧಿಸಿದ ರಾಡಿಕಲ್ಸ್‍ಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ಈ ಹಣ್ಣಿನ ಸೇವನೆ ಮಾಡಿದರೆ ಹೊಟ್ಟೆ ಹುಣ್ಣು, ಎಂಡೊಮೆಟ್ರಿಯಲ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆಗಳು, ಕೊಲಾನ್ ಕ್ಯಾನ್ಸರ್ ಸೇರಿದಂತೆ ಇನನೂ ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಫೈಬರ್ ಅಂಶ ಸಮೃದ್ಧವಾಗಿ ಹೊಂದಿರುವುದರಿಂದ ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹಣ್ಣಿನ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸುವುದರ ಮೂಲಕ ತ್ವಚೆಯಲ್ಲಿ ಉಂಟಾಗುವ ಸುಕ್ಕು ಸಮಸ್ಯೆಯು ನಿವಾರಣೆ ಯಾಗುವುದು. ಹಲವಾರು ಅದ್ಭುತವಾದ ಆರೋಗ್ಯ ಗುಣಗಳನ್ನು ಒಳಗೊಂಡಿರುವ ಈ ಹಣ್ಣಿನ ಸೇವನೆ ನಮ್ಮ ಆರೋಗ್ಯದಲ್ಲಿ ಯಾವೆಲ್ಲಾ ಸನಸ್ಯೆಗಳನ್ನು ನಿವಾರಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು

ಹಲಸಿನ ಹಣ್ಣಿನಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಜೊತೆಗೇ ದೇಹಕ್ಕೆ ಧಾಳಿಯಿಡುವ ಬ್ಯಾಕ್ಟೀರಿಯಾ ಮೊದಲಾದ ಸೋಂಕುಹರಡುವ ಕ್ರಿಮಿಗಳಿಂದಲೂ ರಕ್ಷಣೆ ನೀಡುತ್ತದೆ. ನಮ್ಮ ರಕ್ತದಲ್ಲಿರುವ ಬಿಳಿರಕ್ತಕಣಗಳ ಸಂಖ್ಯೆ ಉತ್ತಮ ಮಟ್ಟದಲ್ಲಿರಲು ಹಾಗೂ ಪ್ರತಿ ಕಣವೂ ಆರೋಗ್ಯಕರವಾಗಿರಲು ಹಲಸು ನೆರವು ನೀಡುತ್ತದೆ, ತನ್ಮೂಲಕ ದೇಹವನ್ನು ಧಾಳಿಯಿಡುವ ಕ್ರಿಮಿಗಳ ವಿರುದ್ದ ಸೆಣೆಸಲು ಹೆಚ್ಚು ಸಮರ್ಥವಾಗುತ್ತದೆ.

ವಿವಿಧ ಕ್ಯಾನ್ಸರ್ ಬರುವುದರಿಂದ ರಕ್ಷಣೆ ನೀಡುತ್ತದೆ

ವಿವಿಧ ಕ್ಯಾನ್ಸರ್ ಬರುವುದರಿಂದ ರಕ್ಷಣೆ ನೀಡುತ್ತದೆ

ಹಲಸಿನಲ್ಲಿ ಲಿಗ್ನಾನ್ಸ್ (lignans), ಸ್ಯಾಪೋನಿನ್ಸ್ (saponins) ಮತ್ತು ಐಸೋಫ್ಲೇವೋನ್ಸ್ (isoflavones) ಎಂಬ ಪೋಷಕಾಂಶಗಳಿವೆ (phytonutrients). ಇವು ದೇಹಕ್ಕೆ ಆಗಮಿಸಬಹುದಾದ ಕ್ಯಾನ್ಸರ್ ಕಾರಕ ಕಣಗಳ(free radicals) ವಿರುದ್ಧ ಹೋರಾಡಿ ಕ್ಯಾನ್ಸರ್ ಆವರಿಸದಂತೆ ತಡೆಯುತ್ತದೆ.

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಹಲಸಿನ ಹಣ್ಣಿಸ ಸೇವನೆಯಿಂದ ಕರುಳುಗಳ ಹುಣ್ಣು ಶೀಘ್ರವಾಗಿ ವಾಸಿಯಾಗುತ್ತದೆ ಹಾಗೂ ಮತ್ತೊಮ್ಮೆ ಬರದಿರುವಂತೆ ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಬಡಿಸುತ್ತದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು ಮಲಬದ್ದತೆಯಾಗುವುದನ್ನು ತಡೆಯುತ್ತದೆ.

ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ

ಹೊಟ್ಟೆಯಲ್ಲಿ ಕೇವಲ ಸಿಕ್ಸ್ ಪ್ಯಾಕ್ ಸ್ನಾಯುಗಳನ್ನು ಹೊಂದುವುದರಿಂದ ದೇಹ ದೇಹದಾರ್ಢ್ಯತೆ ಪಡೆಯುವುದಿಲ್ಲ. ದೇಹದ ಪ್ರತಿಯೊಂದು ಅಂಗವೂ ತನ್ನ ಪೂರ್ಣಸಾಮರ್ಥ್ಯದಲ್ಲಿ ಕೆಲಸ ಮಾಡಲು ಸಮರ್ಥವಾದಾಗ ಹಾಗೂ ಯಾವುದೇ ಕೆಲಸವನ್ನು ಬಹಳ ಹೆಚ್ಚಿನ ಹೊತ್ತು ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುವುದೇ ನಿಜವಾದ ದೇಹದಾರ್ಢ್ಯತೆ. ಹಲಸಿನ ಹಣ್ಣಿನಲ್ಲಿರುವ ಫ್ರುಕ್ಟೋಸ್ ಮತ್ತು ಸುಕ್ರೋಸ್ ಎಂಬ ಸಕ್ಕರೆಗಳು ರಕ್ತದಲ್ಲಿ ಗ್ಲುಕೋಸ್ ಸಕ್ಕರೆಯ ಪ್ರಮಾಣದಲ್ಲಿ ವ್ಯತ್ಯಯವಾಗದಂತೆ ಜೀವಕೋಶಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವ ಮೂಲಕ ದೇಹದಾರ್ಢ್ಯತೆಯನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಹಲಸಿನಲ್ಲಿರುವ ಉತ್ತಮ ಪ್ರಮಾನದ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ರಕ್ತಸಂಚಾರ ಸುಗಮಗೊಂಡು ಹೃದಯಸ್ತಂಭನದ ಸಂಭವತೆಯನ್ನು ಕಡಿಮೆಗೊಳಿಸುತ್ತದೆ.

ಅಸ್ತಮಾ ರೋಗವನ್ನು ನಿಯಂತ್ರಣದಲ್ಲಿರಿಸುತ್ತದೆ

ಅಸ್ತಮಾ ರೋಗವನ್ನು ನಿಯಂತ್ರಣದಲ್ಲಿರಿಸುತ್ತದೆ

ಹಲಸಿನ ಬೇರು ಅಸ್ತಮಾ ರೋಗಕ್ಕೆ ಉತ್ತಮ ಪರಿಹಾರ ನೀಡಬಲ್ಲುದು ಎಂದು ಸಂಶೋಧನೆಗಳಿಂದ ಇತ್ತೀಚೆಗೆ ತಿಳಿದುಬಂದಿದೆ. ಇದಕ್ಕಾಗಿ ಹಲಸಿನ ಬೇರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುವುದನ್ನು ಗಮನಿಸಲಾಗಿದೆ.

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ

ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ

ರಕ್ತಹೀನತೆಯನ್ನು ವಿಶೇಷವಾಗಿ ಮಹಿಳೆಯರಲ್ಲಿ ಗಮನಿಸಬಹುದು. ಈ ರಕ್ತಹೀನತೆಯನ್ನು ಕಡಿಮೆಗೊಳಿಸಲು ಹಲಸಿನ ಹಣ್ಣಿನ ಸೇವನೆ ಪ್ರಯೋಜನಕಾರಿಯಾಗಿದೆ. ಅಸ್ಥಿಮಜ್ಜೆಯಿಂದ ಹೊಸರಕ್ತಣಗಳು ಉತ್ಪತ್ತಿಯಾಗಲು ಮತ್ತು ರಕ್ತಸಂಚಾರ ಸುಗಮಗೊಳ್ಳಲು ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ.

ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ

ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ

ನಮ್ಮ ದೇಹದಲ್ಲಿ ಥೈರಾಯ್ಡ್ ಗ್ರಂಥಿಯಿಂದ ನಿಯಮಿತವಾಗಿ ಹಾರ್ಮೋನುಗಳು ಬಿಡುಗಡೆಯಾಗುತ್ತಾ ಇರಬೇಕು. ಜೊತೆಗೇ ಈ ಹಾರ್ಮೋನುಗಳ ಪ್ರಮಾಣ ಹೆಚ್ಚೂ ಆಗಬಾರದು, ಕಡಿಮೆಯೂ ಆಗಬಾರದು. ಈ ಸಮಸ್ಥಿತಿಯನ್ನು ಕಾಯ್ದುಕೊಳ್ಳಲು ಹಲಸಿನಹಣ್ಣಿನ ಪೋಷಕಾಂಶಗಳು ನೆರವಾಗುತ್ತವೆ.

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ

ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಮೆಗ್ನೀಶಿಯಂ ಇದೆ. ಇದು ಕ್ಯಾಲ್ಸಿಯಂ ಖನಿಜವನ್ನು ಹೀರಿಕೊಳ್ಳುತ್ತದೆ. ಈ ಖನಿಜ ಮೂಳೆಗಳಲ್ಲಿ ವಾಯುಗುಳ್ಳೆಗಳು ತುಂಬಿಕೊಂಡು ಟೊಳ್ಳಾಗುವುದರಿಂದ (osteoporosis)ರಕ್ಷಿಸುತ್ತದೆ. ಜೊತೆಗೇ ಎರಡು ಮೂಳೆಗಳು ಕೂಡುವಲ್ಲಿ ಎಣ್ಣೆಯಂತಹ ದ್ರವ ಕಡಿಮೆಯಾಗಿ ನೋವುಂಟಾಗುವ arthritis ರೋಗ ಬರುವ ಸಂಭವವನ್ನೂ ಕಡಿಮೆಗೊಳಿಸುತ್ತದೆ.

ಚರ್ಮದಲ್ಲಿ ನೆರಿಗೆಯಾಗುವುದನ್ನು ತಡಗೊಳಿಸಿ ವೃದ್ದಾಪ್ಯವನ್ನು ದೂರಮಾಡುತ್ತದೆ

ಚರ್ಮದಲ್ಲಿ ನೆರಿಗೆಯಾಗುವುದನ್ನು ತಡಗೊಳಿಸಿ ವೃದ್ದಾಪ್ಯವನ್ನು ದೂರಮಾಡುತ್ತದೆ

ಹಲಸಿನ ಹಣ್ಣಿನಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಚರ್ಮ ಕಾಂತಿ ಮತ್ತು ಸೆಳೆತ ಕಳೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಣೆಯನ್ನು ನೀಡುತ್ತದೆ. ವಿಶೇಷವಾಗಿ ಮುಖದ ಚರ್ಮಕ್ಕೆ ಕಳೆ, ಕೋಮಲತೆ ಮತ್ತು ಕಾಂತಿಯನ್ನು ನೀಡುವ ಮೂಲಕ ತಾರುಣ್ಯವನ್ನು ಬಹಳ ವರ್ಷಗಳವರೆಗೆ ಕಾಪಾಡಿಕೊಳ್ಳಲು ನೆರವಾಗುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಇದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವುದು ಮಾತ್ರವಲ್ಲದೇ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಣೆಯನ್ನೂ ನೀಡುತ್ತದೆ. ಕಣ್ಣಿನ ನರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುತ್ತದೆ ಹಾಗೂ ಕ್ಯಾಟರಾಕ್ಟ್ ನಂತಹ ಕಣ್ಣಿನ ತೊಂದರೆಗಳು ಕಾಡದಂತೆ ರಕ್ಷಿಸುತ್ತದೆ.

ಕರುಳಿನ ಕ್ಯಾನ್ಸರ್ ಬರದಂತೆ ಹಾಗೂ ಮೂಲವ್ಯಾಧಿಯಿಂದ ರಕ್ಷಿಸುತ್ತದೆ

ಕರುಳಿನ ಕ್ಯಾನ್ಸರ್ ಬರದಂತೆ ಹಾಗೂ ಮೂಲವ್ಯಾಧಿಯಿಂದ ರಕ್ಷಿಸುತ್ತದೆ

ಕೆಲವೊಮ್ಮೆ ಆಹಾರದ ಮೂಲಕ ದೇಹ ಪ್ರವೇಶಿಸುವ ಕ್ಯಾನ್ಸರ್ ಕಾರಕ ಕಣಗಳು (free radicals) ಕರುಳಿನ ಒಳಭಾಗದಲ್ಲಿ ಚಿಕ್ಕದಾಗಿ ಕ್ಯಾನ್ಸರ್ ಹಬ್ಬಿಸಿ ನಿಧಾನವಾಗಿ ಉಲ್ಬಣಿಸಲು ಕಾರಣವಾಗುತ್ತವೆ. ಹಲಸಿನ ಹಣ್ಣಿನಲ್ಲಿ ಈ ಕಣಗಳಿಗೆ ಪ್ರತ್ಯುತ್ತರ ನೀಡುವ ಆಂಟಿ ಆಕ್ಸಿಡೆಂಟುಗಳಿರುವ ಕಾರಣ ಒಂದು ವೇಳೆ ಕ್ಯಾನ್ಸರ್ ಕಣಗಳು ಪ್ರಾರಂಭಹಂತದಲ್ಲಿದ್ದರೆ ಸುಲಭವಾಗಿ ನಿವಾರಿಸಲ್ಪಡುತ್ತವೆ. ಜೊತೆಗೇ ಉತ್ತಮ ಪ್ರಮಾಣದಲ್ಲಿರುವ ಕರಗದ ನಾರು ಮಲಬದ್ದತೆ ಮತ್ತು ಮೂಲವ್ಯಾಧಿಯಾಗುವುದರಿಂದ ರಕ್ಷಿಸುತದೆ.

ಗರ್ಭಿಣಿಯರಿಗೂ ಉತ್ತಮವಾಗಿದೆ

ಗರ್ಭಿಣಿಯರಿಗೂ ಉತ್ತಮವಾಗಿದೆ

ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶ ಮತ್ತು ವಿಟಮಿನ್ ಗಳ ಅಗತ್ಯವಿದೆ. ವಿಶೇಷವಾಗಿ ವಿಟಮಿನ್ ಬಿ (niacin) ಹಲಸಿನ ಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯರಿಗೆ ದಿನವಿಡೀ ಅಗತ್ಯವಿರುವ ಪ್ರಮಾಣವನ್ನು ಪೂರೈಸುತ್ತದೆ. ಜೊತೆಗೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ವಿವಿಧ ಹಾರ್ಮೋನುಗಳು ಸೂಕ್ತಪ್ರಮಾಣದಲ್ಲಿ ಸ್ರವಿಸಲು ನೆರವಾಗುತ್ತದೆ. ಹಲಸಿನ ಹಣ್ಣಿನ ಪೋಷಕಾಂಶಗಳು ಹೆರಿಗೆಯ ಬಳಿಕ ಮಗುವಿಗೆ ಅಗತ್ಯವಿರುವ ತಾಯಿಹಾಲನ್ನು ಉತ್ಪಾದಿಸಲೂ ನೆರವಾಗುತ್ತವೆ.

ಹಲಸಿನ ಬೀಜದ ಉಪಯೋಗಗಳು

ಹಲಸಿನ ಬೀಜದ ಉಪಯೋಗಗಳು

ಹಲಸಿನ ಬೀಜವನ್ನು ಸುಟ್ಟು ತಿನ್ನಬಹುದು ಅಥವಾ ಸಾರಿನಲ್ಲಿ ಬೇಯಿಸಿಯೂ ಸೇವಿಸಬಹುದು. ಹಲಸಿನ ಬೀಜದ ಮುಖಲೇಪದಿಂದ ಸೌಂದರ್ಯವೂ ವೃದ್ಧಿಸುವುದು. ಇದಕ್ಕಾಗಿ ಹಲಸಿನ ಹಸಿ ಬೀಜವೊಂದನ್ನು ಕಲ್ಲಿನ ಮೇಲೆ ಉಜ್ಜಿ ನಯವಾಗಿ ಅರೆದು ಸಮಪ್ರಮಾಣದಲ್ಲಿ ಜೇನು ಮತ್ತು ಹಾಲನ್ನು ಸೇರಿಸಿ ಮುಖಕ್ಕೆಹಚ್ಚಿ ಅರ್ಧಘಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ನೆರಿಗೆಗಳಾಗುವುದನ್ನೂ ತಪ್ಪಿಸಬಹುದು. ಹಲಸಿನ ಬೀಜ ವಾಯುಪ್ರಕೋಪವನ್ನು ಹೆಚ್ಚಿಸುವುದರಿಂದ ಈ ತೊಂದರೆ ಇರುವವರು ಸೇವಿಸದಿರುವುದು ಉತ್ತಮ.

ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಹಣ್ಣಾಗುವ ಮೊದಲೇ ಕತ್ತರಿಸಿದ ಕಾಯಿಯಲ್ಲಿ (ಗುಜ್ಜೆ) ಪಿಷ್ಟ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜೊತೆಗೆ ವಿವಿಧ ಪ್ರೋಟೀನುಗಳು ಮತ್ತು ಖನಿಜಗಳಿವೆ. ಗುಜ್ಜೆಯನ್ನು ಸಾರು ಮಾಡಿ ಅನ್ನದೊಂದಿಗೆ ಕೊಂಚ ಉಪ್ಪಿನಕಾಯಿ ಸೇರಿಸಿ ತಿಂದರೆ ಸಿಗುವ ಆನಂದವೇ ಬೇರೆ. ಹಲಸಿನ ಬೀಜದ ಮತ್ತು ಹಣ್ಣಿನಿಂದ ತಯಾರಿಸಿದ ವಿವಿಧ ತಿನಿಸುಗಳು ಎಲ್ಲರ ಅಚ್ಚುಮೆಚ್ಚಿನದ್ದಾಗಿವೆ. ಜ್ವರ ಬಂದಾಗ ಹಲಸಿನ ಹಣ್ಣನ್ನು ತಿಂದರೆ ಮೈಜ್ವರ ಇಳಿದಿರುವುದನ್ನು ಗಮನಿಸಲಾಗಿದೆ.

ಹಲಸಿನ ಹಣ್ಣಿನ ಅಡ್ಡಪರಿಣಾಮಗಳು

ಹಲಸಿನ ಹಣ್ಣಿನ ಅಡ್ಡಪರಿಣಾಮಗಳು

ಎಲ್ಲಾ ಆಹಾರಗಳಲ್ಲಿರುವಂತೆ ಹಲಸಿನಲ್ಲಿಯೂ ಕೆಲವು ಅಡ್ಡಪರಿಣಾಮಗಳಿವೆ. ಈ ತೊಂದರೆಗಳಿರುವವರು ಹಲಸಿನ ಸೇವನೆಯನ್ನು ವರ್ಜಿಸುವುದು ಒಳಿತು

* ಹೂವಿನ ಪರಾಗದ (ವಿಶೇಷವಾಗಿ birch pollen ಎಂಬ ಪರಾಗ) ಅಲರ್ಜಿಯುಳ್ಳವರಿಗೆ ಹಲಸು ಹೇಳಿಸಿದ್ದಲ್ಲ.

* ರಕ್ತಹೆಪ್ಪುಗಟ್ಟುವ ತೊಂದರೆ ಇರುವ ರೋಗಿಗಳಿಗೂ ಹಲಸು ಒಳ್ಳೆಯದಲ್ಲ. ಇದು ರಕ್ತವನ್ನು ಶೀಘ್ರವಾಗಿ ಹೆಪ್ಪುಗಟ್ಟಿಸುವುದರಿಂದ ತೊಂದರೆ ಹೆಚ್ಚಬಹುದು.

* ಮಧುಮೇಹಿಗಳಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವುದರಿಂದ ಮಧುಮೇಹಿಗಳಿಗೂ ಹಿತವಲ್ಲ

* ಅಂಗಾಂಶ ಕಸಿ, immunosuppression therapy ಮೊದಲಾದ ಚಿಕಿತ್ಸೆ ಪಡೆಯುತ್ತಿರುವವರಿಗೆ ಹಿತವಲ್ಲ

* ಸಂತಾನ ಬಯಸುತ್ತಿರುವ ದಂಪತಿಗಳಿಗೆ ಹಲಸು ಹೇಳಿಸಿದ್ದಲ್ಲ. ಏಕೆಂದರೆ ಪುರುಷರಲ್ಲಿ ನಿಮಿರುದೌರ್ಬಲ್ಯವನ್ನು ಹಲಸು ಕೊಂಚಮಟ್ಟಿಗೆ ಕಡಿಮೆಗೊಳಿಸುವುದು ಕಂಡುಬಂದಿದೆ.

* ಗರ್ಭವತಿಯರಿಗೆ ಪ್ರಾರಂಭದ ಮೂರು ತಿಂಗಳವರೆಗೆ ಗುಜ್ಜೆ (ಹಲಸಿನ ಕಾಯಿ) ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣು ಮತ್ತು ಖಾದ್ಯ ತಿನ್ನುವುದರಿಂದ ಗರ್ಭಾಪಾತವಾಗುವ ಸಾಧ್ಯತೆ ಹೆಚ್ಚುತ್ತದೆ.

* ಹಲಸಿನಲ್ಲಿ ಕರಗದ ನಾರಿನ ಪ್ರಮಾಣ ಹೆಚ್ಚಿರುವ ಕಾರಣ ತುಂಬಾ ಹೆಚ್ಚು ತಿನ್ನುವುದು ತರವಲ್ಲ. ಏಕೆಂದರೆ ಅತಿಹೆಚ್ಚು ಪ್ರಮಾಣದಲ್ಲಿ ನಾರು ಕರುಳಿನಲ್ಲಿ ಶೇಖರವಾದರೆ ಇತರ ತೊಂದರೆಗಳೂ ಎದುರಾಗಬಹುದು.


English summary

Top Health Benefits of Jackfruit

This article is about the health benefits of jackfruit. Before that, lets have an idea of this amazing fruit. The sweet and delicious jackfruit allures you with its wonderful fragrance. Now, here are some points on health benefits of jackfruit
X
Desktop Bottom Promotion