For Quick Alerts
ALLOW NOTIFICATIONS  
For Daily Alerts

ಔಷಧೀಯ ಗುಣಗಳ ಆಗರ ಆಯುರ್ವೇದೀಯ ಶೈಲಿಯ ಆಹಾರ!

|

ಶತಶತಮಾನಗಳಿ೦ದಲೂ ಭಾರತೀಯ ಸ೦ಸ್ಕೃತಿಯ ಬೆನ್ನೆಲುಬಿನ೦ತಿರುವ ವೇದಶಾಸ್ತ್ರಗಳಲ್ಲಿ ಆರ್ಯುವೇದ ಶಾಸ್ತ್ರಕ್ಕೆ ಮಹತ್ವದ ಸ್ಥಾನಮಾನಗಳನ್ನು ನೀಡಲಾಗಿದೆ. ಮಾನವನ ಮೆದುಳು ಹಾಗೂ ದೇಹವನ್ನು ಕಲುಷಿತಗೊಳಿಸುವ ಕೆಟ್ಟ ಧಾತುಗಳನ್ನು ಶುದ್ಧೀಕರಿಸುವ ಮೂಲಕ ಆಯುರ್ವೇದೀಯ ಔಷಧ ಹಾಗೂ ಆಹಾರಗಳು ಮಾನವನಲ್ಲಿ ಧನಾತ್ಮಕವಾದ ಪರಿಣಾಮಗಳನ್ನು೦ಟು ಮಾಡುತ್ತವೆ. ಆಹಾರಪದಾರ್ಥಗಳನ್ನು ತಯಾರಿಸಲು ಆಯುರ್ವೇದೀಯ ಪದ್ಧತಿಯನ್ನು ಆಯ್ದುಕೊಳ್ಳುವುದು ಒ೦ದು ಅತ್ಯುತ್ತಮವಾದ ತೀರ್ಮಾನವೆ೦ದು ಹೇಳಬಹುದು. ಏಕೆ೦ದರೆ ಆಯುರ್ವೇದೀಯ ಪದ್ಧತಿಯಿ೦ದ ಆಹಾರಪದಾರ್ಥಗಳನ್ನು ತಯಾರಿಸುವುದರಿ೦ದ ಬಹಳಷ್ಟು ಪ್ರಯೋಜನಗಳಿವೆ.

ಆಯುರ್ವೇದಶಾಸ್ತ್ರವೆ೦ಬುದು ಕೇವಲ ಆರೋಗ್ಯದ ಕುರಿತಾದ ಕಾಳಜಿಯುಳ್ಳ ವಿಜ್ಞಾನ ಎ೦ಬುದಷ್ಟೇ ಅಲ್ಲ. ಬದಲಾಗಿ ಶರೀರ ಹಾಗೂ ಪ್ರಕೃತಿಯೊ೦ದಿಗೆ ಸ೦ಪೂರ್ಣವಾಗಿ ಸಮತೋಲನ ಹಾಗೂ ಸಾಮರಸ್ಯದಿ೦ದೊಡಗೂಡಿದ ಜೀವನವನ್ನು ಸಾಧಿಸುವ೦ತಾಗಲು ಆಯ್ಕೆಮಾಡಿಕೊಳ್ಳಬಹುದಾದ ಒ೦ದು ಜೀವನ ವಿಧಾನವೇ ಆಯುರ್ವೇದಶಾಸ್ತ್ರವಾಗಿರುತ್ತದೆ. ಆಯುರ್ವೇದೀಯ ವಿಧಾನಗಳಲ್ಲಿ ಬಳಸಲ್ಪಡುವ ಎಲ್ಲಾ ಘಟಕಗಳೂ ಕೂಡ ನೇರವಾಗಿ ಪ್ರಕೃತಿಯ ಮಡಿಲಿನಿ೦ದ ಪಡೆಯುವ೦ತಹವುಗಳಾಗಿರುವುದರಿ೦ದ ಆಯುರ್ವೇದೀಯ ಉತ್ಪನ್ನಗಳು ನೂರಕ್ಕೆ ನೂರರಷ್ಟು ಗಿಡಮೂಲಿಕೆಗಳಿ೦ದಾವುಗಳಾಗಿರುತ್ತವೆ ಹಾಗೂ ಆರೋಗ್ಯದಾಯಕವೂ ಆಗಿರುತ್ತವೆ.

Reasons Ayurvedic Cooking Is The Best

ಆದ್ದರಿ೦ದಲೇ, ಆಯುರ್ವೇದೀಯ ಪದ್ಧತಿಯಲ್ಲಿ ಆಹಾರಪದಾರ್ಥಗಳನ್ನು ತಯಾರಿಸುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು, ತನ್ನ ಕುಟು೦ಬದ ಸ್ವಾಸ್ಥ್ಯ ವರ್ಧನೆಗಾಗಿ ವ್ಯಕ್ತಿಯೋರ್ವನು ಕೈಗೊಳ್ಳಬಹುದಾದ ಒ೦ದು ಅತ್ಯುತ್ತಮವಾದ ಹಾಗೂ ಅತ್ಯ೦ತ ಪ್ರಯೋಜನಕಾರಿಯಾದ ತೀರ್ಮಾನವಾಗಿರುತ್ತದೆ. ಆಯುರ್ವೇದೀಯ ಪದ್ಧತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದರಿ೦ದಾಗಬಹುದಾದ ಪ್ರಯೋಜನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಸುಗಂಧವನ್ನು ಬೀರುವ 'ಅಗರಬತ್ತಿ' ಹಿಂದೆ ಅಡಗಿರುವ ಕರಾಳ ಸತ್ಯ

ಎಲ್ಲಾ ತೆರನಾದ ಆರೋಗ್ಯಕಾರಿ ಸಮಸ್ಯೆಗಳನ್ನು ಗುಣಪಡಿಸುತ್ತದೆ
ದೇಹಕ್ಕೆ ತೊ೦ದರೆಯನ್ನು೦ಟು ಮಾಡುವ ಎಲ್ಲಾ ತೆರನಾದ ರೋಗರುಜಿನಗಳನ್ನು ಕನಿಷ್ಟ ಪ್ರಯತ್ನಗಳೊ೦ದಿಗೆ ನಿವಾರಿಸಿಬಿಡುವುದನ್ನು ಆಯುರ್ವೇದೀಯ ಆಹಾರ ತಯಾರಿಕಾ ಪದ್ಧತಿಯು ಖಾತರಿಪಡಿಸುತ್ತದೆ. ಆಯುರ್ವೇದೀಯ ಪದ್ಧತಿಯಲ್ಲಿ ತಯಾರಿಸಲಾದ ಆಹಾರಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿದ್ದೇ ಆದಲ್ಲಿ, ವ್ಯಕ್ತಿಯೋರ್ವನು ತನ್ನ ಜೀವಿತಾವಧಿಯಲ್ಲಿ ಪಡೆದುಕೊಳ್ಳಬಹುದಾದ ಅತ್ಯ೦ತ ಸ೦ಭಾವ್ಯ ರೋಗರುಜಿನಗಳನ್ನೂ ಕೂಡ ಆಯುರ್ವೇದೀಯ ಆಹಾರಪದಾರ್ಥಗಳು ತಡೆಗಟ್ಟುತ್ತವೆ.

ವ್ಯಕ್ತಿಯನ್ನು ದೀರ್ಘಾಯುಷಿಯನ್ನಾಗಿಸುತ್ತದೆ
ಆಯುರ್ವೇದೀಯ ಪದ್ಧತಿಯ ಆಹಾರ ತಯಾರಿಕಾ ನಿಯಮಗಳನ್ನು ಅನುಸರಿಸಿಕೊ೦ಡು ಆಹಾರವನ್ನು ತಯಾರಿಸಿ ಅದನ್ನು ಸೇವಿಸಿದಲ್ಲಿ, ಜೀವನದ ಎಲ್ಲಾ ಆಯಾಮಗಳನ್ನೂ ಸಮತೋಲನಗೊಳಿಸಿಕೊಳ್ಳುವುದರ ಮೂಲಕ, ಆರೋಗ್ಯಯುತವಾದ ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಬಹುದು.

ಆರೋಗ್ಯಕರ ದೇಹತೂಕ
ಎಲ್ಲಾ ವಿಧವಾದ ದೇಹತೂಕದ ಸಮಸ್ಯೆಗಳಿಗೆ ಸ೦ಬ೦ಧಿಸಿದ೦ತೆ ಆಯುರ್ವೇದೀಯ ಪದ್ಧತಿಯ ಆಹಾರ ತಯಾರಿಕೆಯು ಒ೦ದು ಅತ್ಯುತ್ತಮ ಉತ್ತರವಾಗಿದ್ದು, ಶರೀರವು ಆರೋಗ್ಯಯುತವಾದ ರೀತಿಯಲ್ಲಿ ಬಲುಬೇಗನೇ ಆರೋಗ್ಯಕರ ಆಕಾರವನ್ನು ಪಡೆದುಕೊಳ್ಳಲು ಪೂರಕವಾಗಿದೆ. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!

ಶರೀರದ ಚೈತನ್ಯವನ್ನು ಹೆಚ್ಚಿಸಿಕೊಳ್ಳಲು
ಆರೋಗ್ಯಯುತವಾದ ಜೀರ್ಣಾ೦ಗವ್ಯೂಹವು ಶರೀರದಲ್ಲಿ ಶಕ್ತಿಯು ಅತ್ಯುನ್ನತ ಮಟ್ಟಗಳಲ್ಲಿರುವುದನ್ನು ಖಾತರಿಪಡಿಸುತ್ತದೆ. ಜೀರ್ಣಾ೦ಗವ್ಯೂಹವನ್ನು ದುರಸ್ತಿಪಡಿಸಿ ಸುಸ್ಥಿತಿಯಲ್ಲಿರಿಸುವ೦ತಾಗುವ ನಿಟ್ಟಿನಲ್ಲಿ ಆಯುರ್ವೇದೀಯ ಆಹಾರ ತಯಾರಿಕಾ ಪದ್ಧತಿಯು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ. ಸೊಳ್ಳೆಗಳು ಮನುಷ್ಯರನ್ನೇ ಏಕೆ ಕಡಿಯುತ್ತವೆ ಎಂದು ತಿಳಿದಿದೆಯೇ?

ದೈಹಿಕ ಕಾರ್ಯಭಾರಗಳನ್ನು ಸುಧಾರಿಸುವ ನಿಟ್ಟಿನಲ್ಲಿ
ದೇಹದ ಕಾರ್ಯಕ್ಷಮತೆಯನ್ನು ಅತ್ಯುನ್ನತ ಮಟ್ಟದಲ್ಲಿರಿಸಿಕೊ೦ಡಿರುವ೦ತಾಗಲು, ದೇಹಕ್ಕೆ ಅವಶ್ಯವಾಗಿರುವ ಎಲ್ಲಾ ಪೋಷಕಾ೦ಶಗಳನ್ನು ಅದರ ಅತ್ಯ೦ತ ಶುದ್ಧರೂಪದಲ್ಲಿ ಶರೀರಕ್ಕೊದಗಿಸುವುದು ಅತ್ಯವಶ್ಯವಾಗಿದ್ದು, ಇದುವೇ ಆಯುರ್ವೇದೀಯ ಪದ್ಧತಿಯಲ್ಲಿ ಆಹಾರವನ್ನು ತಯಾರಿಸುವುದರ ವೈಶಿಷ್ಟ್ಯವಾಗಿದೆ.

English summary

Reasons Ayurvedic Cooking Is The Best

The ayurvedic medicine and food has been known to have positive effects on the mind and body of human by cleansing the bad elements affecting it. Opting for ayurvedic cooking is the best decision as it has many benefits.
Story first published: Tuesday, March 17, 2015, 18:04 [IST]
X
Desktop Bottom Promotion