For Quick Alerts
ALLOW NOTIFICATIONS  
For Daily Alerts

ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

By Super
|

ಕೆಲವೊಮ್ಮೆ ರಾತ್ರಿ ಮಲಗಿದ್ದಾಗ ಕಾಲುಗಳ ಸ್ನಾಯು ಸೆಳೆತ ಅಥವಾ ಪೆಡಸಾಗುವುದುಂಟು. ಪೆಡಸು ಎಂದರೆ ಕಾಲಿನ ಸ್ನಾಯುಗಳು ನಮ್ಮ ಇಚ್ಛೆಗೆ ವಿರುದ್ಧವಾಗಿ ಕಾಲುಗಳನ್ನು ಮಡಚುವುದು ಅಥವಾ ಬಾಗಿಸುವುದು. ಹೆಚ್ಚಾಗಿ ಇದು ಕಾಲಿನ ಮೀನಖಂಡಗಳನ್ನು ಬಾಧಿಸುತ್ತದೆ. ಆ ಬಳಿಕ ತೊಡೆ ಮತ್ತು ಪಾದಗಳ ಸ್ನಾಯುಗಳೂ ಪೆಡಸಾಗುತ್ತವೆ. ಈ ಸ್ಥಿತಿಯಿಂದ ತಕ್ಷಣ ಹೊರಬರಲು ಸಾಧ್ಯವಿಲ್ಲ.

ಪೆಡಸುಗೊಂಡ ಕಾಲನ್ನು ನೇರಗೊಳಿಸಲು ಪ್ರಯತ್ನಿಸಿದಷ್ಟೂ ಯಾವುದೋ ಬಲ ಇದಕ್ಕೆ ವಿರುದ್ಧವಾಗಿ ಸೆಳೆಯುತ್ತಿರುವಂತೆ ಭಾಸವಾಗುತ್ತದೆ ಹಾಗೂ ನೋವು ಸಹಾ ತೀಕ್ಷ್ಣವಾಗಿರುತ್ತದೆ. ಇದು ನಿಮ್ಮ ನಿದ್ದೆಯನ್ನು ಕೆಡಿಸಿ ಚಿಂತೆ ಹೆಚ್ಚಿಸುತ್ತದೆ. ಸ್ನಾಯು ಸೆಳೆತ ತಡೆಗಟ್ಟುವ ಮಾರ್ಗಗಳು

ಇದಕ್ಕೆ ಕಾರಣವನ್ನು ಹುಡುಕಿದರೆ ಒಂದಕ್ಕಿಂತ ಹೆಚ್ಚು ಸಂಭವಗಳು ಕಂಡುಬರುತ್ತವೆ. ಇಡಿಯ ದಿನದ ಚಟುವಟಿಕೆಯಿಂದ (ವಿಶೇಷವಾಗಿ ವಿಪರೀತವಾದ ನಡಿಗೆ) ಕಾಲಿನ ಸ್ನಾಯುಗಳು ಹೆಚ್ಚು ತ್ರಾಣವನ್ನು ಕಳೆದುಕೊಂಡಿರುವುದರಿಂದ ರಕ್ತಸಂಚಾರ ಕಡಿಮೆಯಾಗಿ ಸ್ನಾಯುಗಳಿಗೆ ಪೋಷಕಾಂಶ ಮತ್ತು ಶಕ್ತಿ ಸಾಲದೇ ಕುಸಿಯುತ್ತವೆ. ಇನ್ನೊಂದು ಕಾರಣವೆಂದರೆ ವಿಟಮಿನ್ ಡಿ ಕೊರತೆ.

ಮೂಳೆಗಳಿಗೆ ಕ್ಯಾಲ್ಸಿಯಂ ಅಗತ್ಯವಾಗಿ ಬೇಕಾದರೂ ವಿಟಮಿನ್ ಡಿ ಇಲ್ಲದೆ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಲು ಸಾಧ್ಯವಿಲ್ಲ. (ಗೋಡೆಗೆ ಸಿಮೆಂಟ್ ಲೇಪಿಸಬೇಕಾದರೆ ನೀರು ಮಿಶ್ರಣ ಮಾಡುವ ಹಾಗೆ) ಅಲ್ಲದೇ ಕ್ಯಾಲ್ಸಿಯಂ, ಮೆಗ್ನೀಶಿಯಂ ಪೊಟ್ಯಾಶಿಯಂ ನಂತಹ ಖನಿಜಗಳ ಕೊರತೆಯೂ ಇದಕ್ಕೆ ಕಾರಣವಾಗಬಹುದು. ಕಾಲಿನ ಪೆಡಸು ರಾತ್ರಿ ಮಾತ್ರವಲ್ಲ, ದಿನದಲ್ಲಿ ಕಾಲಿನ ಮೀನಖಂಡಗಳಿಗೆ ಹೆಚ್ಚಿನ ತ್ರಾಸು ನೀಡುವ ಸತತ ಚಟುವಟಿಕೆಯಿಂದ (ಉದಾಹರಣೆಗೆ ತುಂಬಾ ಹೆಚ್ಚಿನ ಹೊತ್ತು ಸೈಕಲ್ ತುಳಿಯುವುದು) ಸಹಾ ಪೆಡಸು ಉಂಟಾಗುತ್ತದೆ. ಗರ್ಭಿಣಿಯರಲ್ಲಿ ಮತ್ತು ತುಂಬಾ ಹೊತ್ತು ನೀರು ಕುಡಿಯದೇ ಇರುವುದರಿಂದಲೂ ಪೆಡಸು ಉಂಟಾಗಬಹುದು. ಮಸಲ್ ಕ್ಯಾಚ್(ಸ್ನಾಯು ಸೆಳೆತ) ತಡೆಯಲು ಟಿಪ್ಸ್

ಪಡಸು ಉಂಟಾಗಲು ಕಾರಣವನ್ನು ಕಂಡುಕೊಳ್ಳುವುದು ಮುಖ್ಯ. ಒಂದು ವೇಳೆ ಇದು ಸತತವಾಗಿ ಆಗುತ್ತಿದ್ದರೆ ಇದಕ್ಕೆ ನಿಮ್ಮ ಗಮನಕ್ಕೆ ಬರದ ಕಾರಣಗಳಿರಬಹುದು. ಆಗ ವೈದ್ಯರಲ್ಲಿ ತೋರಿಸಿ ತಪಾಸಣೆಗೊಳಪಡುವುದು ಅಗತ್ಯ. ಆದರೆ ಆಗಾಗ ಎದುರಾಗುವ ಸಂದರ್ಭದಲ್ಲಿ ಈ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಸೂಕ್ತ ವಿಧಾನವನ್ನು ಅನುಸರಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು..

ಉಗುರುಬೆಚ್ಚನೆಯ ನೀರಿನ ಸ್ನಾನ ಅಥವಾ ಕಾವು

ಉಗುರುಬೆಚ್ಚನೆಯ ನೀರಿನ ಸ್ನಾನ ಅಥವಾ ಕಾವು

ಪೆಡಸಾಗಿದ್ದಾಗ ಅಥವಾ ಕಾಲಿನ ಸ್ನಾಯು ಸೆಳೆತಗೊಂಡಿದ್ದಾಗ ನಿಧಾನವಾಗಿ ಕಾಲನ್ನು ನೇರಗೊಳಿಸಲು ಯತ್ನಿಸಿ. ಎಂದಿಗೂ ಥಟ್ಟನೇ ನೇರಗೊಳಿಸಲು ಬಲವಂತ ಮಾಡಬೇಡಿ. ನಿಧಾನವಾಗಿ ಇಂಚಿಂಚಾಗಿ ಕಾಲು ನೇರಗೊಳ್ಳಲಿ. ಆದರೆ ನೇರಗೊಂಡ ಕಾಲು ಮತ್ತೆ ಮಡಚುವ ಸಂಭವವಿದೆ. ಈಗ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವುದು (ಒಂದು ವೇಳೆ ಸ್ನಾನಗೃಹಕ್ಕೆ ಹೋಗಲು ಸಾಧ್ಯವಾದರೆ). ಇಲ್ಲದಿದ್ದರೆ ಬಿಸಿನೀರಿನ ರಬ್ಬರ್ ಬಾಟಲಿಯಿಂದ (ಅಥವಾ ಉಪ್ಪನ್ನು ಬಿಸಿಮಾಡಿ ಬಟ್ಟೆಯ ಪೊಟ್ಟಣ ಕಟ್ಟುವ ಮೂಲಕ) ಪೆಡಸಾಗಿದ್ದ ಭಾಗಕ್ಕೆ ಕಾವು ನೀಡಿ. ಈ ಶಾಖ ನರಗಳನ್ನು ಮತ್ತು ಪೆಡಸಾಗಿದ್ದ ಸ್ನಾಯುಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮಗೊಳಿಸುತ್ತದೆ ಹಾಗೂ ನೋವನ್ನು ಕಡಿಮೆಗೊಳಿಸುತ್ತದೆ.

ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಿ

ಒಂದು ವೇಳೆ ಪಡೆಸಾದ ವೇಳೆಯಲ್ಲಿ ಮೂಳೆಸಂದುಗಳಲ್ಲಿಯೂ ನೋವಿದ್ದರೆ ಇದಕ್ಕೆ ಕ್ಯಾಲ್ಸಿಯಂ ಕೊರತೆ ಕಾರಣವಿರಬಹುದು. ಇದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಜೇನು ಸೇರಿಸಿದ ಬಿಸಿಹಾಲು ಕುಡಿಯುವುದು. ಬದಲಿಗೆ ಹಾಲಿನ ಇತರ ಉತ್ಪನ್ನಗಳು, ಕ್ಯಾಲ್ಸಿಯಂ ಹೆಚ್ಚಿಸುವ ಗುಳಿಗೆಗಳಗನ್ನೂ ಸೇವಿಸಬಹುದು. ನಿತ್ಯ ರಾತ್ರಿ ಮಲಗುವ ಮುನ್ನ ಜೇನು ಸೇರಿಸಿದ ಒಂದು ದೊಡ್ಡ ಲೋಟ ಹಾಲು ಕುಡಿಯುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಕ್ಯಾಮೋಮೈಲ್ ಟೀ ಕುಡಿಯಿರಿ

ಕ್ಯಾಮೋಮೈಲ್ ಟೀ ಕುಡಿಯಿರಿ

ಒಂದು ವೇಳೆ ಪ್ರತಿ ರಾತ್ರಿ ಒಂದು ಬಾರಿ ಪೆಡಸು ಆಗುತ್ತಿದ್ದರೆ ಇದಕ್ಕೆ ದಿನದಲ್ಲಿ ಮೂರರಿಂದ ನಾಲ್ಕು ಕಪ್ ಕ್ಯಾಮೋಮೈಲ್ ಟೀ ಕುಡಿಯಿರಿ. ಇದರಿಂದ ರಕ್ತದಲ್ಲಿ amino acid glycine ಎಂಬ ಪೋಷಕಾಂಶ ಬಿಡುಗಡೆಯಾಗಿ ಸ್ನಾಯುಗಳು ಪೆಡಸಾಗುವ ಸಂಭವವನ್ನು ಕಡಿಮೆಗೊಳಿಸುತ್ತದೆ.

ಸ್ನಾಯುಗಳಿಗೆ ಮಸಾಜ್ ನೀಡಿ

ಸ್ನಾಯುಗಳಿಗೆ ಮಸಾಜ್ ನೀಡಿ

ಆಯುರ್ವೇದ ಸೂಚಿಸುವ ಚಿಕಿತ್ಸೆಯಲ್ಲಿ ನೋವಿರುವ ಭಾಗದ ಮಸಾಜ್ ಮುಖ್ಯವಾಗಿದೆ. ಮಸಾಜ್ ನಿಂದ ರಕ್ತಸಂಚಾರ ಹೆಚ್ಚುವುದು ಹಾಗೂ ಸ್ನಾಯುಗಳನ್ನು ಸಡಿಲಗೊಳಿಸುವ ಮೂಲಕ ಪೆಡಸಾಗಿದ್ದುದು ಮೆತ್ತಗಾಗಿ ನೋವು ಕಡಿಮೆಯಾಗುತ್ತದೆ. ಬರೆಯ ಮಸಾಜ್ ಬದಲಿಗೆ ಉತ್ತಮವಾದ ಎಣ್ಣೆ ಬಳಸುವುದರಿಂದ ಹೆಚ್ಚಿನ ಪರಿಣಾಮವನ್ನು ಪಡೆಯಬಹುದು.

ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಹೆಚ್ಚಿರುವ ಆಹಾರ ಸೇವಿಸಿ

ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಹೆಚ್ಚಿರುವ ಆಹಾರ ಸೇವಿಸಿ

ನಿಮ್ಮ ಆಹಾರದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಹೆಚ್ಚಿರುವಂತೆ ನೋಡಿಕೊಳ್ಳಿ. ವಿವಿಧ ಒಣಫಲಗಳು, ಬೀನ್ಸ್, ಇಡಿಯ ಧಾನ್ಯದ ಹಿಟ್ಟಿನಿಂದ ಮಾಡಿದ ಬ್ರೆಡ್, ಬಾಳೆಹಣ್ಣು, ಕಿತ್ತಳೆ ಸೇವಿಸುವುದರಿಂದ ದಿನದ ಅಗತ್ಯದ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಲಭ್ಯವಾಗುತ್ತದೆ. ಈ ಖನಿಜಗಳು ಸ್ನಾಯುಗಳಿಗೆ ಉತ್ತಮ ಪೋಷಣೆ ನೀಡುವ ಮೂಲಕ ಪೆಡಸಾಗುವ ಸಂಭವಗಳನ್ನು ಕಡಿಮೆಗೊಳಿಸುತ್ತದೆ.

ಲ್ಯಾವೆಂಡರ್ ಮತ್ತು ರೋಸ್ಮರಿ ಎಣ್ಣೆ ಬಳಸಿ

ಲ್ಯಾವೆಂಡರ್ ಮತ್ತು ರೋಸ್ಮರಿ ಎಣ್ಣೆ ಬಳಸಿ

ಪೆಡಸಾಗಿದ್ದ ಸ್ನಾಯುಗಳಿಗೆ ಲ್ಯಾವೆಂಡರ್ ಅಥವಾ ರೋಸ್ಮರಿ ಹೂವಿನ ಎಣ್ಣೆಯ ಮಸಾಜ್ ಉತ್ತಮ ಪರಿಹಾರ ನೀಡುತ್ತದೆ. ಇದಕ್ಕಾಗಿ ಈ ಎಣ್ಣೆಯನ್ನು ಕೊಂಚವೇ ಬಿಸಿ ಮಾಡುವುದು ಅಗತ್ಯ. ಬಿಸಿ ಎಣ್ಣೆಯನ್ನು ಮಸಾಜ್ ಮಾಡಿ ನಂತರ ಒಂದು ಟವೆಲ್ಲಿನಿಂದ ಈ ಭಾಗವನ್ನು ಸುತ್ತಿ ಬೆಚ್ಚಗಿರಿಸುವ ಮೂಲಕ ಪೆಡಸು ಕಡಿಮೆಯಾಗುವುದು ಹಾಗೂ ಶೀಘ್ರವೇ ನೋವು ಸಹಾ ಕಡಿಮೆಯಾಗುವುದು. ಸುಮಾರು ಆರು ಘಂಟೆ ಈ ಎಣ್ಣೆಯ ಪಸೆ ಹಾಗೇ ಇರುವಂತೆ ನೋಡಿಕೊಳ್ಳಿ, ಬಳಿಕ ಸ್ನಾನ ಮಾಡಿ.

ರಾಸ್ಪ್ಬೆರಿ ಟೀ ಕುಡಿಯಿರಿ

ರಾಸ್ಪ್ಬೆರಿ ಟೀ ಕುಡಿಯಿರಿ

ಇಂದು ವಿವಿಧ ಹಣ್ಣುಗಳ ಸ್ವಾದದ ಟೀ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಇದರಲ್ಲಿ ರಾಸ್ಪ್ಬೆರಿ ಹಣ್ಣುಗಳ ಸ್ವಾದದ ಟೀ ಬ್ಯಾಗ್ ಒಂದನ್ನು ಒಂದು ಲೋಟ ಕುದಿಯುವ ನೀರಿಗೆ ಹಾಕಿ ದಿನದಲ್ಲಿ ಎರಡು ಬಾರಿ, ಬೆಳಿಗ್ಗೆ ಮತ್ತು ಸಂಜೆ ಕುಡಿಯುವ ಮೂಲಕವೂ ಕಾಲಿನ ನೋವು ಕಡಿಮೆಯಾಗುತ್ತದೆ.

ಸಾಸಿವೆ ಎಣ್ಣೆ ಬಳಸಿ

ಸಾಸಿವೆ ಎಣ್ಣೆ ಬಳಸಿ

ಕಾಲಿನ ಪೆಡಸು ಮತ್ತು ನೋವು ಸತತವಾಗಿದ್ದರೆ ನಿಮ್ಮ ಅಡುಗೆ ಎಣ್ಣೆಯನ್ನು ಕೆಲದಿನಗಳಿಗಾಗಿ ಸಾಸಿವೆ ಎಣ್ಣೆಯಲ್ಲಿ ಬದಲಿಸಿ. ಕಾಲಿನ ಪೆಡಸಿಗೆ ಅಸೆಟಿಕ್ ಆಮ್ಲದ ಕೊರತೆಯೂ ಕಾರಣವಗಿರಬಹುದು. ಈ ಎಣ್ಣೆಯಲ್ಲಿರುವ ಅಸೆಟಿಕ್ ಆಮ್ಲ ಜೀರ್ಣಾಂಗಗಳ ಮೂಲಕ ರಕ್ತಸೇರಿ ಕೆಲವೇ ದಿನಗಳಲ್ಲಿ ಕಾಲಿನ ಪೆಡಸನ್ನು ಕಡಿಮೆಗೊಳಿಸುತ್ತದೆ.

ಬಾಳೆಹಣ್ಣು ತಿನ್ನಿ

ಬಾಳೆಹಣ್ಣು ತಿನ್ನಿ

ಬಾಳೆಹಣ್ಣುಗಳಲ್ಲಿ ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಹೇರಳವಾಗಿರುತ್ತದೆ. ಪ್ರತಿದಿನ ನಾಲ್ಕಾರು ಬಾಳೆಹಣ್ಣುಗಳನ್ನು ತಿನ್ನುವುದರಿಂದ ಶೀಘ್ರವೇ ಕಾಲಿನ ಪೆಡಸು ಕಡಿಮೆಯಾಗುತ್ತದೆ. ಪಚ್ಚಬಾಳೆಗಿಂತಲೂ ಕರಿಬಾಳೆ, ಏಲಕ್ಕಿಬಾಳೆ ಅಥವಾ ಪುಟ್ಟಬಾಳೆ ಉತ್ತಮ. ರಾತ್ರಿ ಮಲಗುವ ಮುನ್ನ ಹಾಲಿನ ಜೊತೆ ಬಾಳೆಹಣ್ಣು ಸೇವಿಸುವುದು ಉತ್ತಮ.

ಇತರ ಕಾರಣಗಳೇನು ಎಂದು ಕಂಡುಕೊಳ್ಳಿ

ಇತರ ಕಾರಣಗಳೇನು ಎಂದು ಕಂಡುಕೊಳ್ಳಿ

ಕಾಲಿನ ಪೆಡಸಿಗೆ ಹಿಂದಿನ ದಿನದ ಅತಿ ಹೆಚ್ಚಿನ ವ್ಯಾಯಾಮ ಅಥವಾ ಚಟುವಟಿಕೆ ಕಾರಣವಾಗಿರಬಹುದು. ಗರ್ಭಿಣಿಯರಿಗೆ ಪೆಡಸಾಗುವುದು ಸಾಮಾನ್ಯವಾಗಿದೆ. ಇನ್ನುಳಿದಂತೆ ಸಾಕಷ್ಟು ನೀರು ಕುಡಿಯದೇ ಇರುವುದು, ಅತಿಸಾರ, ವಾಂತಿ, ಪೌಷ್ಟಿಕ ಆಹಾರದ ಕೊರತೆ ಮೊದಲಾದ ಕಾರಣಗಳಿರಬಹುದು. ಕೆಲವು ಪರೀಕ್ಷೆಗಳ ಮೂಲಕವೇ ಕಂಡುಹಿಡಿಯಬಹುದಾದ ಮೂತ್ರಪಿಂಡಗಳ ತೊಂದರೆ, ಥೈರಾಯ್ಡ್ ಗ್ರಂಥಿಯ ಊತ, ಯಕೃತ್ ನಲ್ಲಿ ತೊಂದರೆ ಮೊದಲಾದ ಕಾರಣಗಳಿರಬಹುದು. ಆದರೆ ಯಾವುದಕ್ಕೂ ನಿರ್ಲಕ್ಷ್ಯ ಸಲ್ಲದು. ಇದು ವಿಪರೀತಗೊಂಡರೆ ಹೃದಯಕ್ಕೂ ತೊಂದರೆಯಾಗಬಹುದು. ವಿಶೇಷವಾಗಿ peripheral arterial disease ಎಂಬ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚುತ್ತದೆ.

ಕೆಲವು ಔಷಧಿಗಳೂ ಕಾರಣವಾಗಬಹುದು

ಕೆಲವು ಔಷಧಿಗಳೂ ಕಾರಣವಾಗಬಹುದು

ಕಾಲಿನ ಪೆಡಸಿಗೆ ಕೆಲವು ಔಷಧಿಗಳ ಅಡ್ಡಪರಿಣಾಮಗಳೂ ಕಾರಣವಾಗಬಹುದು. ಸಂತಾನನಿರೋಧಕ ಗುಳಿಗೆ, ಖಿನ್ನತೆಗೆ ನೀಡುವ ಔಷಧಿ, ದೇಹದ ಯಾವುದೋ ಒಂದು ಶಕ್ತಿಯನ್ನು ಹೆಚ್ಚಿಸಲು ಸೇವಿಸುವ ಸ್ಟೆರಾಯ್ಡ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಗುಳಿಗೆಗಳು ಮೊದಲಾದವುಗಳೂ ಕಾಲಿನ ಪೆಡಸನ್ನುಂಟುಮಾಡಬಹುದು. ಯಾವುದಕ್ಕೂ ನಿಮ್ಮ ವೈದ್ಯರನ್ನು ಭೇಟಿಯಾಗಿ ಸೂಕ್ತವಾದ ಸಲಹೆ ಪಡೆದುಕೊಳ್ಳುವುದು ಉತ್ತಮ.

ಕಾಲು ಪೆಡಸಾದರೆ ತಕ್ಷಣ ಏನು ಮಾಡಬೇಕು?

ಕಾಲು ಪೆಡಸಾದರೆ ತಕ್ಷಣ ಏನು ಮಾಡಬೇಕು?

ಈ ಸ್ಥಿತಿಗೆ ಚಾರ್ಲಿ ಹಾರ್ಸ್ ಎಂಬ ಅನ್ವರ್ಥನಾಮವೂ ಇದೆ. ಈ ಸ್ಥಿತಿ ಬಂದ ಮೇಲೆ ಗಾಬರಿಯಾಗದೇ ಕೊಂಚ ತಾಳ್ಮೆಯಿಂದ ನಿರ್ವಹಿಸುವುದರಿಂದ ಪೆಡಸು ಶೀಘ್ರವೇ ತಹಬಂದಿಗೆ ಬರುತ್ತದೆ. ಪೆಡಸಾಗಿದ್ದುದು ಗೊತ್ತಾದ ತಕ್ಷಣ ಯಾರನ್ನಾದರೂ ಸಹಾಯಕ್ಕೆ ಕರೆಯುವುದು ಉತ್ತಮ.

* ಒಂದು ವೇಳೆ ಬಲಗಾಲು ಪೆಡಸಾಗಿದ್ದರೆ ದೇಹವನ್ನು ಬಲಗಾಲ ಮೇಲೆ ಭಾರ ಬೀಳುವಂತೆ ವಾಲಿಸಿ ನಿಧಾನವಾಗಿ ಮೊಣಕಾಲು ನೇರಗೊಳಿಸಲು ಯತ್ನಿಸಿ.

* ಒಂದು ವೇಳೆ ಮೊಣಕಾಲು ಮಡಚಿಕೊಂಡಿದ್ದು ಪಾದ ಮೇಲ್ಭಾಗಕ್ಕೆ ಸೆಳೆತಗೊಂಡಿದ್ದರೆ ಎರಡೂ ಮೊಣಕಾಲು ಮಡಚಿರುವಂತೆ ಕುಳಿತು ಮೊದಲು ಪಾದಗಳನ್ನು ನಿಮ್ಮ ತಲೆಯಿಂದ ದೂರವಾಗಿಸಲು ಯತ್ನಿಸಿ. ಪಾದಗಳು ಸಡಿಲಗೊಂಡ ಬಳಿಕವೇ ಮೊಣಕಾಲುಗಳನ್ನು ಸಡಿಲಗೊಳಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾಲು ಪೆಡಸಾದರೆ ತಕ್ಷಣ ಏನು ಮಾಡಬೇಕು?

ಕಾಲು ಪೆಡಸಾದರೆ ತಕ್ಷಣ ಏನು ಮಾಡಬೇಕು?

*ಒಂದು ವೇಳೆ ತೊಡೆಗಳ ಮುಂಭಾಗದ ಕೆಳಭಾಗ (ಅಂದರೆ ಮೊಣಗಂಟಿನ ಮೇಲಿನ ಸ್ನಾಯು) ಪೆಡಸಾಗಿದ್ದರೆ ಕುರ್ಚಿಯ ಕೈ ಅಥವಾ ಮೇಜನ್ನು ಕೈಗಳಿಂದ ಆಧಾರವಾಗಿ ಹಿಡಿದು ನಿಂತುಕೊಳ್ಳಿ ಮತ್ತು ಮುಂದಕ್ಕೆ ಬಾಗಿ. ಈಗ ಪಾದವನ್ನು ಆದಷ್ಟು ನೇರಗೊಳಿಸಿ ಕಾಲನ್ನು ಹಿಂದಕ್ಕೆ ತರಲು ಪ್ರಯತ್ನಿಸಿ. ಹೀಗೇ ಎರಡೂ ಕಾಲುಗಳಿಗೆ ಮಾಡಿ.

* ಸಡಿಲವಾದ ಬಳಿಕ ಕೆಲವು ನಿಮಿಷಗಳಾದರೂ ಹಾಗೇ ಇರಲು ಬಿಡಿ. ಒಂದು ವೇಳೆ ಮತ್ತೆ ಮಡಚಿದರೆ ಸ್ನಾಯು ಮೊದಲಿಗಿಂತಲೂ ಹೆಚ್ಚು ಪಡಸಾಗುತ್ತದೆ. ಈ ಭಾಗದಲ್ಲಿ ರಕ್ತಸಂಚಾರ ಹೆಚ್ಚಿ ಸ್ನಾಯು ಸಡಿಲಗೊಳ್ಳಲು ನಾಲ್ಕಾರು ನಿಮಿಷಗಳಾದರೂ ಬೇಕು. ಈ ಹೊತ್ತಿನಲ್ಲಿ ನಯವಾಗಿ ಸ್ನಾಯುಗಳನ್ನು ಅತ್ತಿತ್ತ ಅಲ್ಲಾಡಿಸುವ ಮೂಲಕ ಮಸಾಜ್ ಮಾಡುವುದು, ಬಿಸಿಯ ಶಾಖ ನೀಡುವುದು ಉತ್ತಮ.

English summary

Remedies For Leg Cramps At Night

Have you ever experienced leg cramps and pain at bedtime or during night? This is common thing that the muscles of your leg will get tightened and can pose no such health threat. They mostly occur in thighs, feet and calf muscles. This can be a very annoying condition and may disturb your sleep.
Story first published: Tuesday, July 28, 2015, 19:58 [IST]
X
Desktop Bottom Promotion