For Quick Alerts
ALLOW NOTIFICATIONS  
For Daily Alerts

ಮೈ ಮನಗಳಿಗೆ ವಿಶ್ರಾಂತಿ ನೀಡುವ ಗಿಡ ಮೂಲಿಕೆಯ ಸ್ನಾನ!

By Deepak
|

ಸ್ನಾನ ಎನ್ನುವುದೇ ಒಂದು ಆಪ್ಯಾಯಮಾನಕರವಾದ ಪ್ರಕ್ರಿಯೆ. ಮೈಮನಗಳು ಆಯಾಸಗೊಂಡಾಗ, ಅವುಗಳಿಗೆ ಮುದ ನೀಡಲು ಸ್ನಾನ ಬೇಕೇ ಬೇಕು. ನಮಗೆ ಒಂದು ಹೊಸ ಲವಲವಿಕೆ ನೀಡಲು ಸ್ನಾನ ಅತ್ಯಾವಶ್ಯಕ. ಸ್ನಾನವನ್ನು ಮತ್ತಷ್ಟು ಸುಂದರ ಅನುಭವ ಮಾಡಿಕೊಳ್ಳಲು ಸ್ನಾನದಲ್ಲಿ ವಿವಿಧ ಪ್ರಕಾರಗಳನ್ನು ನಾವು ಕಂಡುಕೊಂಡಿದ್ದೇವೆ. ಉಪ್ಪು ನೀರು ಸ್ನಾನದ 10 ಅದ್ಭುತ ಆರೋಗ್ಯ ಪ್ರಯೋಜನಗಳು

ಹೌದು, ಸ್ನಾನವನ್ನು ಮತ್ತಷ್ಟು ಆನಂದಕರ ಮಾಡಲು ನಾವು ಸ್ನಾನದ ನೀರಿಗೆ ಕೆಲವೊಂದು ಪದಾರ್ಥಗಳನ್ನು ಬೆರೆಸಿಕೊಳ್ಳಬಹುದು. ಇವು ನಿಮಗೆ ವಿಶ್ರಾಂತಿಯನ್ನು ಮತ್ತು ಆನಂದವನ್ನು ಒಟ್ಟೊಟ್ಟಿಗೆ ನೀಡುತ್ತವೆ. ಜೊತೆಗೆ ಈ ಪದಾರ್ಥಗಳು ತ್ವಚೆಯನ್ನು ಮೃದುಗೊಳಿಸುತ್ತವೆ. ಈ ಸ್ವಾಭಾವಿಕ ಪದಾರ್ಥಗಳಲ್ಲಿರುವ ಅಂಶಗಳು ನಿಮ್ಮ ದೇಹದಲ್ಲಿರುವ ಸನ್ ಟ್ಯಾನ್ ಅಥವಾ ಬಿಸಿಲಿಗೆ ಕಪ್ಪಾದ ಚರ್ಮವನ್ನು ನಿವಾರಿಸುತ್ತವೆ. ಬನ್ನಿ ಇನ್ನು ತಡ ಮಾಡದೆ ನಿಮ್ಮ ಅಡುಗೆಯ ಮನೆಯಲ್ಲಿ ದೊರೆಯುವ ವಸ್ತುಗಳಿಂದ ಆಹ್ಲಾದಕರವಾದ ಸ್ನಾನವನ್ನು ಮಾಡುವುದು ಹೇಗೆಂದು ತಿಳಿದುಕೊಂಡು ಬರೋಣ.

ಗಿಡ ಮೂಲಿಕೆಗಳು

ಗಿಡ ಮೂಲಿಕೆಗಳು

ಸ್ನಾನ ಮಾಡುವಾಗ ಗಿಡ ಮೂಲಿಕೆಗಳನ್ನು ಬೆರೆಸಿಕೊಳ್ಳಿ. ಇದರಿಂದ ದೇಹವು ಶುದ್ಧಗೊಳ್ಳುತ್ತದೆ ಮತ್ತು ನಿಮ್ಮ ಮೈ ಮನಗಳಿಗೆ ವಿಶ್ರಾಂತಿಯು ದೊರೆಯುತ್ತದೆ. ಇದಕ್ಕೆ ಪುದೀನಾ ಮತ್ತು ಕ್ಯಾಮೊಮೈಲ್ ಎಲೆಗಳು ಒಳ್ಳೆಯದು. ಸುಮ್ಮನೆ ಈ ಎಲೆಗಳನ್ನು ಸ್ನಾನದ ನೀರಿನಲ್ಲಿ 15 ನಿಮಿಷ ನೆನೆಯಲು ಬಿಡಿ. ನಂತರ ಸ್ನಾನ ಮಾಡಿ.

ಎಸೆನ್ಶಿಯಲ್ ಆಯಿಲ್‌ಗಳು

ಎಸೆನ್ಶಿಯಲ್ ಆಯಿಲ್‌ಗಳು

ನಿಮ್ಮ ಸ್ನಾನದ ನೀರಿಗೆ 1-2 ಹನಿ ಆಲೀವ್ ಎಣ್ಣೆಯನ್ನು ಬೆರೆಸಿ. ಈ ಆಲೀವ್ ಎಣ್ಣೆಯು ನಿಮ್ಮ ತ್ವಚೆಯನ್ನು ಮೃದು ಮತ್ತು ತಾಜಾ ಮಾಡುತ್ತವೆ. ನಿಮಗೆ ಬೇಕಾದರೆ, ಲ್ಯಾವೆಂಡರ್ ಎಣ್ಣೆಯನ್ನು ಸಹ ಬೆರೆಸಬಹುದು. ಇದರಿಂದ ಒಣ ಮತ್ತು ಒಡೆದ ತ್ವಚೆಯನ್ನು ಸರಿಪಡಿಸುತ್ತದೆ. ಲ್ಯಾವೆಂಡರ್ ಎಣ್ಣೆಯ ಸುಗಂಧವು ನಿಮ್ಮ ದೇಹವನ್ನು ಬೇಸಿಗೆಯಲ್ಲೂ ತಾಜಾ ಆಗಿ ಇರಿಸುತ್ತದೆ.

ಉಪ್ಪು

ಉಪ್ಪು

ಸ್ನಾನದ ನೀರಿಗೆ ಬೆರೆಸಿಕೊಳ್ಳಬಹುದಾದ ಉತ್ತಮ ಪದಾರ್ಥಗಳಲ್ಲಿ ರೋಸ್‌ಮೇರಿ ಸಾಲ್ಟ್ ಸಹ ಒಂದು. ಇದೊಂದು ಅದ್ಭುತ ಉಪ್ಪಾಗಿದ್ದು, ನಿಮ್ಮ ತ್ವಚೆಯಲ್ಲಿರುವ ನಿರ್ಜೀವ ಕೋಶಗಳನ್ನು ನಿವಾರಿಸಿ ಅದನ್ನು ಎಕ್ಸ್‌ಫೋಲಿಯೇಶನ್ ಮಾಡುತ್ತದೆ. ಇದರಿಂದ ದೇಹಕ್ಕೆ ನವ ಚೈತನ್ಯ ದೊರೆಯುತ್ತದೆ. ಉಪ್ಪು ಸ್ವಾಭಾವಿಕ ಸ್ಕ್ರಬ್ ಆಗಿ ಗಾಯ, ತರಚಿದ ಗಾಯ, ಕುಯ್ದುಕೊಂಡ ಭಾಗಗಳನ್ನು ಗುಣಪಡಿಸುತ್ತದೆ.

ಹಾಲು

ಹಾಲು

ಹಾಲು ಸಹ ಸ್ನಾನದ ನೀರಿಗೆ ಬೆರೆಸಿಕೊಳ್ಳಬಹುದಾದ ಒಂದು ಉತ್ತಮ ಪದಾರ್ಥವಾಗಿದೆ. ಹಾಲಿನಲ್ಲಿ ಸೌಂದರ್ಯವನ್ನು ಉತ್ತಮಪಡಿಸುವ ಹಲವಾರು ಅಂಶಗಳು ಇವೆ. ನಿಮ್ಮ ಸ್ನಾನದ ನೀರಿಗೆ ಅರ್ಧ ಕಪ್ ಹಾಲನ್ನು ಬೆರೆಸಿಕೊಳ್ಳಿ. ಈ ಹಾಲು ಬೆರೆಸಿದ ನೀರಿನಲ್ಲಿ ಕನಿಷ್ಠ 15 ನಿಮಿಷಗಳ ಕಾಲ ನಿಮ್ಮ ದೇಹವನ್ನು ನೆನೆಸಿ, ಇದರಿಂದ ನಿಮ್ಮ ತ್ವಚೆಗೆ ಹೈಡ್ರೇಟ್ ದೊರೆಯುತ್ತದೆ.

 ಜೇನು ತುಪ್ಪ

ಜೇನು ತುಪ್ಪ

ಈ ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿ ನಿಲ್ಲುವ ಪದಾರ್ಥ ಜೇನು ತುಪ್ಪ. ಇದು ಸಹ ತ್ವಚೆಗೆ ಅತ್ಯಂತ ಉಪಯೋಗಕಾರಿಯಾದ ಪದಾರ್ಥವಾಗಿದೆ. ಅರ್ಧ ಕಪ್ ಜೇನು ತುಪ್ಪವನ್ನು ನಿಮ್ಮ ಸ್ನಾನದ ನೀರಿಗೆ ಬೆರೆಸಿ. ಇದರಿಂದ ನಿಮ್ಮ ಒಣ ತ್ವಚೆಗೆ ಮೊಯಿಶ್ಚರ್ ದೊರೆಯುತ್ತದೆ. ಇದರಲ್ಲಿ ನಿಮ್ಮ ದೇಹವನ್ನು ಅರ್ಧ ಗಂಟೆ ಕಾಲ ನೆನೆಸಿ, ಆಗ ನೀವು ಕೋರಿದ ಫಲಿತಾಂಶ ದೊರೆಯುತ್ತದೆ.

English summary

Natural Things To Add To Bath Water

Bubble baths are one of the simple pleasures of life. But, if you want more from this heavenly feeling, there are simple yet natural things you can add to your daily bath water. Here are some of the best and natural things to add to your daily bath, take a look..
X
Desktop Bottom Promotion