For Quick Alerts
ALLOW NOTIFICATIONS  
For Daily Alerts

ವೈದ್ಯರ ಸಲಹೆವಿಲ್ಲದೇ ಇಂತಹ ಔಷಧಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ!

By Super
|

ಕೆಲವು ಔಷಧಿಗಳನ್ನು ನಾವು ವೈದ್ಯರ ಸಲಹೆಯಿಲ್ಲದೇ ಖರೀದಿಸಿ ಯಾವುದೇ ಅಳುಕಿಲ್ಲದೇ ಬಳಸುತ್ತೇವೆ. ಉದಾಹರಣೆಗೆ ಶೀತವಾದರೆ ವಿಕ್ಸ್, ಮೈ ಕೈ ನೋವಾದರೆ ಪ್ಯಾರಾಸೆಟಮಾಲ್ ಮಾತ್ರೆ. ಏಕೆಂದರೆ ಇವನ್ನು ಬಳಸಿದವರು ತಮಗೆ ಆರಾಮವಾಗಿರುವುದನ್ನು ಬೇರೆಯವರಿಗೂ ಉಚಿತ ಸಲಹೆಯ ಮೂಲಕ ಹೇಳುತ್ತಾ ಬಂದಿದ್ದಾರೆ. ಔಷಧಿ ಅಂಗಡಿಯವರೇ ಕೆಲವೊಮ್ಮೆ ರೋಗಿಯ ರೋಗಲಕ್ಷಣಗಳನ್ನು ತಿಳಿದು ಸೂಕ್ತವಾದ

ಮಾತ್ರೆಗಳನ್ನು ನೀಡುವುದುಂಟು. ಈ ಔಷಧಿಗಳು ಪೂರ್ಣವಾಗಿ ಸುರಕ್ಷಿತ ಎಂದು ನಂಬಿ ಜನರು ಮನೆಯಲ್ಲಿ ಕೊಂಚ ದಾಸ್ತಾನು ಇರಿಸಿಕೊಂಡಿರುತ್ತಾರೆ. ಆದರೆ ಕೆಲವು ಔಷಧಿಗಳ ನಿರಂತರ ಸೇವನೆ ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಬ್ಯಾರಲ್ಗಾನ್ (baralgan) ಎಂಬ ಮಾತ್ರೆ.

ಹೊಟ್ಟೆನೋವಿದ್ದರೆ ಬ್ಯಾರಲ್ಗಾನ್ ಎಂಬಷ್ಟರ ಮಟ್ಟಿಗೆ ಈ ಮಾತ್ರೆ ಎಂಭತ್ತರ ದಶಕದಲ್ಲಿ ಮನೆಮಾತಾಗಿತ್ತು. ಆದರೆ ಅಮೇರಿಕಾದಲ್ಲಿ ಇದರ ಅಡ್ಡಪರಿಣಾಮಗಳ ಬಗ್ಗೆ ಸಂಶೋಧನೆಗಳ ಬಗ್ಗೆ ತಿಳಿದುಬಂದ ಬಳಿಕ ಸುಮಾರು ತೊಂಭತ್ತರ ಪ್ರಾರಂಭದ ದಿನಗಳಲ್ಲಿ ಈ ಮಾತ್ರೆಯನ್ನೇ ನಿಷೇಧಿಸಲಾಗಿತ್ತು. ಆದರೆ ಇದರ ಅರಿವಿರದ ಭಾರತೀಯರು ಮಾತ್ರೆಯನ್ನು ನುಂಗುತ್ತಾ ಬರುತ್ತಿದ್ದರು, ಔಷಧಿ ಅಂಗಡಿಗಳೂ ಮುಕ್ತವಾಗಿ ಮಾರಾಟ ಮಾಡುತ್ತಿದ್ದವು. ಈ ಬಗ್ಗೆ ಕಾಳಜಿ ವಹಿಸಿದ ಕೆಲವು ಹಿತೈಷಿಗಳ ಶ್ರಮದ ಫಲವಾಗಿ 1996ರಲ್ಲಿ ಭಾರತ ಸರ್ಕಾರ ಈ ಮಾತ್ರೆಯನ್ನು ನಿಷೇಧಿಸಿತು. ಇಂದು ನಾವು ಮುಕ್ತವಾಗಿ ಸೇವಿಸುತ್ತಿರುವ ಯಾವುದೇ ಔಷಧಿಗಳು ಅಡ್ಡಪರಿಣಾಮದಿಂದ ಮುಕ್ತವಾಗಿಲ್ಲ. ಎಲ್ಲದರಲ್ಲಿಯೂ ಕೊಂಚವಾದರೂ ಅಡ್ಡಪರಿಣಾಮಗಳು ಇದ್ದೇ ಇರುತ್ತವೆ. ಈ ಬಗ್ಗೆ ಜಾಗರೂಕರಾಗಿರಲು ಬೋಲ್ಡ್ ಸ್ಕೈ ತಂಡ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ.... ತಲೆನೋವಿಗೆ ಮಾತ್ರೆ ನುಂಗಿದರೆ ಆರೋಗ್ಯ ಜೋಕೆ!

NSAIDs Non-steroidal anti inflammatory drugs

Non Prescription Medicines That Can Make You Sick

ಕಾಲುಗಂಟುಗಳಲ್ಲಿ ನೋವುಂಟಾದರೆ ಸೇವಿಸುವ ಈ ಮಾತ್ರೆಗಳು ಕ್ಷಣಿಕವಾಗಿ ನೋವನ್ನು ಕಡಿಮೆಗೊಳಿಸಿದರೂ ಇದರಲ್ಲಿ ಹಲವು ಅಡ್ಡಪರಿಣಾಮಗಳಿವೆ. ಸತತವಾದ ಸೇವನೆಯಿಂದ ಈ ಅಡ್ಡಪರಿಣಾಮಗಳು ಮೂತ್ರಪಿಂಡಗಳು ಮತ್ತು ಯಕೃತ್ ಗಳ ಮೇಲೆ ನಿಧಾನವಾಗಿ ಪ್ರಭಾವ ಬೀರುತ್ತಾ ಒಂದು ದಿನ ಸಂಪೂರ್ಣವಾಗಿ ನಿಷ್ಪಲಗೊಳ್ಳಲು ಕಾರಣವಾಗುತ್ತವೆ. ಅಲ್ಲದೇ ಹೊಟ್ಟೆ ಮತ್ತು ಕರುಳುಗಳಲ್ಲಿ ಹುಣ್ಣು (ಅಲ್ಸರ್) ಮತ್ತು ಜೀರ್ಣಕ್ರಿಯೆಯಲ್ಲಿ ಏರುಪೇರನ್ನೂ ಉಂಟುಮಾಡುತ್ತದೆ. ಸತತ ಸೇವನೆ ಹೆಚ್ಚಿಸುವುದರಿಂದ ಯಾವ ಭಾಗದ ನೋವು ಕಡಿಮೆಯಾಗಲು ಸೇವಿಸಿದ್ದರೋ (ಮಂಡಿ ಮತ್ತು ಮೂಳೆಗಳ ಸಂದುಗಳು) ಅವೇ ಅಂಗಗಳು ಶಾಶ್ವತವಾದ ಸವೆತವನ್ನು ಪಡೆದು ರಿಪೇರಿಯಾಗದಷ್ಟು ಮಟ್ಟಿಗೆ ಜಖಂಗೊಡಿರುತ್ತವೆ.

ಅಸಿಟೋಮಿನೋಫೆನ್- Acetominophen (Paracetamol)


ಜ್ವರ ಮತ್ತು ಮೈಕೈನೋವಿಗೆ ಈ ಮಾತ್ರೆಯನ್ನು ಸೇವಿಸಲಾಗುತ್ತದೆ. ಒಂದು ವೇಳೆ ಈ ಮಾತ್ರೆಯನ್ನು ಸತತವಾಗಿ ಸೇವಿಸಿದರೆ ಯಕೃತ್ ಅನ್ನು ನೇರವಾಗಿ ಬಾಧೆಗೊಳಪಡಿಸುತ್ತದೆ. ಜ್ವರ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾದ ಬಳಿಕ ಯಕೃತ್ ವಿಫಲಗೊಂಡು ಸಾವನ್ನಪ್ಪಿದವರ ಸಂಖ್ಯೆಯೂ ದೊಡ್ಡದಿದೆ. ಜ್ವರ ಮತ್ತು ಮೈಕೈ ನೋವಿದ್ದರೆ ಅನಿವಾರ್ಯ ಸಂದರ್ಭದಲ್ಲಿ (ಉದಾಹರಣೆಗೆ ಅರ್ಧರಾತ್ರಿಯಲ್ಲಿ) ಅಲ್ಪಪ್ರಮಾಣದಲ್ಲಿ ಮಾತ್ರ ಸೇವಿಸಿ ಬೆಳಿಗ್ಗೆ ವೈದ್ಯರನ್ನು ಭೇಟಿಯಾಗಿ ಈ ನೋವಿಗೆ ನಿಜವಾದ ಕಾರಣವನ್ನು ಕಂಡುಕೊಳ್ಳುವುದು ಸೂಕ್ತ ಕ್ರಮವಾಗಿದೆ.

ಹೊಟ್ಟೆಯಲ್ಲಿ ಆಮ್ಲೀಯತೆ ಕಡಿಮೆಗೊಳಿಸುವ ಗುಳಿಗೆಗಳು


ಜಠರರಸ ಸ್ರವಿಸುವುದು ಹೆಚ್ಚಾದರೆ ಹೊಟ್ಟೆಯಲ್ಲಿ ಉರಿ ಹೆಚ್ಚಾಗುವುದರಿಂದ ಉಂಟಾಗುವ ತೊಂದರೆಯಿಂದ ಮುಕ್ತಿ ಪಡೆಯಲು ಎಚ್ ಟೂ ಬ್ಲಾಕರ್ ಎಂಬ ಗುಳಿಗೆಗಳನ್ನು ಸೇವಿಸಲಾಗುತ್ತದೆ. (H2 blockers, proton pump inhibitors) ಇವು ಜಠರರಸದ ಪ್ರಮಾಣವನ್ನೇ ಕಡಿಮೆಗೊಳಿಸಿ ಹೊಟ್ಟೆ ಉರಿಯನ್ನು ಕಡಿಮೆಗೊಳಿಸುತ್ತದೆ. ವಾಸ್ತವವಾಗಿ ಈ ತೊಂದರೆಯನ್ನು ಕಡಿಮೆಗೊಳಿಸುವ ಭರದಲ್ಲಿ ಶರೀರದ ನೈಸರ್ಗಿಕ ಕ್ರಿಯೆಯನ್ನೇ ನಾವು ಏರುಪೇರುಗೊಳಿಸುತ್ತೇವೆ. ಕ್ರಮೇಣ ಜಠರ ಅಗತ್ಯಪ್ರಮಾಣದಲ್ಲಿ ಜಠರರಸವನ್ನು ಸ್ರವಿಸದೇ ಹಲವು ತೊಂದರೆಗಳು ಎದುರಾಗುತ್ತವೆ. ಇದರಲ್ಲಿ ಜ್ವರ, ಕರುಳಿನಲ್ಲಿ ಹುಣ್ಣು, ಅಜೀರ್ಣ ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಒಮ್ಮೆ ಈ ಮಾತ್ರೆಯ ಸೇವನೆ ಅಭ್ಯಾಸವಾದರೆ ವ್ಯಸನವಾಗಿ ಮಾರ್ಪಾಡುವುದರಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಪೇನ್ ಕಿಲ್ಲರ್ ನಿರಂತರ ಬಳಕೆಯಿಂದ ಕಿಡ್ನಿ ಕ್ಯಾನ್ಸರ್!

ಹೊಟ್ಟೆಯಲ್ಲಿ ಉಬ್ಬರವುಂಟಾದರೆ ತೆಗೆದುಕೊಳ್ಳುವ ಅಂಟಾಸಿಡ್‌ಗಳು


ಅಂಟಾಸಿಡ್ (Antacids (Magnesium And Aluminum Salts)), ಹೆಸರೇ ತಿಳಿಸುವಂತೆ ಆಂಟಿ ಆಸಿಡಿಟಿ ಅಂದರೆ ಹೊಟ್ಟೆಯಲ್ಲಿರುವ ಆಮ್ಲೀಯತೆಯನ್ನು ನಿಷ್ಕ್ರಿಯಗೊಳಿಸಲು ಪ್ರತ್ಯಾಮ್ಲವನ್ನು ಒದಗಿಸುವ ಔಷಧಿಗಳಾಗಿವೆ. ಇವು ಹೊಟ್ಟೆಯ ಉರಿ, ಉಬ್ಬರವನ್ನು ಕಡಿಮೆಗೊಳಿಸುವಲ್ಲಿ ಸಫಲವಾದರೂ ನಿರಂತರ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆ ಬಹಳವಾಗಿ ಹೆಚ್ಚುತ್ತದೆ. ಜೊತೆಗೇ ಜಠರ ಮತ್ತು ಕರುಳುಗಳಲ್ಲಿ ಜೀರ್ಣಕ್ರಿಯೆಯಲ್ಲಿ ಏರುಪೇರು, ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಅಂಗಗಳು ಪೂರ್ಣಪ್ರಮಾಣದ ಕ್ಷಮತೆ ತೋರದೇ ಇರುವುದು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ.

ನಿದ್ದೆಗುಳಿಗೆಗಳು (Sleep Aids(Sedatives))


ನಿದ್ದೆ ಬರದೇ ಇದ್ದರೆ ನಿದ್ದೆ ಗುಳಿಗೆಗಳನ್ನು ತೆಗೆದುಕೊಳ್ಳುವುದು ಇಂದು ಮೊದಲಿನಷ್ಟು ಸುಲಭವಲ್ಲ. ಏಕೆಂದರೆ ನಿದ್ದೆಗುಳಿಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೃತ್ಯುವುಂಟಾಗುತ್ತದೆ. ಈ ಮಾಹಿತಿಯನ್ನು ನಮ್ಮ ಚಲನಚಿತ್ರಗಳಲ್ಲಿ ಧಾರಾಳವಾಗಿ ನೋಡಬಹುದು. ವಾಸ್ತವವಾಗಿ ಮೃತ್ಯುವಿಗೆ ಆಹ್ವಾನ ನೀಡುವ ಮಾತ್ರೆಗಳನ್ನು ವೈದ್ಯರ ಅನುಮತಿ ಇಲ್ಲದೇ ಯಾವ ಔಷಧಿ ಅಂಗಡಿಯವರೂ ನೀಡುವುದಿಲ್ಲ.
ಆದರೆ ಕೆಲವು ಔಷಧಿಗಳನ್ನು (ಉದಾಹರಣೆಗೆ ಕೆಮ್ಮಿನ ಸಿರಪ್) ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ನಿದ್ದೆ ಬರುತ್ತದೆ. (ಇದೊಂದು ಅಡ್ಡಪರಿಣಾಮವಾಗಿದೆ, ಇದನ್ನು ಸೇವಿಸಿದ ಬಳಿಕ ವೈದ್ಯರು ವಾಹನ ಚಾಲನೆಯನ್ನು ನಿರಾಕರಿಸಲು ಇದೇ ಕಾರಣ). ಆದರೆ ಕೆಲವರು ನಿದ್ದೆ ಬರುವುದಕ್ಕಾಗಿಯೇ ಈ ಔಷಧಿಗಳನ್ನು ಸೇವಿಸುತ್ತಾರೆ. ಆದರೆ ನಿದ್ದೆ ಬರಿಸುವ ಈ ಔಷಧಿಗಳು ಕ್ರಮೇಣ ವ್ಯಸನಕ್ಕೆ ತಿರುಗಿ ಈ ಔಷಧಿ ಸೇವಿಸದೇ ನಿದ್ದೆಯೇ ಬರುವುದಿಲ್ಲ ಎಂಬ ಸ್ಥಿತಿಗೆ ತಲುಪುತ್ತಾರೆ. ನಿಧಾನಕ್ಕೆ ದಿನವಿಡೀ ಸುಸ್ತು ಆವರಿಸಿರುವುದು, ಚಟುವಟಿಕೆಗಳು ಇಲ್ಲದೇ ಇರುವುದು, ಮಂಕು ಕವಿಯುವುದು, ತಲೆನೋವು, ತಲೆಸುತ್ತು, ವಾಕರಿಕೆ ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ.
English summary

Non Prescription Medicines That Can Make You Sick

Some medicines if consumed for a longer period of time can make you sick. This is called as adverse drug reactions.Today, Boldsky will share with you some harmful effects of over the counter drugs. Have a look at some non prescription drugs that can kill you.
X
Desktop Bottom Promotion