For Quick Alerts
ALLOW NOTIFICATIONS  
For Daily Alerts

ಮುಟ್ಟು ನಿಲ್ಲುವ ಅವಧಿಯಲ್ಲಿ ಆಹಾರ ಕ್ರಮ ಹೇಗಿರಬೇಕು?

By Deepak
|

ಮುಟ್ಟು ನಿಲ್ಲುವ ಅವಧಿಯು ತೀರಾ ಒತ್ತಡದಿಂದ ಕೂಡಿರುತ್ತದೆ. ಇದು ನಿಮ್ಮ ದೇಹ, ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗೆಂದು ಇದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬನ್ನಿ ಇದನ್ನು ಆರೋಗ್ಯಕರವಾದ ಮಾರ್ಗದಲ್ಲಿ ಬರಮಾಡಿಕೊಳ್ಳಲು ಪ್ರಯತ್ನಿಸೋಣ.

ಈ ಅವಧಿಯಲ್ಲಿ ನೀವು ಸ್ವಲ್ಪ ತಿನ್ನುವ ವಿಚಾರಗಳಲ್ಲಿ ಜಾಗರೂಕತೆಯನ್ನು ಮತ್ತು ದೇಹಕ್ಕೆ ಅಗತ್ಯವಾದ ವ್ಯಾಯಾಮವನ್ನು ನೀಡುವುದು ಒಳ್ಳೆಯದು. ಸಾಮಾನ್ಯವಾಗಿ ಮುಟ್ಟಿನ ನೋವನ್ನು ನಿಭಾಯಿಸುವುದು ಕಷ್ಟವಾದರು ಸಹ ಸ್ವಲ್ಪ ಮಟ್ಟಿಗೆ ಉಪಶಮನವನ್ನು ಪಡೆಯಲು ಅನೇಕ ಮಾರ್ಗಗಳಿವೆ.

ಇದಕ್ಕಾಗಿ ನೀವು ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಆಗ ನೀವು ನಿಸ್ಸಂಶಯವಾಗಿ ಈ ಮುಟ್ಟು ನಿಲ್ಲುವ ಅವಧಿಯಲ್ಲಿ ಕಂಡು ಬರುವ ವೈಪರಿತ್ಯಗಳನ್ನು ನಿಭಾಯಿಸಬಹುದು. ಬನ್ನಿ ಮುಟ್ಟು ನಿಲ್ಲುವ ಅವಧಿಯಲ್ಲಿ ನಿಮ್ಮ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ನೋಡೋಣ... ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

Menopause Diet: What To Eat And What To Avoid?

ನಾರಿನಂಶವನ್ನು ಹೆಚ್ಚಾಗಿ ಸೇವಿಸಿ
ಒಂದು ವೇಳೆ ನಿಮ್ಮ ಜೀರ್ಣಾಂಗಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಮತ್ತು ಮುಟ್ಟು ನಿಲ್ಲುವ ಮೊದಲು ಮಲಬದ್ಧತೆ ಬಂದಲ್ಲಿ, ಅದಕ್ಕಾಗಿ ಮೊದಲು ಪರಿಹಾರವನ್ನು ಹುಡುಕಿಕೊಳ್ಳಿ. ಏಕೆಂದರೆ ಮುಟ್ಟು ನಿಲ್ಲುವ ಅವಧಿ ನಡೆಯುವಾಗ ಮಲಬದ್ಧತೆಯನ್ನು ತಡೆಯುವುದು ಅಸಾಧ್ಯ. ಅದಕ್ಕಾಗಿ ಹೆಚ್ಚು ನೀರನ್ನು ಸೇವಿಸಿ ಮತ್ತು ಅಧಿಕ ನಾರಿನಂಶ ಇರುವ ಆಹಾರವನ್ನು ಸೇವಿಸಿ. ಒಂದು ವೇಳೆ ನಿಮಗೆ ಮತ್ತೆ ಜೀರ್ಣಕ್ರಿಯೆಯ ಸಮಸ್ಯೆ ಕಂಡು ಬಂದಲ್ಲಿ ತಡಮಾಡದೆ ವೈದ್ಯರನ್ನು ಕಾಣಿ.

ಹೆಚ್ಚು ನೀರು ಸೇವಿಸಿ


ದಿನಕ್ಕೆ ಕನಿಷ್ಠ ಒಂದೂವರೆ ಲೀಟರ್ ನೀರನ್ನು ಪ್ರತಿನಿತ್ಯ ಸೇವಿಸಿ. ಇದು ಮುಟ್ಟು ನಿಲ್ಲುವಾಗ ಕಂಡು ಬರುವ ಅಧಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಲ್ಕೋಹಾಲ್ ಮತ್ತು ಧೂಮಪಾನವನ್ನು ಸೇವಿಸಬೇಡಿ. ಜೊತೆಗೆ ಕಾಫಿ ಮತ್ತು ಟೀ ಸೇವಿಸುವುದನ್ನು ಕಡಿಮೆ ಮಾಡಿ, ಒಂದು ಕಪ್ ದಿನವೊಂದಕ್ಕೆ ಸೇವಿಸಿ ಸಾಕು.

ಊಟ ಮಾಡುವುದನ್ನು ಬಿಡಬೇಡಿ


ಯಾವುದೇ ಕಾರಣಕ್ಕು ತೂಕ ಕಳೆದುಕೊಳ್ಳಲು, ಒಂದು ಹೊತ್ತಿನ ಊಟ ಬಿಡಬೇಡಿ. ನಮಗೆ ವಯಸ್ಸಾದಂತೆಲ್ಲ ನಮ್ಮ ಆಹಾರ ಜೀರ್ಣಿಸಿಕೊಳ್ಳುವ ಕ್ರಿಯೆ ಕಡಿಮೆಯಾಗುತ್ತ ಹೋಗುತ್ತದೆ ಎಂಬುದನ್ನು ನಾವು ಮರೆಯಬಾರದು. ಈ ಅವಧಿಯಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ ಮತ್ತು ಫೈಟೊ-ಈಸ್ಟ್ರೋಜೆನಿಕ್ ಆಹಾರ ಪದಾರ್ಥಗಳನ್ನು (ಸೋಯಾ, ಬ್ರೊಕ್ಕೊಲಿ) ಹೆಚ್ಚಾಗಿ ಸೇವಿಸಿ.

ಅಧಿಕ ಕ್ಯಾಲ್ಸಿಯಂ ಇರುವ ಆಹಾರವನ್ನು ಸೇವಿಸಿ
ನಿಮ್ಮ ದೇಹವನ್ನು ಮುಟ್ಟು ನಿಲ್ಲುವ ಸಮಯದಲ್ಲಿ ಸದೃಢಗೊಳಿಸಲು ಅಧಿಕ ಕ್ಯಾಲ್ಸಿಯಂ ಇರುವ ಆಹಾರವನ್ನು ಸೇವಿಸಿ. ಸೋಡಿಯಂ ಮತ್ತು ಸಕ್ಕರೆ ಪ್ರಮಾಣ ಅಧಿಕವಿರುವ ಆಹಾರವನ್ನು ಸೇವಿಸಿ. ಋತುಚಕ್ರದ ಅವಧಿಯಲ್ಲಿ ಸೇವಿಸಬೇಕಾದ ಆಹಾರಗಳು

ಜಾಗಿಂಗ್ ಅಥವಾ ಸಣ್ಣ ಕೆಲಸ
ನಿಮ್ಮ ದೇಹವನ್ನು ಈ ಅವಧಿಯಲ್ಲಿ ಫಿಟ್ ಆಗಿ ಕಾಪಾಡಿಕೊಳ್ಳಲು ಜಾಗಿಂಗ್ ಅಥವಾ ಸಣ್ಣ ಪ್ರಮಾಣದ ಕೆಲಸ ಮಾಡಿ. ಇದರಿಂದ ಮುಟ್ಟು ನಿಲ್ಲುವಾಗ ಕಂಡುಬರುವ ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸಾಧ್ಯವಾದರೆ, ಬೆಳಗ್ಗೆ ಮತ್ತು ಸಂಜೆ 10 ನಿಮಿಷಗಳ ಕಾಲ ವರ್ಕ್ ಔಟ್ ಮಾಡಿ. ಇದರಿಂದ ರಾತ್ರಿ ಸಮಯದಲ್ಲಿ ನೀವು ಫಿಟ್ ಆಗಿರಬಹುದು.

ಧ್ಯಾನ ಅಥವಾ ಪ್ರಾಣಾಯಾಮ


ಹಲವಾರು ಮಹಿಳೆಯರು ಮುಟ್ಟು ನಿಲ್ಲುವ ಅವಧಿಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ ಎಂದು ದೂರುತ್ತಾರೆ. ಇದನ್ನು ನಿವಾರಿಸಿಕೊಳ್ಳಲು, ಮಲಗುವ ಮುನ್ನ ವಿಶ್ರಾಂತಿಯನ್ನು ಪಡೆದುಕೊಳ್ಳಿ. ಕೆಫಿನ್ ಕಡಿಮೆ ಸೇವಿಸಿ. ಅಥವಾ ನಿಮ್ಮ ಮನಸ್ಸನ್ನು ಮಲಗುವ ಮುನ್ನ ನೆಮ್ಮದಿ ಮಾಡಿಕೊಳ್ಳಿ. ಮುಟ್ಟು ನಿಲ್ಲುವ ಅವಧಿಯಲ್ಲಿ ಮುಟ್ಟು ನಿಲ್ಲುವ ಅವಧಿಯಲ್ಲಿ ಮೂಡ್ ತೀರಾ ಏರುಪೇರಾಗುತ್ತಿರುತ್ತದೆ. ಅದಕ್ಕಾಗಿ ಧ್ಯಾನ, ಯೋಗ ಮತ್ತು ಪ್ರಾಣಾಯಾಮಗಳಲ್ಲಿ ತೊಡಗಿಕೊಳ್ಳಿ.
English summary

Menopause Diet: What To Eat And What To Avoid?

Menopause can be very stressful and can affect different aspects of your body, health and living. Let’s embrace this phase and go through it in a healthy way. It affects your mental and physical health, and can be difficult to handle. However, if you keep your body healthy and de-stress the mind, you can reduce the symptoms of menopause.
Story first published: Monday, May 18, 2015, 19:39 [IST]
X
Desktop Bottom Promotion