For Quick Alerts
ALLOW NOTIFICATIONS  
For Daily Alerts

ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಸಿರು ಸೇಬಿನ ಪ್ರಯೋಜನಗಳೇನು?

|

"ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು" ಈ ವಾಕ್ಯವನ್ನು ಚಿಕ್ಕಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ. ಬೇರೆಲ್ಲಾ ಹಣ್ಣುಗಳಿಗಿಂತ ಸೇಬಿನಲ್ಲಿರುವ ಪೋಷಕಾಂಶಗಳ ಆಗರವೇ ಇದಕ್ಕೆ ಕಾರಣ. ಪ್ರತಿದಿನ ಸೇಬು ಹಣ್ಣೊಂದನ್ನು ತಿನ್ನುವ ಮೂಲಕ ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನುಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟುಗಳು ಹಾಗೂ ಮುಖ್ಯವಾಗಿ ವಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರುವ ಕಾರಣ ಸೇಬಿಗೆ ವೈದ್ಯರನ್ನು ದೂರ ಅಟ್ಟಿದ ಅತಿಶಯೋಕ್ತಿ ಲಭ್ಯವಾಗಿದೆ.

ಹಸಿರು ಸೇಬುಗಳು ಬಹಳ ಹಿಂದಿನಿಂದಲು ಆರೋಗ್ಯಕರವಾದ ಹಣ್ಣು ಎಂದು ಪರಿಗಣಿಸಲ್ಪಟ್ಟಿದೆ. ಇದರಲ್ಲಿ ಯಥೇಚ್ಛವಾಗಿರುವ ಪ್ರೋಟಿನ್‍ಗಳು, ವಿಟಮಿನ್‍ಗಳು, ಮಿನರಲ್‍ಗಳು, ಮತ್ತು ನಾರಿನಂಶ (ಫೈಬರ್)ಗಳು ಇದನ್ನು ಆರೋಗ್ಯಕ್ಕಾಗಿ ತಿನ್ನುವ ಹಣ್ಣುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಂದು ನೀಡಿದೆ. ಜೀರ್ಣ ಶಕ್ತಿಯ ಸಮಸ್ಯೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತದೊತ್ತಡ ನಿವಾರಿಸಲು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಮತ್ತು ಪಚನ ಕ್ರಿಯೆಯನ್ನು ಸರಾಗಗೊಳಿಸಿ, ಹೊಟ್ಟೆ ಹಸಿಯುವಂತೆ ಮಾಡಲು ಹಸಿರು ಸೇಬುಗಳು ಅತ್ಯಂತ ಪ್ರಯೋಜನಕಾರಿ. ಹಸಿರು ಸೇಬು ಸೇವಿಸುವುದರಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು.

ಹೆಚ್ಚು ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ
ಇದರಲ್ಲಿ ಹೆಚ್ಚು ಪ್ರಮಾಣದ ನಾರಿನಂಶವಿದ್ದು, ಇದು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ತೊಳೆದು ಹಾಕುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹಸಿರು ಸೇಬು ನಮ್ಮ ಪಚನ ಕ್ರಿಯೆ ಮತ್ತು ಹೃದಯದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಯಾವಾಗಲು ಹಸಿರು ಸೇಬನ್ನು ಅದರ ಸಿಪ್ಪೆಯ ಸಹಿತ ತಿನ್ನುವುದು ಒಳ್ಳೆಯದು. ಇದು ನಿಮ್ಮ ಕರುಳು ಮತ್ತು ಜೀರ್ಣಾಂಗದ ಎಲ್ಲಾ ಅಂಗಗಳನ್ನು ಪರಿಶುದ್ಧಗೊಳಿಸುತ್ತದೆ ಮತ್ತು ಆರೋಗ್ಯವಂತವನ್ನಾಗಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಹಸಿರು ಸೇಬಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ (7%). ಈ ಪ್ರಮಾಣದ ವಿಟಮಿನ್ ಸೇವನೆಯ ಕಾರಣ ಪ್ರತಿದಿನ ಅಗತ್ಯಕ್ಕೆ ಸೂಚಿಸಲಾದ 14% ರಷ್ಟು ವಿಟಮಿನ್ ಲಭ್ಯವಾಗುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತದೆ. ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Top health benefits of eating green apples

ಖನಿಜಾಂಶವನ್ನು ಹೊಂದಿದೆ
ಹಸಿರು ಸೇಬಿನಲ್ಲಿ ಕಬ್ಬಿಣ, ಸತು, ತಾಮ್ರ, ಮ್ಯಾಂಗನೀಸ್, ಪೊಟಾಶಿಯಂ ಇತ್ಯಾದಿ ಖನಿಜಗಳು ಯಥೇಚ್ಛವಾಗಿವೆ. ಈ ಎಲ್ಲ ಖನಿಜಗಳು ಮಾನವನ ದೇಹಕ್ಕೆ ಅತ್ಯಾವಶ್ಯಕವಾದವುಗಳಾಗಿದ್ದು, ಆರೋಗ್ಯವರ್ಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸೇಬಿನಲ್ಲಿರುವ ಕಬ್ಬಿಣಾಂಶವು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯ ಕೂಡ ಸುಧಾರಿಸುತ್ತದೆ.

ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ನಿಜಕ್ಕು ವರದಾನ. ಡಯಟ್ ಮಾಡುವವರಾಗಲಿ ಅಥವಾ ಪ್ರತಿದಿನ ಜಿಮ್‍ಗೆ ಹೋಗುವವರಾಗಲಿ ತಮ್ಮ ಆಹಾರ ಕ್ರಮದಲ್ಲಿ ಒಂದು ಹಸಿರು ಸೇಬನ್ನು ಸೇರಿಸುವುದು ಉತ್ತಮ. ಇದು ರಕ್ತ ನಾಳಗಳಲ್ಲಿರುವ ಕೊಬ್ಬನ್ನು ಹೀರಿಕೊಂಡು, ಹೃದಯಕ್ಕೆ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ.

ಚರ್ಮದ ಕ್ಯಾನ್ಸರನ್ನು ತಡೆಯುತ್ತದೆ
ಈ ಸೇಬಿನಲ್ಲಿ ವಿಟಮಿನ್ ಸಿ ಇದೆ. ಇದು ಫ್ರೀ ರಾಡಿಕಲ್ಸ್ ನಿಂದ ಚರ್ಮದ ಕೋಶಗಳ ಮೇಲೆ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ. ಇದರಿಂದಾಗಿ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಸಮೃದ್ಧವಾದ ಅಂಟಿ ಆಕ್ಸಿಡೆಂಟ್‍ಗಳ ಆಗರ
ಈ ಸೇಬಿನಲ್ಲಿ ಜೀವಕೋಶಗಳ ಮರು ನಿರ್ಮಾಣಕ್ಕೆ ಮತ್ತು ಪುನಃಶ್ಚೇತನಕ್ಕೆ ಅತ್ಯಾವಶ್ಯಕವಾಗಿರುವ ಆಂಟಿ ಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿ ಇದೆ. ಇದು ನಿಮ್ಮ ತ್ವಚೆಗೆ ಹೊಳಪನ್ನು ಮತ್ತು ಆರೋಗ್ಯವನ್ನು ನೀಡುತ್ತವೆ. ಈ ಆಂಟಿ ಆಕ್ಸಿಡೆಂಟ್‍ಗಳು ನಿಮ್ಮ ಯಕೃತ್ತಿನ ಕಾರ್ಯ ಕ್ಷಮತೆಯನ್ನು ಸಹ ಹೆಚ್ಚಿಸುತ್ತವೆ.

ಆರೋಗ್ಯಕರವಾದ ಸದೃಢವಾದ ಮೂಳೆಗಳು
ಹಸಿರು ಸೇಬು ಥೈರಾಯ್ಡ್ ಗ್ರಂಥಿಯ ಕಾರ್ಯ ಚಟುವಟಿಕೆಯಲ್ಲಿ ಸರಾಗತೆಯನ್ನುಂಟು ಮಾಡುತ್ತದೆ. ಇದರಿಂದ ಸಂಧಿವಾತ ಬರುವುದು ತಪ್ಪುತ್ತದೆ.

ಅಸ್ತಮಾ ರೋಗವನ್ನು ತಡೆಯುತ್ತದೆ
ಪ್ರತಿದಿನ ಸೇಬಿನ ರಸವನ್ನು ಸೇವಿಸಿ. ಇದರಿಂದ ಅಸ್ತಮಾ ಮುಂತಾದ ಅಲರ್ಜಿ ಸಮಸ್ಯೆಗಳು ಬರುವುದನ್ನು ತಡೆಯಬಹುದು.

ಮಧುಮೇಹವನ್ನು ನಿಯಂತ್ರಿಸಬಹುದು
ಸೇಬು ಮಧುಮೇಹ ರೋಗವನ್ನು ನಿಯಂತ್ರಿಸುತ್ತದೆ. ಮಧುಮೇಹಿಗಳು ತಪ್ಪದೆ ಇದನ್ನು ಸೇವಿಸಬೇಕು.

ವಿಟಮಿನ್ ಎ, ಬಿ ಮತ್ತು ಸಿ ಅಧಿಕ ಪ್ರಮಾಣದಲ್ಲಿರುತ್ತದೆ
ಹಸಿರು ಸೇಬಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಚರ್ಮದ ಮೇಲೆ ಫ್ರೀ ರಾಡಿಕಲ್ಸ್ ಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸುವುದರ ಜೊತೆಗೆ, ತ್ವಚೆಗೆ ಒಳಗಿನಿಂದ ಹೊಳಪನ್ನು ತಂದು ಕೊಡುತ್ತದೆ.

English summary

Top health benefits of eating green apples

As the saying goes “An apple a day keeps the doctor away”, and it certainly holds true even for green apples! Apples are one of the most exotic and amazing fruits that Mother Nature has blessed us with. They contain a lot of essential nutrients and vitamins which should form a part of each and every person’s daily diet.
Story first published: Thursday, January 1, 2015, 19:11 [IST]
X
Desktop Bottom Promotion