For Quick Alerts
ALLOW NOTIFICATIONS  
For Daily Alerts

ಸ್ತನ ಗಾತ್ರವನ್ನು ಹಿಗ್ಗಿಸುವ ನೈಸರ್ಗಿಕ ಟಾಪ್ 5 ಗಿಡ ಮೂಲಿಕೆಗಳು

By Lekhaka
|

ಮಹಿಳೆಯರಲ್ಲಿ ಪ್ರೌಢಾವಸ್ಥೆಯ ಸಮಯದಲ್ಲಿ ಲೈಂಗಿಕ ಹಾರ್ಮೋನ್ ಉತ್ಪಾದನೆ ಉಂಟಾಗಿ ಮುಟ್ಟಿನಲ್ಲಿ ಕೊನೆಗೊಳ್ಳುತ್ತದೆ. ಸ್ತನದ ಗಾತ್ರ ದೊಡ್ಡದಾಗುವುದು ಸೇರಿದಂತೆ ಎಲ್ಲಾ ರೀತಿಯ ಲೈಂಗಿಕ ಅಂಶಗಳು ಈ ಮಧ್ಯಂತರದಲ್ಲಿ ಸಂಭವಿಸುತ್ತವೆ. ಈಸ್ಟ್ರೋಜನ್‌ನ ಕಡಿಮೆ ಉತ್ಪಾದನೆಯಿಂದ ಸ್ತನದ ಗಾತ್ರ ಕಿರದಾಗಿರುತ್ತದೆ.

ಈ ದಿನಗಳಲ್ಲಿ ಸ್ತನ ಗಾತ್ರವನ್ನು ಹಿರಿದಾಗಿಸುವ ಹಲವಾರು ತಂತ್ರಜ್ಞಾನಗಳು ನಮ್ಮ ಮುಂದಿವೆ. ಆದರೆ ನೈಸರ್ಗಿಕವಾಗಿ ಈ ಸಮಸ್ಯೆಯನ್ನು ನಿವಾರಿಸುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಆದ್ದರಿಂದ ಸ್ತನ ಗಾತ್ರವನ್ನು ಹೆಚ್ಚಿಸುವ ನೈಸರ್ಗಿಕ ವಿಧಾನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಜೀರಿಗೆ

ಜೀರಿಗೆ

ಎಲ್ಲರ ಅಡುಗೆ ಮನೆಯಲ್ಲಿ ದೊರೆಯುವ ಈ ಕಾಳುಗಳು ನಿಮ್ಮ ಸ್ತನಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತವೆ ಮತ್ತು ಬಾಣಂತಿಯರಲ್ಲಿ ಎದೆಹಾಲನ್ನು ಸಹ ಹೆಚ್ಚಿಸುತ್ತವೆ. ಸ್ತನಗಳನ್ನು ಹಿಗ್ಗಿಸುವ ಇತರ ಪದಾರ್ಥಗಳಂತೆ, ಜೀರಿಗೆಯು ಸಹ ಫೈಟೊಈಸ್ಟ್ರೋಜೆನ್‌ಗಳನ್ನು ಪೂರೈಸುತ್ತದೆ. ಇದು ನಮ್ಮ ದೇಹದಲ್ಲಿರುವ ಈಸ್ಟ್ರೋಜೆನ್‍ನ ನಕಲಾಗಿ ಕಾರ್ಯ ನಿರ್ವಹಿಸುತ್ತದೆ. ಟೀ ರೂಪದಲ್ಲಿ, ಆಹಾರ ರೂಪದಲ್ಲಿ ಅಥವಾ ಜೀರಿಗೆಯನ್ನು ಸೇವಿಸಿ. ಇಲ್ಲವೆ ಜೀರಿಗೆ ಎಣ್ಣೆಯನ್ನು ಸ್ತನಗಳ ಮೇಲೆ ಲೇಪಿಸಿಕೊಳ್ಳಿ. ಜೀರಿಗೆಯು ಹೆಚ್ಚುವರಿಯಾದ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಆದ್ದರಿಂದ ಇದನ್ನು ರಕ್ತದೊತ್ತಡ, ಅಂಜಿನ, ಅಮಿನೋರ್ರಿಯಾ, ಅಸ್ತಮಾ ಮತ್ತು ಹೆಂಗಸರಲ್ಲಿ ಕಾಮಾಸಕ್ತಿಯನ್ನು ಉದ್ದೀಪನಗೊಳಿಸಲು ಬಳಸಿಕೊಳ್ಳಬಹುದು. ಜೀರಿಗೆಯಲ್ಲಿ ಅಧಿಕ ಪ್ರಮಾಣದ ಫೈಟೊನ್ಯೂಟ್ರಿಯೆಂಟ್‍ಗಳು ಇರುವುದರಿಂದ ಅದು ಸ್ತನಗಳ ಗಾತ್ರವನ್ನು ಹಿಗ್ಗಿಸಲು ನೆರವು ನೀಡುತ್ತದೆ.

ಸಂಭವನೀಯ ಅಡ್ಡ ಪರಿಣಾಮಗಳು

ಸಂಭವನೀಯ ಅಡ್ಡ ಪರಿಣಾಮಗಳು

ಒಂದು ವೇಳೆ ನೀವು ಸೆಲೆರಿ, ಕ್ಯಾರಟ್ ಮತ್ತು ಮುಗ್‍ವರ್ಟ್‌ನಂತಹ ಗಿಡಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ನಿಮ್ಮ ದೇಹ ಜೀರಿಗೆಗು ಸಹ ಅಲರ್ಜಿಯನ್ನು ತೋರಿಸುತ್ತದೆ.

ಜೀರಿಗೆಯು ಸೂರ್ಯನ ಬೆಳಕಿನಲ್ಲಿ ಚರ್ಮದ ಸೂಕ್ಷ್ಮತೆಯನ್ನು ಹೆಚ್ಚು ಮಾಡುತ್ತದೆ. ಇದರಿಂದಾಗಿ ಕ್ಷಿಪ್ರ ಗತಿಯಲ್ಲಿ ಸನ್ ಬರ್ನ್ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ತೆಳುವಾದ ಚರ್ಮವನ್ನು ಹೊಂದಿದ್ದರೆ, ಸನ್ ಬರ್ನ್ ತಡೆಯಲು ಅಗತ್ಯ ಮುಂಜಾಗರೂಕತೆಯ ಕ್ರಮಗಳನ್ನು ತೆಗೆದುಕೊಳ್ಳಿ.

ಕೆಂಪು ಕ್ಲೋವರ್

ಕೆಂಪು ಕ್ಲೋವರ್

ಈ ಗಿಡಮೂಲಿಕೆಯು ಬಹುತೇಕ ಪ್ರತಿಯೊಂದು ಕಾಯಿಲೆಗಳಿಗು ಸಹ ಚಿಕಿತ್ಸೆಯಾಗಿ ಬಳಕೆಯಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಇದು ಸ್ತನಗಳ ಗಾತ್ರವನ್ನು ಹಿಗ್ಗಿಸಿಕೊಳ್ಳುವ ಔಷಧಿಯಾಗಿ ಬಳಸುತ್ತಾರೆ ಎಂದು ತಿಳಿದಿದೆ. ಕೆಂಪು ಕ್ಲೋವರ್‌ನಲ್ಲಿ ಜೆನಿಸ್ಟೇನ್ ಎನ್ನುವ ವಿವಿಧ ಬಗೆಯ ಫೈಟೊಈಸ್ಟ್ರೊಜೆನ್‍ಗಳು ಸಮೃದ್ಧವಾಗಿ ಕಂಡು ಬರುತ್ತವೆ. ಇವು ಸ್ತನಗಳನ್ನು ಹಿಗ್ಗಿಸಲು ನೆರವು ನೀಡುತ್ತದೆ. ಏಕೆಂದರೆ ಇದು ನೇರವಾಗಿ ಸ್ತನಗಳನ್ನು ಹಿಗ್ಗಿಸುವ ಈಸ್ಟ್ರೋಜೆನ್ ಗ್ರಾಹಕಗಳಿಗೆ ಅಂಟಿಕೊಳ್ಳುವ ಮೂಲಕ ಈ ಕಾರ್ಯವನ್ನು ಸುಗಮಗೊಳಿಸುತ್ತದೆ.

ಸಂಭವನೀಯ ಅಡ್ಡ ಪರಿಣಾಮಗಳು

ಸಂಭವನೀಯ ಅಡ್ಡ ಪರಿಣಾಮಗಳು

ಕೆಂಪು ಕ್ಲೋವರ್ ಕೆಲ ಮಹಿಳೆಯರಲ್ಲಿ ನಾಸಿಯಾ, ತಲೆನೋವು, ಸ್ನಾಯು ನೋವು ಮತ್ತು ಯೋನಿಸ್ರಾವ( ಕಲೆಗಳು) ವನ್ನು ಉಂಟು ಮಾಡಬಹುದು.

ಒಂದು ವೇಳೆ ನಿಮ್ಮಲ್ಲಿ ರಕ್ತ ಸ್ರಾವದ ಡಿಸಾರ್ಡರ್ ಕಂಡು ಬಂದರೆ, ಕೆಂಪು ಕ್ಲೋವರ್ ರಕ್ತ ಸ್ರಾವದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಿ. ಹೆಚ್ಚಿಗೆ ಬಳಸಿದಲ್ಲಿ ಇದರಿಂದ ಅಡ್ಡ ಪರಿಣಾಮಗಳಿಗೆ ಗುರಿಯಾಗುವಿರಿ.

ಮೆಂತೆ

ಮೆಂತೆ

ಮೆಂತೆಯು ಪ್ರಾಚೀನ ಕಾಲದಿಂದ ಆರ್ಯುರ್ವೇದ ಚಿಕಿತ್ಸೆಯ ಒಂದು ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಇದನ್ನು ಸಾಮಾನ್ಯವಾಗಿ ಸಾಂಬಾರ್ ಪುಡಿ ಮಾಡುವಾಗ ಮತ್ತು ಆಹಾರ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಸಹ ತನ್ನಲ್ಲಿರುವ ಫೈಟೊಈಸ್ಟ್ರೊಜೆನ್ ಅಂಶಗಳಿಗೆ ಖ್ಯಾತಿಯನ್ನು ಪಡೆದಿದೆ. ದೇಹದಲ್ಲಿ ಈಸ್ಟ್ರೋಜೆನ್ ಕಡಿಮೆಯಿದ್ದರೆ, ಸ್ತನಗಳು ಹಿಗ್ಗುವುದಿಲ್ಲ. ಆದ್ದರಿಂದ ನಿಮ್ಮ ಸ್ತನಗಳನ್ನು ಹಿಗ್ಗಿಸಿಕೊಳ್ಳಬೇಕೆಂದರೆ ಮೆಂತ್ಯೆಯನ್ನು ಸೇವಿಸುವುದರಿಂದ ನಿಮ್ಮ ಉದ್ದೇಶ ಈಡೇರುತ್ತದೆ. ಜೊತೆಗೆ ಮೆಂತ್ಯೆಯಲ್ಲಿ ಪ್ರೊಲಾಕ್ಟಿನ್ ಸಹ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದು ಬಾಣಂತಿಯರಲ್ಲಿ ಹಾಲಿನ ಉತ್ಪಾದನೆಯನ್ನು ಸಹ ಅಧಿಕಗೊಳಿಸುತ್ತದೆ. ಪ್ರೊಲಾಕ್ಟಿನ್ ಸಹ ಸ್ತನಗಳ ಗಾತ್ರವನ್ನು ಹೆಚ್ಚಿಸುತ್ತದೆ.

ಸಂಭವನೀಯ ಅಡ್ಡಪರಿಣಾಮಗಳು

ಸಂಭವನೀಯ ಅಡ್ಡಪರಿಣಾಮಗಳು

ಮೆಂತೆಯನ್ನು ಆಹಾರ ಪದಾರ್ಥದ ಹೊರತಾಗಿ ಸೇವಿಸಿದರೆ ( ನೇರವಾಗಿ) ಅದು ಹೊಟ್ಟೆ ತೊಳೆಸುವಿಕೆ, ಗ್ಯಾಸ್, ಹೊಟ್ಟೆ ತುಂಬಿದ ಅನುಭವ, ಡಯೆರ್ರಿಯಾ, ಕೆಮ್ಮು, ಮೂಗು ಕಟ್ಟುವಿಕೆ, ಉಬ್ಬಸ ಮತ್ತು ಮುಖದಲ್ಲಿ ಗುಳ್ಳೆಗಳನ್ನುಂಟು ಮಾಡಬಹುದು.

ಅತಿಸೂಕ್ಷ್ಮ ಅಥವಾ ಹೈಪರ್ ಸೆನ್ಸಿಟಿವಿಟಿ ಇರುವ ಜನರಲ್ಲಿ ಇದು ಗಂಭೀರ ಪ್ರಮಾಣದ ಅಲರ್ಜಿಗಳನ್ನುಂಟು ಮಾಡಬಹುದು. ಮೆಂತ್ಯೆಯನ್ನು ಬಳಸುವ ಮಧುಮೇಹಿಗಳು ಆಗಾಗ ತಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿದೆಯೇ (ಹೈಪೊಗ್ಲಿಸೆಮಿಯಾ) ಎಂದು ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ, ಮೆಂತ್ಯೆಯು ರಕ್ತದಲ್ಲಿರುವ ಸಕ್ಕರೆ ಪ್ರಮಾಣದ ಮೇಲೆ ಪ್ರಭಾವವನ್ನು ಬೀರುತ್ತದೆ.

ಕಾಡು ಯಾಮ್

ಕಾಡು ಯಾಮ್

ಕಾಡು ಯಾಮ್ ಅನ್ನು ಪ್ರಾಚೀನ ಕಾಲದಿಂದಲು ಮಹಿಳೆಯರ ಸಂತಾನೋತ್ಪತ್ತಿ ಸಮಸ್ಯೆಯ ಪರಿಹಾರಕ್ಕಾಗಿ ಬಳಸಲಾಗುತ್ತದೆ. PMS ಮತ್ತು ಮುಟ್ಟು ನಿಲ್ಲುವ ಅವಧಿಯಲ್ಲಿ ಇದನ್ನು ಬಾಮ್ ಆಗಿ ಬಳಸುತ್ತಾರೆ. ಇದು ಸಹ ಸ್ತನಗಳ ಗಾತ್ರವನ್ನು ಹಿಗ್ಗಿಸಲು ಬಳಸಲಾಗುತ್ತದೆ. ಇದನ್ನು ಈ ಪ್ರಯೋಜನಕ್ಕಾಗಿ ಯಾವ ರೂಪದಲ್ಲಿಯಾದರು ಬಳಸಬಹುದು. ಮೆಂತ್ಯೆಯ ಜೊತೆಗೆ ಕಾಡು ಯಾಮ್ ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇವೆರಡರ ಮಿಶ್ರಣವು ಸ್ತನಗಳ ಬೆಳವಣಿಗೆಗೆಗೆ ಅಗತ್ಯವಾದ ಫೈಟೋನ್ಯೂಟ್ರಿಯೆಂಟ್‌ಗಳನ್ನು ಒದಗಿಸುತ್ತದೆ.

ಸಂಭವನೀಯ ಅಡ್ಡ ಪರಿಣಾಮಗಳು

ಸಂಭವನೀಯ ಅಡ್ಡ ಪರಿಣಾಮಗಳು

ಅತಿಯಾದ ಸೇವನೆಯು ವಾಂತಿಯನ್ನು ತರಬಹುದು. ಪ್ರೋಟೀನ್‌ನಿಂದ ಬಳಲುತ್ತಿರುವವರು ಇದನ್ನು ಸೇವಿಸಿದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಿರುತ್ತದೆ.

ಸಾ ತಾಳೆಮರ

ಸಾ ತಾಳೆಮರ

ಸಾ ತಾಳೆಮರ ಅಥವಾ ಸಾ ಪಾಲ್ಮೆಟೊದ ಬೀಜಗಳನ್ನು ಸಾಮಾನ್ಯವಾಗಿ ಬೆನಿನ್ ಪ್ರೊಸ್ಟ್ಯಾಟಿಕ್ ಹೈಪರ್‌ಲೇಶಿಯಾ ಎಂಬ ಉರಿಬಾವಿನ ಪರಿಸ್ಥಿತಿಯಲ್ಲಿ ಬಳಸುತ್ತಾರೆ. ಇದನ್ನು ಎನ್‍ಲಾರ್ಜ್‌ಡ್ ಪ್ರೋಸ್ಟೇಟ್ ಎಂದು ಸಹ ಕರೆಯುತ್ತಾರೆ. ಆದರೂ ಸಾ ತಾಳೆಮರವು ತಮ್ಮ ಸ್ತನದ ಗಾತ್ರಗಳನ್ನು ದಪ್ಪ ಮಾಡಿಕೊಳ್ಳಲು ಬಯಸುವ ಮಹಿಳೆಯರಿಗೆ ಸಹಾಯವನ್ನು ಮಾಡುತ್ತದೆ. ಈ ಗಿಡಮೂಲಿಕೆಯು ಟೆಸ್ಟೋಸ್ಟಿರೋನ್ ಅನ್ನು ಮಿತಿಗೊಳಿಸುತ್ತದೆ. ಇದು ಹೆಚ್ಚಾದಾಗ ಅದು ಸ್ತನಗಳ ಗಾತ್ರದ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

ಸಂಭವನೀಯ ಅಡ್ಡ ಪರಿಣಾಮಗಳು:

ಸಂಭವನೀಯ ಅಡ್ಡ ಪರಿಣಾಮಗಳು:

ಇದನ್ನು ಸೇವಿಸಿದಾಗ ನಾಸಿಯಾ, ತಲೆಸುತ್ತು, ತಲೆನೋವು, ವಾಂತಿ, ಮಲಬದ್ಧತೆ ಮತ್ತು ಅತಿಸಾರ ಬೇದಿ ಕಂಡು ಬರುತ್ತದೆ.

ಗಿಡಮೂಲಿಕೆಗಳು ಸೇವಿಸಲು ಸುಲಭವಾಗಿ ಮತ್ತು ನಿರಪಯಕಾರಿಯಾಗಿ ಕಂಡು ಬಂದರು ಸಹ ಇವುಗಳನ್ನು ಹೆಚ್ಚಾಗಿ ಸೇವಿಸಿದರೆ, ದೇಹಕ್ಕೆ ಒಳ್ಳೆಯದಲ್ಲ. ಹಲವಾರು ವರ್ಷಗಳಿಂದ ನಡೆದ ಅಧ್ಯಯನಗಳ ಪ್ರಕಾರ ನಿರ್ದಿಷ್ಟಪಡಿಸಿದ ಮಿತಿಗಿಂತ ಅಧಿಕ ಗಿಡ ಮೂಲಿಕೆಗಳ ಸೇವನೆಯು ಅಪಾಯವನ್ನು ತಂದೊಡ್ಡುತ್ತದೆ. ಆಗ ಇದು ದೇಹದ ಸ್ವಾಭಾವಿಕ ಸಮತೋಲನದಲ್ಲಿ ಏರುಪೇರನ್ನು ಉಂಟು ಮಾಡುತ್ತದೆ. ಹಾಗಾಗಿ ಇವುಗಳನ್ನು ಸೇವಿಸುವಾಗ ಎಚ್ಚರಿಕೆಯಿಂದ ಸೇವಿಸಿ.

ಸೂಕ್ತ ಸಲಹಗಳು

ಸೂಕ್ತ ಸಲಹಗಳು

ಇದರ ಜೊತೆಗೆ ನೀವು ಈಗಾಗಲೆ ಹೊಂದಿರುವ ಅಲರ್ಜಿಗಳನ್ನು ಮೊದಲು ಪಟ್ಟಿ ಮಾಡಿ. ಅದರ ಪ್ರಕಾರವಾಗಿ ನಿಮಗೆ ಅಪಾಯವನ್ನುಂಟು ಮಾಡದ ಗಿಡಮೂಲಿಕೆಗಳನ್ನು ಸೇವಿಸಿ. ಇದರ ಜೊತೆಗೆ ನೀವು ಈಗ ಯಾವುದಾದರು ವೈದ್ಯಕೀಯ ಚಿಕಿತ್ಸೆಗೆ ಒಳಪಟ್ಟಿದ್ದರೆ, ಅದರ ನಕಾರಾತ್ಮಕ ಪರಿಣಾಮ ಈ ಗಿಡಮೂಲಿಕೆಗಳ ಮೇಲೆ ಆಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಇಲ್ಲ ಈ ಗಿಡಮೂಲಿಕೆಗಳಿಂದ ಆ ಚಿಕಿತ್ಸೆಯ ಮೇಲೆ ಅಡ್ಡ ಪರಿಣಾಮವಾಗುತ್ತದೆಯೇ ಎಂಬುದನ್ನು ಸಹ ತಿಳಿದುಕೊಳ್ಳಿ.

English summary

TOP 5 HERBS USED FOR BREAST ENLARGEMENT

There are many natural everyday products that work with the body to help increase breast size. Here are some of the herbs for this purpose that are available.
X
Desktop Bottom Promotion