For Quick Alerts
ALLOW NOTIFICATIONS  
For Daily Alerts

ವಿಷಭರಿತ ಚೀನಾ ಆಹಾರಗಳು ಮಾರುಕಟ್ಟೆಗೆ ಬಂದುಬಿಟ್ಟಿವೆ!

By Super
|

ಅಗ್ಗ ಎಂದರೆ ಚೀನಾ ಎನ್ನುವಷ್ಟರ ಮಟ್ಟಿಗೆ ಚೀನಾ ನಿರ್ಮಿತ ಉತ್ಪನ್ನಗಳು ಭಾರತದಾದ್ಯಂತ ಮಾರುಕಟ್ಟೆಯಲ್ಲಿ ಭರ್ತಿಯಾಗಿಬಿಟ್ಟಿವೆ. ಚಿಕ್ಕ ಪುಟ್ಟ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ವಸ್ತುಗಳಾದರೆ ಪರವಾಗಿಲ್ಲ, ಕೆಟ್ಟರೆ ಎಸೆದು ಹೊಸತನ್ನು ತೆಗೆದುಕೊಳ್ಳಬಹುದು. ಆದರೆ ಆಹಾರದ ವಿಷಯದಲ್ಲಿ ಹಾಗಲ್ಲ. ಅಗ್ಗವೆಂಬ ಕಾರಣಕ್ಕೆ ವಿಷವನ್ನು ಸೇವಿಸುವಂತಿಲ್ಲವಲ್ಲ! ಆದರೆ ಇದು ನಿಜ. ವಿಷಭರಿತವಾದ ಚೀನಾ ನಿರ್ಮಿತ ಅಗ್ಗದ ಆಹಾರವಸ್ತುಗಳು ಈಗಾಗಲೇ ಭಾರತದಾದ್ಯಂತ ಮಾರುಕಟ್ಟೆಗೆ ಸದ್ದಿಲ್ಲದೇ ಲಗ್ಗೆಯಿಟ್ಟುಬಿಟ್ಟಿವೆ. ಇವುಗಳಿಗೆ ಯಾವುದೇ ಪ್ರಚಾರ ನೀಡದೇ ಕೇವಲ ಅಗ್ಗದ ದರದಲ್ಲಿ ನೀಡುವುದೇ ಇದರ ಮಾರಾಟತಂತ್ರವಾಗಿದೆ. ಯಾರೇ ಕೂಗಾಡಲಿ, ಚೀನಾದ ಜನರು ಇರುವುದೇ ಹೀಗೆ!

ಇವುಗಳ ಹೊರಕವಚ ಮತ್ತು ವಿನ್ಯಾಸ ಇಷ್ಟೊಂದು ಆಕರ್ಷಕವೆಂದರೆ ಇವುಗಳು ನೈಸರ್ಗಿಕ ವಿಧಾನದಲ್ಲಿ ಬೆಳೆದ ಆಹಾರಗಳೆಂದೇ ಅನ್ನಿಸುತ್ತದೆ. ಆದರೆ ಒಳಗೆ ಮಾತ್ರ ಈ ಉತ್ಪನ್ನಗಳು ಕೃತಕವಾಗಿದ್ದು ಹಲವಾರು ವಿಷಕಾರಿ ವಸ್ತುಗಳನ್ನು ಹೊಂದಿದೆ. ಅಲ್ಲದೇ ಆಹಾರವಸ್ತುಗಳ ಇಳುವರಿ ಹೆಚ್ಚಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ ಮತ್ತು ಕೃತಕ ಹಾರ್ಮೋನುಗಳನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕೆ ವಿಶ್ವದಲ್ಲಿಯೇ ಅತಿ ಹೆಚ್ಚು ಕೀಟನಾಶಕಗಳು ಚೀನಾದಲ್ಲಿಯೇ ತಯಾರಾಗುತ್ತವೆ. ಈ ಆಹಾರಗಳು ನಿಧಾನವಾಗಿ ವಿಷವನ್ನು ದೇಹದಲ್ಲಿ ಸೇರಿಸುತ್ತಾ ಆರೋಗ್ಯವನ್ನು ಕೆಡಿಸುತ್ತವೆ. ವಿಪರೀತವಾದರೆ ಕ್ಯಾನ್ಸರ್‌ಗೂ ಕಾರಣವಾಗಬಹುದು. ಇನ್ನು ಮುಂದೆ ಟೀ ಕುಡಿಯುತ್ತಾ ಚೀನಾದ ವಸ್ತುಗಳನ್ನು ದೂರಬೇಡಿ!

ಈಗಾಗಲೇ ಲಾಭದ ರುಚಿ ತೋರಿಸಿ ಭಾರತದ ಸಗಟು ಮಾರಾಟಗಾರರನ್ನು ಆಕರ್ಷಿಸಿ ತನ್ಮೂಲಕ ಭಾರತದ ಚಿಕ್ಕ ಪಟ್ಟಣಗಳಿಗೂ ಈ ವಿಷಕಾರಿ ಉತ್ಪನ್ನಗಳು ಸದ್ದಿಲ್ಲದೇ ಬಂದಾಗಿದೆ. ಪ್ರಥಮವಾಗಿ ದರವನ್ನು ನೋಡುವ ಭಾರತದ ಬಹುಸಂಖ್ಯಾತ ಮಧ್ಯಮ ಮತ್ತು ಕೆಳವರ್ಗದ ಜನತೆಯನ್ನೇ ಗುರಿಯಾಗಿಟ್ಟುಕೊಂಡು ಅಗ್ಗದ ದರದಲ್ಲಿ ಮಾರಲಾಗುತ್ತಿರುವ ಈ ಆಹಾರಗಳನ್ನು ಕೊಳ್ಳದಿರಲು ಕೆಳಗಿನ ಸ್ಲೈಡ್ ಶೋ ಮೂಲಕ ಬೋಲ್ಡ್ ಸ್ಕೈ ತಂಡ ಜನತೆಯನ್ನು ಎಚ್ಚರಿಸುತ್ತಿದೆ...

ಬೆಳ್ಳುಳ್ಳಿ

ಬೆಳ್ಳುಳ್ಳಿ

ನೋಡಲು ಭಾರತದ ಬೆಳ್ಳುಳ್ಳಿಯ ನಾಲ್ಕಾರು ಪಟ್ಟು ದೊಡ್ಡದಿದ್ದು ಸುಲಿಯಲೂ ಸುಲಭವಾಗಿರುವ ಚೀನಾದ ಬೆಳ್ಳುಳ್ಳಿ ಈಗಾಗಲೇ ಭಾರತದ ಒಟ್ಟು ಬಳಕೆಯ ಪ್ರಮಾಣದ ಶೇಖಡಾ ಮೂವತ್ತರಷ್ಟು ಆಕ್ರಮಿಸಿ ಆಗಿದೆ. ಇದು ಕೃತಕವಾಗಿ ಹಾರ್ಮೋನುಗಳನ್ನು ಬಲವಂತವಾಗಿ ಉಣಿಸಿ ಸೃಷ್ಟಿಸಿದ ತಳಿಯಾಗಿದ್ದು ಇದರಲ್ಲಿ ಹಲವಾರು ವಿಷಕಾರಿ ರಾಸಾಯನಿಕಗಳು, ಕೀಟನಾಶಕ ಮತ್ತಿತರ ಅನಾರೋಗ್ಯಕರ ಕಣಗಳಿವೆ. ಕೊಂಚ ಹೆಚ್ಚಿನ ಶ್ರಮ ಮತ್ತು ಸಮಯ ವ್ಯಯವಾದರೂ ಚಿಂತೆಯಿಲ್ಲ, ಸ್ಥಳೀಯವಾಗಿ ಬೆಳೆದ ಬೆಳ್ಳುಳ್ಳಿಯನ್ನೇ ಕೊಳ್ಳಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಚೀನಾದ ಬೆಳ್ಳುಳ್ಳಿ ಸಾಮಾನ್ಯವಾಗಿ ಚಿಕ್ಕ ಪೆಟ್ಟಿಗೆಯಲ್ಲಿ ಲಭ್ಯವಿದ್ದು ಇದು ನೈಸರ್ಗಿಕ ವಿಧಾನದಿಂದ ಬೆಳೆಯಲಾಗಿದೆ (organic) ಎಂದು ಮುದ್ರಿಸಲಾಗಿದೆ. ಇದನ್ನು ಖಚಿತಪಡಿಸಲು ಚೀನಾದವರೆಗೆ ಹೋಗಲು ಯಾರೂ ತಯಾರಿಲ್ಲದ ಕಾರಣ ಸುಳ್ಳನ್ನು ಸುತ್ತಿಗೆಯಿಂದಲೇ ಹೊಡೆದು ಅಚ್ಚು ಮಾಡಿರುವುದನ್ನು ಸರ್ವಥಾ ನಂಬಬೇಡಿ.

ಪ್ಲಾಸ್ಕಿಕ್ ಅಕ್ಕಿ

ಪ್ಲಾಸ್ಕಿಕ್ ಅಕ್ಕಿ

ಸದ್ದಿಲ್ಲದೇ ಬಂದ ಇನ್ನೊಂದು ಉತ್ಪನ್ನವೆಂದರೆ ಪ್ಲಾಸ್ಟಿಕ್ ಅಕ್ಕಿ. ಇತ್ತೀಚೆಗೆ ಮಾಧ್ಯಮಗಳು ಈ ಬಗ್ಗೆ ಎಚ್ಚರಿಕೆ ವಹಿಸಿದ ಕಾರಣ ಹತ್ತು ಹಲವು ಮಾಹಿತಿಗಳು ಈಗ ಲಭ್ಯವಿವೆ. ವಾಸ್ತವವಾಗಿ ಇದು ಅಕ್ಕಿಯೇ ಅಲ್ಲ, ಆಲುಗಡ್ಡೆಯ ಪಿಷ್ಟ ಮತ್ತು ರೆಸಿನ್ ಎಂಬ ಪ್ಲಾಸ್ಟಿಕ್ ವಸ್ತುಗಳನ್ನು ಬೆರೆಸಿ ಮಾಡಿದ ಕೃತಕ ಉತ್ಪನ್ನ. ಬೇಯಿಸಿದ ಬಳಿಕ ಅನ್ನದಂತೆಯೇ ಕಾಣುವ ಕಾರಣ ಈ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ. ಆದರೆ ಇದು ಅಪ್ಪಟ ಅಕ್ಕಿ ಹೌದೋ ಅಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ವಿಧಾನವಿದೆ. ಬಾಣಲೆಯೊಂದನ್ನು ಬಿಸಿಮಾಡಿ ಅಕ್ಕಿಯನ್ನು ಚಿಕ್ಕ ಉರಿಯಲ್ಲಿ ಕೆಲವು ನಿಮಿಷ ಹುರುಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ಲಾಸ್ಕಿಕ್ ಅಕ್ಕಿ

ಪ್ಲಾಸ್ಕಿಕ್ ಅಕ್ಕಿ

ನಿಜವಾದ ಅಕ್ಕಿಯಾಗಿದ್ದರೆ ಕೆಂಪಗಾಗಿ ಸುಲಭವಾಗಿ ಪುಡಿಯಾಗುವಂತಿರುತ್ತದೆ. ಆದರೆ ಕೃತಕ ಅಕ್ಕಿ ಗಟ್ಟಿಯಾಗಿಬಿಡುತ್ತದೆ. ಇದೊಂದು ಅತ್ಯಂತ ಅಪಾಯಕಾರಿಯಾದ ಆಹಾರವಾಗಿದ್ದು ಇದರಲ್ಲಿರುವ ರಾಸಾಯನಿಕಗಳು ದೇಹದ ಹಾರ್ಮೋನುಗಳನ್ನೇ ಏರುಪೇರು ಮಾಡಿಬಿಡುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಈಸ್ಟ್ರೋಜನ್ ರಸದೂತಗಳನ್ನು ಏರುಪೇರು ಮಾಡಿ ಹತ್ತು ಹಲವು ತೊಂದರೆಗಳಿಗೆ ನಾಂದಿ ಹಾಡಬಹುದು. ಅಲ್ಲದೇ ಜೀರ್ಣಕ್ರಿಯೆಯಲ್ಲಿ ತೊಂದರೆ, ಮೆದುಳಿಗೆ ಘಾಸಿಯನ್ನೂ ಉಂಟುಮಾಡಬಹುದು. ಪ್ಲಾಸ್ಟಿಕ್ ಅಕ್ಕಿ ಗಮನಕ್ಕೆ ಬಂದರೆ ಕೂಡಲೇ ಇದನ್ನು ಬಹಿಷ್ಕರಿಸಿ ಸುತ್ತಮುತ್ತಲಿನವರಲ್ಲಿಯೂ ಈ ಬಗ್ಗೆ ಮಾಹಿತಿ ಒದಗಿಸಿ.

ಕೃತಕ ಮೊಟ್ಟೆ

ಕೃತಕ ಮೊಟ್ಟೆ

ಅತಿ ಅಗ್ಗವಾಗಿ ಸಿಗುವ ಮೊಟ್ಟೆಯನ್ನೂ ಚೀನಾದಿಂದ ತರಿಸಿ ಅದಕ್ಕೂ ಅಗ್ಗವಾಗಿ ನೀಡಬೇಕೆಂದರೆ ಇದರ ಹಿಂದೆ ಏನೋ ಇರಬೇಕು ಎನ್ನಿಸುತ್ತದೆ. ಏಕೆಂದರೆ ಇಂದು ಹಲವಾರು ತಾಣಗಳಲ್ಲಿ ಸ್ಥಳೀಯ ಮೊಟ್ಟೆಗಳಿಗಿಂತಲೂ ಅಗ್ಗವಾಗಿ ಚೀನಾದ ಮೊಟ್ಟೆಗಳು ದೊರಕಲಿವೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೃತಕ ಮೊಟ್ಟೆ

ಕೃತಕ ಮೊಟ್ಟೆ

ಈ ಮೊಟ್ಟೆಗಳನ್ನು ಉತ್ಪಾದಿಸಲು alginic acid, gelatin, calcium chloride ಮೊದಲಾದ ರಾಸಾಯನಿಕಗಳನ್ನು ಮತ್ತು ಕೃತಕ ಬಣ್ಣಗಳನ್ನು ಉಪಯೋಗಿಸಿರುವ ಕಾರಣ ಇವು ವಿಷಕಾರಿಯಾಗಿವೆ. ಎಷ್ಟೇ ಅಗ್ಗವಾಗಿದ್ದರೂ ಈ ಮೊಟ್ಟೆಗಳನ್ನು ಕೊಳ್ಳಲು ಹೋಗಬೇಡಿ.

ಕೈಗಾರಿಕಾ ಉಪ್ಪು

ಕೈಗಾರಿಕಾ ಉಪ್ಪು

ಕೆಲವು ಕೈಗಾರಿಕೆಗಳಿಗೆ ಸಮುದ್ರದ ಸಂಸ್ಕರಿಸದ ಉಪ್ಪು ಬಳಸಲಾಗುತ್ತದೆ. ಆದರೆ ಅಡುಗೆಗೆ ಸಂಸ್ಕರಿಸಿದ ಉಪ್ಪು ಅಗತ್ಯ. ದಿನಸಿ ಸಾಮಾಗ್ರಿಗಳಲ್ಲಿಯೇ ಅತಿ ಅಗ್ಗವಾಗಿರುವ ಈ ಉಪ್ಪನ್ನೂ ಚೀನಾ ಅಷ್ಟು ದೂರದಿಂದ ತರಬೇಕಾದರೆ ಇದರಲ್ಲಿ ಏನೋ ಇರಬೇಕು ಎನ್ನಿಸುವುದಿಲ್ಲವೇ? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೈಗಾರಿಕಾ ಉಪ್ಪು

ಕೈಗಾರಿಕಾ ಉಪ್ಪು

ನಿಮ್ಮ ಊಹೆ ಸರಿ. ಇದು ಯಾವುದೋ ಉತ್ಪನ್ನದ ಅನೈಚ್ಛಿಕ ಉಪ ಉತ್ಪನ್ನವಾಗಿದ್ದು ಇದನ್ನು ಸುಮ್ಮನೆ ಎಸೆಯುವ ಬದಲು ಭಾರತದ ಜನತೆಗೆ ಮಾರಿ ಹಣಮಾಡಿಕೊಳ್ಳುವ ಹುನ್ನಾರವಾಗಿದೆ. ಈ ಉಪ್ಪಿನ ಸೇವನೆಯಿಂದ ನಪುಂಸಕತೆ, ಥೈರಾಯ್ಡ್ ಗ್ರಂಥಿಯ ಊತ ಮತ್ತು ಇತರ ತೊಂದರೆಗಳು ಎದುರಾಗುವ ಭೀತಿ ಇರುವುದರಿಂದ ಈ ಉಪ್ಪನ್ನು ಕೊಳ್ಳಬೇಡಿ.

ಕೃತಕ ಹಸಿರು ಟೀ

ಕೃತಕ ಹಸಿರು ಟೀ

ಹಸಿರು ಟೀ ಪ್ರಾರಂಭವಾಗಿದ್ದೇ ಚೀನಾದಲ್ಲಿ. ಸರಿ ಒಪ್ಪಿಕೊಳ್ಳೋಣ. ಆದರೆ ಅಲ್ಲಿಂದ ಬರುತ್ತಿರುವ ಹಸಿರು ಟೀ ಅಪ್ಪಟ ಶುದ್ಧ ಎಂಬುದಕ್ಕೇನು ಖಾತರಿ? ವಾಸ್ತವವಾಗಿ ಭಾರತದ ಹಸಿರು ಟೀ ಗಿಂತಲೂ ಅಗ್ಗವಾಗಿರುವ ಚೀನಾ ಹಸಿರು ಟೀಯಲ್ಲಿ ಹಸಿರು ಟೀ ಇಲ್ಲವೇ ಇಲ್ಲ! ಬದಲಿಗೆ sodium metabisulphite ಎಂಬ ರಾಸಾಯನಿಕ, ಸೋಯಾ ಅವರೆಯ ರವೆ, ಮತ್ತು ಕೃತಕವಾದ ಹಸಿರು ಬಣ್ಣವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೃತಕ ಹಸಿರು ಟೀ

ಕೃತಕ ಹಸಿರು ಟೀ

ಇದರೊಂದಿಗೆ ನೈಜ ರುಚಿ ಬರಲೆಂದು ಸೇರಿಸಿರುವ ಹಲವು ರಾಸಾಯನಿಕಗಳೂ ಅನಾರೋಗ್ಯಕರವಾಗಿದೆ. ಈ ಹಸಿರು ಟೀ ಸೇವನೆಯಿಂದ ಆರೋಗ್ಯ ಸುಧಾರಿಸುವ ಮಾತಂತೂ ದೂರವೇ, ಬದಲಿಗೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು.

ಟಿಲೇಪಿಯಾ ಮೀನು

ಟಿಲೇಪಿಯಾ ಮೀನು

ಟಿನ್ನುಗಳಲ್ಲಿ ಸಿಗುವ ಮೀನನ್ನು ಹೆಚ್ಚು ಕಾಲ ತಾಜಾ ಇಡಲು ಕೆಲವು ಕೃತಕ ಆಂಟಿಬಯಾಟಿಕ್ ವಸ್ತುಗಳನ್ನು ಸೇರಿಸಲಾಗುತ್ತದೆ. ಇವು ಮೀನನ್ನು ಹೆಚ್ಚು ಕಾಲ ತಾಜಾ ಇಡಲು ಸಮರ್ಥವಾದರೂ ಸೇವನೆಯ ಬಳಿಕ ಹಾರ್ಮೋನುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇನ್ನೂ ಗೊತ್ತಿಲ್ಲದ ಹತ್ತು ಹಲವು ತೊಂದರೆಗಳೂ ಎದುರಾಗಬಹುದು.

ಸಂಸ್ಕರಿತ ಅಣಬೆ

ಸಂಸ್ಕರಿತ ಅಣಬೆ

ಇಂದು ಡಬ್ಬಿಗಳಲ್ಲಿ ಸಂಸ್ಕರಿತ ಅಣಬೆಗಳು ಸಿಗುತ್ತಿವೆ. ಇವುಗಳು ಚೀನಾದೆಂದಾದರೆ ಸರ್ವಥಾ ಕೊಳ್ಳಬೇಡಿ. ಏಕೆಂದರೆ ಇವು ಸಹಾ ಕೃತಕವಾಗಿ ಅಣಬೆಯಾಕಾರ ಪಡೆದ ರಾಸಾಯನಿಕಗಳಾಗಿದ್ದು ಇವುಗಳ ಸೇವನೆ ಆರೋಗ್ಯದ ಮೇಲೆ ಹಲವು ರೀತಿಯಲ್ಲಾಗುತ್ತದೆ.

ಕಪ್ಪು ಮತ್ತು ಬಿಳಿಯ ಕಾಳುಮೆಣಸಿನ ಪುಡಿ

ಕಪ್ಪು ಮತ್ತು ಬಿಳಿಯ ಕಾಳುಮೆಣಸಿನ ಪುಡಿ

ಮಲೆನಾಡಿನಲ್ಲಿ ಹೇರಳವಾಗಿ ಬೆಳೆಯುವ ಕಾಳುಮೆಣಸಿನ ಜೊತೆಗೆ ಮಧ್ಯವರ್ತಿಗಳು ಪೊಪ್ಪಾಯಿ ಬೀಜಗಳನ್ನು ಬೆರೆಸಿ ರಫ್ತು ಮಾಡಿರುವ ಕಾರಣ ಬೆಲೆ ಕಳೆದುಕೊಂಡಿದ್ದರೂ ಅದಕ್ಕಿಂತಲೂ ಅಗ್ಗವಾಗಿ ಚೀನಾದಿಂದ ಕಾಳುಮೆಣಸಿನ ಪುಡಿ ಬಂದಿದ್ದರೆ ಎಚ್ಚರ ವಹಿಸಿ. ಏಕೆಂದರೆ ಈ ಪುಡಿಗಳಲ್ಲಿರುವುದು ಮಣ್ಣು (ಕಪ್ಪು) ಮತ್ತು ಮೈದಾ ಹಿಟ್ಟು (ಬಿಳಿ). ಇದಕ್ಕೆ ಖಾರದ ರುಚಿ ಬರಲು ಕೃತಕ ರಾಸಾಯನಿಕಗಳನ್ನು ಸೇರಿಸಿರಲಾಗುತ್ತದೆ.

ಸೇಬಿನ ಜ್ಯೂಸ್

ಸೇಬಿನ ಜ್ಯೂಸ್

ನೋಡಲು ನಸುಗಂದು ಬಣ್ಣವಿರುವ ಸೇಬಿನ ಜ್ಯೂಸ್ ಈಗಾಗಲೇ ಭಾರತದ ಮಾರುಕಟ್ಟೆಯ ಶೇಖಡಾ ಮೂವತ್ತರಷ್ಟು ಆಕ್ರಮಿಸಿಯಾಗಿದೆ. ಜಗತ್ತಿನ ಒಟ್ಟಾರೆ ಪ್ರಮಾಣದ ಸೇಬಿನ ಅರ್ಧದಷ್ಟನ್ನು ಚೀನಾ ಬೆಳೆದರೂ ಅದರ ಬೆಳೆಯಲ್ಲಿ ಹೇರಳವಾದ ಕೀಟನಾಶಕ, ಕೃತಕ ಗೊಬ್ಬರಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೇಬಿನ ಜ್ಯೂಸ್

ಸೇಬಿನ ಜ್ಯೂಸ್

ಅಲ್ಲದೇ ಜ್ಯೂಸ್ ತೆಗೆದ ಬಳಿಕವೂ ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಕಗಳನ್ನು ಸೇರಿಸಲಾಗುತ್ತದೆ. ಇವೆಲ್ಲವೂ ಸೇಬಿನ ರಸ ಮಾಡುವ ಒಳ್ಳೆಯದಕ್ಕಿಂತಲೂ ಹೆಚ್ಚು ಕೆಟ್ಟದ್ದನ್ನು ಉಂಟುಮಾಡುತ್ತವೆ.

ತಜ್ಞರ ಸಲಹೆ

ತಜ್ಞರ ಸಲಹೆ

* ಆಹಾರವಸ್ತುಗಳ ವಿಷಯ ಬಂದಾಗ ಸ್ಥಳೀಯ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಬೆಲೆ ಕೊಂಚ ಹೆಚ್ಚಿನಿಸಿದರೂ ತೊಂದರೆಯಿಲ್ಲ.

* ಯಾವುದೇ ಆಹಾರವಸ್ತು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಸಮೀಪದ ಆಹಾರ ಇಲಾಖೆಗೆ ಮಾಹಿತಿ ನೀಡುವುದರಿಂದ ಎಷ್ಟೋ ಜನರನ್ನು ಇದರ ತೊಂದರೆಯಿಂದ ಉಳಿಸಿದಂತಾಗುತ್ತದೆ.

* ಚೀನಾ ನಿರ್ಮಿತ ಯಾವುದೇ ಆಹಾರವಸ್ತುವನ್ನು ಕೊಳ್ಳಲೇ ಹೋಗಬೇಡಿ. ಬೇಡಿಕೆ ಇಲ್ಲದಿದ್ದಾಗ ಯಾವುದೇ ಮಾರಾಟಗಾರರು ಇದನ್ನು ಮಾರಾಟಮಾಡಲು ಇಚ್ಛಿಸುವುದಿಲ್ಲ.

* ಅನುಮಾನ ಬರುವ ಯಾವುದೇ ಉತ್ಪನ್ನದ ಪರೀಕ್ಷಾ ವರದಿಯನ್ನು ಅಪೇಕ್ಷಿಸಿ ಆ ಸಂಸ್ಥೆಗೆ ಈ ಮೇಲ್ ಮಾಡಿ. ಉತ್ತರ ಬರದಿದ್ದರೆ ಇದು ಕಳಪೆ ಎಂಬುದು ಖಚಿತವಾಗುತ್ತದೆ.

ತಜ್ಞರ ಸಲಹೆ

ತಜ್ಞರ ಸಲಹೆ

* ಇನ್ನೂ ದೃಢೀಕರಿಸದ ವರದಿಗಳ ಪ್ರಕಾರ ಚೀನಾದಿಂದ ಬರುವ ಆಹಾರವಸ್ತುಗಳಲ್ಲಿ ಕೃತಕ ಎಲೆಕೋಸು, ಕೃತಕ ಕ್ಯಾರೆಟ್, ಕೃತಕ ಹಾಲು, ಕೃತಕ ಜಿನ್ ಸೆಂಗ್, ಕೃತಕ ಶುಂಠಿ ಸಹಾ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಲಿವೆ. ಇವುಗಳನ್ನು ಕೊಳ್ಳದಿರಲು ಎಚ್ಚರ ವಹಿಸಿ.

*ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನಾದ ಯಾವುದೇ ಉತ್ಪನ್ನ ಕಳಪೆ ಅನ್ನಿಸಿದರೆ ಸಾಧ್ಯವಾದಷ್ಟು ಈ ಬಗ್ಗೆ ನಿಮ್ಮ ಸುತ್ತಮುತ್ತಲಿನವರಲ್ಲಿ, ಮಾಧ್ಯಮಗಳ ಮೂಲಕ ಅರಿವು ಮೂಡಿಸಿ. ಕೆಲವು ಸಾಕ್ಷಾಧಾರಗಳನ್ನು ಮಾಧ್ಯಮಗಳಿಗೆ ಒದಗಿಸಿದರೆ ಮುಂದಿನ ಕೆಲಸವನ್ನು ವಹಿಸಿಕೊಳ್ಳಲು ಪ್ರತಿನಿಧಿಗಳು ಮುಂದೆ ಬರುತ್ತಾರೆ.


English summary

Poisonous Foods Made in China Available In Your Market

A common thought that all of us have when we see a Chinese product is that it is tasty and cheap. Do you know that Chinese foods have already found their way into your markets, your home and your body? We are unaware of the serious facts that we are consuming Chinese poisonous fake foods thinking them to be organic foods, due to their labeling.
X
Desktop Bottom Promotion