For Quick Alerts
ALLOW NOTIFICATIONS  
For Daily Alerts

ಟಾಲ್ಕಂ ಪೌಡರ್ ಎಂಬ ಸೈಲೆಂಟ್ ಕಿಲ್ಲರ್‌ ಬಗ್ಗೆ ಎಚ್ಚರವಿರಲಿ!

By Arshad
|

ಮಗುವಿಗೆ ಸ್ನಾನ ಮಾಡಿಸಿದ ಬಳಿಕ ಚರ್ಮಕ್ಕೆ ಹಚ್ಚುವ ಬೇಬಿ ಪೌಡರ್ ಅಥವಾ ವಯಸ್ಕರು ಉಪಯೋಗಿಸುವ ಟಾಲ್ಕಂ ಪೌಡರ್ ಚರ್ಮಕ್ಕೆ ಚೇತನ ನೀಡಿ ಸೂಕ್ಷ್ಮ ಗೀರುಗಳಿಂದಾಗುವ ಸೋಂಕುಗಳಿಂದ ರಕ್ಷಿಸುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಟಾಲ್ಕಂ ಮತ್ತು ಬೇಬಿ ಪೌಡರುಗಳಲ್ಲಿ ಕೆಲವು ಹಾನಿಕಾರಕ ಅಂಶಗಳಿದ್ದು ಗರ್ಭಕೋಶದ ಕ್ಯಾನ್ಸರ್ ಸಹಿತ ಹಲವು ತೊಂದರೆಗಳಿಗೆ ಕಾರಣವಾಗಬಲ್ಲುದು.

ಟಾಲ್ಕಂ ಪೌಡರಿನಲ್ಲಿರುವ ಟಾಲ್ಕ್ (ಟಾಕ್) ಎಂಬ ಖನಿಜ ಒಂದು ವೇಳೆ ಸೂಕ್ಷ್ಮ ಧೂಳಿನ ಮೂಲಕ ಮೂಗಿನಿಂದ ಶ್ವಾಸಕೋಶ ಪ್ರವೇಶಿಸಿದರೆ ಅಲರ್ಜಿಯುಂಟುಮಾಡಿ ಮೂತ್ರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದು, ಕಣ್ಣು, ಮೂಗು, ಗಂಟಲಿನಲ್ಲಿ ತುರಿಕೆ, ವಾಂತಿ, ಹೃದಯ ಒತ್ತಡದಲ್ಲಿ ಇಳಿಕೆ, ವಿಪರೀತ ಸುಸ್ತು, ಚರ್ಮದಲ್ಲಿ ಉರಿ, ಗುಳ್ಳೆಗಳು ಮೊದಲಾದ ತೊಂದರೆಗಳು ಎದುರಾಗಬಹುದು. ಸುಗಂಧಭರಿತವಾದ ಟಾಲ್ಕಂ ಪೌಡರ್‌ ಆರೋಗ್ಯಕ್ಕೆ ಮಾರಕವೇ?

ಅದರಲ್ಲೂ ವಿಶೇಷವಾಗಿ ತಮ್ಮ ಗೋಪ್ಯಸ್ಥಾನದಲ್ಲಿ ಟಾಲ್ಕಂ ಪೌಡರ್ ಉಪಯೋಗಿಸುತ್ತಾ ಬಂದಿರುವ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ತಗಲುವ ಸಾಧ್ಯತೆ ಹೆಚ್ಚಾಗಿರುವುದು ಸಂಶೋಧನೆಗಳಿಂದ ದೃಢಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಕೆಲವರಿಗೆ ಗಾಯಗಳ ಮೇಲೆ ಈ ಟಾಲ್ಕಂ ಪೌಡರುಗಳನ್ನು ಸಿಂಪಡಿಸಿ ರಕ್ತವನ್ನು ನಿಲ್ಲಿಸುವ ಅಭ್ಯಾಸವಿರುತ್ತದೆ. ಆದರೆ ಇದು ಅತ್ಯಂತ ಅಪಾಯಕರ ವಿಧಾನವಾಗಿದೆ. ಕ್ಯಾನ್ಸರ್ ತರುವ ಕೆಮಿಕಲ್ ಬೇಬಿ ಪೌಡರ್ ನಲ್ಲಿದೆಯೇ?

ಆದ್ದರಿಂದ ಗಾಯಗಳಿಗೆ ಎಂದೂ ಬೇಬಿ ಪೌಡರ್ ಅಥವಾ ಟಾಲ್ಕಂ ಪೌಡರ್ ಉಪಯೋಗಿಸಬೇಡಿ. ಇದಕ್ಕಾಗಿ ಗಾಯಗಳಿಗೆಂದೇ ಸಿದ್ಧಪಡಿಸಿರುವ surgical powder ಉಪಯೋಗಿಸಿ. ಒಂದು ವೇಳೆ ಇದು ಲಭ್ಯವಿಲ್ಲದಿದ್ದರೆ ಮನೆಯಲ್ಲಿ ಲಭ್ಯವಿರುವ ಕೆಳಗಿನ ಯಾವುದೇ ವಿಧಾನವನ್ನು ಅನುಸರಿಸಿ..

ಓಟ್ಸ್ ಪುಡಿ

ಓಟ್ಸ್ ಪುಡಿ

ಹಿಂದೆ ಮುಖದ ಮೊಡವೆಯಿಂದ ಹಿಡಿದು ಮಕ್ಕಳಿಗೆ ಬರುವ ಅಮ್ಮ (chickenpox) ವ್ಯಾಧಿಗಳಿಗೆಲ್ಲಾ ಓಟ್ಸ್‌ನ ಪುಡಿಯನ್ನೇ ಬಳಸಲಾಗುತ್ತಿತ್ತು.ಈ ಪುಡಿಯ ಬಳಕೆಯಿಂದ ಗಾಯಗಳು ಬೇಗನೇ ಮಾಗುವುದರ ಜೊತೆಗೇ ಕಲೆಗಳಿಲ್ಲದಂತಾಗಲೂ ಸಾಧ್ಯವಾಗುತ್ತದೆ. ಈ ಪುಡಿಯನ್ನು ಚರ್ಮದ ತುರಿಕೆ ಮತ್ತು ಉರಿ ಕಡಿಮೆಗೊಳಿಸಲೂ ಬಳಸಬಹುದು. ಕೀಟಗಳ ಕಡಿತ ಮತ್ತು ವ್ರಣಗಳಿಗೂ ಓಟ್ಸ್ ಪುಡಿಯನ್ನು ಬಳಸಬಹುದು.

ಮೆಕ್ಕೆಜೋಳದ ಪುಡಿ (Cornstarch Powder)

ಮೆಕ್ಕೆಜೋಳದ ಪುಡಿ (Cornstarch Powder)

ಅತ್ಯಂತ ನಯವಾದ ಪುಡಿಯ ರೂಪದಲ್ಲಿ ದೊರಕುವ ಮೆಕ್ಕೆಜೋಳದ ಪುಡಿಯನ್ನು ಟಾಲ್ಕಂ ಪೌಡರಿನ ಬದಲಿಗೆ ಉಪಯೋಗಿಸಬಹುದು. ಟಾಲ್ಕಂ ಪೌಡರಿನ ಧೂಳು ಮೂಗಿನ ಮೂಲಕ ಶ್ವಾಸಕೋಶಗಳಿಗೆ ತಲುಪಿದರೆ ಅದರಿಂದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವ ಅಪಾಯವಿದೆ. ಆದರೆ ಮೆಕ್ಕೆಜೋಳದ ಪುಡಿ ಒಂದು ವೇಳೆ ಧೂಳಿನ ರೂಪದಲ್ಲಿ ದೇಹ ಸೇರಿದರೂ ಆತಂಕಗೊಳ್ಳುವ ಅಗತ್ಯವಿಲ್ಲ.

ಕಡಲೆ ಕಾಳಿನ ಹಿಟ್ಟು (Chickpea Powder)

ಕಡಲೆ ಕಾಳಿನ ಹಿಟ್ಟು (Chickpea Powder)

ಕಡಲೆಕಾಳಿನ ಹಿಟ್ಟನ್ನು ಕೊಂಚ ಆಲಿವ್ ಎಣ್ಣೆಯೊಡನೆ ಮಿಶ್ರಣ ಮಾಡಿ ಲೇಪನದಂತೆ ಹಚ್ಚಿಕೊಳ್ಳುವುದರಿಂದ ಚರ್ಮದ ಸೂಕ್ಷ್ಮ ಗೀರುಗಳು ಮತ್ತು ಒಣಚರ್ಮದಿಂದ ರಕ್ಷಣೆ ಪಡೆಯಬಹುದು. ಇದು ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಕಾಂತಿ ಮತ್ತು ಪೋಷಣೆಯನ್ನು ನೀಡುತ್ತದೆ.

ಮೆಕ್ಕೆಜೋಳದ ಹಿಟ್ಟು (Corn Flour)

ಮೆಕ್ಕೆಜೋಳದ ಹಿಟ್ಟು (Corn Flour)

ಮೆಕ್ಕೆಜೋಳದ ಕಾಳುಗಳನ್ನು ಸಿಪ್ಪೆಸಹಿತವಾಗಿ ಪುಡಿಮಾಡಿದ ಹಿಟ್ಟು ಬೇಸಿಗೆಯಲ್ಲಿ ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ. ವಿಶೇಷವಾಗಿ ಹೆಚ್ಚು ಬೆವರುವ ದಿನಗಳಲ್ಲಿ ಈ ಹಿಟ್ಟನ್ನು ಟಾಲ್ಕಂ ಪೌಡರಿನಂತೆ ಉಪಯೋಗಿಸುವುದರಿಂದ ಬೆವರನ್ನು ಹೀರಿಕೊಂಡು ಚರ್ಮದ ಸೂಕ್ಷ್ಮ ಗೀರು ಮತ್ತು ಉರಿಯಿಂದ ರಕ್ಷಿಸುತ್ತದೆ.

ಅಕ್ಕಿ ಹಿಟ್ಟು

ಅಕ್ಕಿ ಹಿಟ್ಟು

ಅತಿ ನಯವಾಗಿ ಪುಡಿಮಾಡಿದ ಅಕ್ಕಿ ಮತ್ತು ಮೊಸರನ್ನು ಸೇರಿಸಿ ಮಾಡಿದ ಮಿಶ್ರಣ ಚರ್ಮದ ಕಲೆಗಳನ್ನು ಮತ್ತು ನೆರಿಗೆಗಳನ್ನು ನಿವಾರಿಸಲು ಉತ್ತಮ ಆಯ್ಕೆಯಾಗಿದೆ. ಅಕ್ಕಿಹಿಟ್ಟು ಒಣರೂಪದಲ್ಲಿ ಟಾಲ್ಕಂ ಪೌಡರಿನ ಬದಲಿಗೆ ಉಪಯೋಗಿಸುವುದರಿಂದ ಬೆವರನ್ನು ಹೀರಿಕೊಂಡು ಚರ್ಮದ ಸೂಕ್ಷ್ಮ ಗೀರು ಮತ್ತು ಉರಿಯಿಂದ ರಕ್ಷಣೆ ಪಡೆಯಬಹುದು.

ಅರಾರೋಟು ಹಿಟ್ಟು

ಅರಾರೋಟು ಹಿಟ್ಟು

ಅರಾರೋಟು ಸಹಾ ಬೆವರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಬೇಸಿಗೆಗೆ ಉತ್ತಮ ಪರಿಹಾರವಾಗಿದೆ. ಬೆಳ್ಳಗಿನ ಈ ಪುಡಿ ಚರ್ಮದ ಆರೈಕೆ ಮತ್ತ್ತು ಕಾಂತಿಗಾಗಿ ಉಪಯುಕ್ತವಾಗಿದೆ.

English summary

The Dangers Of Talcum Powder

Baby powder, or talcum powder is used to treat or prevent rashes, soothes skin and even freshens it. It is used in almost every house hold. However, many studies show that it can prove harmful for your health. It has been linked with ovarian cancer too. A study has shown that women who used talc powder on their genital areas are at more risk of ovarian cancer as the powder can be retained in ovaries for many years causing inflammation and cancer.
X
Desktop Bottom Promotion