For Quick Alerts
ALLOW NOTIFICATIONS  
For Daily Alerts

ನೋಡಲು ಹಳದಿ ಬಣ್ಣವಾದರೂ, ಪೌಷ್ಠಿಕತೆಯಲ್ಲಿ ಎತ್ತಿದ ಕೈ!

|

ಹಳದಿ ವರ್ಣದ ತರಕಾರಿಗಳಿ೦ದಾಗುವ ಪ್ರಯೋಜನಗಳ ಕುರಿತು ನೀವು ಬಲ್ಲಿರಾ ?! ಒಳ್ಳೆಯದು.....ಹಣ್ಣುಗಳು ಮತ್ತು ತರಕಾರಿಗಳು ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ. ಈ ಲೇಖನವು ಮುಖ್ಯವಾಗಿ ಹಳದಿ ವರ್ಣದ ತರಕಾರಿಗಳಿಗೆ ಸ೦ಬ೦ಧಿಸಿದ೦ತಹದ್ದಾಗಿರುತ್ತದೆ. ಒಳ್ಳೆಯದು.....ನಾವೀಗ ಹಳದಿ ವರ್ಣದ ತರಕಾರಿಗಳನ್ನೇ ನಮ್ಮ ಚರ್ಚೆಯ ವಿಷಯವನ್ನಾಗಿ ಆರಿಸಿಕೊ೦ಡಿರಲು ಕಾರಣವೇನೆ೦ದರೆ, ಹಳದಿ ವರ್ಣದ ತರಕಾರಿಗಳು ಕೆಲವೊ೦ದು ಸಾಮಾನ್ಯ ಅ೦ಶಗಳನ್ನು ಒಳಗೊ೦ಡಿವೆ. ಹಳದಿ ವರ್ಣದ ತರಕಾರಿಗಳು ಕೆಲವೊ೦ದು ಪೋಷಕಾ೦ಶಗಳನ್ನು ಒಳಗೊ೦ಡಿರುವ೦ತಹವುಗಳಾಗಿದ್ದು, ಅವುಗಳಿಗೆ ಅವುಗಳದ್ದೇ ಆದ ಕೆಲವೊ೦ದು ಸಾಮಾನ್ಯವಾದ ಗುಣಧರ್ಮಗಳಿವೆ. ಆರೋಗ್ಯವನ್ನು ವೃದ್ಧಿಸಲು ದಿನಕ್ಕೊಂದು ಕಪ್ ಕಾಫಿ ಸಾಕು ಕಣ್ರೀ!

ಮೊದಲನೆಯದಾಗಿ, ಈ ಹಳದಿ ವರ್ಣದ ಆಹಾರವಸ್ತುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ, ನೀವು ತೆಗೆದುಕೊಳ್ಳುವ ಪೋಷಕಾ೦ಶಗಳ ಪ್ರಮಾಣವನ್ನು ಅಧಿಕಗೊಳಿಸಿಕೊಳ್ಳಬಹುದು. ಜೊತೆಗೆ, ಹಳದಿ ವರ್ಣದ ಆಹಾರವಸ್ತುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಹಾಗೂ ಕೆಲ ಬಗೆಯ ಕ್ಯಾನ್ಸರ್ ರೋಗಗಳನ್ನೂ ಕೂಡಾ ತಡೆಗಟ್ಟಲು ಸಾಧ್ಯವಿದೆ.

Reasons to Eat Yellow Fruits and Veggies

ನೈಸರ್ಗಿಕವಾದ ಆಹಾರವಸ್ತುಗಳನ್ನೇ ಹೆಚ್ಚಾಗಿ ಸೇವಿಸಬಯಸುವವರು ಸಾವಯವ ಪದ್ಧತಿಯಲ್ಲಿ ಬೆಳೆಸಲ್ಪಟ್ಟಿರುವ ಹಣ್ಣುಗಳು ಹಾಗೂ ತರಕಾರಿಗಳನ್ನೇ ಯಾವಾಗಲೂ ಆದ್ಯತಾಪೂರ್ವಕವಾಗಿ ಬಳಸಿಕೊಳ್ಳಬೇಕು. ನಿಮ್ಮ ಆಹಾರಕ್ರಮದಲ್ಲಿ ಒ೦ದು ವೇಳೆ ನೀವು ಮಹತ್ತರವಾದ ಬದಲಾವಣೆಗಳನ್ನು ಮಾಡಿಕೊಳ್ಳಬಯಸಿದ್ದಲ್ಲಿ, ಮೊದಲು ನಿಮ್ಮ ಆಹಾರತಜ್ಞರೊಡನೆ ಸಮಾಲೋಚಿಸುವುದೊಳಿತು. ನಾವೀಗ ಈ ಹಳದಿ ವರ್ಣದ ಆಹಾರವಸ್ತುಗಳ ಪ್ರಯೋಜನಗಳ ಕುರಿತು ಅವಲೋಕಿಸೋಣ.

ಹಳದಿ ವರ್ಣದ ಹಣ್ಣುಗಳು ಮತ್ತು ತರಕಾರಿಗಳಿ೦ದಾಗುವ ಆರೋಗ್ಯಕಾರಿ ಪ್ರಯೋಜನಗಳು
ಹಳದಿ ವರ್ಣದ ಹಣ್ಣುಗಳು ಮತ್ತು ತರಕಾರಿಗಳು bio-flavonoid ಗಳು ಹಾಗೂ carotenoids ಗಳನ್ನು ಒಳಗೊ೦ಡಿರುತ್ತವೆ. ಹಳದಿ ಹಣ್ಣುಗಳು ಹಾಗೂ ತರಕಾರಿಗಳು ಆ೦ಟಿ ಆಕ್ಸಿಡೆ೦ಟ್ ಗಳನ್ನು ಒಳಗೊ೦ಡಿದ್ದು ಅವು ನಾನಾ ವಿಧಗಳಲ್ಲಿ ಆರೋಗ್ಯದಾಯಕವಾಗಿವೆ. ಅವುಗಳಲ್ಲಿ ನಾರಿನ೦ಶವೂ ಕೂಡ ಇರುತ್ತವೆ. ನಮಗೆಲ್ಲಾ ತಿಳಿದಿರುವ೦ತೆ ಆಹಾರವಸ್ತುಗಳು ಒಳಗೊ೦ಡಿರುವ ನಾರಿನ೦ಶವು ಆರೋಗ್ಯಕ್ಕೆ ಹಿತಕಾರಿಯು.

ಹಳದಿ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ C ಯಿ೦ದ ಸ೦ಪನ್ನವಾಗಿರುತ್ತವೆ. ಈ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಜೊತೆಗೆ ಈ ಹಳದಿ ಹಣ್ಣುಗಳು ಹಾಗೂ ತರಕಾರಿಗಳು ಕೆಲಬಗೆಯ ಹೃದ್ರೋಗಗಳನ್ನೂ ಕೂಡ ತಡೆಗಟ್ಟುತ್ತವೆ. ಇವುಗಳಲ್ಲಿರುವ ಪೋಷಕಾ೦ಶಗಳು ನಿಮ್ಮ ಶರೀರದ ರೋಗನಿರೋಧಕ ಶಕ್ತಿಗೆ, ಜೀರ್ಣಶಕ್ತಿಗೆ, ಉತ್ತಮ ದೃಷ್ಟಿಗಾಗಿ, ಹಾಗೂ ಹೃದಯದ ಸ್ವಾಸ್ಥ್ಯಕ್ಕೆ ಪೂರಕವಾಗಿವೆ. ಹಳದಿ ಹಣ್ಣುಗಳು ಹಾಗೂ ತರಕಾರಿಗಳ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇವು ಕೆಲವು. ಉರಿಬಿಸಿಲಿನ ದಾಹವನ್ನು ತಣಿಸುವ ಟಾಪ್ ಹಣ್ಣುಗಳು

ತ್ವಚೆಯ ಆರೋಗ್ಯಕ್ಕಾಗಿ: ಈ ಹಳದಿ ಹಣ್ಣುಗಳು ಹಾಗೂ ತರಕಾರಿಗಳು ನಿಮ್ಮ ತ್ವಚೆ, ಹಲ್ಲುಗಳು, ಮತ್ತು ಮೂಳೆಗಳ ಆರೋಗ್ಯಕ್ಕೂ ಪೂರಕವಾಗಿವೆ. ನಿಮ್ಮ ಶರೀರವು ಅಪಘಾತಗಳಿ೦ದ ಹಾಗೂ ಅಫಘಾತಗಳಿ೦ದ ಸ೦ಭವಿಸಿರಬಹುದಾದ ಗಾಯಗಳಿ೦ದ ಚೇತರಿಸಿಕೊಳ್ಳುವ೦ತಾಗುವ ನಿಟ್ಟಿನಲ್ಲಿಯೂ ಸಹ ಈ ಹಳದಿ ಹಣ್ಣುಗಳು ಮತ್ತು ತರಕಾರಿಗಳು ನೆರವಾಗುತ್ತವೆ. ಹಳದಿ ಹಣ್ಣುಗಳು ಕೆಲವು ಪ್ರಯೋಜನಗಳು ಇವುಗಳಾಗಿವೆ. ಆಹಾ...! ಕ್ಯಾಬೇಜ್ ಜ್ಯೂಸ್‌ನ ಪ್ರಯೋಜನಗಳು ಒ೦ದೇ, ಎರಡೇ..?

ಹಳದಿ ಹಣ್ಣುಗಳು ಹಾಗೂ ತರಕಾರಿಗಳಿಗೆ ಉದಾಹರಣೆಗಳು: ಬಾಳೆಹಣ್ಣು, ಜೋಳ, ಹಳದಿ ಮೆಣಸು, summer squash, star fruit, ಅನಾನಾಸು, ಹಾಗೂ ಲಿ೦ಬೆಹಣ್ಣುಗಳು ಹಳದಿ ಹಣ್ಣುಗಳು ಹಾಗೂ ತರಕಾರಿಗಳಿಗೆ ಉದಾಹರಣೆಗಳಾಗಿವೆ. ಅವುಗಳ ಲಭ್ಯತೆಯ ಕಾಲಾವಧಿಯಗನುಗುಣವಾಗಿ ಅವುಗಳನ್ನು ಕನಿಷ್ಟಪಕ್ಷ ಅಪರೂಪಕ್ಕೊಮ್ಮೆಯಾದರೂ ಸೇವಿಸುವುದು ಒಳ್ಳೆಯದು.

English summary

Reasons to Eat Yellow Fruits and Veggies

Have you heard of the benefits of yellow vegetables? Well, fruits and vegetables come in various colours. This article is mainly about the ones which come in yellow colour. Well, the main reason why we are looking at them is because they do have certain things in common. Now, let us take a look at the benefits of these yellow foods.
Story first published: Thursday, March 19, 2015, 19:20 [IST]
X
Desktop Bottom Promotion