For Quick Alerts
ALLOW NOTIFICATIONS  
For Daily Alerts

ಹಲ್ಲುಜ್ಜುವಾಗ ನೀವು ಏನೆಲ್ಲಾ ತಪ್ಪು ಮಾಡ್ತೀರ ಗೊತ್ತಾ?

By Su.Ra
|

ಹಲ್ಲು ಚೆನ್ನಾಗಿರಬೇಕು ಅಂತ ಕೆಲವರು ತುಂಬಾ ಹೊತ್ತು ಬ್ರಷ್ ಮಾಡ್ತಾರೆ,. ಬ್ರಷ್ ಮಾಡಲೇಬೇಕು ನಿಜ. ಹಲ್ಲುಗಳ ಸೌಂದರ್ಯಕ್ಕೆ ಬ್ರಷ್ ಮಾಡೋದು ತುಂಬಾ ಇಂಪಾರ್ಟೆಂಟ್. ಆದ್ರೆ ಬ್ರಷ್ ಮಾಡುವ ಸರಿಯಾದ ಕ್ರಮ ಯಾವುದು. ಎಷ್ಟೋ ಜನರಿಗೆ ಸರಿಯಾದ ಮೆಥೆಡ್ ಗೊತ್ತಿದ್ರೂ ತಪ್ಪು ಮಾಡ್ತಾರೆ. ಇನ್ನು ಗೊತ್ತಿಲ್ಲದವರಂತೂ ಬಿಡಿ. ಮಿಸ್ಟೇಕ್‌ ಮೇಲೆ ಮಿಸ್ಟೇಕ್ ಮಾಡೋದು ಕಾಮನ್, ಹಾಗಾದ್ರೆ ಬ್ರಷ್ ಮಾಡೋ ವಿಷ್ಯದಲ್ಲಿ ನೀವು ನಾವು ಮಾಡುವ ಕಾಮನ್ ಮಿಸ್ಟೇಕ್ ಏನು ಅನ್ನೋದನ್ನು ಹೇಳ್ತೀವಿ ಕೇಳಿ..

ಸರಿಯಾದ ಸಮಯಕ್ಕೆ ಹಲ್ಲು ಕ್ಲೀನ್ ಮಾಡದೇ ಇರೋದು

ಸರಿಯಾದ ಸಮಯಕ್ಕೆ ಹಲ್ಲು ಕ್ಲೀನ್ ಮಾಡದೇ ಇರೋದು

ಬೆಳಿಗ್ಗೆ ಎದ್ದ ಕೂಡ್ಲೆ ಮೊದಲು ನೀವು ಮಾಡ್ಬೇಕಾಗಿರೋ ಕೆಲ್ಸ ಬ್ರಷ್ ಮಾಡೋದು. ಆದ್ರೆ ಕೆಲವರು ಕಾಫಿ ಕುಡಿದ ನಂತ್ರ ಬ್ರಷ್ ಮಾಡ್ತಾರೆ. ಇದ್ರಷ್ಟು ತಪ್ಪು ಮತ್ತೊಂದಿಲ್ಲ. ದಿನಕ್ಕೆ ಎರಡು ಬಾರಿ ಬ್ರಷ್ ಮಾಡ್ಬೇಕು. ಅಂದ್ರೆ ನೀವು ರಾತ್ರಿ ಹಾಸಿಗೆಯಲ್ಲಿ ಮಲಗುವ ಮುಂಚೆ ನಿಮ್ಮ ಹಲ್ಲುಗಳನ್ನು ಬ್ರಷ್ ಟಚ್ ಮಾಡಿರಲೇಬೇಕು. ಅಟ್‌ಲೀಸ್ಟ್ ಎರಡು ನಿಮಿಷವಾದ್ರೂ ನೀವು ಪ್ರತಿಬಾರಿ ಹಲ್ಲುಜ್ಜಬೇಕು. ಪ್ರತಿ ಭಾಗದ ಹಲ್ಲುಗಳನ್ನೂ ಮಿನಿಮಮ್ 30 ಸೆಕೆಂಡ್ ಉಜ್ಜಲೇಬೇಕು. ಆದ್ರೆ ಹೆಚ್ಚಿನವ್ರು ಹೀಗೆ ಮಾಡೋದೆ ಇಲ್ಲ.. ತಪ್ಪು ಮಾಡ್ತಲೇ ಇರ್ತಾರೆ.

ತಪ್ಪು ಬ್ರಷ್‌‌ಗಳನ್ನು ಬಳಕೆ ಮಾಡೋದು

ತಪ್ಪು ಬ್ರಷ್‌‌ಗಳನ್ನು ಬಳಕೆ ಮಾಡೋದು

ನಿಮ್ಮ ಬ್ರಷ್ ನಿಮ್ಮ ವಸಡಿಗೆ ಹಾನಿ ಮಾಡುವಂತಿರಬಾರದು. ಕೆಲವರ ವಸಡು ತೀರಾ ಸೂಕ್ಷ್ಮವಾಗಿರುತ್ತೆ. ಅಂತವರು ಸಾಫ್ಟ್ ಬ್ರಷ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾರ್ಡ್‌ ಬ್ರಷ್‌ ಬಳಕೆ ಬೇಡವೇ ಬೇಡ. ಮೀಡಿಯಮ್ ಹಾರ್ಡ್‌ ಬ್ರಷ್‌ಗಳನ್ನು ಹೆಚ್ಚಿನವ್ರು ಪ್ರಿಫರ್ ಮಾಡ್ತಾರೆ. ಬಟ್ ನಿಮ್ಮ ಹಲ್ಲುಗಳ ಸಾಲು ಹೇಗಿದೆ. ಅದಕ್ಕೆ ಎಂತಹ ಬ್ರಷ್‌ಗಳು ಬೇಕಾಗುತ್ತೆ. ಇದನ್ನು ಡೆಂಟಿಸ್ಟ್ ಬಳಿ ಸಲಹೆ ಪಡೆದು ನಂತ್ರ ಅದೇ ಬ್ರಷ್‌ಗಳನ್ನು ಆಯ್ಕೆ ಮಾಡಿಕೊಳ್ಳೋದು ಬೆಸ್ಟ್..

ಸರಿಯಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸೋದಿಲ್ಲ

ಸರಿಯಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸೋದಿಲ್ಲ

ಬ್ರಷ್ ಮಾಡಿದ ನಂತ್ರ ಬ್ರಷ್‌ನ್ನು ಸರಿಯಾಗಿ ಕ್ಲೀನ್ ಮಾಡ್ಬೇಕು. ಹೆಚ್ಚಿನವ್ರು ಒಂದೆರಡು ಸಲ ರಿನ್ಸ್ ಮಾಡಿ ಹಾಗೆ ಸೈಡ್‌ಗೆ ಇಟ್ಟುಬಿಡ್ತಾರೆ. ಬಟ್ ಅಷ್ಟು ಮಾಡಿದ್ರೆ ನಿಮ್ಮ ಬ್ರಷ್ ಕ್ಲೀನ್ ಆಗೋದಿಲ್ಲ. ನೀವು ಬಳಕೆ ಮಾಡಿದ ಪೇಸ್ಟ್ ಬ್ರಷ್‌ನ ತಳಭಾಗದಲ್ಲಿ ಸೇರಿಕೊಂಡಿರಬಹುದು. ಅಥ್ವಾ ನಿಮ್ಮ ಬಾಯಿಯಿಂದ ಹೊರಹೋದ ವೇಸ್ಟ್‌ ಪಾರ್ಟಿಕಲ್ಸ್‌ ನಿಮ್ಮ ಹಲ್ಲಿನಲ್ಲೇ ಉಳಿದು ಮತ್ತೆ ಬ್ರಷ್ ಬಳಕೆ ಮಾಡುವಾಗ ನಿಮ್ಗೆ ಗೊತ್ತಿಲ್ಲದೇ ಹಾನಿ ಮಾಡ್ಬಹುದು.. ಕೇವಲ ಬ್ರಷ್ ಮಾತ್ರ ಅಲ್ಲ, ಬಾಯಿಯನ್ನೂ ಸರಿಯಾಗಿ ಕ್ಲೀನ್ ಮಾಡಿಕೊಳ್ಳಬೇಕಾಗುತ್ತೆ.

ತಪ್ಪು ಟೆಕ್ನಿಕ್‌ಗಳನ್ನು ಪಾಲಿಸುವುದು

ತಪ್ಪು ಟೆಕ್ನಿಕ್‌ಗಳನ್ನು ಪಾಲಿಸುವುದು

ಹಲ್ಲುಜ್ಜಲು ಒಂದು ಟೆಕ್ನಿಕ್ ಇದೆ. ಹಾಗೆ ಉಜ್ಜಿದಾಗ ಮಾತ್ರ ಹಲ್ಲುಗಳು ನೀಟಾಗಿ ಕ್ಲೀನ್ ಆಗುತ್ತೆ. ದವಡೆ ಹಲ್ಲುಗಳನ್ನು ಉಜ್ಜುವಾಗ ನಿಮ್ಮ ಬ್ರಷ್ 30 ಅಥ್ವಾ 40 ಡಿಗ್ರಿ ಆಂಗಲ್‌ನಲ್ಲಿ ಬ್ರಷ್ ಬೆಂಡ್ ಆಗ್ಬೇಕು. ಯಾವ ಹಲ್ಲುಗಳನ್ನು ಹೇಗೆ ಉಜ್ಜಬೇಕು ಅಂತ ತಿಳಿದು ನೀಟಾಗಿ ಫಾಲೋ ಮಾಡಿ. ಹೆಚ್ಚಿನವ್ರು ಈ ತಪ್ಪುನ್ನು ಪುನರಾವರ್ತಿಸ್ತಾರೆ.

ವರ್ಷ ಉರುಳಿದ್ರೂ ಬ್ರಷ್ ಬದಲಿಸದೇ ಇರೋದು

ವರ್ಷ ಉರುಳಿದ್ರೂ ಬ್ರಷ್ ಬದಲಿಸದೇ ಇರೋದು

ಒಂದು ಬ್ರಷ್‌ನ್ನು ನೀವು ಕೇವಲ 3 ರಿಂದ 4 ತಿಂಗಳು ಬಳಸ್ಬಹುದು ಅಷ್ಟೇ. ಆದ್ರೆ ಹೆಚ್ಚಿನವ್ರು ವರ್ಷ ಉರುಳಿದ್ರೂ ಒಂದೇ ಬ್ರಷ್‌ನ್ನು ಪದೇ ಪದೇ ಬಳಸ್ತಾನೇ ಇರ್ತಾರೆ. ಹೀಗೆ ಹಳೆ ಬ್ರಷ್ ಬಳಸೋದ್ರಿಂದ ಬ್ರಷ್‌ನಲ್ಲಿ ಉಳಿಯುವ ಬ್ಯಾಕ್ಟೀರಿಯಾಗಳು ನಿಮ್ಮ ಹಲ್ಲುಗಳು ಹುಳುಕಾಗಲು ಕಾರಣವಾಗ್ತವೆ. ಅಂದ್ರೆ ಕ್ಯಾವಿಟಿ ಬಿಟ್ಟಿಗಿಫ್ಟ್ ನಂತೆ ನಿಮ್ಗೆ ಕಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ,. ಹಾಗಾಗಿ ಈ ತಪ್ಪು ಮಾಡಬೇಡಿ.

ಬಾಯಿಯ ಕೆಲವು ಭಾಗಗಳನ್ನು ಮರೆತೇ ಬಿಡ್ತೀರಿ

ಬಾಯಿಯ ಕೆಲವು ಭಾಗಗಳನ್ನು ಮರೆತೇ ಬಿಡ್ತೀರಿ

ಹಲ್ಲು ಉಜ್ಜೋದು ಅಂದ್ರೆ ಕೇವಲ ಹಲ್ಲುಗಳನ್ನು ಮಾತ್ರ ಕ್ಲೀನ್ ಮಾಡೋದಲ್ಲ. ಬದಲಾಗಿ ಬಾಯಿಯ ಮೇಲ್ಬಾಗ, ತಳಭಾಗ, ನಾಲಗೆ, ವಸಡಿನ ಮೇಲ್ಭಾಗ, ಕೆಳಭಾಗ ಎಲ್ಲಾ ಕಡೆಯೂ ಹಲ್ಲುಜ್ಜಬೇಕು. ಆದ್ರೆ ಹೆಚ್ಚಿನವ್ರು ಹಲ್ಲುಜ್ಜುವಾಗ ಹೀಗೆ ಮಾಡೋದೆ ಇಲ್ಲ. ಹಾಗಾಗಿ ಅದು ನಿಮ್ಮ ಬಾಯಿಗೆ ಹಾನಿ ಮಾಡುತ್ತೆ. ಸೋ ಹಲ್ಲುಜ್ಜುವಾಗ ಕಂಪ್ಲೀಟ್ ಬಾಯಿಯ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ.

English summary

Mistakes you probably make while brushing

Most people don't spend nearly enough time brushing their teeth, Dentists recommend brushing for two or three minutes, but few people ever make it to that. Next time, check your watch to see how long your routine takes. Chances are, whether you're rushing to get to work or ready to collapse into bed, you're only brushing for a minute or so.
Story first published: Saturday, December 5, 2015, 20:34 [IST]
X
Desktop Bottom Promotion