For Quick Alerts
ALLOW NOTIFICATIONS  
For Daily Alerts

ಮುತ್ತಿನಂತಹ ಬಿಳುಪಿನ ದಂತ ಪಂಕ್ತಿಗಾಗಿ ಸರಳ ಸಲಹೆಗಳು

|

ಹಲ್ಲುಗಳು ಬಿಳುಪಾಗಲು ಕೇವಲ ಟೂಥ್‍ಪೇಸ್ಟ್ ಮಾತ್ರ ಸಾಲದು. ಈ ನಿಟ್ಟಿನಲ್ಲಿ ಸಹಕರಿಸಲು ಮನೆ ಮದ್ದುಗಳು ಸಹ ಪರಿಣಾಮಕಾರಿಯಾದ ಫಲಿತಾಂಶಗಳನ್ನು ನೀಡುತ್ತವೆ! ನಿಮ್ಮ ಹಲ್ಲುಗಳ ಪಾಲಿಗೆ ಸುರಕ್ಷಿತವಾಗಿರುವ ಹಲವಾರು ಸ್ವಾಭಾವಿಕವಾದ ಮನೆ ಮದ್ದುಗಳು ದೊರೆಯುತ್ತವೆ. ಆದರೂ ಉಪ್ಪಿನಂತಹ ಪದಾರ್ಥವನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಂಡು, ನಂತರ ಹಲ್ಲುಗಳ ಮೇಲೆ ಲೇಪಿಸಬೇಕು. ಇದರಿಂದ ನಿಮ್ಮ ಹಲ್ಲುಗಳ ಮೇಲೆ ಇರುವ ಎನಾಮೆಲ್ ಹಾಳಾಗುವುದನ್ನು ತಡೆಯಬಹುದು.

ಉಪ್ಪಿನ ಹೊರತಾಗಿ, ಉಪ್ಪು ಮತ್ತು ಇದ್ದಿಲುಗಳನ್ನು ಮಿಶ್ರಣವನ್ನು ಹಿಂದಿನ ಕಾಲದಲ್ಲಿ ಹಲ್ಲುಗಳನ್ನು ಬಿಳುಪು ಮಾಡುವ ಟೂಥ್‍ಪೇಸ್ಟ್ ಆಗಿ ಬಳಸುತ್ತಿದ್ದರು. ಇಂದು ಬೋಲ್ಡ್‌ಸ್ಕೈ ನಿಮಗಾಗಿ ಹಲ್ಲುಗಳನ್ನು ಸ್ವಚ್ಛವಾಗಿ ಮತ್ತು ಬಿಳುಪಿನಿಂದ ಇರಿಸಿಕೊಳ್ಳುವ ಕುರಿತು ಕೆಲವೊಂದು ಸಲಹೆಗಳನ್ನು ನೀಡುತ್ತಿದೆ. ಇದರ ಮೂಲಕ ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆಯಲು ವಾರಕ್ಕೊಮ್ಮೆ ಪ್ರಯತ್ನಿಸಿ. ಗಮನಿಸಿ: ಒಂದೇ ಸಮಯದಲ್ಲಿ ಎರಡು ಪರಿಹಾರೋಪಾಯಗಳನ್ನು ಪ್ರಯತ್ನಿಸಲು ಹೋಗಬೇಡಿ. ಇದರಿಂದ ಅಡ್ಡ ಪರಿಣಾಮಗಳು ನಿಮ್ಮನ್ನು ಭಾದಿಸಬಹುದು. ಹಲ್ಲು ನೋವನ್ನು ಶಮನಗೊಳಿಸಲು ಸೂಕ್ತ ಪರಿಹಾರ

ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣ

ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣ

ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣವನ್ನು ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಹಲ್ಲುಗಳಿಗೆ ಲೇಪಿಸಿ ಉಜ್ಜಿ. ಇದನ್ನು 5 ದಿನ ಸತತವಾಗಿ ಮಾಡುವುದರಿಂದ ನಿಮ್ಮ ಹಲ್ಲುಗಳು ಫಳಫಳ ಹೊಳೆಯುತ್ತವೆ.

ಸ್ಟ್ರಾಬೆರ್ರಿ

ಸ್ಟ್ರಾಬೆರ್ರಿ

ಒಂದು ಹಿಡಿಯಷ್ಟು ಸ್ಟ್ರಾಬೆರ್ರಿಗಳನ್ನು ಹಿಂಡಿ ರಸದಂತೆ ಮಾಡಿಕೊಳ್ಳಿ. ಈ ರಸವನ್ನು ಹಲ್ಲುಗಳಿಗೆ ಲೇಪಿಸಿ. ಬಾಯಿ ತೆಗೆದು, ಆ ರಸ ಹಲ್ಲುಗಳ ಮೇಲೆಯೇ ಒಣಗಲು ಬಿಡಿ. ಯಾವಾಗ ಇದು ಒಣಗುತ್ತದೆಯೋ, ಆಗ ಅದನ್ನು ನೀರಿನಿಂದ ಮುಕ್ಕಳಿಸಿ ತೊಳೆಯಿರಿ. ಈ ಪರಿಹಾರವು ನಿಮ್ಮ ಹಲ್ಲುಗಳನ್ನು ಬೆಳ್ಳಗೆ ಮಾಡುವುದರ ಜೊತೆಗೆ, ಉಸಿರಿನ ದುರ್ವಾಸನೆಯನ್ನು ಸಹ ನಿವಾರಿಸುತ್ತದೆ.

ನಿಂಬೆ ರಸ

ನಿಂಬೆ ರಸ

ಒಂದು ನಿಂಬೆ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ. ನಂತರ ಈ ತುಂಡುಗಳನ್ನು ನೀರಿನಲ್ಲಿ ಮುಳುಗಿಸಿ. ಆ ನಂತರ ಈ ಮಿಶ್ರಣವನ್ನು ಹಲ್ಲುಗಳನ್ನು ಉಜ್ಜಲು ಬಳಸಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತವೆ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ನಿಮ್ಮ ಹಲ್ಲುಗಳನ್ನು ಬೆಳ್ಳಗೆ ಮಾಡಲು ಇರುವ ಅತ್ಯಂತ ಪರಿಣಾಮಕಾರಿಯಾದ ಉಪಾಯವೆಂದರೆ ಕ್ಯಾರಟ್ ಜ್ಯೂಸ್. ಇದು ಸಹ ನಿಮಗೆ ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಲೇಪಿಸುವ ಮುನ್ನ ಒಂದು ಚಿಟಿಕೆ ಉಪ್ಪನ್ನು ಬೆರೆಸಿಕೊಂಡರೆ ಮತ್ತಷ್ಟು ಒಳ್ಳೆಯದು.

ಬೇವಿನ ಎಲೆಗಳು

ಬೇವಿನ ಎಲೆಗಳು

ಒಂದು ಹಿಡಿ ಬೇವಿನ ಎಲೆಗಳನ್ನು ಜಜ್ಜಿ, ಅದನ್ನು ಹಾಲಿನೊಂದಿಗೆ ಬೆರೆಸಿ. ಇದನ್ನು ಒಂದು ದಪ್ಪವಾದ ಪೇಸ್ಟ್‌ನಂತೆ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ಟೂಥ್‌ಪೇಸ್ಟಿನಿಂದ ಹಲ್ಲುಜ್ಜುವ ಮೊದಲು ಬಳಸಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ನಿಂಬೆರಸದೊಂದಿಗೆ ಬೇಕಿಂಗ್ ಸೋಡಾವನ್ನು ಬೆರೆಸಿ ಒಂದು ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಹಲ್ಲುಗಳ ಮೇಲೆ ಲೇಪಿಸಿ. ಆದರೆ ಈ ಪರಿಹಾರವನ್ನು ಪ್ರತಿನಿತ್ಯ ಬಳಸಬೇಡಿ. ಏಕೆಂದರೆ ಇದರಿಂದ ನಿಮ್ಮ ಹಲ್ಲುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗಬಹುದು ಮತ್ತು ಹಲ್ಲುಗಳು ಸೂಕ್ಷವಾಗುವ ಸಾಧ್ಯತೆಯಿರುತ್ತದೆ.

ಸೇಬನ್ನು ಸೇವಿಸಿ

ಸೇಬನ್ನು ಸೇವಿಸಿ

ಆಂಗ್ಲ ಭಾಷೆಯ ಒಂದು ಗಾದೆ ಹೇಳುತ್ತದೆ. "ಪ್ರತಿನಿತ್ಯ ಒಂದು ಸೇಬನ್ನು ಸೇವಿಸಿದರೆ, ವೈಧ್ಯರನ್ನು ದೂರವಿಡಬಹುದು" ಎಂದು. ಪ್ರತಿ ನಿತ್ಯ ಸೇಬನ್ನು ಕಚ್ಚಿ ತಿನ್ನುವುದರಿಂದ ನಿಮ್ಮ ಹಲ್ಲುಗಳ ಮೇಲೆ ಇರುವ ಹಳದಿ ಟಾರನ್ನು ನಿವಾರಿಸಿಕೊಳ್ಳಬಹುದು ಹಾಗು ಮುಂದೆ ಇದರಿಂದ ನಿಮ್ಮ ಹಲ್ಲುಗಳು ಸದೃಢವಾಗುತ್ತವೆ.

ಕಿತ್ತಳೆ ಹಣ್ಣಿನ ಸಿಪ್ಪೆಗಳು

ಕಿತ್ತಳೆ ಹಣ್ಣಿನ ಸಿಪ್ಪೆಗಳು

ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಬಳಸುವುದರಿಂದ ಸಹ ನಿಮ್ಮ ಹಲ್ಲುಗಳನ್ನು ನೀವು ಬೆಳ್ಳಗೆ ಮಾಡಿಕೊಳ್ಳಬಹುದು. ಈ ಸಿಪ್ಪೆಗಳನ್ನು ನಿಮ್ಮ ಹಲ್ಲುಗಳ ಮೇಲೆ ವಾರಕ್ಕೆರಡು ಬಾರಿ ಉಜ್ಜಿ, ಇದರಿಂದ ಸಿಗುವ ಫಲಿತಾಂಶವನ್ನು ನೀವೇ ನೋಡಿ.

ಹಾಲು ಮತ್ತು ಯೋಗರ್ಟ್ ಮಿಶ್ರಣ

ಹಾಲು ಮತ್ತು ಯೋಗರ್ಟ್ ಮಿಶ್ರಣ

ಹಾಲು ಮತ್ತು ಯೋಗರ್ಟ್‌ನ ಮಿಶ್ರಣವನ್ನು ತಯಾರಿಸಿಕೊಳ್ಳಿ. ಕೆನೆಯಿಂದ ಕೂಡಿದ ಈ ಪದಾರ್ಥವನ್ನು ನಿಮ್ಮ ಹಲ್ಲಿನ ಮೇಲೆ ಲೇಪಿಸಿ, 15 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಬಾಯಿಯನ್ನು ಮುಕ್ಕಳಿಸಿ. ಈ ಪರಿಹಾರವು ನಿಮ್ಮ ಹಲ್ಲುಗಳಿಗೆ ಬಿಳುಪನ್ನು ನೀಡುತ್ತವೆ. ಈ ಪರಿಹಾರವನ್ನು ವಾರದಲ್ಲಿ ಎರಡು ಬಾರಿ, ಹಗಲಿನ ಸಮಯದಲ್ಲಿ ಯಾವಾಗಲಾದರು ಪ್ರಯತ್ನಿಸಿ ನೋಡಬಹುದು.

ಬೇ ಎಲೆ ಅಥವಾ ಪಲಾವ್ ಎಲೆ

ಬೇ ಎಲೆ ಅಥವಾ ಪಲಾವ್ ಎಲೆ

ಬೇ ಎಲೆ ಅಥವಾ ಪಲಾವ್ ಎಲೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಹಾಲನ್ನು ಬೆರೆಸಿಕೊಂಡು ಪೇಸ್ಟ್‌ನಂತೆ ಮಾಡಿಕೊಳ್ಳಿ. ಈ ಪೇಸ್ಟನ್ನು ಹಲ್ಲಿಗೆ ಹಚ್ಚಿ. 10 ನಿಮಿಷ ಬಿಟ್ಟು ಇದನ್ನು ಚೆನ್ನಾಗಿ ತೊಳೆಯಿರಿ. ವಾರದ ಮಟ್ಟಿಗೆ ಇದನ್ನು ಪುನರಾವರ್ತಿಸಿ.

ಆಪಲ್ ಸಿಡೆರ್ ವಿನೆಗರ್

ಆಪಲ್ ಸಿಡೆರ್ ವಿನೆಗರ್

ನೀವು ಹಳದಿ ಹಲ್ಲುಗಳ ಸಮಸ್ಯೆಯಿಂದ ಬೇಗ ಮುಕ್ತವಾಗಬೇಕಾದಲ್ಲಿ, ಆಪಲ್ ಸಿಡೆರ್ ವಿನೆಗರ್‌ನಿಂದ ಬಾಯಿಯನ್ನು ಮುಕ್ಕಳಿಸಿ. ಹೀಗೆ ಮಾಡಿದರೆ ಈ ವಿನೆಗರ್‌ನ ಕಟುವಾಸನೆ ಬಾಯಿಯಿಂದ ಹೋಗುತ್ತದೆ.

ಅಲೋವಿರಾದ ಶಕ್ತಿ

ಅಲೋವಿರಾದ ಶಕ್ತಿ

ಲೋಳೆ ಅಥವಾ ಅಲೋವಿರಾವನ್ನು ಜೆಲ್ ಆಗಿ ಮಾಡಿಕೊಳ್ಳಿ. ಇದನ್ನು ನಿಮ್ಮ ಹಲ್ಲಿನ ಮೇಲೆ ಲೇಪಿಸಿ.ಇದು ಅಲೋವಿರಾವನ್ನುಇಷ್ಟಪಡುವ ಬಹುತೇಕರ ಮನೆಯಲ್ಲಿ ಹಲ್ಲನ್ನು ಬೆಳ್ಳಗೆ ಮಾಡಿಕೊಳ್ಳಲು ಬಳಸುವ ಮನೆಮದ್ದಾಗಿದೆ.

ಅರಿಶಿನ

ಅರಿಶಿನ

ಅರಿಶಿನ ಬಳಸುವುದರಿಂದ ಹಲ್ಲುಗಳು ಬೆಳ್ಳಗಾಗುತ್ತದೆ ಎಂದು ನೀವು ಭಾವಿಸಿದಲ್ಲಿ, ಅದು ತಪ್ಪು. ಈ ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ. ಆ ಪೇಸ್ಟನ್ನು ಹಲ್ಲುಗಳಿಗೆ ಲೇಪಿಸಿ. 3 ನಿಮಿಷಗಳ ನಂತರ ಹಲ್ಲುಗಳನ್ನು ಚೆನ್ನಾಗಿ ತೊಳೆಯಿರಿ.

English summary

Powerful Remedies To Make Your Teeth White

Toothpaste is not the only key to shiny teeth. Home remedies too have the power in making them look great! There are a lot of natural home remedies for shiny white teeth that you can safely use.Today, Boldsky shares with you tips to get clear, shiny teeth. It should be used once in a week to see best results.
Story first published: Monday, January 12, 2015, 12:11 [IST]
X
Desktop Bottom Promotion