For Quick Alerts
ALLOW NOTIFICATIONS  
For Daily Alerts

ವಿಟಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳು

By Arshad
|

ನಮಗೆ ಅಗತ್ಯವಿರುವ ವಿಟಮಿನ್‌ಗಳಲ್ಲಿ ವಿಟಮಿನ್ ಡಿ ಸಹಾ ಒಂದು. ವಿಚಿತ್ರವೆಂದರೆ ಈ ವಿಟಮಿನ್ ಅನ್ನು ದೇಹವೇ ತಯಾರಿಸಿಕೊಳ್ಳುತ್ತದೆ. ಇದಕ್ಕೆ ಬೇಕಾಗಿರುವುದು ಅಪ್ಪಟ ಸೂರ್ಯನ ಬೆಳಕು ಮಾತ್ರ. (ಸ್ಪಷ್ಟವಾಗಿ ಹೇಳಬೇಕೆಂದರೆ ಸೂರ್ಯನ ರಶ್ಮಿಯಲ್ಲಿರುವ ಅಲ್ಟ್ರಾವಯೋಲೆಟ್ ಬಿ ಕಿರಣಗಳು).

ಸೂರ್ಯ ನೆತ್ತಿಗೆ ಅತಿ ಕಡಿಮೆ ಬರುವ ಉತ್ತರಾರ್ಧ ಗೋಳದ ಜನರಿಗೆ ಸೂರ್ಯರಶ್ಮಿ ಚರ್ಮಕ್ಕೆ ತಗಲುವ ಪ್ರಮಾಣ ಕಡಿಮೆಯಿರುವುದರಿಂದ ಅವರಿಗೆ ದೇಹದ ಅತಿಹೆಚ್ಚು ಭಾಗದ ಚರ್ಮವನ್ನು ಪ್ರಖರ ಸೂರ್ಯನ ಬೆಳಕಿಗೆ ಒಡ್ಡಬೇಕಾಗಿ ಬರುತ್ತದೆ. ಇದನ್ನೇ ಅವರು ಸೂರ್ಯಸ್ನಾನ ಅಥವಾ ಸನ್ ಬಾಥ್ ಎಂದು ಕರೆಯುತ್ತಾರೆ.

ಇದೇ ಕಾರಣಕ್ಕೆ ನಮ್ಮ ಗೋಕರ್ಣ, ಗೋವಾದ ಸಮುದ್ರತೀರಗಳಲ್ಲಿ ಸೂರ್ಯಸ್ನಾನ ಮಾಡುವ ಬಿಳಿಯಚರ್ಮದ ವಿದೇಶೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ವಾಸ್ತವವಾಗಿ ವಿಟಮಿನ್ ಡಿ ಎಂದರೆ ಒಂದು ಪೋಷಕಾಂಶಕ್ಕಿಂತಲೂ ಒಂದು ಸ್ಟೆರಾಯ್ಡ್ ಎಂದೇ ಹೇಳಬಹುದು. ಸೂರ್ಯನ ಬೆಳಕಿಗೆ ಕಪ್ಪಾಗುವ ಭಯದಿಂದ ಸನ್ ಸ್ಕ್ರೀನ್ ಹಚ್ಚಿಯೇ ತಿರುಗಾಡುವವರಲ್ಲಿ ಮತ್ತು ಸೂರ್ಯನ ಬೆಳಕಿಗೆ ಹೆಚ್ಚಾಗಿ ಬರದೇ ಇರುವವರಲ್ಲಿ ವಿಟಮಿನ್ ಡಿ. ಕೊರತೆ ಅತಿಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

Signs And Symptoms Of Vitamin D Deficiency

ಭಾರತದಲ್ಲಿ ಸೂರ್ಯನ ಕಿರಣಗಳು ಸಾಕಷ್ಟು ನೇರವಾಗಿ ಲಭ್ಯವಿರುವುದರಿಂದ ನಮಗೆ ಸೂರ್ಯಸ್ನಾನದ ಅಗತ್ಯವಿಲ್ಲ. ಆದರೆ ಕನಿಷ್ಟ ಬೆಳಿಗ್ಗೆ ಮತ್ತು ಸಂಜೆಯ ಸೂರ್ಯನ ಕಿರಣಗಳನ್ನಾಗದೂ ಮೈಮೇಲೆ ಬರುವಂತೆ ಮಾಡಬೇಕು. ಇಲ್ಲದಿದ್ದರೆ ವಿಟಮಿನ್ ಡಿ. ಕೊರತೆ ಅನಿವಾರ್ಯವಾಗುತ್ತದೆ. ತಮಗರಿವಿಲ್ಲದೇ ಸೂರ್ಯನ ಬೆಳಕಿನಿಂದ ವಂಚಿತರಾದವರ ದೇಹದಲ್ಲಿ ವಿಟಮಿನ್ ಡಿ ಕೊರತೆಯನ್ನು ಕೆಲವು ಸೂಚನೆಗಳು ಮತ್ತು ಲಕ್ಷಣಗಳು ಸ್ಪಷ್ಟವಾಗಿ ತಿಳಿಸುತ್ತವೆ, ಮುಂದೆ ಓದಿ... ಸ್ನಾಯುಗಳ ಬೆಳವಣಿಗೆಗೆ ಅಗತ್ಯ ವಿಟಮಿನ್ ಗಳು

ಮೂಳೆಗಳಲ್ಲಿ ನೋವು
ವಿಟಮಿನ್ ಡಿ. ಕೊರತೆಯ ಪ್ರಮುಖ ತೊಂದರೆಯೆಂದರೆ ಮೂಳೆಗಳು ಕ್ಯಾಲ್ಸಿಯಂ ಅನ್ನು ಹೀರಲು ಅಸಮರ್ಥವಾಗುವುದು. ಇದು ಮೂಳೆಗಳ ದೃಢತೆಯನ್ನು ಕಡಿಮೆ ಮಾಡುತ್ತದೆ. ಜೊತೆಯಲ್ಲಿಯೇ ಇಡಿಯ ಮೈ ನೋವು, ಸ್ನಾಯುಗಳ ಸೆಡೆತ ಮತ್ತು ಮೂಳೆಸಂದುಗಳಲ್ಲಿ ವಿಪರೀತ, ಸೂಜಿ ಚುಚ್ಚಿದಂತೆ ನೋವಾಗುವುದು. ಇದು ಸೂರ್ಯರಶ್ಮಿಗೆ ಒಡ್ಡದೇ ಇರುವ ಕಾರಣ ವಿಟಮಿನ್ ಡಿ ಉತ್ಪತ್ತಿಯಾಗದಿರುವುದರ ಲಕ್ಷಣವಾಗಿದೆ.

ಸ್ವಲ್ಪ ನಡೆದರೂ ಸುಸ್ತು
ವಿಟಮಿನ್ ಡಿ ಇದ್ದರೆ ಇತರ ಪೋಷಕಾಂಶಗಳನ್ನೂ ದೇಹ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೇ ಇದನ್ನು ಪೋಷಕಾಂಶಕ್ಕಿಂತಲೂ ಸ್ಟ್ರೆರಾಯ್ಡ್ ಎಂದೇ ಹೇಳುತ್ತಾರೆ. ವಿಟಮಿನ್ ಡಿ ಕೊರತೆಯಿಂದ ಉತ್ತಮ ಆಹಾರ ಸೇವಿಸಿದ್ದರೂ ಪೋಷಕಾಂಶಗಳನ್ನು ಸ್ನಾಯುಗಳು ಮತ್ತು ದೇಹದ ಇತರ ಅಂಗಗಳು ಪಡೆಯದೇ ಇರುವ ಕಾರಣ ಕೊಂಚ ನಡೆದರೂ ಲಭ್ಯವಿದ್ದ ಶಕ್ತಿ ಖಾಲಿಯಾಗಿ ಸುಸ್ತು ಆವರಿಸುತ್ತದೆ. ಆದ್ದರಿಂದ ಮಧ್ಯವಯಸ್ಸಿನ ಬಳಿಕ ನಿಯಮಿತವಾಗಿ ತಪಾಸಣೆಗೊಳಪಡುವುದು ಅಗತ್ಯ.

ಮನೋಭಾವದಲ್ಲಿ ಏರುಪೇರು

ವಿಟಮಿನ್ ಡಿ ಕೊರತೆಯಿಂದ ಮೆದುಳಿಗೆ ರವಾನೆಯಾಗುವ ರಕ್ತದಲ್ಲಿಯೇ ಕೊಂಚ ಏರುಪೇರಾಗುತ್ತದೆ. ಇದಕ್ಕೆ ಸೆರೋಟೋನಿನ್ ಎಂಬ ಪೋಷಕಾಂಶದ ಪ್ರಮಾಣದಲ್ಲಿ ಏರುಪೇರಾಗುವುದು ಕಾರಣ. ವಿಟಮಿನ್ ಡಿ ಕೊರತೆಯಿಂದ ಸೆರೋಟೋನಿನ್ ನಲ್ಲಿಯೂ ಏರುಪೇರಾಗುವುದರಿಂದ ಇದರ ನೇರಪರಿಣಾಮಗಳು ಮೆದುಳು ಗ್ರಹಿಸುವ ಭಾವಗಳ ಮೇಲಾಗುತ್ತದೆ. ಯಾರಾದರೂ ಬರುವಲ್ಲಿ ಕೊಂಚ ತಡವಾದರೂ ವಿಪರೀತ ರೇಗುವುದು, ಹೂವು, ಮಕ್ಕಳನ್ನು ಕಂಡರೂ ಸಂತೋಷವನ್ನು ವ್ಯಕ್ತಪಡಿಸಲು ವಿಫಲರಾಗುವುದು ಮೊದಲಾದವು ಇದರ ಲಕ್ಷಣಗಳಾಗಿವೆ.

ತೂಕದಲ್ಲಿ ಹೆಚ್ಚಳ

ದೇಹದಲ್ಲಿರುವ ಕೊಬ್ಬನ್ನು ಕರಗಿಸಲೂ ವಿಟಮಿನ್ ಡಿ. ಅವಶ್ಯವಾಗಿದೆ. ಏಕೆಂದರೆ ಕೊಬ್ಬು ಈ ವಿಟಮಿನ್ನಿನಲ್ಲಿ ಕರಗುತ್ತದೆ. ಕರಗಿದ ಕೊಬ್ಬು ರಕ್ತದ ಮೂಲಕ ರವಾನೆಯಾಗಿ ಶಕ್ತಿಯಾಗಿ ರೂಪುಗೊಳ್ಳುವ ಮೂಲಕ ಸದ್ಭಳಕೆಯಾಗುತ್ತದೆ. ವಿಟಮಿನ್ ಡಿ. ಕೊರತೆಯಿರುವವರು ಶೀಘ್ರವೇ ಸುಸ್ತಾಗುವುದಕ್ಕೆ ಇದೂ ಪರೋಕ್ಷ ಕಾರಣವಾಗಿದೆ. ಈ ಕೊರತೆಯ ಕಾರಣ ಕೊಬ್ಬು ಕರಗದೇ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಹೀಗೇ ಸಂಗ್ರಹವಾಗುತ್ತಾ ದೇಹ ಅತಿಹೆಚ್ಚು ಸ್ಥೂಲಕಾಯ ಪಡೆಯುತ್ತದೆ. ವಿಟಮಿನ್‍ ಡಿಯ ಪ್ರಾಮುಖ್ಯತೆ ಏನು?

ಸೋರಿಯಾಸಿಸ್ (Psoriasis)
ಸಾಮಾನ್ಯ ಚರ್ಮದ ಹೊರಪದರದ ಜೀವಕೋಶಗಳು ಗರಿಷ್ಟವೆಂದರೆ ಒಂದು ತಿಂಗಳು (ನಾಲ್ಕು ವಾರ) ಜೀವಂತವಿರುತ್ತದೆ. ಬಳಿಕ ಇದರಡಿ ಹೊಸ ಜೀವಕೋಶ ಹುಟ್ಟಿ ಹೊರಪದರ ಪಕಳೆಯಂತೆ ಏಳುತ್ತದೆ ಅಥವಾ ತೆಳುವಾದ ಪುಡಿಯಂತೆ ಅಂಟಿಕೊಂಡಿರುತ್ತದೆ. (ಸ್ನಾನದ ಬಳಿಕ ಉಗುರಿನಿಂದ ದಪ್ಪ ಚರ್ಮವಿದ್ದಲ್ಲಿ ಕೆರೆದು ನೋಡಿದರೆ ಉಗುರಿನಡಿ ಬರುವುದನ್ನು ಕಾಣಬಹುದು). ಇದು ಆರೋಗ್ಯಕರ ಚರ್ಮದ ಲಕ್ಷಣ.

ಒಂದು ವೇಳೆ ಸತ್ತ ಜೀವಕೋಶಗಳನ್ನು ಬದಲಿಸಲು ಒಂದರ ಬದಲು ಹತ್ತು ಜೀವಕೋಶಗಳು ಹುಟ್ಟಿದರೆ? ಅಥವಾ ಒಂದಕ್ಕೆ ಸಾವಿರವಾದರೆ? ಇದೇ ಸೋರಿಯಾಸಿಸ್ ಲಕ್ಷಣವಾಗಿದೆ. ಇದು ಕೆಲವು ಭಾಗದಲ್ಲಿ ಚರ್ಮವನ್ನು ಅತಿಯಾಗಿ ದಪ್ಪನಾಗಿಸುತ್ತದೆ. ವಿಶೇಷವಾಗಿ ಮೊಣಗಂಟು, ಮೊಣಕೈ, ತಲೆಬುರುಡೆ, ಮುಂಗೈಯ ಹಿಂಭಾಗ, ಪಾದಗಳು, ಸೊಂಟದ ಕೆಳಭಾಗ ಇತ್ಯಾದಿ. ಇದಕ್ಕೆ ಪ್ರಮುಖ ಕಾರಣವೆಂದರೆ ವಿಟಮಿನ್ ಡಿ. ಕೊರತೆ.

ನಿಯಮಿತವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೂಲಕ ಸೂಕ್ತ ಪ್ರಮಾಣದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗಿ ಎಲ್ಲಾ ಕಡೆಯ ಚರ್ಮದಲ್ಲಿ ಒಂದು ಜೀವಕೋಶದ ಬದಲಿಗೆ ಒಂದೇ ಜೀವಕೋಶ ಹುಟ್ಟುವಂತೆ ಮಾಡಿ ಆರೋಗ್ಯಕರ ಚರ್ಮವನ್ನು ಹೊಂದಲು ಕಾರಣವಾಗುತ್ತದೆ.

ವಿಟಮಿನ್ ಡಿ. ಮರುಪೂರೈಕೆಗೆ ಸಲಹೆಗಳು
1) ಕಿರು ಅವಧಿಯಲ್ಲಿ ನಿಮ್ಮ ಶರೀರವನ್ನು ಸಾಧ್ಯವಾದಷ್ಟು ಸೂರ್ಯನ ಬೆಳಕಿಗೆ ಒಡ್ಡಿ. ಇಡಿಯ ದೇಹವನ್ನು ಒಡ್ಡುವುದು ಅಗತ್ಯವಾದುದರಿಂದ ನಿಮಗೆ ಏಕಾಂತ ಸಿಗುವ ಸ್ಥಳ (ಉದಾಹರಣೆಗೆ ಮನೆಯ ಟೆರೇಸ್) ಉತ್ತಮವಾಗಿದೆ. ಹೆಚ್ಚಿನ ಸಮಯಕ್ಕೂ ಸೂರ್ಯನ ರಶ್ಮಿಗೆ ಒಡ್ಡಿಕೊಳ್ಳುವುದು ಉತ್ತಮವಲ್ಲ, ಇದು ಕ್ಯಾನ್ಸರ್ ಗೂ ಕಾರಣವಾಗಬಹುದು.


ಬೆಳಗ್ಗಿನ ಮತ್ತು ಸಂಜೆಯ ಕಿರಣಗಳು ಎರಡು ಗಂಟೆಗಳಷ್ಟಿದ್ದರೂ ತೊಂದರೆಯಿಲ್ಲ. ಆದರೆ ಮಧ್ಯಾಹ್ನನ ನೆತ್ತಿಯ ಮೇಲಿನ ಸೂರ್ಯನ ಕಿರಣಗಳು ಇಪ್ಪತ್ತು ನಿಮಿಷಕ್ಕೆ ಹೆಚ್ಚಿರಬಾರದು. ಆ ಪ್ರಕಾರ ಬೆಳಿಗ್ಗೆ ಹತ್ತು ಗಂಟೆಯ ಅಥವಾ ಸಂಜೆ ನಾಲ್ಕು ಗಂಟೆಯ ಅರ್ಧಗಂಟೆ ಕಾಲ ಬಿಸಿಲಿಗೆ ಒಡ್ದಿಕೊಳ್ಳುವುದು ಸೂಕ್ತ. ತ್ವಚೆ ಬಿಳುಚಿಕೊಳ್ಳಲು ವಿಟಮಿನ್ ಡಿ ಕೊರತೆ ಕಾರಣ!
2) ವೈದ್ಯರು ಸೂಚಿಸುವ ಲೋಷನ್ ಅಥವಾ ಔಷಧಿಗಳನ್ನು ಉಪಯೋಗಿಸಿ
3) ಒಂದು ವೇಳೆ ಚರ್ಮ ದಪ್ಪವಾಗಿರುವ ಅನುಮಾನ ಬಂದರೆ ಆ ಸ್ಥಳವನ್ನು ಸಾಧ್ಯವಾದಷ್ಟು ತೇವವಾಗಿರಿಸಿ.
4) ಧೂಮಪಾನ ಮತ್ತು ಮದ್ಯಪಾನಗಳನ್ನು ತ್ಯಜಿಸಿ. ಮದ್ಯ ದೇಹದಲ್ಲಿದ್ದರೆ ವಿಟಮಿನ್ ಡಿ. ಉತ್ಪತ್ತಿಯಾಗುವ ಪ್ರಮಾಣ ಶೇಖಡಾ ಹತ್ತಕ್ಕಿಳಿಯುತ್ತದೆ.
5) ವಿಟಮಿನ್ ಡಿ ಹೆಚ್ಚಿರುವ ಎಣ್ಣೆಯ ಮೀನುಗಳು, ಮೀನಿನೆಣ್ಣೆಯ ಮಾತ್ರೆಗಳು, ಅಣಬೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದೆ. ಮೊಟ್ಟೆಯ ಬಿಳಿಭಾಗದಲ್ಲೂ ಅಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ. ಇದೆ.
English summary

Signs And Symptoms Of Vitamin D Deficiency

There are very few foods that are actually rich in vitamin D naturally and even the fortified foods do not contain enough vitamin D to support your health needs. So, it is necessary that you take care of your health. As the name goes, vitamin D is not a regular vitamin. Read on to know more about the signs and symptoms of deficiency of vitamin D.
Story first published: Tuesday, September 22, 2015, 18:29 [IST]
X
Desktop Bottom Promotion