For Quick Alerts
ALLOW NOTIFICATIONS  
For Daily Alerts

ಆರೋಗ್ಯ ವೃದ್ಧಿಸುವ ಬೆಳಗಿನ ಜಾವದ ಸೂರ್ಯ ನಮಸ್ಕಾರ

By Super
|

ಬೆಳಗ್ಗಿನ ಜಾವ ನಡೆಸುವ ಸೂರ್ಯ ನಮಸ್ಕಾರ ಯೋಗಾಭ್ಯಾಸದ ಒಂದು ಪ್ರಮುಖ ಭಂಗಿಯಾಗಿದೆ. ಇದನ್ನು ಅನುಸರಿಸುವುದರಿಂದ ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕಾಯವನ್ನು ದೃಢಗೊಳಿಸುವುದರಿಂದ ಒಂದು ಪರಿಪೂರ್ಣ ವ್ಯಾಯಾಮವಾಗಿದೆ.

ಇದರ ಅಪ್ರತಿಮ ಪ್ರಯೋಜನಗಳ ಬಗ್ಗೆ ತಿಳಿದುಕೊಂಡ ಹಲವು ಖ್ಯಾತನಾಮರೂ ಈಗ ನಿತ್ಯ ಸೂರ್ಯನಮಸ್ಕಾರವನ್ನು ಅನುಸರಿಸುತ್ತಿದ್ದಾರೆ. ಇವರಲ್ಲಿ ಕರೀನಾ ಕಪೂರ್ ಪ್ರಮುಖರಾಗಿದ್ದು ತಮ್ಮ ಚಿಂತೆಗೆ ಕಾರಣವಾಗಿದ್ದ ಸ್ಥೂಲಕಾಯದಿಂದ ಹೊರಬರಲು ನೆರವಾಯಿತು ಎನ್ನುತ್ತಾರೆ. ಆದರೆ ಪ್ರತಿದಿನ ಸೂರ್ಯ ನಮಸ್ಕಾರವನ್ನು ಅನುಸರಿಸುವುದರಿಂದ ದೇಹದ ತೂಕ ಕಳೆದುಕೊಳ್ಳುವ ಹೊರತಾಗಿ ಇನ್ನೂ ಹಲವು ಪ್ರಯೋಜನಗಳಿವೆ. ಸೂರ್ಯ ನಮಸ್ಕಾರದ ನಿಯಮ ಮತ್ತು ಪ್ರಯೋಜನಗಳು

ಸೂರ್ಯ ನಮಸ್ಕಾರ ನೋಡಲು ಒಂದು ಪ್ರಕ್ರಿಯೆಯಂತೆ ಕಂಡುಬಂದರೂ ಇದನ್ನು ಭಿನ್ನವಾಗಿ ನಿರ್ವಹಿಸಬಹುದು. ಇದರಿಂದ ದೇಹದ ಹೆಚ್ಚುವರಿ ಕ್ಯಾಲೋರಿಗಳನ್ನು ಬಳಸಿಕೊಳ್ಳುವ ಮೂಲಕ ಸ್ಥೂಲಕಾಯ ಶೀಘ್ರವಾಗಿ ಕರಗುತ್ತದೆ. ಬೆಳಗಿನ ಸೂರ್ಯನ ಕಿರಣಗಳನ್ನು ದಿಟ್ಟಿಸುವುದರಿಂದ ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುವುದು. ಸೂರ್ಯ ನಮಸ್ಕಾರದ 12 ಆಸನಗಳು ಮತ್ತು ಮಂತ್ರ

ಬೆಳಗ್ಗಿನ ತಾಜಾ ಹವೆಯಿಂದ ಹೆಚ್ಚಿನ ಪ್ರಮಾಣದ ಆಮ್ಲಜನಕದ ಲಭ್ಯತೆ, ಸೂರ್ಯನ ಎಳೆಕಿರಣಗಳಿಂದ ವಿಟಮಿನ್ ಡಿ ಉತ್ಪಾದನೆ ಮೊದಲಾದ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳ ಬಗ್ಗೆ ಹಲವು ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.

ದೇಹಕ್ಕೆ ಉತ್ತಮ ಸೆಳೆತ ದೊರಕುತ್ತದೆ

ದೇಹಕ್ಕೆ ಉತ್ತಮ ಸೆಳೆತ ದೊರಕುತ್ತದೆ

ಯಾವುದೇ ವ್ಯಾಯಾಮಕ್ಕೂ ಮೊದಲು ದೇಹಕ್ಕೆ ಸೆಳೆತ ನೀಡುವ ಸುಲಭ ವ್ಯಾಯಾಮಗಳು ಅತ್ಯಗತ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸುಲಭ ವ್ಯಾಯಾಮಗಳೇ ದೇಹದ ಕೊಬ್ಬನ್ನು ಕರಗಿಸುವ ಬಹುತೇಕ ಕೆಲಸವನ್ನು ಮುಗಿಸಿಬಿಡುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೇಹಕ್ಕೆ ಉತ್ತಮ ಸೆಳೆತ ದೊರಕುತ್ತದೆ

ದೇಹಕ್ಕೆ ಉತ್ತಮ ಸೆಳೆತ ದೊರಕುತ್ತದೆ

ಸೂರ್ಯ ನಮಸ್ಕಾರವೂ ಇಂತಹದ್ದೇ ಒಂದು ಸುಲಭ ವ್ಯಾಯಾಮವಾಗಿದ್ದು ದೇಹವನ್ನು ಸೆಳೆತಕ್ಕೆ ಒಳಪಡಿಸುವುದರಿಂದ ಮುಂದಿನ ಯಾವುದೇ ಕಠಿಣ ವ್ಯಾಯಾಮ ಅಥವಾ ಯೋಗಾಭ್ಯಾಸಕ್ಕೆ ದೇಹವನ್ನು ಅಣಿಗೊಳಿಸುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಸೂರ್ಯನಮಸ್ಕಾರದಲ್ಲಿ ದೇಹದ ಪ್ರತಿಯೊಂದೂ ಸ್ನಾಯು ಸೆಳೆತಕ್ಕೆ ಒಳಗಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆ ಉತ್ತಮವಾಗುತ್ತದೆ. ಪರಿಣಾಮವಾಗಿ ದೇಹದ ಕೊಬ್ಬು ಕರಗಿಸಲು ಥೈರಾಯ್ಡ್ ಗ್ರಂಥಿಯ ಸ್ರಾವ ನೆರವಾಗುತ್ತದೆ.

ದೇಹದ ಭಂಗಿ ಉತ್ತಮಗೊಳ್ಳುತ್ತದೆ

ದೇಹದ ಭಂಗಿ ಉತ್ತಮಗೊಳ್ಳುತ್ತದೆ

ಸಾಮಾನ್ಯವಾಗಿ ನಾವೆಲ್ಲರೂ ಕೊಂಚವಾಗಿ ಮುಂದೆ ಬಾಗಿರುತ್ತೇವೆ. ಏಕೆಂದರೆ ನಮ್ಮ ಹೆಚ್ಚಿನ ಚಟುವಟಿಕೆಗಳನ್ನು ಮುಖವನ್ನು ಬಾಗಿಸಿಯೇ ನಡೆಸಬೇಕಾಗುತ್ತದೆ. ಉದಾಹರಣೆಗೆ ಓದುವುದು ಬರೆಯುವುದು ಮೊದಲಾದವು. ವರ್ಷಗಟ್ಟಲೆ ನಡೆಸುವ ಈ ಕ್ರಿಯೆಯಿಂದ ನಮ್ಮೆಲ್ಲರ ತಲೆ ಕೊಂಚ ಮುಂದೆ ಬಾಗಿರುತ್ತದೆ, ಅಂತೆಯೇ ಬೆನ್ನು ಸಹಾ ಕೊಂಚ ಕಮಾನಿನಂತೆ ಮುಂದೆ ಬಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೇಹದ ಭಂಗಿ ಉತ್ತಮಗೊಳ್ಳುತ್ತದೆ

ದೇಹದ ಭಂಗಿ ಉತ್ತಮಗೊಳ್ಳುತ್ತದೆ

ಸೂರ್ಯನಮಸ್ಕಾರವನ್ನು ನಿತ್ಯವೂ ಅನುಸರಿಸುವುದರಿಂದ ವರ್ಷಗಟ್ಟಲೇ ನಾವು ಮಾಡಿಕೊಂಡು ಬಂದಿದ್ದ ತಪ್ಪನ್ನು ಸರಿಪಡಿಸಿ ನಮ್ಮ ದೇಹದ ಭಂಗಿಯನ್ನು ಉತ್ತಮಪಡಿಸಿಕೊಳ್ಳಬಹುದು, ತನ್ಮೂಲಕ ಇದರಿಂದ ಎದುರಾಗುವ ಬೆನ್ನು ನೋವು ಮೊದಲಾದ ತೊಂದರೆಗಳಿಂದ ಮುಕ್ತಿ ಪಡೆಯಬಹುದು.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ನಮ್ಮ ದಿನದ ಊಟದ ಸಮಯವನ್ನು ಒಂದು ನಿಯಮದಂತೆ ಪಾಲಿಸಲು ಇಂದಿನ ದಿನಗಳಲ್ಲಿ ಸಾಧ್ಯವೇ ಇಲ್ಲದಂತಾಗಿದೆ. ಆದರೆ ದೇಹ ಇದನ್ನೆಲ್ಲಾ ಕೇಳುವುದಿಲ್ಲ. ಪರಿಣಾಮವಾಗಿ ಅಜೀರ್ಣತೆ, ಆಮ್ಲೀಯತೆ, ಹುಳಿತೇಗು ಮೊದಲಾದ ತೊಂದರೆಗಳು ಎದುರಾಗುತ್ತವೆ. ಪ್ರತಿದಿನ ಸೂರ್ಯ ನಮಸ್ಕಾರ ನಿರ್ವಹಿಸುವುದರಿಂದ ಕಳೆದ ದಿನದ ಊಟದ ತೊಂದರೆಗಳನ್ನು ಸರಿಪಡಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಮೂಳೆಗಳು ಸದೃಢಗೊಳ್ಳಲು ನೆರವಾಗುತ್ತದೆ

ಮೂಳೆಗಳು ಸದೃಢಗೊಳ್ಳಲು ನೆರವಾಗುತ್ತದೆ

ಬೆಳಗ್ಗಿನ ಸೂರ್ಯನಮಸ್ಕಾರದ ಹೊತ್ತಿನಲ್ಲಿ ದೇಹದ ಮೇಲೆ ಬೀಳುವ ಕಿರಣಗಳು ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗಲು ನೆರವಾಗುತ್ತದೆ. ಈ ವಿಟಮಿನ್ ಡಿ ಕ್ಯಾಲ್ಸಿಯಂ ಮೂಳೆಗಳಿಗೆ ಅಂಟಿಕೊಳ್ಳಲು ಅಥವಾ ಹೀರಿಕೊಳ್ಳಲು ನೆರವಾಗುವ ಮೂಲಕ ಮೂಳೆಗಳ ದೃಢತೆಗೆ ಅಗತ್ಯವಾಗಿದೆ. ಪ್ರತಿದಿನದ ಸೂರ್ಯನಮಸ್ಕಾರದಿಂದ ಮೂಳೆಗಳು ಹೆಚ್ಚು ಸದೃಢಗೊಳ್ಳುತ್ತವೆ.

ಒತ್ತಡವನ್ನು ನಿವಾರಿಸುತ್ತದೆ

ಒತ್ತಡವನ್ನು ನಿವಾರಿಸುತ್ತದೆ

ದಿನದ ವಿವಿಧ ಜಂಜಡಗಳಿಂದ ಎದುರಾಗುವ ಒತ್ತಡ ದೇಹದ ಎಲ್ಲಾ ಸ್ನಾಯುಗಳು ಪೆಡಸಾಗುವಂತೆ ಮಾಡುತ್ತದೆ. ಸೂರ್ಯನಮಸ್ಕಾರದ ಹೊತ್ತಿನಲ್ಲಿ ತೆಗೆದುಕೊಳ್ಳುವ ಪೂರ್ಣಶ್ವಾಸದಿಂದ ಪಡೆಯುವ ಹೆಚ್ಚಿನ ಆಮ್ಲಜನಕ ಮತ್ತು ನಿರಾಳವಾಗಿರುವ ಮನ ಈ ಪೆಡಸನ್ನು ನಿವಾರಿಸಿ ಸ್ನಾಯುಗಳು ಸಡಿಲವಾಗಲು ನೆರವಾಗುತ್ತದೆ. ಪರಿಣಾಮವಾಗಿ ಒತ್ತಡದಿಂದ ಮುಕ್ತಿ ದೊರಕುತ್ತದೆ.

ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ

ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ

ನಿತ್ಯದ ಬೆಳಗ್ಗಿನ ಬಹಿರ್ದೆಶೆ ಸುಸೂತ್ರವಾಗಿ ಆಗದಿದ್ದರೆ ಮಲಬದ್ಧತೆ, ಆಸನದ ಮೊಳೆ ಮತ್ತಿತರ ತೊಂದರೆಗಳು ಎದುರಾಗುತ್ತದೆ. ಪ್ರತಿದಿನ ಸೂರ್ಯನಮಸ್ಕಾರವನ್ನು ಅನುಸರಿಸುವಾಗ ದೇಹವನ್ನು ಮುಂದೆ ಬಾಗಿಸಬೇಕಾಗುವುದರಿಂದ ದೊಡ್ಡಕರುಳು ಸಡಿಲಗೊಂಡು ಬಹಿರ್ದೆಶೆ ಸುಲಭವಾಗಲು ನೆರವಾಗುತ್ತದೆ. ಇದು ಮಲಬದ್ಧತೆ ಮತ್ತು ಇತರ ತೊಂದರೆಗಳಿಂದ ರಕ್ಷಿಸುತ್ತದೆ.

ನಿದ್ರಾಹೀನತೆಯಿಂದ ಮುಕ್ತಿ ನೀಡುತ್ತದೆ

ನಿದ್ರಾಹೀನತೆಯಿಂದ ಮುಕ್ತಿ ನೀಡುತ್ತದೆ

ಸೂರ್ಯ ನಮಸ್ಕಾರಕ್ಕೆ ಸೂರ್ಯೋದಯಕ್ಕೂ ಮುನ್ನವೇ ಕಡ್ಡಾಯವಾಗಿ ಏಳಬೇಕಾಗಿರುವುದರಿಂದ ನಿಸರ್ಗ ನಿಯಮವನ್ನು ಪಾಲಿಸಿದಂತಾಗುತ್ತದೆ. ರಕ್ತಪರಿಚಲನೆ ಉತ್ತಮಗೊಂಡು ದಿನದ ಚಟುವಟಿಕೆ ಸುಲಭವಾಗುತ್ತದೆ. ರಾತ್ರಿ ನಿದ್ದೆಯೂ ಬೇಗನೇ ಬರುತ್ತದೆ.

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ಸೂರ್ಯನಮಸ್ಕಾರದಲ್ಲಿ ದೇಹವನ್ನು ಗರಿಷ್ಟವಾಗಿ ಸೆಳೆತಕ್ಕೊಳಗಾಗಿಸಬೇಕಾದುದರಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ದಿನದ ಚಟುವಟಿಕೆಗಳನ್ನು ನಿರಾಯಾಸವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

ಮಾಸಿಕ ಋತುಚಕ್ರವನ್ನು ನಿಯಮಿತಗೊಳಿಸುತ್ತದೆ

ಮಾಸಿಕ ಋತುಚಕ್ರವನ್ನು ನಿಯಮಿತಗೊಳಿಸುತ್ತದೆ

ಇಂದಿನ ಒತ್ತಡದ ದಿನಚರಿಯಲ್ಲಿ ಹಲವು ಮಹಿಳೆಯರ ಮಾಸಿಕ ದಿನಗಳ ವೇಳಾಪಟ್ಟಿ ಏರುಪೇರಾಗುತ್ತದೆ. ಪ್ರತಿದಿನ ಸೂರ್ಯನಮಸ್ಕಾರವನ್ನು ನಿರ್ವಹಿಸುವುದರಿಂದ ಋತುಚಕ್ರದ ದಿನಗಳು ಕ್ರಮಬದ್ದವಾಗಲು ನೆರವಾಗುತ್ತದೆ.

ಗರ್ಭಿಣಿಯರು

ಗರ್ಭಿಣಿಯರು

ಗರ್ಭಿಣಿಯರು ಸೂರ್ಯನಮಸ್ಕಾರವನ್ನು ವೈದ್ಯರ ಸಲಹೆ ಮೇರೆಗೆ ಹೆರಿಗೆಯ ದಿನ ಸಮೀಪಿಸಲು ಎಷ್ಟು ಸಾಧ್ಯವೋ ಅಷ್ಟು ದಿನ ನಿರ್ವಹಿಸುವ ಮೂಲಕ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಸೂರ್ಯನಮಸ್ಕಾರದ ಮೂಲಕ ಮಹಿಳೆಯರ ದೇಹದಲ್ಲಿ ಸ್ರವಿಸುವ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಸ್ರವಿಸುವ ಮೂಲಕ ಇದು ಸಾಧ್ಯವಾಗುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ಪ್ರತಿದಿನದ ಸೂರ್ಯನಮಸ್ಕಾರದ ಮೂಲಕ ಉತ್ತಮ ರಕ್ತಪರಿಚಲನೆ, ಮಲಬದ್ದತೆಯಿಂದ ಬಿಡುಗಡೆ ಮಾತ್ರವಲ್ಲದೇ ಕಾಂತಿಯುತ ಚರ್ಮ ಪಡೆಯಲೂ ಸಾಧ್ಯವಾಗುತ್ತದೆ. ಸೂರ್ಯೋದಯದ ಹೊತ್ತಿನಲ್ಲಿ ಸೂರ್ಯನ ಕಿರಣಗಳು ಎಳೆಯದಾಗಿರುವುದರಿಂದ ಅಂದರೆ ಇದರಲ್ಲಿರುವ ಪ್ರಖರತೆ ಕಡಿಮೆಯಿರುವ ಕಾರಣ ಚರ್ಮ ಈ ಕಿರಣಗಳ ಸಾರವನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಚರ್ಮದ ಕಾಂತಿ ಹೆಚ್ಚುತ್ತದೆ. ಉತ್ತಮ ಪೋಷಣೆ ಪಡೆದಿರುವ ಕಾರಣ ಚರ್ಮದ ನೆರಿಗೆ ಕಡಿಮೆಯಾಗುತ್ತದೆ, ಸಹಜವರ್ಣ ಪಡೆಯಲೂ ನೆರವಾಗುತ್ತದೆ.

 ಚೈತನ್ಯವನ್ನು ಹೆಚ್ಚಿಸುತ್ತದೆ

ಚೈತನ್ಯವನ್ನು ಹೆಚ್ಚಿಸುತ್ತದೆ

ಸೂರ್ಯನಮಸ್ಕಾರದಿಂದ ದೇಹದ ಜೊತೆಗೇ ಮನಸ್ಸಿಗೂ ಹಲವು ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ದೇಹದ ಮೂರು ಭಾಗಗಳಾದ ವಾತ, ಪಿತ್ತ ಮತ್ತು ಕಫಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದು ಮನಸ್ಸಿನ ಋಣಾತ್ಮಕ ಶಕ್ತಿಗಳನ್ನು ಹೊಡೆದೋಡಿಸಿ ಧನಾತ್ಮಕ ಶಕ್ತಿ ಸಂಗ್ರಹವಾಗಲು ನೆರವಾಗುತ್ತದೆ. ಪರಿಣಾಮವಾಗಿ ದೇಹದ ಚೈತನ್ಯ ಹೆಚ್ಚುತ್ತದೆ, ದಿನದ ಕೆಲಸದಲ್ಲಿ ಹೆಚ್ಚು ಸಕ್ರಿಯರಾಗಲು ನೆರವಾಗುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

ದೇಹದ ಸದೃಢತೆ ಹೆಚ್ಚುತ್ತದೆ

ದೇಹದ ಸದೃಢತೆ ಹೆಚ್ಚುತ್ತದೆ

ನಿತ್ಯದ ಸೂರ್ಯನಮಸ್ಕಾರದಿಂದ ಕಾಂತಿಯುಕ್ತ ಚರ್ಮದ ಜೊತೆಗೇ ಹುರಿಗೊಂಡ ಸ್ನಾಯುಗಳನ್ನು ಪಡೆಯಲೂ ನೆರವಾಗುವುದರಿಂದ ದಿನಗಳೆದಂತೆ ಸದೃಢ ಶರೀರ ಪಡೆಯಲು ನೆರವಾಗುತ್ತದೆ.

ಮಕ್ಕಳಿಗೂ ಉತ್ತಮವಾಗಿದೆ

ಮಕ್ಕಳಿಗೂ ಉತ್ತಮವಾಗಿದೆ

ಯೋಗಾಭ್ಯಾಸದ ಕೆಲವು ಭಂಗಿಗಳನ್ನು ಮಕ್ಕಳು ನಿರ್ವಹಿಸಲು ಸಾಧ್ಯವಿಲ್ಲ. ಆದರೆ ಸೂರ್ಯನಮಸ್ಕಾರವನ್ನು ಮಕ್ಕಳೂ ನಿರ್ವಹಿಸಬಹುದು. ಆದರೆ ಇದಕ್ಕೆ ನುರಿತ ಯೋಗಶಿಕ್ಷಕರ ಮಾರ್ಗದರ್ಶನ ಅಗತ್ಯ. ಮಕ್ಕಳು ನಿತ್ಯವೂ ಅನುಸರಿಸುವುದರಿಂದ ಅವರಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೇ ಮಾನಸಿಕ ಸಾಮರ್ಥ್ಯವನ್ನೂ ಹೆಚ್ಚಿಸಲು ನೆರವಾಗುತ್ತದೆ. ಕಲಿಕೆಯಲ್ಲಿ ಏಕಾಗ್ರತೆ ಹೆಚ್ಚಲು, ಸ್ಮರಣ ಶಕ್ತಿ ಹೆಚ್ಚಲು, ನರವ್ಯವಸ್ಥೆ ಉತ್ತಮಗೊಳ್ಳಲು ಸೂರ್ಯನಮಸ್ಕಾರ ಸಹಕರಿಸುತ್ತದೆ.

ವಿವಿಧ ಗ್ರಂಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ

ವಿವಿಧ ಗ್ರಂಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ

ನಮ್ಮ ದೇಹದ ಹಲವು ಗ್ರಂಥಿಗಳು ನಿಯಮಿತವಾಗಿ ಹಾರ್ಮೋನುಗಳನ್ನು ಸ್ರವಿಸುತ್ತಲೇ ಇರಬೇಕು. ಥೈರಾಯ್ಡ್, ಪಿಟ್ಯೂಟರಿ, ಅಡ್ರಿನಲ್, ಪ್ಯಾರಾಥೈರಾಯ್ಡ್ ಮೊದಲಾದ ಗ್ರಂಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಪುರುಷರಲ್ಲಿ ವೃಷಣದಲ್ಲಿ ಉತ್ಪತ್ತಿಯಾಗುವ ವೀರ್ಯ, ಮಹಿಳೆಯರಲ್ಲಿ ಅಂಡ ಉತ್ತತ್ಪಿಯಾಗುವ ಅಂಡಾಶಯಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಸಂತಾನಫಲದ ಸಾಧ್ಯತೆಯೂ ಹೆಚ್ಚುತ್ತದೆ.

English summary

Top health Benefits Of Doing Surya Namaskar

The benefits of doing Surya Namaskar plainly for weight loss are also many. You can break up the Surya Namaskar into different yoga poses that help you to burn calories. If you still have the question why you should do Surya Namaskar then we can give some more very valid reasons to salute the sun. Here are some of the little known benefits of doing the Surya Namaskar every 
 morning.
Story first published: Saturday, July 25, 2015, 17:48 [IST]
X
Desktop Bottom Promotion