For Quick Alerts
ALLOW NOTIFICATIONS  
For Daily Alerts

ಪದೇ ಪದೇ ಕಾಡುವ ಬೆನ್ನು ನೋವಿನ ಸಮಸ್ಯೆಗೆ ಪರಿಹಾರವೇನು?

|

ಗಂಡಸರು ಮತ್ತು ಮಹಿಳೆಯರು ಎನ್ನದೆ ಎಲ್ಲರೂ ಸಾಮಾನ್ಯವಾಗಿ ಬೆನ್ನು ನೋವಿನಿಂದ ನರಳುತ್ತಿರುತ್ತಾರೆ. ಈ ಸಾಮಾನ್ಯವಾದ ಸಮಸ್ಯೆಯನ್ನು ನಿಯಂತ್ರಿಸಬಹುದು. ಆದರೆ ಅದಕ್ಕಾಗಿ ನೀವು ದಿನ ನಿತ್ಯ ಕೆಲವೊಂದು ಅಂಶಗಳನ್ನು ತಪ್ಪದೆ ಮಾಡಬೇಕಾಗುತ್ತದೆ. ಬೆನ್ನು ನೋವನ್ನು ನಿಯಂತ್ರಿಸಲು, ನೀವು ಅತಿಯಾದ ಭಾರವನ್ನು ಎತ್ತಬಾರದು. ಇದು ಈ ಸಮಸ್ಯೆಯ ಮೊದಲ ಪರಿಹಾರ, ಇದನ್ನು ತಪ್ಪದೆ ಪಾಲಿಸಬೇಕು.

ಅದರಂತೆ ಸಿ-ಸೆಕ್ಷನ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಹೆಂಗಸರು ಭಾರೀ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇವರಿಗೆ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಪ್ಪಾದ ಭಂಗಿಯಲ್ಲಿ ಕೂರುವುದರಿಂದ ಸಹ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನೀವು ಕೆಲಸ ಮಾಡುವಾಗ ಸರಿಯಾದ ಭಂಗಿಯಲ್ಲಿ ತಪ್ಪದೆ ಕೂರಲು ಪ್ರಯತ್ನಿಸಿ.

ನಿಮ್ಮ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‍ಗಳು ನಿಮ್ಮ ಕಣ್ಣಿನ ದೃಷ್ಟಿಗೆ ನೇರವಾಗಿ ಇರುವಂಟೆ ನೋಡಿಕೊಳ್ಳಿ. ಬನ್ನಿ ನಿಮ್ಮ ಬೆನ್ನು ನೋವು ನಿವಾರಿಸಲು ನಿಮಗೆ ಅಗತ್ಯವಾದ ಕೆಲವು ಮಾಹಿತಿಗಳನ್ನು ನಾವು ತಂದಿದ್ದೇವೆ. ಅವುಗಳ ಕುರಿತು ಒಂದು ನೋಟ ಹರಿಸಿ ಬರೋಣ. ಬೆನ್ನುನೋವಿನ ನಿವಾರಣೆಗೆ ಐದು ಟಿಪ್ಸ್

Tips To Avoid A Back Pain

ನಿಮ್ಮ ಹಾಸಿಗೆ
ನಿಮಗೆ ಬೆನ್ನು ನೋವು ಇದ್ದಲ್ಲಿ ಮೊದಲು ನಿಮ್ಮ ಹಾಸಿಗೆಯನ್ನು ಪರೀಕ್ಷಿಸಿ. ಮೃದುವಾದ ಹಾಸಿಗೆಯು ನಿಮಗೆ ಸುಖಕರವಾಗಿರುತ್ತದೆ ಮತ್ತು ಗಟ್ಟಿಯಾದ ಹಾಸಿಗೆಯು ನಿಮಗೆ ಬೆನ್ನು ನೋವನ್ನು ತರುತ್ತದೆ.

ನಿಮ್ಮ ಭಂಗಿ
ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ ಸರಿಯಾದ ಭಂಗಿಯಲ್ಲಿ ಕೂರಲು ಪ್ರಯತ್ನಿಸಿ. ಇದರಿಂದ ಬೆನ್ನು ನೋವನ್ನು ನಿಯಂತ್ರಿಸಿಕೊಳ್ಳಬಹುದು.

ಸ್ನಾಯುಗಳ ಸಮಸ್ಯೆ
ಒಂದೇ ಭಂಗಿಯಲ್ಲಿ ಸುಮಾರು ಹೊತ್ತು ನಿಲ್ಲಲು ಹೋಗಬೇಡಿ. ಇದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡವು ಬೆನ್ನು ನೋವಿಗೆ ಕಾರಣವಾಗಿ ಪರಿವರ್ತನೆಯಾಗುತ್ತದೆ. ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು

ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು
ಇದು ಹೆಂಗಸರಿಗೆ ಒಪ್ಪುವ ಸಲಹೆ- ಸಾಮಾನ್ಯವಾಗಿ ಹೆಂಗಸರು ಕೆಲಸದ ಸ್ಥಳದಲ್ಲಿ ಬಹಳ ಹೊತ್ತು ಕುಳಿತುಕೊಳ್ಳುವಾಗ ಒಂದೇ ಕಾಲನ್ನು ಕಾಲ ಮೇಲೆ ಹಾಕಿಕೊಂಡು ಕೂರಬೇಡಿ. ಕಾಲುಗಳನ್ನು ಬದಲಾಯಿಸುವ ಮೂಲಕ ನಿಮ್ಮ ಬೆನ್ನು ನೋವಿನ ಪ್ರಮಾಣವನ್ನು ಅಥವಾ ಬೆನ್ನು ನೋವು ಬರುವ ಸಾಧ್ಯತೆಯನ್ನು ನಿಯಂತ್ರಿಸಿಕೊಳ್ಳಬಹುದು.

ವ್ಯಾಲೆಟ್ ಸಮಸ್ಯೆ
ನಿಮಗೆ ಗೊತ್ತೇ? ಡೆಸ್ಕ್‌ಟಾಪ್ ಮುಂದೆ ಕೆಲಸ ಮಾಡುವಾಗ ಹಿಂದಿನ ಪಾಕೆಟ್‌ನಲ್ಲಿ ವ್ಯಾಲೆಟ್ ಇರಿಸಿಕೊಳ್ಳುವುದರಿಂದ ಬೆನ್ನು ನೋವು ಬರುತ್ತದೆ. ಇದನ್ನು ನಿಯಂತ್ರಿಸುವುದರಿಂದ ಬೆನ್ನು ನೋವು ಬರದಂತೆ ತಡೆಯಬಹುದು.

ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ
ಬೆನ್ನು ನೋವು ನಿವಾರಣೆಗೆ ಅಧಿಕ ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿ. ವೈದ್ಯರ ಸಲಹೆ ಮೇರೆಗೆ ಕ್ಯಾಲ್ಸಿಯಂ ಇರುವ ಮಾತ್ರೆಗಳನ್ನು ಸೇವಿಸಬಹುದು. ಅಲ್ಲದೆ ಪ್ರತಿನಿತ್ಯ 1-2 ಲೋಟ ಹಾಲು ಕುಡಿಯಬೇಕು.

English summary

Tips To Avoid A Back Pain

One of the common problems which every man and woman face is a back pain. This common problem can be avoided if you only do certain things right in your daily agenda. To avoid a back pain..
X
Desktop Bottom Promotion