For Quick Alerts
ALLOW NOTIFICATIONS  
For Daily Alerts

ಔಷಧೀಯ ಗುಣಗಳ ಆಗರ 'ಬೆಳ್ಳುಳ್ಳಿಯ' ಮಹತ್ವ ಅರಿಯಿರಿ!

By Super
|

ಕರುಳಿನಲ್ಲಿ ಹುಣ್ಣು ಆಗಿದ್ದರೆ ಆಯುರ್ವೇದ ಸೂಚಿಸುವ ಸಿದ್ಧ ಔಷಧಿ ಎಂದರೆ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಹಸಿಯಾಗಿ ತಿನ್ನುವುದು. ವರ್ಷಾಂತರಗಳಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ಅಜ್ಜಿ ತಲೆ ಮೇಲೆ ಗುದ್ದಿದರೆ ನೂರು ಮೊಮ್ಮಕ್ಕಳು ಎಂಬ ಒಗ್ಗಟ್ಟಿಗೆ ಉತ್ತರ ನೀಡುವ ಈ ಪುಟ್ಟ ಬಿಳಿಯ ಎಸಳಿನಲ್ಲಿ ಆರೋಗ್ಯಕರ ಅಂಶಗಳ ಭಂಡಾರವೇ ಇದೆ.

ಸಾವಿರಾರು ವರ್ಷಗಳಿಂದಲೂ ಭಾರತೀಯರು ಈ ಬೆಳ್ಳುಳ್ಳಿಯನ್ನು ತಮ್ಮ ಆಹಾರದ ಒಂದು ಅಂಗವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ನಮ್ಮ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪೂರಕವಾಗಿರುವ ಬೆಳ್ಳುಳ್ಳಿಯ ಗುಣಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ. ಶೀತ, ಕೆಮ್ಮು ದೂರವಿಡುವ ಬೆಳ್ಳುಳ್ಳಿ ರಸಂ

ಬೆಳ್ಳುಳ್ಳಿಯಲ್ಲಿ ಏನೇನಿದೆ?

ಬೆಳ್ಳುಳ್ಳಿಯಲ್ಲಿ ಏನೇನಿದೆ?

ಬೆಳ್ಳುಳ್ಳಿಯಲ್ಲಿ ಏನೇನಿದೆ ಎನ್ನುವುದಕ್ಕಿಂತ ಏನೇನಿಲ್ಲ ಎಂದು ಕೇಳುವುದೇ ಸೂಕ್ತ.

* ಬೆಳ್ಳುಳ್ಳಿಯ ಕೊಂಚ ಖಾರವಾದ ವಾಸನೆಗೆ ಮುಖ್ಯ ಕಾರಣ ಇದರಲ್ಲಿ ಪ್ರಮುಖವಾಗಿರುವ ಗಂಧಕದ ಸಂಯುಕ್ತ ವಸ್ತುಗಳ ಪ್ರಮಾಣ.

* ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ (Allicin) ಎಂಬ ಪೋಷಕಾಂಶವು ಜೀವಿರೋಧಿ (antibacterial) ವೈರಸ್ ವಿರೋಧಿ (anti-viral), ಬೂಸುನಿವಾರಕ (antifungal) ಮತ್ತು ಆಂಟಿ ಆಕ್ಸಿಡೆಂಟು ಗುಣಗಳನ್ನು ಹೊಂದಿರುವುದರಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ರಕ್ಷಿಸುತ್ತದೆ. ಇದರ ಪೂರ್ಣ ಉಪಯೋಗ ಪಡೆಯಲು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ, ಅಥವಾ ಅರೆದು ಕೊಂಚ ಕಾಲ ಬಿಟ್ಟು ಸೇವಿಸುವುದು ಉತ್ತಮ.

*ಆಲಿಸಿನ್ ಗಾಯಗಳನ್ನು ಬೇಗನೇ ಗುಣವಾಗಲು ನೆರವಾಗುತ್ತದೆ.

*ಆಲಿಸಿನ್ ಮತ್ತು ajoene, alliin ಮೊದಲಾದ ಸಂಯುಕ್ತಗಳೊಂದಿಗೆ ಸೇವಿಸಿದಾಗ ರಕ್ತಸಂಚಾರ, ಜೀರ್ಣವ್ಯವಸ್ಥೆ, ರೋಗ ನಿರೋಧಕ ವ್ಯವಸ್ಥೆಯಲ್ಲಿ ಸುಧಾರಣೆ, ಅಧಿಕ ರಕ್ತದೊತ್ತಡದಿಂದ ಬಿಡುಗಡೆ, ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ.

*ಬೆಳ್ಳುಳ್ಳಿಯಲ್ಲಿ ಉತ್ತಮ ಪ್ರಮಾಣದ ಸಿಲಿನಿಯಂ (selenium) ಸಹಾ ಇದೆ.

*ವೈರಸ್‌ಗಳ ಧಾಳಿಯಿಂದ ರಕ್ಷಿಸುತ್ತದೆ.

ಬೆಳ್ಳುಳ್ಳಿ ಹೇಗೆ ನಮ್ಮನ್ನು ರಕ್ಷಿಸುತ್ತದೆ?

ಬೆಳ್ಳುಳ್ಳಿ ಹೇಗೆ ನಮ್ಮನ್ನು ರಕ್ಷಿಸುತ್ತದೆ?

ನಮ್ಮ ಆಹಾರದ ಮೂಲಕ ಧಾಳಿಯಿಡುವ ವೈರಸ್ಸುಗಳು, ಬೂಸು, ಯೀಸ್ಟ್ ಮತ್ತು ಕ್ರಿಮಿಗಳ ಮೂಲಕ ಪ್ರಾರಂಭವಾಗುವ ಸೋಂಕು ಆಗದಿರುವಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ನಮ್ಮ ಕರುಳುಗಳಲ್ಲಿ ಈ ಕ್ರಿಮಿಗಳು ಧಾಳಿಯಿಡುವ ಮುನ್ನವೇ ಅವುಗಳೊಂದಿಗೆ ಹೋರಾಡಿ ದೇಹದಿಂದ ವಿಸರ್ಜನೆಯಾಗುವಂತೆ ನೋಡಿಕೊಳ್ಳುತ್ತವೆ. ನಮ್ಮ ಆರೋಗ್ಯವನ್ನು ಕೆಡಿಸುವ E. coli, Salmonella enteritidis ಮೊದಲಾದ ವೈರಸ್ಸುಗಳಿಗೆ ಬೆಳ್ಳುಳ್ಳಿ ನೈಸರ್ಗಿಕ ಹೋರಾಟಗಾರನಾಗಿದೆ.

ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ

ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ

ಬೆಳ್ಳುಳ್ಳಿಯ ಜೀವಿರೋಧಿ (antibacterial) ಗುಣಗಳ ಕಾರಣ ಚರ್ಮವನ್ನು ಬಾಧಿಸುವ ಹಲವು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ. ajoene ಎಂಬ ರಾಸಾಯನಿಕ ಬೂಸು (fungal infection) ಬಾಧಿತ ಚರ್ಮದಿಂದ ಬೂಸನ್ನು ನಿವಾರಿಸಿ ಹೊಸ ಚರ್ಮ ಬೆಳೆಯಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಹುಳಕಡ್ಡಿ ಮತ್ತು athlete's foot ಎಂಬ ಚರ್ಮರೋಗಕ್ಕೆ ಬೆಳ್ಳುಳ್ಳಿ ರಾಮಬಾಣವಾಗಿದೆ.

ಉಪಯೋಗಿಸುವ ವಿಧಾನ: ಹುಳಕಡ್ಡಿ ಮತ್ತು ಬೆರಳಸಂದುಗಳಲ್ಲಿ ಆಗಿರುವ ಸೋಂಕು ನಿವಾರಿಸಲು ಬೆಳ್ಳುಳ್ಳಿಯನ್ನು ಅರೆದು ರಸ ಹಿಂಡಿ ತೆಗೆಯಿರಿ. ಇದರ ಕೆಲವು ತೊಟ್ಟುಗಳನ್ನು ಬಾಧಿಕ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಕೊಂಚ ಉರಿ ಎನಿಸಿದರೂ ಒಂದೆರಡು ದಿನಗಳಲ್ಲಿಯೇ ಉತ್ತಮ ಪರಿಣಾಮ ದೊರಕುತ್ತದೆ. ಸುಮಾರು ಒಂದು ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದು ಒರಎಸಿಕೊಳ್ಳಿ. (ಸೋಪು ಉಪಯೋಗಿಸಬಾರದು) ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳಬೇಕು.

ರಕ್ತ ಶೀಘ್ರ ಹೆಪ್ಪುಗಟ್ಟದಂತೆ ರಕ್ಷಿಸುತ್ತದೆ

ರಕ್ತ ಶೀಘ್ರ ಹೆಪ್ಪುಗಟ್ಟದಂತೆ ರಕ್ಷಿಸುತ್ತದೆ

ಬೆಳ್ಳುಳ್ಳಿಯಲ್ಲಿ ajoene ಎಂಬ ರಾಸಾಯನಿಕ ಕ್ಲುಪ್ತಕಾಲದಲ್ಲಿ ರಕ್ತ ಹೆಪ್ಪುಗಟ್ಟಿಸಲು ನೆರವಾಗುತ್ತದೆ. ವಾಸ್ತವವಾಗಿ ಯಾವುದೇ ಗಾಯವಾದರೂ ರಕ್ತ ಹೆಪ್ಪುಗಟ್ಟಬೇಕು, ಆಗಲೇ ಸ್ರಾವ ನಿಲ್ಲುವುದು. ಇದು ದೇಹದ ಹೊರಭಾಗದ ಗಾಯಗಳಿಗೆ ಅನ್ವಯಿಸುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ದೇಹದೊಳಗಣ ಭಾಗಗಳಲ್ಲಿ ಗಾಯವಾದರೆ, ಆಗ ರಕ್ತ ಕೂಡಲೇ ಹೆಪ್ಪುಗಟ್ಟಿಬಿಟ್ಟರೆ, ಒಳಗಿನ ರಕ್ತವಷ್ಟೂ ಹೆಪ್ಪುಗೊಳ್ಳುತ್ತಾ ಹೋಗಿ ಹೃದಯಾಘಾತಕ್ಕೆ ಕಾರಣವಾಗಬಲ್ಲದು. ಇನ್ನೊಂದೆಡೆ ರಕ್ತ ಹೆಪ್ಪುಗಟ್ಟಲು ದೀರ್ಘ ಸಮಯ ತೆಗೆದುಕೊಂಡರೆ ಶಸ್ತ್ರಚಿಕಿತ್ಸೆಯ ಬಳಿಕ ಗಾಯಗಳು ಮಾಗಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದುದರಿಂದ ನಮ್ಮ ದೇಹಕ್ಕೆ ಅತ್ಯಂತ ಶೀಘ್ರವೂ ಅಲ್ಲದ, ಅತ್ಯಂತ ನಿಧಾನವೂ ಅಲ್ಲದ ಹೆಪ್ಪುಗಟ್ಟುವ ಸಮಯದ ಅಗತ್ಯವಿದೆ. ಬೆಳ್ಳುಳ್ಳಿ ಈ ಸಮಯವನ್ನು ಪಾಲಿಸಲು ದೇಹಕ್ಕೆ ನೆರವಾಗುತ್ತದೆ.

ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದೇ ಒಂದು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಸೇವಿಸುವುದು ಉತ್ತಮ.

ರಕ್ತದ ಒತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ

ರಕ್ತದ ಒತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ

ನಮ್ಮ ರಕ್ತದ ಒತ್ತಡವನ್ನು ಹೆಚ್ಚಿಸಲು angiotensin II ಎಂಬ ಪ್ರೋಟೀನ್ ಕಾರಣವಾಗಿದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಈ ಪ್ರೋಟೀನ್ ನೊಂದಿಗೆ ಮಿಳಿತಗೊಂಡು ಅದರ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ರಕ್ತದೊತ್ತಡ ಹೆಚ್ಚುವುದನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ polysulphide ಎಂಬ ರಾಸಾಯನಿಕಗಳು ದೇಹದಲ್ಲಿ ಪ್ರವೇಶ ಪಡೆದ ಬಳಿಕ ಅನಿಲವಾಗಿ ಪರಿವರ್ತನೆಗೊಂಡು hydrogen sulphide ಎಂಬ

ರೂಪ ತಳೆಯುತ್ತವೆ. ಈ ಅನಿಲ ರಕ್ತನಾಳಗಳನ್ನು ಒಳಗಿನಿಂದ ಹಿಗ್ಗಿಸಿ ಹೆಚ್ಚಿನ ರಕ್ತ ಪೂರೈಕೆಗೆ ನೆರವಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚಿನ ರಕ್ತದೊತ್ತಡ ಇರುವ ರೋಗಿಗಳು ತಮ್ಮ ವೈದ್ಯರ ಸಲಹೆ ಪಡೆದು ಬೆಳ್ಳುಳ್ಳಿಯನ್ನು ಔಷಧಿಯಾಗಿ ಸೇವಿಸಬಹುದು.

ಉಪಯೋಗಿಸುವ ವಿಧಾನ

ಪ್ರತಿ ಊಟದಲ್ಲಿ ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ಊಟದ ನಡುವೆ ತಿನ್ನಿರಿ. ಪ್ರತಿ ಊಟದಲ್ಲಿ ನಾಲ್ಲ್ಕೈದು ಎಸಳುಗಳು ಸಾಕು.ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಅಥವಾ ಎರಡು ಚಿಕ್ಕ ಎಸಳುಗಳನ್ನು ತಿನ್ನುವುದೂ ಫಲಕಾರಿಯಾಗಿದೆ.

ನಿಮ್ಮ ಹೃದಯವನ್ನು ರಕ್ಷಿಸುತ್ತದೆ

ನಿಮ್ಮ ಹೃದಯವನ್ನು ರಕ್ಷಿಸುತ್ತದೆ

ಹೃದಯದಿಂದ ರಕ್ತ ಪೂರೈಕೆಯಾಗಲು ಹೃದಯ ರಕ್ತನಾಳಗಳ ಮೂಲಕ ಒಂದು ಒತ್ತಡದಲ್ಲಿ ರಕ್ತವನ್ನು ನೂಕುತ್ತದೆ. ಈ ನೂಕುವಿಕೆ ನರಗಳ ಒಳಭಾಗದಲ್ಲಿ ಸ್ವಲ್ಪ ಒತ್ತಡವನ್ನು ನೀಡುತ್ತದೆ. ಈ ಒತ್ತಡದ ಕಾರಣ ನರಗಳು ಪ್ರತಿ ಬಡಿತದಲ್ಲಿಯೂ ಹಿಗ್ಗುತ್ತದೆ. (ಈ ಹಿಗ್ಗುವಿಕೆಯನ್ನೇ ನಾಡಿ ಎನ್ನುತ್ತೇವೆ. ಇದು ಸ್ಪಷ್ಟವಾಗಿ ಅನುಭವಕ್ಕೆ ಬರುವಲ್ಲಿ ವೈದ್ಯರು ಹಿಡಿದು ಹೃದಯದ ಬಡಿತವನ್ನು ಪರೀಕ್ಷಿಸುತ್ತಾರೆ). ವಯಸ್ಸಿನೊಂದಿಗೇ ನಮ್ಮ ನರಗಳು ಈ ಸೆಳೆತವನ್ನು ಕಳೆದುಕೊಳ್ಳುತ್ತಾ ಬರುತ್ತವೆ. ಈ ಸ್ಥಿತಿಗೆ atherosclerosis ಎಂದು ಕರೆಯುತ್ತಾರೆ. ಹೆಚ್ಚು ಬಾಧಿತ ನರಗಳು ಒಳಗಿನಿಂದ ಮುಚ್ಚಿಕೊಂಡು ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಉಲ್ಬಣಗೊಂಡ ಸ್ಥಿತಿ ಹೃದಯಾಘಾತಕ್ಕೂ ಕಾರಣವಾಗಬಲ್ಲುದು. ಬೆಳ್ಳುಳ್ಳಿ ಈ ಸ್ಥಿತಿಯಿಂದ ನಮ್ಮನ್ನು ರಕ್ಷಿಸುತ್ತದೆ. ಜೊತೆಗೇ ನರಗಳ ಒಳಗೆ ರಕ್ತ ಹೆಪ್ಪುಗಟ್ಟದಂತೆಯೂ ರಕ್ಷಣೆ ನೀಡುತ್ತದೆ.

ಹಲ್ಲುನೋವಿನಿಂದ ಮುಕ್ತಿ ನೀಡುತ್ತದೆ

ಹಲ್ಲುನೋವಿನಿಂದ ಮುಕ್ತಿ ನೀಡುತ್ತದೆ

ಒಸಡುಗಳ ಸಂದುಗಳಲ್ಲಿ ಉಳಿದಿದ್ದ ಆಹಾರ ಕೊಳೆತು ಬ್ಯಾಕ್ಟೀರಿಯಾಗಳು ಒಸಡಿನ ಮೇಲೆ ಧಾಳಿ ಮಾಡಿದಾಗ ಹಲ್ಲುನೋವು ಉಂಟಾಗುತ್ತದೆ. ಬೆಳ್ಳುಳ್ಳಿಯ ಜೀವಿರೋಧಿ (antibacterial) ಗುಣದ ಕಾರಣ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಉಪಯೋಗಿಸುವ ವಿಧಾನ

ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನಯವಾಗಿ ಅರೆದು ಹಲ್ಲುಜ್ಜುವ ಪೇಸ್ಟ್ ನಂತೆ ನೇರವಾಗಿ ಬ್ರಶ್ ಮೇಲೆ ಹಚ್ಚಿ ಹಲ್ಲುಜ್ಜಿರಿ. ಒಂದು ವೇಳೆ ಒಸಡುಗಳು ಹೆಚ್ಚು ಬಾಧಿತವಾಗಿದ್ದರೆ ಸ್ವಲ್ಪ ಹೆಚ್ಚಿನ ಉರಿ ತರಿಸಬಹುದು. ಈ ಉರಿ ತಾತ್ಕಾಲಿಕವಾಗಿದ್ದು ಸ್ವಲ್ಪ ಸಮಯದ ಬಳಿಕ ಕಡಿಮೆಯಾಗುತ್ತದೆ. ಆದರೆ ಹಲ್ಲುನೋವಿನಿಂದ ಶೀಘ್ರವೇ ಉಪಶಮನ ನೀಡುತ್ತದೆ.

English summary

Top seven Health benefits of Garlic

Garlic is one of the most common ingredients in Indian dishes but apart from imparting flavour to food, this tiny, white pod also has immense medicinal properties. garlic is one ingredient in your kitchen that has a number of uses. Here are the top 15 health benefits of garlic you should know about.
X
Desktop Bottom Promotion