For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ

By Manu
|

ಪ್ರಾಣಾಯಾಮ ಎಂದರೆ ಯೋಗದಲ್ಲಿ ಇರುವ ಒಂದು ಉಸಿರಾಟದ ವ್ಯಾಯಮವಾಗಿರುತ್ತದೆ. "ಪ್ರಾಣ" ಎಂಬ ಪದವೇ ಉಸಿರು, ಶಕ್ತಿ ಎಂಬ ಅರ್ಥಗಳನ್ನು ಸೂಚಿಸುತ್ತದೆ. ಆಯಾಮ ಎಂದರೆ ಅದನ್ನು ನಿಭಾಯಿಸುವುದು, ಸರಿಯಾದ ಕ್ರಮದಲ್ಲಿ ಮಾಡುವುದು ಎಂದು ಸೂಚಿಸುತ್ತದೆ. ಹೀಗಾಗಿ ನಾವು ಉಸಿರಾಡುವುದನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದನ್ನು ಪ್ರಾಣಾಯಾಮ ಮಾಡುವ ಮೂಲಕ ಅರಿತುಕೊಳ್ಳಬಹುದು.
ನಮ್ಮ ದೇಹದಲ್ಲಿನ ಅಂಗಾಂಗಳು ಸರಿಯಾಗಿ ಕೆಲಸ ಮಾಡಲು ಜೀವಕೋಶಗಳು ಸರಿಯಾಗಿರಬೇಕು, ಜೀವಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದರೆ ರಕ್ತದ ಮೂಲಕ ಆಮ್ಲಜನಕ ಸರಿಯಾಗಿ ಸರಬರಾಜುವಾಗಬೇಕು. ಹಾಗಾಗಿ ಉಸಿರಾಟದ ಮೂಲಕ ಲಭ್ಯವಾಗುವ ಆಮ್ಲಜನಕ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೌದು ನಮ್ಮ ಇಡೀ ದೇಹವು ಸರಪಳಿ ಬಳ್ಳಿಯಂತೆ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ ಇದು ಸುಗಮವಾಗಿ ಕಾರ್ಯ ನಿರ್ವಹಿಸಬೇಕೆಂದರೆ ನಮ್ಮ ಉಸಿರಾಟವು ಸರಿಯಾಗಿರಬೇಕು. ಅದಕ್ಕಾಗಿ ಪ್ರಾಣಾಯಾಮ ನಮಗೆ ಅವಶ್ಯಕ. ಇದು ನಿಮ್ಮ ದೇಹವನ್ನಷ್ಟೇ ಅಲ್ಲದೇ, ಇಡೀ ಜೀವನವನ್ನೇ ತುಂಬಾ ಚೈತನ್ಯದಿಂದ, ಆರೋಗ್ಯದಿಂದ ಬದುಕುವಂತೆ ಮಾಡುತ್ತದೆ. ಪ್ರಾಣಾಯಾಮ ಮಾಡುವುದು ಹೇಗೆ?
ಉಸಿರಾಡುವಿಕೆಯು ಒಂದು ಯಾದೃಚ್ಛಿಕ ಚಟುವಟಿಕೆ, ಇದನ್ನು ನಾವು ಯಾವುದೇ ಶ್ರಮವಿಲ್ಲದೆ ಮಾಡುತ್ತೇವೆ. ಅಸಲಿಗೆ ನಾವು ಉಸಿರಾಡುತ್ತಿದ್ದೇವೆ ಎಂದು ಅನಿಸುವುದೇ, ಉಸಿರಾಡಲು ಕಷ್ಟವಾದಾಗ. ನಿಮ್ಮ ಉಸಿರಾಡುವಿಕೆಯ ಮೇಲೆ ನೀವು ನಿಯಂತ್ರಣವನ್ನು ಹೊಂದುವುದು ಮತ್ತು ಅದರ ಕಾರ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಪ್ರಾಣಾಯಾಮದ ಕೆಲಸವಾಗಿದೆ. ಉಸಿರನ್ನು ತೆಗೆದುಕೊಳ್ಳುವುದು ಮತ್ತು ಬಿಡುವುದು ಸಹ ಒಂದು ಯೋಗ ಚಟುವಟಿಕೆಯಾಗಿದ್ದು, ಇದನ್ನು ದೀರ್ಘಶ್ವಾಸಾಸನ ಎಂದು ಸಹ ಕರೆಯುತ್ತಾರೆ. ಉಸಿರನ್ನು ನಿಯಂತ್ರಿಸುವ ಈ ಪ್ರಾಣಾಯಾಮವನ್ನು ನೀವು ಕಲಿತರೆ ಅದರಿಂದ ನಿಮಗೆ ಸಿಕ್ಕುವ ಪ್ರಯೋಜನಗಳು ಅಸಂಖ್ಯಾತ. ಬನ್ನಿ ನಾವು ಈಗ ಒಂದು ಸರಳವಾದ ಪ್ರಾಣಾಯಮವನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ...

ಪ್ರಾಣಾಯಾಮ ಮಾಡುವ ಮೊದಲು

ಪ್ರಾಣಾಯಾಮ ಮಾಡುವ ಮೊದಲು

*ಒಂದು ಪ್ರಶಾಂತವಾದ ಸ್ಥಳ, ಇಲ್ಲಿ ಯಾವುದೇ ಗದ್ದಲ ಇರಬಾರದು.

*ಖಾಲಿ ಹೊಟ್ಟೆ

*ಮುಂಜಾನೆಯ ಸಮಯ ಪ್ರಾಣಾಯಾಮ ಮಾಡಲು ಒಳ್ಳೆಯದು

*ಒಂದು ವೇಳೆ ನೀವು ಇತರೆ ಯೋಗಾಸನಗಳನ್ನು ಮಾಡುತ್ತಿದ್ದಲ್ಲಿ, ಪ್ರಾಣಾಯಮವನ್ನು ಅವುಗಳನ್ನು ಮಾಡಿದ ನಂತರ ಮಾಡಿ.

ಸಡಿಲವಾದ ಬಟ್ಟೆಯನ್ನು ಧರಿಸಿ

ಸಡಿಲವಾದ ಬಟ್ಟೆಯನ್ನು ಧರಿಸಿ

ಸಡಿಲವಾದ ಬಟ್ಟೆಗಳನ್ನು ಧರಿಸಿ ಇದನ್ನು ಮಾಡಿ. ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಿ, ಅದು ಪದ್ಮಾಸನ ಅಥವಾ ವಜ್ರಾಸನ ಅಥವಾ ಚಕ್ಕಮಕ್ಕಳ ಹಾಕಿ ಬೇಕಾದರು ಕುಳಿತುಕೊಳ್ಳಿ. ನಿಮ್ಮ ಕೈಗಳು ಮೊಣಕಾಲಿನ ಮೇಲೆ ಇರಲಿ, ನಿಮ್ಮ ತೋರು ಬೆರಳು ಮತ್ತು ಹೆಬ್ಬೆರಳು ಪರಸ್ಪರ ಹಿಡಿದುಕೊಂಡಿರಲಿ.

ಉಸಿರಾಟದ ಪ್ರಕ್ರಿಯೆ

ಉಸಿರಾಟದ ಪ್ರಕ್ರಿಯೆ

ನಿಮ್ಮ ಮೂಗಿನ ಹೊಳ್ಳೆಗಳ ಮೂಲಕ ಉಸಿರಾಡಿ, ಉಸಿರನ್ನು ದೀರ್ಘವಾಗಿ ಎಳೆದುಕೊಳ್ಳಿ. ಉಸಿರನ್ನು ಹೊರಗೆ ಬಿಡಲು ನಿಮಗೆ ಸಾಧ್ಯವಾದಷ್ಟು ದೀರ್ಘ ಸಮಯವನ್ನು ತೆಗೆದುಕೊಳ್ಳಿ. ಇದನ್ನು ಮಾಡುವಾಗ ನಿಮ್ಮ ಶ್ವಾಸಕೋಶಗಳು ಏರು-ಪೇರಾಗಲಿ, ಅದರ ಬದಲಿಗೆ ನಿಮ್ಮ ಹೊಟ್ಟೆಯ ಭಾಗವು ಇದಕ್ಕೆ ಪ್ರತಿಕ್ರಿಯಿಸುವುದು ಬೇಡ. ಅಂದರೆ ಗಾಳಿಯನ್ನು ಹೊಟ್ಟೆಗೆ ತೆಗೆದುಕೊಂಡು, ಹಿಡಿದಿಡುವ ಪ್ರಯತ್ನ ಮಾಡಬೇಡಿ. ನೀವು ಉಸಿರನ್ನು ಎಳೆದುಕೊಳ್ಳುವಾಗ ಮತ್ತು ಬಿಡುವಾಗ ಎಷ್ಟು ಸೆಕೆಂಡ್‌ಗಳ ಕಾಲ ಹಿಡಿದುಕೊಳ್ಳಬಹುದು ಎಂಬುದನ್ನು ಲೆಕ್ಕ ಹಾಕಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಧಾನವಾಗಿ ಉಸಿರನ್ನು ಬಿಡಿ

ನಿಧಾನವಾಗಿ ಉಸಿರನ್ನು ಬಿಡಿ

ಈಗ ನಿಮ್ಮ ಉಸಿರನ್ನು ಕೆಲ ಕ್ಷಣಗಳ ಕಾಲ ಹಿಡಿದಿಟ್ಟುಕೊಳ್ಳಿ. ನಿಧಾನವಾಗಿ ಉಸಿರನ್ನು ಬಿಡಿ, ಉಸಿರನ್ನು ಎಳೆದುಕೊಳ್ಳುವಾಗ ಎಷ್ಟು ಸೆಕೆಂಡ್ ತೆಗೆದುಕೊಂಡಿರೋ, ಆ ಸಂಖ್ಯೆಗೆ ಹೊಂದಾಣಿಕೆ ಮಾಡಿಕೊಂಡು ಉಸಿರನ್ನು ಬಿಡಿ. ಹೀಗೆ ಮಾಡುವಾಗ ನಿಮ್ಮ ಮೂಗಿನ ಹೊಳ್ಳೆಗಳು ಒಂದು ಬಗೆಯ 'ಹಿಸ್' ಎನ್ನುವ ಸದ್ದನ್ನು ಮಾಡುತ್ತವೆ.

ಪ್ರತಿದಿನ ಹತ್ತು ಬಾರಿಯಾದರೂ ಮಾಡಬೇಕು

ಪ್ರತಿದಿನ ಹತ್ತು ಬಾರಿಯಾದರೂ ಮಾಡಬೇಕು

ಉಸಿರನ್ನು ಬಿಟ್ಟ ನಂತರ, ಸ್ವಲ್ಪ ಸಮಯ ಸಾಮಾನ್ಯವಾಗಿ ಉಸಿರಾಡಿ, ನಂತರ ಮತ್ತೆ ಪ್ರಾಣಾಯಾಮವನ್ನು ಮುಂದುವರಿಸಿ. ಇದನ್ನು ಪ್ರತಿದಿನ ಹತ್ತು ಬಾರಿಯಾದರೂ ಮಾಡಿ.

ಪ್ರಾಣಾಯಾಮದಿಂದ ದೊರೆಯುವ ಪ್ರಯೋಜನಗಳು

ಪ್ರಾಣಾಯಾಮದಿಂದ ದೊರೆಯುವ ಪ್ರಯೋಜನಗಳು

*ದೀರ್ಘ ಉಸಿರಾಡುವಿಕೆಯಿಂದ ನಿಮ್ಮ ದೇಹಕ್ಕೆ ಅಧಿಕ ಪ್ರಮಾಣದ ಆಮ್ಲಜನಕವು ಲಭ್ಯವಾಗುತ್ತದೆ. ಇದು ನಿಮ್ಮ ರಕ್ತವನ್ನು ಶುದ್ಧಿಗೊಳಿಸುತ್ತದೆ.

*ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಉಸಿರಿನ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ.

*ಇದು ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.

*ಯಾವಾಗ ನೀವು ನಿಮ್ಮ ಎಲ್ಲ ಗಮನವನ್ನು ಉಸಿರಿನ ಮೇಲೆ ಇಡುತ್ತೀರೋ, ಆಗ ನೀವು ನಕಾರಾತ್ಮಕ ಭಾವನೆಗಳನ್ನು ಆಲೋಚನೆ ಮಾಡುವುದನ್ನು ನಿಲ್ಲಿಸುತ್ತೀರಿ.

ಪ್ರಾಣಾಯಾಮದಿಂದ ದೊರೆಯುವ ಪ್ರಯೋಜನಗಳು

ಪ್ರಾಣಾಯಾಮದಿಂದ ದೊರೆಯುವ ಪ್ರಯೋಜನಗಳು

*ಸಾಮಾನ್ಯವಾದ ಶೀತವನ್ನು ತಡೆಯುತ್ತದೆ ಮತ್ತು ನಿಮ್ಮ ದೇಹವನ್ನು ಬೆಚ್ಚಗೆ ಇಡುತ್ತದೆ.

*ಪ್ರಾಣಾಯಾಮವನ್ನು ಮಾಡುವುದು ಒಂದು ಅಥವಾ ಎರಡು ದಿನದ ಕೆಲಸವಲ್ಲ. ಇದನ್ನು ಪ್ರತಿದಿನ ಶಿಸ್ತಿನಿಂದ ಅಭ್ಯಾಸ ಮಾಡಿ, ಆಗ ಇದರ ಪ್ರಯೋಜನಗಳು ನಿಮಗೆ ಲಭ್ಯವಾಗುತ್ತವೆ. ನಿಮ್ಮ ದೇಹದಲ್ಲಿರುವ

*ಸಂಪೂರ್ಣ ಚೈತನ್ಯವನ್ನು ನೀವು ಒಂದು ಮಾರ್ಗದತ್ತ ಇದರಿಂದ ಕೇಂದ್ರೀಕರಿಸಬಹುದು. ಜೊತೆಗೆ ಇಡೀ ದಿನ ನೀವು ಚಟುವಟಿಕೆಯಿಂದ ಇರಬಹುದು.

ಶ್ವಾಸಕೋಶದ ಕಾರ್ಯವೈಖರ್ಯಕ್ಕೆ

ಶ್ವಾಸಕೋಶದ ಕಾರ್ಯವೈಖರ್ಯಕ್ಕೆ

ಶ್ವಾಸಕೋಶದ ಕಾರ್ಯಚಟುವಟಿಕೆ ಇದು ಪ್ರಾಣಾಯಾಮದ ಅತ್ಯಂತ ಪ್ರಾಮುಖ್ಯ ಆರೋಗ್ಯ ಲಾಭ. ಪ್ರಾಣಾಯಾಮದಲ್ಲಿ ಉಸಿರಾಟದ ತಂತ್ರಗಳು ಇರುವುದರಿಂದ ಅದು ಶ್ವಾಸಕೋಶ ಒಳ್ಳೆಯ ರೀತಿಕಾರ್ಯನಿರ್ವಹಿಸಲು ನೆರವಾಗುತ್ತದೆ. ಉಸಿರಾಟದ ಸಮಸ್ಯೆ ಮತ್ತು ಅಸ್ತಮಾ ಇರುವವರಿಗೆ ಇದು ತುಂಬಾ ಲಾಭಕಾರಿ.

English summary

Tips to do Pranayama – Yoga Breathing Exercises

Pranayama refers to the breathing exercises in yoga. The word “Prana” stands for the vital force called life force. Ayama means regulating. So pranayama is a set of exercises to regulate the life force. These breathing exercises help in steadying the mind and cleansing it along with the whole body.
X
Desktop Bottom Promotion