For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ತಲೆನೋವಿಗೆ ಸಾಂತ್ವನ ನೀಡುವ ಅದ್ಭುತ ಚಹಾ

By Super
|

ಪ್ರಾಯಶಃ ಹೆರಿಗೆ ನೋವಿನ ಬಳಿಕ ಬಹುವಾಗಿ ಶರೀರವನ್ನೂ ಮನಸ್ಸನ್ನೂ ಕಾಡುವ ನೋವು ಎಂದರೆ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಇರಬಹುದು. ಏಕೆಂದರೆ ನಿಧಾನವಾಗಿ ಪ್ರಾರಂಭವಾಗುವ ಮೈಗ್ರೇನ್ ತಲೆನೋವು ಒಮ್ಮೆ ಹೆಚ್ಚಿತೆಂದರೆ ಯೋಚಿಸುವ ಶಕ್ತಿಯನ್ನೂ, ಇಂದ್ರಿಯಗಳು ತಮ್ಮ ಕ್ಷಮತೆಯನ್ನೂ, ಇಡಿಯ ದೇಹ ತನ್ನ ಇರುವಿಕೆಯನ್ನೂ ಕಳೆದುಕೊಂಡಂತೆ ಭಾಸವಾಗಿ ಆತ್ಮಹತ್ಯೆಯೇ ಈ ಕ್ಷಣಕ್ಕೆ ಮೇಲು ಎನಿಸುತ್ತದೆ! ನೋವು ತನ್ನ ಉತ್ತುಂಗದಲ್ಲಿದ್ದಾಗ ಕಣ್ಣಿನ ನೇರಭಾಗದಲ್ಲಿರುವ ದೃಶ್ಯವೇ ಅದೃಶ್ಯವಾಗಿಬಿಡುತ್ತದೆ.

ಈ ತಲೆನೋವಿಗೆ ಖಡಾಡಂಡಿತವಾದ ಮದ್ದು ಇದುವರೆಗೆ ಇಲ್ಲವಾದರೂ ಇದರ ಪ್ರಾಬಲ್ಯವನ್ನು ಕಡಿಮೆಗೊಳಿಸುವ ಕೆಲವು ಮದ್ದುಗಳಿವೆ. ಆದರೆ ಇವುಗಳೆಲ್ಲಾ ಮೆದುಳಿಗೆ ರಕ್ತಸಂಚಾರ ಹೆಚ್ಚಿಸುವ ಮೂಲಕ ನೋವನ್ನು ಕಡಿಮೆಗೊಳಿಸಲು ಯತ್ನಿಸುವುದರಿಂದ ನೋವು ಕಡಿಮೆಯಾದ ಬಳಿಕವೂ ದಿನವಿಡೀ ಮಂಪರು, ಸುಸ್ತು, ಚಟುವಟಿಕೆಯಿಲ್ಲದಿರುವುದು, ಎದುರಿನವರು ಯಾವುದೇ ರೀತಿಯ ಪ್ರಶ್ನೆ ಕೇಳಿದರೆ ಅಥವಾ ವಿಚಾರಿಸಿದರೆ ಅವರ ಮೇಲೆ ರೇಗಾಡುವುದು ಮೊದಲಾದ ಅಡ್ಡಪರಿಣಾಮಗಳಿವೆ. ಬೆನ್ನುಬಿಡದೇ ಕಾಡುವ ಮೈಗ್ರೇನ್‌ನ 10 ಲಕ್ಷಣಗಳು ಯಾವುದು?

ಇದಕ್ಕೆ ಉತ್ತಮ ಉಪಾಯವೆಂದರೆ ತಲೆನೋವು ಪ್ರಾರಂಭವಾಗುತ್ತಿದ್ದಂತೆಯೇ ವೈದ್ಯರು ನೀಡಿದ ಔಷಧಿಯನ್ನು ಸೇವಿಸಿ ಮಲಗಿಬಿಡುವುದು. ಇನ್ನೂ ಉತ್ತಮ ಎಂದರೆ ಮನೆಮದ್ದು ಸೇವಿಸಿ ನಿಧಾನಕ್ಕೆ ದೇಹವೇ ಈ ರೋಗದಿಂದ ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಮನೆಮದ್ದುಗಳಲ್ಲಿ ಮೈಗ್ರೇನ್‌ಗಾಗಿ ಹಲವು ಉಪಾಯಗಳಿವೆ. ಇವುಗಳಲ್ಲಿ ಹಸಿರು ಚಹಾ ಸೇವನೆಯೂ ಒಂದು.

ಪೂರಕವಾಗಿ ದಾಲ್ಚಿನ್ನಿ ಪುಡಿ ಸೇರಿಸಿದ ಟೀ ಅಥವಾ ಶುಂಠಿ ಸೇರಿಸಿದ ಚಹಾ ಸಹಾ ಮೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಬನ್ನಿ ಮೈಗ್ರೇನ್‌ಗೆ ಉತ್ತಮವಾದ ಚಹಾಗಳ ಬಗೆಗಿನ ವಿವರಗಳನ್ನು ಈ ಸ್ಲೈಡ್ ಶೋ ಮೂಲಕ ನೋಡಿರಿ..

ಹಸಿರು ಚಹಾ

ಹಸಿರು ಚಹಾ

ಹಸಿರು ಚಹಾ (ಗ್ರೀನ್ ಟೀ) ಯಲ್ಲಿ ಒಂದು ನಿರ್ಧಾರಿತ ಪ್ರಮಾಣದ ಕೆಫೀನ್ ಇದ್ದು ಇದು ಎಲ್ಲಾ ತರಹದ ತಲೆನೋವುಗಳನ್ನು ನಿವಾರಿಸಲು ಅತ್ಯಂತ ಸೂಕ್ತವಾದ ಪ್ರಮಾಣವಾಗಿದೆ. ಹಸಿರು ಟೀಯಲ್ಲಿ ಹಾಲಿಲ್ಲದೇ ಕೊಂಚವೇ ಸಕ್ಕರೆ ಸೇರಿಸಿ ಕುಡಿಯಬಹುದು ಅಥವಾ ಕೊಂಚ ಲಿಂಬೆರಸ ಸೇರಿಸುವುದರಿಂದ ರುಚಿ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆಯೂ ಹೆಚ್ಚುತ್ತದೆ.

ಹಸಿಶುಂಠಿ ಸೇರಿಸಿದ ಚಹಾ

ಹಸಿಶುಂಠಿ ಸೇರಿಸಿದ ಚಹಾ

ಹಸಿಶುಂಠಿಯನ್ನು ಜಜ್ಜಿ ಹಣೆಗೆ ತೆಳುವಾಗಿ ಹಚ್ಚುವುದರಿಂದಲೂ ತಲೆನೋವು ಕಡಿಮೆಯಾಗುತ್ತದೆ. ಮೈಗ್ರೇನ್ ತಲೆನೋವಿಗೆ ಶುಂಠಿಯಲ್ಲಿರುವ prostaglandins ಎಂಬ ರಾಸಾಯನಿಕ ಅತ್ಯುತ್ತಮ ಶಮನಕಾರಕವಾಗಿದೆ. ಇದು ರಕ್ತದ ಮೂಲಕ ಮೆದುಳಿನ ಬಳಿ ತಲುಪಿ ಅಲ್ಲಿ ಮೈಗ್ರೇನ್ ತಲೆನೋವಿಗೆ ಕಾರಣವಾದ ನರಗಳ ಊತ ಮತ್ತು ಉರಿಯನ್ನು ಶಮನಗೊಳಿಸಿ ತಲೆನೋವು ಕಡಿಮೆಯಾಗಲು ನೆರವಾಗುತ್ತದೆ. ಆದರೆ ಗರ್ಭಿಣಿಯರಿಗೆ ಈ ಚಹಾ ಸರ್ವಥಾ ಕೂಡದು, ಏಕೆಂದರೆ ಹಸಿಶುಂಠಿಯ ಚಹಾ ಸೇವನೆ ಗರ್ಭಾಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕ್ಯಾಮೋಮೈಲ್ ಹೂದಳಗಳ ಚಹಾ

ಕ್ಯಾಮೋಮೈಲ್ ಹೂದಳಗಳ ಚಹಾ

ಕ್ಯಾಮೋಮೈಲ್ ಎಂಬ ಹಳದಿ ಹೂಗಳ ದಳಗಳನ್ನು ಒಣಗಿಸಿ ಮಾಡಿದ ಟೀ ಸಹಾ ಮೈಗ್ರೇನ್ ತಲೆನೋವಿಗೆ ಉತ್ತಮ ಶಮನ ನೀಡಬಲ್ಲುದು. ಇದರ ವಿಶೇಷತೆ ಏನೆಂದರೆ ತಲೆನೋವು ಉಗ್ರ ರೂಪ ತಾಳಿದ ಬಳಿಕ ಸೇವಿಸಿದರೂ ಇದು ಪರಿಣಾಮಕಾರಿಯಾಗಿದೆ. ಸುಮಾರು ಅರ್ಧಗಂಟೆಯಲ್ಲಿಯೇ ಇದು ತಲೆನೋವಿನಿಂದ ಸಾಕಷ್ಟು ಶಮನ ನೀಡುತ್ತದೆ.

ಲಿಂಬೆಯ ಚಹಾ

ಲಿಂಬೆಯ ಚಹಾ

ಲಿಂಬೆಹಣ್ಣಿನ ರಸ ಸೇರಿಸಿದ ಚಹಾ ಸಹಾ ಮೈಗ್ರೇನ್ ತಲೆನೋವಿಗೆ ಉತ್ತಮ ಪರಿಹಾರವಾಗಿದೆ. ಇದಕ್ಕಾಗಿ ನಿಮ್ಮ ನೆಚ್ಚಿನ ಯಾವುದೇ ಚಹಾಪುಡಿಯಿಂದ ಹಾಲಿಲ್ಲದ ಟೀ ತಯಾರಿಸಿ ಪ್ರತಿ ಕಪ್ ಗೆ ಈಗ ತಾನೇ ತುಂಡರಿಸಿದ ಲಿಂಬೆಹಣ್ಣಿನ ಎರಡು ಮೂರು ಹನಿಗಳನ್ನು ಹಾಕಿ. ತಡಮಾಡದೇ ಹೀರುತ್ತಾ ಪೂರ್ಣಪ್ರಮಾಣವನ್ನು ಖಾಲಿಮಾಡಿ. ಈ ಚಹಾ ಸಹಾ ತಲೆನೋವು ಉಗ್ರರೂಪ ತಳೆದಿದ್ದಾಗಲೂ ಕುಡಿಯಬಹುದಾದ ಪೇಯವಾಗಿದೆ.

ರೋಸ್ಮರಿ ಚಹಾ

ರೋಸ್ಮರಿ ಚಹಾ

ರೋಸ್ಮರಿ ಎಂಬ ಹೂವುಗಳ ದಳಗಳನ್ನು ಒಣಗಿಸಿ ಮಾಡಿದ ಚಹಾ ಸಹಾ ಮೈಗ್ರೇನ್ ಗೆ ಉತ್ತಮ ಪರಿಹಾರವಾಗಿದೆ. ಈ ಹೂವಿನ ದಳಗಳನ್ನು ಹಿಂಡಿ ತೆಗೆದ ಎಸೆನ್ಸ್ ಸಹಾ ಮಾರುಕಟ್ಟೆಯಲ್ಲಿ ದೊರಕುತ್ತದೆ. ನಿಮ್ಮ ನೆಚ್ಚಿನ ಚಹಾಪುಡಿಯಿಂದ ತಯಾರಿಸಿದ ಹಾಲಿಲ್ಲದ ಚಹಾಕ್ಕೆ ನಾಲ್ಕೈದು ಹನಿಗಳನ್ನು ಸೇರಿಸಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಹಾಗೂ ಜೀರ್ಣಗೊಳ್ಳಲು ಶೇಖರಗೊಂಡಿದ್ದ ಕೊಬ್ಬನ್ನು ಬಳಸುವ ಕಾರಣ ತೂಕ ಇಳಿಸುವವರಿಗೂ ಅತ್ಯುತ್ತಮವಾದ ಪೇಯವಾಗಿದೆ.

ಪುದಿನಾ ಎಲೆಗಳ ಚಹಾ

ಪುದಿನಾ ಎಲೆಗಳ ಚಹಾ

ನಿಮ್ಮ ನೆಚ್ಚಿನ ಟೀಪುಡಿಯಿಂದ ತಯಾರಿಸಿದ ಹಾಲಿಲ್ಲದ ಕಪ್ಪು ಚಹಾವನ್ನು ಒಲೆಯಲ್ಲಿದ್ದಾಗಲೇ ಚಹಾಪುಡಿ ಸೋಸಿ ತೆಗೆದು ಮತ್ತೆ ಪಾತ್ರೆಗೆ ಹಾಕಿ ಕೆಲವು ಪುದಿನಾ ಎಲೆಗಳನ್ನು (ಒಂದು ಕಪ್ ಗೆ ಸುಮಾರು ಮೂರು ಎಲೆಗಳು) ಹಾಕಿ ಸುಮಾರು ಐದರಿಂದ ಹತ್ತು ನಿಮಿಷ ಅತಿಕದಿಮೆ ಉರಿಯಲ್ಲಿ ಬೇಯಲು ಬಿಡಿ. ಬಳಿಕ ಬಿಸಿಬಿಸಿಯಿದ್ದಂತೆಯೇ ಕುಡಿಯಿರಿ. ಎಲೆಗಳು ದೊಡ್ಡದಿದ್ದರೆ ಕೊಂಚ ಹಿಸುಕಿ ಹಾಕುವುದರಿಂದ ಹೆಚ್ಚಿನ ಪರಿಮಳ ಮತ್ತು ಸ್ವಾದ ದೊರಕುತ್ತದೆ.

ದಾಲ್ಚಿನ್ನಿ ಪುಡಿ ಸೇರಿಸಿದ ಚಹಾ

ದಾಲ್ಚಿನ್ನಿ ಪುಡಿ ಸೇರಿಸಿದ ಚಹಾ

ಚಹಾಕ್ಕೆ ಸ್ವಲ್ಪ ಪ್ರಮಾಣದಲ್ಲಿ ದಾಲ್ಚಿನ್ನಿ ಪುಡಿ ಸೇರಿಸಿ ಕುಡಿಯುವುದರಿಂದಲೂ ಮೈಗ್ರೇನ್ ತಲೆನೋವು ಕೊಂಚ ಶಮನ ಪಡೆಯಬಹುದು

English summary

Teas That Help With Migraines

When you wake up to a gruesome headache it feels like the whole world is tearing apart. Though there are several medications to treat these painful headaches especially migraines, it is always best to turn to home remedies. The teas that help with migraine are green tea, spicy cinnamon tea and of course, ginger tea. here are some of the best home remedies to drive the pain away
X
Desktop Bottom Promotion