For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ಚಿಪ್ಸ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!

By manu
|

ನಾಗರಿಕತೆ ಬೆಳೆಯುತ್ತಿದ್ದಂತೆಯೇ ಸೋಮಾರಿತನವೂ ನಮ್ಮೆಲ್ಲರನ್ನೂ ಆವರಿಸುತ್ತಿದೆ. ಆರೋಗ್ಯವಂತ ಆಹಾರಗಳ ಸ್ಥಾನವನ್ನು ಅನಾರೋಗ್ಯಕರ ಸಿದ್ಧ ಆಹಾರಗಳು ಆಕ್ರಮಿಸಿಕೊಂಡುಬಿಟ್ಟಿವೆ. ಕೃತ್ರಿಮತೆ ನಮ್ಮ ಜೀವನಗಳಲ್ಲಿ ಹಾಸುಹೊಕ್ಕಾಗಿಬಿಟ್ಟಿವೆ. ಜಾಹೀರಾತಿಲ್ಲದೇ ನಾವು ಯಾವುದೇ ವಸ್ತುವನ್ನು ನಂಬುವುದೇ ಇಲ್ಲವೆನ್ನುವಷ್ಟು ಈ ಮಾಯಾಲೋಕ ನಮ್ಮ ಮನಸ್ಸುಗಳನ್ನು ಆವರಿಸಿಬಿಟ್ಟಿದೆ.

ನಿಮ್ಮ ಗಮನ ಎಲ್ಲೋ ಇರುವಾಗಲೂ ಆ ಕ್ಷಣಗಳನ್ನು ನಗದೀಕರಿಸಲು ಏನನ್ನೂ ಮಾಡಲು ದೊಡ್ಡ ದೊಡ್ಡ ಸಂಸ್ಥೆಗಳೇ ದೊಡ್ಡ ದೊಡ್ಡ ಬಂಡವಾಳ ಹೂಡಿವೆ. ಇದಕ್ಕೆ ಅತ್ಯುತ್ತಮವಾದ ಉದಾಹರಣೆ ಎಂದರೆ ಟೀವಿಯಲ್ಲಿ ಸುದ್ದಿವಾಹಿನಿ ಬರುತ್ತಿರುವಾಗಲೂ ನಾವು ಕುರುಕುತ್ತಿರುವ ಆಲೂಗಡ್ಡೆ ಚಿಪ್ಸ್‌ಗಳು. ಹಾಟ್ ಚಿಪ್ಸ್ ಕ್ಯಾನ್ಸರ್ ತಂದೀತು ಹುಷಾರ್!

ವಿವಿಧ ರೂಪದ ಪೊಟ್ಟಣಗಳಲ್ಲಿ ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿರುವ ಈ ಉತ್ಪನ್ನ ವಿವಿಧ ರುಚಿ, ಗಾತ್ರ ಮತ್ತು ಆಕಾರಗಳಲ್ಲಿ ಸಿಗುತ್ತಿದೆ. ಈ ಉತ್ಪನ್ನಗಳ ಮಾರಾಟದ ಭರ ಕಂಡರೆ ಏಕಾಗಿ ಈ ಉತ್ಪನ್ನಗಳ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳನ್ನು ಜಾಹೀರಾತುಗಳಿಗೆ ಸುರಿಯುತ್ತಿವೆ ಎಂದು ಅರ್ಥವಾಗುತ್ತಿವೆ. ಆದರೆ ಜಾಹೀರಾತುಗಳಲ್ಲಿ ಪ್ರಚಾರ ನೀಡಿದಷ್ಟು ಈ ಉತ್ಪನ್ನಗಳು ಆರೋಗ್ಯಕರವಲ್ಲ!

ಇದರ ಅಡ್ಡ ಪರಿಣಾಮಗಳು ಮತ್ತು ಆರೋಗ್ಯದ ಮೇಲೆ ಮಾಡುವ ಕೆಡುಕುಗಳ ಬಗ್ಗೆ ಅರಿತರೆ ಮುಂದಿನ ಬಾರಿ ಈ ಆಲೂಗಡ್ಡೆ ಚಿಪ್ಸ್ ಕೊಳ್ಳುವ ಬಗ್ಗೆ ಖಂಡಿತಾ ಯೋಚಿಸುತ್ತೀರಿ. ಬನ್ನಿ ಇದನ್ನು ತಿನ್ನುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿದುಕೊಳ್ಳಿರಿ, ಸಮಯ ಮಿಂಚುವ ಮುನ್ನವೇ ಎಚ್ಚೆತ್ತುಕೊಳ್ಳಿ...

ಆಲೂಗಡ್ಡೆ ಚಿಪ್ಸ್ ಕೂಡ ಜಂಕ್ ಫುಡ್

ಆಲೂಗಡ್ಡೆ ಚಿಪ್ಸ್ ಕೂಡ ಜಂಕ್ ಫುಡ್

ಆಲೂಗಡ್ಡೆ ಚಿಪ್ಸ್ ತಯಾರಿಸುವಾಗ ನಾಲಿಗೆಗೆ ಹೇಗೆ ರುಚಿಸುತ್ತದೆ ಎಂಬ ಅಂಶವನ್ನೇ ಗಮನದಲ್ಲಿಟ್ಟುಕೊಂಡು ತಯಾರಿಸಲ್ಪಟ್ಟಿರುವುದರಿಂದ ಇವು ವ್ಯಸನಕ್ಕೆ ಇಂಬು ಕೊಡುವಷ್ಟು ರುಚಿಯಾಗಿರುತ್ತವೆ. ಒಂದು ತಿಂದರೆ ಸಾಲದು, ಅದರ ಹಿಂದೆ ಇನ್ನೊಂದು, ಮತ್ತೊಂದು ಎಂಬಂತೆ ನಿಮ್ಮ ಮನ ಟೀವಿಯಲ್ಲಿ ಮಗ್ನರಾಗಿದ್ದಷ್ಟೂ ಹೊತ್ತು ಅರಿವಿಲ್ಲದಂತೆಯೇ ಹೊಟ್ಟೆಗೆ ಹೋಗುತ್ತಾ ಹೋಗುತ್ತದೆ. ಮುಂದೆ ಓದಿ

ಆಲೂಗಡ್ಡೆ ಚಿಪ್ಸ್ ಕೂಡ ಜಂಕ್ ಫುಡ್

ಆಲೂಗಡ್ಡೆ ಚಿಪ್ಸ್ ಕೂಡ ಜಂಕ್ ಫುಡ್

ಇದರ ತಯಾರಿಕರಿಗೂ ಬೇಕಾಗಿರುವುದೂ ಇದೇ. ಆದರೆ ಹೊಟ್ಟೆಗೆ ಹೋದ ಬಳಿಕ ಈ ರಾಸಾಯನಿಕಗಳು ಅತಿ ಹೆಚ್ಚಿನ ಹಾನಿಯನ್ನು ಎಸಗುವುದರಿಂದ ಆಲೂಗಡ್ಡೆ ಚಿಪ್ಸ್ ಅಥವಾ ಇದೇ ರೀತಿಯ ಉಳಿದ ಅಹಾರಗಳೂ ಜಂಕ್ ಫುಡ್ ಎಂದೇ ಪರಿಗಣಿತವಾಗುತ್ತವೆ.

ವ್ಯಸನಕ್ಕೆ ಕಾರಣವಾಗುತ್ತವೆ

ವ್ಯಸನಕ್ಕೆ ಕಾರಣವಾಗುತ್ತವೆ

ಈ ತಿಂಡಿಗಳು ಅತ್ಯಂತ ರುಚಿಯಾಗಿರುವುದರಿಂದ ಕೇವಲ ಒಂದು ಪೊಟ್ಟಣಕ್ಕೆ ಇದರ ಸೇವನೆ ಸೀಮಿತವಾಗದೇ ಮುಂದುವರೆಯುತ್ತಲೇ ಹೋಗುವುದರಿಂದ ಇದೊಂದು ವ್ಯಸನವಾಗಿ ಮಾರ್ಪಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ.

ವ್ಯಸನಕ್ಕೆ ಕಾರಣವಾಗುತ್ತವೆ

ವ್ಯಸನಕ್ಕೆ ಕಾರಣವಾಗುತ್ತವೆ

ಇದನ್ನು ತಿನ್ನುವಾಗ ಎಷ್ಟು ಹಾನಿಕರವೋ ಅದಕ್ಕಿಂತ ಎಷ್ಟೋ ಹೆಚ್ಚು ಪಟ್ಟು ಹಾನಿ ಇದನ್ನು ಇತರ ಪೇಯ ಮತ್ತು ಮದ್ಯಪಾನದೊಂದಿಗೆ ತಿಂದಾಗ ದೇಹ ಅನುಭವಿಸುತ್ತದೆ. ಏಕೆಂದರೆ ಇದರಲ್ಲಿರುವ ಖಾರ ಪದಾರ್ಥ ಈ ಚಿಪ್ಸ್‌ಗಳನ್ನು ಮತ್ತೆ ಮತ್ತೆ ತಿನ್ನುವಂತೆ ಪ್ರೇರೇಪಿಸುತ್ತದೆ.

ವ್ಯಸನಕ್ಕೆ ಕಾರಣವಾಗುತ್ತವೆ

ವ್ಯಸನಕ್ಕೆ ಕಾರಣವಾಗುತ್ತವೆ

ಮಕ್ಕಳಿರಲಿ, ವೃದ್ಧರಿರಲಿ ಎಲ್ಲರಿಗೂ ಸಮಾನವಾಗಿ ವ್ಯಸನವನ್ನು ದಾಟಿಸುವ ಈ ಚಿಪ್ಸ್ ಕೆಲವೇ ದಿನಗಳಲ್ಲಿ ದಿನದ ಅನಿವಾರ್ಯ ಆಹಾರವಾಗಿ ಪರಿಣಮಿಸುತ್ತದೆ. ಮಕ್ಕಳಿಗೆ ಈ ವ್ಯಸನ ತಗುಲಿಕೊಂಡರೆ ಚಿಪ್ಸ್ ಇಲ್ಲದೆ ಬೇರೇನನ್ನೂ ತಿನ್ನಲೂ ಹಠ ಮಾಡತೊಡಗುತ್ತಾರೆ.

ವ್ಯಸನಕ್ಕೆ ಕಾರಣವಾಗುತ್ತವೆ

ವ್ಯಸನಕ್ಕೆ ಕಾರಣವಾಗುತ್ತವೆ

ಇನ್ನೂ ಮುಂದುವರೆದು ಊಟವನ್ನೇ ಬಿಟ್ಟು ಚಿಪ್ಸ್ ಒಂದನ್ನೇ ತಿನ್ನತೊಡಗುತ್ತಾರೆ. ಇದು ಆರೋಗ್ಯಕ್ಕೆ ಅತ್ಯಂತ ಮಾರಕವಾಗಿದೆ. ನಿಮ್ಮ ಕುಟುಂಬವನ್ನು ಈ ವ್ಯಸನಕ್ಕೆ ಒಳಗಾಗದಿರಿಸಲು ಮೊದಲು ನೀವು ಎಚ್ಚೆತ್ತುಕೊಂಡು ಉಳಿದವರನ್ನೂ ಇದರ ಕಬಂಧಬಾಹುಗಳಿಂದ ರಕ್ಷಿಸುವುದು ಅಗತ್ಯವಾಗಿದೆ.

ಸ್ಥೂಲಕಾಯವನ್ನು ಹೆಚ್ಚಿಸುತ್ತವೆ

ಸ್ಥೂಲಕಾಯವನ್ನು ಹೆಚ್ಚಿಸುತ್ತವೆ

ನಿತ್ಯವೂ ಈ ಆಲೂಗಡ್ಡೆ ಚಿಪ್ಸ್ ಗಳನ್ನು ತಿನ್ನುವುದರಿಂದ ಶೀಘ್ರವೇ ಸ್ಥೂಲಕಾಯ ಆವರಿಸುತ್ತದೆ. ಮಕ್ಕಳಲ್ಲಿ ಇನ್ನೂ ಬೇಗ. ಏಕೆಂದರೆ ಅತ್ಯಂತ ತೆಳುವಾದ ಬಿಲ್ಲೆಯ ಮೇಲೆ ಸಿಂಪಡಿಸಿರುವ ಹಲವು ರಾಸಾಯನಿಕಗಳು ಅತ್ಯಂತ ಪ್ರಬಲವಾದ ಕಾರ್ಬೋಹೈಡ್ರೇಟುಗಳಾಗಿದ್ದು ದೇಹಕ್ಕೆ ಅಗತ್ಯಕ್ಕಿಂತಲೂ ಅಗಾಧವಾದ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಲಭ್ಯವಾಗುತ್ತವೆ.

ಸ್ಥೂಲಕಾಯವನ್ನು ಹೆಚ್ಚಿಸುತ್ತವೆ

ಸ್ಥೂಲಕಾಯವನ್ನು ಹೆಚ್ಚಿಸುತ್ತವೆ

ನಮ್ಮ ಶರೀರ ಈ ಹೆಚ್ಚಿನ ಪ್ರಮಾಣವನ್ನು ಕೊಬ್ಬನ್ನಾಗಿ ಪರಿವರ್ತಿಸಿ ಸೊಂಟದ ಸುತ್ತಳತೆಯನ್ನು ಅಗಲಿಸುತ್ತಾ ಹೋಗುತ್ತದೆ. ಈ ರಾಸಾಯನಿಕಗಳಲ್ಲಿರುವ ವಿವಿಧ ರೀತಿಯ ಉಪ್ಪು ಮತ್ತು ಇತರ ಪದಾರ್ಥಗಳು ಕೊಬ್ಬಿನ ಹೊರತಾಗಿಯೂ ಶರೀರಕ್ಕೆ ಹಲವು ರೀತಿಯಲ್ಲಿ ಹಾನಿಕಾರಕವಾಗಿವೆ.

ಇದರಲ್ಲಿ ಬಳಸಿರುವ ರಾಸಾಯನಿಕಗಳು ಕಡಿಮೆ ಗುಣಮಟ್ಟದ್ದಾಗಿವೆ

ಇದರಲ್ಲಿ ಬಳಸಿರುವ ರಾಸಾಯನಿಕಗಳು ಕಡಿಮೆ ಗುಣಮಟ್ಟದ್ದಾಗಿವೆ

ಈ ಚಿಪ್ಸ್‌ಗಳನ್ನು ತಯಾರಿಸುವಾಗ ನಿಗದಿಪಡಿಸಿದ ಗುಣಮಟ್ಟವಿರುವ ಸಾಮಾಗ್ರಿಗಳನ್ನೇ ಬಳಸಬೇಕೆಂಬ ಕಾನೂನು ಇದ್ದರೂ ಜನಸಾಮಾನ್ಯರಿಗೆ ಈ ಬಗ್ಗೆ ಅರಿವಿಲ್ಲದೇ ಇರುವುದನ್ನು ಸಂಸ್ಥೆಗಳು ತಮ್ಮ ಲಾಭದ ನೆವವನ್ನಾಗಿ ಪರಿಗಣಿಸಿಕೊಂಡಿವೆ.

ಇದರಲ್ಲಿ ಬಳಸಿರುವ ರಾಸಾಯನಿಕಗಳು ಕಡಿಮೆ ಗುಣಮಟ್ಟದ್ದಾಗಿವೆ

ಇದರಲ್ಲಿ ಬಳಸಿರುವ ರಾಸಾಯನಿಕಗಳು ಕಡಿಮೆ ಗುಣಮಟ್ಟದ್ದಾಗಿವೆ

ಇದಕ್ಕೆ ಬಳಸಲಾಗುವ ಎಣ್ಣೆ ಎಂದರೆ ಆರೋಗ್ಯಕ್ಕೆ ಅತಿ ಮಾರಕವಾದ ಪಾಮ್ ಎಣ್ಣೆ. ಹಲವು ಖ್ಯಾತ ವೈದ್ಯರ ಮತ್ತು ಆಹಾರತಜ್ಞರ ಪ್ರಕಾರ ಒಂದು ಪ್ಯಾಕೆಟ್ ಆಲೂಗಡ್ಡೆ ಚಿಪ್ಸ್ ತಿಂದರೆ ಐದು ಲೀಟರ್ ಕೆಟ್ಟ ಎಣ್ಣೆಯನ್ನು ಸೇವಿಸಿದಷ್ಟೇ ಹಾನಿ ನಮ್ಮ ಹೊಟ್ಟೆಗಳಿಗೆ ಆಗುತ್ತದೆ.

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ದಿನಗಳೆದಂತೆ ಈ ಸಿದ್ಧತಿಂಡಿಗಳ ಬಗ್ಗೆ ಆಘಾತಕಾರಿ ಸುದ್ದಿಗಳು ತಲುಪುತ್ತಿವೆ. ಒಂದು ಮಾದರಿಯಲ್ಲಿ ಕರಗಿದ ಪ್ಲಾಸ್ಟಿಕ್ ಇದೆ, ಇದನ್ನು ಸುಟ್ಟರೆ ಪ್ಲಾಸ್ಟಿಕ್ ಸುಟ್ಟಂತೆಯೇ ಸುಟ್ಟು ಹೊಗೆ ಹಿಡಿದು ಬೂದಿಯಾಗುತ್ತದೆ. ಗಂಧಕ, ರಂಜಕ ಮೊದಲಾದ ಧಾತುಗಳು ಇರುವುದರನ್ನು ಇದರ ಹೊಗೆಯ ವಾಸನೆಯಿಂದಲೇ ತಿಳಿಯಬಹುದು.

courtesy

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಅತಿ ಹೆಚ್ಚು ಉಪ್ಪು ಇರುವುದರಿಂದ ಹೃದಯದ ಬಡಿತ ಹೆಚ್ಚುತ್ತದೆ ಮತ್ತು ರಕ್ತದ ಒತ್ತಡವೂ ಹೆಚ್ಚುತ್ತದೆ. ಅತಿ ಹೆಚ್ಚು ಖಾರ ಇರುವುದರಿಂದ ಜೀರ್ಣಾಂಗಗಳಲ್ಲಿ ಉರಿ ತರಿಸುತ್ತದೆ.

courtesy

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಸಾಮಾನ್ಯವಾಗಿ ಮೆಣಸನ್ನು ತಿಂದ ಬಳಿಕ ಮೊಸರನ್ನು ಕಡ್ಡಾಯವಾಗಿ ಸೇವಿಸುವಂತೆ ಸಲಹೆ ನೀಡುವ ಹಿರಿಯರು ಚಿಪ್ಸ್ ತಿಂದ ಬಳಿಕ ಮೊಸರನ್ನು ಸೇವಿಸಲು ಸಲಹೆ ಮಾಡದಿರಲು ಇದರ ಬಗ್ಗೆ ಇರುವ ಅಜ್ಞಾನವೇ ಕಾರಣ. ಇನ್ನುಳಿದಂತೆ ಪರೋಕ್ಷವಾಗಿ ಇವನ್ನು ಪ್ಯಾಕ್ ಮಾಡಿದ ಪ್ಲಾಸ್ಟಿಕ್ ಪೊಟ್ಟಣಗಳು ಸಹಾ ಬಿಸಿಲಿಗೆ ಕೊಂಚ ಕರಗಿ ಚಿಪ್ಸ್ ಗೆ ಅಂಟಿಕೊಂಡಿರುವ ಸಾಧ್ಯತೆ ಇದೆ.

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಇನ್ನೂ ಗೊತ್ತಿಲ್ಲದೇ ಇರುವ ಇತರ ತೊಂದರೆಗಳು

ಈ ಪ್ಲಾಸ್ಟಿಕ್ ಹೊಟ್ಟೆಗೆ ಹೋದರೆ ಅಪೆಂಡಿಕ್ಸ್ ತೊಂದರೆ ಖಾತರಿಯಾಗಿದೆ. ಇದರ ಬದಲಿಗೆ ಮನೆಯಲ್ಲಿಯೇ ತಯಾರಿಸಿದ ಆರೋಗ್ಯಕರ ಹಪ್ಪಳ ಮತ್ತು ಸಂಡಿಗೆಯನ್ನೇಕೆ ನಾವು ನಮ್ಮ ಮಕ್ಕಳಿಗೆ ನೀಡಬಾರದು?

courtesy

English summary

Shocking Facts About Potato Chips

These potato chips have revolutionized the modern market with the consumption of these items is increasing with an amazing speed. The effects of these chips can be bad for everyone, but the children are the worst affected. People need to grow an awareness towards the poor or unhealthy eating habits. They must know the shocking facts about packaged potato chips. have a look
X
Desktop Bottom Promotion