For Quick Alerts
ALLOW NOTIFICATIONS  
For Daily Alerts

ಬರೀ ಹೊಟ್ಟೆಗೆ ಇವುಗಳನ್ನು ಸೇವಿಸಿ ಆಪತ್ತಿಗೆ ಸಿಲುಕಬೇಡಿ!

By
|

ಬೆಳಿಗ್ಗೆದ್ದ ಬಳಿಕ ಪ್ರಥಮವಾಗಿ ಸೇವಿಸುವ ಆಹಾರ ಅತ್ಯಂತ ಮುಖ್ಯವೂ ಅತಿ ಶೀಘ್ರವಾರಿ ರಕ್ತಕ್ಕೆ ಸೇರಿಕೊಳ್ಳುವಂತಹದ್ದೂ ಆಗಿರುವುದರಿಂದ ಆಯುರ್ವೇದದ ಬಹಳಷ್ಟು ಔಷಧಿಗಳನ್ನು ಬೆಳಗ್ಗಿನ ಪ್ರಥಮ ಆಹಾರವನ್ನಾಗಿ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಹೆಚ್ಚು ಪರಿಣಾಮಕಾರಿ ಎಂಬ ಕಾರಣಕ್ಕೆ ಸಿಕ್ಕ ಸಿಕ್ಕ ಯಾವುದೇ ತಿಂಡಿಯನ್ನು ಬೇಕಾಬಿಟ್ಟಿಯಾಗಿ ಬೆಳಗ್ಗಿನ ಪ್ರಥಮ ಆಹಾರವನ್ನಾಗಿ ಸೇವಿಸುವಂತಿಲ್ಲ. ಏಕೆಂದರೆ ಇದು ವ್ಯತಿರಿಕ್ತವಾಗಿ ಪರಿಣಾಮ ಬೀರಬಹುದು. ಆರೋಗ್ಯದ ಆಗರ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ ನೋಡಿ!

ಇತ್ತೀಚಿನ ಸಂಶೋಧನೆಯ ಪ್ರಕಾರ ಆಮ್ಲೀಯ ಅಂಶವುಳ್ಳ ಆಹಾರಗಳನ್ನು ಸೇವಿಸುವುದರಿಂದ ರಾತ್ರಿಯ ಉಪವಾಸದ ಬಳಿಕ ಖಾಲಿಯಾಗಿಯೇ ಇರುವ ಹೊಟ್ಟೆ ಮತ್ತು ಕರುಳುಗಳ ಒಳಭಾಗ ಸುಲಭವಾಗಿ ಆಮ್ಲದ ಪ್ರಕೋಪಕ್ಕೆ ಒಳಗಾಗುತ್ತದೆ. ಇದು ಹೊಟ್ಟೆ ಮತ್ತು ಕರುಳುಗಳ ಒಳಭಾಗದಲ್ಲಿ ಹುಣ್ಣು, ಸೋಂಕು ಮೊದಲಾದ ತೊಂದರೆಗಳನ್ನು ಹುಟ್ಟುಹಾಕುತ್ತದೆ. ದಿನದ ಇತರ ಹೊತ್ತಿನಲ್ಲಿ ಸೇವಿಸಿದರೆ ಅತ್ಯುತ್ತಮ ಪರಿಣಾಮ ಬೀರುವ ಮೊಸರು, ಹಸಿ ಟೊಮೇಟೊ, ಬಾಳೆಹಣ್ಣು ಮೊದಲಾದವುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸದಿರಲು ಆಹಾರತಜ್ಞರು ಸಲಹೆ ನೀಡುತ್ತಾರೆ.

ಒಂದು ವೇಳೆ ನಿಮಗೆ ದಿನಕ್ಕೆ ಮೂರೂ ಹೊತ್ತು ಕೇವಲ ಹಣ್ಣುಗಳನ್ನು ಮಾತ್ರ ಸೇವಿಸಲು ಸಲಹೆ ನೀಡಲಾಗಿದ್ದರೆ ಬೆಳಗ್ಗಿನ ಪ್ರಥಮ ಆಹಾರವಾಗಿ ಉಗುರುಬೆಚ್ಚನೆಯ ನೀರನ್ನು ಸೇವಿಸಿದ ಕೊಂಚ ಹೊತ್ತಿನ ಬಳಿಕ ಹಣ್ಣುಗಳನ್ನು ಸೇವಿಸುವುದು ಉತ್ತಮ. ಖಾಲಿಯೊಟ್ಟೆಯಲ್ಲಿ ಸೇವಿಸದೇ ಇರಲು ಸಲಹೆ ನೀಡುವ ಇತರ ಪೇಯಗಳೆಂದರೆ ಚಹಾ ಮತ್ತು ಕಾಫಿ. ಇವುಗಳ ಹೊರತಾಗಿ ಇನ್ನು ಯಾವ ಯಾವ ಆಹಾರಗಳನ್ನು ಸೇವಿಸಬಾರದು ಎಂದು ನಿಮ್ಮಲ್ಲಿ ಮೂಡಿದ ಕುತೂಹಲವನ್ನು ಕೆಳಗಿನ ಸ್ಲೈಡ್ ಶೋ ತಣಿಸಲಿದೆ..

ಸೋಡಾ

ಸೋಡಾ

ಬುರುಗು ಅಥವಾ ನೊರೆ ಬರುವ ಯಾವುದೇ ಪೇಯ, ಸೋಡಾ ಅಥವಾ ಇನ್ನಾವುದೇ ಲಘು ಪಾನೀಯವನ್ನು ಎಂದಿಗೂ ಪ್ರಥಮ ಆಹಾರವಾಗಿ ಸೇವಿಸಕೂಡದು. ಏಕೆಂದರೆ ಇವುಗಳಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನನಾಳ ಮತ್ತು ಹೊಟ್ಟೆಯ ಒಳಭಾಗವನ್ನು ಶೀಘ್ರವಾಗಿ ತೊಂದರೆಗೊಳಪಡಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೋಡಾ

ಸೋಡಾ

ರಾತ್ರಿಯ ಉಪವಾಸದ ಬಳಿಕ ಪ್ರಬಲವಾಗಿರುವ ಜಠರರಸದಲ್ಲಿ ಸೋಡಾನೀರು ಸೇರಿದಾಕ್ಷಣ ಬೆಂಕಿ ಹೊತ್ತಿದಂತೆ ಇದರಿಂದ ನೊರೆಯುಬ್ಬಿ ಎದೆಯುರಿ, ವಾಕರಿಕೆ ಸುಸ್ತು ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು.

ಟೊಮೇಟೊ ಹಣ್ಣು

ಟೊಮೇಟೊ ಹಣ್ಣು

ಟೊಮೇಟೊ ಹಣ್ಣನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಅದರಲ್ಲಿರುವ ಕೆಲವು ಆಮ್ಲಗಳು ಹೊಟ್ಟೆ ಮತ್ತು ಕರುಳುಗಳ ಒಳಭಾಗದಲ್ಲಿರುವ ಜಠರರಸದೊಡನೆ ಪ್ರತಿಕ್ರಿಯೆಗೊಂಡು ಜೀರ್ಣವಾಗದ ಜೆಲ್ಲಿಯಂತಹ ವಸ್ತು ಉತ್ಪಾದನೆಯಾಗುತ್ತದೆ. ಇದು ಹೊಟ್ಟೆಯೊಳಗಣ ಗಡ್ಡೆ (stomach calculus) ಉಂಟುಮಾಡುವ ಸಾಧ್ಯತೆಯಿದೆ.

ಔಷಧಿಗಳು

ಔಷಧಿಗಳು

ಎಲ್ಲಿಯವರೆಗೆ ವೈದ್ಯರು ವಿಶೇಷವಾಗಿ ಖಾಲಿಹೊಟ್ಟೆಯಲ್ಲಿಯೇ ತೆಗೆದುಕೊಳ್ಳಬೇಕು, ಇಷ್ಟೇ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ಖಡಾಖಂಡಿತವಾಗಿ ತಾಕೀತು ಮಾಡಿದ ಹೊರತು ಯಾವುದೇ ಔಷಧಿಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬಾರದು.

ಔಷಧಿಗಳು

ಔಷಧಿಗಳು

ಏಕೆಂದರೆ ಯಾವುದೇ ಔಷಧಿಗಳನ್ನು ಸಾಮಾನ್ಯವಾಗಿ ಊಟದ ಮೊದಲು ಅಥವಾ ಊಟದ ನಂತರ ಸೇವಿಸಲು ಸಾಧ್ಯವಾಗುವಂತೆಯೇ ತಯಾರಿಸಲಾಗಿರುತ್ತದೆ. ಇವನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಪ್ರಬಲವಾದ ಜಠರರಸದಲ್ಲಿ ಇವುಗಳು ಬೇರೆಯೇ ರೀತಿಯಲ್ಲಿ ಪ್ರತಿಕ್ರಿಯಿಸಿ ಔಷದಿಯ ಗುಣಗಳನ್ನೆಲ್ಲಾ ಮೇಲೆಕೆಳಗೆ ಮಾಡಿಬಿಡುತ್ತದೆ. ಇದು ಆರೋಗ್ಯಕ್ಕೆ ಮಾರಕವಾಗಿದೆ.

ಆಲ್ಕೋಹಾಲ್

ಆಲ್ಕೋಹಾಲ್

ಯಕೃತ್ ಹಾಳಾದ ಮದ್ಯವ್ಯಸನಿಗಳ ಅಭ್ಯಾಸವನ್ನು ಗಮನಿಸಿದರೆ ಅವರಿಗೆ ಬೆಳಿಗ್ಗೆದ್ದ ತಕ್ಷಣ ಒಂದು ಪೆಗ್ ಸೇವಿಸಬೇಕಾಗಿರುತ್ತದೆ. ಏಕೆಂದರೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಮದ್ಯ ಜಠರರಸದಲ್ಲಿ ಸೇರಿದಾಕ್ಷಣ ಜಠರರಸದ ಪ್ರಬಲತೆ ಇನ್ನಷ್ಟು ಹೆಚ್ಚುವ ಮೂಲಕ ಹೊಟ್ಟೆ ಮತ್ತು ಕರುಳುಗಳ ಒಳಭಾಗವನ್ನೇ ಸುಡಲು ಪ್ರಾರಂಭಿಸುತ್ತದೆ. ಮುಂದೆ ಓದಿ

ಆಲ್ಕೋಹಾಲ್

ಆಲ್ಕೋಹಾಲ್

ಕೂಡಲೇ ಬೇರೆ ಯಾವುದಾದರೂ ಆಹಾರ ಸೇವಿಸಿದರೆ ಈ ಉರಿ ಕಡಿಮೆಯಾಗುತ್ತದಾದರೂ ಮದ್ಯವನ್ನು ಕರುಳುಗಳು ಹೀರಿ ರಕ್ತಕ್ಕೆ ಸೇರಿಸುವವರೆಗೆ ಸುಡುವ ಕಾರ್ಯ ಮುಂದುವರೆದೇ ಇರುತ್ತದೆ. ಇದು ಮದ್ಯದಿಂದ ಈಗಾಗಲೇ ಜರ್ಝರಿತವಾಗಿರುವ ದೇಹವನ್ನು ಇನ್ನಷ್ಟು ಜರ್ಝರಿತಗೊಳಿಸುತ್ತದೆ. ಒಂದು ವೇಳೆ ಇದು ಚಟವಾಗಿ ಮಾರ್ಪಟ್ಟಿದ್ದರೆ ಸಾವು ಕಟ್ಟಿಟ್ಟ ಬುತ್ತಿಯಾಗಿದೆ.

ಮಸಾಲೆಯುಕ್ತ ಆಹಾರಗಳು

ಮಸಾಲೆಯುಕ್ತ ಆಹಾರಗಳು

ಭಾರತೀಯರಿಗೆ ಮಸಾಲೆಯಿಲ್ಲದ ಆಹಾರ ಗಂಟಲಲ್ಲಿ ಇಳಿಯುವುದೇ ಕಷ್ಟ. ಆದರೆ ಇಷ್ಟ ಎಂದು ಬೆಳಗ್ಗಿನ ಖಾಲಿಹೊಟ್ಟೆಯಲ್ಲಿ ಮಸಾಲೆ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು. ಏಕೆಂದರೆ ಮಸಾಲೆ ಸಹಾ ಹೊಟ್ಟೆಯ ಒಳಭಾಗದಲ್ಲಿರುವ ಆಮ್ಲದೊಡನೆ ಪ್ರತಿಕ್ರಿಯೆಗೊಂಡು ಬೇರೆಯೇ ರೀತಿಯಲ್ಲಿ ವರ್ತಿಸುತ್ತದೆ.

ಮಸಾಲೆಯುಕ್ತ ಆಹಾರಗಳು

ಮಸಾಲೆಯುಕ್ತ ಆಹಾರಗಳು

ಇದು ಹೊಟ್ಟೊಯೊಳಗಣ ಸೆಡೆತ (stomach cramp)ಗೆ ಕಾರಣವಾಗುತ್ತದೆ. ಹೊಟ್ಟೆಯೊಳಗೆ ಆಮ್ಲ ಹೆಚ್ಚಾಗುವ ಮೂಲಕ ಹುಳಿತೇಗು, ಉರಿ ಮೊದಲಾದ ತೊಂದರೆಗಳೂ ಎದುರಾಗುತ್ತವೆ.

ಕಾಫಿ

ಕಾಫಿ

ಬೆಳಗ್ಗೆ ಜಾಗಿಂಗಿಗೆ ಹೋಗುವವರು ಇದುವರೆಗೆ ಕಾಫಿ ಕುಡಿದೇ ಹೊರಟಿದ್ದರೆ ಇನ್ನು ಮೇಲೆ ಆ ಅಭ್ಯಾಸ ಬಿಡುವುದು ಉತ್ತಮ ಏಕೆಂದರೆ ಕಾಫಿಯಲ್ಲಿರುವ ಕೆಫೀನ್ ಸಹಾ ಖಾಲಿಹೊಟ್ಟೆಯೊಳಗೆ ಭಿನ್ನರೀತಿಯ ಪರಿಣಾಮ ಉಂಟುಮಾಡುತ್ತದೆ. ಮುಂದೆ ಓದಿ

ಕಾಫಿ

ಕಾಫಿ

ಒಂದು ವೇಳೆ ಕಾಫಿ ಕುಡಿಯುವುದು ಅಭ್ಯಾಸವಾಗಿಬಿಟ್ಟಿದ್ದರೆ ಪ್ರಥಮ ಆಹಾರವಾಗಿ ಒಂದು ಲೋಟ ನೀರು ಕುಡಿದ ಕೊಂಚ ಸಮಯದ ಬಳಿಕ ಸೇವಿಸುವುದು ಉತ್ತಮ.

 ಟೀ

ಟೀ

ಕಾಫಿಯಂತೆಯೇ ಚಹಾ ಸಹಾ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಉತ್ತಮವಲ್ಲ. ಹಾಲಿರುವ, ಹಾಲಿಲ್ಲದ, ಕಪ್ಪು ಅಥವಾ ಹಸಿರು ಯಾವುದೇ ಚಹಾ ಇರಲಿ, ಇದರಲ್ಲಿರುವ ಟ್ಯಾನಿನ್ ಎಂಬ ಅಂಶ ಜಠರರಸವನ್ನು ಇನ್ನಷ್ಟು ಆಮ್ಲೀಯಗೊಳಿಸಿ ಹೊಟ್ಟೆಯ ಒಳಭಾಗವನ್ನೇ ಸುಡಲು ಸಾಧ್ಯವಾಗುತ್ತದೆ.

 ಟೀ

ಟೀ

ಇನ್ನೊಂದು ಅಡ್ಡಪರಿಣಾಮವೆಂದರೆ ಮಲಬದ್ಧತೆ. ಆಮ್ಲೀಯ ದ್ರವ ಕರುಳುಗಳ ಒಳಭಾಗವನ್ನು ಸುಡುವುದರಿಂದ ಕರುಳುಗಳು ಅಗತ್ಯಕ್ಕೂ ಹೆಚ್ಚು ನೀರನ್ನು ಆಹಾರದಿಂದ ಹೀರುತ್ತವೆ. ಇದು ಮಲವನ್ನು ಮರದ ಕೊರಡಿನಂತೆ ಅತೀವವಾಗಿ ಗಟ್ಟಿಯಾಗಿಸಿ ವಿಸರ್ಜನೆಯನ್ನು ಕಷ್ಟಕರವಾಗಿಯೂ ನೋವಿನಿಂದ ಕೂಡಿರುವಂತೆಯೂ ಮಾಡುತ್ತದೆ.

ಮೊಸರು

ಮೊಸರು

ಮೊಸರು ಈಗಾಗಲೇ ಅರ್ಧ ಜೀರ್ಣವಾಗಿರುವ ಆಹಾರವಾಗಿದ್ದರೂ ಖಾಲಿಹೊಟ್ಟೆಯಲ್ಲಿ ಸೇವಿಸಲು ಮಾತ್ರ ಅನರ್ಹವಾಗಿದೆ. ಏಕೆಂದರೆ ಇದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಖಾಲಿಹೊಟ್ಟೆಯಲ್ಲಿ ಸೇವಿಸಿದ ಬಳಿಕ ಜಠರರಸವನ್ನು ಸೇರಿದರೆ ಕೂಡಲೇ ಪ್ರತಿಕ್ರಿಯೆಗೊಂಡು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನ ಪೋಷಕಾಂಶಗಳಲ್ಲಿ ಪ್ರಮುಖವಾಗಿರುವ ಮೆಗ್ನೀಶಿಯಂ ಖಾಲಿಹೊಟ್ಟೆಯಲ್ಲಿ ಜಠರ ಸೇರಿದರೆ ಕೂಡಲೇ ರಕ್ತವನ್ನು ಸೇರುವ ಮೂಲಕ ರಕ್ತದಲ್ಲಿರುವ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚುಕಡಿಮೆಗೊಳಿಸುತ್ತದೆ. ಇದು ಹಲವು ರೀತಿಯಿಂದ ಆರೋಗ್ಯವನ್ನು ಬಾಧಿಸುವುದರಿಂದ ಖಾಲಿಹೊಟ್ಟೆಯಲ್ಲಿ ಬಾಳೆಹಣ್ಣನ್ನು ಸೇವಿಸಬಾರದು.

ಗೆಣಸು

ಗೆಣಸು

ಗೆಣಸಿನಲ್ಲಿಯೂ ಟ್ಯಾನಿನ್ ಮತ್ತು ಪೆಕ್ಟಿನ್ ಎಂಬ ಪೋಷಕಾಂಶಗಳಿವೆ. ಇವೂ ಜಠರರಸದೊಡನೆ ಪ್ರತಿಕ್ರಿಯೆಗೊಳ್ಳುವ ಮೂಲಕ ಹೊಟ್ಟೆಗೆ ಪ್ರಚೋದನೆ ನೀಡುತ್ತವೆ.

ಗೆಣಸು

ಗೆಣಸು

ಇದು ಇನ್ನಷ್ಟು ಜಠರರಸದ ಸ್ರವಿಕೆಗೆ ಕಾರಣವಾಗುತ್ತದೆ. ಹೆಚ್ಚಿನ ರಸ ಉತ್ಪತ್ತಿಯಾದ ಪರಿಣಾಮವಾಗಿ ಹೊಟ್ಟೆಯುರಿ, ಎದೆಯುರಿ, ಹೊಟ್ಟೆಯುಬ್ಬರ ಮೊದಲಾದ ತೊಂದರೆಗಳು ಎದುರಾಗುತ್ತವೆ.

English summary

Things NOT To Gulp On An Empty Stomach

Healthy foods are many and eating them at the right time during the day is important. According to a new study, it is said that there are some foods one must avoid on an empty stomach. The reason being that these foods are high in acids and other substances which can destroy the lining of the intestine thus adding to stomach infections and other health issues. Here are some of the other foods and things not to gulp down on an empty tummy, take a look:
X
Desktop Bottom Promotion