For Quick Alerts
ALLOW NOTIFICATIONS  
For Daily Alerts

ಅಚ್ಚರಿ ಲೋಕಕ್ಕೆ ತಳ್ಳುವ ಕೊಬ್ಬರಿ ಎಣ್ಣೆಯ ಕಮಾಲ್..!

By
|

ತೆಂಗಿನ ಮರದ ಪ್ರತಿಯೊಂದೂ ಭಾಗವೂ ಒಂದಲ್ಲಾ ಒಂದು ಉಪಯೋಗಕ್ಕೆ ಬರುವ ಕಾರಣ ಇದನ್ನು ಕಲ್ಪವೃಕ್ಷವೆಂದು ಕರೆಯುತ್ತಾರೆ. ಅಂತೆಯೇ ಕೊಬ್ಬರಿ ಎಣ್ಣೆಯ ಅಥವಾ ತೆಂಗಿನ ಎಣ್ಣೆಯ ಪ್ರಯೋಜನಗಳು ಕೂಡ ಹತ್ತು ಹಲವು ವಿಧದಲ್ಲಿ ಉಪಯುಕ್ತವಾಗಿವೆ. ಅಡುಗೆ ಎಣ್ಣೆ, ತಲೆಗೆ ಹಾಕುವ ಎಣ್ಣೆ, ಕೀಲುಗಳಿಗೆ ನುಣುಪು ಕೊಡುವ ಎಣ್ಣೆ, ಪೀಠೋಪಕರಣಗಳಿಗೆ ಹೊಳಪು ನೀಡುವ ಎಣ್ಣೆ, ವಿವಿಧ ಆಯುರ್ವೇದ ಮಸಾಜ್‌ಗಳಿಗಾಗಿ ಬಳಸುವ ಎಣ್ಣೆಯ ರೂಪದಲ್ಲಿ ಕೊಬ್ಬರಿ ಎಣ್ಣೆ ಉಪಯೋಗವಾಗುತ್ತಿದೆ.

ಅಷ್ಟೇ ಏಕೆ, ಬಂಗಾಳ ಕೊಲ್ಲಿಯಲ್ಲಿರುವ ಅಂಡಮಾನ್ ದ್ವೀಪಗಳಲ್ಲಿ ದೋಣಿಗಳಿಗೆ ಬಳಸುವ ದೊಡ್ಡ ದೊಡ್ಡ ಡೀಸೆಲ್ ಇಂಜಿನ್ನುಗಳನ್ನೂ ಕೊಂಚ ಮಾರ್ಪಾಡಿಸಿ ಕೊಬ್ಬರಿ ಎಣ್ಣೆಯಲ್ಲಿ ಓಡುವಂತೆ ಮಾಡಿದ್ದಾರೆ. ಏಕೆಂದರೆ ಅಲ್ಲಿ ಡೀಸೆಲ್‌ಗೆ ಕೊರತೆ ಇದ್ದರೂ ಕೊಬ್ಬರಿ ಎಣ್ಣೆಗೇನೂ ಕೊರತೆಯಿಲ್ಲ! ಆದರೆ ದಿನಬಳಕೆಯ ವಸ್ತುಗಳ ಬದಲಾಗಿ ಕೊಬ್ಬರಿ ಎಣ್ಣೆಯನ್ನು ಬಳಸಬಹುದು ಎಂಬ ಕಲ್ಪನೆ ನಿಮ್ಮನ್ನು ಅಚ್ಚರಿಯ ಲೋಕಕ್ಕೆ ಕೊಂಡೊಯ್ಯುತ್ತದೆ. ತ್ವಚೆಯ ಕಾಂತಿ, ಕೋಮಲತೆಗಾಗಿ- ಕೊಬ್ಬರಿ ಎಣ್ಣೆ

ಉದಾಹರಣೆಗೆ ನಿಮ್ಮ ಶೇವಿಂಗ್ ಕ್ರೀಮ್ ಮುಗಿದು ಹೋಗಿದ್ದರೆ ಅದರ ಬದಲಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಒಂದೆರಡು ನಿಮಿಷ ಬಿಟ್ಟು ಶೇವ್ ಮಾಡಿಕೊಂಡರೆ ಕ್ರೀಮ್‌ಗಿಂತಲೂ ಉತ್ತಮ ಅನುಭವ ನೀಡುತ್ತದೆ. ಅಚ್ಚರಿಯಾಯಿತೇ? ಹೆಚ್ಚಿನವರಿಗೆ ಕೊಬ್ಬರಿ ಎಣ್ಣೆಯನ್ನು ಹೀಗೂ ಬಳಸಬಹುದು ಎಂಬುದು ಕಲ್ಪನೆಗೂ ನಿಲುಕುವುದಿಲ್ಲ. ಕೊಬ್ಬರಿ ಎಣ್ಣೆಯನ್ನು ನಿತ್ಯಜೀವನದಲ್ಲಿ ಯಾವ ಯಾವ ರೂಪದಲ್ಲಿ ಬಳಸಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡುತ್ತಾ ಅಚ್ಚರಿಗೊಳಪಡಲು ಸಿದ್ಧರಾಗಿ...

ಬಾಯಿಯ ದುರ್ಗಂಧ ನಿವಾರಿಸಲು (ಮೌತ್ ವಾಷ್)

ಬಾಯಿಯ ದುರ್ಗಂಧ ನಿವಾರಿಸಲು (ಮೌತ್ ವಾಷ್)

ಆಯುರ್ವೇದರಲ್ಲಿ ಬಾಯಿಯ ದುರ್ಗಂಧಕ್ಕೆ ಕೊಬ್ಬರಿ ಎಣ್ಣೆಯನ್ನು ಬಳಸುವಂತೆ ಸೂಚಿಸಲಾಗಿದೆ. ಏಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ಟೂಥ್ ಪೇಸ್ಟ್ ಗಳಲ್ಲಿ ಹೆಚ್ಚಿನ ಪ್ರಮಾಣದ ಫ್ಲೂರೈಡ್ ಮತ್ತು ಆಲ್ಕೋಹಾಲ್ ಗಳಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾಯಿಯ ದುರ್ಗಂಧ ನಿವಾರಿಸಲು (ಮೌತ್ ವಾಷ್)

ಬಾಯಿಯ ದುರ್ಗಂಧ ನಿವಾರಿಸಲು (ಮೌತ್ ವಾಷ್)

ಇದು ಹಲ್ಲುಗಳಿಗೆ ಕೊಂಚ ಉತ್ತಮವಾದರೂ ದೇಹಕ್ಕೆ ಇತರ ರೀತಿಯಿಂದ ಕೆಟ್ಟದಾಗಿದೆ. ಇದರ ಬದಲಾಗಿ ಪ್ರತಿದಿನ ಕೊಂಚ ಕೊಬ್ಬರಿ ಎಣ್ಣೆಯಿಂದ ಮುಕ್ಕಳಿಸಿಕೊಂಡರೆ ಬಾಯಿಯಲ್ಲಿದ್ದ ಬ್ಯಾಕ್ಟೀರಿಯಾಗಳು ದೂರವಾಗಿ ವಾಸನೆಯೂ ಇಲ್ಲವಾಗುತ್ತದೆ.

ಶೇವಿಂಗ್ ಕ್ರೀಂ

ಶೇವಿಂಗ್ ಕ್ರೀಂ

ಗಡ್ಡವನ್ನು ಕೊಂಚವೇ ನೀರಿನಿಂದ ತೇವಗೊಳಿಸಿ ಬಳಿಕ ಕೈಯಲ್ಲಿ ಕೊಂಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಗಡ್ಡವನ್ನು ಪೂರ್ಣವಾಗಿ ಆವರಿಸಿಕೊಳ್ಳುವಂತೆ ಹಚ್ಚಿಕೊಳ್ಳಿ. ಒಂದೆರಡು ನಿಮಿಷಗಳ ಕಾಲ ಮಸಾಜ್ ಮಾಡಿ ಒಂದು ನಿಮಿಷ ಹಾಗೇ ಬಿಡಿ. ಬಳಿಕ ರೇಜರ್ ಉಪಯೋಗಿಸಿ ಗಡ್ಡ ಹೆರೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶೇವಿಂಗ್ ಕ್ರೀಂ

ಶೇವಿಂಗ್ ಕ್ರೀಂ

ಏನಾಶ್ಚರ್ಯ, ಒಂದಿನಿತೂ ನೋವಾಗದಂತೆ, ಕೊಂಚವೂ ಉರಿಯಿಲ್ಲದೇ ಶೇವಿಂಗ್ ಕ್ರೀಮಿಗಿಂತಲೂ ಉತ್ತಮವಾದ ನುಣ್ಣನೆಯ ಅನುಭವ ನೀಡುತ್ತದೆ. ಬಳಿಕ ತಣ್ಣೀರಿನಿಂದ ತೊಳೆದುಕೊಂಡು ಸ್ವಲ್ಪವೇ ಕೊಬ್ಬರಿ ಎಣ್ಣೆಯನ್ನು ಆಫ್ಟರ್ ಶೇವ್ ತರಹವೂ ಉಪಯೋಗಿಸಬಹುದು.

ನೈಸರ್ಗಿಕ ಡಿಯೋಡೋರೆಂಟ್

ನೈಸರ್ಗಿಕ ಡಿಯೋಡೋರೆಂಟ್

ನಮ್ಮ ಬೆವರಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚುವ ಮೂಲಕ ದುರ್ಗಂಧ ಆವರಿಸುತ್ತದೆ. ಇದಕ್ಕೆ ಹಲವು ಡಿಯೋಡೊರೆಂಟು ಅಥವಾ ದುರ್ಗಂಧ ನಿವಾರಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಚರ್ಮದ ಸೂಕ್ಷ್ಮ ಗ್ರಂಥಿಗಳ ಮೇಲೆ ಪ್ರಭಾವ ಬೀರುವುದರಿಂದ ಹೆಚ್ಚಿನ ಬಳಕೆ ಹಾನಿಕಾರಕವೇ ಆಗಿದೆ.

ನೈಸರ್ಗಿಕ ಡಿಯೋಡೋರೆಂಟ್

ನೈಸರ್ಗಿಕ ಡಿಯೋಡೋರೆಂಟ್

ಬದಲಿಗೆ ಹೆಚ್ಚಾಗಿ ಬೆವರುವ ಸ್ಥಳಗಳಲ್ಲಿ (ಉದಾಹರಣೆಗೆ ಕಂಕುಳು) ಬೆಳಿಗ್ಗೆ ಹೊರಡುವ ಮುನ್ನ ಕೊಂಚ ಕೊಬ್ಬರಿ ಎಣ್ಣೆಯನ್ನು ಸವರಿಕೊಂಡಿದ್ದರೆ ಇಡಿಯ ದಿನ ನಿಮ್ಮ ಮೈಯಿಂದ ದುರ್ಗಂಧ ಬಾರದು.

ನೈಸರ್ಗಿಕ ಡಿಯೋಡೋರೆಂಟ್

ನೈಸರ್ಗಿಕ ಡಿಯೋಡೋರೆಂಟ್

ಈ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಒಂದು ಕಪ್ ಬೇಕಿಂಗ್ ಸೋಡಾ (ಅಡುಗೆ ಸೋಡಾ) ಮತ್ತು ಆರು ಚಮಚ ಕೊಬ್ಬರಿ ಎಣ್ಣೆ, ಕಾಲು ಕಪ್ ಅರಾರೋಟು ಮತ್ತು ಕೆಲವು ಹನಿ ಪುದಿನಾ ಎಣ್ಣೆಯನ್ನು ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಗಾಜಿನ ಬಾಟಲಿಯಲ್ಲಿ ಗಟ್ಟಿಯಾಗಿ ಮುಚ್ಚಳ ಮುಚ್ಚಿ ಗಾಳಿಯಾಡದಂತೆ ಸಂಗ್ರಹಿಸಿ. ಪ್ರತಿದಿನ ಹೊರಡುವ ಮೊದಲು ಹೆಚ್ಚು ಬೆವರುವ ಸ್ಥಳಗಳಲ್ಲಿ ಹಚ್ಚಿಕೊಂಡು ಹೊರಡುವ ಮೂಲಕ ಮೈಯ ದುರ್ಗಂಧ ಬರದೇ ಇರದಂತೆ ನೋಡಿಕೊಳ್ಳಬಹುದು.

ಶೌಚಾಲಯದ ನಲ್ಲಿಯನ್ನು ಸ್ವಚ್ಛಗೊಳಿಸಲು

ಶೌಚಾಲಯದ ನಲ್ಲಿಯನ್ನು ಸ್ವಚ್ಛಗೊಳಿಸಲು

ನಿಮ್ಮ ಶೌಚಾಲಯದ ನಲ್ಲಿ, ವಾಷ್ ಬೇಸಿನ್ ಮತ್ತಿತರ ಸಿರಾಮಿಕ್ ಮತ್ತು ಹೊಳಪಿನ ಸ್ಟೀಲ್ ಇರುವ ವಸ್ತುಗಳನ್ನು ಸ್ವಚ್ಛಗೊಳಿಸಲು ಕೊಬ್ಬರಿ ಎಣ್ಣೆ ಉತ್ತಮವಾಗಿದೆ. ಇದಕ್ಕಾಗಿ ಸ್ವಚ್ಛವಾದ ಒರಟು ಬಟ್ಟೆಯಲ್ಲಿ ಕೊಂಚ ಕೊಬ್ಬರಿ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಿ ನಲ್ಲಿ, ಬೇಸಿನ್ ಮೊದಲಾದವುಗಳನ್ನು ನೇರವಾಗಿ ಉಜ್ಜಿ ಸ್ವಚ್ಛಗೊಳಿಸಿ.

ನೆರಿಗೆಗಳನ್ನು ನಿವಾರಿಸಲು

ನೆರಿಗೆಗಳನ್ನು ನಿವಾರಿಸಲು

ಒಂದು ವಿಟಮಿನ್ ಇ ಮಾತ್ರೆಯ ಒಳಗಿನ ಪುಡಿ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ರಾತ್ರಿ ಮಲಗುವ ಮುನ್ನ ನೆರಿಗೆ ಇರುವ ಚರ್ಮದ ಮೇಲೆ ನಯವಾಗಿ ಹಚ್ಚಿ ಮಲಗಿಕೊಳ್ಳಿ.

ನೆರಿಗೆಗಳನ್ನು ನಿವಾರಿಸಲು

ನೆರಿಗೆಗಳನ್ನು ನಿವಾರಿಸಲು

ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ಸೆಳೆತ ನೀಡುವ ಮೂಲಕ ನೆರಿಗೆಗಳನ್ನು ನಿವಾರಿಸುತ್ತದೆ.

ಡಯಾಪರ್ ಕ್ರೀಂ

ಡಯಾಪರ್ ಕ್ರೀಂ

ಮಕ್ಕಳಿಗೆ ಹೆಚ್ಚಿನ ಹೊತ್ತು ಡಯಾಪರ್ ಗಳನ್ನು ತೊಡಿಸುವುದರಿಂದ ಡಯಾಪರ್ ನ ಅಂಚು ತಾಗಿದಲ್ಲೆಲ್ಲಾ ಚರ್ಮ ಘಾಸಿಗೊಂಡಿರುತ್ತದೆ. ಇದನ್ನು ನಿವಾರಿಸಲು ಡಯಾಪರ್ ನ ಅಂಚು ತಾಕುವಲ್ಲೆಲ್ಲಾ ಕೊಬ್ಬರಿ ಎಣ್ಣೆಯನ್ನು ಸವರಿದರೆ ಚರ್ಮ ಸುರಕ್ಷಿತವಾಗಿರುತ್ತದೆ.

English summary

Things you can't imagine you could do with coconut oil!

Coconut oil is considered good for oiling hair and some people even use it as cooking oil. However, the oil can be used for many other things as well that you can’t even imagine. The oil has six more benefits that a lot of people are not aware about. Click through this story to find out more about the usage of this oil in our day-to-day life.
X
Desktop Bottom Promotion