For Quick Alerts
ALLOW NOTIFICATIONS  
For Daily Alerts

ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

|

ನಮ್ಮ ದೇಹದ ಅತ್ಯಂತ ದೊಡ್ಡ ಅಂಗವೆಂದರೆ ಯಕೃತ್ (liver). ಅಥವಾ ಪಿತ್ತಜನಕಾಂಗ ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲಿ ಇತರ ಅಂಗಗಳಂತೆಯೇ ಪ್ರತ್ಯೇಕವಾದ ಪಾತ್ರ ವಹಿಸುತ್ತದೆ. ಯಕೃತ್‌ಗೆ ಇತರ ಅಂಗಗಳಂತೆ ಒಂದೇ ಕಾರ್ಯವಿರದೇ ಹಲವು ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

ಇದರಲ್ಲಿ ಪ್ರಮುಖ ಕಾರ್ಯವೆಂದರೆ ಜೀರ್ಣಾಂಗಗಳಿಂದ ಲಭ್ಯವಾದ ರಕ್ತವನ್ನು ಶೋಧಿಸಿ ವಿಷಕಾರಿ ವಸ್ತುಗಳನ್ನು ಹೊರಹಾಕುವುದು. ಇನ್ನೊಂದು ಕಾರ್ಯವೆಂದರೆ ಬೈಲ್ ಎಂಬ ರಸವನ್ನು ಸ್ರವಿಸಿ ಸಣ್ಣಕರುಳಿನಲ್ಲಿ ಕೊಬ್ಬನ್ನು ಒಡೆಯುವ ಮೂಲಕ ಪಚನಕ್ರಿಯೆಯನ್ನು ಚುರುಕುಗೊಳಿಸುವುದು. ಮತ್ತೊಂದು ಮುಖ್ಯ ಕಾರ್ಯವೆಂದರೆ ರಕ್ತ ಹೆಪ್ಪುಗಟ್ಟಲು ಅಗತ್ಯವಿರುವ ಪ್ರೋಟೀನುಗಳನ್ನು ಉತ್ಪಾದಿಸುವುದು.

ಅಪಾಯಕರವಾದ ವಿಷವಸ್ತುಗಳೇನಾದರೂ ಸೇವಿಸಿದರೆ ಈ ಯಕೃತ್ತೇ ಇದರ ಪ್ರಭಾವವನ್ನು ಕಡಿಮೆಗೊಳಿಸಲು ಯತ್ನಿಸುತ್ತದೆ. ಆದ್ದರಿಂದಲೇ ಮದ್ಯದ ಪ್ರಭಾವದಿಂದ ಯಕೃತ್ ಅತಿ ಹೆಚ್ಚಾಗಿ ಹಾಳಾಗುತ್ತದೆ. ಯಕೃತ್‌ನ ಒಂದು ಅದ್ಭುತ ಗುಣವೆಂದರೆ ಇದರ ಒಂದು ಭಾಗವನ್ನು ಕತ್ತರಿಸಿದರೆ ಮತ್ತೆ ಬೆಳೆಯುವ ಸಾಮರ್ಥ್ಯ. ಇದು ಯಕೃತ್ ವೈಫಲ್ಯದಿಂದ ಬಳಲುವವರಿಗೆ ವರದಾನವಾಗಿದೆ. ಅಪಾಯಕಾರಿ ಲಿವರ್ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

ಯಕೃತ್‌ನ ಇನ್ನೊಂದು ಗುಣವೆಂದರೆ ವಿಷಗಳನ್ನು ಸೇವಿಸುತ್ತಾ ಮೊದಮೊದಲು ಘಾಸಿಗೊಂಡರೂ ಇದರ ಬಗ್ಗೆ ಯಾವುದೇ ಸೂಚನೆ ಕೊಡದೇ ಸಂಪೂರ್ಣವಾಗಿ ಕೆಟ್ಟ ಬಳಿಕವೇ ಏಕಾಏಕಿ ಸ್ತಬ್ಧವಾಗುತ್ತದೆ. ಆದರೆ ಯಕೃತ್ ಯಾವುದೋ ತೊಂದರೆಯಿಂದ ಬಳಲುತ್ತಿದೆ ಎಂದು ದೇಹ ಇತರ ಸೂಚನೆಗಳ ಮೂಲಕ ನಮ್ಮನ್ನು ಎಚ್ಚರಿಸುತ್ತದೆ. ಕೊಂಚ ಸೂಕ್ಷ್ಮವಾಗಿ ಗಮನಿಸಿದರೆ ಈ ಸೂಚನೆಗಳನ್ನು ಸ್ಪಷ್ಟವಾಗಿ ಗಮನಿಸಬಹುದು. ಕೆಳಗಿನ ಸ್ಲೈಡ್ ಶೋ ಈ ಸೂಚನೆಗಳ ಬಗ್ಗೆ ಅಮೂಲ್ಯ ಮಾಹಿತಿಗಳನ್ನು ನೀಡುತ್ತಿದೆ. ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್

Liver Fibrosis (ಯಕೃತ್ ಪ್ರಾಥಮಿಕ ವೈಫಲ್ಯ)-ಕಾಲು ಊದುವುದು

Liver Fibrosis (ಯಕೃತ್ ಪ್ರಾಥಮಿಕ ವೈಫಲ್ಯ)-ಕಾಲು ಊದುವುದು

ಯಕೃತ್ ವೈಫಲ್ಯದಿಂದ ಮೊದಮೊದಲು ಯಾವುದೇ ಸೂಚನೆ ದೊರಕದು. ಆದರೆ ಕೊಂಚ ಹೆಚ್ಚಿನ ಹಾನಿಯುಂಟಾಗುತ್ತಿದ್ದಂತೆಯೇ ಕಾಲುಗಳ ಕೆಳಭಾಗ (ಅಂದರೆ ಪಾದಗಳ ಮೇಲೆ, ಮೊಣಕಾಲುಗಳ ಕೆಳಭಾಗ) ಕೊಂಚ ನೀರು ತುಂಬಿಕೊಂಡಂತೆ ಊದಿಕೊಳ್ಳುತ್ತದೆ.

ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ

ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ

ಯಕೃತ್ ವೈಫಲ್ಯದಿಂದ ಮೊದಲಾಗಿ ಚರ್ಮ ಮತ್ತು ಕಣ್ಣುಗಳು ಪೇಲವ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕಾಮಾಲೆ ರೋಗದ ಲಕ್ಷಣವಾಗಿದ್ದು ಪಚನಾಂಗಗಳಲ್ಲಿ ಪಿತ್ತರಸ (ಬೈಲ್) ಎಂಬ ಸ್ರಾವ ಹೆಚ್ಚಾಗಿ ಸಂಗ್ರಹಗೊಂಡಿರುವುದು ಕಾರಣವಾಗಿದೆ.

ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ

ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ

Liver Cysts ಅಥವಾ ಯಕೃತ್ ಗಂಟುಗಳೇನಾದರೂ ಉಂಟಾದರೆ ಉಲ್ಬಣಗೊಳ್ಳುವವರೆಗೆ ಯಾವುದೇ ಸೂಚನೆ ಕಂಡುಬರುವುದಿಲ್ಲ. ಆದರೆ ಉಲ್ಬಣಗೊಳ್ಳುತ್ತಿರುವ ಸೂಚನೆಗಳು ಹೊಟ್ಟೆಯ ಮೇಲ್ಭಾಗದಲ್ಲಿ ನೋವಿನ ಮೂಲಕ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ಗಂಟುಗಳು ಒಡೆದು ಸ್ರಾವವಾದರೆ ಮಾತ್ರ ರೋಗಿಗೆ ಥಟ್ಟನೇ ತಡೆಯಲಾರದ ನೋವುಂಟಾಗುತ್ತದೆ.

ಹೆಪಟೈಟಿಸ್ ಕಾಣಿಸಿಕೊಳ್ಳುತ್ತದೆ

ಹೆಪಟೈಟಿಸ್ ಕಾಣಿಸಿಕೊಳ್ಳುತ್ತದೆ

ಕೆಲವೊಮ್ಮೆ ವೈರಸ್ಸುಗಳ ಧಾಳಿಯಿಂದ ಯಕೃತ್ ಪೀಡಿತವಾದರೆ ಹೆಪಟೈಟಿಸ್ ಎಂದು ಕರೆಯಲಾಗುತ್ತದೆ. ಇದು ಒಂದು ವಿಧದಲ್ಲಿ ದೇಹದಲ್ಲಿ ಪ್ರವೇಶವಾದ ವಿಷವಸ್ತುವಿಗೆ ದೇಹ ಉತ್ಪಾದಿಸುವ antibody ಅಥವಾ ಪ್ರತಿವಿಷವಾಗಿದೆ. ಮದ್ಯ ಕುಡಿಯುವವರಲ್ಲಿ ಈ ಸ್ಥಿತಿ ಹೆಚ್ಚಾಗಿ ಕಂಡುಬರುತ್ತದೆ. (ಅತ್ಯಂತ ಹೆಚ್ಚಾಗಿ ಹಾಳಾಗುವವರೆಗೂ ಯಕೃತ್ ಸೂಚನೆಯನ್ನು ನೀಡದೇ ಇರುವುದನ್ನೇ ಮದ್ಯಪಾನಿಗಳು ತಮ್ಮ ಸಾಮರ್ಥ್ಯ ಎಂದು ತಪ್ಪಾಗಿ ಅರ್ಥೈಸಿಕೊಂಡು ಹೆಚ್ಚು ಹೆಚ್ಚು ಮದ್ಯ ಕುಡಿಯುತ್ತ ಹೋಗುತ್ತಾರೆ) ಇದರ ಸೂಚನೆಗಳೆಂದರೆ ವಾಂತಿ, ಸುಸ್ತು, ಜ್ವರ, ತಲೆತಿರುಗುವಿಕೆ, ದೇಹದ ತಾಪಮಾನ ಕಡಿಮೆಯಾಗುವುದು ಮೊದಲಾದವು.

ಮದ್ಯದ ಪ್ರಭಾವ ಹೆಚ್ಚಾಗಿ ಗೊಂದಲ ಪ್ರಾರಂಭವಾಗುವುದು

ಮದ್ಯದ ಪ್ರಭಾವ ಹೆಚ್ಚಾಗಿ ಗೊಂದಲ ಪ್ರಾರಂಭವಾಗುವುದು

ಮದ್ಯದ ಪ್ರಭಾವದಿಂದ ಯಕೃತ್ ಬಹುತೇಕ ಹಾಳಾಗುತ್ತಿದ್ದಂತೆಯೇ ನಿಧಾನವಾಗಿ ಕೆಲವು ಸೂಚನೆಗಳನ್ನು ನೀಡುತ್ತದೆ. ಇದರಲ್ಲಿ ಪ್ರಮುಖವಾದುದು ಇಡಿಯ ದಿನ ಮಂಪರಿನಲ್ಲಿರುವುದು ಮತ್ತು ಗೊಂದಲದಲ್ಲಿರುವುದು. ಈ ಸೂಚನೆ ಬಂದ ಕೂಡಲೇ ಮದ್ಯವನ್ನು ಶಾಶ್ವತವಾಗಿ ತ್ಯಜಿಸುವುದೊಂದೇ ಇದಕ್ಕೆ ಉತ್ತರವಾಗಿದೆ.

ಪಿತ್ತೋದ್ರೇಕ ಅಥವಾ ಹೊಟ್ಟೆ ತೊಳಸುವಿಕೆ ಕಂಡುಬರುತ್ತದೆ

ಪಿತ್ತೋದ್ರೇಕ ಅಥವಾ ಹೊಟ್ಟೆ ತೊಳಸುವಿಕೆ ಕಂಡುಬರುತ್ತದೆ

ಯಕೃತ್ ಬಹುತೇಕ ವಿಫಲಗೊಳ್ಳುತ್ತಾ ಬರುತ್ತಿದ್ದಂತೆ ಪ್ರೊತ್ತೋದ್ರೇಕ ಅಥವಾ ಹೊಟ್ಟೆ ತೊಳೆಸುವಿಕೆ, ವಾಂತಿ ಬರುವಂತಾಗುವುದು (ವಾಂತಿ ಆಗುವುದಿಲ್ಲ) ಮೊದಲಾದ ತೊಂದರೆಗಳು ಕಂಡುಬರುತ್ತವೆ.ಈ ಸೂಚನೆ ಬಂದ ಕೂಡಲೇ ವ್ಯದ್ಯರಲ್ಲಿ ತಪಾಸಣೆಗೊಳಪಡುವುದು ಅತ್ಯಗತ್ಯವಾಗಿದೆ.

ಮೂತ್ರ ದಟ್ಟವಾಗುತ್ತದೆ

ಮೂತ್ರ ದಟ್ಟವಾಗುತ್ತದೆ

ಯಕೃತ್ ವೈಫಲ್ಯದ ಪ್ರಮುಖ ಸೂಚನೆಯಲ್ಲಿ ಮೂತ್ರದ ಬಣ್ಣ ದಟ್ಟವಾಗುವುದು ಪ್ರಾಥಮಿಕವಾಗಿದೆ. ಮೂತ್ರ ಅತಿ ಹಳದಿ ಬಣ್ಣದಲ್ಲಿರುತ್ತದೆ. ಮೂತ್ರ ಬಹಳ ಹೊತ್ತು ತಡೆದು ಹಿಡಿದಿಟ್ಟುಕೊಂಡಿದ್ದರೂ ಅತಿ ಹಳದಿಯಾಗುತ್ತದೆ. ಆದರೆ ಕೊಂಚ ಹೊತ್ತಿನ ಬಳಿಕದ ಮೂತ್ರ ತಿಳಿಯಾಗಿರುತ್ತದೆ. ಒಂದು ವೇಳೆ ಈಗಲೂ ಮೂತ್ರ ಅಷ್ಟೇ ದಟ್ಟವಾಗಿದ್ದು, ಮುಂದಿನ ಬಾರಿಯೂ ಹೀಗೇ ದಟ್ಟವಾಗಿದ್ದರೆ ಮಾತ್ರ ಯಕೃತ್ ವೈಫಲ್ಯದ ಸೂಚನೆಯಾಗಿದೆ. ವೈದ್ಯರಿಂದ ತಪಾಸಣೆ ಈಗ ಅಗತ್ಯವಾಗಿದೆ.

ಸುಸ್ತು ಆವರಿಸುತ್ತದೆ

ಸುಸ್ತು ಆವರಿಸುತ್ತದೆ

ಯಕೃತ್ ವೈಫಲ್ಯ ಕೊನೆ ಘಳಿಗೆಗೆ ಹತ್ತಿರಾಗುತ್ತಿದ್ದಂತೆಯೇ ವಿಪರೀತ ಸುಸ್ತು ಆವರಿಸುತ್ತದೆ. ಈ ಸುಸ್ತಿಗೆ ಯಕೃತ್ ವೈಫಲ್ಯವೇ ಸ್ಪಷ್ಟ ಕಾರಣವೆಂದು ವೈದ್ಯಕೀಯ ಪರೀಕ್ಷೆಯಿಂದಲೇ ಸ್ಪಷ್ಟಪಡಿಸಿಕೊಳ್ಳಲು ಸಾಧ್ಯ.

ಯಕೃತ್ ನಲ್ಲಿ ಕೊಬ್ಬು ತುಂಬಿಕೊಳ್ಳುವುದು (Fatty Liver)

ಯಕೃತ್ ನಲ್ಲಿ ಕೊಬ್ಬು ತುಂಬಿಕೊಳ್ಳುವುದು (Fatty Liver)

ನಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತಿದ್ದಂತೆಯೇ ಯಕೃತ್ ಸಹಾ ಕೊಬ್ಬಿನಿಂದ ತುಂಬಿಕೊಳ್ಳತೊಡಗುತ್ತದೆ. ಎಲ್ಲಿಯವರೆಗೆ ಈ ಪ್ರಮಾಣ ಯಕೃತ್ ನ ಭಾರದ ಶೇಖಡಾ ಹತ್ತಕ್ಕೆ ಮೀರುವುದಿಲ್ಲವೋ ಅಲ್ಲಿಯವರೆಗೆ ತೊಂದರೆಯಿಲ್ಲ. ಆದರೆ ಈ ಪ್ರಮಾಣ ಹೆಚ್ಚಾದರೆ ಯಕೃತ್ ನ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ಮುಂದೆ ಓದಿ

ಯಕೃತ್ ನಲ್ಲಿ ಕೊಬ್ಬು ತುಂಬಿಕೊಳ್ಳುವುದು (Fatty Liver)

ಯಕೃತ್ ನಲ್ಲಿ ಕೊಬ್ಬು ತುಂಬಿಕೊಳ್ಳುವುದು (Fatty Liver)

ಈ ಸ್ಥಿತಿಗೆ ಅನಿಯಮಿತ, ಅನಾರೋಗ್ಯಕರ ಆಹಾರ ಸೇವನೆ, ದೇಹ ಸ್ಥೂಲವಾಗುವುದು, ವ್ಯಾಯಾಮ ಇಲ್ಲದಿರುವುದು ಕಾರಣವಾಗಿವೆ. ಕೆಲವೊಮ್ಮೆ ಗರ್ಭಿಣಿಯರಿಗೂ ತಾತ್ಕಾಲಿಕವಾಗಿ ಈ ಸ್ಥಿತಿ ತಲೆದೋರಬಹುದು. ಸುಸ್ತು, ಏರಿದ್ದ ತೂಕ ಧಿಡೀರನೇ ಇಳಿಯುವುದು, ಹಸಿವಿಲ್ಲದಿರುವುದು, ನಿಃಶಕ್ತಿ, ವಾಕರಿಕೆ ಮೊದಲಾದವು ಇದರ ಸೂಚನೆಗಳಾಗಿವೆ. ಈ ಸ್ಥಿತಿಗೆ ಸಿದ್ದೌಷಧವಿಲ್ಲ. ಸಾಕಷ್ಟು ವಿಶ್ರಾಂತಿ, ನಿದ್ದೆ, ಉತ್ತಮ ಆಹಾರ, ವ್ಯಾಯಾಮ, ಮದ್ಯ, ಧೂಮಪಾನದಿಂದ ಪೂರ್ಣವಾಗಿ ಮುಕ್ತಿ ಮೊದಲದವು ಯಕೃತ್ ಅನ್ನು ನಿಧಾನವಾಗಿ ಮೊದಲಿನ ಸ್ಥಿತಿಗೆ ಮರಳಲು ನೆರವಾಗುತ್ತವೆ.


English summary

Signs Your Liver Is In Danger

The liver is considered as the largest of all organs in the human body. It performs many important functions to keep you healthy every day. It cleanses the toxins and also produces something called as bile as a part of its digestive role. If the liver suffers any problem, many of its functions get disturbed. Let us discuss about some early symptoms of liver disease.
X
Desktop Bottom Promotion