For Quick Alerts
ALLOW NOTIFICATIONS  
For Daily Alerts

ಗೊರಕೆಯ ಅಬ್ಬರಕ್ಕೆ ಕಡಿವಾಣ ಹಾಕುವ ಮನೆಮದ್ದು

By Super
|

ನೀವು ಗೊರಕೆ ಹೊಡೆಯುತ್ತೀರಾ ಎಂಬ ಪ್ರಶ್ನೆಗೆ ಮಧ್ಯವಯಸ್ಸು ದಾಟಿದವರು ನಿಸ್ಸಂಕೋಚವಾಗಿ ಹೌದು ಎಂಬ ಉತ್ತರ ನೀಡಿದರೆ ಯುವಜನತೆ ಮಾತ್ರ ಗೊರಕೆ ಹೊಡೆಯುತ್ತಿದ್ದರೂ 'ಇಲ್ಲ' ಎಂಬ ಉತ್ತರವನ್ನೇ ನೀಡುತ್ತಾರೆ. ಏಕೆಂದರೆ ಗೊರಕೆ ಹೊಡೆಯುವುದು ಅವರ ಪ್ರಕಾರ ಅಸಭ್ಯತನ. ವಾಸ್ತವವಾಗಿ ಗೊರಕೆ ನಮ್ಮ ನಿಯಂತ್ರಣದಲ್ಲಿಯೇ ಇಲ್ಲ!

ಗೊರಕೆಯನ್ನು ಕಡಿಮೆ ಮಾಡುವ ಮೊದಲು ಗೊರಕೆ ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುವುದು ಉತ್ತಮ. ನಮ್ಮ ಮೂಗಿನ ಹಿಂದೆ ಮತ್ತು ಗಂಟಲ ಮೇಲ್ಭಾಗದ ರಚನೆಗಳು ತೆಳುವಾದ ಪಟ್ಟಿಯಂತಿರುತ್ತವೆ. ಎಚ್ಚರಿದ್ದಷ್ಟೂ ಹೊತ್ತು ಇವು ಸೆಳೆತದಲ್ಲಿದ್ದು ವಾಯುಮಾರ್ಗವನ್ನು ಸರಾಗವಾಗಿರಿಸಲು ನೆರವಾಗುತ್ತವೆ. ಆದರೆ ನಿದ್ದೆ ಬಂದ ಬಳಿಕ ಈ ರಚನೆಗಳು ನಿಯಂತ್ರಣಗಳನ್ನು ಕಳೆದುಕೊಂಡು ಸಡಿಲವಾಗುತ್ತದೆ. ಉಸಿರಾಟದ ಗಾಳಿ ಈ ಪಟ್ಟಿಗಳನ್ನು ಹಾದು ಹೋಗುವಾಗ ಸಡಿಲವಾಗಿದ್ದ ಇವು ಕಂಪಿಸುತ್ತವೆ. ಇದೇ ಗೊರಕೆ! ನೀವು ಗೊರಕೆ ಹೊಡೆಯಲು ಕಾರಣ ಏನಿರಬಹುದು?

ಇದೊಂದು ವ್ಯಾಧಿಯಲ್ಲದಿದ್ದರೂ ಇತರರಿಗೆ ನೀಡುವ ತೊಂದರೆಯಂತೂ ಹೌದು. ಗೊರಕೆ ಹೆಚ್ಚಾದರೆ ಇದು ಹೃದಯಕ್ಕೆ ಅಪಾಯಕಾರಿಯಾಗಿರುವ ಕಾರಣ ವೈದ್ಯರ ಸಲಹೆ ಅಗತ್ಯ. ಸೂಕ್ತ ಚಿಕಿತ್ಸೆಗಳಿಂದ ಗೊರಕೆಯನ್ನು ಸಂಪೂರ್ಣವಾಗಿಯಲ್ಲದಿದ್ದರೂ ಸಾಕಷ್ಟು ಮಟ್ಟಿಗೆ ತಗ್ಗಿಸಬಹುದು. ಗೊರಕೆಯನ್ನು ತಗ್ಗಿಸಲು ಕೆಲವಾರು ಮನೆಮದ್ದುಗಳೂ ಇವೆ. ಗೊರಕೆ ಹೊಡೆಯುವ ಸಮಸ್ಯೆಯಿಂದ ಬಳಲುತ್ತಿರುವಿರಾ?

ಮಾರುಕಟ್ಟೆಯಲ್ಲಿ ಗೊರಕೆಯನ್ನು ಕಡಿಮೆ ಮಾಡುವ ಘೋಷಣೆ ಹೊತ್ತ ದುಬಾರಿ ಔಷಧಿಗಳು ನಿಮ್ಮ ಹಣವನ್ನು ಕಡಿಮೆ ಮಾಡುತ್ತವೆಯೇ ಹೊರತು ಗೊರಕೆಯನ್ನು ಹೇಳಿದಷ್ಟು ಸಮರ್ಥವಾಗಿ ಕಡಿಮೆಗೊಳಿಸುವುದಿಲ್ಲ. ಹಾಗಾಗಿ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಿರುವ ಮನೆಮದ್ದುಗಳನ್ನು ಪ್ರಯೋಗಿಸಿ ಸೂಕ್ತ ಫಲಿತಾಂಶ ಪಡೆಯಿರಿ. ಆದರೆ ಇದರ ಪರಿಣಾಮವರಿಯಲು ಕೊಂಚ ಸಮಯಾವಕಾಶ ಅಗತ್ಯವಿರುವುದರಿಂದ ಕೊಂಚ ತಾಳ್ಮೆಯೂ ಅಗತ್ಯವಾಗಿದೆ.

ಪುದಿನಾ ಎಣ್ಣೆ

ಪುದಿನಾ ಎಣ್ಣೆ

ಪುದಿನಾ ಎಣ್ಣೆಯಲ್ಲಿ ಗಂಟಲು, ಮೂಗು ಮತ್ತು ಗಂಟಲ ಮೇಲ್ಭಾಗದಲ್ಲಿ ಸೋಂಕಾಗಿ ಊದಿಕೊಂಡಿದ್ದರೆ ಅದನ್ನು ಕಡಿಮೆಗೊಳಿಸುವ ಗುಣವಿದೆ. ಇದಕ್ಕಾಗಿ ಉಗುರುಬೆಚ್ಚನೆಯ ನೀರಿನಲ್ಲಿ ಕೆಲವು ಹನಿ ಪುದಿನಾ ಎಣ್ಣೆಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಚೆನ್ನಾಗಿ ಮುಕ್ಕಳಿಸಿ ಗಳಗಳ ಮಾಡಿ. ಇದರಿಂದ ಗೊರಕೆಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುದಿನಾ ಎಣ್ಣೆ

ಪುದಿನಾ ಎಣ್ಣೆ

ಹೀಗೆ ಗೊರಕೆ ಸಂಪೂರ್ಣವಾಗಿ ಇಲ್ಲವೆನಿಸುವ ತನಕವೂ ಮುಂದುವರೆಸಿ. ಈ ವಿಧಾನ ಸಾಮಾನ್ಯವಾಗಿ ಯಾವಾಗಲೂ ಮೂಗು ಕಟ್ಟಿಕೊಂಡಿದ್ದು ಬಲವಂತವಾಗಿ ಉಸಿರಾಡುತ್ತಿರುವವರಿಗೆ ಹೆಚ್ಚು ಸೂಕ್ತವಾಗಿದೆ.

ಅರಿಶಿನ

ಅರಿಶಿನ

ಅರಿಶಿನದಲ್ಲಿ ಪ್ರತಿಜೀವಕ ಗುಣಗಳಿದ್ದು ದೇಹಕ್ಕೆ ಇತರ ರೀತಿಯಲ್ಲಿ ಉಪಕಾರಿಯಾಗಿರುವಂತೆಯೇ ಗೊರಕೆಗೂ ಉತ್ತಮವಾಗಿದೆ. ಇದು ಮೂಗಿನ ಹೊಳ್ಳೆಗಳಲ್ಲಿ ತುಂಬಿಕೊಂಡಿರುವ ಕಫ ಮತ್ತು ಕಲ್ಮಶಗಳನ್ನು ನೀರಾಗಿಸಿ ನಿವಾರಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನ

ಅರಿಶಿನ

ಗೊರಕೆಗೆ ಗಂಟಲ ಮೇಲ್ಭಾಗ ಮತ್ತು ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫ ಪ್ರಮುಖ ಕಾರಣವಾಗಿದೆ. ಇದನ್ನು ನಿವಾರಿಸಲು ಅರಿಶಿನ ಒಂದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದು ವೇಳೆ ಕುಹರ (ಸೈನಸ್) ದಲ್ಲಿ (ಕುಹರ-ಮೂಗಿನ ಹಿಂಭಾಗ ಮತ್ತು ಹಣೆಯ ನಟ್ಟ ನಡುವಣ ಟೊಳ್ಳು ಭಾಗ) ಸೋಂಕು ಉಂಟಾಗಿರುವ ಪರಿಣಾಮವಾಗಿ ತಲೆನೋವು ಮತ್ತು ನಿದ್ದೆಯಲ್ಲಿ ಗೊರಕೆ ಕಂಡುಬಂದರೆ ಇದಕ್ಕೆ ಬೆಳ್ಳುಳ್ಳಿ ಉತ್ತಮ ಪರಿಹಾರವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದು ಈ ಸೋಂಕನ್ನು ಕಡಿಮೆ ಮಾಡುತ್ತದೆ ಹಾಗೂ ಮೂಗಿನ ಹಿಂಭಾಗದಲ್ಲಿ ಕಫ ಕಟ್ಟಿಕೊಂಡಿರುವುದನ್ನು ನಿವಾರಿಸುತ್ತದೆ. ಇದಕ್ಕಾಗಿ ಕೆಲವು ಹಸಿಬೆಳ್ಳುಳ್ಳಿಗಳನ್ನು ರಾತ್ರಿಯ ಊಟದ ಅನ್ನದೊಡನೆ ಕಲಸಿ ಸೇವಿಸಿ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಗೊರಕೆಯನ್ನು ಕಡಿಮೆಗೊಳಿಸಲು ಆಲಿವ್ ಎಣ್ಣೆ ಸಹಾ ಉತ್ತಮ ಆಯ್ಕೆಯಾಗಿದೆ. ಇದರ ಉರಿಯೂತ ನಿವಾರಕ ಗುಣ ವಾಯುಮಾರ್ಗದ ಸೋಂಕನ್ನು ಕಡಿಮೆಗೊಳಿಸಿ ಸೆಳೆತವನ್ನು ಹೆಚ್ಚಿಸುತ್ತದೆ. ಇದು ನಿದ್ದೆಯ ಸಮಯದಲ್ಲಿ ತೀರಾ ಜೋಲುಬೀಳುವುದನ್ನು ತಪ್ಪಿಸಿ ಹೆಚ್ಚಿನ ಕಂಪನವಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಗೊರಕೆ ಅತೀವವಾಗಿ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ನಿತ್ಯದ ಅಡುಗೆ ಮತ್ತು ಚಪಾತಿಗಳಿಗೆ ಸವರಿಕೊಂಡು ಬಳಸಲು ಪ್ರಾರಂಭಿಸಿ. ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಸಮಪ್ರಮಾಣದಲ್ಲಿ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಸೇರಿಸಿ ದಿನದ ಅಂತಿಮ ಆಹಾರವಾಗಿ ಸೇವಿಸಿ ಮಲಗಿ. ಎರಡು ಅಥವಾ ಮೂರು ತೊಟ್ಟು ಆಲಿವ್ ಎಣ್ಣೆಯನ್ನು ನೇರವಾಗಿ ನಾಲಿಗೆಯ ಹಿಂಭಾಗಕ್ಕೆ ಹಾಕಿ ಮಲಗುವುದರಿಂದಲೂ ಉತ್ತಮ ಪರಿಹಾರ ಕಂಡುಬರುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.

ಜೇನು

ಜೇನು

ಜೇನು ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಗೊರಕೆಯನ್ನು ಕಡಿಮೆಯಾಗಿಸಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿಯಿರಿ.

ಕ್ಯಾಮೋಮೈಲ್ ಹೂವು

ಕ್ಯಾಮೋಮೈಲ್ ಹೂವು

ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ.

English summary

Natural Cures For Snoring

Snoring is one the most problems faced by every second person. Snoring can be annoying and disrupt other's sleep. Snoring is when structures in the throat vibrate and make noise. Home remedies work wonders in treating snoring. In this article, we at Boldsky will share some the easy home remedies that cure snoring. Read on, try it and see the difference.
X
Desktop Bottom Promotion