For Quick Alerts
ALLOW NOTIFICATIONS  
For Daily Alerts

ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ

|

ಕಟು ವಾಸನೆಯಿಂದ ಕೂಡಿದ ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಸಣ್ಣ ಪುಟ್ಟ ಕಾಯಿಲೆಗಳಿಗೆ ಹಿಂದಿನ ಕಾಲದಿಂದಲು ಸಹ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಹಲವಾರು ಆಹಾರಗಳಿಗೆ ರುಚಿಯನ್ನು ನೀಡಲು ಬಳಸಲಾಗುತ್ತದೆ. ಬೆಳ್ಳುಳ್ಳಿಯಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇರುತ್ತವೆ.

ಇದರಲ್ಲಿ ಜ್ವರ, ಕೆಮ್ಮು, ಶೀತ, ಹೊಟ್ಟೆನೋವು, ತಲೆ ನೋವು, ಸಿನುಸಿಟಿಸ್, ಉಸಿರಾಟದ ಸಮಸ್ಯೆಗಳು, ಕಡಿಮೆ ರಕ್ತದೊತ್ತಡ, ಅಧಿಕ ರಕ್ತದೊತ್ತಡ, ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ, ರಕ್ತದಲ್ಲಿ ಕಡಿಮೆ ರಕ್ತದ ಪ್ರಮಾಣ, ಅಧಿಕ ಕೊಲೆಸ್ಟ್ರಾಲ್ ಮತ್ತು ಹಾವಿನ ಕಡಿತವನ್ನು ಸಹ ವಾಸಿ ಮಾಡುವಂತಹ ಅಂಶಗಳು ಇವೆಯೆಂದು ಅಧ್ಯಯನಗಳು ಖಚಿತಪಡಿಸಿವೆ

ಇದರ ಜೊತೆಗೆ ಬೆಳ್ಳುಳ್ಳಿಯಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ. ಕೋಲನ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರೆಕ್ಟಲ್ ಕ್ಯಾನ್ಸರ್, ಪ್ರೋಸ್ಟೇಟ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಮೂತ್ರಾಶಯದ ಕ್ಯಾನ್ಸರ್ ಮುಂತಾದ ಕ್ಯಾನ್ಸರ್‌ಗಳನ್ನು ಸಹ ಬೆಳ್ಳುಳ್ಳಿಯಿಂದ ನಿವಾರಿಸಿಕೊಳ್ಳಬಹುದು ಮತ್ತು ನಿಯಂತ್ರಿಸಬಹುದು. ಬೆಳ್ಳುಳ್ಳಿಯಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳಿಗೆ ಮಿತಿಯೇ ಇಲ್ಲ. ಇದು ಒತ್ತಡ ಮತ್ತು ಸುಸ್ತನ್ನು ಸಹ ನಿವಾರಿಸುತ್ತದೆ. ಇದರಲ್ಲಿರುವ ಶಿಲೀಂಧ್ರ ನಿರೋಧಕ ಗುಣವು ಇದನ್ನು ಅತ್ಯುತ್ತಮ ಶಿಲೀಂಧ್ರ ನಿರೋಧಕ ಔಷಧಿಯನ್ನಾಗಿ ಮಾಡಿದೆ.

ಹೀಗೆ ಬೆಳ್ಳುಳ್ಳಿಯ ಪ್ರಯೋಜನಗಳು ಹಲವಾರಿದ್ದರು, ಅದನ್ನು ನಾವು ಅತಿ ಹೆಚ್ಚಾಗಿ ಬಳಸುವುದು ಮಾತ್ರ ನೆಗಡಿ ಅಥವಾ ಶೀತಕ್ಕೆ. ಸಾಮಾನ್ಯವಾಗಿ ವಯಸ್ಕರು ವರ್ಷದಲ್ಲಿ 3-4 ಬಾರಿ ಶೀತದಿಂದ ನರಳುತ್ತಾರೆ. ಮಕ್ಕಳಲ್ಲಿ ಈ ಸಂಖ್ಯೆ ಹೆಚ್ಚಾಗಿರುತ್ತದೆ. ಆದ್ದರಿಂದ ಇದಕ್ಕಾಗಿ ಮನೆಯಲ್ಲಿ ಒಂದು ಮನೆ ಮದ್ದನ್ನು ಅತ್ಯಗತ್ಯವಾಗಿ ಇರಿಸಿಕೊಳ್ಳಬೇಕಾಗುತ್ತದೆ. ಬೆಳ್ಳುಳ್ಳಿಯು ಒಂದು ಸ್ವಾಭಾವಿಕವಾದ ಔಷಧಿಯಾಗಿರುತ್ತದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಇರುವುದು, ಇದರ ಹೆಗ್ಗಳಿಕೆ. ಆದ್ದರಿಂದ ಇದನ್ನು ಸರಿಯಾಗಿ ಬಳಸಿದಲ್ಲಿ, ಸಾಮಾನ್ಯ ಶೀತವನ್ನು ಇದರಿಂದ ಗುಣಪಡಿಸಿಕೊಳ್ಳಬಹುದು. ಬನ್ನಿ ಅದನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೋಣ. ಆರೋಗ್ಯದ ಆಗರ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ ನೋಡಿ!

Health Benefits Of Garlic For Cold

ಕಚ್ಚಾ ಬೆಳ್ಳುಳ್ಳಿ
ಕಚ್ಛಾ ಬೆಳ್ಳುಳ್ಳಿಯ ಒಂದು ತುಣುಕನ್ನು 3-4 ಗಂಟೆಗಳಿಗೊಮ್ಮೆ ಹಾಗೆಯೇ ಸೇವಿಸುವುದರಿಂದ, ಸುಲಭವಾಗಿ ಶೀತವನ್ನು ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿರುವ ವೈರಸ್ ನಿರೋಧಕ ಅಂಶಗಳು, ಶೀತವನ್ನು ದೂರ ಮಾಡುತ್ತವೆ. ನಿಮಗೆ ಹಾಗೆಯೇ ಸೇವಿಸಲು ಕಷ್ಟವಾದಲ್ಲಿ, ಇದನ್ನು ಜಜ್ಜಿ, ಜೇನು ತುಪ್ಪದ ಜೊತೆಗೆ ಸೇವಿಸಬಹುದು.

ಬೆಳ್ಳುಳ್ಳಿ ಮತ್ತು ಲಿಂಬೆರಸ
ಬೆಳ್ಳುಳ್ಳಿ ಮತ್ತು ಲಿಂಬೆರಸದ ಮಿಶ್ರಣವು ಶೀತಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಇದು ನಿಮ್ಮ ದೇಹವನ್ನು ಟಾಕ್ಸಿನ್‌ಗಳಿಂದ ಮುಕ್ತಗೊಳಿಸುತ್ತದೆ ಮತ್ತು ನಿಮ್ಮನ್ನು ಇತರೆ ಇನ್‍ಫೆಕ್ಷನ್‌ಗಳಿಗೆ ಗುರಿಯಾಗದಂತೆ ತಡೆಯುತ್ತವೆ. ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದಲ್ಲಿ, ಈ ಚಿಕಿತ್ಸೆಯು ಚೆನ್ನಾಗಿ ಕೆಲಸ ಮಾಡುತ್ತದೆ.


ಇದಕ್ಕಾಗಿ ಒಂದು ಲಿಂಬೆಹಣ್ಣನ್ನು ತೆಗೆದುಕೊಂಡು, ಅದನ್ನು ಎರಡು ಭಾಗಗಳಾಗಿ ಕತ್ತರಿಸಿಕೊಳ್ಳಿ. ನಂತರ ಅದರಿಂದ ರಸವನ್ನು ಹಿಂಡಿಕೊಳ್ಳಿ. ಜೊತೆಗೆ ಈ ಲಿಂಬೆಹಣ್ಣನ್ನು ಸಹ ಆ ರಸದಲ್ಲಿ ಅದ್ದಿ. ಅದರ ತಿರುಳಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಆ ರಸಕ್ಕೆ ವರ್ಗಾವಣೆಯಾಗುತ್ತದೆ. ಈಗ ಇದಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ. ಲಿಂಬೆ ಬೀಜ ಮತ್ತು ಸಿಪ್ಪೆಯನ್ನು ಶೋಧಿಸಿ ತೆಗೆಯಿರಿ. ಈಗ ಈ ಲಿಂಬೆ ರಸಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸವನ್ನು ಸೇರಿಸಿ, ನಂತರ ಸೇವಿಸಿ.

ಬೆಳ್ಳುಳ್ಳಿ ಮತ್ತು ಕಿತ್ತಳೆ ರಸ


ಶೀತವನ್ನು ನಿವಾರಿಸಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಬೆಳ್ಳುಳ್ಳಿ ಮತ್ತು ಕಿತ್ತಳೆ ರಸದ ಔಷಧಿಯು ಸಹ ಒಂದು. ಬೆಳ್ಳುಳ್ಳಿಯ 4-5 ತುಣುಕುಗಳನ್ನು ತೆಗೆದುಕೊಳ್ಳಿ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. 15 ನಿಮಿಷ ಬಿಡಿ. ಈಗ ಬೆಳ್ಳುಳ್ಳಿಗಳನ್ನು ತೆಗೆದುಕೊಂಡು, ಕಿತ್ತಳೆ ರಸದ ಸಹಾಯದೊಂದಿಗೆ ಅದನ್ನು ನುಂಗಿ. ನಿಮಗೆ ಶೀತ ಬಂದಿರುವ ಸೂಚನೆ ಸಿಕ್ಕ ಕೂಡಲೆ ಈ ಚಿಕಿತ್ಸೆಯನ್ನು ಆರಂಭಿಸಿ. ಇದು ಶೀತವನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಕನಿಷ್ಠ ಪಕ್ಷ ಶೀತ ಅಧಿಕಗೊಳ್ಳುವುದರಿಂದಲಾದರು ಇದರಿಂದ ತಡೆಯಬಹುದು. ಈ ಚಿಕಿತ್ಸೆಯನ್ನು ಒಂದೆರಡು ದಿನ ಮಲಗುವ ಮೊದಲು ತೆಗೆದುಕೊಳ್ಳಿ.

ಬೆಳ್ಳುಳ್ಳಿ ಮತ್ತು ಸೂಪ್‍ಗಳು


ಸ್ವಲ್ಪ ಜಜ್ಜಿದ ಬೆಳ್ಳುಳ್ಳಿ ತುಂಡುಗಳನ್ನು ಸೂಪ್ ಮಾಡಿಕೊಂಡು ಸೇವಿಸುವುದರಿಂದ ಶೀತವನ್ನು ನಿವಾರಿಸಿಕೊಳ್ಳಬಹುದು. ಈ ರೆಸಿಪಿಯು ಶೀತದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
English summary

Surprising Health Benefits of Garlic

Garlic is a pungent food that has been traditionally used to cure many ailments. It is a herb and used in many foods as a flavouring agent. The garlic cloves are found to have many medicinal properties. he health uses of garlic are unlimited and it is an excellent stress and fatigue reliever. The antifungal properties in it makes it an ideal medicine for fungal infections. 
X
Desktop Bottom Promotion