For Quick Alerts
ALLOW NOTIFICATIONS  
For Daily Alerts

ಪ್ರತಿ ಕ್ಷಣ ಕ್ಷಣವೂ ಲವಲವಿಕೆಯಿಂದ ಇರುವುದು ಹೇಗೆ?

|

ಆರೋಗ್ಯವರ್ಧನೆಗಾಗಿ ದೇಹ ಫಿಟ್ ಆಗಿರುವುದು ಬಹಳ ಮುಖ್ಯ. ಇದರಿಂದಾಗಿ ಹೊರಗಡೆ ನೀವು ಬೆರೆತಾಗ ನಿಮ್ಮನ್ನು ಎಲ್ಲರು ಗುರುತಿಸುವಂತಾಗುವುದೂ ಎಲ್ಲರ ಆಶಯವಾಗಿರುತ್ತದೆ. ಇಂದಿನ ಕಾಲದಲ್ಲಿ ಕಷ್ಟ ಪಟ್ಟು ದುಡಿಯುವ ವರ್ಗ ಬಹಳ ಕಡಿಮೆ ಹಾಗಾಗಿ ಮೈಕಟ್ಟು ಬೆಳೆಯಬೇಕಾದರೆ ನೈಸರ್ಗಿಕವಾದ ಯಾವುದೇ ಮಾರ್ಗಗಳಿಲ್ಲ...

ನಮಗೆಲ್ಲರಿಗು ತಿಳಿದಿರುವಂತೆ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಆಯುಸ್ಸನ್ನು ಸಹ ಹೆಚ್ಚಿಸುತ್ತವೆ. ಒಂದು ವೇಳೆ ನಿಮಗೆ ವ್ಯಾಯಾಮ ಮಾಡಲು ಕಷ್ಟವಾದರೆ, ನಾವು ಕೆಳಗೆ ಸೂಚಿಸಿರುವ ಕೆಲವೊಂದು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇವುಗಳಿಗಾಗಿ ನೀವೇನು ವಿಶೇಷವಾದ ಸಮಯವನ್ನು ಮೀಸಲಿಡ ಬೇಕಾದ ಅಗತ್ಯವಿಲ್ಲ. ಇವುಗಳನ್ನು ಮಾಡುವುದರಿಂದ ನಿಮಗೆ ಮುಂದೆ ಅಪಾಯವನ್ನುಂಟು ಮಾಡುವ ಕಾಯಿಲೆಗಳು ಬರದಂತೆ ತಡೆಯಬಹುದು. ಲವಲವಿಕೆಯಿಂದ ಇರುವಂತೆ ಮಾಡುವ ಸುಲಭ ಉಪಾಯಗಳು

ಲಘು ವ್ಯಾಯಾಮ ಮಾಡಿ

simple ways to become more physically active

ಲಘು ವ್ಯಾಯಾಮವು ನಿಮ್ಮನ್ನು ಲವಲವಿಕೆಯಿಂದ ಇರುವಂತೆ ಮಾಡಲು ಉಪಯೋಗಕಾರಿ. ಕತ್ತು ತಿರುಗಿಸುವುದು, ಉಠ್ ಬೈಸ್ ಹೊಡೆಯುವುದು, ಒತ್ತಡ ನಿವಾರಕ ಲಘು ವ್ಯಾಯಾಮಗಳು ದಿನಪೂರ್ತಿ ನಿಮ್ಮಲ್ಲಿ ಲವಲವಿಕೆಯನ್ನು ತುಂಬುತ್ತವೆ.

ಸ್ನಾನಕ್ಕೆ ಬಕೆಟ್ ಬಳಸಿ


ಇದು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು, ಆದರೂ ನಿಜ. ಶವರ್ ಕೆಳಗೆ ನಿಂತು ಸ್ನಾನ ಮಾಡುವ ಬದಲು, ಬಕೆಟ್‍ನಲ್ಲಿ ಸ್ನಾನ ಮಾಡಿ. ಇದರಿಂದ ಬಗ್ಗಿ-ನಿಂತು ನಿಮ್ಮಲ್ಲಿರುವ ಕೆಲವು ಕ್ಯಾಲೋರಿಗಳು ಕರಗುತ್ತವೆ. ಸ್ನಾನ ಮಾಡುವಾಗ ನಿರಂತರವಾಗಿ ಬಗ್ಗಿ -ಏಳುವುದರಿಂದಾಗಿ ನಿಮ್ಮ ಕೈಗಳಿಗೆ ಮತ್ತು ಸೊಂಟಕ್ಕೆ ಒಳ್ಳೆಯ ವ್ಯಾಯಾಮ ದೊರೆಯುತ್ತದೆ.

ಮನೆಯಲ್ಲಿ ಕೈತೋಟ ಮಾಡಿ
ನಿಮಗೆ ಆಟವಾಡಲು ಇಷ್ಟವಿಲ್ಲದಿದ್ದರೆ, ಕೈತೋಟವನ್ನು ಮಾಡಿ. ತೋಟಗಾರಿಕೆಯು ಮನಸ್ಸಿಗೆ ಮುದ ನೀಡುವಂತಹ ಒಂದು ಚಟುವಟಿಕೆಯಾಗಿರುತ್ತದೆ. ಈ ಚಟುವಟಿಕೆಯಲ್ಲಿ ಕಳೆ ಕೀಳುವುದು, ಅಗೆಯುವುದು ಮುಂತಾದ ಕೆಲಸ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರೆತು, ಅವು ಉತ್ತಮ ರೂಪವನ್ನು ಪಡೆದುಕೊಳ್ಳುತ್ತವೆ.

ಚೆನ್ನಾಗಿ ನೀರು ಸೇವಿಸಿ


ಚೆನ್ನಾಗಿ ನೀರನ್ನು ಸೇವಿಸುವುದರಿಂದ ನಿಮ್ಮ ಮೂತ್ರಾ ಪಿಂಡಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಆಗಾಗ ಎದ್ದು, ಮೂತ್ರ ವಿಸರ್ಜನೆಗೆ ಹೋಗುವುದರಿಂದ ಸಹ ನಿಮ್ಮ ಜಡತ್ವವನ್ನು ತೊಲಗಿಸಬಹುದು.

ಮನೆ ಸಾಮಾನು ಖರೀದಿಸಲು ನೀವೇ ಹೋಗಿ


ಮನೆಗೆ ತಂದು ನೀಡುವ ಹೋಮ್ ಡೆಲಿವರಿಗಳನ್ನು ಬಿಟ್ಟು ಬಿಡಿ. ಬದಲಿಗೆ ನೀವೇ ನಿಮ್ಮ ಮನೆಗೆ ಅಗತ್ಯವಾದ ಸಾಮಾನುಗಳನ್ನು ತರಲು ಮಾರ್ಕೆಟಿಗೆ ಹೋಗಿ. ಇದರಿಂದಾಗಿ ನಡೆಯುವುದು, ಭಾರ ಹೊರುವುದು ಮುಂತಾದ ಚಟುವಟಿಕೆಗಳಿಂದಾಗಿ ನಿಮ್ಮ ದೇಹಕ್ಕೆ ಸ್ವಲ್ಪ ವ್ಯಾಯಾಮವು ದೊರೆಯುತ್ತದೆ. ನಿಮ್ಮ ಮನೆಗ್ ಉತ್ತಮವಾದ ವಸ್ತುಗಳು ದೊರೆಯುತ್ತವೆ.

ಫಿಟ್‍ನೆಸ್ ತರಗತಿಗಳಿಗೆ ಸೇರಿಕೊಳ್ಳಿ


ನಿಮ್ಮ ಮನಸ್ಸು ಮತ್ತು ದೇಹಕ್ಕೆ ಒಳ್ಳೆಯದಾಗುತ್ತದೆಯೆಂದಾದಲ್ಲಿ ಏನಾದರು ಒಂದು ಹೊಸತನ್ನು ಪ್ರಾರಂಭಿಸಿ. ಬಿಡುವಿದ್ದಾಗ ಝುಂಬಾ, ಯೋಗ ಅಥವಾ ಇನ್ನಿತರ ನೃತ್ಯ ತರಗತಿಗಳಂತಹ ಫಿಟ್‍ನೆಸ್ ತರಗತಿಗಳಿಗೆ ಸೇರಿಕೊಳ್ಳಿ. ಹೊಸ ಕೌಶಲ್ಯವನ್ನು ಕಲಿತಂತೆಯು ಆಗುತ್ತದೆ. ದೇಹಕ್ಕೆ ವ್ಯಾಯಾಮವು ದೊರೆಯುತ್ತದೆ.
English summary

simple ways to become more physically active

Try these ideas for fitting more activity into your day—and for getting more out of your daily activities. have a look
Story first published: Thursday, January 29, 2015, 19:44 [IST]
X
Desktop Bottom Promotion