For Quick Alerts
ALLOW NOTIFICATIONS  
For Daily Alerts

ದೇಹದ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರವಾದ ಅಡುಗೆ ಎಣ್ಣೆ ಯಾವುದು?

By manu
|

ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆಯ ರೀತಿಯ ಆಹಾರಗಳಿರುವಂತೆ ಅಡುಗೆ ಎಣ್ಣೆಗಳಲ್ಲೂ ವೈವಿಧ್ಯತೆ ಇದೆ. ಸಾಮಾನ್ಯವಾಗಿ ಉತ್ತರಭಾರತದ ಪಂಜಾಬ್, ಹರ್ಯಾಣಾ ರಾಜ್ಯಗಳಲ್ಲಿ ಪ್ರಮುಖವಾಗಿ ಬಳಸಲ್ಪಡುವ ಸಾಸಿವೆ ಎಣ್ಣೆ ಉಳಿದೆಡೆ ಲಭ್ಯವಾಗತೊಡಗಿದ್ದೇ ಇತ್ತೀಚೆಗೆ. ಅದಕ್ಕೂ ಮೊದಲು ರಿಫೈನ್ಡ್ ಆಯಿಲ್ ಎಂಬ ಹೆಸರಿನಲ್ಲಿ ಸಂಸ್ಕರಿಸಿದ ಎಣ್ಣೆಯೇ ಭಾರತದಾದ್ಯಂತ ಭರದಲ್ಲಿ ಮಾರಾಟವಾಗುತ್ತಿತ್ತು. ಆದರೆ ಇಂದು ನಮಗೆ ಲಭ್ಯವಿರುವ ಆಯ್ಕೆಗಳಿಂದ ಈ ಎಣ್ಣೆಗಳಲ್ಲಿ ಯಾವ ಉತ್ತಮ ಅಂಶಗಳಿವೆ ಎಂದು ಪರಾಮರ್ಶಿಸಲು ಸಾಧ್ಯವಾಗುತ್ತಿದೆ. ಅಡುಗೆಗೆ ಆರೋಗ್ಯಕರ ಎಣ್ಣೆ ಯಾವುದು?

ಸಾಸಿವೆಯ ಕಾಳುಗಳಿಂದ ಲಭ್ಯವಾಗುವ ಈ ಎಣ್ಣೆ ಗಾಢ ಹಳದಿ ಬಣ್ಣದಲ್ಲಿದ್ದು ಕೊಂಚ ಖಾರವಾದ ವಾಸನೆ ಪಡೆದಿದೆ. ಉತ್ತರ ಭಾರತದಲ್ಲಿ ಸರ್ಸೋಂ ಕಾ ತೇಲ್ ಎಂದೇ ಜನಪ್ರಿಯವಾಗಿದೆ. ಈ ಎಣ್ಣೆಯ ಮುಖ್ಯವಾದ ಒಳ್ಳೆಯ ಗುಣವೆಂದರೆ ಇದರಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್. ಇದು ರಕ್ತನಾಳಗಳಲ್ಲಿ ಅಂಟಿಕೊಳ್ಳದೇ ಹಿಂದೆ ಬೇರೆ ಎಣ್ಣೆಗಳ ಕಾರಣದಿಂದ ರಕ್ತನಾಳಗಳೊಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಅನ್ನೂ ತನ್ನೊಂದಿಗೆ ಕೊಂಡೊಯ್ಯುತ್ತದೆ. ಇದರಲ್ಲಿರುವ ಒಮೆಗಾ 3 ಮತ್ತು ಒಮೆಗಾ 6 ಎಂಬ ಕೊಬ್ಬಿನ ತೈಲಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲು ನೆರವಾಗುತ್ತವೆ. ಮಸಾಜ್ ಮಾಡೋದಕ್ಕೆ ಈ ಐದು ಎಣ್ಣೆ ಬಳಸಿ

ಹೃದಯಕ್ಕೆ ಉತ್ತಮವಾಗಿದೆ

ಹೃದಯಕ್ಕೆ ಉತ್ತಮವಾಗಿದೆ

ಸಾಸಿವೆ ಎಣ್ಣೆಯ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಬರುವುದರಿಂದ ಅಷ್ಟೂ ಪ್ರಮಾಣದಲ್ಲಿ ಹೃದಯಕ್ಕೆ ಹೊರೆ ಕಡಿಮೆಯಾಗುತ್ತದೆ. ಇದರಲ್ಲಿರುವ ಅಸಂಪೂರ್ಣ ಕೊಬ್ಬು (unsaturated fats) ಇದಕ್ಕೆ ಕಾರಣವಾಗಿದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಸಾಸಿವೆ ಎಣ್ಣೆ ನಮ್ಮ ಜಠರ ಮತ್ತು ಕರುಳುಗಳ ಒಳಭಾಗವನ್ನು ಪ್ರಚೋದಿಸಿ ಜೀರ್ಣರಸಗಳು ಹೆಚ್ಚು ಒಸರುವಂತೆ ಮಾಡಿಕೊಳ್ಳುತ್ತವೆ. ಇದರಿಂದಾಗಿ ಆಹಾರ ಸುಲಭವಾಗಿ ಜೀರ್ಣಗೊಂಡು ಪಚನಕ್ರಿಯೆ ಸುಗಮವಾಗುತ್ತದೆ.

ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ

ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ

ಸಾಸಿವೆ ಎಣ್ಣೆಯಲ್ಲಿರುವ ಫೈಟೋ ನ್ಯೂಟ್ರಿಯೆಂಟ್ (phytonutrient) ಎಂಬ ಪೋಷಕಾಂಶಗಳು ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತವೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ. ಇದರಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಈ ಕ್ರಿಯೆಯಲ್ಲಿ ನೆರವಾಗುತ್ತವೆ.

ಹೊಟ್ಟೆಯಲ್ಲಿನ ಉರಿ ಕಡಿಮೆ ಮಾಡುತ್ತದೆ

ಹೊಟ್ಟೆಯಲ್ಲಿನ ಉರಿ ಕಡಿಮೆ ಮಾಡುತ್ತದೆ

ಕೆಲವೊಮ್ಮೆ ನಮ್ಮ ಜಠರ ರಸದ ತೀಕ್ಷ್ಣತೆ ತೀವ್ರವಾಗಿ ಹೆಚ್ಚಿ ಜಠರದ ಒಳಭಾಗವನ್ನೇ ಸುಡುತ್ತದೆ. ಒಣಮೆಣಸು ಮೊದಲಾದ ಖಾರವಾದ ಪದಾರ್ಥಗಳನ್ನು ಹೆಚ್ಚು ತಿಂದಾಗ ಈ ಪರಿಸ್ಥಿತಿ ಎದುರಾಗುತ್ತದೆ. ಆಗ ಹೊಟ್ಟೆ ಮತ್ತು ಕರುಳುಗಳಲ್ಲಿ ಉರಿ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಬೇರೆ ಕಾರಣಗಳಿಂದಲೂ ಹೊಟ್ಟೆ, ಕರುಳು ಮತ್ತು ಆಸನಗಳಲ್ಲಿ ಉರಿಯುಂಟಾಗುತ್ತದೆ. ಮೊಸರನ್ನು ಸೇವಿಸಿದಾಗ ಈ ಉರಿ ಕಡಿಮೆಯಾದರೂ ಪೂರ್ಣವಾಗಿ ರಕ್ಷಣೆ ದೊರಕುವುದಿಲ್ಲ. ಸಾಸಿವೆ ಎಣ್ಣೆಯ ಬಳಕೆಯಿಂದ ಈ ತೊಂದರೆ ಸುಲಭವಾಗಿ ನಿವಾರಣೆಯಾಗುತ್ತದೆ.

ಬ್ಯಾಕ್ಟೀರಿಯಾ ಮತ್ತು ಬೂಸು (fungus)ಗಳ ವಿರುದ್ದ ಹೋರಾಡುತ್ತದೆ

ಬ್ಯಾಕ್ಟೀರಿಯಾ ಮತ್ತು ಬೂಸು (fungus)ಗಳ ವಿರುದ್ದ ಹೋರಾಡುತ್ತದೆ

ಸಾಸಿವೆ ಎಣ್ಣೆಯಲಿರುವ ಗ್ಲೂಕೋಸಿನೋಲೇಟ್ (Glucosinolate) ಎಂಬ ಪೋಷಕಾಂಶ ಬ್ಯಾಕ್ಟೀರಿಯಾ ಮತ್ತು ಬೂಸುಗಳ ವಿರುದ್ಧ ಹೋರಾಡುವ ಗುಣ ಹೊಂದಿದ್ದು ಯಾವುದೇ ಸೋಂಕು ಆವರಿಸಿಕೊಳ್ಳುವ ಸಾಧ್ಯತೆಯಿಂದ ರಕ್ಷಿಸುತ್ತದೆ.

ವಿಟಮಿನ್ ಎ ಮತ್ತು ಇ ಗಳು ಸಾಸಿವೆ ಎಣ್ಣೆಯಲ್ಲಿ ಸಮೃದ್ಧವಾಗಿವೆ

ವಿಟಮಿನ್ ಎ ಮತ್ತು ಇ ಗಳು ಸಾಸಿವೆ ಎಣ್ಣೆಯಲ್ಲಿ ಸಮೃದ್ಧವಾಗಿವೆ

ಸಾಮಾನ್ಯವಾಗಿ ಸಂಸ್ಕರಿಸುವ ವೇಳೆಯಲ್ಲಿ ಹೆಚ್ಚಿನ ಎಣ್ಣೆಗಳು ತಮ್ಮ ಉತ್ತಮ ಗುಣಗಳನ್ನು ಕಳೆದುಕೊಳ್ಳುತ್ತವೆ. ಇದಕ್ಕಾಗಿ ಇಂದು ಹಲವು ಎಣ್ಣೆಗಳು ತಣ್ಣನೆಯ ಸಂಸ್ಕರಣಾ ವಿಧಾನ (cold processing method) ಅನ್ನು ಅನುಸರಿಸುತ್ತವೆ. ಇದರಿಂದಾಗಿ ಬಿಸಿಯಿಂದ ಕಳೆದುಕೊಳ್ಳಲಾಗುತ್ತಿದ್ದ ಉತ್ತಮ ಪೋಷಕಾಂಶಗಳನ್ನು ಕಾಪಾಡಲಾಗುತ್ತದೆ. ಸಾಸಿವೆ ಎಣ್ಣೆ ತೆಗೆಯಲು ಬಿಸಿಯ ಅಗತ್ಯವೇ ಇಲ್ಲದಿರುವುದರಿಂದ ಸ್ವಾಭಾವಿಕ ರೂಪದಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು ಲಭ್ಯವಿವೆ. ಇದರಲ್ಲಿ ವಿಟಮಿನ್ ಎ ಮತ್ತು ಇ ಗಳು ಪ್ರಮುಖವಾಗಿದ್ದು ದೇಹದ ಉತ್ತಮ ಆರೋಗ್ಯಕ್ಕೆ ಪೂರಕವಾಗಿವೆ.

ರಕ್ತ ಪರಿಚಲನೆ ಮತ್ತು ಸುಲಭ ಮಲವಿಸರ್ಜನೆಗೆ ಸಹಕಾರಿಯಾಗಿದೆ

ರಕ್ತ ಪರಿಚಲನೆ ಮತ್ತು ಸುಲಭ ಮಲವಿಸರ್ಜನೆಗೆ ಸಹಕಾರಿಯಾಗಿದೆ

ಸಾಸಿವೆ ಎಣ್ಣೆಯನ್ನು ಬಳಸಿ ಮೈಗೆ ನಯವಾಗಿ ಮಸಾಜ್ ಮಾಡುವುದರಿಂದ ಇದರ ಎಣ್ಣೆಯ ಕೊಂಚ ಖಾರವಾದ ಗುಣ ರಕ್ತಸಂಚಾರ ಹೆಚ್ಚಲು ಸಹಕರಿಸುತ್ತದೆ. ಇದರಿಂದಾಗಿ ಹೆಚ್ಚಿನ ಬೆವರು ಹರಿದು ಶರೀರ ತಂಪುಗೊಳ್ಳಲು ಸಾಧ್ಯವಾಗುತ್ತದೆ. ಜ್ವರ ಬಂದಾಗ ಸಾಸಿವೆ ಎಣ್ಣೆಯ ಮಸಾಜ್ ಫಲಕಾರಿಯಾಗಿದೆ. ಜೊತೆಗೇ ಸುಲಭವಾಗಿ ಮಲವಿಸರ್ಜನೆಗೂ ಸಾಸಿವೆ ಎಣ್ಣೆಯ ಸೇವನೆ ಸಹಕಾರಿಯಾಗಿದೆ.

ಅಸ್ತಮಾ ರೋಗಿಗಳಿಗೆ ಉಪಕಾರಿಯಾಗಿದೆ

ಅಸ್ತಮಾ ರೋಗಿಗಳಿಗೆ ಉಪಕಾರಿಯಾಗಿದೆ

ಶ್ವಾಸಕೋಶದ ತೊಂದರೆ, ಅಸ್ತಮಾ, ಸೈನಸ್ ಮೊದಲಾದ ತೊಂದರೆ ಇರುವವರಿಗೆ ಸಾಸಿವೆ ಎಣ್ಣೆ ಜೀವರಕ್ಷಕವಾಗಿವೆ. ಒಂದು ವೇಳೆ ಅಸ್ತಮಾ ಆಕ್ರಮಣಕ್ಕೆ ತುತ್ತಾಗಿ ರೋಗಿ ಕುಸಿದು ಬಿದ್ದರೆ ತಕ್ಷಣ ರೋಗಿಯ ಎದೆಯ ಮೇಲೆ ಸಾಸಿವೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಪ್ರಾಣಾಪಾಯದಿಂದ ತಪ್ಪಿಸಬಹುದು. ಸಮಪ್ರಮಾಣದ ಸಾಸಿವೆ ಎಣ್ಣೆ ಮತ್ತು ಜೇನುತುಪ್ಪದ ಮಿಶ್ರಣವನ್ನು ಪ್ರತಿದಿನ ಮೂರು ಬಾರಿ ಒಂದೊಂದು ಚಮಚ ಕುಡಿಯುವುದರಿಂದಲೂ ಅಸ್ತಮಾ ಹತೋಟಿಗೆ ಬರುತ್ತದೆ.

ಕಫ ಕಟ್ಟಿಕೊಂಡಿದ್ದನ್ನು ಮತ್ತು ಮೂಗು ಕಟ್ಟಿಕೊಂಡಿದ್ದನ್ನು ಸರಾಗಗೊಳಿಸುತ್ತದೆ

ಕಫ ಕಟ್ಟಿಕೊಂಡಿದ್ದನ್ನು ಮತ್ತು ಮೂಗು ಕಟ್ಟಿಕೊಂಡಿದ್ದನ್ನು ಸರಾಗಗೊಳಿಸುತ್ತದೆ

ಕಫ ಕಟ್ಟಿಕೊಂಡು ಎದೆ ಭಾರವಾಗಿದ್ದರೆ ಎದೆಯ ಮೇಲೆ ಸಾಸಿವೆ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಫಲ ಸಿಗುತ್ತದೆ. ಇದೇ ರೀತಿ ಮೂಗು ಕಟ್ಟಿಕೊಂಡಿದ್ದರೆ ಬೆನ್ನಿನಡಿ ದಿಂಬಿಟ್ಟು ಮಲಗಿ ತಲೆ ಕೆಳಗೆ ಬಂದಿರುವ ಭಂಗಿಯಲ್ಲಿ ಎರಡೂ ಹೊಳ್ಳೆಗಳಿಗೆ ಚಿಕ್ಕ ಬಿಂದು ಸಾಸಿವೆ ಎಣ್ಣೆ ಬಿಡಬೇಕು. ಇದು ಮೂಗು ಕಟ್ಟಿಕೊಂಡಿದ್ದನ್ನು ತೆರೆಯುತ್ತದೆ. ಸಾಸಿವೆ ಎಣ್ಣೆ ಬಳಸಿದ ಆಹಾರಗಳ ಸೇವನೆಯೂ ಶ್ವಾಸವನ್ನು ಸರಾಗಗೊಳಿಸಲು ಉಪಯುಕ್ತವಾಗಿದೆ.

ಸೊಳ್ಳೆಗಳನ್ನು ಓಡಿಸುತ್ತದೆ

ಸೊಳ್ಳೆಗಳನ್ನು ಓಡಿಸುತ್ತದೆ

ಸೊಳ್ಳೆಗಳ ಕಾಟ ವಿಪರೀತವಾಗಿದ್ದರೆ ಒಂದು ಕಾಗದ ಅಥವಾ ಬಟ್ಟೆಯಲ್ಲಿ ಸಾಸಿವೆ ಎಣ್ಣೆ ಸಿಂಪಡಿಸಿ ಸೊಳ್ಳೆಗಳಿರುವ ಸ್ಥಳದಲ್ಲಿಟ್ಟರೆ ಸಾಕು, ಇದರ ವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ.

English summary

Mustard Oil Or Refined Oil: Which Is Better?

We are bombarded with different kind of advertisements regarding edible oils. The various messages from these ads can really confuse us. What are the benefits of refined oil? Mustard oil or refined oil: which is better? Let's take a look at the benefits of mustard oil and harmful effects of refined oil.
X
Desktop Bottom Promotion