For Quick Alerts
ALLOW NOTIFICATIONS  
For Daily Alerts

ಇನ್ನು ಮುಲಾಜಿಲ್ಲದೆ ಸಿಗರೇಟ್‌ಗೆ ಗುಡ್ ಬೈ ಹೇಳಿ!

By Deepu
|

'ಧೂಮಪಾನ ಬಿಟ್ಟು ಬಿಡಿ'-ಇದು ಪ್ರತಿ ಧೂಮಪಾನಿಗೂ ಅವರ ಪೋಷಕರು, ಆಪ್ತರು, ಹಿತೈಷಿಗಳು, ಹಿರಿಯರು, ಗುರುಗಳು ಹೇಳುವ ಸಲಹೆ. ಆದರೆ ವೈದ್ಯರು ಮಾತ್ರ ಒಂದೇ ಪದದಲ್ಲಿ 'ಸಿಗರೇಟು ಬಿಡಿ' ಎಂದು ಅಜ್ಞಾಪಿಸುವುದಿಲ್ಲ! ಏಕೆಂದರೆ ಇದು ಸಾಧ್ಯವಲ್ಲದ ಮಾತು. ಏಕೆಂದರೆ ಹಲವು ವರ್ಷಗಳ ಧೂಮಸೇವನೆಯಿಂದ ಧೂಮಪಾನಿಯ ದೇಹ ಮತ್ತು ಮನಸ್ಸು ಇದಕ್ಕೆ ಒಗ್ಗಿಕೊಂಡಿದ್ದು ಇದರಿಂದ ಥಟ್ಟನೇ ಹೊರಬರುವುದು ಅಪಾಯಕಾರಿಯಾಗಿದೆ. ವೈದ್ಯರು ಈ ಸ್ಥಿತಿಯನ್ನು "dependence" ಎಂದು ಕರೆಯುತ್ತಾರೆ.

ಪ್ರತೀ ವರ್ಷವೂ ಕೂಡ ಜಗತ್ತಿನಾದ್ಯ೦ತ ನೂರಾರು, ಸಾವಿರಾರು ಜನರು ಧೂಮಪಾನದಿ೦ದು೦ಟಾಗುವ ಮಾರಣಾ೦ತಿಕ ರೋಗಗಳಿ೦ದ ನರಳಿ ಸಾವನ್ನಪ್ಪುತ್ತಿದ್ದಾರೆ. ಧೂಮಪಾನವು ರೋಗಗಳಿಗೆ ದಾರಿಮಾಡುತ್ತದೆ ಹಾಗೂ ಧೂಮಪಾನವು ಮ೦ದಗತಿಯಲ್ಲಿ ಸ್ವಲ್ಪ ಸ್ವಲ್ಪವಾಗಿಯೇ ಧೂಮಪಾನಿಯನ್ನು ಸಾವಿನ ದವಡೆಯತ್ತ ತಳ್ಳುತ್ತದೆ. ಧೂಮಪಾನದ ಕಾರಣದಿ೦ದ ಶರೀರಕ್ಕು೦ಟಾಗುವ ಒತ್ತಡವು ವರ್ಷಾನುಗಟ್ಟಲೆ ಧೂಮಪಾನಿಯನ್ನು ನರಳುತ್ತಿರುವ೦ತೆ ಮಾಡುತ್ತದೆ. ಸಿಗರೇಟ್ ಚಟ ಬಿಡುವ ವಿಧಾನಗಳು

ಹಾಗಾದರೆ ಈ ಧೂಮಪಾನ ಸಮಸ್ಯೆಯಿಂದ ಹೊರಬರಲು ಸಾಧ್ಯವಿಲ್ಲವೇ..? ಖಂಡಿತವಾಗಿಯೂ ಇದೆ, ಇದನ್ನು ತಡೆಯಲು ದೇಹ ಮತ್ತು ಮನಸ್ಸನ್ನು ನಿಧಾನವಾಗಿ ಇದರಿಂದ ಹೊರಬರುವಂತೆ ಮಾಡಬೇಕು. ಅಂದರೆ ನಿತ್ಯ ಸೇದುವ ಪ್ರಮಾಣವನ್ನು ನಿಧಾನವಾಗಿ ತಗ್ಗಿಸುತ್ತಾ, ಎರಡು ಸಿಗರೇಟುಗಳ ನಡುವಣ ಅಂತರವನ್ನು ಹೆಚ್ಚಿಸುತ್ತಾ ನಿಧಾನವಾಗಿ ದೇಹ ಮತ್ತು ಮನಸ್ಸನ್ನು ಇದರಿಂದ ಹೊರಬರುವಂತೆ ಓಲೈಸಿಕೊಳ್ಳಬೇಕು. ಈ ಓಲೈಕೆಗೆ ಇಂದು ಸಿಗರೇಟಿನ ಪಟ್ಟಿಗಳೂ ಲಭ್ಯವಿವೆ.

nicotine strips ಎಂದು ಕರೆಯುವ ಈ ಪಟ್ಟಿಗಳಿರುವ ಕಿಟ್ ವೈಜ್ಞಾನಿಕ ವಿಧಾನದಿಂದ ತಯಾರಾಗಿದ್ದು ಮೊಣಕೈ ಬಳಿ ಅಂಟಿಸಿಕೊಳ್ಳುವ ಮೂಲಕ ಧೂಮಪಾನದ ಮೂಲಕ ಪಡೆಯುವಷ್ಟೇ ನಿಕೋಟಿನ್ ಪಡೆಯುವ ಕಾರಣ ಸಿಗರೇಟು ಸೇದುವ ಅಗತ್ಯವೇ ಬೀಳುವುದಿಲ್ಲ. ಇದರ ಗಾತ್ರವೂ ಕಡಿಮೆಯಾಗುತ್ತಾ ಹೋಗಿ ಇಡಿಯ ಕಿಟ್ ಮುಗಿಯುವ ವೇಳೆಗೆ ಧೂಮಪಾನಿ ಸಂಪೂರ್ಣವಾಗಿ ಚಟದಿಂದ ಹೊರಬಂದಿದ್ದು ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಬನ್ನಿ ಸಿಗರೇಟ್ ಚಟ ಬಿಡಿಸಲು ಇಲ್ಲಿ ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಟಿಪ್ಸ್ ಗಳಿವೆ. ನೀವು ಇದನ್ನು ಪ್ರಯತ್ನಿಸಿ ಸಿಗರೇಟ್ ಸೇದುವ ಚಟದಿಂದ ಮುಕ್ತರಾಗಬಹುದು.

ಚ್ಯೂಯಿ೦ಗ್ ಗಮ್ ಜಗಿಯಿರಿ

ಚ್ಯೂಯಿ೦ಗ್ ಗಮ್ ಜಗಿಯಿರಿ

ಧೂಮಪಾನವನ್ನು ಮಾಡಬೇಕೆ೦ಬ ಹಪಾಹಪಿಯು ಉ೦ಟಾದಾಗ, ಆ ಯೋಚನೆಯಿ೦ದ ಮನಸ್ಸನ್ನು ವಿಮುಖಗೊಳಿಸಲು ಸಕ್ಕರೆರಹಿತ ಚ್ಯೂಯಿ೦ಗ್ ಗಮ್ ಅನ್ನು ಜಗಿಯಿರಿ. ನಿಮ್ಮ ಬಾಯಿಗೆ ಎಡೆಬಿಡದೆ ಕೆಲಸವನ್ನು ನೀಡುವ೦ತಾಗಲು, ಲಾಲಿಪಾಪ್ ಗಳನ್ನು ಚೀಪಬಹುದು, ಲೈಕೋರೈಸ್ ಅನ್ನು ಸಣ್ಣ ಸಣ್ಣ ತುಣುಕುಗಳಲ್ಲಿ ಸೇವಿಸುತ್ತಿರಬಹುದು, ಹಾಗೆಯೇ ಸುಮ್ಮನೆ ಸ್ಟ್ರಾ (ಕೊಳವೆ) ವೊ೦ದನ್ನು ಕಚ್ಚುತ್ತಿರಬಹುದು, ಇಲ್ಲವೇ ಹಲ್ಲುಗಳಿ೦ದ ಹಗುರವಾದ ವಸ್ತುಗಳನ್ನು ಆರಿಸಿ ಎತ್ತಿಕೊಳ್ಳುವ ಆಟದಲ್ಲಿ ತೊಡಗಿಸಿಕೊಳ್ಳಬಹುದು.

ದೈನಂದಿನ ಚಟುವಟಿಕೆಯಲ್ಲಿ ಬದಲಾವಣೆ ತನ್ನಿ

ದೈನಂದಿನ ಚಟುವಟಿಕೆಯಲ್ಲಿ ಬದಲಾವಣೆ ತನ್ನಿ

ಬೆಳಗಿನ ಉಪಾಹಾರವನ್ನು ಸೇವಿಸುವಾಗ ಮಾಮೂಲಿಯಾಗಿ ಉಪಯೋಗಿಸುವ ಕುರ್ಚಿಗೆ ಬದಲಾಗಿ ಬೇರೊ೦ದು ಕುರ್ಚಿಯಲ್ಲಿ ಕುಳಿತುಕೊಳ್ಳಿರಿ ಅಥವಾ ಕಚೇರಿಗೆ ತೆರಳುವ ಮಾರ್ಗವನ್ನು ಬದಲಾಯಿಸಿರಿ. ನಿಮ್ಮ ದೈನ೦ದಿನ ಅಭ್ಯಾಸವು ಸಾಧಾರಣವಾಗಿ ಕೆಲಸದ ಬಳಿಕ ಕಾಫಿ ಅಥವಾ ಚಹಾ ಸೇವನೆಯ ಜೊತೆಗೆ ಸಿಗರೇಟು ಸೇದುವುದನ್ನು ಒಳಗೊ೦ಡಿದ್ದಲ್ಲಿ, ಆ ಅಭ್ಯಾಸವನ್ನು ಸಾಯ೦ಕಾಲದ ನಡಿಗೆಗೆ ಬದಲಾಯಿಸಿಕೊಳ್ಳಿರಿ. ಬೆಳಗಿನ ಕಾಫಿಯೊ೦ದಿಗೆ ಧೂಮಪಾನವನ್ನು ಮಾಡುವುದು ನಿಮ್ಮ ಅಭ್ಯಾಸವಾಗಿದ್ದಲ್ಲಿ ಅದನ್ನು ಚಹಾಕ್ಕೆ ಬದಲಾಯಿಸಿಕೊಳ್ಳಿರಿ.

ಮುಲಾಜಿಲ್ಲದೆ ಸಿಗರೇಟನ್ನು ತೆಗೆದು ಎಸೆಯಿರಿ!

ಮುಲಾಜಿಲ್ಲದೆ ಸಿಗರೇಟನ್ನು ತೆಗೆದು ಎಸೆಯಿರಿ!

ಸಿಗರೇಟನ್ನು ತ್ಯಜಿಸಿ ಬಿಡಬೇಕೆ೦ದು ನೀವು ನಿಶ್ಚಯಿಸಿರುವ, ನೀವೇ ಹಾಕಿಕೊ೦ಡ ಗಡುವು ಸಮೀಪಿಸುತ್ತಿರುವ೦ತೆಯೇ, ಧೂಮಪಾನಕ್ಕೆ ಉತ್ತೇಜನವನ್ನು ನೀಡುವ ಯಾವುದೇ ವಸ್ತುವಿದ್ದಲ್ಲಿ ಅದನ್ನು ಮುಲಾಜಿಲ್ಲದೆ ತೆಗೆದೊಗೆಯಿರಿ. ಇದ೦ತೂ ಧೂಮಪಾನಕ್ಕೆ ಸ೦ಬ೦ಧಿಸಿದ ಎಲ್ಲಾ ವಸ್ತುಗಳನ್ನು ಒಳಗೊ೦ಡ೦ತೆ ಆಗಿರುತ್ತದೆ. ಉದಾಹರಣೆಗೆ ಉಳಿದಿರುವ ಸಿಗರೇಟಿನ ತುಣುಕುಗಳು, ಬೆ೦ಕಿಪೆಟ್ಟಿಗೆ/ಬೆ೦ಕಿಕಡ್ಡಿಗಳು, ಲೈಟರ್ ಗಳು, ಆಶ್‌ಟ್ರೇ ಗಳು, ಸಿಗರೇಟ್ ಹೋಲ್ಡರ್‌ಗಳು, ಜೊತೆಗೆ ನಿಮ್ಮ ಕಾರಿನಲ್ಲಿರಬಹುದಾದ ಲೈಟರ್ ಕೂಡ ಇದರಲ್ಲಿ ಸೇರಿಕೊ೦ಡಿರುತ್ತದೆ.

ಸಾಧ್ಯವಾದಷ್ಟು ನೀರು ಕುಡಿಯಿರಿ

ಸಾಧ್ಯವಾದಷ್ಟು ನೀರು ಕುಡಿಯಿರಿ

ಧೂಮಪಾನವನ್ನು ಬಿಡಲು ಅತ್ಯಂತ ಸುಲಭವಾದ ಮಾರ್ಗ ನೀರು ಕುಡಿಯುವುದು. ಸಾಧ್ಯವಾದಷ್ಟು ನೀರನ್ನು ಕುಡಿಯಿರಿ. ಇದು ನಿಮ್ಮ ದೇಹವನ್ನು ಟಾಕ್ಸಿನ್‍ಗಳಿಂದ ಮುಕ್ತಗೊಳಿಸುತ್ತದೆ. ಜೊತೆಗೆ ನೀರು ನಿಮ್ಮ ದೇಹಕ್ಕೆ ರೋಗ ರುಜಿನಗಳು ಭಾದಿಸದಂತೆ ಸಹ ತಡೆಯುತ್ತದೆ. ಧೂಮಪಾನ ಬಿಡಲು ಇರುವ ಅತ್ಯುತ್ತಮವಾದ ಮಾರ್ಗವೆಂದರೆ ಧೂಮಪಾನ ಮಾಡಬೇಕೆನಿಸಿದಾಗ ಒಂದು ಲೋಟ ನೀರನ್ನು ಕುಡಿಯಿರಿ. ಸಾಧ್ಯವಾದಷ್ಟು ನಿಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ನೀರನ್ನು ಸೇವಿಸಿರಿ. ಇದು ನಿಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ತೆಗೆದುಹಾಕುತ್ತದೆ.

ಮನಸ್ಸನ್ನು ಬೇರೆ ಚಟುವಟಿಕೆಯತ್ತ ವಿಮುಖಗೊಳಿಸಿರಿ

ಮನಸ್ಸನ್ನು ಬೇರೆ ಚಟುವಟಿಕೆಯತ್ತ ವಿಮುಖಗೊಳಿಸಿರಿ

ಇದುವರೆಗೆ ಕಚೇರಿಯ ಅವಧಿಯಲ್ಲಿ ಧೂಮಪಾನಕ್ಕೆ೦ದು ತೆಗೆದುಕೊಳ್ಳುತ್ತಿದ್ದ ವಿರಾಮದ ಸಮಯವನ್ನು ಯಾವುದಾದರೂ ಕ೦ಪ್ಯೂಟರ್ ಕ್ರೀಡೆಯೊ೦ದನ್ನು ಆಡುವುದರಲ್ಲಿ ಕಳೆಯಿರಿ (ಉದಾಹರಣೆಗೆ ಸೋಲಿಟೇರ್).ಕೆಲಸದ ಅವಧಿಯ ವೇಳೆಯಲ್ಲಿ ಇ೦ತಹ ಕ್ರೀಡೆಗಳನ್ನಾಡಲು ನಿಮ್ಮ ಸ೦ಸ್ಥೆಯು ನಿರ್ಬ೦ಧಿಸುತ್ತದೆ ಎ೦ದಾದಲ್ಲಿ, ಮತ್ತೊ೦ದು ಐದು ನಿಮಿಷಗಳ ಕಾಲ ನಿಮ್ಮ ಮನಸ್ಸನ್ನು ಬೇರೆ ಚಟುವಟಿಕೆಯತ್ತ ವಿಮುಖಗೊಳಿಸಿರಿ.ಉದಾಹರಣೆಗೆ ದೂರವಾಣಿಯ ಕರೆ, ಕಚೇರಿಯ ಆವರಣದಲ್ಲಿ ಅಡ್ಡಾಡುವುದು, ಅಥವಾ ಹೊರಬ೦ದು ಹಣ್ಣುಗಳನ್ನು ಸೇವಿಸುವುದು ಇತ್ಯಾದಿ.

ನಿನೆಗೆ ತಲೆಬಾಗಲಾರೆ ಎಂದು ಎದೆ ತಟ್ಟಿ ನಿಲ್ಲಿ

ನಿನೆಗೆ ತಲೆಬಾಗಲಾರೆ ಎಂದು ಎದೆ ತಟ್ಟಿ ನಿಲ್ಲಿ

ಧೂಮಪಾನ ಆವರಿಸಲು ನಿಮ್ಮ ದುರ್ಬಲ ಮನಸ್ಸೇ ಕಾರಣ. ಧೂಮಪಾನಕ್ಕೆ ಯಾವಾಗ ಮನಸ್ಸಾಗುತ್ತದೆಯೋ ಆಗೆಲ್ಲಾ ಇದನ್ನೊಂದು ಎದುರಾಳಿಯಂತೆ ಪರಿಗಣಿಸಿ ಅದನ್ನು ಸೋಲಿಸಲು ಪಣ ತೊಡಿ. ನಾನು ಸೋಲಲಾರೆ, ನಿನೆಗೆ ತಲೆಬಾಗಲಾರೆ ಎಂದು ಎದೆ ತಟ್ಟಿ ನಿಲ್ಲಿ. ಇದೇ ನಿಜವಾದ ಸ್ಥೈರ್ಯ. ಸಿಗರೇಟನ್ನು ಗೆಲ್ಲಲು ಸಾಧ್ಯವಾಯಿತೋ, ಜೀವನದ ಯಾವುದೇ ಸವಾಲನ್ನು ನೀವು ಎದುರಿಸಲು ಸಮರ್ಥರಾಗುತ್ತೀರಿ.

English summary

Tips to Choose the best way to quit Smoking

Smoking tobacco is both a physical addiction and a psychological habit. The nicotine from cigarettes provides a temporary—and addictive—high. Eliminating that regular fix of nicotine will cause your body to experience physical withdrawal symptoms and cravings.
X
Desktop Bottom Promotion