For Quick Alerts
ALLOW NOTIFICATIONS  
For Daily Alerts

ಸರ್ವಗುಣ ಸಂಪನ್ನ ಪಪ್ಪಾಯಿ ಹಣ್ಣಿನ ಮೂಲ ಅರಿಯಿರಿ

|

ಪಪ್ಪಾಯಿ ಹಣ್ಣಿನಲ್ಲಿರುವ (ಪರಂಗಿ ಹಣ್ಣು )ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಮತ್ತು ಉತ್ಕೃಷ್ಟ ರಚನೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು. ಪಪ್ಪಾಯಿಹಣ್ಣು ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ.

ಇದರಲ್ಲಿರುವ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವ ಅಧಿಕ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ಇದು ವಹಿಸುತ್ತದೆ.

ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದವರು ವಿವರಿಸುವಂತೆ, ಪಪ್ಪಾಯಿಯಲ್ಲಿರುವ ಸಮೃದ್ಧವಾದ ವಿಟನಿನ್ ಸಿ, ಪ್ರಬಲ ಆಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಆಗಿದ್ದು ದೇಹದ ಆಮೂಲಾಗ್ರ ಹಾನಿಯನ್ನು ತಡೆಯುತ್ತದೆ. ಇದಲ್ಲದೆ, ವಿಟಮಿನ್ ಸಿ ಸಂಧಿವಾತ, ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ರೋಗಗಳನ್ನೂ ತಡೆಯುತ್ತದೆ. ಬನ್ನಿ ಪಪ್ಪಾಯಿ ಹಣ್ಣಿನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಯಾವುದು ಎಂಬುದನ್ನು ನೋಡೋಣ... ಸಂತಾನ ನಿಯಂತ್ರಣ ಸಾಮರ್ಥ್ಯ ಪಪ್ಪಾಯಿಯಲ್ಲಿದೆ!

Papaya fruit nutrition facts and health benefits

ನೆಗಡಿಯನ್ನು ಶಮನಗೊಳಿಸಲು
ಇದರಲ್ಲಿ ಅತ್ಯಧಿಕ ವಿಟಮಿನ್ ಎ, ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್ಸ್ ಇರುವುದರಿಂದ ನಿಮಗೆ ಬಂದಿರುವ ನೆಗಡಿಯ ಅವಧಿಯನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿ ಹಣ್ಣು ನೆಗಡಿಯ ಲಕ್ಷಣಗಳನ್ನು ಶಮನ ಮಾಡುವುದಲ್ಲದೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಕ್ಯಾನ್ಸರ್ ರೋಗಕ್ಕೆ ರಾಮಬಾಣ
ಪಪ್ಪಾಯಿ ಹಣ್ಣಿನಲ್ಲಿರುವ ಆಂಟಿ-ಆಕ್ಸಿಡೆಂಟ್‍ಗಳು ದೇಹವನ್ನು ಕ್ಯಾನ್ಸರ್ ಕಾರಕ ಕೋಶಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ. ಪಪ್ಪಾಯಿಯಲ್ಲಿರುವ ಡಯಟೆರಿ ಫೈಬರ್‌ಗಳು ಕೋಲನ್‍ನಲ್ಲಿ ಕ್ಯಾನ್ಸರ್ ಉಂಟು ಮಾಡುವ ಕೋಶಗಳನ್ನು ಹೊರ ದಬ್ಬುತ್ತದೆ. ಇದರಲ್ಲಿರುವ ವಿಟಮಿನ್ ಸಿ,ಇ, ಲೈಕೊಪೀನ್, ಬೀಟಾ-ಕ್ಯಾರೋಟಿನ್ ಕ್ಯಾನ್ಸರನ್ನು, ಅದರಲ್ಲೂ ಕೋಲನ್ ಕ್ಯಾನ್ಸರನ್ನು ತಡೆಯುವಲ್ಲಿ ಯಶಸ್ವಿಯಾಗಿ ಸಹಕರಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ನಮ್ಮ ಬದಲಾದ ಜೀವನಶೈಲಿ ಹಾಗೂ ಸುಲಭ ಆಹಾರಗಳು ಮಲಬದ್ಧತೆಗೆ ಮೂಲವಾಗಿವೆ. ಪ್ರಮುಖವಾಗಿ ಮೈದಾ ಆಧಾರಿತ ಆಹಾರಗಳು ದೊಡ್ಡಕರುಳಿನಲ್ಲಿ ಪೂರ್ಣವಾಗಿ ಜೀರ್ಣವಾಗದೇ, ಗಟ್ಟಿಯಾಗಿದ್ದು ಮುಂದೆ ಹೋಗಲಾಗದೇ ಮಲಬದ್ಧತೆಗೆ ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಅಥವಾ ರಸವನ್ನು ಸೇವಿಸುವುದರಿಂದ ಗಟ್ಟಿಯಾಗಿದ್ದ ಆಹಾರಗಳು ಮೆದುವಾಗಿ ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುತ್ತದೆ.

ಗರ್ಭಿಣಿಯರು ವೈದ್ಯರ ಸಲಹೆ ಪಡೆದು ಪಪ್ಪಾಯಿ ಹಣ್ಣು ಸೇವಿಸಿ
ಗರ್ಭಿಣಿಯಾದಾಗ ಕಾಡುವ ಮುಂಜಾನೆಯ ಮಂಕುತನದ ನಿವಾರಣೆಗಾಗಿ ಪರಂಗಿ ಹಣ್ಣನ್ನು ಸೇವಿಸಬಹುದು. ಆದರೆ ಇದನ್ನು ಸೇವಿಸುವ ಮೊದಲು ವೈದ್ಯರನ್ನು ಕಂಡು ಸಲಹೆಗಳನ್ನು ಪಡೆಯುವುದು ಉತ್ತಮ.

ತೂಕ ಇಳಿಸಿಕೊಳ್ಳಲು ಸಹಕಾರಿ
ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ ಪರಂಗಿ ಹಣ್ಣನ್ನು ತಿನ್ನಿ ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಪೋಷಕಾಂಶಗಳು ಹೆಚ್ಚಿರುತ್ತದೆ. ಇದರೊಂದಿಗೆ ಇದು ಜೀರ್ಣಕ್ರಿಯೆಗೆ ಸಹಕಾರಿಯಾದ್ದರಿಂದ ತೂಕ ಇಳಿಸಿಕೊಳ್ಳಲು ಇದು ಒಳ್ಳೆಯ ಆಹಾರ. ಋತುಚಕ್ರದ ಏರುಪೇರಿಗೆ ಪರಂಗಿ ಹಣ್ಣು ರಾಮಬಾಣ

ತ್ವಚೆಯ ಕಾಂತಿಗೆ
ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೇರಿರುವುದರಿಂದ ಅದರ ಸಹಾಯದಿಂದ ನಿಮ್ಮ ಚರ್ಮವನ್ನು ಮೆದು, ಮೃದು ಮತ್ತು ತೇವಾಂಶಭರಿತವಾಗಿಡಲು ಸಹಾಯಕಾರಿಯಾಗಿದೆ. ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ.

English summary

Papaya fruit nutrition facts and health benefits

Refreshingly sweet in taste, papayas are bright, pear-shaped, exotic fruits that you’ll easily find in the market throughout the year. Enclosing hundreds of black, rounded gelatinous seeds, the soft, edible orange flesh of papayas is actually nutritious, offering numerous health benefits. Here’s why you need to include these ‘fruits of angels’ in your diet.
Story first published: Wednesday, July 8, 2015, 17:45 [IST]
X
Desktop Bottom Promotion